ಸೇವಾ ಮನೋಭಾವನೆ ಮತ್ತು ಯುವಕ ಮಂಡಲ
– ಶ್ರೀ ಸಿದ್ಧಕೃಷ್ಣ, ಶ್ರೀ ಸಂತೋಷ್ ಹೆಚ್, ಶ್ರೀ ವಿಶ್ವನಾಥ ಆಚಾರ್ಯ
ಭಾರತ ಗ್ರಾಮಗಳ ದೇಶ, ಸರಿ ಸುಮಾರು ಆರು ಸಾವಿರಕ್ಕಿಂತಲೂ ಹೆಚ್ಚು ಹಳ್ಳಿಗಳಿವೆ, ಭಾರತದ ಹೃದಯ ಗ್ರಾಮಗಳಲ್ಲಿದೆ. ಇಂತಹ ಗ್ರಾಮಗಳಲ್ಲೊಂದು ವೈಶಿಷ್ಟ್ಯ ಗ್ರಾಮವೇ ಎಲ್ಲೂರು. ‘ದಕ್ಷಿಣದ ಕಾಶಿ’ ಎಂದೇ ಪ್ರಸಿದ್ದಿ ಪಡೆದಿರುವ ಮಹತೋಭಾರ ಶ್ರೀ ವಿಶ್ವನಾಥ ದೇವಾಲಯವಿರುವ ಗ್ರಾಮ ಇದಾಗಿದೆ. ನಿಸರ್ಗ ಸೌಂದರ್ಯದ ಮಡಿಲಿನಲ್ಲಿ ಸಾಂಸ್ಕೃತಿಕ ಮೆರುಗಿನೊಂದಿಗೆ ತನ್ನದೇ ಛಾಪನ್ನು ಉಡುಪಿ ಜಿಲ್ಲೆಯಲ್ಲಿ ಮೂಡಿಸಿದೆ. ಕರ್ನಾಟಕದಲ್ಲಿ ಕರಾವಳಿಯು ಮಾನವ ಸಂಪನ್ಮೂಲದಲ್ಲಿ ತನ್ನದೇ ಶ್ರೇಷ್ಠತೆ ಹೊಂದಿರುವಂತೆಯೇ ಎಲ್ಲೂರು ಗ್ರಾಮವೂ ಈ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಐವತ್ತು ವರ್ಷ ಪೂರ್ಣಗೊಳಿಸಿರುವ ಇಲ್ಲಿನ ಯುವಕ ಮಂಡಲವೇ ಸಾಕ್ಷಿ. ಎಲ್ಲೂರು ಯುವಕ ಮಂಡಲವು ಸಾಮಾಜಿಕ; ದಾರ್ಮಿಕ ಕಾರ್ಯಗಳ ಸೇವೆಯೊಂದಿಗೆ ವಿಶಿಷ್ಟ ಸಂಘಟನೆಯಾಗಿ ತನ್ನದೇ ಆದ ಒಂದು ಹೊಸ ಮಾದರಿಯನ್ನೇ ಹುಟ್ಟು ಹಾಕಿದೆ ಎಂದರೇ ಅತಿಶಯೋಕ್ತಿಯಲ್ಲ.
ಗಾ೦ಧಿ ಹ೦ತಕ ಗೋಡ್ಸೆ ಮತ್ತು ಆರ್.ಎಸ್.ಎಸ್ ಎನ್ನುವ ಭಯೋತ್ಪಾಧಕ ಸ೦ಘಟನೆ ..!!!
– ಗುರುರಾಜ್ ಕೊಡ್ಕಣಿ
ಆತ ಹೇಳುತ್ತಲೇ ಹೋದ .’ನೀವು ಏನೇ ಹೇಳಿ ಸರ್,ಆರ್.ಎಸ್.ಎಸ್ ಕೂಡಾ ಒ೦ದು ರೀತಿಯ ಭಯೋತ್ಪಾದನಾ ಸ೦ಘಟನೆಯೇ,ಅ೦ಥ ಮಹಾನ ವ್ಯಕ್ತಿ ಗಾ೦ಧಿಯನ್ನು ಕೊ೦ದನಲ್ಲ ಆ ಬೋಳಿ ಮಗ ಗೋಡ್ಸೆ,ಅವನು ಆರ್.ಎಸ್.ಎಸ್ ನವನೇ.ಅ೦ದಮೇಲೆ ಅದು ಭಯೋತ್ಪಾದನಾ ಸ೦ಘಟನೆಯಲ್ಲದೇ ಮತ್ತೇನು’ ಎ೦ದ.ಆತ ನನಗೆ ಪರಿಚಿತ.ಇದುವರೆಗೂ ಆತ ಇತಿಹಾಸವನ್ನು ವಿಷಯವಾಗಿಯೋ ಅಥವಾ ಅಸಕ್ತಿಗಾಗಿಯೋ ಓದಿಕೊ೦ಡವನಲ್ಲ. ಕನಿಷ್ಟ ಪಕ್ಷ ಆತ ಒ೦ದೇ ಒ೦ದು ಕಾದ೦ಬರಿಯನ್ನು ಕೂಡಾ ಓದಿದ್ದನ್ನು ನಾನು ನೋಡಿಲ್ಲ. ಆತನಿಗೆ ’ಆರ್.ಎಸ್.ಎಸ್’ನ ವಿಸ್ತೃತ ರೂಪವಾದರೂ ತಿಳಿದಿದಿಯೋ ನನಗೆ ಅನುಮಾನ.ಕಾ೦ಗ್ರೆಸ್ಸಿನಲ್ಲಿ ಪುಢಾರಿಯಾಗಿರುವ ಆತನ ದೂರದ ಸ೦ಬ೦ಧಿಯೊಬ್ಬನ ಮಾತುಗಳನ್ನು ಕೇಳಿ ಬ೦ದಿದ್ದ.ಅದನ್ನೇ ನನ್ನ ಮು೦ದೇ ಒದರುತ್ತಿದ್ದ.ಇನ್ನು ಈತನಿಗೆ ಆರ್.ಎಸ್.ಎಸ್.ನ ಧೋರಣೆಗಳು,ಗಾ೦ಧಿ ಹತ್ಯೆಯ ಹಿನ್ನಲೆ ಇವುಗಳನ್ನು ವಿವರಿಸುವುದು ನನ್ನಿ೦ದಾಗದ ಕೆಲಸವೆ೦ದೆನಿಸಿ ’ಬರ್ತಿನಿ’ ಎ೦ದಷ್ಟೇ ಹೇಳಿ ಅಲ್ಲಿ೦ದ ಹೊರಟೆ.
ಆದರೆ ಅವನ ಮಾತಿನಲ್ಲಿನ ಎರಡು ಅ೦ಶಗಳು ನನ್ನನ್ನು ಯೋಚಿಸುವ೦ತೇ ಮಾಡಿದವು. ಅವನ೦ತೇ ಅಲೋಚಿಸುವ ಅನೇಕ ವಿದ್ಯಾವ೦ತರನ್ನು,ಜಾತ್ಯಾತೀತವಾದಿಗಳನ್ನು ನಾನು ನೊಡಿದ್ದೇನೆ.ಗೋಡ್ಸೆ ಗಾ೦ಧಿಯನ್ನು ಹತ್ಯೆಗೈದ ಎನ್ನುವುದೇನೋ ಸರಿ, ಆದರೆ ಆರ್.ಎಸ್.ಎಸ್ ಭಯೋತ್ಪಾಧನಾ ಸ೦ಘಟನೆಯಾಗಿದ್ದು ಯಾವಾಗ..? ಗೊಡ್ಸೆ ಕೆಲಕಾಲ ಆರ್.ಎಸ್.ಎಸ್ ನ ಸದಸ್ಯನಾಗಿದ್ದ ಎ೦ಬುದನ್ನೂ ಒಪ್ಪಿಕೊಳ್ಳೋಣ.ಅ೦ದ ಮಾತ್ರಕ್ಕೆ ಅರ್.ಎಸ್.ಎಸ್ ಭಯೋತ್ಪಾದನಾ ಸ೦ಘಟನೆಯಾಗಿಬಿಡಬೇಕೇ..? ಇದನ್ನು ಮೂರ್ಖರ ಆಲೋಚನಾ ಧಾಟಿಯೆನ್ನದೇ ಬೇರೆ ವಿಧಿಯಿಲ್ಲ.ಗೋಡ್ಸೆಯ ಗಾ೦ಧಿ ಹತ್ಯೆಯನ್ನೇ ಮಾನದ೦ಡವಾಗಿಟ್ಟುಕೊ೦ಡು ಆರ್.ಎಸ್.ಎಸ್ ಅನ್ನು ಭಯೋತ್ಪಾದಕ ಸ೦ಘಟನೆ ಎ೦ದು ಹೆಸರಿಸಬಹುದಾದರೇ,ಇ೦ದಿರಾ ಗಾ೦ಧಿಯವರ ಹತ್ಯೆಗೈದವನು ಸಿಖ್ಖ ಎ೦ಬ ಕಾರಣಕ್ಕೆ ಸಿಖ್ಖರೆಲ್ಲರೂ ಕೊಲೆಗಾರರು ಎನ್ನವುದು ಮೂರ್ಖತನವೆನಿಸುವುದಿಲ್ಲವೇ..? ಅಥವಾ ಇ೦ದಿರಮ್ಮನ ಹತ್ಯೆಯ ನ೦ತರ ಸಾವಿರಾರು ಸಿಖ್ಖರ ನರಮೇಧಕ್ಕೆ ಕಾರಣವಾಯಿತಲ್ಲ ಕಾ೦ಗ್ರೆಸ್ ಅದನ್ನು ’ಸಿಖ್ಖ ವಿರೋಧಿ ಪಕ್ಷ’ ಎ೦ದು ಕರೆಯಬಹುದೇ..?
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
– ಮು.ಅ ಶ್ರೀರಂಗ,ಬೆಂಗಳೂರು
(“ನಿಲುಮೆ”ಯಲ್ಲಿ ೧೦-೧೦-೨೦೧೩ರಂದು ಪ್ರಕಟವಾದ ‘ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧‘ ಲೇಖನದ ಎರಡನೇ ಭಾಗ)
ವಂಶವೃಕ್ಷ ಮತ್ತು ಸಂಸ್ಕಾರ
—————————-
ಭೈರಪ್ಪನವರ ಮುಖ್ಯ ಕಾದಂಬರಿಗಳಲ್ಲಿ ಒಂದಾದ “ವಂಶವೃಕ್ಷ”ದ ವಸ್ತು,ಪಾತ್ರಗಳು,ಕಾದಂಬರಿಯ ವಿನ್ಯಾಸ ಇತ್ಯಾದಿಗಳ ಬಗ್ಗೆ ನಮ್ಮ ವಿಮರ್ಶಕರು ಈಗಾಗಲೇ ಸಾಕಷ್ಟು ವಿವರವಾಗಿ ಚರ್ಚಿಸಿದ್ದಾರೆ; ವಿವೇಚನೆ ನಡೆಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಆ ಕಾದಂಬರಿಯ ಪೂರ್ಣ ವಿಮರ್ಶೆ ನನ್ನ ಉದ್ದೇಶವಲ್ಲ.
“ವಂಶವೃಕ್ಷ”ದ ವಿಮರ್ಶೆಗಳಲ್ಲಿ ಸಹಜವಾಗಿ ಶ್ರೀನಿವಾಸ ಶ್ರೋತ್ರಿ ಮತ್ತು ಅವರ ಸೊಸೆ ಕಾತ್ಯಾಯನಿಯ ಜೀವನದಲ್ಲಿ ಅವರುಗಳು ಎದುರಿಸಬೇಕಾಗಿ ಬಂದಂತಹ ಸನ್ನಿವೇಶಗಳು ಮತ್ತು ಸಂಘರ್ಷಗಳು ವಿಶೇಷವಾಗಿ ಚರ್ಚೆಗೆ ಒಳಪಟ್ಟಿರುವ ಅಂಶಗಳು. ಶ್ರೋತ್ರಿಯವರು ತಮ್ಮ ಜೀವನಕ್ಕೆ ಸನಾತನ ಧರ್ಮವನ್ನು ಅಧಾರವನ್ನಾಗಿಟ್ಟುಕೊಂಡವರು. ಅದರಲ್ಲಿ ನಂಬಿಕೆಯಿಟ್ಟವರು. ಆದರೆ ಕರ್ಮಠರಲ್ಲ. ಧರ್ಮದ ಪದಶಃ,ವಾಕ್ಯಶಃ ಅರ್ಥಗಳಿಗೆಗಷ್ಟೇ ಅಂಟಿಕೊಂಡವರಲ್ಲ.ಧರ್ಮದ ಬಗ್ಗೆ ತಮಗಿರುವ ನಂಬಿಕೆ,ವಿಶ್ವಾಸಗಳನ್ನು ಇನ್ನೊಬ್ಬರ ಮೇಲೆ ಹೇರಿದವರಲ್ಲ. ಅವರ ಮಗ ಅಕಾಲ ಮರಣಕ್ಕೆ ತುತ್ತಾದಾಗ ವಿಧವೆಯಾದ ಸೊಸೆ ಕಾತ್ಯಾಯನಿ ಆ ಕಾಲದ(೧೯೨೪ರ ಆಸುಪಾಸಿನದು)ಪದ್ಧತಿಯಂತೆ ಮಡಿ ಹೆಂಗಸು” (ತಲೆಗೂದಲು ತೆಗೆಸುವುದು, ಕೆಂಪು ಸೀರೆ ಉಡುವುದು ಇತ್ಯಾದಿ)ಆಗಲಿಲ್ಲ.
ಚಾಚಾ… Oh My God… !!!
– ಅಶ್ವಿನ್ ಅಮೀನ್
ನವೆಂಬರ್ 14. ನೆಹರೂ ಜನ್ಮ ದಿನ. ನಾವು ಶಾಲಾ ದಿನಗಳಲ್ಲಿರುವಾಗ ನಮಗೆಲ್ಲ ಖುಷಿಯ ದಿನ.. ಕಾರಣ ಅಂದು ನಮ್ಮ ದಿನ.. ಮಕ್ಕಳ ದಿನ.. ಮನೋರಂಜನಾ ಕಾರ್ಯಕ್ರಮಗಳು, ಆಟೋಟ, ಸಿಹಿ ತಿಂಡಿ, ಅರ್ಧ ದಿವಸ ರಜಾ ಬೇರೆ.. !! ಆಹಾ ಮಕ್ಕಳಿಗೆ ಅದೇ ಚಂದ.. ಅಂದು ನಾವೆಲ್ಲಾ ‘ಚಾಚಾ…’ ಎನ್ನುತ್ತಾ ಶಿಕ್ಷಕರು ಕೊಟ್ಟ ಸಿಹಿ ತಿನ್ನುತ್ತಾ ಖುಷಿಪಡುತ್ತಿದ್ದೆವು.
ಆದರೆ…
ಆ ಸಿಹಿ ತಿನ್ನುತ್ತಿದ್ದ ಬಾಯಿ ಯಾಕೋ ಇಂದು ಕಹಿಯೆನಿಸುತ್ತಿದೆ.ಮತ್ತೆ ‘ಚಾಚಾ…’ ಎಂದು ಕೂಗಲು ಮನಸ್ಸೇ ಬರುತ್ತಿಲ್ಲ. ನೆಹರೂ ಹೆಸರು ಕೇಳಿದರೇನೇ ಏನೋ ಒಂದು ಆಕ್ರೋಶ, ಅಸಹ್ಯತನ…!ಅಂತಹ ಒಬ್ಬ ದುರ್ಬಲ ಪ್ರಧಾನಿಯನ್ನು ಭಾರತ ಹೊಂದಿತ್ತಾ ಎಂಬ ಬಗ್ಗೆ ಅನುಮಾನ.ಖಂಡಿತಾ ನಾನು ಬದಲಾಗಿಲ್ಲ.ನಾನು ಈಗಲೂ ಅದೇ ದೇಶ ಪ್ರೇಮಿ.ಆದರೆ ನನ್ನ ಜ್ಞಾನ ಬದಲಾಯಿತು.ನನ್ನ ಮುಂದಿದ್ದ ಸುಳ್ಳಿನ ಇತಿಹಾಸ ಕರಗುತ್ತಾ ಹೋದಂತೆ ನೆಹರೂ ಬಗೆಗಿನ ತೆರೆಮರೆಯ ರಹಸ್ಯಗಳು ಒಂದೊಂದಾಗಿ ಗೋಚರಿಸತೊಡಗಿದವು.ಆ ತೆರೆಯ ಹಿಂದೆ ಕಂಡದ್ದೆಲ್ಲ ಸ್ವಾರ್ಥದ,ನಾಚಿಕೆಗೇಡಿನ,ಅಸಹ್ಯಕರ,ಹೇಡಿ ಹಾಗೂ ಮೂರ್ಖತನದ ಪರಮಾವಧಿ…!
ಕಾಂಗ್ರೆಸ್ಸಿನ ಆಗಿನ ಅಧ್ಯಕ್ಷ ಮೋತಿಲಾಲರು ತನ್ನ ಮಗ ನೆಹರೂರವರನ್ನು ತನ್ನ ನಂತರ ಕಾಂಗ್ರೆಸ್ಸ್ ಅಧ್ಯಕ್ಷ ಪಟ್ಟಕ್ಕೇರಿಸಲು ಗಾಂಧೀಯ ಬೆನ್ನು ಬಿದ್ದಿದ್ದ ಕಾಲವದು.ಹಲವು ವರ್ಷಗಳ ಒತ್ತಡದ ನಂತರ ಗಾಂಧೀ ಮೊತಿಲಾಲರ ಹಠಕ್ಕೆ ಬಗ್ಗಲೇಬೇಕಾಯಿತು. ಉಕ್ಕಿನ ಮನುಷ್ಯ ವಲ್ಲಭ ಭಾಯಿ ಪಟೇಲರಿಗೆ ಬಹುಮತ ಇದ್ದ ಹೊರತಾಗಿಯೂ ಪಟೇಲ್ ಅವರನ್ನು ತಣ್ಣಗಾಗಿಸಿ ನೆಹರೂರವರನ್ನು ಕಾಂಗ್ರೆಸ್ಸ್ ಅಧ್ಯಕ್ಷ ಗಾದಿಯಲ್ಲಿ ಕೂರಿಸಿಯೇ ಬಿಟ್ಟರು.
ಮತಾಂಧ ಭಯೋತ್ಪಾದಕರೊಡನೆ ವೇದಿಕೆ ಹಂಚಿಕೊಂಡರೂ ಇವರು “ಜಾತ್ಯಾತೀತ”ರೇ!!
– ನರೇಂದ್ರ ಕುಮಾರ್
ಮುಲ್ಲಾ ಅಬ್ದುಲ್ ಸಲಾಂ ಜ಼ಯೀಫ಼್ ಎನ್ನುವ ಹೆಸರು ಭಾರತದಲ್ಲಿ ಹೆಚ್ಚಿನ ಜನರಿಗೆ ತಿಳಿದಿರಲಾರದು. 1990ರ ದಶಕದಲ್ಲಿ ಆಫ಼್ಘಾನಿಸ್ತಾನದಲ್ಲಿ ತಾಲಿಬಾನ್ ಸ್ಥಾಪನೆಯಾಯಿತು. ಆಫ಼್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ತಾಲಿಬಾನ್ ನಡೆಸಿರುವ ಮತಾಂಧ ಕೆಲಸಗಳು ಜಗತ್ಪ್ರಸಿದ್ಧ. ಆಫ಼್ಘಾನಿಸ್ತಾನದ ಹಜ಼ರತ್ ಪ್ರದೇಶದಲ್ಲಿರುವ ಬಾಮ್ವಾಮ್ ಕಣಿವೆಯಲ್ಲಿದ್ದ ೬ನೇ ಶತಮಾನದ ಬೃಹತ್ ಬುದ್ಧ ಭಗವಾನನ ಪ್ರತಿಮೆಗಳನ್ನು 2001ರಲ್ಲಿ ಭಗ್ನಗೊಳಿಸಿದಾಗ, ತಾಲಿಬಾನ್ ಹೆಸರು ಜಗತ್ತಿನಲ್ಲೆಲ್ಲಾ ಪ್ರಸಿದ್ಧವಾಯಿತು. ಜಗತ್ತಿನೆಲ್ಲೆಡೆಯಿಂದ ಬುದ್ಧನ ಪ್ರತಿಮೆಗಳನ್ನು ಹಾಳುಗೆಡವಿದ ಕಾರ್ಯವನ್ನು ಖಂಡಿಸಲಾಯಿತು. ಆದರೆ, ತಾಲಿಬಾನ್ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ಮೇಲೆ ಹೇಳಿದ “ಮುಲ್ಲಾ ಅಬ್ದುಲ್ ಸಲಾಂ ಜ಼ಯೀಫ಼್” ಎನ್ನುವವರು ಈ ತಾಲಿಬಾನ್‌ನ ಸಂಸ್ಥಾಪಕರಲ್ಲಿ ಒಬ್ಬರು. ತಾಲಿಬಾನ್ ಸಂಸ್ಥಾಪನೆ ಮಾಡಿದ ಮುಲ್ಲ ಮೊಹಮ್ಮದ್ ಓಮರ್ ಹೆಸರು ಸ್ವಲ್ಪಮಟ್ಟಿಗೆ ಎಲ್ಲರಿಗೂ ತಿಳಿದಿರುತ್ತದೆ. ಈ ಮುಲ್ಲಾ ಅಬ್ದುಲ್ ಸಲಾಮ್ ಜ಼ಯೀಫ಼್, ಮುಲ್ಲಾ ಓಮರ್^ನ ಬಲಗೈ ಭಂಟನಾಗಿದ್ದ. 2001ರಲ್ಲಿ ಅಮೆರಿಕಾದಲ್ಲಿ ಭಯೋತ್ಪಾದಕ ಕೃತ್ಯ ನಡೆಸಿದ ನಂತರದಲ್ಲಿ, ಒಸಾಮಾ ಬಿನ್ ಲಾಡೆನ್ನಿಗೆ ಆಫ್ಘಾನಿಸ್ತಾನದಲ್ಲಿ ಆಶ್ರಯ ಒದಗಿಸಿದವರು ಇವರೇ!
ರಾಹುಲ್ ಗಾ೦ಧಿ ,ಬೆ೦ಗಳೂರು ರಾಜ್ಯ ಮತ್ತು ಕನ್ನಡ
– ಗುರುರಾಜ ಕೊಡ್ಕಣಿ,ಯಲ್ಲಾಪುರ
’ಕರ್ನಾಟಕ ಮತ್ತು ಬೆ೦ಗಳೂರಿಗೆ ಜನ ಉದ್ಯೋಗ ಅರಸಿ ಹೋಗುತ್ತಾರೆ,ಏಕೆ೦ದರೆ ಇವೆರಡೂ ಕಾ೦ಗ್ರೆಸ್ ಆಡಳಿತವಿರುವ ರಾಜ್ಯಗಳು ’ ಎ೦ದು ಹೇಳಿಕೆ ನೀಡಿದ್ದರೆ೦ಬ ಕಾರಣಕ್ಕೇ ದೇಶದ ಅತೀ ದೊಡ್ಡ ರಾಜಕೀಯ ಪಕ್ಷದ ನಾಯಕ ರಾಹುಲ್ ಗಾ೦ಧಿ ಅಪಹಾಸ್ಯಕ್ಕೀಡಾಗಿದ್ದರು.ಆದರೆ ನಿಜಕ್ಕೂ ಅವರು ಹಾಗೆ ಹೇಳಿದ್ದರಾ ಎನ್ನುವುದರ ಬಗ್ಗೆ ಅನೇಕ ಅನುಮಾನಗಳಿವೆ. ಒ೦ದು ವೇಳೆ ಅವರು ಹಾಗೆ ಹೇಳಿದ್ದೇ ಹೌದಾದಲ್ಲಿ ರಾಜ್ಯದ ರಾಜಧಾನಿಯ ಬಗ್ಗೆಯೇ ಯುವನಾಯಕನಿಗೆ ತಿಳಿಯದಿರುವುದು ಅತ್ಯ೦ತ ಖೇದಕರ. ರಾಹುಲ್ ಗಾ೦ಧಿ ಹೇಳಿದ್ದಾರಾ ,ಇಲ್ಲವಾ ಎನ್ನುವುದನ್ನು ಪಕ್ಕಕ್ಕಿಟ್ಟು ಮೇಲಿನ ಮಾತನ್ನು ಒಮ್ಮೆ ಗ೦ಭೀರವಾಗಿ ಪರಾಮರ್ಶಿಸಬೇಕಾದ ಪರಿಸ್ಥಿತಿ ಇ೦ದು ಕನ್ನಡಿಗರಿಗಿದೆ ಎನ್ನುವುದೂ ಸತ್ಯವೇ. ಇ೦ದಿಗೂ ಅನೇಕ ಉತ್ತರ ಭಾರತೀಯರಿಗೆ ಬೆ೦ಗಳೂರು ಕರ್ನಾಟಕಕ್ಕೆ ಸೇರಿದುದು ಎ೦ಬುದು ತಿಳಿದ೦ತಿಲ್ಲ.ಕೆಲವರ೦ತೂ ಇದನ್ನೊ೦ದು ’ಕೇ೦ದ್ರಾಡಳಿತ ಪ್ರದೇಶ’ ಎ೦ದೂ ಭಾವಿಸಿರಲಿಕ್ಕೆ ಸಾಕು..!!
“ಮೂಢನಂಬಿಕೆ” ಅನ್ನುವ ಮೊದಲು “ನಂಬಿಕೆ” ಅನ್ನುವುದನ್ನು ಡಿಫೈನ್ ಮಾಡಲಾಗಿದೆಯೇ?
– ರಾಕೇಶ್ ಶೆಟ್ಟಿ
ಸೋ-ಕಾಲ್ಡ್ ಪ್ರಗತಿಪರರು,ಬುದ್ಧಿಜೀವಿಗಳು,ಚಿಂತಕರು ಮತ್ತು ಸರ್ಕಾರಿ ಸಾಹಿತಿಗಳು ಸೇರಿಕೊಂಡು ಹೊರತಂದಿರುವ “ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ – ೨೦೧೩” ಅನ್ನು ಓದಿದ ಮೇಲೆ ಮತ್ತದಕ್ಕೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ಇದನ್ನು ವಿದಾಯಕವಾಗಿ ಮಂಡಿಸುತ್ತೇನೆ ಅಂತೇಳಿ ಮತ್ತೆ ಯು-ಟರ್ನ್ ತೆಗೆದುಕೊಂಡಾಗ,ನನಗೆ ನೆನಪಾಗಿದ್ದು “ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತ್ತಂತೆ…!” ಅನ್ನೋ ಗಾದೆ.
‘ಕಿಚನ್ ಕ್ಯಾಬಿನೇಟ್’ ಅಣತಿಯಂತೆ ಸರ್ಕಾರಗಳು ಕಾರ್ಯ ನಿರ್ವಹಿಸುತ್ತವೆ ಅನ್ನುವುದು ಕೆಲವು ಮುಖ್ಯಮಂತ್ರಿಗಳ ಕಾಲದಲ್ಲಿ ಕೇಳಿಬರುತಿದ್ದಂತ ಮಾತು.ಆದರೆ,ಸಿದ್ದರಾಮಯ್ಯನವರ ಸರ್ಕಾರ ‘ಸರ್ಕಾರಿ ಸಾಹಿತಿಗಳ ಕ್ಯಾಬಿನೇಟ್’ ನ ಅಣತಿಯೇ ನಡೆಯುತ್ತದೆಯೇ? ಹಾಗೆಯೇ ಅನ್ನಿಸುತ್ತಿದೆ.ಸಮಾಜ ವಿಜ್ನಾವನ್ನು ಅಕಾಡೆಮಿಕ್ ಆಗಿ ಕಲಿಸುತಿದ್ದ ಸಂಶೋಧನಾ ಕೇಂದ್ರದ ಮೇಲೆ ವಕ್ರ ದೃಷ್ಟಿ ಬೀರಿದ ಸರ್ಕಾರವೇ ಈಗ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕರಡು ಸಿದ್ದ ಮಾಡಿ ಅಂತ ಕೇಳಿಕೊಂಡು ಅದನ್ನು ಜಾರಿಗೆ ತರಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.
ಈ ನಾಸ್ತಿಕ ಮಹಾಶಯರುಗಳ ಪ್ರಕಾರ, “ಫಲಜ್ಯೋತಿಷ್ಯ,ಕಾಲ ಜ್ನಾನ,ಸಂಖ್ಯಾ ಶಾಸ್ತ್ರ,ವಾಸ್ತು ಶಾಸ್ತ್ರ,ಮಠಾಧೀಶರ,ಸ್ವಾಮೀಜಿಗಳ ಪಾದ ಪೂಜೆ,ಸರ್ಕಾರಿ ಕಚೇರಿಗಳಲ್ಲಿ ಪೂಜೆ,ಹೋಮ-ಹವನ,ದೇವಸ್ಥಾನಗಳಲ್ಲಿ ಪ್ರಾಣಿಬಲಿ ಕೊಡುವುದು,ಜಪಮಾಲೆಗಳು,ರುದ್ರಾಕ್ಷಿ,ಆಧ್ಯಾತ್ಮ ಬಗ್ಗೆ ಮಾತನಾಡುವುದು” ಇವೆಲ್ಲ ನಿಷೇಧವಾಗಬೇಕಂತೆ…!
ಮತ್ತಷ್ಟು ಓದು 
ತುಳು ಭಾಷೆಯನ್ನು ‘ಕನ್ನಡ’ ಅಳಿಸುತ್ತಿದೆಯೋ..? ಉಳಿಸಿದೆಯೋ..?
-ತುಳುನಾಡು(ಅಫೀಶಿಯಲ್) ಫೇಸ್ಬುಕ್ ಪೇಜ್
ಕೆಲವು ತುಳುವಾದಿಗಳು ಕರ್ನಾಟಕ ರಾಜ್ಯದಿಂದ ಹೊರ ಬರುವ ಅಥವಾ ಪ್ರತ್ಯೇಕ ತುಳು ರಾಜ್ಯದ ಕಲ್ಪನೆಯನ್ನು ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ..! ಇದಕ್ಕೆ ಅವರು ನೀಡುವ ಅತೀ ದೊಡ್ಡ ಕಾರಣ ಕನ್ನಡ ಭಾಷೆಯಿಂದ ತುಳು ಭಾಷೆಗೆ ಕಂಟಕ ಇದೆ ಅನ್ನೋದು..!! ಅದಕ್ಕೆ ಹಲವಾರು ಕಾರಣಗಳೂ ಇವೆ. ಇದು ಸತ್ಯ ಕೂಡ..! ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳು ಇನ್ನೂ ದೊರಕದೆ ಇರುವುದು ದುರ್ದೈವವೇ ಸರಿ. ಹಾಗಂತ ಇದೆಲ್ಲಾ ಕನ್ನಡಿಗರ ‘ಕುತಂತ್ರ’ ಅನ್ನುವವರು ಶತಃ ಮೂರ್ಖರೇ ಸರಿ…!
ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಯಾರು ಅಂತ ಹುಡುಕುತ್ತಾ ಹೊರಟರೆ, ಇದಕ್ಕೆ ಕಾರಣ ತುಳುವರೇ ಹೊರತು ಬೇರಾರೂ ಅಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತದೆ.
ತುಳುನಾಡನ್ನು ಕನ್ನಡೀಕರಣಗೊಳಿಸಿ ಅಂತ ಯಾರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿಲ್ಲ. ಎಲ್ಲಾ ತುಳುವರು ಮನಸ್ಸು ಮಾಡಿದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು ಹಾಗೂ ಕರ್ನಾಟಕದಲ್ಲಿ ತುಳು ಭಾಷೆ ನಾಳೆಯೇ ಆಡಳಿತ ಭಾಷೆ ಆಗೋದರಲ್ಲಿ ಅನುಮಾನವೇ ಇಲ್ಲ.
ಗಡಿಬಿಡಿ ಲೈಫ಼್,ಬಾಲ್ಯ ಮತ್ತು ಸಹನೆ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಬಾಲಕನೊಬ್ಬ ಮನೆಯಲ್ಲಿರುವ ತನ್ನ ತ೦ದೆತಾಯ೦ದಿರನ್ನು ನೋಡಿ ’ಓದಬೇಕಿಲ್ಲ,ಬರೆಯಬೇಕಿಲ್ಲ ,ಪರಿಕ್ಷೆಯ ಭಯವ೦ತೂ ಇಲ್ಲವೇ ಇಲ್ಲ.ನಮಗೋ ಹಾಳಾದ ಟೀಚರ್ ಕಾಟ ,ನಾವೂ ಯಾವಾಗ ದೊಡ್ಡವರಾಗೋದೋ’ ಎ೦ದು ಯೋಚಿಸುತ್ತಾ ಬೇಗ ದೊಡ್ಡವನಾಗುವ ಬಗ್ಗೆ ಚಿ೦ತಿಸುತ್ತಾನೆ.ಅವನ ಬಾಲ್ಯವನ್ನು ಗಮನಿಸುತ್ತ ಅದೇ ಹುಡುಗನ ಪೋಷಕರು,’ಬಾಲ್ಯ ಎಷ್ಟು ಸು೦ದರ,ಯಾವ ಜವಾಬ್ದಾರಿಗಳೂ ಇಲ್ಲ,ಶಾಲೆಗೆ ಹೋದ್ರಾಯ್ತು,ಆಟ ಆಡಿದ್ರಾಯ್ತು…ನಾವೂ ಚಿಕ್ಕವರಾಗೇ ಇರಬೇಕಿತ್ತು ಎ೦ದು ಯೋಚಿಸುತ್ತಾರೆ.ಎಷ್ಟು ವಿಚಿತ್ರವಲ್ಲವೇ ಈ ಮನುಷ್ಯನ ಮನಸೆ೦ಬ ಮರ್ಕಟದ ಯೋಚನೆಗಳು.ಬಾಲಕನ ಯೋಚನೆ ಮುಗ್ಧತೆಯಿ೦ದ ಕೂಡಿದ್ದು,ಹಿರಿಯರು ಮುಗ್ಧತೆಯನ್ನು ದಾಟಿ ಮು೦ದೆ ನಡೆದವರು.ಅವರು ಮತ್ತದೇ ಬಾಲ್ಯವನ್ನು ಮರಳಿ ಪಡೆಯಬೇಕೆನ್ನುತ್ತಾರೆ೦ದರೇ ಬಾಲ್ಯದ ಆಕರ್ಷಣೇ ಇನ್ನೆ೦ಥದ್ದಿರಬೇಕು.
ಪದೇ ಪದೇ ನಿಮ್ಮನ್ನು ಕಾಡುವ ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಹೇಗಿದ್ದವು ಆ ದಿನಗಳು..?ನಮ್ಮ ಸುತ್ತಲಿನ ಸಮಾಜ ಚಾಟಿಯೇಟು ತಿ೦ದು ಓಡುವ ರೇಸಿನ ಕುದುರೆಯ೦ತೇ ಓಡದೇ ಆನೆಯ೦ತೇ ನಿಧಾನವಾಗಿ ರಾಜಗಾ೦ಭಿರ್ಯದಿ೦ದ ಸಾಗುತ್ತಿದ್ದ ಕಾಲವದು.ರಜಾ ದಿನಗಳಲ್ಲಿ ಆಡಲು ವಿಡಿಯೋ ಗೇಮ್ ಬಿಡಿ,ಕನಿಷ್ಟ ಬಾಲ್ ,ಬ್ಯಾಟುಗಳಿಗೂ ಗತಿಯಿರಲಿಲ್ಲ ನಮ್ಮ ಕಾಲದ ಹುಡುಗರಿಗೆ.ಗಲ್ಲಿಯ ಹುಡುಗರೆಲ್ಲ ಸೇರಿ ಒ೦ದಷ್ಟು ಹಣ ಸೇರಿಸಿ ಬಾಲೊ೦ದನ್ನು ಕೊ೦ಡುತರುತ್ತಿದ್ದೆವು.ಯಾವುದೋ ಮರದ ಹಲಗೆಯೊ೦ದು ಬ್ಯಾಟ್ ಆಗುತ್ತಿತ್ತು. ಕಾ೦ಪೊ೦ಡಿನ ಗೋಡೆಯ ಮೇಲೆ ಮೂರು ಗೀಟುಗಳನ್ನೆಳೆದರೇ ಅದೇ ನಮ್ಮ ಸ್ಟ೦ಪುಗಳು..!! ಹುಡುಗರ ಗು೦ಪು ಸೇರಿಸಿ ಬೆಳಿಗ್ಗೆಯಿ೦ದ ಸ೦ಜೆಯವರೆಗೂ ಆಡಲು ನಿ೦ತರೇ ಹೊತ್ತು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ.’ದಿನವಿಡಿ ಆಟದಲ್ಲೇ ಕಾಲ ಕಳೆದರೇ ಓದೋದು ಯಾವಾಗ್ಲೋ ಮುಟ್ಠಾಳ ’ ಎ೦ದು ಸ೦ಜೆ ಅಪ್ಪ ಬಯ್ದು ಎರಡೇಟು ಕೊಟ್ಟರೇ ’ಹೋ..’ ಎ೦ದು ಅಳುತ್ತ ನಿಲ್ಲುತ್ತಿದ್ದೆವು.ಮಾರನೆಯ ದಿನ ಅಪ್ಪ ಆಫೀಸಿಗೆ ಹೊದೊಡನೇ ಮತ್ತೆ ನಮ್ಮ ಸವಾರಿ ಹತ್ತಿರದ ಮೈದಾನಕ್ಕೇ ಅಲ್ಲವೇ..? ಯಾರದ್ದೋ ತೋಟದಲ್ಲಿ ಮಾವಿನಕಾಯಿ,ಪೇರಲೇ ಹಣ್ಣು,ನೆಲ್ಲಿಕಾಯಿಗಳನ್ನು ಕದಿಯುತ್ತ,ಯಾರದ್ದೋ ಗದ್ದೆಯಲ್ಲಿ ಕಬ್ಬಿನ ಜಲ್ಲೆಯನ್ನು ಮುರಿಯುತ್ತ.ಸಿಕ್ಕ ಸಿಕ್ಕ ಮರವೇರುತ್ತ,ಬೀದಿ ಬೀದಿ ಸುತ್ತುತ್ತ,ಮನೆಯವ೦ದ ಎಷ್ಟೇ ಬಯ್ಯಿಸಿಕೊ೦ಡರೂ,ಒದೆಗಳನ್ನು ತಿ೦ದರೂ ನಮ್ಮ ಬಾಲ್ಯದಲ್ಲಿ ಸ೦ತೋಷಕ್ಕೆ ಬರವೆ೦ಬುದಿತ್ತೇ..?
ಅಭಿಮಾನ, ಆರಾಧನೆ ಮತ್ತು ಅನಿವಾರ್ಯತೆ
– ಮು.ಅ ಶ್ರೀರಂಗ, ಬೆಂಗಳೂರು
ಈ ನನ್ನ ಬರಹ ತನ್ನ ಸ್ವರೂಪದಲ್ಲಿ ಸ್ವಲ್ಪ ಅಮೂರ್ತವಾಗಿರಬೇಕಾಗಿರುವುದು ಅನಿವಾರ್ಯವಾಗಿದೆ! ಹೀಗಾಗಿ ಇದನ್ನು ನೀವು ಸರಸರನೆ ಓದಲು ಸಾಧ್ಯವಾಗದೆ ಇರಬಹುದು. ಕೆಲವೊಂದು ವಿಷಯಗಳನ್ನು “ಮೂರ್ತ”ರೂಪದಲ್ಲಿ ಹೇಳಲು ಹೊರಟಾಗ ಅವು ತೀರಾ ತೆಳುವಾಗುತ್ತವೆ. ಅಭಿಮಾನ ಮತ್ತು ಆರಾಧನೆಯ ನಡುವಿನ ಗೆರೆಯೂ ಹೀಗೆ ತೆಳುವಾದದ್ದೇ. ಆ ಗೆರೆ ಅಳಿಸಿಹೋದಾಗ ಅಭಿಮಾನ + ಆರಾಧನೆ =ಅನಿವಾರ್ಯತೆ ಎಂಬ ಸರಳ ಸಮೀಕರಣ ರೂಪುಗೊಂಡು ಬಿಡುತ್ತದೆ.




