ವಿಷಯದ ವಿವರಗಳಿಗೆ ದಾಟಿರಿ

Archive for

5
ಆಕ್ಟೋ

ಮಿ.ರಾಹುಲ್,ಹಿರೋಯಿಸಂ ಅನ್ನುವುದು ಸಿನೆಮಾಗಳಲ್ಲೇ ಚೆನ್ನ

– ರಾಕೇಶ್ ಶೆಟ್ಟಿ

Rahul Gandhiಕಾಂಗ್ರೆಸ್ಸಿನ ನಾಯಕರಾಗಿದ್ದಂತಹ ಅರ್ಜುನ್ ಸಿಂಗ್ ಅವರ ಆತ್ಮಕತೆ ‘A Grain of Sand in the Hourglass of Time’ ಯಲ್ಲಿ ಒಂದು ಪ್ರಸಂಗವನ್ನು ದಾಖಲಿಸಿದ್ದಾರೆ ಅನ್ನುವ ವರದಿಯೊಂದು ಕಳೆದ ವರ್ಷ ಪತ್ರಿಕೆಗಳಲ್ಲಿ ಬಂದಿತ್ತು.ಅಲ್ಲಿ ಅವರು ಆಗಿನ್ನೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರದಿದ್ದ ಸೋನಿಯಾ ಅವರನ್ನು ಪಕ್ಷಕ್ಕೆ ಕರೆ ತಂದು ಅಧ್ಯಕ್ಷೆಯ ಪಟ್ಟಕಟ್ಟುವ ಬಗ್ಗೆ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಬಳಿ ಮಾತನಾಡಲು ಸೀತರಾಂ ಕೇಸರಿ ಮತ್ತಿತ್ತರರೊಂದಿಗೆ ಹೋಗಿರುತ್ತಾರೆ. ಸೋನಿಯಾರನ್ನು ಅಧ್ಯಕ್ಷೆಯನ್ನಾಗಿ ಮಾಡುವ ಇವರ ಮಾತನ್ನು ಕೇಳಿ ಕ್ಷಣಕಾಲ ಸುಮ್ಮನಿದ್ದ ಪಿವಿಎನ್ ಒಮ್ಮೆಲೇ ” ರೈಲಿನ ಕಂಪಾರ್ಟ್-ಮೆಂಟ್ ಗಳನ್ನು ಇಂಜಿನ್ನಿಗೆ ಜೋಡಿಸಿದಂತೆ,ಕಾಂಗ್ರೆಸ್ಸ್ ಅನ್ನು ನೆಹರೂ ಕುಟುಂಬಕ್ಕೆ ಜೋತು ಬೀಳಿಸುವುದೇಕೆ? ಬೇರೆ ದಾರಿಗಳಿಲ್ಲವೇ ನಮ್ಮ ಮುಂದೆ?” ಅಂತ ಸಿಡುಕುತ್ತಾರೆ. ಕಾಂಗ್ರೆಸ್ಸಿನಂತ ಲಕೋಟೆ ಪಕ್ಷದಲ್ಲಿ ಪಿವಿಎನ್ ಮತ್ತು ಸೀತರಾಂ ಕೇಸರಿಯವರನ್ನು ಆಮೇಲೆ ಹೇಗೆ ನಡೆಸಿಕೊಳ್ಳಲಾಯಿತು ಅನ್ನುವುದೆಲ್ಲ ಮತ್ತೆ ಬಿಡಿಸಿ ಹೇಳಬೇಕಿಲ್ಲ.

೧೨೮ ವರ್ಷಗಳ ಇತಿಹಾಸ ಹೊಂದಿರೋ ಈ ರಾಷ್ಟ್ರೀಯ ಪಕ್ಷಕ್ಕೆ “ನೆಹರೂ ಕುಟುಂಬ”ದ ಬೋಗಿಯನ್ನು ಮೊದಲಿಗೆ ಜೋಡಿಸಿದ್ದು ಮಹಾತ್ಮ ಗಾಂಧೀಜಿ.ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ವಲ್ಲಭಾಯ್ ಪಟೇಲ್ ಅಂತ ದಿಗ್ಗಜರನ್ನೆಲ್ಲ ಬದಿಗೆ ಸರಿಸಿ ಜವಹರಲಾಲ್ ನೆಹರೂ ಅವರನ್ನು ಗಾಂಧೀಜಿ ಮುನ್ನೆಲೆಗೆ ತಂದ ಹಿನ್ನೆಲೆಯೇನು ಅನ್ನುವುದರ ಬಗ್ಗೆ ಇವತ್ತಿಗೂ ಬೇರೆ ಬೇರೆ ಕತೆಗಳಿವೆ.ನೆಹರೂ ನಂತರ ಬಂದ ಇಂದಿರಾ ಅವರು ನೆಹರೂಗಿಂತ ಉತ್ತಮವಾಗಿ ದೇಶವನ್ನು ಮುನ್ನಡೆಸಿದರೂ, ಸುಲಭವಾಗಿ ದಕ್ಕಿದ್ದಂತಹ ಪ್ರಧಾನಿ ಹುದ್ದೆ ಅವರೊಳಗಿನ ಸರ್ವಾಧಿಕಾರಿಯನ್ನು ಜಾಗೃತಗೊಳಿಸಿ ಈ ದೇಶದ ಪ್ರಜಾಪ್ರಭುತ್ವದ ಇತಿಹಾಸದ ಕಪ್ಪುಚುಕ್ಕೆ “ಎಮರ್ಜೆನ್ಸಿ”ಯ ದಿನಗಳಿಗೆ ಕಾರಣವಾಯಿತು. (ಆದರೆ ಕರ್ನಾಟಕದ ಕೆಲವು ಬುದ್ಧಿಜೀವಿಗಳಿಗೆ ಈಗಲೂ ಕಾಂಗ್ರೆಸ್ಸ್ ಪ್ರಜಾಪ್ರಭುತ್ವದ ರಕ್ಷಕನಂತೆ,”ಬತ್ತಲಾರದ ಗಂಗೆ” ಕಾಣುತ್ತದೆ…! ) ಇಂದಿರಾ ಹಂತಕರ ಗುಂಡಿಗೆ ಬಲಿಯಾದ ನಂತರ ಕಾಂಗ್ರೆಸ್ಸ್ ರೈಲಿನ ಬೋಗಿಗೆ ’ರಾಜೀವ್’ ಜೋಡಣೆಯಾದರು.
ಮತ್ತಷ್ಟು ಓದು »