ವಿಷಯದ ವಿವರಗಳಿಗೆ ದಾಟಿರಿ

Archive for

14
ಆಕ್ಟೋ

ಸೌಜನ್ಯ ಹಂತಕರು ನೇಣಿಗೇರುವುದೆಂತು?

– ರಾಕೇಶ್ ಶೆಟ್ಟಿ

Justice for Kumari Soujanya“ಬಹುಷಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರೂ ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ,ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ.ದ್ರೌಪದಿಯರ ಗೋಳು ಮುಗಿಯೋಲ್ಲ…” ಅಂತ ’ನಿರ್ಭಯ’ ಅತ್ಯಾಚಾರದ ಪ್ರಕರಣದ ಸಮಯದಲ್ಲಿ ಬರೆದಿದ್ದೆ. ಮತ್ತೆ ಅದೇ ಸಾಲುಗಳನ್ನು ನಮ್ಮ ಧರ್ಮಸ್ಥಳದ ’ಸೌಜನ್ಯ’ ಅನ್ನುವ ಹೆಣ್ಣುಮಗಳ ಬಗ್ಗೆ ಬರೆಯುವಾಗಲೂ ಬಳಸಬೇಕಾಗಿ ಬಂದಿದೆ.ಆಗ ಕೃಷ್ಣನೇನೋ ಕರೆದಾಗ ಬಂದಿದ್ದ.ಆದರೆ ಇಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಯಾಕೋ ವರುಷ ಕಳೆದರೂ ಇನ್ನು ಕರುಣೆ ತೋರಲಿಲ್ಲ …! ನನಗೆ ಈ ದೇವರುಗಳ ಮೇಲೆ ಒಮ್ಮೊಮ್ಮೆ ಕೋಪಬರುವುದು ಇದೇ ಕಾರಣಕ್ಕಾಗಿ, ಏನೆಲ್ಲಾ ಪಾಪಗಳನ್ನು ಮಾಡಿ ಒಂದು ನೇಮ,ಒಂದು ಹರಕೆ,ಒಂದು ಹೋಮ,ಒಂದು ಹವನ,ತಪ್ಪು ಕಾಣಿಕೆ ಸಲ್ಲಿಸಿ ಸುಮ್ಮನಾಗಿಬಿಡಬಹುದೇ? ಹಾಗಿದ್ದರೆ ’ಧರ್ಮ’ವೆಲ್ಲಿದೆ?

ದಿಲ್ಲಿಯಲ್ಲಿ ಕಳೆದ ಡಿಸೆಂಬರಿನಲ್ಲಿ ನಡೆದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ’ನಿರ್ಭಯ’ ಅತ್ಯಾಚಾರ ಪ್ರಕರಣದಲ್ಲಿ ಹೋರಾಟದ ಕಿಡಿಯನ್ನು ದೆಹಲಿಯ ವಿದ್ಯಾರ್ಥಿ ಮಿತ್ರರು ಹಚ್ಚಿದ್ದರು.ಅದು ದೇಶವ್ಯಾಪಿಯೂ ಹಬ್ಬಿತ್ತು. ಖುದ್ದು ಕೇಂದ್ರ ಸರ್ಕಾರವನ್ನೇ ಮಂಡಿಯೂರುವಂತೆ ಮಾಡಿದ್ದು ಯುವಶಕ್ತಿಗೆ ಸಂದ ಜಯವಾಗಿತ್ತು.ಈಗ ನಿರ್ಭಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದೆ.ಆದರೆ ನಮ್ಮ ಸೌಜನ್ಯ ಪ್ರಕರಣದ ಆರೋಪಿಗಳೇ ಇನ್ನೂ ಸಿಕ್ಕಿಲ್ಲ…! ಅತ್ಯಾಚಾರದ ಆರೋಪಿಗಳನ್ನು ವರ್ಷವಾದರೂ ಬಂಧಿಸಲಾಗದಷ್ಟು ನಿಷ್ಕ್ರಿಯರಾಗಿದ್ದಾರೆಯೇ ನಮ್ಮ ಕರ್ನಾಟಕ ಪೋಲಿಸರು? ಅಥವಾ ಪೋಲಿಸರನ್ನು ನಿಷ್ಕ್ರಿಯಗೊಳಿಸುವಲ್ಲಿ ಕಾಣದ ’ಕೈ’ ಗಳು ಕೆಲಸ ಮಾಡುತ್ತಿವೆಯೇ? ಪ್ರಕರಣ ನಡೆದಾಗ ಇದ್ದಿದ್ದು ಬಿಜೆಪಿ ಸರ್ಕಾರ.ಈಗ ಇರುವುದು ಕಾಂಗ್ರೆಸ್ಸ್ ಸರ್ಕಾರ.ಹಾಗಿದ್ದರೆ ಆ ಕಾಣದ ಕೈಗಳು ಸರ್ಕಾರದ ಕೈಗಳನ್ನೇ ಕಟ್ಟಿಹಾಕಬಲ್ಲಷ್ಟು ಬಲಿಷ್ಟವಾಗಿವೆಯೇ?

ಮತ್ತಷ್ಟು ಓದು »

14
ಆಕ್ಟೋ

ಮೋದಿ ಫ್ಯಾಕ್ಟರ್ : ಒಮರ್ ಅಬ್ದುಲ್ಲಾರ ಮಾತುಗಳು ಯುಪಿಎ ದಿಗಿಲಿನ ಕನ್ನಡಿಯೇ?

ಮೂಲ : ಸಂಜಯ್ ಸಿಂಗ್
ಅನುವಾದ : ಪ್ರಶಾಂತ್ .ಕೆ

Modi Omar“ನನಗನ್ನಿಸುತ್ತೆ, ನಾವೇನಾದರೂ( ಯು.ಪಿ.ಎ. ಅಂಗಪಕ್ಷಗಳು) ‘ಮೋದಿ ಫ಼್ಯಾಕ್ಟರ್’ ನ್ನು ನಿರ್ಲಕ್ಷಿಸಿದರೆ ಅದು ಮೂರ್ಖತನವಾಗುತ್ತೆ; ಅಲ್ಲದೆ ಅದೊಂದು ಅಪಾಯಕಾರಿ ತಪ್ಪು ಕೂಡ..”
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ‘ಒಮರ್ ಅಬ್ದುಲ್ಲಾ’, ‘ಹಿಂದುಸ್ತಾನ್ ಟೈಮ್ಸ್’ ಗೆ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳಿವು. ದೇಶದ ಅತ್ಯಂತ ಸಮಸ್ಯಾತ್ಮಕ ರಾಜ್ಯದ, ಅದರಲ್ಲೂ ಆ ರಾಜ್ಯದ ಆಗು- ಹೋಗುಗಳು ಇಡೀ ದೇಶವನ್ನ ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲಿ, ಆ ರಾಜ್ಯದ ಮುಖ್ಯಮಂತ್ರಿಯ ಮಾತುಗಳನ್ನು ಹಗುರವಾಗಿ ಕಾಣುವ ಹಾಗಿಲ್ಲ. ‘ಒಮರ್’ ‘ರಾಹುಲ್ ಗಾಂಧಿ’ಯವರ ಆಪ್ತ ಮಿತ್ರ, ಅಲ್ಲದೆ ಅವರ ತಂದೆ ‘ಫ಼ರೂಕ್ ಅಬ್ದುಲ್ಲ’ ಯು.ಪಿ.ಎ. ಸರಕಾರದಲ್ಲಿ ಮಂತ್ರಿ ಕೂಡ ಹೌದು; ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಇನ್ನೂ ಮಹತ್ವ ಪಡೆದುಕೊಳ್ಳುತ್ತವೆ, ‘ರಾಹುಲ್ ಗಾಂಧಿ’ ಉತ್ತರ ಪ್ರದೇಶ, ರಾಮ್ ಪುರದಲ್ಲಿ ಹೇಳಿದ ” ೨೦೧೪ ರಲ್ಲಿ ಕೇಂದ್ರದಲ್ಲಿ ಯುವಶಕ್ತಿಯ ಸರಕಾರ ಅಧಿಕಾರಕ್ಕೆ ಬರುತ್ತದೆ, ಅದು ದೇಶವನ್ನೇ ಬದಲಾಯಿಸಬಲ್ಲುದು” ಎಂಬ ಮಾತುಗಳನ್ನು ಒಮರ್ ಪೂರ್ತಿ ಒಪ್ಪಿದಂತೆ ಕಾಣುವುದಿಲ್ಲ; ನಿಮಗೆ ಗೊತ್ತಿರಲಿ, ರಾಹುಲ್ ಮತ್ತು ಒಮರ್ ಇಬ್ಬರೂ ಒಂದೇ ವರ್ಷದಲ್ಲಿ ಜನಿಸಿದವರು ಮತ್ತು ಇಬ್ಬರಿಗೂ ಏಗ ೪೩ ವರ್ಷ ವಯಸ್ಸು. ಅನೇಕ ಕಾಂಗ್ರೆಸ್ ನಾಯಕರಂತೆ, ರಾಹುಲ್ ಗಾಂಧಿಯ ಈ ಭಾಷಣದ ಬಳಿಕ ಮುಂದಿನ ಸರಕಾರ ನಡೆಸಲು ಆತನೇ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸದ ಕಾರಣ , ನ್ಯಾಷನಲ್ ಕಾನ್ಫ಼ರೆನ್ಸ್ ನ ನಾಯಕನ ಮಾತುಗಳನ್ನು ವಿಶೇಷವಾಗಿ ಪರಿಗಣಿಸಬೇಕು.

ಮತ್ತಷ್ಟು ಓದು »