ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 21, 2013

93

ಜಾತ್ಯಾತೀತರೆನಿಸಿಕೊಳ್ಳಲು “ಹಿಂದೂ ನಂಬಿಕೆ”ಗಳ ಜೊತೆ ಸರಸವಾಡಲೇಬೇಕೆ?

‍ನಿಲುಮೆ ಮೂಲಕ

– ನರೇಂದ್ರ ಕುಮಾರ ಎಸ್.ಎಸ್

secularism“ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ – 2013” ಅನ್ನು ಜಾರಿಗೆ ತರಲಾಗುವುದೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಕ್ಕಿದ್ದಂತೆ ಘೋಷಿಸಿದೆ. ಕರ್ನಾಟಕದಲ್ಲಿ ಆಗಬೇಕಾದ ಅನೇಕ ತುರ್ತಾದ ಕೆಲಸಗಳಿವೆ. ಈ ಹಿಂದೆ ಅಧಿಕಾರದಲ್ಲಿದ್ದ ಭಾಜಪದ ಒಳಜಗಳದಿಂದ ಬೇಸೆತ್ತ ಜನರು, ಈ ಎಲ್ಲಾ “ತುರ್ತಾಗಿ ಆಗಬೇಕಾದ ಕೆಲಸ”ಗಳನ್ನೂ ಮಾಡಲಿಕ್ಕೆಂದೇ ಕಾಂಗ್ರೆಸ್ ಕೈಯ್ಯಲ್ಲಿ ಮತ್ತೊಮ್ಮೆ ಅಧಿಕಾರ ಕೊಟ್ಟರು. ಆದರೆ, ಇವೆಲ್ಲವನ್ನೂ ಬದಿಗೊತ್ತಿ, “ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ – 2013” ಅನ್ನು ಜಾರಿಗೆ ತರುತ್ತಿರುವುದು ಕಾಂಗ್ರೆಸ್ ಪಕ್ಷದವರಿಂದ ಹಿಡಿದು ಎಲ್ಲರನ್ನೂ ದಿಗ್ಭ್ರಮೆಗೊಳಪಡಿಸಿದೆ. ಈ ವಿದೇಯಕದ ಅಗತ್ಯ ಈಗೇನಿತ್ತು, ಎನ್ನುವುದು ಎಲ್ಲ ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಇದರ ಹಿಂದೆ ಏನಾದರೂ “Hidden Agenda” ಇರಬಹುದೆಂದು ಎಲ್ಲರಿಗೂ ಅನಿಸತೊಡಗಿದೆ.

ಸಿದ್ದರಾಮಯ್ಯನವರು “ಜಾತ್ಯಾತೀತ” ಪಕ್ಷಕ್ಕೆ ಸೇರಿದವರು. ಅವರಿಗೆ “ಪ್ರಗತಿಶೀಲ ವಿಚಾರವಂತರ” ಒಡನಾಟವಿದೆ. ಈ ವಿದೇಯಕದ ಹಿಂದೆ ಕೆಲಸ ಮಾಡಿರುವುದೂ ಈ “ಪ್ರಗತಿಶೀಲ”ರ ತಲೆಯೇ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಕರ್ನಾಟಕದಲ್ಲಿ ತುರ್ತಾಗಿ ಆಗಬೇಕಿರುವ ಎಲ್ಲಾ ಕಾರ್ಯಗಳಿಗಿಂತಲೂ ಈ ವಿದೇಯಕವು ಹೇಗೆ ಆದ್ಯತೆವುಳ್ಳದ್ದಾಯಿತು ಎಂಬುದಕ್ಕೆ ಅವರ ಬಳಿ ಉತ್ತರ ಇರಲಾರದು. ತಮ್ಮ “Hidden Agenda” ಅನುಷ್ಠಾನಕ್ಕಾಗಿ ಸಿದ್ದರಾಮಯ್ಯನವರ ಅಧಿಕಾರವನ್ನು ಈ “ಪ್ರಗತಿಶೀಲ”ರು (ದು)ಉಪಯೋಗಿಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಹುಟ್ಟುತ್ತಿದೆ.

ಈ ವಿದೇಯಕದ ಪ್ರಸ್ತಾವನೆಯ ಮೂಲಕ, ಸಿದ್ದರಾಮಯ್ಯನವರಾಗಲೀ ಕಾಂಗ್ರೆಸ್ ಪಕ್ಷವಾಗಲೀ ಜಾತ್ಯಾತೀತವಲ್ಲ ಎನ್ನುವುದು ಸಾಬೀತಾಗಿದೆ. ಜಾತ್ಯಾತೀತ ಎಂಬ ಪದಕ್ಕಿರುವ ಒಂದು ಅರ್ಥ “ಧರ್ಮ ನಿರಪೇಕ್ಷತೆ”. ಸರಕಾರಕ್ಕೂ ಜನರು ಆಚರಿಸುವ ಧಾರ್ಮಿಕ/ಮತೀಯ/ಜಾತೀಯ/ಸಂಪ್ರದಾಯವಾದಿ ಆಚರಣೆಗಳಿಗೂ ಸಂಬಂಧವಿರದಿರುವುದೇ “ಧರ್ಮ ನಿರಪೇಕ್ಷತೆ”. “ಜಾತ್ಯಾತೀತ” ಸರಕಾರವು ಜನರ ಧಾರ್ಮಿಕ/ಮತೀಯ/ಜಾತೀಯ/ಸಂಪ್ರದಾಯವಾದಿ ಕಾರ್ಯಗಳಲ್ಲಿ/ಆಚರಣೆಗಳಲ್ಲಿ ತಲೆಹಾಕುವುದಿಲ್ಲ. ತನ್ನಲ್ಲಿರುವ ಯಾವುದೇ ನಂಬಿಕೆ/ಆಚರಣೆಗಳು “ಮೂಢ”, ಅದು “ಅನಗತ್ಯ” ಎನ್ನುವುದು ಸಮಾಜಕ್ಕೆ ಮನವರಿಕೆಯಾಗಬೇಕು. ಸಾಮಾಜಿಕ ಆಂದೋಲನಗಳ ಮೂಲಕ ಇದನ್ನು ಸಾಧಿಸಬೇಕು. ಸರಕಾರವು ರಾಜಕೀಯ, ಆರ್ಥಿಕ, ಶೈಕ್ಷಣಿಕ, ವಾಣಿಜ್ಯ, ಸಂರಕ್ಷಣೆ – ಈ ಕಾರ್ಯಗಳಿಗೆ ಮಾತ್ರ ಗಮನ ಹರಿಸಬೇಕು. ಸಮಾಜ ಸುಧಾರಣೆ ಸರಕಾರದ ಕೆಲಸವಲ್ಲ. ಸಮಾಜದಲ್ಲಿರುವ ಜನರ ನಂಬಿಕೆ/ಆಚರಣೆಗಳ ವಿಷಯದಲ್ಲಿ ತಲೆಕೆಡಿಸಿಕೊಳ್ಳುವ ಸರಕಾರ ಜಾತೀಯ/ಮತೀಯ/ಕೋಮುವಾದಿ ಸರಕಾರವೆನಿಸಿಕೊಳ್ಳುತ್ತದೆ. ಈಗ ಪ್ರಸ್ತಾಪಿಸಲಾಗಿರುವ ವಿದೇಯಕ, “ಜಾತ್ಯಾತೀತತೆಯ ಆಶಯ”ಕ್ಕೆ ವಿರುದ್ದವಾದುದನ್ನೇ ಮಾಡುತ್ತಿದೆ. ಅಂದರೆ, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಜಾತೀಯ/ಮತೀಯ/ಕೋಮುವಾದಿ ಸರಕಾರ ಎಂಬುದು ಸಾಬೀತಾಗಿದೆ.

ಪ್ರತಿಯೊಂದು ಸಮಾಜದಲ್ಲಿಯೂ ಅನೇಕ ನಂಬಿಕೆಗಳು ಹಾಸುಹೊಕ್ಕಾಗಿರುತ್ತದೆ. ಆ ರೀತಿಯ ಸಮಾನ ನಂಬಿಕೆಗಳು ಮತ್ತು ಆ ನಂಬಿಕೆಯ ಮೂಲಕ ಅನುಷ್ಠಾನಕ್ಕೆ ಬಂದ ಸಂಪ್ರದಾಯಗಳು/ಆಚರಣೆಗಳು ಸಮಾಜವನ್ನು ಒಟ್ಟಾಗಿ ಇರಿಸಿರುತ್ತದೆ. ಇದೇ ಸಂಸ್ಕೃತಿ ಎಂದೂ ಕರೆಸಿಕೊಳ್ಳುತ್ತದೆ. ಉದಾಹರಣೆಗೆ, ಬೆಂಗಳೂರಿನಲ್ಲಿ ನಡೆಯುವ “ಕರಗ ಉತ್ಸವ”. ಇದರಲ್ಲಿರುವ ಅನೇಕ ಆಚರಣೆಗಳು ಹೊರನೋಟಕ್ಕೆ ಅರ್ಥವಿಲ್ಲದ್ದೆಂದು ಅನ್ನಿಸಬಹುದು. ಆದರೆ, ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಈ ಉತ್ಸವದ ಮೂಲಕ ಬೆಂಗಳೂರಿಗರು ವರ್ಷಕ್ಕೊಮ್ಮೆ ಒಟ್ಟಾಗಿ ಸೇರುವಂತಾಗುತ್ತದೆ ಮತ್ತು ಅದು ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಈ ವಿದೇಯಕ ಜಾರಿಯಾದರೆ, ಪ್ರಾಯಶಃ “ಕರಗ ಉತ್ಸವ”ದಲ್ಲಿ ಯಾವ ಮಂತ್ರಿ ಮಹೋದಯರೂ, ಸರಕಾರಿ ಅಧಿಕಾರಿಗಳೂ ಭಾಗವಹಿಸುವಂತಿಲ್ಲ ಮತ್ತು ಈ ಉತ್ಸವಕ್ಕೆ ಸರಕಾರದ ಯಾವ ಸಹಕಾರವನ್ನೂ ನೀಡುವಂತಿಲ್ಲ. ಅದೇ ರೀತಿ, ನಮ್ಮ ಸಂಸ್ಕತಿಯೊಡನೆ ಜೋಡಿಕೊಂಡಿರುವುದು “ಮೈಸೂರಿನ ದಸರಾ” – ಇದಂತೂ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ. ಈ ವಿದೇಯಕ ಜಾರಿಯಾದರೆ, ಸರಕಾರವು “ಮೈಸೂರು ದಸರಾ”ದಲ್ಲಿ ಭಾಗವಹಿಸುವಂತಿಲ್ಲ! ಭಾರತದಲ್ಲಿರುವ ಅನೇಕ ನಂಬಿಕೆಗಳು, ಇಲ್ಲಿನ ಸಂಸ್ಕೃತಿಯೊಡನೆ ಸೇರಿಕೊಂಡಿದೆ. ನಂಬಿಕೆಗಳನ್ನು ಮುರಿದರೆ ಸಂಸ್ಕೃತಿಯನ್ನೇ ಮುರಿದಂತಾಗುತ್ತದೆ. ಇದೆಲ್ಲವೂ ಈ “ಪ್ರಗತಿಶೀಲ ಚಿಂತಕ”ರ ಚಿಂತನೆಯ ವ್ಯಾಪ್ತಿ ಗೆ ನಿಲುಕುವುದಿಲ್ಲವೇ?

ಈ ವಿದೇಯಕವನ್ನು “ವೈಜ್ಞಾನಿಕ/ಪ್ರಗತಿಪರ” ಎಂದು ತೋರಿಸಲು “ಮೂಢನಂಬಿಕೆ” ಎನ್ನುವ ಪದವನ್ನು ಸೇರಿಸಲಾಗಿದೆ. ಏನಿದು ಮೂಢನಂಬಿಕೆ? ಎಲ್ಲ ನಂಬಿಕೆಯೂ ಮೂಢನಂಬಿಕೆಯೇ ಅಲ್ಲವೇ? ಮಗುವಿಗೆ ತಾಯಿಯು, “ಅವರು ನಿನ್ನ ಅಪ್ಪ” ಎಂದು ತಂದೆಯನ್ನು ಪರಿಚಯಿಸುತ್ತಾಳೆ. ಮಗು ಅದನ್ನು ಕೂಡಲೇ ಒಪ್ಪುತ್ತದೆ. “ಅವರೇ ನನ್ನಪ್ಪ ಎನ್ನುವುದನ್ನು ನಿರೂಪಿಸು” ಎಂದು ಆ ಮಗು ಎಂದೂ ತನ್ನ ತಾಯನ್ನು ಪ್ರಶ್ನಿಸುವುದಿಲ್ಲ. ಈ ರೀತಿ “ಒಪ್ಪಿಕೊಂಡದ್ದ”ನ್ನೇ ನಂಬಿಕೆ ಎನ್ನಲಾಗುವುದು. “ಮೂಢನಂಬಿಕೆ” ಎನ್ನುವುದು ವೈಜ್ಞಾನಿಕವಾಗಿ ನಿರೂಪಿತವಾಗಿಲ್ಲದಿರುವುದು. “ಅವರೇ ತನ್ನ ತಂದೆ ಹೌದೇ ಇಲ್ಲವೇ ಎನ್ನುವುದನ್ನು ಮಗು ವೈಜ್ಞಾನಿಕವಾಗಿ ನಿರೂಪಿಸಲು ಪ್ರಯತ್ನಿಸುವುದಿಲ್ಲ”. ಹೀಗಾಗಿ, “ತಂದೆ” ಎನ್ನುವುದು ಮೂಢನಂಬಿಕೆ ಆಗಿಬಿಡುತ್ತದೆ. ಎಲ್ಲ ನಂಬಿಕೆಗಳೂ ಹೀಗೆಯೇ. ಶಾಲೆಯಲ್ಲಿ ಪಾಠ ಕಲಿಯುವ ಮಗು “ಪರಮಾಣು”ವಿನ ಕುರಿತಾಗಿ ಓದುತ್ತದೆ. ತನ್ನ ಮಾಸ್ತರರು ಹೇಳಿದ್ದನ್ನು “ನಂಬುತ್ತದೆ”. ಅದೆಂದೂ ಆ ಪರಮಾಣುವನ್ನು “ತನ್ನ ಕಣ್ಣಿಂದಲೇ” ನೋಡುವುದಿಲ್ಲ, ಪ್ರಯೋಗಶಾಲೆಯಲ್ಲಿ ಪ್ರಯೋಗಗಳ ಮೂಲಕ ನಿರೂಪಿಸುವುದಿಲ್ಲ (ಕೆಲವು ಭೌತಶಾಸ್ತ್ರ ವಿಜ್ಞಾನಿಗಳನ್ನು ಬಿಟ್ಟು). ಹೀಗಾಗಿ, “ಪರಮಾಣು ಎನ್ನುವುದು ಇದೆ” ಎಂದು ನಂಬುವುದೂ ಮೂಢನಂಬಿಕೆ ಆಗಿಬಿಡುತ್ತದೆ. ಹೀಗೆ, ಎಲ್ಲ ನಂಬಿಕೆಗಳೂ ಮೂಢನಂಬಿಕೆಗಳೇ. ಹೀಗಾಗಿ, ಮೂಢನಂಬಿಕೆಗಳನ್ನು ನಿಷೇಧಿಸುವುದು ಎಂದರೆ ನಂಬಿಕೆಗಳನ್ನು ಕೊಲ್ಲುವುದು ಎಂದೇ ಅರ್ಥವಲ್ಲವೇ?

ಇನ್ನು ಈ ವಿದೇಯಕದ ಗುರಿಯಾಗಿರುವುದು ಹಿಂದುಗಳ ನಂಬಿಕೆಯೇ. ಹಿಂದುಗಳಲ್ಲಿರುವ ಅನೇಕ ಆಚರಣೆಗಳು ಹೊರನೋಟಕ್ಕೆ ಅರ್ಥವಿಲ್ಲದ್ದೆಂದು ಗೋಚರಿಸಬಹುದು. ಆದರೆ, ಅವು ಅರ್ಥವಿಲ್ಲದ್ದೆಂದು ನಾವು ನಿರ್ಧಾರಕ್ಕೆ ಬಂದುಬಿಟ್ಟರೆ, ನಾವೇ “ಮೂಢ”ರಾಗಿ ಬಿಡುತ್ತೇವೆ! ಅವುಗಳ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡಲಾಗಿಲ್ಲ ಅಷ್ಟೇ. ನಮಗೆ ಅದರ ಅರ್ಥ ತಿಳಿದಿಲ್ಲವಂದ ಮಾತ್ರಕ್ಕೆ, ಅವನ್ನು “ಮೂಢನಂಬಿಕೆ” ಎಂದು ಕರೆಯುವುದು ಮೂರ್ಖತನದ ಪರಮಾವಧಿ. ಹಿಂದು ಸಮಾಜ ಸುಧಾರಣೆಗಳನ್ನು ಸದಾ ಸ್ವಾಗತಿಸುತ್ತದೆ. ಆದರೆ, ಸುಧಾರಣೆಗಳ ಅಗತ್ಯ ಸಮಾಜದ ಒಳಗಿನಿಂದಲೇ ಹುಟ್ಟಬೇಕು. ಅದನ್ನು ಸರಕಾರವು ಶಾಸನಗಳ ಮೂಲಕ ಹೊರಗಿನಿಂದ ಹೇರಬಾರದು. ಆ ರೀತಿಯ ಹೇರಿಕೆಯನ್ನು ಈ ಸಮಾಜ ಒಪ್ಪಿಕೊಳ್ಳುವುದಿಲ್ಲ. ಹಿಂದು ಸಮಾಜದ ನಂಬಿಕೆಗಳೊಡನೆ ಆಟವಾಡುವುದನ್ನು ನಮ್ಮ ಸಂವಿಧಾನವೂ ಒಪ್ಪುವುದಿಲ್ಲ.

ಚಿತ್ರಕೃಪೆ: ಅಂತರ್ಜಾಲ

93 ಟಿಪ್ಪಣಿಗಳು Post a comment
 1. Maaysa
  ನವೆಂ 22 2013

  😀 ಸುಳ್ಳು ಹೇಳಬೇಕೆಂದೇ ನಿರ್ಧರಿಸಿ ಬರೆದ ಬರಹ.

  ಉತ್ತರ
 2. ನವೆಂ 22 2013

  > ಸುಳ್ಳು ಹೇಳಬೇಕೆಂದೇ ನಿರ್ಧರಿಸಿ ಬರೆದ ಬರಹ.
  ಎಲ್ಲೆಲ್ಲಿ ಸುಳ್ಳುಗಳಿವೆ ಎಂದು ತೋರಿಸಿ, ನಿರೂಪಿಸಿದರೆ ಮಾತ್ರ ನಿಮ್ಮ ಮಾತನ್ನು ನಂಬಬಹುದು.

  ಉತ್ತರ
  • Maaysa
   ನವೆಂ 22 2013

   ನನ್ನ ಮಾತು ನಂಬಬೇಡಿ. ನೀವು ಎಳೆಯ ಮಗುವಲ್ಲ!

   ಬರಹಗಾರರ ಹೊಣೆ ವಿಧಾಯಕದ ಕರಡಲ್ಲಿ ಎಲ್ಲೆಲ್ಲಿ ಹಿಂದೂ ನಂಬಿಕೆಯ ವಿರೋಧವಿದೆ ಎಂದು ಹೇಳೋದು. ನನ್ನದಲ್ಲ.

   ಉತ್ತರ
   • ನವೆಂ 22 2013

    ಕರಡು ತಯಾರಿಸಿದವರ ಹಿನ್ನೆಲೆ, ಅದನ್ನು ಮಸೂದೆಯಾಗಿ ತರಲು ಆತುರ ತೋರಿಸುತ್ತಿರುವ ಸರಕಾರದ ವರ್ತನೆ, ಇತ್ಯಾದಿಗಳು ಅನೇಕ ಹಿಂದುಗಳ ಮನಸ್ಸಿನಲ್ಲಿ “ಇದು ಹಿಂದು ವಿರೋಧಿ” ಎನ್ನುವ ಭಾವನೆ ಹುಟ್ಟಿಸಿದೆ. ಕರಡಿನಲ್ಲಿ ಕೂಡಾ, ಯಾವ ಯಾವುದನ್ನು “ಮೂಢ ನಂಬಿಕೆ” ಎಂದು ಪರಿಗಣಿಸಲಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಹೀಗಿದ್ದಾಗ್ಯೂ ಅದನ್ನು ಮಸೂದೆಯಾಗಿ ತರಬೇಕೆಂದು ಮುಖ್ಯಮಂತ್ರಿಯವರಿಗೆ ಆತುರ!

    ಚುನಾವಣೆಯ ಸಂದರ್ಭದಲ್ಲೆಲ್ಲಾ ಇವರು “ಜಾತ್ಯಾತೀತ” ಎನ್ನುವ ಹೆಸರಿನಲ್ಲಿ ಮಾಡುವ ಮುಸಲ್ಮಾನ ತುಷ್ಟೀಕರಣ, ಇವರ ಪಕ್ಷದ ರಾಷ್ಟ್ರೀಯ ನಾಯಕರು ತೋರಿಸಿರುವ ಹಿಂದು ವಿರೋಧ, ಇಂತಹ ಅನೇಕ ಕಾರಣಗಳು, ಹಿಂದುಗಳ ಮನಸ್ಸಿನಲ್ಲಿ, ಈ ಮಸೂದೆಯು ಅನುಮಾನಗಳನ್ನು ಹುಟ್ಟುಹಾಕಿವೆ.
    ಇಷ್ಟೆಲ್ಲಾ ವಾದವಿವಾದಗಳು, ಚರ್ಚೆಗಳು ನಡೆದರೂ, ಕರಡನ್ನು ಪರಿಷ್ಕರಿಸಿ, “ಮೂಢ ನಂಬಿಕೆ” ಯಾವುದೆನ್ನುವದನ್ನು ಸ್ಪಷ್ಟಪಡಿಸಲು ಸರಕಾರ/ಕರಡು ಬರೆದವರು ಪ್ರಯತ್ನಿಸಿಲ್ಲ. ಅವರು ಇವನ್ನೆಲ್ಲಾ ಸ್ಪಷ್ಟಪಡಿಸುವವರೆಗೂ, ಈ ರೀತಿಯ ಅನುಮಾನಗಳು ಮುಂದುವರೆಯುತ್ತವೆ.
    ಹೀಗಾಗಿ, ಕರಡಿನಲ್ಲಿ ಏನಿದೆ ಎನ್ನುವುದಕ್ಕಿಂತ, ಅದನ್ನು ತಯಾರಿಸಿದವರ ಉದ್ದೇಶವೇ ಇಲ್ಲಿ ಮುಖ್ಯವಾಗುತ್ತದೆ; ತಮಗೆ ಯಾವುದೇ ದುರುದ್ದೇಶವಿಲ್ಲ ಎನ್ನುವುದನ್ನು ತೋರಿಸಿಕೊಡಬೇಕಾದದ್ದು ಅವರ ಕರ್ತವ್ಯ.

    ಉತ್ತರ
    • Maaysa
     ನವೆಂ 23 2013

     ಕರುಡಿನಲ್ಲಿರುವ ಅಂಶಗಳಲ್ಲಿ ನನಗೆ ಯಾವ ಹಿಂದೂ ವಿರೋಧಿ ಅಂಶಗಳು ಕಂಡಿಲ್ಲ.

     [[ಅನೇಕ ಹಿಂದುಗಳ ಮನಸ್ಸಿನಲ್ಲಿ “ಇದು ಹಿಂದು ವಿರೋಧಿ” ಎನ್ನುವ ಭಾವನೆ ಹುಟ್ಟಿಸಿದೆ]]

     ಇಂತಹ ಬರಹಗಳು ಸುಳ್ಳು ಸುಳ್ಳೇ ಎಬ್ಬಿಸಿಹ ಗುಲ್ಲಿಂದ.

     ಮಸೂದೆಯು ವಿಧಾನಸಭೆಯಲ್ಲಿ ಊರ್ಜಿತವಾದರೂ ತಾವು ಅನ್ಯಾಯವನ್ನು ತೋಡಿಕೊಳ್ಳಲು ನ್ಯಾಯಾಲಯಕ್ಕೆ ಹೋಗಬಹುದು. ಅದನ್ನು ಬಿಟ್ಟು ಸುಳ್ಳು ಹೇಳಿ ಜನರಿಗೆ ಮೋಸಮಾಡುವುದು ಕೆಟ್ಟ ಬುದ್ಧಿ.

     ಉತ್ತರ
     • Nagshetty Shetkar
      ನವೆಂ 23 2013

      Third rate thinking by Kumar. His article is illogical and silly.

      ಉತ್ತರ
      • Nagshetty Shetkar
       ನವೆಂ 23 2013

       Even Ghent Guru Balagangadhara is of the opinion that rituals are meaningless. Pity Mr. Kumar hasn’t read his Guru and retired CSLC researchers like Shanmookha haven’t educated him. Look at him making a lost case for rediscovering meaning of rituals! Poor guy.

       ಉತ್ತರ
       • ನವೆಂ 23 2013

        ರೀ ಶೆಟ್ಕರ್, ಯರ್ಯಾರೊನ್ನೋ ಯಾಕ್ರೀ ನಮ್ಮೊಂದಿಗೆ ಗಂಟು ಹಾಕ್ತೀರಿ… ನಾನು ಮತ್ತು ನಮ್ಮಂತವರು ಸಂಶೋಧನೆಯಿಂದ ನಿವೃತ್ತಿ ಹೊಂದಿದ್ದೇವೆ ಎಂದು ನಿಮಗೇನಾದ್ರೂ ಕನಸು ಬಿದ್ದು, ನೀವು ನಿಮ್ಗುರು ಎಲ್ಲಾ ಸೇರ್ಕೊಂಡು ಏನಾದ್ರೂ ಪಾರ್ಟಿ ಸೆಲಬ್ರೇಟ್ ಮಾಡಿದ್ರಾ???? ಹಾಗೇನೂ ಹಗಲುಗನಸು ಕಾಣಬೇಡಿ. ನಮ್ಮ ಸಂಶೋಧನೆ ನಿರಾತಂಕವಾಗಿ ನಡೀತಿದೆ.

        ಬೇರೆ ವಾದದಲ್ಲಿರುವ ‘ನೊಣ’ದಂತ ಹುಳುಕುಗಳನ್ನು ತೋರಿಸುವ ಮೊದಲು ನೀವು ಮತ್ತು ನಿಮ್ಮ ಗುರುವಿನ ವಾದಗಳಲ್ಲಿರುವ ಹೆಗ್ಗಣ (ಅದೂ ಡೈನೋಸಾರ್ ಗಾತ್ರದ) ಬಿದ್ದಿರುವುದನ್ನು ನೋಡಿಕೊಳ್ಳುವ ಬುದ್ದಿ ಬೆಳಸಿಕೊಳ್ಳಿ ಸಾಕು. ಅದೂ 2-3 ನೂರು ವರ್ಷಗಳ ಹಿಂದಿನ ಓರಿಯಂಟಲಿಸಂನಲ್ಲಿ ಹುಟ್ಟಿ ಎರಡು ದಶಕಗಳ ಹಿಂದೆಯೇ (ವಸಾಹತ್ತೋತ್ತರವಾದದ ಬೆಳವಣಿಗೆಯೊಂದಿಗೆ) ಸತ್ತು ಬಿದ್ದು ಕೊಳೆತು ಹೋಗಿರುವ ದೈತ್ಯ ಹೆಗ್ಗಣವನ್ನು ನಾರುತ್ತಿರುವ ಮಸಾಲೆ ಸೇರಿಸಿ ಮೃಷ್ಟಾನ್ನ ಅಂತ ನೀವೂ ನಿಮ್ಗುರು ಸೇರ್ಕೊಂಡು ಚಪ್ಪರಿಸುತ್ತಿದ್ದರೆ ವಿದ್ವಜ್ಜನಿರಿಗಿರಲಿ, ಸಾಮಾನ್ಯರಿಗೂ ಅಸಹ್ಯ ಮತ್ತು ವಾಕರಿಕೆ ಎರಡೂ ಬರುತ್ತಿದೆ.

        ಸಾಮಾನ್ಯ ಓದುಗರ ಒಂದು ಸಣ್ಣ ತಾರ್ಕಿಕ ಪ್ರಶ್ನೆಗೂ ಉತ್ತರಿಸಲಾಗದೆ ಇಲ್ಲದ ನೆಪ ಇಲ್ಲವೇ ವೈಯುಕ್ತಿಕ ಆರೋಪಗಳೊಂದಿಗೆ ಜಾರಿಕೊಳ್ಳುವ ದೌರ್ಬಲ್ಯವಿರುವವರು ಸುಮ್ಮನೆ ಸಂಶೋಧರನ್ನೇಕೆ ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ. ಆಮೇಲೆ, ಇರುವ ಮೂರುಕಾಸಿನ ಮರ್ಯಾಧೆಯೂ ಹರಾಜಗುತ್ತದೆ. ನಿಮಗದಿಲ್ಲದಿದ್ದರೂ ನಿಮ್ಮಗುರುವಿಗೆ ಇದೆ ಅಂದುಕೊಂಡಿದ್ದೇನೆ. ಅವರನ್ನಾದರೂ ಮರ್ಯಾಧೆಯಿಂದಿರಲು ಬಿಡಿ.

        ಉತ್ತರ
        • Nagshetty Shetkar
         ನವೆಂ 23 2013

         ಷಣ್ಮುಖ, ಯಾಕ್ರೀ ರಾಂಗ್ ಆಗಿದ್ದೀರಿ??? ವಸ್ತುನಿಷ್ಠವಾಗಿ ಚರ್ಚೆ ಮಾಡಿ. ನೋಡಿ ಕುಮಾರ್ ಅವರು ಸದರಿ ಲೇಖನದಲ್ಲಿ ಹೀಗೆ ಬರೆದಿದ್ದಾರೆ: “ಹಿಂದುಗಳಲ್ಲಿರುವ ಅನೇಕ ಆಚರಣೆಗಳು ಹೊರನೋಟಕ್ಕೆ ಅರ್ಥವಿಲ್ಲದ್ದೆಂದು ಗೋಚರಿಸಬಹುದು. ಆದರೆ, ಅವು ಅರ್ಥವಿಲ್ಲದ್ದೆಂದು ನಾವು ನಿರ್ಧಾರಕ್ಕೆ ಬಂದುಬಿಟ್ಟರೆ, ನಾವೇ “ಮೂಢ”ರಾಗಿ ಬಿಡುತ್ತೇವೆ! ಅವುಗಳ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡಲಾಗಿಲ್ಲ ಅಷ್ಟೇ. ” ನಿಮ್ಮ ಗುರು ಬಾಲು ಅವರು ಕುಮಾರ್ ಅವರ ಈ ಅಭಿಪ್ರಾಯವನ್ನು ಒಪ್ತಾರೇನು? ಭಾರತದ ಸಂಪ್ರದಾಯಗಲ್ಲಿ ಇರುವ ಆಚರಣೆಗಳಿಗೆ ಅರ್ಥ ಇಲ್ಲ, ಅರ್ಥ ಹುಡುಕುವುದು ಪ್ರೋಟೆಸ್ಟೆಂಟ್ ಮಾದರಿಯ ತಪ್ಪು ಅಂತ ನಮ್ಮ ಗುರುಗಳು ಹೇಳಿದ್ದಾ ನಿಮ್ಮ ಗುರುಗಳು ಹೇಳಿದ್ದಾ?

         ಉತ್ತರ
         • ಎ. ಷಣ್ಮುಖ
          ನವೆಂ 23 2013

          ಅವರಿವರ ಒಪ್ಪಿಗೆ ತಗೊಂಡು ತಮಗೇನು ಆಗಬೇಕು. ತಮ್ಮ ವಿಚಾರ ಇಟ್ಕೊಂಡು ಏನು ಬೇಕಾದರೂ ಬರಕೊಳ್ಳಿ. ತಮ್ಮೊಂದಿಗೆ ಚರ್ಚೆಗೆ ನಾವು ಯಾರೂ ಬಂದಿಲ್ಲ, ಬರೋದೂ ಇಲ್ಲ. ನಮ್ಮನ್ನು ವಿನಾಕಾರಣ ಕೆಣಕೋದು ಬೇಡಾ, ಅಷ್ಟೆ. ನಿಮ್ಮ ಪಾಂಡಿತ್ಯ ಮುಂದುವರಿಸಿ.

          ಉತ್ತರ
      • Maaysa
       ನವೆಂ 23 2013

       ಕನ್ನಡದಲ್ಲಿ ಬರೆಯಿರಿ.

       ಉತ್ತರ
       • Nagshetty Shetkar
        ನವೆಂ 23 2013

        ಮಾಯ್ಸ, ಇಂಗ್ಲೀಷಿನಲ್ಲಿ ಬರೆದದ್ದು ನಿಮಗೆ ಅರ್ಥ ಆಗಲಿಲ್ಲ ಅಂದರೆ ಬಿಡಿ, ಕುಮಾರ್ ಓದಿ ಅರ್ಥ ಮಾಡಿಕೊಂಡರೆ ಸಾಕು.

        ಉತ್ತರ
        • Maaysa
         ನವೆಂ 23 2013

         ನಿಮ್ಮ ಉತ್ತರವು ನನ್ನ ಮಾತಿಗೆ ಇತ್ತು.

         ಇಂಗ್ಲಿಷ್ ಭಾಷೆಯಲ್ಲಿ ಚರ್ಚೆಯನ್ನು ಮಾಡಲು ಇದಕ್ಕಿಂತ ಒಳ್ಳೆಯ ವೇದಿಕೆಗಳಿವೆ. ನಾನು ಅಲ್ಲಿ ಆ ಭಾಷೆಯಲ್ಲೇ ವ್ಯವಹರಿಸೋದು.

         ಇದು ಕನ್ನಡ ಭಾಷೆಯ ತಾಣ ಎಂದು ಇಲ್ಲಿ ಕನ್ನಡ ಬಳಸಬೇಕು ಎಂಬ ಕಟ್ಟಳೆ.

         ಉತ್ತರ
         • ನವೀನ
          ನವೆಂ 25 2013

          ಮಾಯ್ಸಣ್ಣ ಅವತ್ತಿಂದ ‘ಕನ್ನಡದಲ್ಲಿ ಬರೆಯಿರಿ’ ಅಂತ ಹೇಳ್ತಾನೆ ಇದ್ರೂನು ಈ ಶೆಟ್ಕರ್ ಸರ್ ಮತ್ತೆ ಮತ್ತೆ ಇಂಗ್ಲೀಷಿನಲ್ಲಿ ಬರೆಯುವುದು ವಿಚಿತ್ರವಾಗಿದೆ.ಅವರಿಗೆ ಕನ್ನಡ ಬರೆಯಲು ಕೀಳರಿಮೆಯಿರಬೇಕೆನಿಸುತ್ತದೆ,ಇದನ್ನು ಯಾರಾದರೂ ನಿವಾರಿಸಬೇಕಾದ ಅಗತ್ಯವಿದೆ

          ಉತ್ತರ
          • Maaysa
           ನವೆಂ 25 2013

           ಈ ಕುರಿತ ಅಂಕೆಯು ತಾಣದ ವ್ಯವಸ್ಥಾಪಕರಿಗೆ ಬಿಟ್ಟಿದ್ದು.

           ನಾವು ಕೇವಲ ದೂರಬಹುದು.

          • ನವೆಂ 25 2013

           > ಮಾಯ್ಸಣ್ಣ ಅವತ್ತಿಂದ ‘ಕನ್ನಡದಲ್ಲಿ ಬರೆಯಿರಿ’ ಅಂತ ಹೇಳ್ತಾನೆ ಇದ್ರೂನು ಈ ಶೆಟ್ಕರ್ ಸರ್ ಮತ್ತೆ ಮತ್ತೆ
           ನಿಜಕ್ಕೂ ನಿದ್ರಿಸಿದವನನ್ನು ಎಬ್ಬಿಸಬಹುದು; ನಿದ್ರಿಸಿದಂತೆ ನಟಿಸುತ್ತಿರುವವನನ್ನು……..?

          • Maaysa
           ನವೆಂ 25 2013

           Kumar ನೀವು ಕೂಡ ಇಲ್ಲಿ ಅಕನ್ನದಭಾಷೆಯಲ್ಲಿ ವ್ಯವಹರಿಸಕೂಡದು ಎಂದು ..

          • ನವೆಂ 25 2013

           > Kumar ನೀವು ಕೂಡ ಇಲ್ಲಿ ಅಕನ್ನದಭಾಷೆಯಲ್ಲಿ ವ್ಯವಹರಿಸಕೂಡದು ಎಂದು ..

           ಮಹೇಶ್,
           ನಾನು ಶೇಟ್ಕರ್ ಅವರ ಆಂಗ್ಲ ಪ್ರತಿಕ್ರಿಯೆಗೆ ಕೆಲವೊಮ್ಮೆ ಆಂಗ್ಲ ಭಾಷೆಯಲ್ಲೇ ಉತ್ತರಿಸಿದೆ (ಅವರಿಗೆ ಕನ್ನಡ ಅರ್ಥವಾಗುತ್ತಿಲ್ಲ ಎಂದು ಭಾವಿಸಿ).
           ಅದನ್ನು ಬಿಟ್ಟರೆ, ನಾನು ಹೆಚ್ಚಿನೆಲ್ಲಾ ಸಮಯದಲ್ಲೂ ಕನ್ನಡದಲ್ಲೇ ಬರೆದಿರುವೆ.
           ಆಗಲಿ, ಇನ್ಮುಂದೆ ‘ನಿಲುಮೆ’ಯಲ್ಲಿ ಕನ್ನಡದಲ್ಲಿ ಮಾತ್ರ ಬರೆಯುವೆ.

          • Maaysa
           ನವೆಂ 25 2013

           [[ಆಗಲಿ, ಇನ್ಮುಂದೆ ‘ನಿಲುಮೆ’ಯಲ್ಲಿ ಕನ್ನಡದಲ್ಲಿ ಮಾತ್ರ ಬರೆಯುವೆ.]]

           ಒಳ್ಳೇದು. ಧನ್ಯವಾದ!

      • ನವೆಂ 24 2013

       > Third rate thinking by Kumar. His article is illogical and silly
       ಸ್ವಾಮಿ ಶೇಟ್ಕರ್ ಅವರೇ,
       ನಿಮಗೆ ಲೇಖನ ನಿಜಕ್ಕೂ ಅರ್ಥವಾಗಿದ್ದರೆ, ಚಿಂತನೆ ಎಲ್ಲಿ ಸರಿಯಾಗಿಲ್ಲ, ತರ್ಕಬದ್ಧವಾಗಿಲ್ಲ, ಎನ್ನುವುದನ್ನು ಆಯಾ ವಾಕ್ಯಗಳನ್ನು ಉದ್ಧರಿಸಿ ವಿವರಿಸಿದರೆ, ಚರ್ಚೆ ಮಾಡಬಹುದು.
       ಅದು ಬಿಟ್ಟು, ಬಾಯಿಗೆ ಬಂದಂತೆ ಹರಟಿದರೆ, ನಿಮಗೆ ಈ ಲೇಖನ ಅರ್ಥವಾಗಿಲ್ಲ ಅಥವಾ ನೀವು ಅದನ್ನು ಅರ್ಥ ಮಾಡಿಕೊಳ್ಳುವ ಮಟ್ಟಕ್ಕೆ ಬೆಳೆದಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ.

       > Even Ghent Guru Balagangadhara is of the opinion that rituals are meaningless.
       > Pity Mr. Kumar hasn’t read his Guru
       ನಿಮಗಿಷ್ಟ ಬಂದವರನ್ನು ನನ್ನ ‘ಗುರು’ ಮಾಡುತ್ತಿರುವಿರಿ. ಹಿಂದಿನ ಚರ್ಚೆಗಳಲ್ಲಿ, “ಕುಮಾರ್ ಎನ್ನುವುದು Fake Id” ಎಂದೆಲ್ಲಾ ಗೋಳಾಡಿದಿರಿ. ಈಗ, “ಕುಮಾರ್ ಅವರ ಗುರುಗಳು….” ಎಂದು ಹುಡುಕುತ್ತಿರುವಿರಿ!!
       ನಿಮಗೆ ವಿಚಾರ, ಚರ್ಚೆಗಳಿಗಿಂತ, ಚರ್ಚೆ ಮಾಡಿದವರ ಕುರಿತಾಗಿಯೇ ಹೆಚ್ಚು ಆಸಕ್ತಿಯಿರುವಂತೆ ಕಾಣುತ್ತಿದೆ! ಅಥವಾ, ಚರ್ಚೆ ಮಾಡಿದವರನ್ನೇ ‘ಮುಗಿಸಿಬಿಟ್ಟರೆ’ ಚರ್ಚೆಯೇ ಮುಗಿದಂತೆ ಎಂದು ತಿಳಿದಿರುವವರ ಗುಂಪಿಗೆ ನೀವು ಸೇರಿರುವವರೇ!?

       ಉತ್ತರ
       • Nagshetty Shetkar
        ನವೆಂ 25 2013

        ಪ್ರಿಯ ಕುಮಾರ, ನಾನು ನಿಮ್ಮ ಲೇಖನದ ಮುಖ್ಯ ದೌರ್ಬಲ್ಯವನ್ನು ಈಗಾಗಲೇ ಗುರುತಿಸಿ ನಿಮ್ಮ ಗಮನಕ್ಕೆ ತಂದಿದ್ದೇನೆ. ಮತ್ತೊಮ್ಮೆ ಹೇಳುತ್ತೇನೆ ಗಮನವಿಟ್ಟು ಕೇಳಿಸಿಕೊಳ್ಳಿ. “ಭಾರತೀಯ ಸಂಪ್ರದಾಯಗಳಲ್ಲಿ ಇರುವ ಆಚರಣೆಗಳಿಗೆ ಅರ್ಥ ಇದೆ ಎಂಬುದು ತಪ್ಪು ಗ್ರಹಿಕೆ. ಏಕೆಂದರೆ ಆಚರಣೆಗಳು ಅರ್ಥಹೀನ. ಅವುಗಳಲ್ಲಿ ಇಲ್ಲದ ಅರ್ಥವನ್ನು ಹುಡುಕುವುದು ಇನ್ನೂ ದೊಡ್ಡ ಪ್ರಮಾದ. ಹಾಗೆ ಮಾಡುವುದರಿಂದ ಆಚರಣೆಗಳು ಇನ್ನಷ್ಟು ಹಾಸ್ಯಾಸ್ಪದವಾಗುತ್ತವೆ ಹಾಗೂ ಸಂಪ್ರದಾಯಗಳು ಮತ್ತಷ್ಟು ಸೆಮೆಟಿಕ್ ಸ್ವರೂಪ ಪಡೆದುಕೊಳ್ಳುತ್ತವೆ.” ಇದು ನನ್ನ ಸಂಶೋಧನೆ ಅಲ್ಲ; ನಿಲುಮೆಯ ಮಾನಸ ಗುರು ಬಾಲಗಂಗಾಧರ ರಾಯರ ಅಂಬೋಣ.

        ಉತ್ತರ
        • Maaysa
         ನವೆಂ 25 2013

         [[ಏಕೆಂದರೆ ಆಚರಣೆಗಳು ಅರ್ಥಹೀನ. ಅವುಗಳಲ್ಲಿ ಇಲ್ಲದ ಅರ್ಥವನ್ನು ಹುಡುಕುವುದು ಇನ್ನೂ ದೊಡ್ಡ ಪ್ರಮಾದ. ಹಾಗೆ ಮಾಡುವುದರಿಂದ ಆಚರಣೆಗಳು ಇನ್ನಷ್ಟು ಹಾಸ್ಯಾಸ್ಪದವಾಗುತ್ತವೆ ಹಾಗೂ ಸಂಪ್ರದಾಯಗಳು ಮತ್ತಷ್ಟು ಸೆಮೆಟಿಕ್ ಸ್ವರೂಪ ಪಡೆದುಕೊಳ್ಳುತ್ತವೆ]]

         ಉತ್ತಮವಾದ ಟೀಕೆ.

         ಆಚರಣೆಗಳು ಧರ್ಮದ ತತ್ವಜ್ಞಾನದ ಬಿಂಬವಾಗಬೇಕು, ಅದರ ಉಲ್ಟಾ ಅಲ್ಲ!

         ಉದಾರಣೆ : ಊಟ ಮಾಡಬೇಕು ಎಂಬುದು ಗುರಿ. ಅದನ್ನು ಬಾಳೆಲೇ ಮೇಲೆ ಮಾಡಿದರು, Knief ಮತ್ತು fork ಅಲ್ಲಿ ತಿಂದರೂ ಒಂದೇ. ಅದರಲ್ಲಿ ಉತ್ತಮ ಹಾಗು ನೀಚ ಹುಡುಕುವುದು ಅವಿವೇಕ!

         ಉತ್ತರ
         • Nagshetty Shetkar
          ನವೆಂ 25 2013

          ಆದುದರಿಂದಲೇ ನಾನು ಮಡೆಸ್ನಾನವನ್ನು ನಿಷೇಧಿಸುವುದರಿಂದ ಪ್ರಯೋಜನವಿಲ್ಲ ಎಂದದ್ದು. ವೈಜ್ನಾನಿಕ ಅಧ್ಯಯನದ ಮೂಲಕ ಮಡೆಸ್ನಾನ ಆಚರಣೆಯು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ನಿರೂಪಿಸುವ ತನಕ ಸರ್ಕಾರವು ಮಡೆಸ್ನಾನವನ್ನು ಬ್ಯಾನ್ ಮಾಡಲಾಗದು.

          ಉತ್ತರ
          • Maaysa
           ನವೆಂ 25 2013

           ^^ ಹುಂಬ ಮಾತು.

          • ನವೆಂ 25 2013

           “^^ ಹುಂಬ ಮಾತು”

           ???

         • Nagshetty Shetkar
          ನವೆಂ 25 2013

          ಸರಿ. ಆದರೆ ಪ್ಲಾಸ್ಟಿಕ್ ಚಾಕು ಹಾಗೂ ಫೋರ್ಕುಗಳಿಂದ ಮಾಲಿನ್ಯ ಹೆಚ್ಚುತ್ತಿದೆ ಅಂತ ವೈಜ್ಞಾನಿಕ ಅಧ್ಯಯನವು ಸಾಬೀತುಪಡಿಸಿದರೆ ಸರಕಾರ ಪ್ಲಾಸ್ಟಿಕ್ ಚಾಕು ಹಾಗೂ ಫೋರ್ಕುಗಳ ಬಳಕೆಯನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನಿಯಂತ್ರಿಸಬಹುದು.

          ಉತ್ತರ
          • Maaysa
           ನವೆಂ 25 2013

           ಎಲ್ಲ ಪ್ಲಾಸ್ಟಿಕ್ ಗಳು ಹಾನಿಕಾರಕವಲ್ಲ.

          • ನವೆಂ 25 2013

           ಪ್ಲಾಸ್ಟಿಕ್ ಚಾಕು ಹಾಗೂ ಫೋರ್ಕುಗಳಿಂದ ಮಾಲಿನ್ಯ ಹೆಚ್ಚುತ್ತಿದೆ ಅಂತ ವೈಜ್ಞಾನಿಕ ಅಧ್ಯಯನವು ಸಾಬೀತುಪಡಿಸಿದರೆ ಸರಕಾರ ಹಾನಿಕಾರಕ ಪ್ಲಾಸ್ಟಿಕ್ ಚಾಕು ಹಾಗೂ ಫೋರ್ಕುಗಳ ಬಳಕೆಯನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ನಿಯಂತ್ರಿಸಬಹುದು.

        • Mukhesh
         ನವೆಂ 25 2013

         ಶೆಟ್ಕರರು ಇದನ್ನು ಒಪ್ಕೊಂಡಿದ್ದಾರೆಅಂದ್ರೆ ಬಾಲಗಂಗಾಧರ ಹೇಳಿರುವ ವೈಧಿಕಶಾಹಿ, ಪುರೋಹಿತಶಾಹಿ, ಜಾತಿವ್ಯವಸ್ಥೆ, ವಚನಗಳ, ಹಿಂಧೂ ರಿಲಿಜನ್ ಕುರಿತ ವಿವರಣೆಗಳನ್ನೂ ಒಪ್ಪಿಕೊಂಡಿದ್ದಾರೆ ಎಂದಾಯ್ತು!!! ಇಲ್ಲವೇ ‘ಅನಕೂಲ ಸಿಂಧೂ’ ಉಲ್ಲೇಖ ಮಾಡುವುದನ್ನು ಬಿಟ್ಟು ತಾವು ಒಪ್ಪಿರುವ ವಾದದ (ತಮ್ಮ ಗುರುವಿನ) ನೆಲೆಯಿಂದ ಪ್ರಶ್ನಿಸುವ ಚಾತಿ/ಬೌದ್ದಿಕತೆ ತೋರಿಸಬೇಕು. ಇಲ್ಲಾ ಅಂದ್ರೆ ಇದು ‘ಅನುಕೂಲಸಿಂಧೂ’ ಅಸಂಬದ್ದ ಪ್ರಲಾಪವಷ್ಟೇ, ಅಲ್ಲದೆ ಬೌದ್ದಿಕ ದಿವಾಳಿತನ ಕೂಡ..

         ಉತ್ತರ
         • ನವೆಂ 25 2013

          ಕುಮಾರ ಇದನ್ನು ಒಪ್ಕೊಂಡಿದ್ದಾರ?

          ಉತ್ತರ
          • Mukhesh
           ನವೆಂ 25 2013

           ತಮ್ಮ ಕಥೆ ಹೇಳಿ. ಕುಮಾರರ ವಿಚಾರ ಅವ್ರಿಗೆ ಬಿಟ್ಟದ್ದು. ಬಾಲಗಂಗಾಧರರನ್ನು ಇಲ್ಲಿಗೆ ಎಳತಂದದ್ದು ತಾವಲ್ಲವೇ??? ತಮ್ಮ ಬೌದ್ದಿಕ ಬದ್ದತೆಯನ್ನು ತೋರಿಸಿ.

          • ನವೆಂ 25 2013

           ಕುಮಾರರ ಕಥೆ ಹೇಳಿ. ಅವ್ರ ಬೌದ್ದಿಕ ಬದ್ದತೆ? ಅವ್ರ ಲೇಖನ “ಸುಳ್ಳು ಹೇಳಬೇಕೆಂದೇ ನಿರ್ಧರಿಸಿ ಬರೆದ ಬರಹ”.

          • Mukhesh
           ನವೆಂ 25 2013

           ಅದನ್ನು ತಾವು ಒಪ್ಪಿಕೊಂಡಿರುವ ಬೌದ್ದಿಕ ಹಿನ್ನಲೆಯಿಂದ ತೋರಿಸಿ. ತಮಗೆ ಒಪ್ಪಿತವಲ್ಲದವರ ವಿಚಾರಗಳನ್ನು ಅನಕೂಲಸಿಂಧುವಿನಂತೆ ಬಳಸುವುದು ತಮ್ಮ ಬೌದ್ದಿಕ ಅಪ್ರಾಮಣಿಕತೆಯನ್ನು ತೋರಿಸುತ್ತದೆ, ಅಷ್ಟೇ.

          • Nagshetty Shetkar
           ನವೆಂ 25 2013

           ಕುಮಾರ ಅವರ ವಾದದ ಬಗ್ಗೆ ಸಿ ಎಸ್ ಎಲ್ ಸಿ ಸಂಶೋಧಕರ ಮೌನ ಅವ್ರ ಬೌದ್ಧಿಕ ಪ್ರಾಮಾಣಿಕತೆಯನ್ನು ಪ್ರಶ್ನಿಸಿದೆ. ಷಣ್ಮುಖ ಅವರು ‘ನೊಣ’ vs ‘ಹೆಗ್ಗಣ’ ಅಂತ ಜಾಣತನದ ಮಾತು ಆಡಿ ಜಾರಿಕೊಂಡರು. ನೀವು ನನ್ನ ಹಿಂದೆ …….. ಬಿದ್ದಿದ್ದೀರಿ.

          • Mukhesh
           ನವೆಂ 25 2013

           ಇಲ್ಲಿ ಯಾರು ಲೇಖನ ಬರೆದರೂ ಕಾಲು ಕೆರಕೊಂಡು ಬರ್ತಾ ಇರೋಕೆ ಅವರು ನಿಮ್ಮ ಹಾಗೆ ಬಿಟ್ಟಿ ಬಿದ್ದಿದ್ದಾರಾ?? ಅವರ ಲೇಖನಗಳಿಗೆ ಇಲ್ಲ ಅವರ ವಿಚಾರಗಳನ್ನೆತ್ತಿ ಪ್ರಶ್ನೆ ಮಾಡಿದರೆ ಅವರು ಪ್ರತಿಕ್ರಿಯಿಸ್ತಾರೆ. ಅಂದ ಹಾಗೆ ತಮ್ಮ ಅರಚಾಟಕ್ಕೆ ತಮ್ಮ ಬೌದ್ದಿಕತೆ ದಿವಾಳಿಯಾಯಿತೆ? ಬೌದ್ದಿಕ ಪ್ರಾಮಾಣಿಕತೆ ಇದೆ ಎಂದು ಸಾಭೀತು ಮಾಡಿ…. ಆಮೇಲೆ ಬೊ…. ತ್ತಾ ಇರೋದು ಯಾರು ಎಂದು ಗೊತ್ತಾಗುತ್ತೆ…. ಅಂದ ಹಾಗೆ ತಮ್ಮ ಬೌದ್ದಿಕ ನಿಲುವಿಗೆ ಪ್ರಾಮಾಣಿಕವಾಗಿರಿ ಎಂದರೆ ಅಸಭ್ಯ ವೈಯುಕ್ತಿಕ ನಿಂದನೆಗಿಳಿಯುತ್ತೀರಲ್ಲಾ!!!! ಶರಣರೆಂದುಕೊಳ್ಳುವ ತಮಗೆ ಅಷ್ಟು ಪ್ರಾಮಾಣಿಕತೆ ಬೇಡವೇ?? !!!

          • Nagshetty Shetkar
           ನವೆಂ 25 2013

           ನೀವು ಯಾಕೆ ಕುಮಾರ ಅವರ ಪರ ಬ್ಯಾಟಿಂಗ್ ಮಾಡ್ತಿದ್ದೀರಿ? ಅವರ ಲೇಖನದಲ್ಲಿರುವ ‘ನೊಣ’ ಅವರೇ ಕ್ಲೀನ್ ಮಾಡಲಿ ಬಿಡಿ. ನಿಮಗೇಕೆ ಅದರ ಉಸಾಬರಿ?

          • Mukhesh
           ನವೆಂ 25 2013

           (ನಾನು ಒಪ್ಪಿರುವ) ಆದರೆ ತಾವೇ ಒಪ್ಪದಿರುವವರ ವಾದಗಳನ್ನು ತಮ್ಮ ಟೀಕೆಗೆ ಬಳಸಿದ್ದು ಅಪ್ರಾಮಾಣಿಕತೆ ಅಲ್ವೇ??? ತಾವು ಒಪ್ಪದ ಬಾಲಗಂಗಾಧರರನ್ನು ಉಲ್ಲೇಖಿಸಿದ ತಮ್ಮ ನೈತಿಕತೆಯ ಬಗ್ಗೆ ನನ್ನ ಪ್ರಶ್ನೆ. ಅದಕ್ಕೆ ಪ್ರಾಮಾಣಿಕವಾಗಿ ಉತ್ತರಿಸಿ. (ತಮಗೆ ಮಾತ್ರವೇ ಇಲ್ಲಿ ಪ್ರಶ್ನಿಸುವ ಗುತ್ತಿಗೆ ನೀಡಿಲ್ಲ, ಅಲ್ಲವೇ???)

          • Nagshetty Shetkar
           ನವೆಂ 26 2013

           ಇಲ್ಲಿ ಚರ್ಚೆಯ ವಿಷಯ ಕುಮಾರ್ ಅವರ ಲೇಖನ, ನನ್ನ ಪ್ರಾಮಾಣಿಕತೆ ಅಲ್ಲ. ಈಗ ಹೇಳಿ ಆಚರಣೆಗಳಿಗೆ ಅರ್ಥ ಹುಡುಕುವುದು ಅರ್ಥಪೂರ್ಣವೋ ಅಲ್ಲವೋ ಅಂತ.

          • Mukhesh
           ನವೆಂ 26 2013

           ಚರ್ಚೆಯಲ್ಲಿ ತೊಡಗುವವನಿಗೆ ಬೌದ್ದಿಕ ಬದ್ದತೆ ಇಲ್ಲದಿದ್ದಾಗ ಈ ರೀತಿ ಊಸರವಳ್ಳಿತರ ಬಣ್ಣಬದಲಾಯಿಸುತ್ತಿರುತ್ತೀರಿ. ಆಗ ಚರ್ಚೆಯ ವಿಚಾರದ ಟೀಕೆಗಾಗಿ ಯಾರನ್ನು ಬೇಕಾದರೂ ಬಳಸಿಕೊಳ್ಳುವ ದಾರಿದ್ರ್ಯ ತೋರಿಸುವುದಲ್ಲದೆ ಅದನ್ನು ಮೊಂಡುತನದಿಂದ ಸಮರ್ಥಿಸಿಯೂ ಕೊಳ್ಳುತ್ತಿದ್ದೀರಿ. ಒಂದು ವಿಚಾರದ ಬಗ್ಗೆ ಅರ್ಥಪೂರ್ಣ ಚರ್ಚೆಗೆ ಬೌದ್ದಿಕ ಬದ್ದತೆ ಅತಿಮುಖ್ಯ. ಅದು ನಿಮಗೆ ಕಿಂಚಿತ್ತೂ ಇಲ್ಲ.
           ಒಂದೊಂದು ಸೈದ್ದಾಂತಿಕ ಚೌಕಟ್ಟಿನಲ್ಲಿ ಆಚರಣೆಗಳಿಗೆ ಅರ್ಥ ಇದೆ, ಅರ್ಥ ಇಲ್ಲ, ಉದ್ದೇಶ ಇದೆ-ಇಲ್ಲ ಹೀಗೆ ಬೇರೆ ಬೇರೆ ವಿವರಣೆಗಳು ಇವೆ. ನೀವು ಯಾವುದನ್ನು ಒಪ್ಪುತ್ತೀರಿ ಎನ್ನುವುದು ಯಾವ ಸೈದ್ದಾಂತಿಕ ಚೌಕಟ್ಟನ್ನು ಒಪ್ಪಿದ್ದೀರಿ ಎನ್ನುವುದನ್ನು ಅವಲಂಬಿಸಿದೆ. ಒಂದೊಮ್ಮೆ ನೀವು ‘ಆಚರಣೆಗಳಿಗೆ ಅರ್ಥವಿಲ್ಲ’ ಎನ್ನುವುದನ್ನು ಒಪ್ಪಿದರೆ ಆ ವಿವರಣೆಯ ಹಿನ್ನೆಲೆಯಲ್ಲಿರುವ ಸೈದ್ದಾಂತಿಕ ಚೌಕಟ್ಟನ್ನೂ ಒಪ್ಪಿರಲೇಬೇಕು. ಹಾಗಾಗಿ ನನ್ನ ಪ್ರಶ್ನೆ ನಿಮಗೆ ಆ ಬದ್ದತೆ ಇದೆಯೇ? ನೀವು ಬಾಲಗಂಗಾಧರರ ಸಿದ್ದಾಂತವನ್ನು ಒಪ್ಪಿದ್ದೀರಿಯೇ? ಇಲ್ಲ ತಮ್ಮ ಅನುಕೂಲಕ್ಕಾಗಿ ಒಂದು ವಿವರಣೆಯನ್ನು ಮಾತ್ರ ಕದಿಯುತ್ತಿದ್ದೀರೋ??? ಪ್ರಶ್ನೆ ಇಷ್ಟೆ. (ಆಚರಣೆಗಳು ಅರ್ಥರಹಿತ ಎಂದಷ್ಟೇ ಹೇಳುವುದು ಪ್ರಿಸ್ಟ್ ಸ್ಟಾಲ್; ಬಾಲಗಂಗಾಧರ/ಸಿ.ಎಸ್.ಎಲ್.ಸಿ ಅಲ್ಲ. ಇವರು ಅರ್ಥರಹಿತ ಎನ್ನುವುದಕ್ಕಿಂತ ಹೆಚ್ಚಾಗಿ ಆಚರಣೆಗಳ ಹಿಂದ ಯಾವುದೇ ನಿರ್ಧಿಷ್ಟ ಉದ್ದೇಶವಿರುವುದಿಲ್ಲ/ಫೇತ್ ಇರುವುದಿಲ್ಲ ಎನ್ನುವುದಕ್ಕೆ ಒತ್ತುಕೊಡುತ್ತಾರೆ.)

           ಈಗ ನಿಮ್ಮ ಬೌದ್ದಿಕ ಪ್ರಾಮಾಣಿಕತೆಯನ್ನು ತೋರಿಸಿ ಅದು ಇಲ್ಲಿ ಬಹುಮುಖ್ಯ.

          • Nagshetty Shetkar
           ನವೆಂ 26 2013

           ಸರಿ, ನೀವು ನಿಮ್ಮ ಆಚರಣೆಗಳಿಗೆ ಅರ್ಥ ಹುಡುಕುತ್ತಾ ಕುಳಿತುಕೊಳ್ಳಿ, ಅದರಿಂದ ನನಗಾವ ಬಾಧೆಯೂ ಇಲ್ಲ. ಮಡೆಸ್ನಾನ ಭಾಳ ಅರ್ಥಪೂರ್ಣ ಅಂತ ಕುಕ್ಕೆಗೆ ಹೋಗಿ ಎಂಜಲೆಲೆ ಮೇಲೆ ಹೊರಳಾಡ ಬಯಸಿದರೆ ನಾನೇಕೆ ನಿಮ್ಮನ್ನು ತಡೆಯಲಿ! ನಾನು ಕಸದ ರಾಶಿಯ ಮೇಲೆ ಹೊರಳಾಡುವ ಬೀದಿ ನಾಯಿಗಳನ್ನೂ ತಡೆಯುವವನಲ್ಲ!! ಮುನ್ಸಿಪಾಲಿಟಿ
           ಯವರು ಆಗಾಗ ನನ್ನಂತಹ ನಾಯಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಹಿಡಿದು ಬೋನಿನಲ್ಲಿ ಹಾಕಿ ಎಲ್ಲಿಗೋ ಕರೆದೊಯ್ಯುತ್ತಾರೆ. ಹಾಗೆಯೇ ಮಡೆಸ್ನಾನ ಆಚರಿಸುವವರನ್ನು ನಿಯಂತ್ರಿಸಲು ಸರಕಾರವೇ ಏನಾದರೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ.

          • Nagshetty Shetkar
           ನವೆಂ 26 2013

           ಪ್ರಿಯ ರಾಕೇಶ್, ನಾನು “ಮುನ್ಸಿಪಾಲಿಟಿಯವರು ಆಗಾಗ ಬೀದಿ ನಾಯಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಹಿಡಿದು ಬೋನಿನಲ್ಲಿ ಹಾಕಿ ಎಲ್ಲಿಗೋ ಕರೆದೊಯ್ಯುತ್ತಾರೆ” ಅಂತ ಬರೆದಿದ್ದನ್ನು ತಿರುಚಿ “ಮುನ್ಸಿಪಾಲಿಟಿಯವರು ಆಗಾಗ ನನ್ನಂತಹ ನಾಯಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಹಿಡಿದು ಬೋನಿನಲ್ಲಿ ಹಾಕಿ ಎಲ್ಲಿಗೋ ಕರೆದೊಯ್ಯುತ್ತಾರೆ” ಅಂತ ಪ್ರಕಟಿಸಿದ್ದೀರಿ! ಇದು ಸರಿಯೇ? ಓದುಗರ ಅಭಿಪ್ರಾಯಗಳನ್ನು ತಿರುಚಿ ಪ್ರಕಟಿಸುವ ನಿಮ್ಮ ಬಗ್ಗೆ ನಿಲುಮೆಯ ಓದುಗರು ವಿಶ್ವಾಸ ಇಡಬಹುದೇ? ಅತ್ತ ಧರ್ಮ ಹಾಗೂ ಸನ್ನಡತೆ ಬಗ್ಗೆ ಬರೆಯುವ ನೀವು ಇತ್ತ ಮಾಡುವುದು ಕಂತ್ರಿ ಕೆಲಸ. ನಿಮಗೆ ಎಷ್ಟು ಛೀಮಾರಿ ಹಾಕಿದರೂ ಸಾಲದು.

          • ನವೆಂ 26 2013

           ಕಾಮೆಂಟುಗಳನ್ನು ಮಾಡರೇಟ್ ಮಾಡದಿರುವಾಗ, ನಿಮ್ಮ ಬರಹವನ್ನು ತಿದ್ದಲು ಹೇಗೆ ಸಾಧ್ಯ!?
           ನೀವೇ ಹಾಗೆ ಬರೆದು, ರಾಕೇಶ್ ಅವರ ಮೇಲೆ ಕೂಗಾಡುತ್ತಿರುವುದು, “ಕಂತ್ರಿ ಬುದ್ಧಿ” ಯಾರದು ಎಂದು ಎಲ್ಲರಿಗೂ ಅರಿವಾಗುತ್ತಿದೆ!

          • Nagshetty Shetkar
           ನವೆಂ 26 2013

           ಕಾಮೆಂಟು ಮಾಡರೇಟು ಮಾಡಲ್ಲ ಅಂತ ಬಾಯಲ್ಲಿ ಹೇಳೋದು ಮಾತ್ರ. ಧರ್ಮ ಹಾಗೂ ಸನ್ನಡತೆ ಎಲ್ಲಾ ಬರೆ ಬಾಯಿ ಮಾತು. ಕೃತಿಯಲ್ಲಿ ಮಾತ್ರ ಅದೇ ಹಳೆಯ ಪುರೋಹಿತಶಾಹಿಯ ಖದೀಮತನ.

         • Mukhesh
          ನವೆಂ 26 2013

          ನಿಮ್ಮ ಕೊಳಕುತನದ ಪ್ರದರ್ಶನ ನಿಮ್ಮ ಎಂತಹ ಶರಣ ಎನ್ನುವುದನ್ನು ಸಾಕ್ಷೀಕರಿಸುತ್ತದೆ. ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿಯಂತೆ ಹಾಗೆಯೇ ಇಲ್ಲೊಂದು ಶ್ವಾನಕ್ಕೆ ಸಹ.

          ನೀವು ಹೀಗೆ ವಿಷಯಾಂತರದ ನಾಟಕಮಾಡಿ ಅರಚಿದಷ್ಟೂ ನಿಮ್ಮ ಬೌದ್ದಿಕ ದಾರಿದ್ರ್ಯ ಜಗಜ್ಜಾಹೀರಾಗುತ್ತಿದೆ. ಈ ನಾಟಕ ನೀವು ಎಲ್ಲಾ ಕಡೆ ಮಾಡ್ತಿದ್ದೀರಿ.

          ಮಾಡರೇಟರ್ ರವರ ಗಮನಕ್ಕೆ: ಅಂದ ಹಾಗೆ ನಿಲುಮೆಯ ಓದುಗರು ಬೌದ್ದಿಕ ಬದ್ದತೆಯನ್ನು ಪ್ರಶ್ನಿಸಿದರೆ ಅವರನ್ನು ‘ನಾಯಿ’ ಗಳು ಎಂದು ಜರೆಯುವ ಶೆಟ್ಕರ್ ರ ಹೇಳಿಕೆಗಳು ‘ಅತ್ಯಂತ ಸಭ್ಯ’ ಮಾತುಗಳೆಂದು ಈ ತಾಣದ ಮಾಡೆರೇಟರ್ ರವರ ಅನಿಸಿಕೆಯೇ?

          ಉತ್ತರ
          • Nagshetty Shetkar
           ನವೆಂ 26 2013

           ನಾನು ನಿಮ್ಮನ್ನು ನಾಯಿ ಅಂತ ಕರೆದಿಲ್ಲ ಮಿ. ಕುಮಾರ್. ಅದು ನಿಮ್ಮ ತಪ್ಪು ಗ್ರಹಿಕೆ. ತಿದ್ದಿಕೊಳ್ಳಿ. ನಾಯಿಗಳೆಂದರೆ ನನಗೆ ಬಹಳ ಪ್ರೀತಿ.

          • ನವೆಂ 26 2013

           > ನಾನು ನಿಮ್ಮನ್ನು ನಾಯಿ ಅಂತ ಕರೆದಿಲ್ಲ ಮಿ. ಕುಮಾರ್
           > ಈ ಜಗತ್ತಿನ ಸಕಲ ಜೀವಜಂತುಗಳು ನಮ್ಮ ಬಂಧುಗಳೇ ಅಲ್ಲವೇ ಮಿ. ಕುಮಾರ್?

           ಶೇಟ್ಕರ್ ಅವರೇ,
           ಯಾರು ಪ್ರಶ್ನೆ ಕೇಳಿದ್ದು, ನೀವು ಯಾರಿಗೆ ಉತ್ತರಿಸುತ್ತಿರುವುದು!?

           ನೀವು ಪ್ರಶ್ನೆ ಓದುವುದಿಲ್ಲ, ಓದಿದರೂ ಅದಕ್ಕೆ ಉತ್ತರಿಸದೆ ಮತ್ತೇನೋ ಸಂಬಂಧವಿಲ್ಲದವರ ಹೇಳಿಕೆಗಳನ್ನು ಎಳೆದು ತಂದು ಚರ್ಚೆಯ ದಿಕ್ಕು ತಪ್ಪಿಸುತ್ತಿರುವುದು ಎಲ್ಲರಿಗೂ ತಿಳಿದಿತ್ತು. ಇದೀಗ, ಪ್ರಶ್ನೆ ಕೇಳುತ್ತಿರುವವರೂ ಯಾರು ಎನ್ನುವುದು ನಿಮಗೆ ತಿಳಿಯುವುದಿಲ್ಲ ಎನ್ನುವುದು ತಿಳಿಯುತ್ತಿದೆ!
           ನಿಮ್ಮ ಬಗ್ಗೆ ನಾವು ತಿಳಿದುಕೊಳ್ಳುವುದು ಇನ್ನೂ ತುಂಬಾ ಇದೆ ಎಂದ ಹಾಗಾಯಿತು!!?

          • Mukhesh
           ನವೆಂ 26 2013

           >>>ನಾನು ನಿಮ್ಮನ್ನು ನಾಯಿ ಅಂತ ಕರೆದಿಲ್ಲ ಮಿ. ಕುಮಾರ್. ಅದು ನಿಮ್ಮ ತಪ್ಪು ಗ್ರಹಿಕೆ.<<

           ಮತ್ತದದೇ ಎಡವಟ್ಟುಗಳು;

           >>>ನಾಯಿಗಳೆಂದರೆ ನನಗೆ ಬಹಳ ಪ್ರೀತಿ.<<<<

           ಹೌದೌದು, ತಮ್ಮ ಬಂದುಗಳ ಬಗ್ಗೆ ಇದು ಸಹಜ.

          • Nagshetty Shetkar
           ನವೆಂ 26 2013

           ಈ ಜಗತ್ತಿನ ಸಕಲ ಜೀವಜಂತುಗಳು ನಮ್ಮ ಬಂಧುಗಳೇ ಅಲ್ಲವೇ ಮಿ. ಕುಮಾರ್? ನಿಮ್ಮ ಕರ್ಮಸಿದ್ಧಾಂತದ ಪ್ರಕಾರ ನೀವು ಹಿಂದಿನ ಜನ್ಮದಲ್ಲಿ ಹಂದಿ ಆಗಿ ಹೊಲಸು ಚೊಕ್ಕ ಮಾಡಿ ಸಂಪಾದಿಸಿದ ಈ ಜನ್ಮದಲ್ಲಿ ಮನುಷ್ಯರಾಗಿರಬಹುದು. ಹಾಗೂ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಫಲವಾಗಿ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟಬಹುದು. ನೀವು ಅಂದರೆ ನೀವಷ್ಟೇ ಎಲ್ಲಾ, ಕರ್ಮ ಸಿದ್ಧಾಂತ ನಂಬುವ ನೀವುಗಳು.

          • ನವೆಂ 26 2013

           > ಕರ್ಮಸಿದ್ಧಾಂತದ ಪ್ರಕಾರ ಹಿಂದಿನ ಜನ್ಮದಲ್ಲಿ ಹಂದಿ ಆಗಿ ಹೊಲಸು ಚೊಕ್ಕ ಮಾಡಿ
           > ಈ ಜನ್ಮದಲ್ಲಿ ಮಾಡಿದ ಕರ್ಮಗಳ ಫಲವಾಗಿ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟಬಹುದು

           ನಿಮಗೆ ಜನ್ಮಾಂತರದ ನೆನೆಪುಗಳೆಲ್ಲಾ ಆಗುತ್ತಿರುವುದು ಕಂಡು ನನಗೆ ದಿಗ್ಭ್ರಮೆಯಾಗುತ್ತಿದೆ!
           ಕೆಲವರು ತಮ್ಮ ಹಿಂದಿನ ಜನುಮಗಳ ಕುರಿತಾಗಿ ತಿಳಿಯಬಲ್ಲರೆಂದು ಕೇಳಿದ್ದೆ.
           ಆದರೆ, ನಿಮಗೆ ಹಿಂದಿನ ಜನುಮದ ಜೊತೆಗೇ ನಿಮ್ಮ ಮುಂದಿನ ಜನುಮದ ಬಗ್ಗೆಯೂ ಈಗಾಗಲೇ ತಿಳಿದಿರುವುದು ನಿಜಕ್ಕೂ “ವಿಸ್ಮಯ”ವೇ!
           ಪಾಪ, ನೀವು ಏನೆಲ್ಲಾ ಅನುಭವಿಸಿರುವಿರಿ ಮತ್ತು ಏನೆಲ್ಲಾ ಅನುಭವಿಸಬೇಕು ಎಂಬುದನ್ನು ತಿಳಿದು ಕನಿಕರವೆನಿಸುತ್ತಿದೆ.
           ಮುಂದಿನ ಜನುಮದಲ್ಲಾದರೂ ನಿಮಗೆ ಒಳ್ಳೆಯ ಯಜಮಾನನಿರುವ ಮನೆ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ.

          • Nagshetty Shetkar
           ನವೆಂ 26 2013

           ಜನ್ಮಾಂತರದ ನೆನಪುಗಳೆಲ್ಲ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇರುವವರಿಗೆ ಮಿ. ಕುಮಾರ್, ಶರಣಸಂಕುಲಕ್ಕೆ ಅಲ್ಲ. ನಾವು ಕರ್ಮಸಿದ್ಧಾಂತವನ್ನು ನಂಬುವುದಿಲ್ಲ, ಕಾಯಕದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ.

          • ನವೆಂ 26 2013

           ನಿಮಗೆ “ವೈಚಾರಿಕ ಚರ್ಚೆ”ಗಿಂತ ಬೀದಿಜಗಳದಲ್ಲಿಯೇ ಹೆಚ್ಚು ಆಸಕ್ತಿಯಿದ್ದಂತಿದೆ.
           ಮೂಲ ಲೇಖನಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸ್ಪಷ್ಟ “ಸ್ವಂತ ಅಭಿಪ್ರಾಯ”ವನ್ನೂ ನೀವು ಇಲ್ಲಿಯವರೆಗೆ ತಿಳಿಸಿಲ್ಲ.
           ನಿಮಗೆ ನಂಬಿಕೆಯಿಲ್ಲದಿದ್ದರೂ “ಕಾಲೆಳೆಯುವುವುದಕ್ಕಾಗಿ” ಬಾಲಗಂಗಾಧರ ಅವರ ಅಭಿಪ್ರಾಯ, ಕರ್ಮಸಿದ್ಧಾಂತ, ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸುವಿರಿ. ಕೇವಲ ಚರ್ಚೆಯ ದಾರಿತಪ್ಪಿಸುವುದೇ ನಿಮ್ಮ ಉದ್ದೇಶವಿರುವಂತಿದೆ!

           ನಿಮಗೆ ನಿಜಕ್ಕೂ ವಿಷಯಾಧಾರಿತ ಚರ್ಚೆಯಲ್ಲಿ ಆಸಕ್ತಿಯಿದ್ದರೆ, ನಿಮ್ಮ ನಂಬುಗೆ, ನಿಲುವುಗಳ ಆಧಾರದ ಮೇಲೆ, ನಿಮ್ಮ ಸ್ವಂತ ಅಭಿಪ್ರಾಯದಿಂದ ರೂಪಿತವಾದ ಮತ್ತು ಪ್ರಸ್ತುತ ಚರ್ಚೆಗೆ ಮಾತ್ರ ಸಂಬಂಧಿಸಿದ ಪ್ರತಿಕ್ರಿಯೆ ಬರೆಯಿರಿ.
           ಅಥವಾ ನಿಮ್ಮದೇ ಸ್ವಂತ ಲೇಖನ ಬರೆಯಿರಿ.
           ಇಲ್ಲದಿದ್ದರೆ, ನಿಮ್ಮ ಗೌರವಕ್ಕೆ ನೀವೇ ಚ್ಯುತಿ ತಂದುಕೊಳ್ಳುವಿರಿ.

          • Nagshetty Shetkar
           ನವೆಂ 26 2013

           ಕುಮಾರ್, ನಿಮ್ಮ ಉಪದೇಶಾಮೃತ ಕೇಳಲು ನೀವು ಆಸಾರಂ ಬಾಪುವೂ ಅಲ್ಲ ನಾನು ಅವರ ಶಿಷ್ಯನೂ ಅಲ್ಲ. ಅದನ್ನೆಲ್ಲ ಬದಿಗೆಸೆಯಿರಿ. ಏಕೆಂದರೆ ನೀವು ಏನು ಪಾಠ ಹೇಳಿದ್ದೀರೋ ಅದನ್ನು ನೀವೇ ಪಾಲಿಸೋಲ್ಲ!

           ನಿಮಗೆ ನನ್ನ ಪ್ರಶ್ನೆ ಇಷ್ಟೇ: ಮಡೆಸ್ನಾನ ಹಾಗೂ ಬೆತ್ತಲೆ ಪೂಜೆ ಅಂತಹ ಆಚರಣೆಗಳಲ್ಲಿ ನೀವು ಕಂಡಿರುವ ಅರ್ಥ ಏನು? ಹಾಗೂ ಅಂತಹ ಆಚರಣೆಗಳಿಗೆ ಅರ್ಥ ಹುಡುಕುವುದರಲ್ಲಿ ಅರ್ಥವಿದೆಯೇ? ಇಲ್ಲದ ಅರ್ಥ ಹೇರಿ ನೀವು ಆ ಆಚರಣೆಗಳನ್ನು ಇನ್ನಷ್ಟು ಹಾಸ್ಯಾಸ್ಪದಗೊಳಿಸುತ್ತಿಲ್ಲವೇ? ನೀವು ಒದಗಿಸುವ ಅರ್ಥವೇ ಅದರ ಅರ್ಥ ಎಂದು ಹೇಗೆ ಸಿದ್ಧಪಡಿಸುತ್ತೀರಿ?

           ಈ ಪ್ರಶ್ನೆಗಳ ಚರ್ಚೆಗೆ ಬಾಲಗಂಗಾಧರ ಅವರೂ ಬೇಕಿಲ್ಲ, ದರ್ಗಾ ಸರ್ ಕೂಡ ಬೇಕಿಲ್ಲ. ವೈಚಾರಿಕವಾಗಿ ವಸ್ತುನಿಷ್ಠವಾಗಿ ಉತ್ತರಿಸಿ, ನಿಮಗೆ ಅದು ಸಾಧ್ಯವಿದ್ದರೆ.

          • ನವೆಂ 26 2013

           ಶೇಟ್ಕರ್ ಅವರೇ,

           ನಿಮಗೆ ಯಾರೂ ಇಲ್ಲಿ ಉಪದೇಶಾಮೃತ ನೀಡುತ್ತಿಲ್ಲ. ನಿಮಗೆ ಹಾಗೆನ್ನಿಸಿದರೆ, ಅದು ನಿಮ್ಮ ಸಮಸ್ಯೆ, ನೀವೇ ಪರಿಹರಿಸಿಕೊಳ್ಳಬೇಕು.

           > ನಿಮಗೆ ನನ್ನ ಪ್ರಶ್ನೆ ಇಷ್ಟೇ: ಮಡೆಸ್ನಾನ ಹಾಗೂ ಬೆತ್ತಲೆ ಪೂಜೆ ಅಂತಹ ಆಚರಣೆಗಳಲ್ಲಿ
           > ನೀವು ಕಂಡಿರುವ ಅರ್ಥ ಏನು? ಹಾಗೂ ಅಂತಹ ಆಚರಣೆಗಳಿಗೆ ಅರ್ಥ ಹುಡುಕುವುದರಲ್ಲಿ
           > ಅರ್ಥವಿದೆಯೇ? ಇಲ್ಲದ ಅರ್ಥ ಹೇರಿ ನೀವು ಆ ಆಚರಣೆಗಳನ್ನು ಇನ್ನಷ್ಟು ಹಾಸ್ಯಾಸ್ಪದಗೊಳಿಸುತ್ತಿಲ್ಲವೇ?
           > ನೀವು ಒದಗಿಸುವ ಅರ್ಥವೇ ಅದರ ಅರ್ಥ ಎಂದು ಹೇಗೆ ಸಿದ್ಧಪಡಿಸುತ್ತೀರಿ?
           ನೀವು ಮೂಲ ಲೇಖನವನ್ನೂ ಓದಿಲ್ಲ ಮತ್ತು ಪ್ರತಿಕ್ರಿಯೆಗಳನ್ನು ಓದದೆಯೇ ಮರುಪ್ರತಿಕ್ರಿಯೆ ಮಾಡುತ್ತಿರುವಿರಿ ಎನಿಸುತ್ತಿದೆ.
           ನಾನು ಇಲ್ಲಿ ಯಾವುದೇ ಆಚರಣೆಯನ್ನು ಸಮರ್ಥಿಸುತ್ತಿಲ್ಲ, ಅಥವಾ ಅದರ ಅರ್ಥವನ್ನು ಹುಡುಕುವ ಕೆಲಸವನ್ನೂ ಮಾಡುತ್ತಿಲ್ಲ.
           ನಂಬಿಕೆ/ಆಚರಣೆಗಳು ವ್ಯಕ್ತಿಯ ವೈಯಕ್ತಿಕಕ್ಕೆ ಸಂಬಂಧಿಸಿದ್ದು. ಅದಕ್ಕೂ ರಾಜ್ಯಾಡಳಿತಕ್ಕೂ ಸಂಬಂಧವಿಲ್ಲ.
           ಹೀಗಾಗಿ ರಾಜ್ಯವನ್ನು ಆಳುವವರು ವ್ಯಕ್ತಿಗತ ನಂಬಿಕೆ/ಆಚರಣೆಗಳಲ್ಲಿ ಕೈಹಾಕಕೂಡದು. ಇದೇ ನನ್ನ ನಿಲುವು.

           ನಾನು ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದೇನೆ. http://tinyurl.com/l4yfp99

          • Nagshetty Shetkar
           ನವೆಂ 26 2013

           Kumar, “ಹಿಂದುಗಳಲ್ಲಿರುವ ಅನೇಕ ಆಚರಣೆಗಳು ಹೊರನೋಟಕ್ಕೆ ಅರ್ಥವಿಲ್ಲದ್ದೆಂದು ಗೋಚರಿಸಬಹುದು. ಆದರೆ, ಅವು ಅರ್ಥವಿಲ್ಲದ್ದೆಂದು ನಾವು ನಿರ್ಧಾರಕ್ಕೆ ಬಂದುಬಿಟ್ಟರೆ, ನಾವೇ “ಮೂಢ”ರಾಗಿ ಬಿಡುತ್ತೇವೆ! ಅವುಗಳ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡಲಾಗಿಲ್ಲ ಅಷ್ಟೇ. ” 😀

          • ನವೆಂ 26 2013

           ಭಾವಾರ್ಥವನ್ನು ಗ್ರಹಿಸುವುದರ ಬದಲು ಕೇವಲ ಪದಶಃ ಅರ್ಥ ಮಾಡಿಕೊಳ್ಳಲು ಹೋದರೆ ಹೀಗಾಗುತ್ತದೆ.
           ಇದನ್ನೇ ಇಂಗ್ಲಿಷಿನಲ್ಲಿ: “Take the spirit, not the words; Reading inbetween the lines” ಎನ್ನುತ್ತಾರೆ.
           ಹಿಂದುಗಳಲ್ಲಿರುವ ಹೆಚ್ಚಿನ ಆಚರಣೆಗಳು ಅರ್ಥವುಳ್ಳದ್ದಾಗಿರುವಂತದ್ದೇ. ಈ ಮಾತಿನಲ್ಲಿ ತಪ್ಪೇನಿದೆ?
           ಇದನ್ನು ಲೇಖನದಲ್ಲಿ ಹೇಳಿದ್ದರ ಉದ್ದೇಶ, ಹಿಂದು ಆಚರಣೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೇ ‘ಮೂಢ’ ಎಂದು ಹೇಳಬೇಡಿ ಎಂದು.
           ಹಾಗೆಂದ ಮಾತ್ರಕ್ಕೆ, ನಾನು ಪ್ರಸ್ತುತ ಲೇಖನದಲ್ಲಿ, ಎಲ್ಲಾ ಹಿಂದು ಆಚರಣೆಗಳ ಅರ್ಥವನ್ನು ಬಿಡಿಸಿಡುತ್ತೇನೆ ಎಂದೇ?

 3. ನವೆಂ 23 2013

  ಮಾನ್ಯರೇ, ಈ ವಿಷಯದ ಬಗ್ಗೆ ಈ ತಾಣದಲ್ಲೇ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಇನ್ನು ಇಷ್ಟರಲ್ಲೇ ನಡೆಯುವ ವಿಧಾನಸಭೆಯಲ್ಲಿ ಎಂತಹ ಚರ್ಚೆ ನಡೆಯಬಹುದು ನೋಡೋಣ!

  ಉತ್ತರ
 4. ನವೆಂ 24 2013

  >>> “ಏನಿದು ಮೂಢನಂಬಿಕೆ? ಎಲ್ಲ ನಂಬಿಕೆಯೂ ಮೂಢನಂಬಿಕೆಯೇ ಅಲ್ಲವೇ?
  >>> “ಮೂಢನಂಬಿಕೆ” ಎನ್ನುವುದು ವೈಜ್ಞಾನಿಕವಾಗಿ ನಿರೂಪಿತವಾಗಿಲ್ಲದಿರುವುದು. “ಅವರೇ ತನ್ನ ತಂದೆ ಹೌದೇ ಇಲ್ಲವೇ ಎನ್ನುವುದನ್ನು ಮಗು ವೈಜ್ಞಾನಿಕವಾಗಿ ನಿರೂಪಿಸಲು ಪ್ರಯತ್ನಿಸುವುದಿಲ್ಲ”.
  >>> “ಹೀಗಾಗಿ, “ತಂದೆ” ಎನ್ನುವುದು ಮೂಢನಂಬಿಕೆ ಆಗಿಬಿಡುತ್ತದೆ”

  ರಾಮ ರಾಮಾ!! ಏನ್ರೀ ಇದು ನಿಮ್ಮ ಗೊಂದಲ!

  ‘ಮೂಢ’ ಅಂದರೆ ‘ತಿಳಿಯದವ’, ‘ಅವಿವೇಕಿ’, ‘ದಡ್ದ’ ಎಂದು ಮುಂತಾಗಿ ಅರ್ಥವಿರೋದು ನೋಡಿದರೆ, ‘ಮೂಢನಂಬಿಕೆ’ ಅನ್ನೋದರ ಅರ್ಥ ಸುಲಭದಲ್ಲಿಯೇ ಹೊಳೆದೀತು. ಹಾಗೆ ‘ಮೌಢ್ಯ’ ಅನ್ನುವುದಕ್ಕೆ “ವಿವೇಚನೆಯಿಲ್ಲದಿರುವಿಕೆ” ಎಂದರ್ಥವಾಗುವುದರಿಂದ, ಎಲ್ಲ ನಂಬಿಕೆಗಳೂ ಮೂಢನಂಬಿಕೆಗಳಾಗುವುದಿಲ್ಲ, “ವಿವೇಚನೆಯಿಲ್ಲದ ನಂಬಿಕೆ-ಆಚರಣೆಗಳು ಮಾತ್ರ ಮೂಢನಂಬಿಕೆ-ಮೂಢಾಚರಣೆಗಳಾಗುತ್ತವೆ.

  ಇನ್ನೂ ವಿವರವಾಗಿ ನೋಡುವುದಾದರೆ

  ೧) ವಿರುದ್ಧವಾದ ಪುರಾವೆಗಳು ಇದ್ದಾಗಲೂ ಅದನ್ನೆಲ್ಲಾ ಕಡೆಗಣಿಸಿ ಕುರುಡಾಗಿ ನಂಬಿಕೊಂಡದ್ದು ಕುರುಡು ನಂಬಿಕೆಯಾಗುತ್ತೆ. ಉದಾಹರಣೆಗೆ : DNA ಪರೀಕ್ಷೆಯಿಂದ ಆತ ತನ್ನ ತಂದೆಯಲ್ಲ ಎನ್ನುವುದು ಸಿದ್ಧವಾದ ಸಂದರ್ಭದಲ್ಲೂ ಕೂಡಾ ಆತನೇ ತನ್ನ ‘ಜೈವಿಕ ತಂದೆ’ ಅಂತ (ದೇವರೇ ಬಂದು ನನ್ನ ಕನಸಲ್ಲಿ ಹೇಳಿದ್ದ್ದಾನೆ ಅಂತಲೋ ಏನೋ ಒಟ್ಟು) ನಂಬುವುದು ಕುರುಡುನಂಬಿಕೆಯಾಗುತ್ತೆ.

  ೨) ಕಾರ್ಯಕಾರಣ ಸಂಭಂಧಗಳಿಲ್ಲದಿರುವುದು ಸಿದ್ಧವಾಗಿರುವ ವಿಷಯ-ಸಂದರ್ಭಗಳಲ್ಲಿಯೂ ಕಾರ್ಯ-ಕಾರಣ ಸಂಬಂಧವನ್ನು ‘ಕಲ್ಪಿಸಿ’, ನಂಬಿ, ಹಾನಿಯಾಗುತ್ತಿರುವುದನ್ನು ಕೂಡಾ ಪರಿಗಣಿಸದೇ ನಡೆದುಕೊಳ್ಳುವುದು ಅವಿವೇಕ-ಮೂಢತೆಯಾಗುತ್ತೆ.
  ಉದಾಹರಣೆಗೆ : ಕೆಲವೊಂದು ನಕ್ಷತ್ರಗಳ ಸ್ಥಿತಿಗತಿಗೂ ಮನುಷ್ಯನ ಜೀವನದ ಆಗು ಹೋಗುಗಳಿಗೂ ಸಂಬಂಧವಿದೆ ಎಂದು ನಂಬಿ, ಜಾತಕದ ಕಾರಣದಿಂದ ಪ್ರೇಮಿಗಳನ್ನು ದೂರಮಾಡುವುದು, ಬಲಿ ನೀಡುವುದು… ಇತ್ಯಾದಿಗಳು ಮೂಢನಂಬಿಕೆಯ ಪಟ್ಟಿಗೆ ಸೇರುತ್ತವೆ.

  ಆಧಾರ :
  http://www.baraha.com/kannada/index.php
  http://en.wikipedia.org/wiki/Faith
  http://en.wikipedia.org/wiki/Faith#Criticism
  http://en.wikipedia.org/wiki/Superstition

  ಉತ್ತರ
  • ನವೆಂ 25 2013

   > DNA ಪರೀಕ್ಷೆಯಿಂದ ಆತ ತನ್ನ ತಂದೆಯಲ್ಲ ಎನ್ನುವುದು ಸಿದ್ಧವಾದ ಸಂದರ್ಭದಲ್ಲೂ ಕೂಡಾ
   ಶೇಕಡಾ ೯೯.೯೯ ಜನ ತನ್ನ ತಂದೆ ಅವನೇ ಎಂಬುದನ್ನು DNA ಪರೀಕ್ಶೆಯಿಂದ ದೃಢಪಡಿಸಿಕೊಳ್ಳುವುದಿಲ್ಲ.
   ತನ್ನ ತಾಯಿ ಹೇಳಿದ್ದನ್ನು ‘ನಂಬುತ್ತಾರೆ’ ಅಷ್ಟೇ.

   > ಕೆಲವೊಂದು ನಕ್ಷತ್ರಗಳ ಸ್ಥಿತಿಗತಿಗೂ ಮನುಷ್ಯನ ಜೀವನದ ಆಗು ಹೋಗುಗಳಿಗೂ ಸಂಬಂಧವಿದೆ ಎಂದು ನಂಬಿ
   ನೀವು, ನಕ್ಷತ್ರಗಳ ಸ್ಥಿತಿಗತಿಗೂ ಮನುಷ್ಯನ ಜೀವನದ ಆಗು ಹೋಗುಗಳಿಗೂ ಸಂಬಂಧವಿಲ್ಲ ಎಂದು ‘ನಂಬಿರು’ವಂತಿದೆ.
   ನಿಮ್ಮ ‘ನಂಬಿಕೆ’ಗೂ ಯಾವ ಆಧಾರವೂ ಇಲ್ಲ.
   ಹಾಗೆ ನೋಡಿದರೆ, “ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವೂ ಇತರೆಲ್ಲಾ ವಸ್ತುಗಳನ್ನೂ ಆಕರ್ಷಿಸುತ್ತದೆ; ಈ ಆಕರ್ಷಣೆಯ ಬಲ, ಆ ವಸ್ತುವಿನ ಗಾತ್ರ ಮತ್ತು ದೂರದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ವಿಜ್ಞಾನ ತಿಳಿಸುತ್ತದೆ. ಹೀಗಿರುವಾಗ, ನಕ್ಷತ್ರವೊಂದು ಮನುಷ್ಯನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿಜ್ಞಾನವೇ ತಿಳಿಸಿದಂತಲ್ಲವೇ!?
   ಕೇವಲ ನಕ್ಷತ್ರವಲ್ಲ, ಎಲ್ಲಾ ಆಕಾಶಕಾಯಗಳೂ ಪ್ರಭಾವ ಬೀರುತ್ತವೆ.
   ಕೆಲವರ ಮೇಲೆ ಹುಣ್ಣಿಮೆ/ಅಮಾವಾಸ್ಯೆಯ ದಿನ ಚಂದ್ರನ ಪ್ರಭಾವ ಹೆಚ್ಚಾಗುತ್ತದೆ – ಅಂತಹವರನ್ನು Lunatic ಎಂದು ಕರೆಯುತ್ತಾರೆ!

   ಉತ್ತರ
   • fyaanu
    ನವೆಂ 28 2013

    >>>”ಕೆಲವರ ಮೇಲೆ ಹುಣ್ಣಿಮೆ/ಅಮಾವಾಸ್ಯೆಯ ದಿನ ಚಂದ್ರನ ಪ್ರಭಾವ ಹೆಚ್ಚಾಗುತ್ತದೆ – ಅಂತಹವರನ್ನು Lunatic ಎಂದು ಕರೆಯುತ್ತಾರೆ!” ಹೌದೇ! ಅದು ಹ್ಯಾಗಾಯ್ತಪ್ಪಾ ಅಂಥಾ ಸಂಚೋದನೆ! ಈ ಸಂಚೋದನೆಗೆ ಒಂದು ಇಗ್ನೋಬೆಲ್ ಆದರೂ ದೊರಕುವಂತಾಗಲಿ ಎನ್ನುವುದು ನಮ್ಮ ಆಗ್ರಹ ಪೂರ್ವಕ ಅಪೇಕ್ಷೆ. ಇದಕ್ಕಾಗಿ ನಾವೆಲ್ಲರೂ ಹಕ್ಕೊತ್ತಾಯ ಮಂಡಿಸಬೇಕಿದೆ. ಅದಕ್ಕಾಗಿ ಈ ಕುರಿತು ನೀವು ಈ ಕೂಡಲೇ ಒಂದು ಸಂಚೋದನಾವರದ್ದಿಯನ್ನು ರಾಷ್ತ್ರೀಯ ಅಂತರರಾಷ್ತ್ರೀಯ ಪತ್ರಿಕೆಗಳಲ್ಲಿ ವೇದಿಕೆಗಳಲ್ಲಿ ಮಂಡಿಸಬೇಕು.

    >>>ನಕ್ಷತ್ರಗಳ ಸ್ಥಿತಿಗತಿಗೂ ಮನುಷ್ಯನ ಜೀವನದ ಆಗು ಹೋಗುಗಳಿಗೂ ಸಂಬಂಧವಿಲ್ಲ ಎಂದು ‘ನಂಬಿರು’ವಂತಿದೆ.
    ನಿಮ್ಮ ‘ನಂಬಿಕೆ’ಗೂ ಯಾವ ಆಧಾರವೂ ಇಲ್ಲ.
    >>>ಹಾಗೆ ನೋಡಿದರೆ, “ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವೂ ಇತರೆಲ್ಲಾ ವಸ್ತುಗಳನ್ನೂ ಆಕರ್ಷಿಸುತ್ತದೆ; ಈ ಆಕರ್ಷಣೆಯ ಬಲ, ಆ ವಸ್ತುವಿನ ಗಾತ್ರ ಮತ್ತು ದೂರದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ವಿಜ್ಞಾನ ತಿಳಿಸುತ್ತದೆ. ಹೀಗಿರುವಾಗ, ನಕ್ಷತ್ರವೊಂದು ಮನುಷ್ಯನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿಜ್ಞಾನವೇ ತಿಳಿಸಿದಂತಲ್ಲವೇ!?

    ಬೇಕಾದಷ್ಟು ಆಧಾರವಿದೆ ; ವಿಜ್ನಾನವನ್ನು ಸರಿಯಾಗಿ ಅನ್ವಯಿಸಲು ಕಲಿಯಿರಿ; ನಿಮಗೇ ತಿಳಿಯುತ್ತೆ.
    ಇಲ್ಲಿ ಯಾವುದನ್ನು ‘ಪ್ರಭಾವ’ ಅಂತ ಕರೆಯಲಾಗಿದೆ ಅನ್ನುವುದನ್ನು ಗಮನಿಸದೇ ಸುಮ್ಮನೆ ದಾರಿತಪ್ಪಿಸುತ್ತಿದ್ದೀರಿ. ದುರ್ಬಲ ಗುರುತ್ವಾಕ್ಸರ್ಷಣೆಯು ಪ್ರಭಲ ‘ಪ್ರಭಾವ’ವಾಗುವುದು, ಮಾತಾಡಿದ್ದಕ್ಕೇ ಮಕ್ಕಳಾಗುವಂತ ‘ಸಂಬಂಧ’ವಾಗುವುದು ಇವೆಲ್ಲ ಒಂದೇ ಜಾತಿಯ ಕುತರ್ಕಗಳು. ಯಾವುದೋ ಒಂದು ನಕ್ಷತ್ರದ ಗುರುತ್ವಾಕರ್ಶಣಾ ‘ಬಲ’ವು ಅದು ಹೇಗೆ ನೀಮ್ಮ ನಿದ್ರಾಹಾರ ಮೈಥುನೇತ್ಯಾದಿ ಚಟುವಟಿಕೆಗಳನ್ನ-ಆಗುಹೋಗುಗಳನ್ನ, ನೀವು ಬೆಳೆದಮೇಲೆ ಧನವಂತರಾಗುತ್ತೀರೋ ಇಲ್ಲವೋ ಅನ್ನುವುದನ್ನ, ನಿಮ್ಮ ‘ಯೋಗಾಯೋಗಗಳನ್ನ’ ‘ಪ್ರಭಾವಿ’ಸೀತು?

    ಉದಾಹರಣೆಗೆ ಕೆಲವು ಆಧಾರಗಳು :
    ೧) Several years ago some 18 Nobel Laureates and 172 other leading scientists joined together to express their vigorous objections to astrology. See, “The Humanist, September/October, 1975”.
    2) “Astrology Fails the Test of Science” , See, http://www.truthmagazine.com/archives/volume34/GOT034263.html

    Yavudo xyz nakshatravu nimmannu ee maatugalannu aaduvante prErEpisitu anta yaavudo obba jyotishi claim maadtaane. aa xyz nakshatravE yaake? abc nkshatra yaakalla? adaraddeenu gurutvaakarshanashakti illave? aa gurutvaakarshanaa shaktigoo yaaro obba hyaage hyagO aadodakkoo sambhamda ide amta hyaage saabeetu padisteeri?

    ಉತ್ತರ
 5. ನವೆಂ 24 2013

  > ಮಾನ್ಯರೇ, ಈ ವಿಷಯದ ಬಗ್ಗೆ ಈ ತಾಣದಲ್ಲೇ ಬಿಸಿ ಬಿಸಿ ಚರ್ಚೆ ಆಗುತ್ತಿದೆ.
  ಹೌದು. ಒಂದೇ ವಿಷಯವನ್ನು ಭಿನ್ನ ಕೋನಗಳಿಂದ ಕಾಣಬಹುದು. ಪ್ರತಿಯೊಂದು ಕೋನವೂ ಒಂದು ಹೊಸ ಚರ್ಚೆಯನ್ನೇ ಹುಟ್ಟು ಹಾಕುತ್ತದೆ.

  ಉತ್ತರ
 6. ನವೆಂ 24 2013

  > ಮಾಯ್ಸ, ಇಂಗ್ಲೀಷಿನಲ್ಲಿ ಬರೆದದ್ದು ನಿಮಗೆ ಅರ್ಥ ಆಗಲಿಲ್ಲ ಅಂದರೆ ಬಿಡಿ, ಕುಮಾರ್ ಓದಿ ಅರ್ಥ ಮಾಡಿಕೊಂಡರೆ ಸಾಕು.
  ರೀ ಶೇಟ್ಕರ್ ಅವರೇ,
  ನೀವು ವ್ಯಕ್ತಿಗಳನ್ನು ಜರೆಯುವುದಕ್ಕಿಂತ ಭಿನ್ನವಾದುದನ್ನು ಎಂದಾದರೂ ಬರೆದುರುವಿರೇನು?
  ನೀವು ಬರೆಯುವುದರಲ್ಲಿ ಯಾವುದೇ ಹುರುಳಿಲ್ಲವೆಂದ ಮೇಲೆ, ಅದು ಯಾವ ಭಾಷೆಯಲ್ಲಿದ್ದರೂ ಅದಕ್ಕೆ ಬೆಲೆಯಿಲ್ಲ.

  ‘ನಿಲುಮೆ’ ಎನ್ನುವುದು ಕನ್ನಡದ ತಾಣ. ಕನ್ನಡಿಗರು ಕನ್ನಡದಲ್ಲೇ ಚರ್ಚೆ ನಡೆಸಲೆಂಬ ಸದುದ್ದೇಶದಿಂದ ಅದನ್ನು ನಿರ್ಮಿಸಲಾಗಿದೆ.
  ನಿಮಗೆ ಕನ್ನಡದಲ್ಲಿ ಉತ್ತರಿಸಲು ಆಗದಿದ್ದರೆ, ನೀವು ಭಾಗವಹಿಸದಿರುವುದೇ ಉತ್ತಮ. ಆಯಾ ಸ್ಥಳದಲ್ಲಿ ಅಲ್ಲಿಗೆ ಅಪೇಕ್ಷಿತವಾದ ಶಿಸ್ತನ್ನು ಪಾಲಿಸಬೇಕಾದ್ದು, ಅಲ್ಲಿಗೆ ಬರುವವರ ಕರ್ತವ್ಯ. ಆ ಶಿಸ್ತನ್ನು ನೀವು ಪಾಲಿಸಲಿಲ್ಲವೆಂದರೆ, ಅದು ನಿಮ್ಮ ಕರ್ಮ ಮತ್ತು ನಿಮ್ಮ ಇಂಗ್ಲಿಷ್ ಟಿಪ್ಪಣಿಗಳಿಗೆ ಇನ್ನು ಮುಂದೆ ಯಾರೂ ಉತ್ತರಿಸಲಾರರು. ನಿಮಗೆ ನಿಜಕ್ಕೂ “ವೈಚಾರಿಕ ಚರ್ಚೆ”ಯಲ್ಲಿ ಭಾಗವಹಿಸುವ ಆಸಕ್ತಿಯಿದ್ದಲ್ಲಿ, ಕನ್ನಡದಲ್ಲಿ ಬರೆಯಿರಿ ಮತ್ತು ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಬರೆಯಿರಿ.

  ಉತ್ತರ
 7. Prakash.P
  ನವೆಂ 25 2013

  ಧಾರ್ಮಿಕ ನಂಬಿಕೆಯೇ ಬೇರೆ, ಮೌಡ್ಯತೆಯೇ ಬೇರೆ, ಹಾಗಾಗಿ ಇವೆರಡನ್ನೂ ಒಂದೇ ಎಂದು ತಿಳಿದಿರುವುದು ವಿಷಾದನೀಯ.

  ಉತ್ತರ
 8. ನವೆಂ 26 2013

  > ಇದು ನನ್ನ ಸಂಶೋಧನೆ ಅಲ್ಲ; ನಿಲುಮೆಯ ಮಾನಸ ಗುರು ಬಾಲಗಂಗಾಧರ ರಾಯರ ಅಂಬೋಣ.
  @Nagshetty Shetkar,
  ನಾನು ಬಾಲಂಗಾಧರ ಅವರ ಸಂಶೋಧನೆಯನ್ನು ಅಧ್ಯಯನ ಮಾಡಿಲ್ಲ. ಅವರು ಯಾರೆಂದೂ ನನಗೆ ತಿಳಿದಿಲ್ಲ.
  ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುವೆನೆಂದು ನಾನೆಲ್ಲೂ ತಿಳಿಸಿಲ್ಲ. ಹೀಗಾಗಿ, ನೀವು ಅವರ ಹೆಸರನ್ನು ಇಲ್ಲಿಗೆ ಎಳೆದು ತಂದು, ಅವರು ಹೇಳಿರುವುದರಿಂದ ನಾನದನ್ನು ಒಪ್ಪಿಕೊಳ್ಳಬೇಕು ಎನ್ನುವುದು ಬಾಲಿಶ, ಹಾಸ್ಯಾಸ್ಪದ.

  ಶೇಟ್ಕರ್ ಅವರೇ,
  ನಾವಿಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳನ್ನು ಪ್ರಕಟಿಸುತ್ತೇವೆ, ಚರ್ಚಿಸುತ್ತೇವೆ. ನಿಮಗೂ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಸ್ವಾತಂತ್ರ್ಯವಿದೆ. ಆದರೆ, ಇನ್ಯಾರದ್ದೋ ಅಭಿಪ್ರಾಯಗಳನ್ನು (ಬಾಲಗಂಗಾಧರ, ದರ್ಗಾ, ಇತ್ಯಾದಿ) ಒಪ್ಪಿಕೊಳ್ಳಬೇಕೆಂದು ನೀವು ಆಗಾಗ ಆಗ್ರಹಿಸುವುದನ್ನು ನೋಡಿದರೆ, ನಿಮಗೆ ಸ್ವಂತಿಕೆಿ ಇಲ್ಲವೆಂದು ಭಾಸವಾಗುತ್ತದೆ.
  ನಿಮ್ಮ ‘ನಿಲುವು’ ಏನೆಂದು ಹೇಳಿ?

  > “ಭಾರತೀಯ ಸಂಪ್ರದಾಯಗಳಲ್ಲಿ ಇರುವ ಆಚರಣೆಗಳಿಗೆ ಅರ್ಥ ಇದೆ ಎಂಬುದು ತಪ್ಪು ಗ್ರಹಿಕೆ”
  ಇದು ಒಪ್ಪುವಂತ ಮಾತಲ್ಲ. ಎಲ್ಲಾ ಭಾರತೀಯ ಸಂಪ್ರದಾಯಗಳನ್ನೂ ಸಾರಾಸಗಟಾಗಿ ಒಂದೇ ಬುಟ್ಟಿಗೆ ಹಾಕಿ, ಅದನ್ನು ‘ಕಸ’ವೆಂದುಬಿಡುವುದು ಎಷ್ಟರಮಟ್ಟಿಗೆ ಸರಿ?
  ಮಹೇಶ್ ಅವರು, ಮೇಲಿನ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹೀಗೆ ಬರೆದಿದ್ದಾರೆ:
  > ಉತ್ತಮವಾದ ಟೀಕೆ. ಆಚರಣೆಗಳು ಧರ್ಮದ ತತ್ವಜ್ಞಾನದ ಬಿಂಬವಾಗಬೇಕು
  ಆಚರಣೆಗಳು ಧರ್ಮಾಧಾರಿತವಾಗಿರಬೇಕು ಎನ್ನುವುದನ್ನು ನಾನೂ ಒಪ್ಪುವೆ.
  ಆದರೆ ಕೆಲವೊಂದು ಆಚರಣೆಗಳು ಆಪದ್ಧರ್ಮವಾಗಿಯೂ ಹುಟ್ಟಿರುತ್ತವೆ.
  ಉದಾಹರಣೆಗೆ, ವಿಧವಾ ಸ್ತ್ರೀಯರು ಮುಂಡನ ಮಾಡಿಸಿಕೊಳ್ಳುವುದು. ಇದಕ್ಕೆ ಸಂಬಂಧಿಸಿದಂತೆ, ಹಿಂದೂ ಧರ್ಮಶಾಸ್ತ್ರವು ಏನೂ ಹೇಳುವುದಿಲ್ಲ. ಆದರೆ, ಯಾವುದೋ ಕಾಲದಲ್ಲಿ, ಆ ರೀತಿ ಮುಂಡನ ಮಾಡಿಸಿಕೊಳ್ಳುವ ಆವಶ್ಯಕತೆ ಬಂದಿತು, ಅದೇ ಆಚರಣೆಯೂ ಆಯಿತು.
  ಆದರೆ , ಭಾರತದಲ್ಲಿ ಇಂದು ಆಚರಣೆಯಲ್ಲಿರುವ “ಎಲ್ಲಾ” ಆಚರಣೆಗಳೂ ಅರ್ಥಹೀನವೆಂದು ಹೇಳುವುದು ಎಷ್ಟರಮಟ್ಟಿಗೆ ಸರಿ?
  ವೈದಿಕರು ಆಗಾಗ ನಡೆಸುವ ಯಜ್ಞ, ಹೋಮದ ಆಚರಣೆಗಳೂ ಅರ್ಥ ಹೀನವೇ?
  ಹಣೆಗೆ ಕುಂಕುಮ ಇಟ್ಟುಕೊಳ್ಳುವುದು, ಶ್ರೀಗಂಧ ಲೇಪಿಸುವುದು, ಇತ್ಯಾದಿಗಳೂ ಅರ್ಥಹೀನವೇ?

  ಮತ್ತು ಪ್ರಸ್ತುತ ವಿದೇಯಕಕ್ಕೆ ಸಂಬಂಧಿಸಿದಂತೆ ನನ್ನ ಮೂಲಭೂತ ವಿಚಾರವೆಂದರೆ:
  ಸರಕಾರವು ಜನರ ನಂಬಿಕೆ/ಆಚರಣೆಗಳಲ್ಲಿ ಕೈಹಾಕಕೂಡದು.
  ಸರಕಾರವು ಯಾವುದೇ ನಂಬಿಕೆಯನ್ನು ಹುಟ್ಟುಹಾಕಿಲ್ಲ; ಸಮಾಜವೇ ತನ್ನಲ್ಲಿನ ನಂಬಿಕೆ/ಆಚರಣೆಗಳನ್ನು ಹುಟ್ಟುಹಾಕಿಕೊಂಡಿರುವುದು, ಆಚರಿಸುತ್ತಿರುವುದು; ಆಯಾ ಕಾಲ/ಸಂದರ್ಭಕ್ಕೆ ಅನುಗುಣವಾಗಿ ನಂಬಿಕೆ/ಆಚರಣೆಗಳು ಹುಟ್ಟುತ್ತವೆ. ಮತ್ತೊಂದು ಕಾಲಕ್ಕೆ ಅದು ಅರ್ಥಹೀನವಾಗಬಹುದು, ಅನಾವಶ್ಯಕವೂ ಆಗಬಹುದು; ಅದನ್ನು ಸಮಾಜವೇ ಕೈಬಿಡುತ್ತದೆ, ಆ ರೀತಿ ಕೈಬಿಟ್ಟೂ ಇದೆ.
  ಯಾವುದಾದರೂ ಆಚರಣೆಯಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ, ಅದು ಮಾನವತೆಯ ಲಕ್ಷಣವಲ್ಲ ಎಂದು ಸರಕಾರದಲ್ಲಿರುವವರಿಗೆ ಅನ್ನಿಸಿದರೆ, ಅವರು ಆ ನಂಬಿಕೆ/ಆಚರಣೆಯನ್ನು ಇಟ್ಟುಕೊಂಡಿರುವ ಸಮಾಜದ ಪ್ರಮುಖರ ಜೊತೆ ಸೇರಿ ಅದಕ್ಕೆ ಪರಿಹಾರವನ್ನು ಹುಡುಕಬೇಕು, ಸಮಾಜದ ಜನರಿಗೆ ಅದು ಬೇಕಿಲ್ಲ, ಅದರಿಂದುಂಟಾಗುವ ತೊಂದರೆಯನ್ನು ಮನವರಿಕೆ ಮಾಡಿಕೊಡಬೇಕು; ಕಾಲಕ್ರಮೇಣ ಆ ನಂಬಿಕೆ/ಆಚರಣೆ ದೂರಾಗುತ್ತದೆ.
  ಪ್ರಜಾಪ್ರಭುತ್ವದಲ್ಲಿ ವಿವಿಧ ಧ್ಯೇಯ/ನಂಬಿಕೆ/ಮತಾಚರಣೆಗಳನ್ನು ಹೊಂದಿರುವ ಜನರು ಅಧಿಕಾರಕ್ಕೆ ಬರುತ್ತಾರೆ. ಆ ರೀತಿ ಅಧಿಕಾರಕ್ಕೆ ಬಂದವರೆಲ್ಲಾ, ತಮ್ಮ ಧ್ಯೇಯಕ್ಕೆ ಅನುಗುಣವಾಗಿ ಸಮಾಜದ ಜನರ ನಂಬಿಕೆ/ಆಚರಣೆಗಳೊಡನೆ ಆಟವಾಡಲು ತೊಡಗಿದರೆ, ಅದರಿಂದ ತೊಂದರೆಯೇ ಆಗುತ್ತದೆ. “ಜಾತ್ಯಾತೀತ” ಎನ್ನುವ ಪದದ ಸಾರವೇ ಅದು.
  ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ಮಾತೆತ್ತಿದರೆ ತಾವು “ಜಾತ್ಯಾತೀತ” ಎಂದೆಲ್ಲಾ ಡಂಗುರ ಸಾರುತ್ತದೆ. ಜನರ ನಂಬಿಕೆ/ಆಚರಣೆಗಳ ವಿಷಯದಲ್ಲಿ ಮೂಗುತೂರಿಸಲು ಪ್ರಯತ್ನಿಸುವುದರ ಮೂಲಕ, ಅವರು “ಕೋಮುವಾದಿ”ಗಳು ಎಂಬುದು ಸಾಬೀತಾಗಿದೆ.

  ಮತ್ತು ಇವರು ಈ ರೀತಿ ಮೂಗುತೂರಿಸಲು ಸಾಧ್ಯವಾಗುವುದು ಹಿಂದೂ ನಂಬಿಕೆ/ಆಚರಣೆಗಳ ವಿಷಯದಲ್ಲಿ ಮಾತ್ರ. ಏಕೆಂದರೆ, ಹಿಂದೂ ಸಮಾಜ ‘ಉಗ್ರ’ ಪ್ರತಿಕ್ರಿಯೆ ತೋರಿಸುವುದಿಲ್ಲ.
  ಮುಸಲ್ಮಾನ ಸಮಾಜದ ಅಥವಾ ಕ್ರೈಸ್ತ ಸಮಾಜದ ವಿಷಯಗಳಲ್ಲಿ ಅವರು ‘ಆಟ’ವಾಡುವುದಿಲ್ಲ.
  ‘೮೦ರ ದಶಕದಲ್ಲಿ ಪ್ರಸಿದ್ಧವಾಗಿದ್ದ ಶಾಬಾನೂ ಪ್ರಕರಣ’ವೇ ಇದಕ್ಕೆ ಸಾಕ್ಷಿ.

  ಉತ್ತರ
 9. ವಿಜಯ್ ಪೈ
  ನವೆಂ 26 2013

  @ಶೆಟ್ಕರ್..
  [ಮಡೆಸ್ನಾನ ಭಾಳ ಅರ್ಥಪೂರ್ಣ ಅಂತ ಕುಕ್ಕೆಗೆ ಹೋಗಿ ಎಂಜಲೆಲೆ ಮೇಲೆ ಹೊರಳಾಡ ಬಯಸಿದರೆ ನಾನೇಕೆ ನಿಮ್ಮನ್ನು ತಡೆಯಲಿ! ]
  ಹೂಂ..ಉಳಿದವರನ್ನು ತಿದ್ದುವ, ತೊಳೆಯುವ ಉಸಾಬರಿ ಬಿಟ್ಟು ನಿಮ್ಮನ್ನು ನೀವು ಮೊದಲು ತೊಳೆದುಕೊಂಡರೆ, ನಾತ ಸ್ವಲ್ಪ ಕಡಿಮೆಯಾಗುತ್ತದೆ.

  [ನಾನು ಕಸದ ರಾಶಿಯ ಮೇಲೆ ಹೊರಳಾಡುವ ಬೀದಿ ನಾಯಿಗಳನ್ನೂ ತಡೆಯುವವನಲ್ಲ!! ]
  ದರ್ಗಾರವರ ಎಂಜಲಿನ ಮೇಲೆ ನಿಮ್ಮ ಉರುಳಾಟವನ್ನು ನೋಡಿದರೆ ಯಾಕೊ ಸಂಶಯ ಬರುತ್ತೆ. ಬಹುಶಃ ಯಾರಿಗೂ ಇದನ್ನು ತಡೆಯಲು ಆಗಲಿಕ್ಕಿಲ್ಲ!

  [ಮುನ್ಸಿಪಾಲಿಟಿ ಯವರು ಆಗಾಗ ಅಂತಹ ನಾಯಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಹಿಡಿದು ಬೋನಿನಲ್ಲಿ ಹಾಕಿ ಎಲ್ಲಿಗೋ ಕರೆದೊಯ್ಯುತ್ತಾರೆ. ಹಾಗೆಯೇ ಮಡೆಸ್ನಾನ ಆಚರಿಸುವವರನ್ನು ನಿಯಂತ್ರಿಸಲು ಸರಕಾರವೇ ಏನಾದರೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ.]
  ಹಾಗೆಯೇ ಸ್ವಘೋಶಿತ ಬೊಗಳೆ ‘ಕಾಯಕ’ಯೋಗಿಗಳನ್ನು ಹಿಡಿಯುವ ವ್ಯವಸ್ಥೆ ಮಾಡುತ್ತಾರಂತೆ!

  (ಕೊನೆಯದಾಗಿ ನಾನೇಕೆ ಉತ್ತರಿಸಿದೆ ಎಂದು ಕೇಳಬೇಡಿ..ಇದು ಮುಕ್ತ ಚರ್ಚೆ! )

  ಉತ್ತರ
 10. ನವೆಂ 26 2013

  > ಸರಿ, ನೀವು ನಿಮ್ಮ ಆಚರಣೆಗಳಿಗೆ ಅರ್ಥ ಹುಡುಕುತ್ತಾ ಕುಳಿತುಕೊಳ್ಳಿ, ಅದರಿಂದ ನನಗಾವ ಬಾಧೆಯೂ ಇಲ್ಲ.
  ಅಂತೂ ನಿಮಗೆ “ಸ್ವಂತ ಅಭಿಪ್ರಾಯ/ನಿಲುಮೆ” ಇಲ್ಲ ಎನ್ನುವುದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು.
  ಹೀಗಿದ್ದಾಗ್ಯೂ, ನೀವು ಆಗಾಗ ‘ನಿಲುಮೆ’ಯಲ್ಲಿ ಅಲೆದಾಡುವುದು, ಬೇರೆಡೆ ‘ಮೇವು’ ಸಿಗುತ್ತಿಲ್ಲವೆಂದೋ ಅಥವಾ ‘ವೃಥಾ ಕಾಲಹರಣ”ಕ್ಕೋ…….????

  [[Nagshetty Shetkar> ಮಡೆಸ್ನಾನ ಆಚರಣೆಯು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ನಿರೂಪಿಸುವ ತನಕ ಸರ್ಕಾರವು ಮಡೆಸ್ನಾನವನ್ನು ಬ್ಯಾನ್ ಮಾಡಲಾಗದು]]
  ನೀವು ಒಂದು ಕಡೆ (ಮೇಲೆ ಹೇಳಿರುವಂತೆ) “ಮಡೆಸ್ನಾನ”ವನ್ನು ಸರಕಾರ ತಡೆಯಕೂಡದು ಎನ್ನುವ ಅರ್ಥ ಬರುವಂತೆ ಮಾತನಾಡಿರುವಿರಿ.
  [[Nagshetty Shetkar> ಮಡೆಸ್ನಾನ ಆಚರಿಸುವವರನ್ನು ನಿಯಂತ್ರಿಸಲು ಸರಕಾರವೇ ಏನಾದರೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ]]
  ಇದೀಗ, ಸರಕಾರವೇ ಕ್ರಮ ತೆಗೆದುಕೊಳ್ಳಲಿ ಎನ್ನುತ್ತಿರುವಿರಿ!

  ಕೆಲವರು ‘ಗಾಳಿ’ ಬಂದಂತೆ ತೂರಿಕೊಳ್ಳುವರು, ‘ಬಣ್ಣ’ ಬದಲಾಯಿಸುವರು.
  ನೀವು ಗಾಳಿಯೇ ಬೀಸದೇ ತೂರಾಡುತ್ತಿರುವಿರಿ!? ಆಗಾಗ ನಿಮ್ಮ ಪ್ರೀತಿಯ ಪ್ರಾಣಿಯಾದ ‘ನಾಯಿ’ಯನ್ನೂ ನೆನೆಸಿಕೊಳ್ಳುವಿರಿ!!
  ನಿಮ್ಮ ಪ್ರತಿಕ್ರಿಯೆಗಳನ್ನೆಲ್ಲಾ ಒಂದು ಪುಟ್ಟ ವಾಕ್ಯದಲ್ಲಿ ಸೇರಿಸಿ ಹೇಳಬೇಕೆಂದರೆ:
  “ಶೇಟ್ಕರ್ ಅವರ ಅಸಂಬದ್ಧ ಪ್ರಲಾಪ”!!

  ಉತ್ತರ
 11. ನವೀನ
  ನವೆಂ 26 2013

  ಇಷ್ಟು ದಿನ ನಮ್ಮ ಶೆಟ್ಕರ್ ಸರ್,ಎಲ್ಲಾಕಾಲದಲ್ಲೂ ಅವರ ಗುರುಗಳಾದ ದರ್ಗಾ ಅವರ ನಾಮಜಪ ಮಾಡುತ್ತಿರುವುದನ್ನು ನೋಡಬಹುದಾಗಿತ್ತು.ಈಗ ಅವರು ಬಾಲು ಅವರ ನಾಮಜಪ ಮಾಡುತ್ತಿರುವುದು ಸೋಜಿಗವಾಗಿದೆ.ಹೀಗೆ ಅವರು ಬಾಲು ಅವರ ಜಪ ಮಾಡಲು ಎರಡು ಕಾರಣಗಳನ್ನು ಊಹಿಸಬಹುದಾಗಿದೆ.
  ಒಂದು : ನಮ್ಮ ಶೆಟ್ಕರ್ ಸರ್ ಅವರಿಗೆ ಬಾಲು ಅವರ ವಾದಗಳಿಂದ ಪ್ರಭಾವಿತವಾಗಿರುವ ಸಾಧ್ಯತೆಯಿದೆ.
  ಎರಡು : ಅವರ ವಾದಗಳಿಂದ ಇವರ ವಾದಗಳು ಮಣ್ಣುಪಾಲಗುವ ಹೆದರಿಕೆಯಿರಬಹುದಾಗಿದೆ.

  ಉತ್ತರ
  • Nagshetty Shetkar
   ನವೆಂ 26 2013

   ದರ್ಗಾ ಸರ್ ಅವರೇ ಇಂದಿಗೂ ಎಂದೆಂದಿಗೂ ನನ್ನ ಗುರು. ಬಾಲು ಅವರ ವಾದ ನಿಮ್ಮ ಬಳಗದ ಲೇಖಕರಿಗೇ (ಉದಾ ಕುಮಾರ್) ತಿಳಿದಿಲ್ಲ! ಅದನ್ನು ನಂಬಿ ಉದ್ಧಾರವಾದವರು ಇಲ್ಲ. ಸಿ. ಎಸ್. ಎಲ್. ಸಿ. ಮುಚ್ಚಿದ ಮೇಲೂ ನಿಮಗೆ ಬುದ್ಧಿ ಬಂದಿಲ್ಲ.

   ಉತ್ತರ
   • Mukhesh
    ನವೆಂ 26 2013

    >>>>>ಸಿ. ಎಸ್. ಎಲ್. ಸಿ. ಮುಚ್ಚಿದ ಮೇಲೂ ನಿಮಗೆ ಬುದ್ಧಿ ಬಂದಿಲ್ಲ.<<<<<<
    ಅಹಂಕಾರದ ಆತ್ಮರಥಿಯ ದಾರ್ಷ್ಟ್ಯ ಆರೋಗ್ಯಕ್ಕೆ ಕುತ್ತು. ಸಿಎಸ್.ಎಲ್.ಸಿ. ಯವರ ಸಂಶೋಧನೆ ಸರಾಗವಾಗಿ ನಡೆಯುತ್ತಿರುವುದನ್ನು ಹೋಗಿ ನೋಡಿಕೊಂಡು ಬನ್ನಿ. ನೋಡಿದ ಮೇಲೆ ನಿಮಗೆ ಹೃದಯಾಘಾತವಾಗಿ ಕೈಲಾಸ ಸೇರದಿರಲೆಂದು ನನ್ನ ಪ್ರಾರ್ಥನೆ. (ಅವರ ಲೇಖನಗಳು, ಚರ್ಚೆಗಳು ಇಂದಿಗೂ ವಿಭಿನ್ನ ಪತ್ರಿಕೆ ಬ್ಲಾಗಗುಳಲ್ಲಿ ಜೀವಂತವಾಗಿ ನಡೆಯುತ್ತಿದೆ) ನಿಮ್ಮಂತಹ ಸಂಶೋಧನೆಗಳನ್ನು ಮುಚ್ಚುವಂತಹ ಲಜ್ಜೆಗೆಟ್ಟ ಮಾನಹೇಡಿಗಳು (ಆ ಪ್ರಯತ್ನವನ್ನು ಮಹಾಸಾಧನೆ ಎನ್ನುವಂತೆ ಕುಹಕವಾಡುವ ಕುತ್ಸಿತ ಬುದ್ದಿ ಬೇರೆ) ಸೇರಿಕೊಂಡು ಜ್ಞಾನದ ಹುಡಕಾಟವನ್ನು ನಿಲ್ಲಿಸಲಾಗುವುದಿಲ್ಲ ಎನ್ನುವುದಕ್ಕೆ ಇದು ಜೀವಂತ ಉಧಾಹರಣೆ.

    ಓರ್ವ ಶರಣನಿರಬೇಕಾದ ಯಾವ ಗುಣವೂ ತಮಗಿಲ್ಲ; ತನ್ನ ಬಣ್ಣನೆ; ಇತರರ ನಿಂದನೆ; ಅಹಂಕಾರ, ದ್ವೇಷ, ಕ್ರೌರ್ಯ ಎಲ್ಲದರ ಪ್ರತಿರೂಪವಾಗಿರುವ ಈ ಶೆಟ್ಕರ್ ನಂತವರು ದರ್ಗಾನಂತಹ ಸ್ವಹಿತಿ/ರತಿಯವರಿಗಲ್ಲದೆ ಬಸವಣ್ಣ/ಅಲ್ಲಮಪ್ರಭುಗಳಂತ ಮಹಾಜ್ಞಾನಿಗಳ ಶಿಷ್ಯರಾಗಿರಲು ಸಾಧ್ಯವೇ?? ಸೃಷ್ಟಿಯಲ್ಲಿ ಸಕಲ ಜೀವಿಗಳು ಬದುಕುವ ಸ್ವಾತಂತ್ರ್ಯ ಹೊಂದಿವೆ, ಅದು ಇಂತಹ ಜೀವಿಗಳಿಗೂ ಸಲ್ಲುತ್ತದೆ, ಏನುಮಾಡುವುದು ಸಹಿಸಲೇಬೇಕು. ಮುಂದುವರಿಯಲಿ ನಿಮ್ಮ ಸಣ್ಣತನದ ಕೀಳುಮಟ್ಟದ ಅಸಂಭದ್ದ ಪ್ರಲಾಪಗಳು.

    ಉತ್ತರ
    • Nagshetty Shetkar
     ನವೆಂ 26 2013

     “ಅವರ ಲೇಖನಗಳು, ಚರ್ಚೆಗಳು ಇಂದಿಗೂ ವಿಭಿನ್ನ ಪತ್ರಿಕೆ ಬ್ಲಾಗಗುಳಲ್ಲಿ ಜೀವಂತವಾಗಿ ನಡೆಯುತ್ತಿದೆ”

     oh really? Give some references.

     ಉತ್ತರ
     • Mukhesh
      ನವೆಂ 26 2013

      Reference ಕೊಟ್ರೆ ಅಲ್ಲಿಂದಲೂ ಕದ್ದು ತಂದು ಇಲ್ಲಿ ಪ್ರಶ್ನೆ ಕೇಳಬಹುದೆಂದೇ?
      ತುಮಕೂರು ವಿವಿ ಯ social science journal, ಚಿಂತನಬಯಲು ಪತ್ರಿಕೆ, ಕುವೆಂಪು ವಿವಿಯಿ ಪ್ರಸಾರಾಂಗದಿಂದ ಇತ್ತೀಚಿಗೆ ಪ್ರಕಟಿತ ಪುಸ್ತಕಗಳು, cslc blog ಮತ್ತ ಅದರ facebook ಪುಟಗಳನ್ನು ಹುಡುಕಿ ಒಮ್ಮೆ ನೋಡಿ. ಆಘಾತವಾದೀತು ಎಚ್ಚರ.
      ಅಂದ ಹಾಗೆ ದರ್ಗಾನೆ ತಮ್ಮ ಗುರು ಅಂದ ಮೇಲೆ ಬಾಲಗಂಗಾಧರರಿಂದ ಕದ್ದು ಪ್ರಶ್ನಿಸುತ್ತೀರಲ್ಲ ತಮ್ಮ ಬೌದ್ದಿಕ ಪ್ರಾಮಾಣಿಕತೆ ಬಗ್ಗೆ ನಾಚಿಕೆ ಮರ್ಯಾಧೆ ಇಲ್ಲವೇ??

      ಉತ್ತರ
      • Mukhesh
       ನವೆಂ 26 2013

       ಸಾಹೇಬ್ರು ವಿಷಯ ಕೇಳಿ ಖಾತರಿಯಾದ ಮೇಲೆ ಹಾರ್ಟ್ ಅಟ್ಯಾಕ್ ಆಗಿ ಹೊಗಿಬಿಟ್ರು ಅನ್ಸುತ್ತೆ, ಪಾಪ…. ಶಾಂತಿ ಸಿಗಲಿ!!!!

       ಉತ್ತರ
      • Nagshetty Shetkar
       ನವೆಂ 26 2013

       ಬಹಳ ಸಂತೋಷ. ಹೀಗೆ ಹೆಸರಿಲ್ಲದ ಮೂರನೇ ದರ್ಜೆಯ ಜರ್ನಲ್ಲುಗಳಲ್ಲಿ ನಿಮ್ಮ ರೀಸರ್ಚ್ ಪೇಪರುಗಳನ್ನು ಛಾಪಿಸಿ ಶಿಷ್ಯರಿಗೆ ಪಿ ಎಚ್ ಡಿ ಡಿಗ್ರೀ ಕೊಡಿಸಿ . ಮತ್ತೆಂದೂ ಪ್ರಜಾವಾಣಿಯಲ್ಲಿ ತಲೆ ತೋರುವ ಉದ್ಧಟತನ ತೋರಿಸಬೇಡಿ.

       ಉತ್ತರ
       • Mukhesh
        ನವೆಂ 26 2013

        ನಿಮ್ಮ ಹೊಲಸು ಬುದ್ದಿ ಮತ್ತು ಫ್ಯಾಸಿಸಂ ಅನ್ನು ಎಷ್ಟುಚೆನ್ನಾಗಿ ಪ್ರದರ್ಶನಕ್ಕಿಡುತ್ತಿದ್ದೀರಿ. ಪ್ರಜಾವಾಣಿಯಲ್ಲಿ ಪ್ರಕಟವಾದರೇನೆ ಅದು ರೀಸರ್ಚ್ ಅನ್ನೊ ಬಾಲಿಶವಾದ ಅಜ್ಞಾನ ಇಟ್ಕೊಂಡಿರೋ ನಿಮ್ಮ ಕೂಪಮಂಡೂಕ ಬುದ್ದಿಗೆ ಮರುಕಪಡದೆ ವಿದಿ ಇಲ್ಲ. ಅಂದ ಹಾಗೆ ದಿನ ಬೆಳಗಾದರೆ ಆ ಪತ್ರಿಕೆ ತುಂಬಾ ನಿಮ್ಮ ಲೇಖನಗಳೇ ತುಂಬಿದೆಯಂತೆ,,… ನಿನಗೆ ಒಂದೇ ಒಂದು ಸುಸಂಬದ್ದವಾದ ಲೇಖನ ಬರೆಯುವ ಇಲ್ಲವೇ ಚರ್ಚೆ ಮಾಡುವ ಯೋಗ್ಯತೆ ಇಲ್ಲದಿದ್ದರೂ ಸುಮ್ಮನೆ ಬಡಾಯಿ ಕೊಚ್ಕೊಳ್ಳೊಕೆ ನಾಚಿಕೆ ಇಲ್ವಾ?? ಇದುವರೆಗೂ ಈ ತಾಣದಲ್ಲಿ ಕೇಳಿದ ಯಾವುದೇ ಪ್ರಶ್ನೆಗಳಿಗೆ ತರ್ಕಬದ್ದವಾದ ಉತ್ತರ ಕೊಡೊಕೆ ಸಾಧ್ಯವಾಗಿದೆಯೇ ತಮಗೆ??? ಇದರ ಮಧ್ಯ ಬೇರೆಯವರ ವಾದಗಳನ್ನು ಕದ್ದು ಚಾಪಿಸಿಕೊಂಡು ಬೌದ್ದಿಕ ಅಪ್ರಾಮಾಣಿಕತೆಯನ್ನೇ ರಕ್ತಗತಗೊಳಿಸಿಕೊಂಡಿರವ ತಮಗೆ ಅವರ ಬಗ್ಗೆ ಮಾತಡುವ ಅರ್ಹತೆ ಇದೆಯೇ ಎನ್ನುವುದು ಓದುಗರಿಗೆಲ್ಲರಿಗೂ ಗೊತ್ತಿದೆ.

        ಉತ್ತರ
        • ನವೆಂ 26 2013

         Whole world knows who counts words in the name of research.

         ಉತ್ತರ
         • Mukhesh
          ನವೆಂ 26 2013

          ಬಂದ್ಯಾ ಈ ವಿಷಯಕ್ಕೆ ನಾನೂ ಕಾಯ್ತಿದ್ದೆ. ಬಹಳಾ ದಿನದಿಂದ ಈ ವಿಷಯ ಪ್ರಸ್ತಾಪಿಸಿ ಗುಮ್ಮ ತೋರಿಸುತ್ತಿರುವ ನಿಮ್ಮ ಗ್ರಹಚಾರ ಬಿಡಿಸಬೇಕೆಂದಿದ್ದೆ. ಇದನ್ನು ಪ್ರಸ್ತಾಪಿಸಿದ್ದಕ್ಕೆ ್ಯಾಂಕ್ಸ್.

          ಈಗ ಹೇಳಿ ಆ ಲೇಖನದಲ್ಲಿ ವಚನಗಳಲ್ಲಿ ಜಾತಿಗಳ ಉಲ್ಲೇಖದ ಲೆಕ್ಕ ಹಾಕಿದ್ದರಲ್ಲಿ ಯಾವ ತರ್ಕ ಧೋಷ ಇದೆ? ಅಸಂಬದ್ದವಾದ ಪ್ರಲಾಪಗಳನ್ನು ಬಿಟ್ಟು ತಾಕತ್ತಿದ್ದರೆ ತರ್ಕಬದ್ದವಾದ ವಾದದ ಮೂಲಕ ಸಾಭೀತು ಮಾಡಿ. ಈ ವಿಚಾರದಲ್ಲಿ ತಮ್ಮ ಮಹಾಜ್ಞಾನವನ್ನು ತೋರಿಸಿ, ಧೈರ್ಯವಿದ್ದರೆ …. ತಮ್ಮ ಬೌದ್ದಿಕ ಹೇಡಿತನ ಬಲ್ಲ ಓದುಗರು ನೆಪಗಳನ್ನು ಮುಂದಿಟ್ಟು ಪಲಾಯನ ಮಾಡುತ್ತೀರಿ ಎಂದು ಗೊತ್ತು. ಆದರೂ ಸವಾಲಿಗೆ ಸಿದ್ದವೇ ???

          ಲಗೋರಿ: ಊಸರವಳ್ಳಿ/ಗೋಸುಂಬೆಗಳಿಗೆ ನಾಗ……..ರ್ ಅಂತೇನಾದರ‌್ ಬಯಾಲಜಿಕಲ್ ಹೆಸರಿದಿಯೇ???
          ಬಲ್ಲವರು ಉತ್ತರಿಸಬೇಕು.

          ಉತ್ತರ
          • ನವೆಂ 26 2013

           Mr. Mukhesh, “ಬಂದ್ಯಾ ಈ ವಿಷಯಕ್ಕೆ” ekavachanadalli sambodhisi nimma asali sanskruti yaavudendu heliddeeri, dhanyavvadagalu. I’ve no time for rowdy elements. Please don’t waste my time.

          • Mukhesh
           ನವೆಂ 27 2013

           Mr. Shetkar .. ವಾದಗಳನ್ನು ಬೌದ್ದಿಕವಾಗಿ ಎದುರುಸಲಾಗದೆ ಹೇಡಿತನದಿಂದ ಸಂಶೋಧನೆಯನ್ನು ನೀಲ್ಲಿಸುವ ನೀಚತನವನ್ನು ಕೊಚ್ಚಿಕೊಳ್ಳುವ ಮುಖೇಡಿಗಳಿಗೆ ಇದು ಕಡಿಮೆಯೇ. ಎಲ್ಲಿ ಹೇಡಿತನದಿಂದ ಪರಾರಿಯಾಗುವ ಪ್ರಯತ್ನ ಮಾಡ್ತಿದ್ದೀರಿ??? ತೋರಿಸಿ ತಮ್ಮ ಬೌದ್ದಿಕ ಸಾಮರ್ಥ್ಯವನ್ನು,. ತಿಳಿಯಲಿ ಜಗತ್ತಿಗೆ ಅಲ್ಲಿ ಲೆಕ್ಕ ಹಾಕಿದ್ದುರಲ್ಲಿ ಏನು ತಪ್ಪಿತ್ತು ಅಂತ. ಇದನ್ನು ನೀವುಸಾಭೀತು ಮಾಡಲಿಲ್ಲ ಅಂದ್ರೆ ತಾಣಗಳಲ್ಲಿ ನೀವು ಎಲ್ಲಿ ಬಂದ್ರೂ ಅಲ್ಲಿ ನಾನು ಬಂದು ತಮ್ಮನ್ನು ಇದನ್ನು ಪ್ರಸ್ತಾಪಿಸಿ ಹೇಡಿ ಎಂದೇ ಸಂಭೋದಿಸುತ್ತೇನೆ. ಸುಲಭಕ್ಕೆ ಬಿಡುವುದಿಲ್ಲ. ಹಿಟ್ ಅಂಡ್ ರನ್ ಮಾಡಲು ಬೌದ್ದಿಕ ಚರ್ಚೆ ಏನು ಹುಡುಗಾಟ ಮಾಡ್ಕೊಂಡಿದ್ದೀರಾ. ಚಿಂತಕರ ಸಭ್ಯತೆಯನ್ನೇ ದಾಳ ಮಾಡಿಕೊಂಡಿರೋ ತಮ್ಮಂತವರ ಆಟ ನನ್ನತ್ರ ನಡೆಯಲ್ಲ.

          • Nagshetty Shetkar
           ನವೆಂ 27 2013

           ನಿಮಲ್ಲಿ ಇಲ್ಲದ ಸಭ್ಯತೆಯನ್ನು ನಾನು ಹೇಗೆ ದಾಳ ಮಾಡಿರುವೆ?!!

           ಪ್ರಜಾವಾಣಿಯಲ್ಲಿ ಅನೇಕರು ನಿಮ್ಮ ವಾದ ಪೊಳ್ಳು ಎಂದು ಸಾಬೀತು ಪಡಿಸಿದ್ದಾರೆ. ಆದರೆ ನೀವು ಭಂಡರಂತೆ ಮತ್ತೆ ಮತ್ತೆ “ಲೆಕ್ಕ ಹಾಕಿದ್ದುರಲ್ಲಿ ಏನು ತಪ್ಪಿತ್ತು” ಎಂದು ಕೇಳುತ್ತಿದ್ದೀರಿ!! ನಿಮ್ಮದು ಜಾಣ ಕುರುಡೂ ಅಲ್ಲ, ಜಾಣ ಕಿವುಡೂ ಅಲ್ಲ. ತೀವ್ರಗಾಮಿ ಮತೀಯತೆ. ನೀವು ನಿಲುಮೆಗೆ ಕೆಟ್ಟ ಹೆಸರು ತರುತ್ತಿದ್ದೀರಿ.

          • Mukhesh
           ನವೆಂ 27 2013

           ಅದೇನು ಸಾಭೀತು ಮಾಡಿದ್ದಾರೆ ಅಂತ ತಮ್ಮ ತಲೆ ಉಪಯೋಗಿಸಿ ಇಲ್ಲಿ ಸಾಭೀತು ಮಾಡಿ ಗುರುವೇ.. ಒಸಿ ತಮಗೂ ಬುದ್ದಿಶಕ್ತಿ ತಕ್ಕಮಟ್ಟಿಗೆ ಇದೆ ಅಂತಾದ್ರೂ ತೋರ್ಸಿ. ಯಾಕೆ ಯಾರ್ಯಾರೋ ಏನೇನೋ ಸಾಭೀತು ಮಾಡಿಬಿಟ್ಟಿದ್ದಾರೆ ಎನ್ನುವ ಮಂಡಿಗೆ ತಿನ್ನುತ್ತಿದ್ದೀರಿ. ನಿಮಗೆ ತಲೆ ಅಂತ ಇದ್ರೆ ಅದೇನು ಸಾಬೀತು ಮಾಡಿದ್ದಾರೆ ಅಂದ ಒಸಿ ಇಲ್ಲಿ ವಿವರಿಸಿ. ಸ್ವಂತ ಬುದ್ದಿ ಇದ್ದರೆ ತಾನೆ ಮಾಡೋಕೆ.

           ಒಂದೇ ಒಂದು ತರ್ಕಬದ್ದ ಪ್ರಶ್ನೆಗೂ ಉತ್ತರ ಕೊಡಲು ತಾಕತ್ತಿಲ್ಲದೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ ನೆಪಗಳನ್ನು ಕುಹಕಗಳನ್ನು ಆಡಿಕೊಂಡು ತೆವಳುವ ನಿಮ್ಮ ಜಗಭಂಡತನವನ್ನು ನಿಲುಮೆಯ ಓದುಗರು ಕಂಡಿದ್ದಾರೆ. ನಿಮ್ಮ ಭಂಡತನ ಮತ್ತು ಅಜ್ಞಾನಕ್ಕೆ ತಟ್ಟಲು ಬೇಕಾದ ಭಾಷೆ ಇದೇ… ತಾವು ಬೌದ್ದಿಕವಾಗಿ ಚರ್ಚಿಸಿದರೆ ಬೌದ್ದಿಕವಾಗಿ ಉತ್ತರ…. ಕುಹಕವಾಡಿದರೆ ಅದಕ್ಕಿಂತಲೂ ಮೇಲ್ಮಟ್ಟದ ಕುಹಕ ನನ್ನದು.

           ತಾವೇ ಕುದ್ದಾಗಿ ನಿಂತು ಸಂಶೋಧಕರಿಗೆ ನಿವೃತ್ತಿ ನೀಡಿ ಮನೆಗೆ ಕಳುಹಿಸಿದ ಹಾಗೆ ಕುಟಿಲಕುಹಕ ಮಾಡ್ತಿದ್ದಾಗ ನಿಮ್ಮ ಭಂಡತನ ನೆನಪಾಗಲಿಲ್ವಾ ತಮಗೆ.

           ಸುಮ್ನೆ ನಾಟಕ ಬೇಡ. ಸಾಬೀತು ಮಾಡಿ ಅದೇನು ಪೊಳ್ಳು ಅಂತ ಇಲ್ಲ ಅಂದ್ರೆ ನೀವೊಬ್ಬ ರಣಹೇಡಿ ಅನ್ನುವುದು ಓದುಗರಿಗೆ ವೇದ್ಯವಾಗುತ್ತದೆ.

          • Nagshetty Shetkar
           ನವೆಂ 27 2013

           “ಅದೇನು ಸಾಭೀತು ಮಾಡಿದ್ದಾರೆ”

           Read Prajavani. Don’t waste my time with your meaningless and tasteless rant.

          • Mukhesh
           ನವೆಂ 27 2013

           ನಾನು ಓದೋದು ಆಮೇಲಿರಲಿ ಮೊದಲು ಅದು ತಮಗೆ ಅರ್ಥವಾಗಿದೆ ಎನ್ನವುದನ್ನು ಸಾಭೀತು ಮಾಡಿ. ಹೇಡಿತನದಿಂದ ಓಡಿಹೋಗುತ್ತಿರುವುದೇಕೆ? ಇಲ್ಲಿ ಯಾರು ಏನು ಬರೆದರೂ ಬಂದು ವ್ಯಂಗ-ಕುಹಕದ ಕಮೆಂಟುಗಳನ್ನು ಮಾಡ್ತಲೇ ಬಿದ್ದಿರುವ ತಾವು ಕೆಲಸವಿಲ್ಲದೆ ಎಷ್ಟು ವೇಸ್ಟ್ ಆಗಿ ಬಿದ್ದಿದ್ದೀರಿ ಎನ್ನವುದು ನಿಲುಮೆಯ ಓದುಗರಿಗೆ ಈಗಾಗಲೇ ವೇದ್ಯವಾಗಿದೆ. ಸುಮ್ಮನೆ ನಿಮ್ಮ ದಡ್ಡತನ ಅಜ್ಞಾನಕ್ಕೆ ಸಮಯ ಹಾಳು ಎನ್ನುವ ಮುಖವಾಡದ ಫೋಸು ಬೇಡ.

          • Nagshetty Shetkar
           ನವೆಂ 27 2013

           “ಇಲ್ಲಿ ಯಾರು ಏನು ಬರೆದರೂ ಬಂದು ವ್ಯಂಗ-ಕುಹಕದ ಕಮೆಂಟುಗಳನ್ನು ಮಾಡ್ತಲೇ ಬಿದ್ದಿರುವ ತಾವು”

           this is false allegation. My reaction to articles is based on their merits. I’ve opposed regressive and communal views. Mr Bhat said many bad things about Muslims. I condemned his fundamentalist attitude towards Muslims. I am against stereotyping.

          • Mukhesh
           ನವೆಂ 27 2013

           ಸದಾ ಇಲ್ಲೇ ಬಿದ್ದು ಹೊರಳಾಡ್ತಾ ಇರ್ತೀರಿ ಅನ್ನೋದು ನಿಜ ತಾನೇ… ಮತ್ತೇನು ತಮ್ಮ ಅಸಮರ್ಥತೆಗೆ ಟೈಮ್ ವೇಸ್ಟು ಅನ್ನೊ ನಾಟಕ. ಹೇಡಿತನಕ್ಕೆ ಈ ರೀತಿಯ ಮುಖವಾಡ ಬಿಟ್ಟು ಅದೇನು ಸಾಬೀತು ಆಗಿದೆ ಅಂದ್ರಲ್ಲ ತೋರಿಸಿ ಇಲ್ಲಿ. ನಾಟಕ ಬೇಡ.

         • ನವೆಂ 27 2013

          ಶೇಟ್ಕರ‍್..

          ಸಂಶೋಧನೆಯಲ್ಲಿ ಲೆಕ್ಕ ಮಾಡಿ ವಿಶ್ಲೇಷಣೆ ಮಾಡದೆ ಇನ್ನೇನು ಮಾಡುತ್ತಾರೆ? ಬೇರೆ ವಿಧಾನ ಯಾವುದು ತಿಳಿಸಿ?

          ಉತ್ತರ
       • ನವೆಂ 27 2013

        ಶೇಟ್ಕರ‍್

        ಲೇಖನಗಳು ಯಾವ ಜರ್ನಲ್ ನಲ್ಲಾದರೂ ಬರಲಿ, ಅದರ ಕುರಿತು ತಮ್ಮ ತಕರಾರು ಏನು? ವಾದಗಳಲ್ಲಿ ಏನು ತೊಂದರೆ ಇದೆ? ಅವುಗಳನ್ನು ಚಿರ್ಚಿಸಿ..ವಯಕ್ತಿಕ ಟೀಕೆ ಕೊಂಕುಗಳು ನಿಮಗಿಂತ ಚೆನ್ನಾಗಿ ರೂಢಿಸಿಕೊಂಡಿದ್ದೇನೆ..ಇನ್ನು ಪಿ.ಹೆಚ್.ಡಿ ವಿಷಯದ ಕುರಿತು.. ತಾವು ಯಾರ ಪ್ರಬಂಧವನ್ನು ಓದಿದ್ದೀರಾ? ಯಾರು ಯಾವ ವಿಷಯದ ಕುರಿತು ಅಧ್ಯಯನ ನಡೆಸುತ್ತಿದ್ದಾರೆ, ಅವರ ವಾದಗಳೇನು ಎಂಬುದು ತಮಗೆ ತಿಳಿದಿದೆಯೆ?

        ನಿಮ್ಮ ಲೇಖನಗಳು ಯಾವ ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಸಾರವಾಗುತ್ತಿದೆ?

        ಉತ್ತರ
        • Nagshetty Shetkar
         ನವೆಂ 27 2013

         Mr. Santosh, I’m not a postdoc in Ghent university. I don’t have to publish in foreign conferences for free foreign trip. I find satisfaction in serving people. I’m a field worker.

         Prajavani episode has left a big scar on your face. May be it is a deep wound.

         ಉತ್ತರ
         • ಡಿಸೆ 2 2013

          ಶೇಟ್ಕರ್..

          ನಾನು ಏನಾದರೂ ಮಾಡಿಕೊಂಡಿರಲಿ,ಚರ್ಚೆಯನ್ನು ನೋಡಿದವರಿಗೆ ಗಾಯ ಮತ್ತು ಉರಿ ಯಾರಿಗೆ ಆಗಿದೆ ಎಂದು ಗೊತ್ತಾಗುತ್ತದೆ. ಅದಿರಲಿ, ನಾನು ಕೇಳಿದ ಪ್ರಶ್ನೆಗೆ ಉತ್ತರ ಇದ್ದರೆ ದಯಮಾಡಿ ಕೊಡಿ..ಪೋಸ್ಟ್ ಡಾಕ್ ಮಾಡಲು ನಿಮ್ಮ ಅಪ್ಪಣೆ ಅಗತ್ಯವಿಲ್ಲ.. ಅದು ನನ್ನ ಇಚ್ಚೆಗೆ ಬಿಟ್ಟಿರುವುದು.. ನಿಮ್ಮ ಕಂತೆ ಪುರಾಣ ಬಿಟ್ಟು ಚರ್ಚೆಯಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ ಸಾಕು..ಮತ್ತೆ ನಿಮ್ಮ ಕಾಮಿಡಿ ಟೈಮ್ ಸ್ಟಾರ್ಟ್ ಮಾಡಬೇಡಿ..ವಯಕ್ತಿಕ ಕುಹಕ ಬಿಟ್ಟಿ ಪ್ರಶ್ನೆಗಳಿಗೆ ಉತ್ತರಿಸಿ..ಅದು ನಿಮ್ಮ ಇಂಟಲೆಕ್ಚುವಲ್ ಹಾನೆಸ್ಟಿಯನ್ನು ತೋರಿಸುತ್ತದೆ..

          ದೀನ ದಲಿತರ ಹೆಸರಲ್ಲಿ ದುಡ್ಡು ಮಾಡಿ ಮೈಸೂರು ಬೆಂಗಳೂರಿನಲ್ಲಿ ಹೊಟ್ಟೆ ಹೊರೆದುಕೊಂಡು ಅವರಿವರ ತಲೆ ಮೇಲೆ ಚಪ್ಪಡಿ ಎಳೆಯುವುದಕ್ಕಿಂತ ನಿಜವಾದ ಸಮಸ್ಯೆಯನ್ನು ಹುಡುಕುವುದು ನನಗೆ ಸರಿ ಎನಿಸುತ್ತದೆ..

          ಕಾಮಿಡಿಗಳ ದೊಡ್ಡಪ್ಪ: ನಿಂಬೆಹುಳಿ

          ಉತ್ತರ
         • ಡಿಸೆ 2 2013

          ಮಿ/ಮಿಸಸ್..ಶೇಟ್ಕರ್

          ಉತ್ತರ ಹೇಳಿ ಸಾಕು..ಪುರಾಣ ಕತೆ ಕೇಳಿ ಕೇಳಿ ಸಾಕಾಗಿದೆ..

          ಉತ್ತರ
 12. Nagshetty Shetkar
  ನವೆಂ 26 2013

  “ಓರ್ವ ಶರಣನಿರಬೇಕಾದ ಯಾವ ಗುಣವೂ ತಮಗಿಲ್ಲ” I didn’t ask for character certificate from character less people. I’m a humble Sharana.

  ಉತ್ತರ
  • ನವೀನ
   ನವೆಂ 26 2013

   ‘humble Sharana’ ಅಂದರೆ ‘humble’ ಅಲ್ಲದ ಶರಣರು ಇದ್ದಾರೆ ಅನ್ನುವ ಅರ್ಥವಾಗಬಹುದಾಗಿದೆ!

   ಉತ್ತರ
 13. gururaj k
  ನವೆಂ 26 2013

  ಯಾವುದೇ ಒ೦ದು ನ೦ಬಿಕೆ,ಆಚರಣೆಯಿ೦ದ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ವೈಯಕ್ತಿಕವಾಗಿ ಅಥವಾ ಸಾರ್ವಜನಿಕವಾಗಿ ಹಾನಿಯು೦ಟಾದರೇ ( ಅದು ಮಾನಸಿಕ,ದೈಹಿಕ,ಸಾಮಾಜಿಕ,ಆರ್ಥಿಕ ಅಥವಾ ಇನ್ಯಾವುದೇ ರೀತಿಯ ಹಾನಿಯಾಗಿರಬಹುದು) ಅದನ್ನು ಮೂಡನ೦ಬಿಕೆ ಎನ್ನಬಹುದೇನೋ

  ಉತ್ತರ
 14. Mukhesh
  ನವೆಂ 26 2013

  ವಾದಗಳನ್ನು ಬೌದ್ದಿಕವಾಗಿ ಎದುರುಸಲಾಗದೆ ಹೇಡಿತನದಿಂದ ಸಂಶೋಧನೆಯನ್ನು ನೀಲ್ಲಿಸುವ ನೀಚತನವನ್ನು ಕೊಚ್ಚಿಕೊಳ್ಳುವ ಮುಖೇಡಿಗಳಿಗೆ ಇದು ಕಡಿಮೆಯೇ. ಎಲ್ಲಿ ಹೇಡಿತನದಿಂದ ಪರಾರಿಯಾಗುವ ಪ್ರಯತ್ನ ಮಾಡ್ತಿದ್ದೀರಿ??? ತೋರಿಸಿ ತಮ್ಮ ಬೌದ್ದಿಕ ಸಾಮರ್ಥ್ಯವನ್ನು,. ತಿಳಿಯಲಿ ಜಗತ್ತಿಗೆ ಅಲ್ಲಿ ಲೆಕ್ಕ ಹಾಕಿದ್ದುರಲ್ಲಿ ಏನು ತಪ್ಪಿತ್ತು ಅಂತ. ಇದನ್ನು ನೀವುಸಾಭೀತು ಮಾಡಲಿಲ್ಲ ಅಂದ್ರೆ ತಾಣಗಳಲ್ಲಿ ನೀವು ಎಲ್ಲಿ ಬಂದ್ರೂ ಅಲ್ಲಿ ನಾನು ಬಂದು ತಮ್ಮನ್ನು ಇದನ್ನು ಪ್ರಸ್ತಾಪಿಸಿ ಹೇಡಿ ಎಂದೇ ಸಂಭೋದಿಸುತ್ತೇನೆ. ಸುಲಭಕ್ಕೆ ಬಿಡುವುದಿಲ್ಲ. ಹಿಟ್ ಅಂಡ್ ರನ್ ಮಾಡಲು ಬೌದ್ದಿಕ ಚರ್ಚೆ ಏನು ಹುಡುಗಾಟ ಮಾಡ್ಕೊಂಡಿದ್ದೀರಾ. ಚಿಂತಕರ ಸಭ್ಯತೆಯನ್ನೇ ದಾಳ ಮಾಡಿಕೊಂಡಿರೋ ತಮ್ಮಂತವರ ಆಟ ನನ್ನತ್ರ ನಡೆಯಲ್ಲ.

  ಉತ್ತರ
 15. nagaraja shetty
  ನವೆಂ 28 2013

  ತಾಯಿ ತನ್ನ ಮಗುವಿಗೆ ಇವರೇ ನಿನ್ನ ತಂದೆ ಎಂದರೆ ಅದನ್ನು ಮಗು ನಂಬುವುದು, ಇದನ್ನು ಮಗುವು ಆಧಾರಸಹಿತ ನಿರೂಪಿಸಲು ಕೇಳುವುದಿಲ್ಲ, ಇದುವೇ ನಂಬಿಕೆ ಎಂದು ಹೇಳಿದ್ದೀರಿ. ತಾಯಿಯು ಮಗುವಿಗೆ ತಂದೆ ಎಂದು ಹಾದಿಯಲ್ಲಿ ಹೋಗುವ ವ್ಯಕ್ತಿಯನ್ನು ತೋರಿಸುವುದಿಲ್ಲ ಹಾಗೆ ತೋರಿಸುವುದು ತಾನು ಮದುವೆ ಆದ ವ್ಯಕ್ತಿಯನ್ನು ಮಾತ್ರ ತೋರಿಸುವ ಕಾರಣ ಇದಕ್ಕೆ ಸಾಮಾಜಿಕ ನಿಯಮಗಳ ಆಧಾರ ಇದೆ. ಹಾಗಾಗಿ ಇಲ್ಲಿ ಅವರು ನನ್ನ ಅಪ್ಪ ಅಲ್ಲ ಎಂದು ಮಕ್ಕಳಿಗೆ ಯಾವ ಸಂದೇಹವೂ ಬರುವುದಿಲ್ಲ ಎಂಬುದನ್ನು ಗಮನಿಸಬೆಕು. ನಮ್ಮ ಸಾಮಾಜಿಕ ನಿಯಮಗಳ ಪ್ರಕಾರ ಮದುವೆ ಆದವರು ಮಾತ್ರ ಮಕ್ಕಳನ್ನು ಹೊಂದುವುದು ನೈತಿಕ ಎನಿಸಿಕೊಳ್ಳುತ್ತದೆ. ಹೀಗಾಗಿ ತಂದೆಯ ವಿಷಯದಲ್ಲಿ ತಾಯಿ ಏನು ಹೇಳಿದರೂ ಅದಕ್ಕೆ ಈ ಸಾಮಾಜಿಕ ನೈತಿಕ ನಿಯಮಗಳ ಬಲವಾದ ಆಧಾರ ಇದೆ.

  ಪರಮಾಣುವಿನ ಕುರಿತು ವಿದ್ಯಾರ್ಥಿಗಳು ಪಾಠದಲ್ಲಿ ಹೇಳಿದ್ದನ್ನು ನಂಬುತ್ತಾರೆ ಆದರೆ ಅದು ಆಧಾರ ಇಲ್ಲದ ನಂಬಿಕೆ ಅಲ್ಲ. ಪ್ರತಿಯೊಂದು ವಸ್ತುವೂ ಪರಮಾನು ಎಂಬ ಘಟಕಗಳಿಂದ ಆಗಿದೆ ಎಂಬುದನ್ನು ಪ್ರಪಂಚದ ಎಲ್ಲಾ ವಿಜ್ಞಾನಿಗಳು ಆಧಾರ ಸಹಿತ ನಿರೂಪಿಸಿದ ನಂತರವೇ ಒಪ್ಪಿದ್ದಾರೆ. ಹಾಗೆ ಒಪ್ಪಿದ ನಂತರವೇ ಅದನ್ನು ಪಾಠದಲ್ಲಿ ಸೇರಿಸಲಾಗಿದೆ ಹಾಗೂ ಅದನ್ನೇ ಶಿಕ್ಷಕರು ಬೋಧಿಸುತ್ತಾರೆ. ಹೀಗಾಗಿ ಅದು ಆಧಾರರಹಿತ ನಂಬಿಕೆ ಅಲ್ಲ. ವಸ್ತುಗಳು ಪರಮಾಣು ಎಂಬ ಘಟಕಗಳಿಂದ ಆಗಿದೆ ಎಂಬ ವಿಷಯದಲ್ಲಿ ವಿಜ್ಞಾನಿಗಳಲ್ಲಿ ಇಂದು ಯಾವುದೇ ವಿವಾದ ಇಲ್ಲ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments