ವಿಷಯದ ವಿವರಗಳಿಗೆ ದಾಟಿರಿ

Archive for

26
ಆಕ್ಟೋ

ರೋಗಿಗಳ ದೀರ್ಘಕಾಲದ ನೋವನ್ನು ಅರ್ಥೈಸಿಕೊಳ್ಳುವಾಗ ನೋಡಬೇಕಾದ ಮನೋ-ಸಾಮಾಜಿಕ ಮತ್ತು ಕೌಟುಂಬಿಕ ಅಂಶಗಳು

-ಡಾ| ಸುಧಾ ಪ್ರಸಾದ್

Painಭೌತ-ಸಾಮಾಜಿಕ, ಮನೋ-ಸಾಮಾಜಿಕ, ವಾತಾವರಣಾವಲಂಬಿತ ಮತ್ತು ಕೌಟುಂಬಿಕ ಸ್ಥಿತಿಗತಿಗಳನ್ನವಲಂಬಿತ ಅಂಶಗಳು ರೋಗಿಯ ದೀರ್ಘಕಾಲದ ನೋವಿಗೆ ಕಾರಣಗಳಾಗಿರಬಹುದು. ದೀರ್ಘಕಾಲದ ನೋವು ಕೌಟುಂಬಿಕವಾಗಿ ಮನೆಯ ಸದಸ್ಯರಮೇಲೆ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಸತತ ನೋವೆಂದು ಹೇಳುವುದನ್ನು ಅನುಮೋದಿಸುವ ಕುಟುಂಬ, ಅಂತಹ ನೋವಿಗೆ ಭಾಗಶಃ ತಾನೇ ಕಾರಣವಾಗಿರಲೂಬಹುದು!  

65 ವರ್ಷದ ಶ್ರೀಮತಿ ಲಕ್ಷ್ಮಿ ಎಂಬಾಕೆ ಮೊಳಕಾಲುಗಂಟಿನ ನೋವಿನ ಪರಿಹಾರಕ್ಕಾಗಿ ಎರಡೂ ಮೊಳಕಾಲುಗಂಟುಗಳ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ಪಡೆಯಬೇಕಾದ ಪುನರುಜ್ಜೀವನ ಚಿಕಿತ್ಸೆಗಳನ್ನು ಆಕೆ ಅದೇ ಆಸ್ಪತ್ರೆಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ; ಆದರೆ ಆಸ್ಪತ್ರೆಯಿಂದ ಮರಳಿ ಮನೆಗೆ ಕಳಿಸುವಾಗ ಕೊಟ್ಟ ಚಿಕಿತ್ಸಾಕ್ರಮಗಳ ಸಾರಾಂಶಯಾದಿಯಲ್ಲಿ ಹೇಳಲಾದ  ವ್ಯಾಯಾಮಗಳನ್ನೆಲ್ಲ ಆಕೆ ಮನೆಯಲ್ಲೇ ನಡೆಸಿದರು. ಶಸ್ತ್ರಚಿಕಿತ್ಸೆ ಮುಗಿದು ಒಂದು ತಿಂಗಳ ನಂತರವೂ ಸಹ ಆಕೆ ಎತ್ತರದ ಕುರ್ಚಿಯಲ್ಲೇ ಕುಳಿತಿದ್ದರು, ಮಲಗುವುದಕ್ಕೆ ಆಧಾರವಾಗಿ ಹಲವು ದಿಂಬುಗಳನ್ನು ಒಂದರಮೇಲೊಂದರಂತೇ ಇಟ್ಟುಕೊಂಡಿದ್ದರು, ನಡೆಯುವುದಕ್ಕೆ ವಾಕರ್ ಬಳಸುತ್ತಿದ್ದರು ಅಥವಾ ಯಾರನ್ನೋ ಹಿಡಿದುಕೊಂಡು ನಡೆದಾಡುತ್ತಿದ್ದರು. ನೋವು ಬರುತ್ತದೆ, ಬುದ್ದುಬಿಡುತ್ತೇನೆ ಎಂಬ ಹೆದರಿಕೆ ಆಕೆಯ ಮನದಲ್ಲಿ ಆಳವಾಗಿ ಬೇರೂರಿ ಆಕೆ ಮಲಗೇ ಇರುವಂತೇ ಮಾಡಿತ್ತು. ಆಕೆಯ ಕುಟುಂಬದವರು ಆಕೆಗೆ ಇನ್ನೇನೋ ತೊಂದರೆಯಿರಬೇಕೆಂಬ ಅನಿಸಿಕೆಯಿಂದ ನಮ್ಮ ಕ್ಲಿನಿಕ್ಕಿನ ಸಲಹೆ-ಸಹಾಯ ಬಯಸಿ ನಮ್ಮಲ್ಲಿಗೆ ಬಂದರು. ಒಬ್ಬ ಅನುಭವಿಯ ಮಾರ್ಗದರ್ಶನದಲ್ಲಿ ಒಂದೇ ವಾರದಲ್ಲಿ ಆಕೆ ಯಾರ ಸಹಾಯವೂ ಇಲ್ಲದೇ ನಡೆಯುವಂತಾದರು. ವಾರಗಳ ನಂತರ ಯಾವ ಹೆದರಿಕೆಯೂ ಇಲ್ಲದೇ ನಡೆದಾಡಿದರೆ, ತಿಂಗಳನಂತರ ಮೆಟ್ಟಿಲುಗಳನ್ನೇರಲು ತೊಡಗಿದರು, ಕಾರನ್ನೇರಿ ಎಲ್ಲರಂತೇ ಆರಾಮವಾಗಿ ಇರಲಾರಂಭಿಸಿದರು. ಮನಸ್ಸಿನಾಳದಲ್ಲಿದ್ದ ನೋವು ಮತ್ತು ಬೀಳುವ ಭಯವನ್ನು ಪರಿಹರಿಸದಿದ್ದರೆ, ಶಸ್ತ್ರಕ್ರಿಯೆಯ ಬಳಿಕವೂ ದೀರ್ಘಕಾಲದ ನೋವಿನಿಂದ ಆಕೆ ಬಳಲುತ್ತಲೇ ಇರಬೇಕಾಗುತ್ತಿತ್ತು. ಬಹಳದೊಡ್ಡ ಶಸ್ತ್ರಚಿಕಿತ್ಸೆಯಿಂದ ಆಯಾಸಗೊಂಡಿರುತ್ತಾರೆಂಬ ಸಹಾನುಭೂತಿಯಿಂದ ಹೆಜ್ಜೆಹೆಜ್ಜೆಗೂ ಆಕೆಗೆ ಸಹಾಯಮಾಡಲು ಮುಂದಾಗುವ ಕುಟುಂಬ ತಮಗರಿವಿಲ್ಲದೇ ಆಕೆಯ ನೋವು ದೀರ್ಘಕಾಲ ಅಥವಾ ಶಾಶ್ವತವಾಗಿ ಹಾಗೇ ಉಳಿದುಬಿಡಲು ಕಾರಣೀಭೂತರಾಗಬಹುದಿತ್ತು!      

ಮತ್ತಷ್ಟು ಓದು »