ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 25, 2013

66

ಮೋದಿ ಅಭಿಮಾನ ಮತ್ತು ಅಭಿಮಾನಿಗಳ ಸುತ್ತ

‍ನಿಲುಮೆ ಮೂಲಕ

– ಮಹೇಶ್ ಪ್ರಸಾದ್ ನೀರ್ಕಜೆ

NaModiಎಲ್ಲೆಡೆ ಮೋದಿ ಜಪ (ಪರ ವಿರೋಧ) ಆಗುತ್ತಿರುವಾಗ ಮೋದಿ ಬೆಂಬಲಿಗನಾಗಿದ್ದುಕೊಂಡೆ ನನ್ನದೊಂದು ಕ್ರಿಟಿಕ್ ಬರಹ ಇರಲಿ ಅನಿಸಿ ಬರೆಯುತ್ತಿದ್ದೇನೆ.

ಮೊದಲನೆಯದಾಗಿ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದ ಗಾದೆ ನಮಗೆ ಗೊತ್ತೇ ಇದೆ. ಮೇಲ್ನೋಟಕ್ಕೆ ಇದು ತೀರಾ ಸರಳ ವಿಚಾರ ಎನಿಸಿದರೂ ಆಚರಣೆಗೆ ಕಷ್ಟ ಅಂತ ಮೋದಿ ಮತ್ತು ಅವರ ಬೆಂಬಲಿಗರು ತುಳಿಯುತ್ತಿರುವ ಹಾದಿ ನೋಡಿದಾಗ ಅನಿಸುತ್ತಿದೆ. ಮೊನ್ನೆ ಮೊನ್ನೆ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿ ಅಂತ ಆಯ್ಕೆ ಆದಾಗ ರಾಜನಾಥ್ ಸಿಂಗ್ ಜೊತೆ ಮೋದಿ ಪರಸ್ಪರ ಸಿಹಿ ಹಂಚಿಕೊಂಡಿದ್ದನ್ನು ನೋಡಿದಾಗ ಮೊದಲ ಬಾರಿಗೆ ನನಗೆ ಎಲ್ಲೋ ಎಡವಟ್ಟಾಗುತ್ತಿದೆ ಅನಿಸಿತು. ಟಿವಿ ಯಲ್ಲಿ ಇದನ್ನು ನೋಡುತ್ತಿದ್ದ ನನ್ನಂಥವರಿಗೆ ಆಗ ಈ ಗಾದೆ ನೆನಪಾದದ್ದು ಸುಳ್ಳಲ್ಲ. ಈಗ ಮೋದಿ ಬೆಂಬಲಿಗರ ವಿಚಾರದಲ್ಲೂ ನನಗೆ ಈ ಗಾದೆ ನೆನಪಾಗುತ್ತಿದೆ.

ಮತ್ತೊಮ್ಮೆ ಹೇಳುವುದಾದರೆ ನಾನು ಮೋದಿ ಪ್ರಧಾನ ಮಂತ್ರಿ ಆಗಬೇಕೆಂದು ಬಯಸುವವನು ಆದರೆ ಅದರ ಜೊತೆ ಜೊತೆಗೇ ನಾಳೆ ಭ್ರಮನಿರಸ ಗೊಳ್ಳಲು ಸಿಧ್ಧವಿಲ್ಲದಿರುವವನು. ಯಡ್ಯೂರಪ್ಪ ವಿಚಾರದಲ್ಲಿ ಈಗಾಗಲೇ ಒಮ್ಮೆ ಭ್ರಮನಿರಸ ಆಗಿದ್ದೇವೆ. ಹಾಗೆ ನೋಡಿದರೆ ಯಡ್ಯೂರಪ್ಪ ಕೂಡ ಪರಿಸ್ಥಿತಿ ಒತ್ತಡದಿಂದ ಭ್ರಷ್ಟರಾದರು ಹೊರತಾಗಿ ಸ್ವತಹ ಅವರೇ ಭ್ರಷ್ಟರಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದಿದ್ದರೆ ಅವರು ರೆಡ್ಡಿಗಳ ಕಾಲು ಹಿಡಿಯಬೇಕಾಗಿರಲಿಲ್ಲ ಮತ್ತು ಕೊನೆಗೆ ಸಿಬಿಐ ಬಲೆಗೆ ಬಿದ್ದು ಜೈಲಿಗೂ ಹೋಗುತ್ತಿರಲಿಲ್ಲ. ಮೋದಿ ಕೂಡ ಹಾಗೆ ಮಾಡ್ತಾರೆ ಅಂತ ಹೇಳ್ತಿಲ್ಲ, ಆದರೆ ಮೋದಿ ಪ್ರಚಾರ ಅನ್ನುವುದು ಒಂದು ಮುಟ್ಟಬೇಕಾದ ಗುರಿ ಹೊರತು ಸಂಭ್ರಮಿಸಬೇಕಾದ ಮತ್ತು ಸಂಭ್ರಮದಲ್ಲಿ ಮೈಮರೆಯುವ ವಿಚಾರ ಅಲ್ಲ ಅನ್ನುವುದನ್ನು ಅವರ ಅಭಿಮಾನಿಗಳು ಅರ್ಥಮಾಡಿಕೊಂಡರೆ ಸಾಕು.

ಹಾಗೆಯೇ ಅಭಿಮಾನಿಗಳು ಇನ್ನೊಂದು ವಿಚಾರ ಮಾಡಬೇಕಾದ್ದು ಎಂದರೆ ಬಳಸುವ ಭಾಷೆ ಅಥವಾ ಮಾತಿನ ಪರಿ. ನಮ್ಮ ಸುತ್ತಲಿನ ಪರಿಸ್ಥಿತಿ ಮತ್ತು ದೇಶದ ಪರಿಸ್ಥಿತಿ ನೋಡಿದಾಗ, ಅದಕ್ಕೆ ಪರಿಹಾರ ಮೋದಿ ಬಿಟ್ಟು ಬೇರೇನೂ ಸದ್ಯಕ್ಕೆ ಕಾಣದಿದ್ದಾಗ, ಆ ಒಂದು ಪರಿಹಾರದ  ಸಾಧ್ಯತೆಯನ್ನೂ ಪ್ರಶ್ನಿಸುವ ವ್ಯಕ್ತಿಗಳ ಬಗ್ಗೆ ಕೋಪ ಬರುವುದು ಸಹಜ. ಅಸಲಿ ಸಮಾಜದ ಬಗ್ಗೆ ಕಾಳಜಿ ಇದ್ದವರಿಗೆ ಮಾತ್ರ ಕೋಪ ಬರುತ್ತದೆ ಯಾಕೆಂದರೆ ಅವರ ನಡೆನುಡಿ ನೇರ ಇರುತ್ತದೆ. ಸಮಾಜಘಾತುಕರು ನಗುನಗುತ್ತಾ, ದೊಡ್ಡ ದೊಡ್ಡ ವಿಚಾರಗಳನ್ನು ಹೇಳುತ್ತಾ ಒಳಗೊಳಗೇ ಸಣ್ಣ ಸಣ್ಣ ಬುದ್ಧಿ ಹೊಂದಿರುತ್ತಾರೆ ಸಾಮಾನ್ಯವಾಗಿ. ಆದರೆ ಹಾಗಂತ ನಾವು ನೇರವಾಗಿ ಮನಸ್ಸಿಗೆ ತೋಚಿದ್ದನ್ನು ಒದರಿದರೆ ಇವೆರಡರ ಮಧ್ಯೆ (ಸಮಾಜ ಪ್ರೇಮಿಗಳು ಮತ್ತು ಘಾತುಕರು) ಇರುವ ಬಹುಸಂಖ್ಯಾತ (ಸಾಮಾಜಿಕವಾಗಿ ಸಕ್ರಿಯರಲ್ಲದ) ಮನಸ್ಥಿತಿಗಳು ಗೊಂದಲಕ್ಕೀ ಡಾಗುತ್ತವೆ ಮತ್ತು ಇದರಿಂದಾಗಿ ಅವರುಗಳು ಘಾತುಕರ ನಯವಾದ ಮಾತಿಗೆ ಮರುಳಾಗುವ ಸಾಧ್ಯತೆ ಹೆಚ್ಚು. ಇದನ್ನು ಸಾಧ್ಯವಾದಷ್ಟು ನೆನಪಿಟ್ಟುಕೊಳ್ಳುವುದು ಎಲ್ಲರ, ಅದರಲ್ಲೂ ಮೋದಿ ಮತ್ತು ಭಾರತದ  ದೃಷ್ಟಿಯಿಂದ ಉಚಿತ ಅನಿಸುತ್ತದೆ.

ಮೋದಿ ಬೆಂಬಲಿಗರು,ಡಾ ಸುಬ್ರಹ್ಮಣಿಯಂ ಸ್ವಾಮಿ ಅವರಿಂದ ಕಲಿಯುವುದು ಬಹಳಷ್ಟು ಇದೆ (ಮೋದಿ ವಿರೋಧಿಗಳೂ ಕಲಿಯಬಹುದು ಆದರೆ ಅಷ್ಟೊಂದು ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾದೀತು).ಮೊದಲನೆಯ ಪಾಠ ಅಂದರೆ ಹೃದಯ ಪಕ್ಕಕ್ಕಿಟ್ಟು ತಲೆ ಉಪಯೋಗಿಸುವುದು. ಮೋದಿ ಪ್ರಧಾನಿ ಆಗೇ ಆಗುತ್ತಾರೆ ಅಂತ ಸಾವಿರ ಬಾರಿ ಹೇಳುವುದರಿಂದ ಪ್ರಯೋಜನ ಇಲ್ಲ. ಮೋದಿಯನ್ನು ಟೀಕಿಸಿದವರನ್ನೆಲ್ಲಾ ಯಾರ್ಯಾರದ್ದೋ ಏಜೆಂಟ್ ಎಂದೋ ಅಥವಾ ಇನ್ನೇನೋ ಹೇಳುವುದಕ್ಕಿಂತ ಬೇರೆ ದಾರಿಯನ್ನು ಹುಡುಕಬೇಕಾಗಿದೆ. ಸಾಮಾನ್ಯವಾಗಿ ಮೋದಿ ವಿರೋಧಿಗಳು ಉಪಯೋಗಿಸುವುದು ಸಂವಿಧಾನ, ಜಾತ್ಯಾತೀತತೆ, ಪ್ರಜಾಪ್ರಭುತ್ವ ಮುಂತಾದ “Loaded words”. ಅಸಲಿ ಅವುಗಳ ಅರ್ಥವೇ ಅವರುಗಳಿಗೆ ಗೊತ್ತಿರುವುದಿಲ್ಲ. ಅಂಥಾದ್ದರಲ್ಲಿ ನಾವು ಮಾಡಬೇಕಾದ್ದೆಂದರೆ ಮೊದಲಾಗಿ ಅವುಗಳನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕು. ಸ್ವಾಮಿ ಅವರು ಒಂದು ಕಡೆ ಹೇಳಿದಂತೆ ಸಂವಿಧಾನವನ್ನು ವಿಶದ ಪಡಿಸುವ (interpretation) ಹಕ್ಕು ನ್ಯಾಯಾಂಗಕ್ಕೆ ಮಾತ್ರ ಇದೆ. ಯಾವುದೇ ವಿಚಾರದಲ್ಲಿ ಸಂಶಯ ಉಂಟಾದಾಗ ಕೇವಲ ನ್ಯಾಯಾಲಯದ ಜಡ್ಜ್ ಮೆಂಟ್ ಗಳನ್ನ ಮಾತ್ರ ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಹೊರತು ಇನ್ಯಾರದ್ದೋ ವಿಚಾರಗಳನ್ನಲ್ಲ. ಹಾಗಾಗಿ ಯಾರಾದರೂ ಮೋದಿ ಸಂವಿಧಾನ ವಿರೋಧಿ ಅಂದಾಗ ಈ ವಿಚಾರವನ್ನು ಸ್ಪಷ್ಟಪಡಿಸಬೇಕು. ನ್ಯಾಯಂಗವೇ (ಸರ್ವೋಚ್ಚ ನ್ಯಾಯಾಲಯ) ಮೋದಿ ಯನ್ನು ತಪ್ಪಿತಸ್ಥ ಎಂದಾಗ ಅದನ್ನು ಒಪ್ಪಿಕೊಳ್ಳುವುದೂ ಅನಿವಾರ್ಯ ಆಗುತ್ತದೆ (ಈ ಸಾಧ್ಯತೆಯೂ ಇಲ್ಲದಿಲ್ಲ ಯಾಕೆಂದರೆ ಇಶ್ರತ್ ಜಹಾನ್ ಕೇಸ್ ಇನ್ನೂ  ತನಿಖೆ ಹಂತದಲ್ಲಿದೆ. ಆದರೆ ಯಾಸಿನ್ ಭಟ್ಕಳ, ಇಶ್ರತ್ ಅನ್ನುವ ಬಿಹಾರ್ ಕಿ ಭೇಟಿ, ಲಷ್ಕರ್ ಸಂಘಟನೆಯವಳು ಅಂದಿರುವುದನ್ನು ಮರೆಯದಿರೋಣ). ಅಷ್ಟಕ್ಕೂ ಭಾರತದ ಭವಿಷ್ಯ ಮೋದಿ ಯಿಂದ ಶುರುವಾಗಿದ್ದಲ್ಲ ಮತ್ತು ಮೋದಿಯಲ್ಲೇ ಕೊನೆಯಾಗುವುದಿಲ್ಲ. ನಮ್ಮ ಸಮಾಜ ವ್ಯಕ್ತಿ ಕೇಂದ್ರಿತ ಎಂದಿಗೂ ಆಗಬಾರದು (ಇದು ಆರೆಸ್ಸೆಸ್ ಆಶಯವೂ ಹೌದು). ಇರಲಿ.ಇಲ್ಲಿ ಸಂವಿಧಾನದ ವಿಚಾರ ಒಂದು ಉದಾಹರಣೆ ಅಷ್ಟೇ, ಇಂತಹ ಸಾಕಷ್ಟು “ಸೂಕ್ಷ್ಮ” ವಿಚಾರಗಳಿಗೆ ಹೆಚ್ಚು ಮಹತ್ವ ಕೊಡುವುದು ಅತಿ ಅವಶ್ಯ ಅಂತ ಅನಿಸುತ್ತದೆ ನನಗೆ.

ಸ್ವೀಟ್ ಹಂಚುವುದರಿಂದಾಗಲೀ ಪಟಾಕಿ ಸಿಡಿಸುವುದರಿಂದ ಆಗಲೀ ಈ ಕೆಲಸಗಳು ಆಗದು. ಮೋದಿ ಅಭಿಮಾನಿಗಳು ಅಂತ ಹೇಳಿಕೊಂಡು ಕೆಟ್ಟ ಕೆಟ್ಟದಾಗಿ ಮಾತಾನಾಡಿಕೊಂಡು, ದ್ವೇಷಕಾರುತ್ತ ಬರೆಯುವ ಅಭಿಮಾನಿಗಳಿಂದ ಮೋದಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಮೈಗೆ ಎಣ್ಣೆ ಹಚ್ಚಿಕೊಂಡು ಅಖಾಡಕ್ಕಿಳಿಯುವ ಸೆಕ್ಯುಲರ್ ಮಶಾಶಯರು ಮೋದಿ ಅಭಿಮಾನಿಗಳ ಇಂತ ವರ್ತನೆಗಳನ್ನೇ ತಮ್ಮ ತುತ್ತೂರಿ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸುತ್ತಾರೆ.ಬೇರೇನೂ ಮಾಡಲಾಗದಿದ್ದರೂ ಕನಿಷ್ಠ ಪಕ್ಷ ಮೋದಿಯ ವ್ಯಕ್ತಿತ್ವಕ್ಕೆ ತಕ್ಕುದಾದ ನಡೆತೆಯನ್ನಾದರೂ ಅಳವಡಿಸಿಕೊಂಡಲ್ಲಿ ಅದು ಮೋದಿಗೆ ನಾವು ಮಾಡುವ ಸಣ್ಣ ಸಹಕಾರ ಆದೀತು.

66 ಟಿಪ್ಪಣಿಗಳು Post a comment
  1. naveennayak799's avatar
    naveennayak799
    ಆಕ್ಟೋ 25 2013

    100% ಸರಿಯಾಗಿ ಹೇಳಿದ್ದೀರಿ. ಇದನ್ನು ಬಹಳ ಜನ ಅರಿಯಬೇಕಾಗಿದೆ.

    ಉತ್ತರ
  2. prithviraj j shetty's avatar
    prithviraj j shetty
    ಆಕ್ಟೋ 25 2013

    100% ಸರಿಯಾಗಿ ಹೇಳಿದ್ದೀರಿ. ಇದನ್ನು ಬಹಳ ಜನ ಅರಿಯಬೇಕಾಗಿದೆ.

    ಉತ್ತರ
  3. ನವೀನ's avatar
    ನವೀನ
    ಆಕ್ಟೋ 25 2013

    ಮೋದಿ ಅಭಿಮಾನಿಗಳು ಅಂತ ಹೇಳಿಕೊಂಡು ಬಾಯಿಗೆ ಬಂದತೆ ಮಾತನಾಡಿ, ಮೋದಿಯನ್ನಿ ವಿರೋಧಿಸಿ ಏನೇ ಬರೆದರೂ ಅವ್ರನ್ನು ಆ ಏಜೆಂಟ್, ಈ ಏಜೆಂಟ್,ಪಾಕಿಸ್ತಾನಕ್ಕೆ ಓಡಿಸಿ ಅಂತೆಲ್ಲ ಅವರನ್ನು ಓಡಿಸಿಕೊಂಡು ಹೋಗುವ ಅಭಿಮಾನಿಗಳಿಂದಲೇ ಮೋದಿ ಇಮೇಜಿಗೆ ಧಕ್ಕೆಯಾಗುತ್ತದೆ. ನೀರ್ಕಜೆ 101% ಸರಿಯಾಗಿ ಹೇಳಿದ್ದೀರಿ. ಇದನ್ನು ಬಹಳ ಜನ ಅರಿಯಬೇಕಾಗಿದೆ.

    ಉತ್ತರ
  4. M.A.Sriranga's avatar
    M.A.Sriranga
    ಆಕ್ಟೋ 25 2013

    I agree with Mahesh prasad,s article from the first word to the last one. But still I am having one or two doubts. We have reached a point now where most of the people who really changes the political scenario can understand only the FIGURE and SPEECH(BHAASHANA) We have seen all these in the past 20 to 30 years. People who thinks will not act;especially during elections. They enjoy one holiday by seeing pre-poll or after poll debates in TV. So I think what the people wants our leaders are giving. Whether it is for good or not only the time can tell.

    ಉತ್ತರ
  5. ಗಿರೀಶ್'s avatar
    ಗಿರೀಶ್
    ಆಕ್ಟೋ 25 2013

    ಮರಳುಗಾಡಿನಲ್ಲಿ ಓಯಸಿಸ್ ಎಂಬ ಕಲ್ಪನೆ ಹುಟ್ಟಿಸುವ ಆಶಯವದು. ರೋಸಿ ಹೋಗಿರುವ ಜನತೆಗೆ ಆಶಾಕಿರಣ ಕಂಡಾಗ ಬರುವ ಸಹಜ ಪ್ರತಿಕ್ರಿಯೆ ಅದು. ಬಿಜೇಪಿಯವರಲ್ಲದವರೂ ಮೋದಿಯ ಬಗ್ಗೆ ಆಸೆಗಳನ್ನು ಇಟ್ಟುಕೊಂಡಿದ್ದಾರೆ.

    ಮೋದಿ ವಿರೋಧಿಗಳ ಕೆಲವು ಅಹವಾಲುಗಳು ಮತ್ತು ವಿಶ್ಲೇಷಣೆಗಳು

    ಮುಖ್ಯವಾಗಿ ಅವರ ಸಂಕಟವಿರುವುದು ಮೋದಿ ಸಮರ್ಥಕರು ಹರಿ ಹಾಯುವ ರೀತಿ.

    ಇನ್ನೊಂದು ಮೋದಿ ವಿರೋಧಿಗಳನ್ನು ದೇಶದ್ರೋಹಿಗಳೆಂದು ದೂಷಿಸುವುದಕ್ಕೆ ಆಕ್ಷೇಪ.

    ಮೊದಲನೆಯದಾಗಿ ಯಾವುದೇ ಮೋದಿ ವಿರೋಧಿಗಳನ್ನು ಗಮನಿಸಿ ಅವರು ಯಾವುದೇ ಅಂಕಿ ಅಂಶದ ಆಧಾರ ಮೇಲೆ ಆರೋಪ ಅಪವಾದ ಹೊರಿಸುವುದಿಲ್ಲ. ಕೇವಲ ಊಹಾಪೋಹದ ಆರೋಪಗಳನ್ನು ಹರಿಯ ಬಿಡುತ್ತಾರೆ. ಊಹಾಪೋಹಗಳಿಗೆ ಏನೆಂದು ಉತ್ತರ ಹೇಳುವುದು? ಏಕೆಂದರೆ ಅವು ಸತ್ಯವಾಗಿರುವುದಿಲ್ಲ. ಅವು ಊಹಾಪೋಹಗಳೆಂದು ಹರಿಯಬಿಟ್ಟವರಿಗೂ ಗೊತ್ತು.
    ಯಾವಾಗ ಅಂಕಿಅಂಶಗಳ ಆಧಾರದ ಮೇಲೆ ಚರ್ಚೆ ನಡೆದು ತಮ್ಮ ವಾದಕ್ಕೆ ಯಾವುದೇ ನೆಲೆಯಿಲ್ಲ ಎಂಬ ಅರಿವು ಮೂಡುತ್ತಿದ್ದಂತೆ ವಿರೋಧಿಗಳು ಮೋದಿಯನ್ನು ನರಹಂತಕನೆಂದು ಷರಾ ಬರೆದು ಬಿಡುತ್ತಾರೆ, ಆಗ ಸಮರ್ಥಕರಿಗೆ ದಾಳಿನಡೆಸುವುದು ಬಿಟ್ಟು ಬೇರೆ ದಾರಿಯೇ ಉಳಿಯುವುದಿಲ್ಲ.
    ಈ ದೇಶದ್ರೋಹಿಗಳೆನ್ನಲು ಮುಖ್ಯ ಕಾರಣ

    ಈ ವಿರೋಧಿಗಳು ಎಂದಿಗೂ ಚರ್ಚೆಯಲ್ಲಿ ಪಾಲ್ಗೊಳ್ಳದಿರುವುದು. ಮೋದಿಯನ್ನು ವಿರೋಧಿಸಲು ಇವರಿಗೆ ಸೈದ್ದಾಂತಿಕ ಮತ್ತು ರಾಜಕೀಯದ ಕಾರಣ ಬಿಟ್ಟರೆ ಬೇರಾವುದೂ ಇಲ್ಲ. ಇವರ ಮೊದಲನೆ ಆಪಾದನೆ ಆತ ಹತ್ಯಾಕಾಂಡದ ರೂವಾರಿ. ಪೂರ್ವಗ್ರಹ ಪೀಡಿತರು ನೀವು ಎಷ್ಟೇ ಆಧಾರ ಕೊಡಿ ಇವರು ಅದನ್ನು ಒಪ್ಪುವುದಿಲ್ಲ. ಕೇವಲ ೨೪ ಗಂಟೆಯೊಳಗೆ ಗಲಭೆಯನ್ನು ನಿಯಂತ್ರಣಕ್ಕೆ ತಂದ ಮೋದಿಯ ಬಗ್ಗೆ ಹೇಳಿ ಉಹೂಂ ಒಪ್ಪಲಾರರು.

    ಆದರೂ ಮೋದಿಯನ್ನು ಹಣಿಯಲು ಬೇರೆ ಮಾರ್ಗ ಸಿಗದಿದ್ದಾಗ ಇದನ್ನು ಆಯ್ದು ಕೊಂಡಿರುತ್ತಾರೆಂದು ಈಗಾಗಲೆ ಮೋದಿ ಸಮರ್ಥಕರಿಗೆ ಅರಿವಾಗಿರುವುಂಟಾಗಿದ್ದರೂ ಸಮರ್ಥಕರು ವಾಗ್ದಾಳಿ ಪ್ರಾರಂಭಿಸುತ್ತಾರೆ.

    ಉತ್ತರ
  6. krishnappa's avatar
    krishnappa
    ಆಕ್ಟೋ 25 2013

    ಮೋದಿಯವರ ವೈಭವೀಕರಣ ಈಗ ಎಲ್ಲೆಡೆ ಕಂಡುಬರುತ್ತಿದೆ. ಇದು ನಿಜಕ್ಕೂ ದೇಶಕ್ಕೆ ಅತ್ಯಂತ ಅಪಾಯಕಾರಿ. ಭಾರತದಂಥ ಬಹಳ ದೊಡ್ಡ ದೇಶದ ಭವಿಷ್ಯ ಮೋದಿ ಎಂಬ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿಸಿದೆ ಎಂದು ಬಿಂಬಿಸುವ ಜಾಹೀರಾತುಗಳು, ಕಟೌಟುಗಳು, ಬೃಹದಾಕಾರದ ಬ್ಯಾನರುಗಳು ಈಗ ಎಲ್ಲೆಡೆ ಕಣ್ಣು ಕುಕ್ಕುವಂತೆ ರಾರಾಜಿಸುತ್ತಿವೆ. ಮೋದಿಯನ್ನು ವೈಭವೀಕರಿಸುವ ಬೃಹತ್ ಬ್ಯಾನರುಗಳನ್ನು ನೋಡುವಾಗ ಮೋದಿ ಈಗಾಗಲೇ ಭಾರತದ ಪ್ರಧಾನಮಂತ್ರಿ ಆಗಿದ್ದಾರೆ ಎಂದು ಬಿಂಬಿಸುವ ರೀತಿಯಲ್ಲಿ ತೋರುತ್ತವೆ. ಇದು ಬಿಜೆಪಿ ಪಕ್ಷದ ನೈತಿಕ ದಿವಾಳಿತನವನ್ನು ಹಾಗೂ ಸಂಘ ಪರಿವಾರದ ಸಾಮ್ರಾಜ್ಯಶಾಹಿ ಮನೋಭಾವವನ್ನು ತೋರಿಸುತ್ತಿದೆ. ಇಡೀ ದೇಶದ ಭವಿಷ್ಯ ಒಬ್ಬ ವ್ಯಕ್ತಿಯ ಮೇಲೆ ನಿಂತಿದೆ ಎಂಬುದೇ ಅವಿವೇಕದ ಪರಮಾವಧಿ. ಚುನಾವಣೆಗೆ ಇನ್ನೂ ಕನಿಷ್ಠ 6 ತಿಂಗಳು ಇದೆ. ಆಗಲೇ ಈ ರೀತಿ ಮೋದಿಯ ವೈಭವೀಕರಣ ನಡೆಸುತ್ತಿರುವುದು ಬಿಜೆಪಿ ಪಕ್ಷದ ಬಳಿ ನಿರ್ದಿಷ್ಟ ವಿಷಯಗಳೇ ಎಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ. ಮೋದಿ ಅಭಿಮಾನಿಗಳಲ್ಲಿ ವಿವೇಕದ ಲವಲೇಶವೂ ಕಂಡುಬರುತ್ತಿಲ್ಲ, ಕಂಡುಬರುತ್ತಿರುವುದು ಕುರುಡು ಅಭಿಮಾನ ಮಾತ್ರ. ಅತಿಯಾದ ವೈಭವೀಕರಣ ಜನರಲ್ಲಿ ಜುಗುಪ್ಸೆ ಉಂಟುಮಾಡುತ್ತದೆ ಎಂಬ ಸರಳ ಮನೋವೈಜ್ಞಾನಿಕ ಸತ್ಯವೂ ಮೋದಿ ಅಭಿಮಾನಿಗಳಿಗೆ ಗೊತ್ತಿಲ್ಲದಿರುವುದು ಶೋಚನೀಯ.

    ಉತ್ತರ
    • ನವೀನ's avatar
      ನವೀನ
      ಆಕ್ಟೋ 25 2013

      ಕೃಷ್ಣಪ್ಪನವ್ರೇ,
      ಲೇಖನ ದನಿ ನಿಮ್ಮ ಪ್ರತಿಕ್ರಿಯೆಯಂತೆ ಇಲ್ಲ 😉 ನೀವು ಅದೇ ಹಳೆಯ ಸೆಕ್ಯುಲರ್ ಸ್ಟೀರಿಯೋ ಟೈಪ್ ಪ್ಲೇ ಮಾಡ್ತಾಯಿದ್ದೀರ.
      ಮೋದಿಯ ಅತಿರೇಖದ ಅಭಿಮಾನಿಗಳನ್ನೂ ಪಕ್ಕಕ್ಕಿಟ್ಟು ನೋಡಿದಾಗ,ನಿಜವಾಗಿಯೂ ಸ್ಟಫ್ ಇರುವುದು ಬಿಜೆಪಿಯ ಬಳಿಯೇ ಹೊರತು ಕಾಂಗ್ರೆಸ್ಸಿನದಲ್ಲ ಅನ್ನುವುದು ಸ್ಪಷ್ಟವಾಗಿದೆ.ಗುಜರಾತಿನಲ್ಲಿ ಮೋದಿ ಮಾಡಿರುವ ಮಾಡೆಲ್ ಇದೆ ಬಿಜೆಪಿಯ ಮುಂದೆ.ಕಾಂಗ್ರೆಸ್ಸಿನದು ಯುಪಿಎ೨ ಹಗರಣಗಳ ಮಾಲೆಯಿದೆ

      ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಆಕ್ಟೋ 25 2013

      ಕೃಷ್ಣಪ್ಪನವರೆ..

      ಮೋದಿಯವರದ್ದೊಂದೆ ಅಲ್ಲ ಯಾರ ವೈಭವಿಕರಣ, ಯಾವುದೇ ಸಿದ್ಧಾಂತದ ವೈಭವಿಕರಣ ಅಪಾಯಕಾರಿಯೆ!. ಮೋದಿ ವಿರೋಧಿಗಳ ಭಟ್ಟಂಗಿ ಸಂಸ್ಕೃತಿ ನಿಮಗೆ ಕಂಡಿಲ್ಲವೆ? ಇಷ್ಡು ದಿನ ಕಮ್ಯೂನಿಷ್ಟ್ ಸಿದ್ಧಾಂತವೇ ಎಲ್ಲದಕ್ಕೂ ಪರಿಹಾರ ಎನ್ನುತ್ತಿದ್ದವರು, ಅದು ಮರಣಶಯ್ಯೆಯಲ್ಲಿದೆ ಅನಿಸಿದಾಗ, ಜಂಪ್ ಹೊಡೆದು, ಈಗ ಆಳುವ ಪಕ್ಷದ ಗಂಜಿಕೇಂದ್ರದ ಸದಸ್ಯರಾಗಿ, ಭೊಪರಾಕ್ ಸುರುಮಾಡಿಲ್ಲವೆ?. ಬೃಷ್ಟಾಚಾರ ದೊಡ್ಡ ಸಮಸ್ಯೆಯಲ್ಲ ಎಂದು ತಿಪ್ಪೆ ಸಾರಿಸುತ್ತಿಲ್ಲವೆ? ನಾವಾದರೂ ಕನಿಷ್ಟ ಬಿಜೆಪಿಯ ಬೃಷ್ಟಾಚಾರ ಪ್ರತಿಭಟಿಸಿ, ಹೋದ ಚುನಾವಣೆಯಲ್ಲಿ ವಿರುದ್ಧವಾದೆವು..ಬಿಜೆಪಿಯ ಸೋಲಿಗೆ ನಮ್ಮಂತವರೂ ಕಾರಣವಾದರು. ಯಡಿಯೂರಪ್ಪನವರ ಬೃಷ್ಟಾಚಾರದ ವಿರುದ್ಧ ಕುಣಿದಾಡಿದ ಮಹಾನುಭಾವರು ಮಾಡುತ್ತಿರುವುದೇನು??. ಬೇರೆಯವರಿಗೆ ಬೋಧನೆ ಮಾಡುವವರಿಗೆ ಸಮರ್ಥಿಸಿಕೊಳ್ಳುವಂತಹ ನೈತಿಕತೆಯಿರಬೇಕು.. ಅಂಗೈ ತೋರಿಸಿ ಅವಲಕ್ಷಣ ಅನಿಸಿಕೊಳ್ಳಬಾರದು. ಮೋದಿ ಬಂದರೆ ಖಂಡಿತವಾಗಿಯೂ ಈಗಿರುವುದಕ್ಕಿಂತ ಸ್ವಲ್ಪವಾದರೂ ಸುಧಾರಣೆಯಾಗುತ್ತದೆ ಎಂಬ ವಿಶ್ವಾಸ ಮೋದಿ ಬೆಂಬಲಿಗರಿಗಿದೆ. ನಿಮ್ಮ ಕಣ್ಣಿಗೆ ಕಂಡು ಬರುವ ‘ಮೋದಿ ಸಮಸ್ಯೆಗಳು’ ..ಈಗಿನ ಮಟ್ಟಿಗೆ ನಮ್ಮ ಕಣ್ಣಿಗೆ ಗೌಣ. ಮೋದಿ ಉಳಿದ ರಾಜಕಾರಣಿಗಳಂತೆಯೇ ಕೇವಲ ಮಾತಿನ ವೀರರಾದರೆ, ಹೇಳಿದ್ದನ್ನು ಮಾಡದಿದ್ದರೆ..ಮುಲಾಜಿಲ್ಲದೇ ಅವರನ್ನು ಬಿಟ್ಟು ಮುಂದೆ ಹೋಗುತ್ತೇವೆ..ಭೋಪರಾಕ್ ಭಟ್ಟಂಗಿಗಳಲ್ಲ ನಾವು.

      ಉತ್ತರ
      • krishnappa's avatar
        krishnappa
        ಆಕ್ಟೋ 26 2013

        ನಾಯಕನನ್ನು ಬೃಹದಾಕಾರದ ಕಟೌಟ್, ಬ್ಯಾನರುಗಳನ್ನು ಪ್ರದರ್ಶಿಸಿ ಬೆಳೆಸಲು ಸಾಧ್ಯವಿಲ್ಲ. ಓರ್ವ ನಿಜವಾದ ನಾಯಕ ಜನರ ಹೃದಯದಲ್ಲಿ ಇರುತ್ತಾನೆ, ಅವನಿಗೆ ಅಬ್ಬರದ ಪ್ರಚಾರದ ಅಗತ್ಯ ಬೀಳುವುದಿಲ್ಲ; ಅವನ ದೃಷ್ಟಿಕೋನ, ಚಿಂತನೆಗಳು, ಮಾಡಿದ ಕೆಲಸಗಳು ತನ್ನಿಂದ ತಾನಾಗಿಯೇ ಅವನನ್ನು ಜನರ ಹೃದಯದಲ್ಲಿ ನೆಲೆಸುವಂತೆ ಮಾಡುತ್ತವೆ. ಈವರೆಗೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಪಕ್ಷವೂ ಮೋದಿಯ ವೈಭವೀಕರಣ ಮಾಡಿದಂತೆ ಒಬ್ಬ ವ್ಯಕ್ತಿಯನ್ನು ವೈಭವೀಕರಿಸಿ ಬೃಹದಾಕಾರದ ಬ್ಯಾನರು, ಕಟೌಟ್ ಗಳನ್ನು ಕಣ್ಣಿಗೆ ಕುಕ್ಕುವಂತೆ ಕಂಡ ಕಂಡಲ್ಲಿ ನಿಲ್ಲಿಸಿದ ಉದಾಹರಣೆ ಇಲ್ಲ. ಕುಟುಂಬ ರಾಜಕಾರಣ ಮಾಡುತ್ತಿರುವ ಪಕ್ಷಗಳೂ ಕೂಡ ಈ ರೀತಿಯ ವೈಭವೀಕರಣಕ್ಕೆ ಇಳಿದದ್ದು ಇಲ್ಲ. ಅಬ್ಬರದ ಪ್ರಚಾರಕ್ಕೆ ಜನ ಮತ ನೀಡುತ್ತಾರೆ ಎಂಬ ಅಭಿಪ್ರಾಯ ಇದ್ದರೆ ಅದು ಒಂದು ಭ್ರಮೆ ಮಾತ್ರ. ವಾಸ್ತವಾಗಿ ನೋಡಿದರೆ ಅತಿರೇಕದ, ಅಬ್ಬರದ, ಆಡಂಬರದ ಪ್ರಚಾರ ಜನರಲ್ಲಿ ಜುಗುಪ್ಸೆಯನ್ನು ಹುಟ್ಟಿಸುತ್ತದೆ ಹಾಗೂ ಅಂಥವರನ್ನು ಗುಮಾನಿಯಿಂದ ನೋಡುವಂತೆ ಮಾಡುತ್ತದೆ. ಬಿಜೆಪಿಯವರಿಗೆ ಎಷ್ಟು ಹೇಳಿದರೂ ಒಂದೇ, ಅವರು ವಿವೇಕದ ಮಾತಿಗೆ ಬೆಲೆ ಕೊಡುವವರು ಅಲ್ಲ. ಅವರು ತಮ್ಮದೇ ಹಠ ಮಾರಿ ಧೋರಣೆಯ ಹಾದಿಯಲ್ಲಿ ಹೋಗುವವರು ಎಂಬುದು ಎದ್ದು ಕಂಡುಬರುತ್ತಾ ಇದೆ.

        ಉತ್ತರ
        • ಗಿರೀಶ್'s avatar
          ಗಿರೀಶ್
          ಆಕ್ಟೋ 26 2013

          ನಾಯಕಕಟೌಟಗಳಲ್ಲೂ ಬೆಳೆಯುವುದಿಲ್ಲ, ಟಿವಿ ಭಾಷಣ ಮಾಡುವುದರಲ್ಲೂ ಬೆಳೆಯುವುದಿಲ್ಲ. ಆದರೆ ಹರದಯದಲ್ಲಿ ಬೆಳೆದಾದ ಮೇಲೆ ಬೇರೆಯವರಿಗೆ ತಲುಪಲು ಜಾನರಿಗೆ ತಿಳಿಸಲು ಬೇಕು. ತಾವೇಕೆ ತಮ್ಮ ಅಧ್ಯಯನವನ್ನು ಟಿವಿಗಳಲ್ಲಿ ಬ್ಲಾಗುಗಳಲ್ಲಿ ಪ್ರಚಾರ ಮಾಡುತ್ತೀರಿ? ನಿಜವಾದ (ತಮ್ಮದು ಜ್ಞಾನೆವೆಂದು ಮನಸಿನಲ್ಲಿ ಮಂಡಿಗೆ ತಿಂದುಕೊಳ್ಳಿ) ಜ್ಞಾನವನ್ನು ಏಕೆ ಪ್ರಚಾರಕ್ಕೆ ಒಡ್ಡುತ್ತೀರಿ. ಸುಮ್ಮನಿರಬಹುದಲ್ಲ. ಮೋದಿಯ ಬೆಳವಣಿಗೆಯ ಬಗ್ಗೆ ಈ ಲೇಖನವಿಲ್ಲ. ಮೊದಲು ನಮೋನಿಯಾಗೆ ಚಿಕಿತ್ಸೆ ತೆಗೆದುಕೊಳ್ಳಿ. ಹಾಗೆಯೆ ಕೇಸರಿ ಕಾಮಾಲೆಗೂ ತೆಗೆದುಕೊಳ್ಳಿ.
          ಮೋದಿಯ ಸಮರ್ಥಕರು ಏಕೆ ಹೀಗೆ ಪ್ರತಿಕ್ರಿಯೆ ನೀಡುತ್ತಾರೆಂಬುದಕ್ಕೆ ಇಲ್ಲೆ.ಸಾಕ್ಷಿ ಸಮೇತ ಉದಾಹರಣೆ ಸಿಕ್ಕಿತು ನೋಡಿಕೊಳ್ಳಿ ಮಹೇಶ ಅವರೆ 🙂

          ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಆಕ್ಟೋ 26 2013

          ಈ ‘ಭ್ರಮೆ’ಯೇ ‘ತಿಳುವಳಿಕೆ’ ಯುಳ್ಳವರನ್ನು, ‘ವಿವೇಕಿ’ಗಳನ್ನು ಬೆಚ್ಚಿಬಿಳುಸುತ್ತಿರುವುದನ್ನು ನೋಡಿದರೆ ಸಖತ ಆಶ್ಚರ್ಯವಾಗುತ್ತದೆ.. :). ಅಂದಹಾಗೆ ಕೃಷ್ಣಪ್ನೋರೆ..ಬೆಂಗಳೂರ ಹತ್ತಿರ ಬಸವಣ್ಣನವರ ಬೃಹತ ಪ್ರತಿಮೆ ನಿಲ್ಲಿಸಲಿಕ್ಕೆ ಹೊರಟಿದ್ದಾರಂತೆ..ಸ್ವಲ್ಪ ಈ ವಿವೇಕವನ್ನು ಅವರ ಹತ್ತಿರವೂ ಹಂಚಿಕೊಳ್ಳಬಾರದೇ..ಪ್ಲೀಸ್..

          ಉತ್ತರ
    • Nagshetty Shetkar's avatar
      Nagshetty Shetkar
      ಆಕ್ಟೋ 25 2013

      Darga Sir, you have told the truth about NaMo bhaktas. But in this forum people want only bhajane of NaMo. So they attack those who don’t do NaMo stuti.

      ಉತ್ತರ
      • Nagshetty Shetkar's avatar
        Nagshetty Shetkar
        ಆಕ್ಟೋ 25 2013

        A small correction. Please read “Darga Sir” as “Dear Sir”.

        ಉತ್ತರ
        • ನವೀನ's avatar
          ನವೀನ
          ಆಕ್ಟೋ 25 2013

          ಏನೇ ಆಗಲಿ,ನಮ್ಮ ಶೆಟ್ಕರ್ ಅವರಿಗೆ ಯಾವಗಲೂ, “ದರ್ಗಾ ಸರ್” ಅವರದೇ ಧ್ಯಾನ 😛

          ಉತ್ತರ
          • ಗಿರೀಶ್'s avatar
            ಗಿರೀಶ್
            ಆಕ್ಟೋ 26 2013

            ಶೆಟ್ಕರ್ ಮತ್ತು ದರ್ಗಾ ಅವರೆ, ಇದು ಮೋದಿ ಅಭಿಮಾನಿಗಳಿಗೆ ಹೇಳುತ್ತಿರುವ ಕಿವಿಮಾತು. ನಿಮ್ಮಿಬ್ಬರಿಗೆ ಇಲ್ಲೇನು ಕೆಲಸ? ಮೋದಿ ವಿರೋಧಿಗಳಿಗೆ ಕೆಲವು ಲೇಖನಗಳಿವೆ ಅಲ್ಲಿ ನಿಮ್ಮ ಬಡಬಡಿಕೆ ಮುಂದುವರೆಸಿ.

            ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಆಕ್ಟೋ 26 2013

          ಸಣ್ಣ ಸ್ಪೆಲ್ಲಿಂಗ್ ಮಿಸ್ಟೇಕ್ ಅಷ್ಟೇ..ನಮ್ಮ ಗುರುಗಳ ಮನಸ್ಸಿನಲ್ಲಿ, ಹೃದಯದಲ್ಲಿ, ತಲೆಯಲ್ಲಿ ಯಾವಾಗಲೂ ಅವರ ಮಿಸ್ಟಿಕ್ ಎ ಇರೋದು..ಅದಕ್ಕೆ ಆವಾಗಾವಾಗ ಮಿಸ್ಟೇಕ್ ಆಗಿಬಿಡುತ್ತದೆ..ಡಿಯರ್ ಹೋಗಿ ದರ್ಗಾ ಆಗಿಬಿಡುತ್ತದೆ!..ಯಾರೂ ಇದನ್ನು ಮಾನಸಿಕ ಅಡ್ಡಪಲ್ಲಕ್ಕಿ ಉತ್ಸವ, ಭಟ್ಟಂಗಿತನ ಎಂದು ಮಿಸ್ಟೇಕ್ ಮಾಡಿಕೊಳ್ಳಬೇಡಿ..ಪ್ಲೀಸ್..

          ಉತ್ತರ
  7. ಗಿರೀಶ್'s avatar
    ಗಿರೀಶ್
    ಆಕ್ಟೋ 26 2013

    ಮಹೇಶ್ ಅವರೆ, ನೋಡಿದಿರಲ್ಲ ಕೃಷ್ಣಪ್ಪ ಉರುಫ್ ದರ್ಗಾ ಅವರ ಮಾತುಗಳನ್ನು. ಇನ್ನೂ ನಿಮ್ಮ ಲೇಖನದ ಆಶಯದ ಬಗ್ಗೆ ನಿಮಗೆ ಇದೇ ಅಭಿಪ್ರಾಯವಿದೆಯೆ? ದಡ್ಡನಿಗೆ ಮಾತಿನ ಪೆಟ್ಟು, ಜಾಣನಿಗೆ ದೊಣ್ಣೆಯ ಪೆಟ್ಟು ಕೆಲಸ ಮಾಡಲ್ಲ ಸ್ವಾಮಿ. ಇಂತಹ ಸೌಮ್ಯವಾದದಿಂದ ನಷ್ಟವೂ ಇದೆ. ಮಾರಮ್ಮನಿಗೆ ತೆಂಗಿನಕಾಯಿ ಒಡೆಯಲ್ಲ. ಸೌಮ್ಯವಾದವೇ ವಿದೇಶಿಗಳ ಆಕ್ರಮಣಕ್ಕೆ ಕಾರಣವಾಗಿದ್ದು. ಆ ನೈಜ ಇತಿಹಾಸ ಈ ಸೆಕ್ಯುಲರ್ಗಳು ಎಲ್ಲೂ ಹೇಳಲು ಬಿಟ್ಟಿಲ್ಲ. A good tool may not be a right tool.A acrew driver can tighten d screw, but not a bolt, for that u require a spanner. ಒಳ್ಳೆಯತನ ಯಾವಾಗ್ಲೂ ಕೆಲಸ ಮಾಡಲ್ಲ. ಬಿಜೆಪಿ ಪ್ರಾಮಾಣಿಕತೆ ನೈತಿಕತೆ ಕಾನೂನು ಸಂವಿಧಾನ ಎನ್ನುವ ಎಲ್ಲವನ್ನೂ ನಂಬಿ ಕುಳಿತಿದ್ದಾಗ ಕೇವಲ 2 ಸ್ಥಾನಗಳಿಗೆ ಸೀಮಿತವಾಗಿತ್ತು. ಹುಚ್ಚ್ರು ರಾಕ್ಷಸರೇ ತುಂಬಿರುವ ಈ ಪ್ರಪಂಚದಲ್ಲಿ ನೀವು ಒಳ್ಳಡಯವರಂತೆ ನಡೆಯುತ್ತಿದ್ದರೆ ಉಳಿಗಾಲವಿಲ್ಲ.

    ಉತ್ತರ
    • Nagshetty Shetkar's avatar
      Nagshetty Shetkar
      ಆಕ್ಟೋ 26 2013

      Mr. Girish, you have now exposed your true saffron color. Good that this forum has helped me expose some fascist minds plaguing Kannada blog circle.

      ಉತ್ತರ
      • ಗಿರೀಶ್'s avatar
        ಗಿರೀಶ್
        ಆಕ್ಟೋ 26 2013

        Better get treatment for safforon jaundice & Namonia, Mr.shetkar.

        ಉತ್ತರ
    • krishnappa's avatar
      krishnappa
      ಆಕ್ಟೋ 26 2013

      ಮಹಾತ್ಮಾ ಗಾಂಧಿಯವರು ಸೌಮ್ಯವಾದದ ಮೂಲಕವೇ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ನಡೆಸಿದ್ದು ಎಂಬುದು ತಮ್ಮ ಗಮನಕ್ಕೆ ತರಬಯಸುತ್ತೇನೆ. ಕೋಟ್ಯಂತರ ಭಾರತೀಯರು ಗಾಂಧೀಜಿಯವರ ಅಸಹಕಾರ, ಅಹಿಂಸಾ ಹೋರಾಟದ ಹಾದಿಯಲ್ಲಿ ಕೈಜೋಡಿಸಿದ್ದರು. ಹಾಗೆ ನೋಡಿದರೆ ಹಿಂಸಾತ್ಮಕ ಹೋರಾಟಕ್ಕೆ ಕೈಜೋಡಿಸಿದ ಭಾರತೀಯರು ಬಹಳ ಕಡಿಮೆ. ಹೋರಾಟದಲ್ಲಿ ಶುದ್ಧಿ ಇದ್ದರೆ ಜನ ಕೈಜೋಡಿಸುತ್ತಾರೆ. ಕಡಿ, ಬಡಿ, ಕೊಚ್ಚು, ಕೊಲ್ಲು ಎಂಬುದು ನಾಗರಿಕರ ಹೋರಾಟದ ವಿಧಾನ ಅಲ್ಲ, ಅದು ಅನಾಗರಿಕ ಕಾಡುಮನುಷ್ಯರ ಹಾದಿ. ನಾಲಿಗೆ ಕತ್ತರಿಸಬೇಕು, ಕೈ ಕತ್ತರಿಸಬೇಕು, ತ್ರಿಶೂಲ ದೀಕ್ಷೆ ಕೊಡಬೇಕು, ಖಡ್ಗ ದೀಕ್ಷೆ ಕೊಡಬೇಕು ಎಂಬುದು ನಾಗರಿಕ ಸಮಾಜದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನ ವಿರೋಧಿ ಅನಾಗರಿಕ ವಿಧಾನವಾಗಿದೆ ಎನ್ನದೆ ವಿಧಿಯಿಲ್ಲ.

      ಉತ್ತರ
      • Nagshetty Shetkar's avatar
        Nagshetty Shetkar
        ಆಕ್ಟೋ 26 2013

        ” ಕಡಿ, ಬಡಿ, ಕೊಚ್ಚು, ಕೊಲ್ಲು ಎಂಬುದು ನಾಗರಿಕರ ಹೋರಾಟದ ವಿಧಾನ ಅಲ್ಲ, ಅದು ಅನಾಗರಿಕ ಕಾಡುಮನುಷ್ಯರ ಹಾದಿ.” ಸರ್, ಈ ವೈದಿಕ ವಟುಗಳಿಗೆ ನಾಗರಿಕತೆ ಎಂಬುದು ಗೊತ್ತಿದ್ದರೆ ತಾನೇ! ಪುಳಿಚಾರು ಅನ್ನ ತಿಂದೇ ಸಮಾಜದ ಶೋಷಣೆ ನಡೆಸುತ್ತಿದ್ದ ಇವರುಗಳು ಈಗ ವೇದಘೋಷಗಳಿಗೆ ಹೊಸ ಕಾಲದ ಜನ ಬಗ್ಗುವುದಿಲ್ಲ ಎಂದು ತಿಳಿದು ಕಡಿ, ಬಡಿ, ಕೊಚ್ಚು, ಕೊಲ್ಲು ತಂತ್ರಗಳನ್ನು ಬಳಸತೊಡಗಿದ್ದಾರೆ. ಇವರ ಮೆಂಟಲಿಟಿ ವೇದಕಾಲದಲ್ಲಿ ಎಷ್ಟು ಅನಾಗರಿಕವಾಗಿತ್ತೋ ಇಂದಿಗೂ ಅಷ್ಟೇ ಅಥವಾ ಇನ್ನೂ ಹೆಚ್ಚು ಅನಾಗರಿಕವಾಗಿದೆ. ಆದರೆ ಶೂದ್ರರು ದಲಿತರು ಈ ವೈದಿಕ ಗಿಂಡಿಮಾಣಿಗಳ ತಂತ್ರಗಾರಿಕೆಯನ್ನು ಟುಸ್ ಮಾಡುವತ್ತ ಸಂಘಟಿತರಾಗುತ್ತಿದ್ದಾರೆ. ವಚನಗಳ ಬಗ್ಗೆ ನೀವು ಬರೆದ ಪುಸ್ತಕ ಎರಡು ಮುದ್ರಣಗಳನ್ನು ಕಂಡು ಜನರನ್ನು ವೈದಿಕ ಪಿತೂರಿಯ ವಿರುದ್ಧ ಎಚ್ಚರಿಸುವಲ್ಲಿ ಸಫಲವಾಗಿದೆ.

        ಉತ್ತರ
        • ಗಿರೀಶ್'s avatar
          ಗಿರೀಶ್
          ಆಕ್ಟೋ 26 2013

          ಶೆಟ್ಕರ್ ಅವರೆ ಖಡ್ಗ ಹಿಡಿದು ಮತ ಪ್ರಚಾರ ಮಾಡಿದವರು ಯಾರು ಎಂದು ಇತಿಹಾಸದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ದಯವಿಟ್ಟು ತಮ್ಮ ಕೇಸರಿ ಕಾಮಾಲೆ ರೋಗಕ್ಕೆ ಬೇಗ ಮದ್ದು ತೆಗೆದುಕೊಳ್ಳಿ. ಮಿತಿಮೀರಿ ಹೋದರೆ ಜೀವಕ್ಕೆ ಅಪಾಯವಂತೆ. 😀

          ಉತ್ತರ
        • ವಿಜಯ್ ಪೈ's avatar
          ವಿಜಯ್ ಪೈ
          ಆಕ್ಟೋ 26 2013

          ಒಹೊ..ಈ ಕೃಷ್ಣಪ್ನೋರು ಕೂಡ ವಚನಗಳ ಬಗ್ಗೆ ಪುಸ್ತಕ ಬರೆದಿದ್ದಾರೆಯೆ? ಎಲ್ಲಿ ಪುಸ್ತಕದ ಹೆಸರು ಕೊಡಿ ಗುರುಗಳೆ ..ಓದೋಣವಂತೆ. ಇಂತಹ ವೈದಿಕ ಪಿತೂರಿಯ ವಿರುದ್ಧ ಎಚ್ಚರಿಸುವ ‘ಸಫಲ’ ಪುಸ್ತಕ ಓದಲೇಬೇಕು.

          ಬಸವಣ್ಣನವರು ಈಗೇನಾದರೂ ಬಂದರೆ ಈ ಸ್ವಘೋಷಿತ ಕಾಯಕಜೀವಿ ಶರಣರ ಕಪಾಳಕ್ಕೆ ಹೊಡೆಯೋದಷ್ಡೆ ಅಲ್ಲ..ಹಿಡಿದು ಓದೆಯುತ್ತಿದ್ದರು ತಪ್ಪಾಯಿತು ಎನ್ನುವತನಕ!

          ಉತ್ತರ
      • ಗಿರೀಶ್'s avatar
        ಗಿರೀಶ್
        ಆಕ್ಟೋ 26 2013

        ಗಾಂದಿಯವರೂ ಕಾರಣಗಳಲ್ಲಿ ಒಬ್ಬರು, ಅವರೊಂದೇ ಕಾರಣವಲ್ಲ ಸ್ವತಂತ್ರಕ್ಕೆ. ಇದನ್ನು ನೀವು ಅಲ್ಲಗಳೆಯುವುದಾದರೆ, ನಿಮಗೂ ಮೋದಿಯ ಅಭಿಮಾನಿಗಳಿಗೂ ಏನೂ ವ್ಯತ್ಯಾಸವಿಲ್ಲ ನಿಜದಲ್ಲಿ ಅವರಿಗಿಂತ ನೀವೇ ಅತಿರೇಕದ ಅಭಿಮಾನದಲ್ಲಿರುತ್ತೀರಿ. ಅಲ್ಲವೆ?
        ಮೋದಿಯ ಬಗೆಗಿನ ಸೌಮ್ಯ ಚರ್ಚೆಗೆ ತಾವು ಸಿದ್ದವಿದ್ದರೆ ನಾವು ತಿಳಿಸಲು ಸಿದ್ದ. ಆದರೆ ತಾವು ಎಲ್ಲೂ ಹದ ತಪ್ಪಬಾರದು. ವಿಷಯ ಸ್ಪಷ್ಠವಾದ ಮೇಲೆ ಈ ನಿಮ್ಮ ಪೂರ್ವಾಗ್ರಹ ತೊಡೆದು ಕೊಂಡು ಮೋದಿಯ ಬಗ್ಗೆ ಪ್ರಚಾರ ಮಾಡಬೇಕು. ನೀವು ಸಿದ್ದ ಪಡಿಸಿದ ವಾದ ಸರಿಯೆಂದಾದರೆ ನಾವು ನಿಮ್ಮ ಖಾಂಗ್ರೆಸ್ ಗೆ ಪ್ರಚಾರ ಮಾಡಲು ಸಿದ್ದ.
        ಆದರೆ ತಾವು ಫೇಸ್ಬುಕ್ಕಿನಲ್ಲಿ ಮೋದಿ ವಿರೋಧಿ ಬ್ರಿಗೇಡಿನ ಜನಗಳಿಗೆಒಳ್ಳೆಯ ಕೆಲಸ ಮಾಡುತ್ತಿದ್ದೀರೆಂದು ಬೆನ್ನು ಕೂಡ ತಟ್ಟಿದ್ದೀರಿ. ತಮ್ಮ ಅನಿಸಿಕೆ ತಿಳಿಸಿ.

        ಉತ್ತರ
        • Nagshetty Shetkar's avatar
          Nagshetty Shetkar
          ಆಕ್ಟೋ 26 2013

          Mr. Girish, where has Mr. Krishnappa written that “ಗಾಂಧೀ ಅವರೊಬ್ಬರೇ ಭಾರತದ ಸ್ವಾತಂತ್ರ್ಯಕ್ಕೆ ಕಾರಣರು”? Why are you putting your words into Mr. Krishnappa’s mouth? You are a disgrace to Nilume.

          Any way, not only Gandhi but Savarkar also fought for independence. But ಹಿಂಸಾತ್ಮಕ ಹೋರಾಟಕ್ಕೆ ಕೈಜೋಡಿಸಿದ ಭಾರತೀಯರು ಬಹಳ ಕಡಿಮೆ. Not many followed Savarkar. On the other hand, ಕೋಟ್ಯಂತರ ಭಾರತೀಯರು ಗಾಂಧೀಜಿಯವರ ಅಸಹಕಾರ, ಅಹಿಂಸಾ ಹೋರಾಟದ ಹಾದಿಯಲ್ಲಿ ಕೈಜೋಡಿಸಿದ್ದರು. Can’t you understand even this elementary historical truth?

          And who are you to preach Mr. Krishnappa “ತಾವು ಎಲ್ಲೂ ಹದ ತಪ್ಪಬಾರದು”? ಸೊಕ್ಕು ಅತಿ ಆಯಿತು ನಿಮ್ಮಗಳದ್ದು. ಸರಿಯಾದ ಪಾಠ ಕಲಿಸಬೇಕು.

          ಉತ್ತರ
          • ಗಿರೀಶ್'s avatar
            ಗಿರೀಶ್
            ಆಕ್ಟೋ 26 2013

            ಪಾಠ ಕಲಿಸಬೇಕು 😀 ಅನಾಗರೀಕರು ಯಾರು? ಶೆಟ್ಕರ್ 😉
            ಗಾಂಧಿಯೊಬ್ಬನಿಂದನೇ ಸ್ವತಂತ್ರ ಬಂದಿರುವುದು ಎಂಬ ನಿಲುವುಗಳು ರಹಸ್ಯವೇನಲ್ಲ. ಸುಖಾಸುಮ್ಮನೆ ಕೂಗಾಡುವುದರಿಂದ ಪ್ರಯೋಜನವಿಲ್ಲ. ಹದ ತಪ್ಪಬೇಡಿ ಎಂದು ಹೇಳಿರುವುದು, ತಮ್ಮ ಮೇಲಿನ ಅನಿಸಿಕೆಯಲ್ಲಿ ತಪ್ಪಿರುವ ಹದದ ಬಗ್ಗೆಯೆ. ಒಮ್ಮೆ ಮುಟ್ಟಿ ನೋಡಿಕೊಳ್ಳಿ 3:)

            ಉತ್ತರ
            • Nagshetty Shetkar's avatar
              Nagshetty Shetkar
              ಆಕ್ಟೋ 26 2013

              ಸಿಸುಪಾಲನಿಗೆ ನಿಮ್ಮ ಕೃಷ್ಣ ಪಾಠ ಕಲಿಸಲಿಲ್ಲವೇ ಮಿ. ಗಿರೀಶ್? ಕೃಷ್ಣನು ಅನಾಗರಿಕನೋ ನಿಮ್ಮ ಪ್ರಕಾರ?

              ಉತ್ತರ
              • ಗಿರೀಶ್'s avatar
                ಗಿರೀಶ್
                ಆಕ್ಟೋ 26 2013

                ಅಂದರೆ ಅಂತಹ ಪಾಠ ಕಲಿಸಲು ಸಜ್ಜಾಗುತ್ತಿದ್ದೀರಿ ಎಂದಾಯ್ತು? ಕಡಿ ಕೊಲ್ಲು ಎಂದು ಆರೋಪಿಸಿದ್ದು ಯಾರಿಗೆ? ಏನ್ ಸ್ವಾಮಿ ನಿಮ್ ಅಣ್ಣ ಬಸವಣ್ಣ ಕಲಬೇಡ ಕೊಲಬೇಡ ಎಂದು ಹೇಳಿದರು. ನೀವು ವೈಧಿಕರನ್ನು ಅನುಸರಿಸುತ್ತೇನೆಂದು ಹೇಳುತ್ತಿದ್ದೀರಿ 😀 ಯಾಕೀ ದ್ವಂದ್ವ. ಮೊದಲು ತಾವು ಚಿಕಿತ್ಸೆ ತೆಗೆದುಕೊಳ್ಳಿ. ಸಂದೀಪ್ ಶೆಟ್ಕರ್ 😉

                ಉತ್ತರ
            • Nagshetty Shetkar's avatar
              Nagshetty Shetkar
              ಆಕ್ಟೋ 26 2013

              “ಸುಖಾಸುಮ್ಮನೆ ಕೂಗಾಡುವುದರಿಂದ ಪ್ರಯೋಜನವಿಲ್ಲ.” yes, say this 100 times to yourself. You are a disgrace.

              Mr. Shetty, what kind of creatures have you assembled in Nilume?! Your site stinks like a pig form because of people like Girish and Bala Bhat. You are no better but as administrator you should know.

              ಉತ್ತರ
              • ವಿಜಯ್ ಪೈ's avatar
                ವಿಜಯ್ ಪೈ
                ಆಕ್ಟೋ 26 2013

                ಗುರುಗಳೆ..ಜಗತ್ತನ್ನು ತಿದ್ದುವ ಭರದಲ್ಲಿ ನಿಮಗೆ ಸ್ನಾನ ಮಾಡಲು ಪುರುಸೊತ್ತು ಸಿಗುತ್ತಿಲ್ಲ ಅಥವಾ ಸ್ನಾನ ಮಾಡುವುದನ್ನು ಮರೆತು ಬಿಟ್ಟಿದ್ದೀರಿ.. ಕನಿಷ್ಟ ಒಮ್ಮೆ ಮೈ ಮೂಸಿ ನೋಡಿಕೊಳ್ಳಿ ಗುರುಗಳೆ..ವಾಸನೆ ಎಲ್ಲಿಂದ ಬರುತ್ತಿದೆ ಅಂತ ಗೊತ್ತಾಗುತ್ತೆ..ಕನ್ ಫ್ಯೂಜನ್ ದೂರವಾಗುತ್ತೆ 🙂

                ಉತ್ತರ
                • Nagshetty Shetkar's avatar
                  Nagshetty Shetkar
                  ಆಕ್ಟೋ 26 2013

                  Mr. Vijay, Darga Sir takes bath twice everyday. Should he take bath four times to convince you?? How many times you take bath? Your stink says once in a month may be.

                  ಉತ್ತರ
                  • ವಿಜಯ್ ಪೈ's avatar
                    ವಿಜಯ್ ಪೈ
                    ಆಕ್ಟೋ 26 2013

                    ಗುರುಗಳೇ..ನಿವ್ಯಾಕೆ ನಿಮ್ಮ ಮೇಲೆ ಬಂದಿದ್ದನ್ನೆಲ್ಲ ನಿಮ್ಮ ಹಿರಿ ಗುರುಗಳಿಗೆ ಟ್ರಾನ್ಸಫರ್ ಮಾಡುತ್ತೀರಿ?ಹೊಗಳಿಕೆ-ತೆಗಳಿಕೆ ಎಲ್ಲ ಅವರಿಗೇ ಇರಲಿ..ನನಗೇನೂ ಬೇಡ ಎಂಬ ನಿರ್ಲಿಪ್ತ ಭಾವವೇ ? 🙂

                    ಉತ್ತರ
                    • ನವೀನ's avatar
                      ನವೀನ
                      ಆಕ್ಟೋ 28 2013

                      ನಮ್ಮ ಶೆಟ್ಕರ್ ಸರ್ ಅವರ ವಾದಗಳು ಹೇಗಾದರೂ ಇರಲಿ ಅವರು ಮನಸ್ಸು ಮಾತ್ರ ಮುಗ್ಧ ಮಗುವಿನಂತೆ ಅನ್ನಲು ಅವರ ಪ್ರತಿಕ್ರಿಯೆಗಳೇ ಪುರಾವೆಗಳು

              • Nagshetty Shetkar's avatar
                Nagshetty Shetkar
                ಆಕ್ಟೋ 26 2013

                Mr. Shetty, please include Vijay also in the list of disgraceful trolls plaguing Nilume.

                ಉತ್ತರ
              • ಗಿರೀಶ್'s avatar
                ಗಿರೀಶ್
                ಆಕ್ಟೋ 26 2013

                ದಯವಿಟ್ಟು ಗಮನಿಸಿ ಇಂತಹ ಶೆಟ್ಕರ್ ಅಂತಹವರ ಪ್ರತಿಕ್ರಿಯೆಗಳಿಗೆ ಗಾಂಧಿ ತತ್ವ ಉತ್ತರ ಕೊಡುತ್ತದೆಯೆ? ಹಾಗೇಯೇ ಮೋದಿ ಸಮರ್ಥಕರು ನಡೆದುಕೊಳ್ಳುತ್ತಾರೆ. ಇನ್ನೂ ಈ ಮನುಷ್ಯನಿಗೆ ಮನುಷ್ಯರಮ್ತೆ ಉತ್ತರ ಕೊಡಲು ಸಾಧ್ಯವೆ? ಹದ ಮೀರಿದ ಮಾತುಗಳಿಗೆ ಹದ್ದು ಮೀರಿದ ಪ್ರತಿಕ್ರಿಯೆಗಳು ಮಾತ್ರ ಸಮಂಜಸ ಉತ್ತವಾಗಬಲ್ಲುದು ಅಲ್ಲವೆ? ಏನ್ ಹೇಳ್ತಿರಾ ಮಹೇಶ್ ಪ್ರಸಾದ್?

                ಉತ್ತರ
      • Dany Perera's avatar
        ಆಕ್ಟೋ 26 2013

        Trishula Dhikshe, Khadga Dikshe ennuvudu keval saanketika swamy. Innu kadi-badi- kullu ennuttiruvudu Buddhijivigala APTAMITRA ragiruvu NAXAL MAHASHAYArallave, Mahashaya?

        ಉತ್ತರ
        • krishnappa's avatar
          krishnappa
          ಆಕ್ಟೋ 28 2013

          ನಾಲಿಗೆ ಕತ್ತರಿಸಬೇಕು ಎಂಬ ಅಭಿಪ್ರಾಯವನ್ನು ಬಿಜೆಪಿ ಪಕ್ಷದ ಸಂಘದ ಹಿನ್ನೆಲೆಯ ಕರ್ನಾಟಕದ ಉಪಮುಖ್ಯಮಂತ್ರಿಯಾಗಿದ್ದ ಮಹಾಶಯರೊಬ್ಬರು ಆಡಿದ್ದಾರೆ. ಅದೇ ರೀತಿ ಸಂಘದ ಹಿನ್ನೆಲೆಯ ರಾಜಕಾರಣಿಗಳು ಗೋಹತ್ಯೆ ಮಾಡುವವರ ಕೈ ಕತ್ತರಿಸಬೇಕು ಎಂದು ಹೇಳಿದ್ದರು. ಇದನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ.

          ಉತ್ತರ
          • ನವೀನ's avatar
            ನವೀನ
            ಆಕ್ಟೋ 28 2013

            ಈ ಲೇಖನ ಬಿಜೆಪಿಯ ಉಳಿದ ಜನರ ಬಗ್ಗೆಯದಲ್ಲ ಕೃಷ್ಣಪ್ಪ ಸರ್. ಇದು ಮೋದಿಯ ಬಗ್ಗೆ.ಅವರ ಮೇಲೆ ನಿಮ್ಮ ಮುನಿಸೇಕೆ ಅನ್ನುವ ಆರೋಗ್ಯಕರ ಚರ್ಚೆ ಎದುರು ನೋಡಬಹುದೇ

            ಉತ್ತರ
            • krishnappa's avatar
              krishnappa
              ಆಕ್ಟೋ 28 2013

              ಇಲ್ಲಿ ಮೂಲ ಲೇಖನ ಮೋದಿ ಬಗ್ಗೆಯಾದರೂ ಅದರಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಗಿರೀಶ್ ಎಂಬವರು ಸೌಮ್ಯವಾದ ಸಾಕಾಗುವುದಿಲ್ಲ, ಉಗ್ರವಾದವೂ ಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ನಾನು ಕಡಿ, ಕೊಚ್ಚು ಮೊದಲಾದ ಭಾಷೆಯ ಬಗ್ಗೆ ಬರೆಯಬೇಕಾಯಿತು.

              ಉತ್ತರ
            • krishnappa's avatar
              krishnappa
              ಆಕ್ಟೋ 28 2013

              ಮೋದಿಯವರ ಭಾಷೆಯೂ ಕೂಡ ಸುಸಂಸ್ಕೃತ, ನಾಗರಿಕ ಭಾಷೆಯಲ್ಲ. ಉದಾಹರಣೆಗೆ ಪಾಟ್ನಾದಲ್ಲಿ ಏರ್ಪಡಿಸಿದ ರ್ಯಾಲಿಗೆ ಹೂಂಕಾರ್ ರ್ಯಾಲಿಎಂದು ಕರೆಯುವುದು. ಇದೊಂದು ಕಾಡುಮನುಷ್ಯರ ಭಾಷೆಯಂತೆ ಭಾಸವಾಗುತ್ತದೆ. ಕೊಬ್ಬಿದ, ಮದವೇರಿದ ಗೂಳಿಗಳು ಹೂಂಕರಿಸುತ್ತವೆ. ನಾಗರಿಕ ಮನುಷ್ಯರಾರೂ ಗೂಳಿಗಳಂತೆ ಅಥವಾ ರೌಡಿಗಳಂತೆ ಹೂಂಕರಿಸುವುದಿಲ್ಲ. ರ್ಯಾಲಿಗೆ ಹೆಸರಿಡುವಾಗಲೂ ಸಭ್ಯ, ನಾಗರಿಕ ಭಾಷೆ ಬಳಸದೆ ಅನಾಗರಿಕ ಭಾಷೆ ಬಳಸುವುದು ತರವಲ್ಲ.

              ಉತ್ತರ
              • ವಿಜಯ್ ಪೈ's avatar
                ವಿಜಯ್ ಪೈ
                ಆಕ್ಟೋ 28 2013

                ಕೃಷ್ಣಪ್ಪನವರೆ..
                ಒಬ್ಬ ಶರಣ ಲೇಖಕರು ಒಂದು ಲೇಖನದಲ್ಲಿ ಹೀಗೆ ಬರೆದಿದ್ದರು..

                [ಈ ಆಚಾರಗಳಲ್ಲಿ ಬರುವ ಸೀಳುವುದು, ಪ್ರಾಣಬಿಡುವುದು, ಪ್ರಾಣವ ಭೇದಿಸುವುದು, ಐಕ್ಯನಾಗುವುದು, ಶಿರವನೀಡಾಡುವುದು ಮುಂತಾದ ಆಚಾರಗಳನ್ನು ಶಾಬ್ದಿಕವಾಗಿ ಅರ್ಥೈಸದೆ ಅವುಗಳ ಲಕ್ಷಣಾರ್ಥವನ್ನು ಗ್ರಹಿಸಬೇಕು. ಹೊಸಧರ್ಮ ಅಥವಾ ಜೀವನವಿಧಾನವೊಂದು ರೂಪುಗೊಳ್ಳುವ ಸಂದರ್ಭದಲ್ಲಿ ಅದರ ಅನುಯಾಯಿಗಳು ಅಲ್ಪಸಂಖ್ಯಾತರಾಗಿರುತ್ತಾರೆ. ಬಹುಸಂಖ್ಯಾತರ ದಬ್ಬಾಳಿಕೆಯನ್ನು ಎದುರಿಸುವ ಮಾನಸಿಕ ಸ್ಥಿತಿಯನ್ನು ಹೊಂದುವ ಸಂದರ್ಭದಲ್ಲಿ ಸ್ವರಕ್ಷಣೆಗಾಗಿ ಇಂಥ ಶಬ್ದಗಳ ಬಳಕೆಯಾಗುತ್ತವೆ. ಮರಿಗಳನ್ನು ತಿನ್ನಲು ರಣಹದ್ದು ಬಂದಾಗ ಕೋಳಿ ತನ್ನ ಮರಿಗಳನ್ನೆಲ್ಲ ರೆಕ್ಕೆಗಳಲ್ಲಿ ಅಡಗಿಸಿಕೊಂಡು ವೀರೋಚಿತ ಧ್ವನಿ ಹೊರಡಿಸಿ, ಅಂಜಿಸಿ ತನ್ನ ಮರಿಗಳನ್ನು ಕಾಪಾಡುವಂತೆ ಶರಣರು ತಮ್ಮ ತತ್ತ್ವಗಳ ರಕ್ಷಣೆ ಮಾಡಿದರು. ]

                ನೀವೂ ಕೂಡ ಶರಣ ಲೇಖಕರೆಂದು ನಮ್ಮ ಪ್ರೀತಿಯ ಕಾಯಕಯೋಗಿ ಶೆಟ್ಕರ್ ಗುರುಗಳು ಮೇಲೊಂದು ಪ್ರತಿಕ್ರಿಯೆಯಲ್ಲಿ ಹೇಳಿದ್ದರು. ಆದ್ದರಿಂದ ನಿಮಗೂ ಇದರ ಅರ್ಥ ಗೊತ್ತಿರಬಹುದು. ಈಗ ಈ ‘ಹೂಂಕಾರ’ ವನ್ನು ಯಾವ ಅರ್ಥದಲ್ಲಿ ಬಳಸಬೇಕು ಕೃಷ್ಣಪ್ಪನೊರೆ?

                ಉತ್ತರ
                • krishnappa's avatar
                  krishnappa
                  ಆಕ್ಟೋ 28 2013

                  ಜನಸಾಮಾನ್ಯರಿಗೆ ಸಾಂಕೇತಿಕ ಭಾಷೆಗಳು ಗೊತ್ತಾಗುವುದಿಲ್ಲ. ಅವರು ಪದಗಳ ಮೇಲ್ನೋಟದ ಅರ್ಥವನ್ನೇ ಗ್ರಹಿಸುತ್ತಾರೆ. ಹೀಗಾಗಿ ಹೂಂಕಾರ್ ರ್ಯಾಲಿ ಹೆಸರು ಇಟ್ಟದ್ದು ಸೂಕ್ತವಲ್ಲ. ಇದರ ಪರಿಣಾಮವಾಗಿಯೇ ಹೂಂಕಾರ್ ರ್ಯಾಲಿಯಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟ ನಡೆಸಿರುವಂತೆ ಕಂಡು ಬರುತ್ತದೆ. ಸಭ್ಯ ಹಾಗೂ ನಾಗರಿಕ ಭಾಷೆ ಬಳಸಿದ್ದರೆ ಅಲ್ಲಿ ಬಾಂಬ್ ಸ್ಫೋಟ ನಡೆಯುತ್ತಿರಲಿಲ್ಲ.

                  ಉತ್ತರ
                  • ರಾಕೇಶ್ ಶೆಟ್ಟಿ's avatar
                    ಆಕ್ಟೋ 28 2013

                    ಸಭ್ಯ ಹಾಗೂ ನಾಗರಿಕ ಭಾಷೆ ಬಳಸಿದ್ದರೆ ಅಲ್ಲಿ ಬಾಂಬ್ ಸ್ಫೋಟ ನಡೆಯುತ್ತಿರಲಿಲ್ಲ.

                    ನಿಮ್ಮ ಕಮೆಂಟು ನಿಮಗೆ ಹಾಸ್ಯಾಸ್ಪದ ಅನ್ನಿಸುತ್ತಿಲ್ಲವೇ ಕೃಷ್ಣಪ್ಪನವರೇ? ನಿಮ್ಮಗಳ ಇಂತ ತಲೆಬುಡವಿಲ್ಲದ ವಾದಗಳಿಗೆ ಕೊನೆಯೇ ಇಲ್ಲವೇ?

                    ಉತ್ತರ
                    • krishnappa's avatar
                      krishnappa
                      ಆಕ್ಟೋ 29 2013

                      ನನ್ನ ಅಭಿಪ್ರಾಯಗಳು ಅತ್ಯಂತ ಸ್ಪಷ್ಟ. ಅದು ಪ್ರತಿಗಾಮಿಗಳಿಗೆ ಇಷ್ಟವಾಗದಿರಬಹುದು. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ನಡೆಸಿದ/ನಡೆಸುತ್ತಿರುವ ದೌರ್ಜನ್ಯಕ್ಕೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಭಯೋತ್ಪಾದನೆ ಹೆಚ್ಚಿದೆ, ಹೆಚ್ಚುತ್ತಿದೆ ಎಂಬುದು ಸ್ಪಷ್ಟ. ಬಾಬ್ರಿ ಮಸೀದಿಯನ್ನು ಬಹುಸಂಖ್ಯಾತ ಕೋಮುವಾದಿಗಳು ಉರುಳಿಸಿದ ನಂತರ ದೇಶದಲ್ಲಿ ಭಯೋತ್ಪಾದನೆ ಹೆಚ್ಚಿರುವುದು ಅಲ್ಲಗಳೆಯಲಾಗದ ಸತ್ಯ. ನನ್ನನ್ನು ಹೀಯಾಳಿಸುವುದರಿಂದ ಸತ್ಯ ಬದಲಾಗಲಾರದು. ನಮ್ಮ ದೇಶದಲ್ಲಿ ಭಯೋತ್ಪಾದನೆ ಮಾಡುತ್ತಿರುವವರು ಪಾಕಿಸ್ತಾನದಿಂದ ಬಂದವರೇನೂ ಅಲ್ಲ. ನಮ್ಮ ದೇಶದಲ್ಲಿ ಬಹುಸಂಖ್ಯಾತರ ದೌರ್ಜನ್ಯಕ್ಕೆ ತುತ್ತಾದವರು ಪಾಕಿಸ್ತಾನದ ಜೊತೆಗೂಡಿ ಭಯೋತ್ಪಾದನೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಲ್ಪಸಂಖ್ಯಾತರನ್ನು ಭೀತಿಗೊಳಿಸಿದರೆ ಅದರ ಫಲವಾಗಿ ಬಹುಸಂಖ್ಯಾತರು ಭಯೋತ್ಪಾದನೆಯ ವಿಷಫಲವನ್ನು ಉಣ್ಣಬೇಕಾಗುತ್ತದೆ. ಅಲ್ಪಸಂಖ್ಯಾತರನ್ನು ನಮ್ಮ ಸಹೋದರರಂತೆ ಕಂಡರೆ ಅಲ್ಪಸಂಖ್ಯಾತರು ಭಯೋತ್ಪಾದನೆಗೆ ಸಹಕರಿಸುವುದು ಕಡಿಮೆಯಾಗಬಹುದು.

                  • ವಿಜಯ್ ಪೈ's avatar
                    ವಿಜಯ್ ಪೈ
                    ಆಕ್ಟೋ 28 2013

                    ಕೃಷ್ಣಪ್ನೋರೆ..

                    ಇದಕ್ಕಿಂತ ಹೆಚ್ಚಿನ ತಲೆ-ಬುಡವಿಲ್ಲದ ವಾದವನ್ನು ನಿಮ್ಮಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ!..ಸ್ವಾಮಿ..ಈ ತರಹದ ಮಾತುಗಳನ್ನಾಡಿ, ಜನ ನಿಮಗೆ ಗೌರವ ಕೊಡಬೇಕೆಂದು ನಿರೀಕ್ಕೆ ಮಾಡಲಾಗುತ್ತದೆಯೆ?

                    – ಮೋದಲನೆಯದಾಗಿ, ಆಗಿನ ವಚನಕಾರರು, ಶರಣರು ಜನಸಾಮಾನ್ಯರಿಗೆ ಅರ್ಥವಾಗುವಂತೆ,,ಜನಸಾಮಾನ್ಯರ ಆಡುಭಾಷೆಯಲ್ಲಿಯೇ ತಮ್ಮ ವಿಚಾರ, ಆಚಾರ ಹಂಚಿಕೊಂಡರು ಎಂಬುದು, ತಿಳಿದ ಶರಣರಾದ (ಅಥವಾ ಹೀಗೆಂದು ‘ತಿಳಿದ’ ವಿಧ್ವಾಂಸರು ಹೇಳುತ್ತಿರುವುದನ್ನು/ಬರೆದಿರುವುದನ್ನು) ನಿಮಗೆ ಗೊತ್ತೆ ಇದೆ. ಇಲ್ಲಿ ನೀವು ಹೇಳುತ್ತಿದ್ದೀರುವುದು ತದ್ವಿರುದ್ಧ..ಜನಸಾಮಾನ್ಯರಿಗೆ ಇವು ಅರ್ಥವಾಗುವುದಿಲ್ಲ ಎಂದು…ಅಂದರೆ ಇದರ ಅರ್ಥ ವಚನಗಳನ್ನು ಅರ್ಥೈಸಿ, ತಿಳಿಸಿ ಹೇಳುವುದು ನಿಮ್ಮಂತಹ ಪಂಡಿತರ ಕೆಲಸವೆಂದೆ? ಅಥವಾ ಜನಸಾಮಾನ್ಯರೆಂದರೆ ಕಿವಿಯಲ್ಲಿ ಹೂವು ಮುಡಿದುಕೊಂಡವರೆಂದೆ?

                    – ಹೂಂಕಾರ ರ್ಯಾಲಿ ಹೆಸರಿನಿಂದ ಬಾಂಬ್ ಸ್ಫೋಟವಾಯಿತು ಎಂಬ ಹಾಸ್ಯಾಸ್ಪದ ಮಾತುಗಳನ್ನಾಡಿ, ಆ ಕೃತ್ಯ ಎಸಗಿದವರ ಸಮರ್ಥನೆಗೆ ಇಳಿಯುವುದಕ್ಕಿಂತ…ಹದ್ದುಗಳ ಜೊತೆ ರಾಜಿ ಮಾಡಿಕೊಂಡಿದಿದ್ದರೆ ಬಾಂಬ್ ಸ್ಫೋಟವಾಗುತ್ತಿರಲಿಲ್ಲ ಎಂದೇಕೆ ನೇರವಾಗಿ ಹೇಳಬಾರದು?. ದಕ್ಕಿಣ ಕನ್ನಡದ ಪತ್ರಿಕೆಯೊಂದರ ಸಂಪಾದಕ (ಎರವಲು ಬುದ್ಧಿಜೀವಿ) , ನಿನ್ನೆ ಇಂಥದೇ ವಿಚಾರ ಲಹರಿ ಹರಿ ಬಿಟ್ಟಿದ್ದ..ಏನೆಂದರೆ ಬಿಜೆಪಿಗಳು ವೋಟಿನ ಸಲುವಾಗಿ ತಾವೇ ಬಾಂಬ್ ಸ್ಫೋಟಿಸಿರಬೇಕು..ಮೊದಲು ಅವರನ್ನು ತನಿಖೆ ಮಾಡಬೇಕೆಂದು..ನಿನ್ನೆ ಕುಣಿದಾಡಿದ ಆ ಪಾರ್ಟಿ ಇವತ್ತು ಬಾಲ ಒಳಗೊಳಗಿಟ್ಟುಕೊಂಡು ತೆಪ್ಪಗಿದ್ದಾನೆ!.

                    ಉತ್ತರ
                  • ಗಿರೀಶ್'s avatar
                    ಗಿರೀಶ್
                    ಆಕ್ಟೋ 29 2013

                    ನಮಗೇನು ಗೊತ್ತು ಸ್ವಾಮಿ ನಿಮ್ಮ ಶೆಟ್ಕರ್ ಅವರು ನಿಮ್ಮನ್ನು ಹಾಗೆ ಸಂಬೋಧಿಸದರು, ಅದಕ್ಕೆ ಅವರೇ ಉತ್ತರ ಹೇಳಬೇಕು.
                    ಏನ್ ಸ್ವಾಮಿ? ಹೂಂಕಾರ ಎಂದರೆ, ಬಾಂಬ್ ಸ್ಫೋಟಿಸಬೇಕಾ? ೬ ಜನ ಸತ್ತಿದ್ದು ಹೂಂಕಾರದಿಂದಲೋ? ಬಾಂಬ್ ಸ್ಫೋಟದಿಂದಲೊ? ನಾವಿಕೆಯಿಲ್ವೆ ಸ್ವಾಮಿ ನಿಮ್ಮಗಳಿಗೆ?

                    ಉತ್ತರ
                    • krishnappa's avatar
                      krishnappa
                      ಆಕ್ಟೋ 29 2013

                      ಹೂಂಕಾರ ರ್ಯಾಲಿ ಎಂಬ ಹೆಸರು ಬಹುಶ: ಭಯೋತ್ಪಾದಕರಿಗೆ ಪ್ರಚೋದನೆಯಂತೆ ಕಂಡಿರುವ ಸಾಧ್ಯತೆ ಇದೆ. ಹೀಗಾಗಿ ಅವರು ಸ್ಫೋಟ ನಡೆಸಿರುವ ಸಾಧ್ಯತೆ ಇದೆ. ಮೋದಿ ಬೇರೆ ರಾಜ್ಯಗಳಲ್ಲಿಯೂ, ಬೇರೆ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿಯೂ ರ್ಯಾಲಿ ಮಾಡಿದ್ದಾರೆ. ಅಲ್ಲೆಲ್ಲಿಯೂ ಭಯೋತ್ಪಾದಕರು ಸ್ಫೋಟ ನಡೆಸಿಲ್ಲ, ಬಿಹಾರದ ಹೂಂಕಾರ ರ್ಯಾಲಿಯಲ್ಲಿ ಮಾತ್ರ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ನಡೆಸಿದ ರ್ಯಾಲಿಗಳಿಗೆ ಹೂಂಕಾರ ರೀತಿಯ ಹೆಸರು ಇಟ್ಟಿರಲಿಲ್ಲ. ಬಿಹಾರದ ಹೂಂಕಾರ ರ್ಯಾಲಿ ಭಯೋತ್ಪಾದಕರಿಗೆ ಪ್ರಚೋದಕವಾಗಿ ಕಂಡು ಅವರು ಅದನ್ನು ವಿಫಲಗೊಳಿಸುವ ಪ್ರಯತ್ನಕ್ಕೆ ತೊಡಗಿರುವ ಸಾಧ್ಯತೆ ಇದೆಯೆಂದು ನನ್ನ ಅನಿಸಿಕೆ.

                    • Nagshetty Shetkar's avatar
                      Nagshetty Shetkar
                      ಆಕ್ಟೋ 29 2013

                      Krishnappa Sir, I was wrong in calling you Darga Sir. My mistake I agree but your views are so close to Darga Sir’s and you stand for progressive and secular politics like him. Let me say you are not Darga Sir but you are like Darga Sir. There are many trolls in Nilume. Their goal is to animate discussions, promote fascism, belittle progressive thinkers, beat the drum for NaMo, kill all differing voices, etc. Please don’t fall into their trap like I did previously. These people take fake ids and are quite shameless. I don’t know why software companies have hired them because they don’t seem to be doing any work except flaming on Nilume! Any way, like Darga Sir you seem to be a wise man. And you know how exactly to handle the troll syndicate of Nilume. Good luck to you Sir! And Hail Basava!

  8. ಗಿರೀಶ್'s avatar
    ಗಿರೀಶ್
    ಆಕ್ಟೋ 26 2013

    ಅಂದ ಹಾಗೆ, ನಾಯಕನಿಗಿರ ಬೇಕಾದ ಗುಣಗಳ ಬಗ್ಗೆ ಮಾತನಾಡಿದ್ದೀರಿ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೋದಿಯಷ್ಟು ಅಗ್ನಿಪರೀಕ್ಷೆಗೆ ನಿಮ್ಮಂತ ಫೇಕು ಬುದ್ದಿಜೀವಿಗಳಿಂದ ವಿಶ್ಲೇಷಣೆಗೆ ಒಳಗಾದ ಒಬ್ಬ ರಾಜಕೀಯ ವ್ಯಕ್ತಿಯನ್ನು ತೊರಿಸಿ.

    ಉತ್ತರ
  9. Nagshetty Shetkar's avatar
    Nagshetty Shetkar
    ಆಕ್ಟೋ 27 2013

    ಕಾಯಕ ಯೋಗಿ ಪಣಿರಾಜ್ ಅವರ ನಮೋ ಶಿಶುಪ್ರಾಸಗಳು ಚೆನ್ನಾಗಿವೆ. ನೋಡಿ. http://ladaiprakashanabasu.blogspot.in/2013/10/blog-post_27.html

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಆಕ್ಟೋ 28 2013

      ಓದಿದೆ..ವಾವ್..ನಿಮ್ಮ ‘ಕಾಯಕಯೋಗಿ’ ಗಳ ಬುದ್ಧಿಮಟ್ಟ, ಗುಣಮಟ್ಟ ತೋರಿಸಲು ಸಖತ್ ಉದಾಹರಣೆ..:)…ಪಾಪ..ಎಷ್ಟು ಜನರ ತಳ ಸುಡಲು ಸುರುವಾಗಿದೆಯೊ!

      ಗುರುಗಳೆ..ನಿಮ್ಮ ಸಹ ”ಉದ್ಯೋಗಿ’ಗಳ, ಪ್ರೋಗ್ರಾಮ್ ಪಾರ್ಟನರ್ ಗಳ ಲಿಂಕುಗಳನ್ನು ಆಗಾಗ ಕೊಡುತ್ತಾ ಇರಿ.. ಅವರ ಪರಿಚಯ ಇಲ್ಲಿಯವರಿಗೆ ಆಗುತ್ತೆ…ಹಾಗೆಯೇ ಅದನ್ನು ಓದಿ ಮೋದಿಗೂ ವೋಟ್ ಕಂಫರ್ಮ್ ಆಗುತ್ತೆ :). ಧನ್ಯವಾದಗಳು ಮತ್ತೊಮ್ಮೆ.

      ಉತ್ತರ
  10. ಗಿರೀಶ್'s avatar
    ಗಿರೀಶ್
    ಆಕ್ಟೋ 29 2013

    ಕೃಷ್ಣಪ್ಪನವರೆ ನನ್ನ ಪ್ರಶ್ನೆಗೆ ಉತ್ತರ ತಮ್ಮ ಬಳಿಯಿಲ್ಲ, ಸ್ವತಂತ್ರ ಭಾರತದಲ್ಲಿ ಒಬ್ಬ ಪ್ರಧಾನಿ ಅಭ್ಯರ್ಥಿ ಈ ಪರಿ ಅಗ್ನಿಪರೀಕ್ಷೆಗೆ ವಿಶ್ಲೇಷಣೆಗೆ ಒಳಗಾದ ಉದಾಹರಣೆ ಇದೆಯೆ?

    ಉತ್ತರ
    • Nagshetty Shetkar's avatar
      Nagshetty Shetkar
      ಆಕ್ಟೋ 29 2013

      Mr. Girish, yes you are right. But in the history of India we have not hand a candidate like this too! Vajpayee and Advani who were BJP’s candidates in the previous elections were Nehruvian despite being in a right wing party.

      ಉತ್ತರ
    • krishnappa's avatar
      krishnappa
      ಆಕ್ಟೋ 29 2013

      ಮೋದಿಯಂತೆ ಉಗ್ರ ಹಿಂದುತ್ವದ ಪಾಲನೆ ಮಾಡಿದವರು ಭಾರತದಲ್ಲಿ ಅಧಿಕಾರದಲ್ಲಿ ಇದುವರೆಗೆ ಇರಲಿಲ್ಲ. ಹೀಗಾಗಿ ಸಹಜವಾಗಿಯೇ ಮೋದಿ ಅಗ್ನಿಪರೀಕ್ಷೆಗೆ ಈಡಾಗುತ್ತಿದ್ದಾರೆ. ಇದಕ್ಕೆ ಅವರ ಆಡಳಿತದ ಹಿಂದಿನ ನಿಲುವುಗಳೇ ಕಾರಣ. ಈ ಕುರಿತು ಇನ್ನು ಹೆಚ್ಚೇನೂ ಹೇಳಲು ಉಳಿದಿಲ್ಲ, ಮಾಧ್ಯಮಗಳಲ್ಲಿ ಈ ವಿಷಯ ಪದೇ ಪದೇ ಚರ್ಚೆ ಆಗಿದೆ, ಆಗುತ್ತಲೇ ಇದೆ. ಅದೇ ಚರ್ವಿತ ಚರ್ವಣ ಮಾಡುವ ಅಗತ್ಯ ಇಲ್ಲವೆಂದು ನನ್ನ ಭಾವನೆ.

      ಉತ್ತರ
  11. krishnappa's avatar
    krishnappa
    ಆಕ್ಟೋ 29 2013

    ಶೆಟ್ಕರ್ ಅವರೇ ಊಹೆಯ ಮೇಲೆ ಪ್ರಗತಿಪರ ಚಿಂತಕರ ಹೆಸರುಗಳನ್ನು ದಯವಿಟ್ಟು ಇಲ್ಲಿ ಉಲ್ಲೇಖಿಸಬೇಡಿ. ನೀವು ಹಾಗೆ ಇಲ್ಲಿ ಭಾಗವಹಿಸದ ಪ್ರಗತಿಪರ ಚಿಂತಕರ ಹೆಸರನ್ನು ಉಲ್ಲೇಖಿಸಿದರೆ ಅವರು ಇಲ್ಲಿ ಭಾಗವಹಿಸದಿದ್ದರೂ ಅವರ ಮೇಲೆ ಲಾಗಾಯ್ತಿನಿಂದ ಇರುವ ಸಿಟ್ಟನ್ನೆಲ್ಲಾ ನಿಲುಮೆಯ ಸೈಬರ್ ಆರ್ಮಿಯವರು ಇಲ್ಲಿ ಕಕ್ಕುತ್ತಾರೆ. ಇದರಿಂದ ಅವರಿಗೆ ವೃಥಾ ಅವಹೇಳನ ಆಗುವುದು ಬೇಡ.

    ಪ್ರಗತಿಪರ ಚಿಂತಕರು ಎಲ್ಲರೂ ಸಾಮಾನ್ಯವಾಗಿ ಒಂದೇ ರೀತಿ ಯೋಚಿಸುತ್ತಾರೆ ಮತ್ತು ಅವುಗಳಲ್ಲಿ ಸಾಮ್ಯ ಇದ್ದೇ ಇರುತ್ತದೆ. ಹೀಗಾಗಿ ಊಹೆಯ ಮೇಲೆ ಇಂಥವರದ್ದೇ ಅಭಿಪ್ರಾಯ ಎಂದು ಊಹಿಸಲು ಸಾಧ್ಯವಿಲ್ಲ. ಪ್ರಗತಿಪರ ಚಿಂತಕರ ಅವಹೇಳನ ಮಾಡುವುದು ನಿಲುಮೆಯ ಒಂದು ಅಜೆಂಡಾ ಆಗಿದೆ ಎಂಬುದು ಅದನ್ನು ಓದುವ ಎಲ್ಲರಿಗೂ ಅರ್ಥವಾದೀತು. ಇದಕ್ಕೆಂದೇ ಅವರು ಇಲ್ಲಿ ನಾನಾ ಹೆಸರುಗಳನ್ನೂ ಇಟ್ಟುಕೊಂಡು ಕೀಳು ಭಾಷೆಯಲ್ಲಿ ಹರಿಹಾಯುತ್ತಾರೆ. ಇದರಿಂದ ಪ್ರಗತಿಶೀಲ ಚಿಂತಕರು ಹಿಂಜರಿಯಬೇಕಾಗಿಲ್ಲ.

    ಉತ್ತರ
    • ರಾಕೇಶ್ ಶೆಟ್ಟಿ's avatar
      ಆಕ್ಟೋ 29 2013

      ಶೆಟ್ಕರ್ ಅವರೇ ಈ ಗೊಂದಲಗಳಿಗೆ ಕಾರಣ.ಅವರು ಕೃಷ್ಣಪ್ಪ ಅನ್ನುವ ಹೆಸರಿನವರನ್ನು ದರ್ಗಾ ಅಂತೇಕೆ ಸಂಭೋಧಿಸುತಿದ್ದಾರೋ ಗೊತ್ತಿಲ್ಲ…!

      ಗೆಳೆಯರೇ,
      ನಿಮ್ಮ ಮಾತುಗಳು ವಿಷಯಕ್ಕೆ ಸೀಮಿತವಾಗಿರಬೇಕೆ ಹೊರತು, ವ್ಯಕತಿಗತವಾಗಿ ಹೋಗಬೇಡಿ.

      ಕೃಷ್ಣಪ್ಪನವರೇ,

      ಪ್ರಗತಿಪರ ಚಿಂತಕರ ಅವಹೇಳನ ಮಾಡುವುದು ನಿಲುಮೆಯ ಒಂದು ಅಜೆಂಡಾ ಆಗಿದೆ ಎಂಬುದು ಅದನ್ನು ಓದುವ ಎಲ್ಲರಿಗೂ ಅರ್ಥವಾದೀತು.

      ನಿಲುಮೆಗೆ ಇಲ್ಲ ಅಜೆಂಡಾಗಳನ್ನು ತಾವಾಗಿಯೇ ಊಹಿಸಿಕೊಳ್ಳುವುದು ಪ್ರಗತಿಪರ ಚಿಂತನೆಗೆ ಹಿಡಿದ ಕೈಗನ್ನಡಿಯೇ? ನಾನು ಇಲ್ಲಿ ಹಲವು ಬಾರಿ ಹೇಳಿದ್ದೇನೆ. ಇಲ್ಲಿ ಯಾರು ಬೇಕಿದ್ದರೂ ಬರೆಯಬಹುದು,ನೀವೂ ಸಹ. ಸುಮ್ಮನೆ ನಿಲುಮೆಯ ಬಗ್ಗೆ ಮಾತನಾಡುವುದು ಬಿಟ್ಟು ವಿಷಯದ ಬಗ್ಗೆ ಮಾತನಾಡೋಣವೇ?

      ಉತ್ತರ
  12. ವಿಜಯ್ ಪೈ's avatar
    ವಿಜಯ್ ಪೈ
    ಆಕ್ಟೋ 29 2013

    @ಕೃಷ್ಣಪ್ನೋರು..
    [ಶೆಟ್ಕರ್ ಒಬ್ಬರು ಊಹೆಯ ಮೇಲೆ ದರ್ಗಾ ಎಂದು ಪ್ರತಿಕ್ರಿಯಿಸಿದರೆ ಉಳಿದವರೂ ಅದೇ ರೀತಿ ಊಹಿಸಿಕೊಂಡು ಪ್ರತಿಕ್ರಿಯಿಸುವುದರಿಂದ ನಿಲುಮೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗುವುದಿಲ್ಲವೇ?]
    ನಿಮ್ಮನ್ನು ದರ್ಗಾ ಸರ್ ಎಂದು ಮೊದಲು ಸಂಬೋಧಿಸಿದ್ದು ನಮ್ಮ ಶೆಟ್ಕರ್ ಸಾಹೇಬರು ಮತ್ತು ಅವರು ಕೃಷ್ಣಪ್ಪರನ್ನು ದರ್ಗಾ ಮಾಡಿದ್ದು ಇದೇ ಮೊದಲನೇ ಸಲವಲ್ಲ..ಹಳೆಯ ಲೇಖನಗಳಲ್ಲಿ ಕೃಷ್ಣಪ್ಪ ಪಾತ್ರಧಾರಿಗೆ ಈ ರೀತಿಯೇ ಸಂಭೋಧಿಸಲಾಗಿದೆ. ಆದ್ದರಿಂದ ಶೆಟ್ಕರ್ ರನ್ನು ಕೂಡಿಸಿ ಪಾಠ ಹೇಳಬೇಕು. ಅವರ ಹತ್ತಿರ ನೂರು ಸಲ ಕೃಷ್ಣಪ್ಪ ಕೃಷ್ಣಪ್ಪ ಎಂದು ಬಾಯಿಪಾಠ ಮಾಡಿಸುವುದು ಒಳ್ಳೆಯದು!..ಹಾಗೇಯೇ ಶಿವರಾಂ ಎಂಬವರನ್ನು ಕೂಡ ‘ಕನಫ್ಯೂಜ್’ ಮಾಡಿಕೊಂಡು ವಿಶ್ವಾರಾಧ್ಯ ಸತ್ಯಂಪೇಟೆ ಅಂತ ಕರೆದಿದ್ದರು..ಆದ್ದರಿಂದ ‘ಶಿವರಾಮ್ ಶಿವರಾಮ್ ಎಂದೂ ಕೂಡ ನೂರು ಸಲ ಹೇಳಿಸುವುದು ಒಳ್ಳೆಯದು.

    [ದರ್ಗಾ ಅವರೇನೋ ತಮ್ಮ ಮೇಲೆ ಅನಾವಶ್ಯಕವಾಗಿ ಇಲ್ಲಿ ನಡೆದಿರುವ ಅವಹೇಳನವನ್ನು ಸಹಿಸಿಕೊಂಡು ತಮ್ಮ ದೊಡ್ಡತನ ಮೆರೆದಿದ್ದಾರೆ (ಅವರು ನಿಲುಮೆಯನ್ನು ನೋಡಿದ್ದರೆ. ಅವರು ಇದನ್ನು ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ). ಬೇರೆ ಯಾರಾದರೂ ಆಗಿದ್ದರೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದರು.]
    ಒಂದು ಕಡೆ..ದರ್ಗಾ ಅವರು ದೊಡ್ಡತನ ಮೆರೆದಿದ್ದಾರೆ ಅನ್ನುತ್ತಿದ್ದೀರಿ..ಅದರ ಮುಂದೆ ಬ್ರಾಕೆಟ್ ನಲ್ಲಿ ಅವರು ನೋಡುತ್ತಾರೊ ಇಲ್ಲವೊ ಗೊತ್ತಿಲ್ಲ ಅನ್ನುತ್ತಿರಿ..ಮತ್ತೆ ಕನ್ ಫ್ಯೂಜನ್!. ಕೃಷ್ಣಪ್ನೋರೆ ..ದರ್ಗಾ ಅವರಿಗೆ ನೀವು ತಿಳಿಸಿ..ಬಂದು ತೀವ್ರವಾಗಿಯೇ ಪ್ರತಿಕ್ರಿಯಿಸಲಿ..ನಮ್ಮದು ಸರಿಯಿದ್ದಾಗ ಹಾಗೆಲ್ಲ ಅವಹೇಳನ ಸಹಿಸಿಕೊಳ್ಳಬಾರದು.

    [ಹೂಂಕಾರ ರ್ಯಾಲಿ ಎಂಬ ಹೆಸರು ಬಹುಶ: ಭಯೋತ್ಪಾದಕರಿಗೆ ಪ್ರಚೋದನೆಯಂತೆ ಕಂಡಿರುವ ಸಾಧ್ಯತೆ ಇದೆ. ಹೀಗಾಗಿ ಅವರು ಸ್ಫೋಟ ನಡೆಸಿರುವ ಸಾಧ್ಯತೆ ಇದೆ. ]
    ಅಂದರೆ ಬಾಂಬ ಯಾವಾಗಲೂ ರೆಡಿ ಇರುತ್ತೆ..ಕೇವಲ ಪ್ರಚೋದನೆಗೆ ಕಾಯುತ್ತ ಇರುತ್ತಾರೆ ಅಂತಾಯಿತು. ಇನ್ನು ಮುಂದೆ ರ್ಯಾಲಿಗೆ ಯಾವ ಹೆಸರಿಡಬೇಕೆಂದು ಭಯೋತ್ಪಾದಕರನ್ನು ಕೇಳಿಯೇ ಇಡುವುದು ಒಳ್ಳೆಯದು!.

    [ಅಲ್ಪಸಂಖ್ಯಾತರನ್ನು ನಮ್ಮ ಸಹೋದರರಂತೆ ಕಂಡರೆ ಅಲ್ಪಸಂಖ್ಯಾತರು ಭಯೋತ್ಪಾದನೆಗೆ ಸಹಕರಿಸುವುದು ಕಡಿಮೆಯಾಗಬಹುದು.]
    ಇಲ್ಲಿ ನಿಮ್ಮ ಮಾತು ನೋಡಿದರೆ ಎಲ್ಲ ಅಲ್ಪಸಂಖ್ಯಾತರು ಭಯೋತ್ಪಾದನೆಗೆ ಸಹಕರಿಸುತ್ತಾರೆ ಅಥವಾ ಸಹಕರಿಸುವುದು ಅವರ ಅನಿವಾರ್ಯ ಕರ್ತವ್ಯ ಎಂಬಂತಿದೆ. ಮತ್ತೊಂದೇನೆಂದರೆ, ಆ ಅಸಾರಾಂ ಬಾಪುನ ಹೇಳಿಕೆಗೂ, ನಿಮ್ಮ ಹೇಳಿಕೆಗೂ ಏನಾದರೂ ವ್ಯತ್ಯಾಸವಿದೆ ಅನಿಸುತ್ತದೆಯೆ? ಆ ಮನುಷ್ಯ ದೆಹಲಿ ರೇಪ ಕೇಸಲ್ಲಿ ಇಂದದ್ದೆ ಮಾತನಾಡಿದ್ದ. ನಿರ್ಭಯಾ ರೇಪ ಮಾಡಿದವರನ್ನು ಸಹೋದರರೆ ಅಂತ ಅಂಗಲಾಚಿದಲ್ಲಿ ರೇಪ ಮಾಡುತ್ತಿರಲಿಲ್ಲವಂತೆ!.

    [ಪ್ರಗತಿಪರ ಚಿಂತಕರು ಎಲ್ಲರೂ ಸಾಮಾನ್ಯವಾಗಿ ಒಂದೇ ರೀತಿ ಯೋಚಿಸುತ್ತಾರೆ ಮತ್ತು ಅವುಗಳಲ್ಲಿ ಸಾಮ್ಯ ಇದ್ದೇ ಇರುತ್ತದೆ. ಹೀಗಾಗಿ ಊಹೆಯ ಮೇಲೆ ಇಂಥವರದ್ದೇ ಅಭಿಪ್ರಾಯ ಎಂದು ಊಹಿಸಲು ಸಾಧ್ಯವಿಲ್ಲ.]
    ಹೂಂ..ಇದ್ಯಾಕೆ ಹೀಗೆ ಸರ್? ಅವರಿಗೆ ಸ್ವಂತ ಅನ್ನುವಂತಹ ವಿಚಾರಗಳಿರುವುದಿಲ್ಲ..ಎಲ್ಲ ಒಂದೇ ಮೂಲದಿಂದ ಭಟ್ಟಿ ಇಳಿಸಿದ ವಿಚಾರಗಳಾಗಿದ್ದರಿಂದ ಹೀಗಾಗುತ್ತಿರಬಹುದೆ? ಅದಕ್ಕೆ ರಂಜಾನ ದರ್ಗಾ, ಕೃಷ್ಣಪ್ನೋರು, ಶಿಷ್ಯ ಶೆಟ್ಕರೊರು..ಹೀಗೆ ಯಾರೇ ಮಾತನಾಡಿದರೂ, ಹಾಡಿದರೂ ಒಂದೇ ರಾಗದಂತೆ ಕೇಳಿಸುತ್ತೆ..ಇದು ನಮಗಷ್ಟೇ ಅಲ್ಲ..ಅವರ ಅಪ್ತ ಶಿಷ್ಯಂದಿರಿಗೂ ಕೂಡ ಇವರಾಗಿರಬಹುದೆ? ಅವರಾಗಿರಬಹುದೆ? ಎಂದೆಲ್ಲ ಕನಫ್ಯೂಜ್ ಆಗುತ್ತದೆ..

    [ಇದಕ್ಕೆಂದೇ ಅವರು ಇಲ್ಲಿ ನಾನಾ ಹೆಸರುಗಳನ್ನೂ ಇಟ್ಟುಕೊಂಡು ಕೀಳು ಭಾಷೆಯಲ್ಲಿ ಹರಿಹಾಯುತ್ತಾರೆ. ಇದರಿಂದ ಪ್ರಗತಿಶೀಲ ಚಿಂತಕರು ಹಿಂಜರಿಯಬೇಕಾಗಿಲ್ಲ.]
    ಹೌದೆ?..ಹಾಗಾದರೆ ಕನಿಷ್ಟ ‘ಪ್ರಗತಿಪರ’ ಚಿಂತಕಾದರೂ ನಿಜವಾದ ಹೆಸರಿನಿಂದ ಬರೆಯಬಹುದೇನೊ….ಏನಂತೀರಿ?

    ಉತ್ತರ
    • ನವೀನ's avatar
      ನವೀನ
      ಆಕ್ಟೋ 29 2013

      ಕೃಷ್ಣಪ್ಪರ ಮಾತುಗಳಲ್ಲಿ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಎದ್ದೆದ್ದು ಕಾಣ್ತಾಯಿದೆ … ಸಲ್ಪ ಕಡಿಮೆ ಮಾಡಿಕೊಳ್ಳಿ ಸರ್. ನಿಮ್ಮ ಶೆಟ್ಕರ್ ಅವರಿಗೆ ಮೊದಲು ವಿಜಯ್ ಹೇಳಿದಂತೆ ಪಾಠಮಾಡಿ.ಇಲ್ಲಿ ನನ್ನನ್ನು “ಕೃಷ್ಣಪ್ಪ” ಅಂತ ಮಾತ್ರ ಕರಿಬೇಕು,ಮುಖವಾಡ ಕಳಚಬಾರದು ಅಂತ.

      ಆದರೂ ಏನೇ ಹೇಳಿ ನಮ್ಮ ಶೆಟ್ಕರ್ ಅವರದು ಮಗುವಿನಂತ ಮುಗ್ಧ ಮನಸ್ಸು… ಸುಳ್ಳು ಹೇಳುವುದಿಲ್ಲ ಅವರು.ಅದಕ್ಕೆ ನನಗಿಷ್ಟ 🙂

      ಉತ್ತರ
    • krishnappa's avatar
      krishnappa
      ಆಕ್ಟೋ 29 2013

      ಹೂಂಕಾರ್ ರ್ಯಾಲಿ ಎಂಬ ಹೆಸರನ್ನು ತುಂಬಾ ದಿನಗಳ ಮೊದಲೇ ಹೇಳಲಾಗುತ್ತಿತ್ತು . ಹಾಗಾಗಿ ಬಾಂಬ್ ರೆಡಿ ಮಾಡಲು ಭಯೋತ್ಪಾದಕರಿಗೆ ಸಮಯ ಸಿಕ್ಕಿರುವಂತೆ ಕಾಣುತ್ತದೆ. ಅದು ಯಾವಾಗಲೂ ರೆಡಿ ಇದ್ದಿರಲಾರದು. ರ್ಯಾಲಿಯ ಹೆಸರಿಗಾಗಿ ಕಾದು ಭಯೋತ್ಪಾದನೆ ಮಾಡುತ್ತಾರೆ ಎಂದು ಅರ್ಥವಲ್ಲ. ಎರಡು ಕಾರಣಗಳಿಗಾಗಿ ದೇಶದಲ್ಲಿ ಭಯೋತ್ಪಾದನೆ ನಡೆಯುತ್ತದೆ. ಒಂದು ಧರ್ಮದ ಹೆಸರಿನಲ್ಲಿ ಅಮಾಯಕರಲ್ಲಿ ಮೂಲಭೂತವಾದ ಹಬ್ಬಿಸಿ ಹಿಂಸೆಯನ್ನು ಪ್ರಚೋದಿಸುವುದು. ಇನ್ನೊಂದು ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರು ಎಸಗಿದ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಅವರಲ್ಲಿ ರೊಚ್ಚನ್ನು ಮೂಡಿಸಿ ಭಯೋತ್ಪಾದನೆಗೆ ಸಿದ್ಧಗೊಳಿಸುವುದು. ಇದಕ್ಕೆ ದೇಶದ ಎಲ್ಲ ಅಲ್ಪಸಂಖ್ಯಾತರು ಸಹಕರಿಸುತ್ತಾರೆ ಎಂದು ನಾನು ಹೇಳಿಲ್ಲ. ಇದಕ್ಕೆ ಸಹಕರಿಸುವುದು ಬೆರಳೆಣಿಕೆಯ ಅಲ್ಪಸಂಖ್ಯಾತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ರೀತಿ ಸಹಕರಿಸುವ ದೇಶದೊಳಗಿನ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ನಡೆಸಿದ ದೌರ್ಜನ್ಯದ ಬಗ್ಗೆ ಸಿಟ್ಟಿರುತ್ತದೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗದೆ ಸಹೋದರ ಭಾವದಿಂದ ನಡೆಸಿಕೊಂಡರೆ ಈ ರೀತಿಯ ಸಿಟ್ಟಿರುವ ಅಲ್ಪಸಂಖ್ಯಾತರು ಹುಟ್ಟಿಕೊಳ್ಳುವುದನ್ನು ತಡೆಯಲು ಸಾಧ್ಯ ಎಂದಷ್ಟೇ ನನ್ನ ಅನಿಸಿಕೆಯ ಇಂಗಿತ.

      ಪ್ರಗತಿಪರ ಚಿಂತಕರು ಯಾವ ರೀತಿ ಒಂದೇ ರೀತಿಯಲ್ಲಿ ಯೋಚಿಸುತ್ತಾರೋ ಅದೇ ರೀತಿ ಪ್ರತಿಗಾಮಿ ಚಿಂತಕರೂ ಒಂದೇ ರೀತಿ ಯೋಚಿಸುತ್ತಾರೆ. ಹೀಗಾಗಿಯೇ ಪ್ರತಿಗಾಮಿ ಮತ್ತು ಪ್ರಗತಿಶೀಲ ಎಂಬ ಗುಂಪುಗಳು ಹುಟ್ಟಿಕೊಳ್ಳುವುದು.

      ಉತ್ತರ
      • ವಿಜಯ್ ಪೈ's avatar
        ವಿಜಯ್ ಪೈ
        ಆಕ್ಟೋ 30 2013

        ಹಾಗೇಯೇ ಅಲ್ಪಸಂಖ್ಯಾತರು ಎನಿಸಿಕೊಂಡವರ ಜವಾಬ್ದಾರಿ ಮತ್ತು ಅವರು ಹೇಗೆ ವರ್ತಿಸಬೇಕು ಎಂಬುದನ್ನು ಬಿಡಿಸಿ ಹೇಳುತ್ತೀರ ದಯವಿಟ್ಟು..

        ಉತ್ತರ
  13. Nagshetty Shetkar's avatar
    Nagshetty Shetkar
    ಆಕ್ಟೋ 29 2013

    Krishnappa Sir, I agree with you sir totally. To develop empathy for minorities, government must make it mandatory to majority community teaching basics of Qur’an and Vachanas in primary schools. In high school children should be taken to masjid and dargas as field education.

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಆಕ್ಟೋ 30 2013

      [ it mandatory to majority community teaching basics of Qur’an and Vachanas in primary schools]
      ಬೇಸಿಕ್ಸ್ ಯಾಕೆ ಭಟ್ಟಂಗಿ ಗುರುಗಳೆ? ಡಿಗ್ರಿ ಸರ್ಟಿಫಿಕೇಟ್ ಬೇಕೆಂದರೆ ಎರಡು ವರುಷ ಮದಾರಸಾದಲ್ಲಿ ಕಡ್ಡಾಯವಾಗಿ ಶಿಕ್ಷಣ ಪಡೆದಿರಬೇಕು ಎಂದೇಕೆ ಮಾಡಬಾರದು?. ಸ್ವಾಮಿ..ನೀವು ನಿಜವಾಗಲೂ ಸೊಶಿಯಲ್ ಸೈನ್ಸ ನಲ್ಲಿ ಏನಾದರೂ ಡಿಗ್ರಿ ಮಾಡಿದ್ದೀರಾ? ನಿಮ್ಮ ತರ್ಕ, ಬುದ್ಧಿಮಟ್ಟ ನೋಡಿದರೆ ಅನುಮಾನ ಹುಟ್ಟುತ್ತದೆ!,,

      ಉತ್ತರ
      • Nagshetty Shetkar's avatar
        Nagshetty Shetkar
        ಆಕ್ಟೋ 30 2013

        Mr. Vijay, what is wrong in educating the majority about the minorities? It will reduce misunderstanding and promote harmony. You don’t want that? Learning in Madersa is definitely recommended to people like Mr Bhat to get cured from communal jaundice.

        ಉತ್ತರ
    • Mahesh's avatar
      ಆಕ್ಟೋ 30 2013

      ನಿಜ, ಶೆಟ್ಕರ್ ಮತ್ತು ಕೃಷ್ಣಪ್ಪನವರೇ, ಶಾಲೆಗಳಲ್ಲಿ ಕುರಾನ್ ಮತ್ತು ವಚನಗಳನ್ನು ಕಡ್ಡಾಯವಾಗಿ ಬೋಧಿಸುವ ಅಗತ್ಯವಿದೆ. ಆದರೆ ಕುರಾನ್ ನಲ್ಲಿ ವಚನಗಳಲ್ಲಿ ಇದ್ದ ಎಲ್ಲಾ ಒಳ್ಳೆಯ ಅಂಶಗಳೂ ಇರುವುದರಿಂದ ಕುರಾನ್ ಮಾತ್ರ ಕಡ್ಡಾಯ ಮಾಡಿದರೆ ಸಾಕೆನಿಸುತ್ತದೆ.

      ಉತ್ತರ
  14. Nagshetty Shetkar's avatar
    Nagshetty Shetkar
    ನವೆಂ 24 2013

    ಮೋದಿ ಬಗ್ಗೆ ದಲಿತರು ಏನು ಹೇಳುತ್ತಿದ್ದಾರೆ ಗೊತ್ತೇ? ನೋಡಿ:

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments