ವಿಷಯದ ವಿವರಗಳಿಗೆ ದಾಟಿರಿ

Archive for

4
ಏಪ್ರಿಲ್

“ಉಳಿದವರು ಕಂಡಂತೆ” – ಅವರಿವರು ಕಂಡಂತೆ

– ವಸಂತ ಗಿಳಿಯಾರ್ ಕಂಡಂತೆ

ಉಳಿದವರು ಕಂಡಂತೆ ಅವರಿವರು ಕಂಡಂತೆ “ಉಳಿದವರು ಕಂಡಂತೆ” ಚಿತ್ರ ಹೇಗಿದೆಯೋ ಎಂಬುದರ ಬಗ್ಗೆ ನಾನು ಮಂಡೆಕೆಡಿಸಿಕೊಳ್ಳಲಾರೆ.. ತಾಂತ್ರಿಕವಾಗಿ ಮೊದಲ ನಿರ್ದೇಶನದಲ್ಲೆ ಗೆದ್ದಿದ್ದಾರೆ ರಕ್ಷಿತ್ ಎಂದು ನೇರವಾಗಿ ಮಾರ್ಕ್ ಕೊಡುತ್ತಿದ್ದೇನೆ. ಮಿಕ್ಕುಳಿದಂತೆ ಭಾಷೆ ಅರ್ಥವಾಗುವುದಿಲ್ಲ ಎಂದು ಮಗುಮ್ಮಾಗಿ ದೂರುವವರಿಗೆ ನಾನು ಕೇಳುವುದು ಇಷ್ಟನ್ನೆ ಒಂದು ಚೂರೂ ಅರ್ಥವಾಗದಿದ್ದರೂ ಕೆಲವರು english,ತಮಿಳು,ತೆಲುಗು ಚಿತ್ರವನ್ನ ನೋಡುವುದಿಲ್ಲವೇ? ಇದು ನಮ್ಮದೇ ರಾಜ್ಯದ ಒಂದು ಪ್ರದೇಶದ ವಿಶಿಷ್ಟವಾದಂತ ಚಂದದ ಕುಂದಗನ್ನಡವೆಂಬ ಭಾಷೆ. ಅರ್ಥವಾಗದಿದ್ದರೂ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ.. ನಿಮ್ಮ ಪ್ರಯತ್ನ ವ್ಯರ್ಥವಾಗದು..ಯಾಕೆಂದರೇ ನಮ್ಮದೇ ರಾಜ್ಯದಲ್ಲಿ ಕನ್ನಡ ಭಾಷೆ ಯಾವ ಯಾವ ರೀತಿಯಲ್ಲಿದೆ ಎಂಬುದು ನಿಮ್ಮ ಗ್ರಹಿಕೆಗೆ ನಿಲುಕುತ್ತದೆ.. “ಉಳಿದವರು ಕಂಡಂತೆ” ಚಿತ್ರ ನನಗೆ ನನ್ನ ಬಾಲ್ಯದ ಬದುಕನ್ನ ನೆನಪಿಸಿತು.. ರಿಚ್ಚಿ ಪಾತ್ರವನ್ನ ಕಂಡು ನನಗೆ ನನ್ನ ಬಾಲ್ಯದ ಗೆಳೆಯ ಹಂದಾಡಿಯ ರಾಬರ್ಟ್ ನೆನಪಾದ. ಡೆಮಕ್ರಶಿ ನನ್ನ ಬಾಲ್ಯದ ಅವತಾರದ ಚಿತ್ರಣವೆಂದೆನಿಸಿತು..

“ಪೇಪರ್ ಪೇಪರ್ ಮೆಡಿಸಿನ್ ಪೇಪರ್” ಎಂಬ ಹಾಡು ಬಾಲ್ಯದಲ್ಲಿ ದನಕಾಯುವಾಗ ನಮ್ಮ ಗುಂಪಿನಲ್ಲಿ ನಾವು ಹಾಡಿಕೊಳ್ಳುತ್ತಿದ್ದ ಚಲನಚಿತ್ರ ಗೀತೆಯ ನೆನಪು ತಂದರೆ ವಿಟ್ಲಪಿಂಡಿಯ ಹುಲಿವೇಶ ಕಣ್ಣ ಮುಂದೆ ಹಾದು ಹೋದಂತಾಯಿತು.. ಊರಿಗೆ ಕೇವಲ ೪೦೦ ಕಿಲೋಮೀಟರ್ ದೂರದಲ್ಲಿರುವ ನನಗಿಂತ ಸಾವಿರಾರು ಕಿಲೋಮೀಟರ್ ದೂರದಲ್ಲಿರುವವರಿಗೆ ಅಥವ ಊರಿನಿಂದ ದೂರವೆ ಉಳಿದವರಿಗೆ ಇದು ಮತ್ತಷ್ಟು ಆಪ್ತವಾಗಿ ಕಾಣಿಸ ಬಹುದು. ಕಥೆಯೆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿ ಕೊಳ್ಳಲಿಲ್ಲ ಘಟಿಸುವ ಘಟನೆಗಳು ಒಂದನ್ನೊಂದು ಬೆನ್ನತ್ತುವ ರೀತಿ ಸೊಗಸಾಗಿದ. ಚಿತ್ರ ಮುಗಿಸಿ ಹೊರಬಂದ ಮೇಲೆ ನನ್ನೊಳಗೆ ಕಥೆ ಆರಂಭವಾಗಲು ಆರಂಬಿಸಿತು.. ಒಂದೊಂದು ಪಾತ್ರದಲ್ಲು ಒಂದೊಂದು ಕಥೆ ಅರಳ ತೊಡಗಿತು. ಚಿತ್ರ ಒಳಗೊಂಡ ಸಂಗೀತ ಸಾಹಿತ್ಯ ನವಿರು ಭಾವದ ಅಲರು ಕಂಪನವನ್ನ ಹುಟ್ಟಿಸುತ್ತದೆ..” ಮಳೆ ಮರೆತು ಹಸಿರಾಗಿ ನಿಂತಾಗ ಈ ಭೂಮಿ ..ಸಲಹೇನೆ ಕೊಡಬೇಡ ದೇವರೆ ನೀನಿಲ್ಲಿ ಹಂಗಾಮಿ.. ಹಾಡು ಗುಂಗಿನಂತೆ ಕಾಡುತಿದೆ.. ಹೌದು ಉಳಿದವರು ಕಂಡಂತೆ ಒಂದು ಉತ್ತಮವಾದ ಚಿತ್ರ.. ಕನ್ನಡಕ್ಕೊಂದು ಪ್ರಯೋಗಾತ್ಮಕ ಚಿತ್ರ ಎಂದು ಹೇಳಬಲ್ಲೆ.. ರಕ್ಷಿತ್ ಮತ್ತು ತಂಡಕ್ಕೆ ನನ್ನದೂಂದು ಅಭಿನಂದನೆ…

*** *** *** ಮತ್ತಷ್ಟು ಓದು »

3
ಏಪ್ರಿಲ್

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವ ಹಾಗೂ ಪ್ರತಿನಿಧಿಗಳು- ಭಾಗ:೧

-ಶ್ರೀ. ಆಯನೂರು ಮಂಜುನಾಥ್, ರಾಜ್ಯಸಭಾ ಸದಸ್ಯರು (-ಅಕ್ಷರಕ್ಕೆ ಇಳಿಸಿದವರು: ಸಂತೋಷ ಈ. ಕುವೆಂಪು.ವಿ.ವಿ, ಶಂಕರಘಟ್ಟ)

Social Science Column Logo

ರಾಜಕಾರಣಿಗಳಾದ ನಾವು ಒಂದು ತರಹ ವಿಚಿತ್ರವಾದ ಪರಿಸ್ಥಿತಿಯಲ್ಲಿ ಇದ್ದೇವೆ. ಹೊರಜಗತ್ತಿನಲ್ಲಿ ನಾವು ಬರುತ್ತಿರವಾಗ ನಮಸ್ಕಾರ ಎನ್ನುತ್ತಾರೆ. ನಾವು ದಾಟಿದ ಮೇಲೆ ನಮ್ಮನ್ನು ಬಯ್ಯುತ್ತಾರೆ. ನನ್ನಿಂದ ಅವನಿಗೆ ಏನೋ ಆಗಬೇಕು ಆದ್ದರಿಂದ ಅವನು ನಮಗೆ ಬಹಳ ಗೌರವ ಕೊಡುತ್ತಾನೆ. ಇಲ್ಲವಾದರೆ ನಮಗೆ ಗೌರವ ಕೊಡುವುದಿಲ್ಲ. ಇಂದು ಸಮಾಜದಲ್ಲಿ ನಮ್ಮ ಬಗ್ಗೆ ಗೌರವಗಳು, ಪ್ರೀತಿಗಳು ಪ್ರಾಮಾಣಿಕವಾಗಿ ಪ್ರಕಟವೆ ಆಗುತ್ತಿಲ್ಲ. ಜನರಿಗೆ ನಮ್ಮ ವಿರುದ್ಧವಾದ ಭಾವನೆಗಳು ಇದ್ದಲ್ಲಿ ಅ ಭಾವನೆಗಳನ್ನು ನಮ್ಮ ವಿರುದ್ಧ ವ್ಯಕ್ತಪಡಿಸಿದರೆ ನಾವು ನಮ್ಮ ತಪ್ಪನ್ನು ತಿದ್ದುಕೊಳ್ಳವುದಕ್ಕೆ, ಅದನ್ನು ಸರಿಪಡಿಸಿಕೊಳ್ಳವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬಹುದು. ಅಥವಾ ನಾವು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನೇರವಾಗಿ ಹೇಳಿದರೆ ಮತ್ತಷ್ಟು ಪುಷ್ಟಿಕರಿಸಿಕೊಂಡು ಬೆಳೆಸಬಹುದು. ಆದರೆ ಸಮಾಜವೇ ಹೈ ಡಿಗ್ರಿಯ ಹಿಪೋಕ್ರಟಿಕ್ ಪರಿಸರದಲ್ಲಿ ಬದುಕುತ್ತಿದೆ. ಜನರು ತಮಗೆ ನೇರವಾಗಿ ಅನ್ನಿಸಿದ್ದನ್ನು ಹೇಳುತ್ತಿಲ್ಲ. ಹಿಪೋಕ್ರಟಿಕ್ ಜನರ ಮಧ್ಯೆ ಬೆಳದು ಬರುವ ನನ್ನಂತ ರಾಜಕಾರಣಿ ಇನ್ನೂ ಎಷ್ಟು ಹಿಪ್ರೋಕ್ರಟಿಕ್ ಆಗಿರಬಹುದು ನೀವೆ ಯೋಚನೆ ಮಾಡಿ.

ಈ ಜನರ ಮಧ್ಯೆಯೇ ರಾಜಕಾರಣಿಗಳಾದ, ನಾವು ಇರಬೇಕು. ವಿದ್ಯಾವಂತ ಅವಿದ್ಯಾವಂತರ ಮಧ್ಯೆ, ಜಾತಿ ಪ್ರೇಮಿಗಳ ಮಧ್ಯೆ, ಜಾತಿ ಮೀರದವರ ಮಧ್ಯೆ, ನಾನು ಅನ್ನುವವರ ಮಧ್ಯೆ, ಊರು ಅನ್ನುವವರ ಮಧ್ಯೆ, ಅನ್ಯಾಯವನ್ನ ಮಾಡುವವರ ಮಧ್ಯೆ, ಅನ್ಯಾಯವನ್ನು ವಿರೋಧಿಸುವವರ ಮಧ್ಯೆ, ಈ ರೀತಿಯ ವ್ಯವಸ್ಥೆಯ ಮಧ್ಯೆ ಜನಪ್ರತಿನಿಧಿ ಬೆಳೆದುಬರಬೇಕಾದರೆ, ಭವಿಷ್ಯ ನಮ್ಮ ಕಷ್ಟ ಅ ದೇವರಿಗೆ ಪ್ರೀತಿ. ಇತ್ತೀಚೆಗೆ ಬಹಳ ಸುಲಭವಾಗಿದೆ. ಸಮಾಜ ಹೇಗೆ ಭ್ರಷ್ಟವಾಗುತ್ತದೆಯೋ ಅದರ ಮಧ್ಯೆ ಅದೇ ರೀತಿಯ ಪ್ರತಿನಿಧಿಯು ಹುಟ್ಟಿಬರುತ್ತಿದ್ದಾನೆ. ಮತ್ತಷ್ಟು ಓದು »

2
ಏಪ್ರಿಲ್

ಚಿದಂಬರಂ ಪಿಳ್ಳೆ

– ನವೀನ್ ನಾಯಕ್

ಚಿದಂಬರಂ ಪಿಳ್ಳೆಭರತಖಂಡದ ಒಂದೊಂದೆ ಭಾಗಗಳನ್ನು ತಮ್ಮ ಕುತಂತ್ರದಿಂದ ಕಬಳಿಸಿದ ಬ್ರಿಟೀಶರು ಎಲ್ಲೆಲ್ಲೂ ತಮ್ಮ ಧಾರ್ಷ್ಟ್ಯವನ್ನು ತೋರತೊಡಗಿದರು. ನಮ್ಮ ಸಂಸ್ಕೃತಿಯನ್ನು ಒಂದೆಡೆ ಹೀಯಾಳಿಸುತ್ತ ಇನ್ನೊಂದೆಡೆ ಮತಾಂತರಿಸುತ್ತ ತಮ್ಮ ಸಾಮ್ರಾಜ್ಯವನ್ನು ಶಾಶ್ವತಗೊಳಿಸಲು ಸರ್ವಪ್ರಯತ್ನವನ್ನು ಮಾಡುತ್ತಲೇ ಇದ್ದರು. ತೆರಿಗೆ ಪದ್ದತಿಯ ವಿರೂಪದಿಂದ ಲಕ್ಷಾಂತರ ನೇಕಾರರು , ಕಾರ್ಮಿಕರು ಬೀದಿಗೆ ಬಿದ್ದರು.ದೇಶಿಯ ಮಾರುಕಟ್ಟೆಯನ್ನು ತಮ್ಮ ಕೈವಶ ಮಾಡಿಕೊಂಡು ಅನಾವಶ್ಯಕ ತೆರಿಗೆಗಳನ್ನು ಹೇರಿ ಸಾಮಾನ್ಯ ಜನರು ತತ್ತರಿಸುವಂತೆ ಮಾಡತೊಡಗಿದರು. ಸಮುದ್ರ ಪಯಣಗಳಿಗೂ ಇದರ ಬಿಸಿ ತಟ್ಟಿತ್ತು. ಆ ದಿನಗಳಲ್ಲಿ ಕೊಲೊಂಬೊ ಹಾಗು ತೂತ್ತುಕುಡಿಯ ನಡುವಿನ ಹಡಗು ಪಯಣದ ಸಂಪೂರ್ಣ ಅಧಿಕಾರ ಬ್ರಿಟೀಶರ ಕೈಯಲ್ಲಿತ್ತು. ಬ್ರಿಟೀಶ್ ಇಂಡಿಯಾ ಸ್ಟೀಮ್ ನ್ಯಾವಿಗೇಶನ್ ಕಂಪನಿ ಎಂಬ ಈ ಸಂಸ್ಥೆ ತಮಗಿಷ್ಟ ಬಂದಂತೆ ಪ್ರಯಾಣ ವೆಚ್ಚವನ್ನು ಏರಿಸತೊಡಗಿದರು. ಇವರ ದುರಹಂಕಾರಕ್ಕೆ ಸೆಡ್ಡು ಹೊಡೆಯಲು ಲೆಕ್ಕಚಾರ ಹಾಕಿ ಕುಳಿತವರೇ ಚಿದಂಬರಂ ಪಿಳ್ಳೆ.

ತಮಿಳುನಾಡಿನ ಓಟ್ಟಪ್ಪಿದಪುರಂನಲ್ಲಿ ಉಳಗನಾಥಂ ಮತ್ತು ಪರಮಾಯಿ ಅಮ್ಮಾಳ್ ದಂಪತಿಗೆ ಸೆಪ್ಟಂಬರ್ 5 1827 ರಲ್ಲಿ  ಚಿದಂಬರಂ ಪಿಳ್ಳೆಯವರು ಜನಿಸಿದರು. ತನ್ನ ಹದಿಮೂರನೇ ವಯಸ್ಸಿನವರೆಗೆ ಜನ್ಮಸ್ಥಳದಲ್ಲೇ ಕಳೆದ ಚಿದಂಬರಂರವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ತೂತ್ತುಕುಡಿ ಎಂಬಲ್ಲಿಗೆ ಬಂದರು. ತಮ್ಮ ವಿದ್ಯಾಭ್ಯಾಸ ಮಾಡುತ್ತ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿಕೊಂಡರು. ತದನಂತರ ಕೆಲಕಾಲ ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತನಾಗಿ ದುಡಿದರು. ಈ ಕೆಲಸ ಚಿದಂಬರಂರವರಿಗೆ ತೃಪ್ತಿಯನ್ನು ತಂದು ಕೊಡುವಲ್ಲಿ ವಿಫಲವಾಯಿತು. ಚಿದಂಬರಂರವರ ವಂಶದ ಹಿರಿತಲೆಗಳು ವಕೀಲಿ ವೃತ್ತಿಯಲ್ಲಿ ನಿಷ್ಣಾತರಾಗಿದ್ದರು.  ಇದೇ ಪ್ರಭಾವವನ್ನು ಬಳಸಿಕೊಂಡು ಅನ್ಯಾಯವಾಗಿ ಪೋಲಿಸ್ ಇಲಾಕೆಯ ಕಪಿಮುಷ್ಟಿಯಲ್ಲಿ ಸಿಲುಕಿದ ನಿರಪರಾಧಿಗಳ ಪರವಾಗಿ ವಾದಿಸಲು ವಕೀಲಿ ಅಭ್ಯಸಿಸಿ ತಿರುಚ್ಚಿಯ ಸಬ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಎಷ್ಟೋ ಬಾರಿ ನಿರಪರಾಧಿಗಳ ಪರವಾಗಿ ನಿಃಶುಲ್ಕವಾಗಿ ಮೊಕದ್ದಮೆ ನಡೆಸಿಕೊಟ್ಟು ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದರು. ಚಿದಂಬರಂರವರ ಈ ಕೆಲಸದಿಂದ ಬ್ರಿಟೀಶರು,ಪೋಲಿಸ್ ಅಧಿಕಾರಿಗಳ ದ್ವೇಷಕ್ಕೆ ಒಳಗಾಗತೊಡಗಿದರು.

ಆಧ್ಯಾತ್ಮ ಮತ್ತು ಶಿವನ ಕುರಿತು ಅಪಾರ ಶ್ರದ್ದೆಯನ್ನು ಚಿದಂಬರಂ ಬೆಳೆಸಿಕೊಂಡಿದ್ದರು.ತಮಿಳು ಸಾಹಿತ್ಯವನ್ನು ಓದಿ ಅದ್ಭುತ ಜ್ಞಾನವನ್ನು ಮೈಗೂಡಿಸಿಕೊಂಡಿದ್ದರಲ್ಲದೇ ಯೋಗ್ಯ ಗುರುಗಳ ಮತ್ತು ಸಾಧುಗಳ ಸಂಪರ್ಕವನ್ನು ಸಹ ಬೆಳೆಸಿಕೊಂಡಿದ್ದರು. ಜೊತೆಗೆ ರಾಷ್ಟ್ರೀಯ ವಿಚಾರಗಳಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು. 1898 ಡಿಸೆಂಬರ್  ಸಮಯದಲ್ಲಿ ಮದ್ರಾಸಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯ ಹೊಣೆಯನ್ನು ಹೊತ್ತಿಕೊಂಡಿದ್ದರು. ಆ ಮಹಾಧಿವೇಶನದಲ್ಲಿ ಭಾಗವಹಿಸಿದ ಒಟ್ಟು 614 ಪ್ರತಿನಿಧಿಗಳಲ್ಲಿ 519ಜನ ತಮಿಳುನಾಡಿನಿಂದಲೇ ಬಂದಿದ್ದರು. ಅಷ್ಟು ಜನರನ್ನು ಅಧಿವೇಶನಕ್ಕಾಗಿ ಕಲೆಹಾಕಿದ್ದ ಶ್ರೇಯಸ್ಸು ಚಿದಂಬರಂರವರದೇ !
ಮತ್ತಷ್ಟು ಓದು »

1
ಏಪ್ರಿಲ್

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫

 

‘ಆವರಣ ‘ ಎಂಬ ವಿ-ಕೃತಿ  –  ಸಂಗ್ರಹ : ಗೌರಿ ಲಂಕೇಶ್

ಗೌರಿ ಲಂಕೇಶ್ ಅವರು ಸಂಗ್ರಹಿಸಿರುವ ‘ಆವರಣ’ ಎಂಬ ವಿಕೃತಿ’ (ಲಂಕೇಶ್ ಪ್ರಕಾಶನ ಬೆಂಗಳೂರು–೪, ೨೦೦೭) ವಿಮರ್ಶಾ ಸಂಕಲನದಲ್ಲಿ ಯು ಅರ್ ಅನಂತಮೂರ್ತಿ, ಕೆ ಮರುಳಸಿದ್ದಪ್ಪ, ರಹಮತ್ ತರೀಕೆರೆ, ಜಿ ರಾಜಶೇಖರ್, ಜಿ ಕೆ ಗೋವಿಂದರಾವ್, ಕೆ. ಫಣಿರಾಜ್ ಮುಂತಾದ ಪ್ರಸಿದ್ಧ ಲೇಖಕರು,ವಿಮರ್ಶಕರು ಹಾಗು ಚಿಂತಕರ ಲೇಖನಗಳಿವೆ. ‘ಆವರಣ’ದಲ್ಲಿ ಚಿತ್ರಿತಗೊಂಡಿರುವ ಚರಿತ್ರೆಯ ಅಂಶಗಳು ಎಷ್ಟರಮಟ್ಟಿಗೆ ನಂಬಲರ್ಹ/ಅದಷ್ಟೇ ನಿಜವೇ ಬೇರೆ ಮುಖಗಳು ಇಲ್ಲವೇ ಎಂಬುದರ ಜತೆಗೆ ಕಾದಂಬರಿಯ ತಾತ್ವಿಕತೆ, ರೂಪ,ವಿನ್ಯಾಸಗಳ ಬಗ್ಗೆ ಇಲ್ಲಿನ ಲೇಖನಗಳಲ್ಲಿ ಒತ್ತು ಜಾಸ್ತಿ. ಹಿಂದೆ ಏನೇನೋ ನಡೆದುಹೋಗಿದೆ;ಅದನ್ನೆಲ್ಲಾ ಮತ್ತೆ ಕೆದಕುವುದ್ಯಾಕೆ ಎಂಬ ಮಾತೂ ಆಗೀಗ ಬರುತ್ತದೆ. ಹೀಗಾಗಿ ಈ ವಿಮರ್ಶಾ ಸಂಕಲನದ ಲೇಖನಗಳನ್ನು ಸ್ವಲ್ಪ ವಿವರವಾಗಿ ಚರ್ಚಿಸಬೇಕಾಗಿದೆ.

ಮತ್ತಷ್ಟು ಓದು »