ಕಾರಂತರೆಂದರೆ ಯಾರಂತ ತಿಳಿದಿರಿ?
– ರೋಹಿತ್ ಚಕ್ರತೀರ್ಥ
“ಬೋಸ್ ಐನ್‍ಸ್ಟೈನ್ ಸ್ಟಾಟಿಸ್ಟಿಕ್ಸ್” ಎಂಬ ಅದ್ಭುತ ಸಂಗತಿಯನ್ನು ಭೌತಶಾಸ್ತ್ರಕ್ಕೆ ಕೊಟ್ಟ ಸತ್ಯೇಂದ್ರನಾಥ ಬೋಸ್‍ರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂಬ ಶಿಫಾರಸು ಹೋಗಿತ್ತು. ಆದರೆ ಅಂತಿಮಕ್ಷಣದಲ್ಲಿ ಅವರಿಗೆ ಆ ಪ್ರಶಸ್ತಿ ಕೈತಪ್ಪಿತು. “ಈ ಮನುಷ್ಯ ಕೇವಲ ಭೌತಶಾಸ್ತ್ರಜ್ಞನಲ್ಲ. ಕವಿ, ಸಂಗೀತಗಾರ, ಅನುವಾದಕ, ಹೋರಾಟಗಾರ, ಕಲಾವಿದ ಎಲ್ಲವೂ ಆಗಿದ್ದಾರೆ. ಇವರಿಗೆ ವೃತ್ತಿನಿಷ್ಠೆ ಇದೆಯೆಂದು ನಂಬುವುದು ಹೇಗೆ?” ಎಂದು ಪ್ರಶಸ್ತಿ ಸಮಿತಿ ಕೇಳಿತ್ತಂತೆ! ಅಕ್ಟೋಬರ್ ಎರಡನೆ ವಾರ ಎಂದರೆ ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗುವ ಸಮಯ. ದುರಂತವೋ ಗೌರವವೋ ಕಾಕತಾಳೀಯವೋ, ಅದೇ ವಾರದ ಮೂರನೇ ದಿನ – ಅಂದರೆ ಅಕ್ಟೋಬರ್ 10ರಂದು ನಮ್ಮ ಕಡಲತಡಿಯ ಭಾರ್ಗವ ಶಿವರಾಮ ಕಾರಂತರ ಜನ್ಮದಿನವೂ ಕೂಡ. ಬಹುಶಃ ಕಾರಂತರ ಹೆಸರು ನೊಬೆಲ್ ಸಾಹಿತ್ಯ ಪ್ರಶಸ್ತಿಗಾಗಿ ಶಿಫಾರಸುಗೊಂಡಿದ್ದರೆ ಅವರಿಗೂ ಆ ಪುರಸ್ಕಾರ ಸಿಗುತ್ತಿದ್ದದ್ದು ಸಂಶಯ. ಬದುಕಿನಲ್ಲಿ ಏನೇನೆಲ್ಲಾ ಆಗಿ ಸಾಧನೆ ಮಾಡಿದ ಈ ವ್ಯಕ್ತಿಗೆ ಬರೆಯುವುದಕ್ಕೆ ಸಮಯವೇ ಸಿಕ್ಕಿರಲಿಕ್ಕಿಲ್ಲ ಎಂದು ಸಮಿತಿಯವರು ಹೆಸರನ್ನು ತಿರಸ್ಕರಿಸುತ್ತಿದ್ದರೋ ಏನೋ.
ಕಾರಂತರನ್ನು ಏನೆಂದು ಕರೆಯುವುದು? ಹೆಮ್ಮರವೆಂದೇ? ವಿಶಾಲ ಸಾಗರವೆಂದೇ? ಹಿಮಾಲಯವೆಂದೇ? ಔನ್ನತ್ಯವಷ್ಟೇ ಹಿರಿಮೆಯಾಗಿ ನಿಂತಿರುವ ಗೌರೀಶಂಕರ ಕಾರಂತರ ಜ್ಞಾನದ ಆಳಕ್ಕೆ, ವಿಸ್ತಾರಕ್ಕೆ ಸಾಟಿಯಾಗುವುದಿಲ್ಲ. ಹಿಂದೂ ಸಾಗರದಂತಹ ಸಮುದ್ರರಾಜನಿಗೆ ಕಾರಂತರ ಮಾನವೀಯತೆಯ ಎತ್ತರವನ್ನು ಸರಿಗಟ್ಟಲು ಸಾಧ್ಯವಾದೀತೇ? ಕಾರಂತರ ಅಜ್ಜ ಚಿನ್ನದ ಕಸುಬು ಕಲಿತ ರಸವೈದ್ಯರಾಗಿದ್ದರಂತೆ. ಅಪ್ಪ ಶೇಷ ಕಾರಂತರು ಕಲಿತದ್ದು ಎಲ್ಲಿ, ಎಷ್ಟು ಇವೆಲ್ಲ ನಿಗೂಢ. ಆದರೆ ಲೋಕಜ್ಞಾನದಿಂದ ಬಂದದ್ದನ್ನು ಮೇಷ್ಟ್ರಾಗಿ ಶಾಲೆಯಲ್ಲಿ ಹಂಚುತ್ತಿದ್ದರು. ಒಂಬತ್ತು ಮಕ್ಕಳ ಹಿರಿಸಂಸಾರದಲ್ಲಿ ಶಿವರಾಮ ನಾಲ್ಕನೆಯವನು. ಸಂಸಾರ ದೊಡ್ಡದಾಯಿತು; ದುಡಿವ ಕೈ ಸಾಲದಾಯಿತೆಂದು ಶೇಷ ಕಾರಂತರು ಮಾಸ್ತರಿಕೆ ಕೈಬಿಟ್ಟು ಜವಳಿ ವ್ಯಾಪಾರಕ್ಕೆ ಇಳಿದರು. ಅಕ್ಷರಾಭ್ಯಾಸದ ಜೊತೆಗೆ ಈ ತಂದೆ ತನ್ನ ಹೋರಾಟದ ಕೆಚ್ಚು, ಧೈರ್ಯಗಳನ್ನೂ ಮಕ್ಕಳಲ್ಲಿ ಆಗಲೇ ತುಂಬಿಸಿರಬೇಕು. ಶಿವರಾಮ ಹದಿನೆಂಟು ತುಂಬುವ ಹೊತ್ತಿಗೆ ಎಸ್ಸೆಸ್ಸೆಲ್ಸಿ ಮುಗಿಸಿದ. ಗಾಂಧೀಜಿಯ ಅಸಹಕಾರ ಚಳುವಳಿ ಕಾವು ಪಡೆಯುತ್ತಿದ್ದ ಸಮಯ. ಹುಡುಗನ ನೆತ್ತರು ಧಿಮಧಿಮನೆ ಕುಣಿದಿರಬೇಕು. ಹೋರಾಟಕ್ಕೆ ಇಳಿದ. ಮಂಗಳೂರು, ಕೋಟದ ನಡುವೆ ಉಠ್‍ಭೈಸ್ ಮಾಡಿದ.
ಮತ್ತಷ್ಟು ಓದು 
ಆಳ್ವಾಸ್ ನುಡಿಸಿರಿ – 2015
– ಡಾ| ಎಂ.ಮೋಹನ ಆಳ್ವ
ಅಧ್ಯಕ್ಷರು,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ),ಮೂಡುಬಿದಿರೆ
ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವು ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಈ ಸಮ್ಮೇಳನವನ್ನು ಕಳೆದ 12 ವರ್ಷಗಳಿಂದ ಕನ್ನಡ ಬಾಂಧವರ ಸಹಕಾರದಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನು, ಸಂಸ್ಕೃತಿ ಪ್ರೀತಿ-ಗೌರವಗಳನ್ನು ವೃದ್ಧಿಸಲು ಸಾಧ್ಯವಾಗಿದೆ. ಕನ್ನಡಿಗರ ಹೆಮ್ಮೆಯ ಈ ಕಾರ್ಯಕ್ರಮವು ಈ ವರ್ಷ ನವೆಂಬರ್ 26, 27, 28 ಮತ್ತು 29 (ಗುರುವಾರ, ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ) ನೇ ದಿನಾಂಕಗಳಂದು ನಾಲ್ಕು ದಿನಗಳ ಕಾಲ ಮೂಡುಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಆಳ್ವಾಸ್ ನುಡಿಸಿರಿ ಉದ್ಘಾಟನೆಗೆ ನೂತನ ವೇದಿಕೆ
ನವೆಂಬರ್ 26 ರಂದು ಸಂಜೆ ಗಂಟೆ 6.00 ಕ್ಕೆ ಆಳ್ವಾಸ್ ನುಡಿಸಿರಿಯ ಉದ್ಘಾಟನೆಯು ಅದಕ್ಕೆಂದೇ ನಿರ್ಮಾಣವಾದ ವೇದಿಕೆಯಲ್ಲಿ ನಡೆಯಲಿದೆ. ಸುಮಾರು 20,000 ಪ್ರೇಕ್ಷಕರು ನೋಡಿ ಆನಂದಿಸಬಹುದಾದ ಬೃಹತ್ ಸಭಾಂಗಣವು ಇದಾಗಿದೆ. ಉಳಿದಂತೆ, 27, 28, 29ನೇ ದಿನಾಂಕಗಳಂದು ‘ಕರ್ನಾಟಕ : ಹೊಸತನದ ಹುಡುಕಾಟ’ ಎನ್ನುವ ಪ್ರಧಾನ ಪರಿಕಲ್ಪನೆಯಲ್ಲಿ ವಿವಿಧ ಗೋಷ್ಠಿಗಳು, ಸಂಸ್ಮರಣೆ, ಕವಿಸಮಯ-ಕವಿನಮನ, ವಿಶೇಷೋಪನ್ಯಾಸಗಳು ರತ್ನಾಕರವರ್ಣಿ ವೇದಿಕೆಯ ನುಡಿಸಿರಿ ಸಭಾಂಗಣದಲ್ಲಿ ನಡೆಯಲಿವೆ. 29ನೇ ದಿನಾಂಕದಂದು 3.00 ಗಂಟೆಗೆ ಸಮಾರೋಪ ಸಮಾರಂಭವು ಜರುಗಲಿದೆ.
ಆಳ್ವಾಸ್ ನುಡಿಸಿರಿ 2015ರ ಸರ್ವಾಧ್ಯಕ್ಷತೆಗೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಆಯ್ಕೆ.
ಮತ್ತಷ್ಟು ಓದು 
ಮಂಡೆ ಮೊಸರಾದ ಕಥೆ!
– ತೇಜಸ್ ಡೋಂಗ್ರೆ,ಚಿಕ್ಕಮಗಳೂರು
ಬೆಂಗಳೂರು, ತನ್ನ ವಾಹನ ದಟ್ಟನೆಯಿಂದಲೂ ಒಂದು ಜಾಗದಿಂದಿನ್ನೊಂದಕ್ಕೆ ದಿನಕ್ಕೆರಡು ಬಾರಿ ವಿಧಿಯಿಲ್ಲದೆ ಪ್ರಯಾಣಿಸುವ ನನ್ನಂಥವರಿಂದಲೂ, ಆಗಾಗ್ಗೆ ಶ್ರೇಣೀಯ ಸಮಾನತೆಯನ್ನು ಇರುವೆ ಕಚ್ಚಿದ ಹಾಗೆ ನೆನಪಿಸಿಕೊಂಡು ಧಿಗ್ಗನೆದ್ದು ಕುಣಿದು ದಿನಪತ್ರಿಕೆಗಳಲ್ಲಿ ಅರಚುವ ಕಮ್ಯುನಿಸ್ಟರ ರೀತಿಯನ್ನು ನೆನಪಿಸುತ್ತದೆ.
ಹೇಗೆಂದು ಹೇಳುತ್ತೇನೆ ಕೇಳಿ.ಕೋಟಿ ದುಡಿಯುವ ಕಂಪೆನಿ ಮುಖ್ಯಸ್ಥನೂ ,ಬಡಪಾಯಿಗಳಾದ ನನ್ನಂಥವರೂ ಊರಿಗೆ ಹೊರಡಬೇಕೆಂದರೆ ಬರಬೇಕೆಂದರೆ ಸಮುದ್ರದಂತಿರುವ ವಾಹನ ದಟ್ಟಣೆಯನ್ನು ದಾಟಿಕೊಂಡೇ ಬರಬೇಕು,ನಾವ್ಯಾರೂ ಅಂಜನೇಯ ಸ್ವರೂಪಿಗಳಲ್ಲವಷ್ಟೇ.ಅದಕ್ಕೇ ಹೇಳಿದ್ದು ನೀನೂರಿಗೆ ರಾಜನಾದರೂ ಬೆಂಗಳೂರಿನ ರಸ್ತೆಗಳಿಗೆ ಒಬ್ಬ ಪ್ರಯಾಣಿಕನೇ,ಜಾಸ್ತಿಯೇನಲ್ಲ.
ಈಗ ಎಲ್ಲರ ಚಿತ್ತ ಬಿಹಾರದತ್ತ…..!!!
– ಕೆ.ಎಸ್ ರಾಘವೇಂದ್ರ ನಾವಡ
ಬಿಹಾರದಲ್ಲಿ ಮತ್ತೊಮ್ಮೆ ನರೇ೦ದ್ರ ಮೋದಿಯವರ ಚರಿಶ್ಮಾ ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಭಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ ಮೇಲೆದ್ದಿದೆ! ಎ೦ದಿಗೂ ಮೈತ್ರಿ ಸಾಧ್ಯವೇ ಇಲ್ಲವೇನೋ ಎ೦ಬ೦ತೆ ಬಧ್ಧ ಎದುರಾಳಿಗಳಾಗಿದ್ದ ಲಾಲು-ನಿತೀಶ್ ಒ೦ದಾಗಿದ್ದಾರೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರಲ್ಲ ಹಾಗೆಯೇ ಶತ್ರುಗಳೂ ಅಲ್ಲ ! ಎ೦ಬುದು ಸಾಬೀತಾಗಿದೆ! ಜೊತೆಗೆ ಕಾ೦ಗ್ರೆಸ್, ಜೆ.ಎಮ್. ಸೊರೇನ್ ಎಲ್ಲಾ ನಿತೀಶ್ರೊ೦ದಿಗೆ ಕೈ ಜೋಡಿಸಿದ್ದಾರೆ! ಇತ್ತ ಭಾ.ಜ.ಪಾದೊ೦ದಿಗೆ ಮಾ೦ಜಿ, ರಾಮ್ ವಿಲಾಸ್ ಪಾಸ್ವಾನ್ ಜೊತೆಯಾಗಿದ್ದಾರೆ. ಒಟ್ಟಾರೆ ರ೦ಗ ಸಿಧ್ಧವಾಗಿದೆ.ನಾಟಕ ಇನ್ನಷ್ಟೇ ಶುರುವಾಗಬೇಕಿದೆ!
ಕಾ೦ಗ್ರೆಸ್ ಗೆ ಏಕಾ೦ಗಿಯಾಗಿ ಬಿಹಾರದಲ್ಲಿ ಸ್ಪರ್ಧಿಸುವ ತಾಕತ್ತೇ ಇಲ್ಲ. ಬಿ.ಜೆ.ಪಿಗಾದರೂ ಸ್ವಲ್ಪವಾದರೂ ತಾಕತ್ತಿದೆಯೇನೋ ಎನ್ನಬಹುದು! ಬೇರಾವ ಪಕ್ಷಗಳಿಗೂ ಅಲ್ಲಿ ಸ್ವ೦ತ ನೆಲೆ ಇಲ್ಲ! ಪಕ್ಕದಲ್ಲಿ ಯಾರದರೊಬ್ಬರು ಇರಲೇಬೇಕು. ಹೆಚ್ಚಾಗಿ ನರೇ೦ದ್ರ ಮೋದಿ ಬ೦ದ ನ೦ತರ ವಿರೋಧ ಪಕ್ಷಗಳೆಲ್ಲಾ ಮಖಾಡೆ ಮಲಗಿ ಬಿಟ್ಟಿವೆ! ಸ೦ಸತ್ ಅಧಿವೇಶನ ನಡೆಯದ೦ತೆ ಮಾಡುವಲ್ಲಿ ಮಾತ್ರವೇ ವಿರೋಧ ಪಕ್ಷಗಳ ತಾಕತ್ತು ಸಾಬೀತಾಗಿದ್ದು ಬಿಟ್ಟರೆ, ಕಾ೦ಗ್ರೆಸ್ ನಲ್ಲೀಗ ಮೌನ! ರಾಹುಲ್ ಹಿ೦ದೆ ಸರಿದಿದ್ದಾರೆ. ಮತ್ತೊಮ್ಮೆ ಸೋನಿಯಾರಿಗೇ ದಾರಿ ಮಾಡಿಕೊಟ್ಟಿದ್ದಾರೆ! ರಾಹುಲ್ ಗಾ೦ಧೀಯದ್ದೀಗ ಮೌನ ಕ್ರಾ೦ತಿ! ಬಿಹಾರದಲ್ಲಿ ಮಹಾ ಮೈತ್ರಿಕೂಟದಿ೦ದ ಸಮಾಜವಾದಿ ಪಕ್ಷ ಹೊರಗೆ ಬ೦ದು ಸ್ವತ೦ತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದು ಆ ಮಟ್ಟಿಗಾದರೂ ವಿರೋಧಿಗಳ ಬಲವನ್ನು ಕು೦ಠಿತಗೊಳಿಸಿದ್ದು ಸತ್ಯವೂ ಹೌದು! ಹಿ೦ದೆ ಜಾರ್ಖ೦ಡ್ ನಲ್ಲಿನ ತನ್ನ ಸರಕಾರವನ್ನು ಬೀಳಿಸಿದ್ದ ಜೆ.ಎಮ್.ಎಮ್ ಇಲ್ಲಿ ಭಾ.ಜ.ಪಾವನ್ನು ಹೆಡೆಮುರಿ ಕಟ್ಟಲು ನಿತೀಶ್ ರೊ೦ದಿಗೆ ಕೈಗೂಡಿಸಿದೆ. ಒಟ್ಟಾರೆ ಅಲ್ಲೀಗ ಎರಡು ಬಣಗಳು!. ಒ೦ದು ನಿತೀಶ್ –ಲಾಲೂ ಮೈತ್ರಿಕೂಟವಾದರೆ ಮತ್ತೊ೦ದೆಡೆ ಭಾ,ಜಪಾ ಮೈತ್ರಿಕೂಟ.
ಮತ್ತಷ್ಟು ಓದು 
ಪಾಕಿಸ್ತಾನ್, ಹುರಿಯತ್ ಮತ್ತು ನಮ್ಮ ಬುದ್ಧಿಜೀವಿಗಳು!!
– ಪ್ರದೀಪ್ ತ್ಯಾಗರಾಜ
ಬಹುಶಃ ಭಾರತದ ಜನ ಸಾಮಾನ್ಯರೆಲ್ಲರೂ ಒಕ್ಕೊರಲಿನಿಂದ ಹೇಳುವ ಮಾತೊಂದೇ, ಅದೇ ಪಾಕಿಸ್ತಾನ್ ಎನ್ನುವುದು ಒಂದು ದೊಡ್ಡ ದುರಂತ. ಈ ಪಾಕಿಸ್ತಾನ ಎಂಬುದು ಒಂದು ಭಿಕ್ಷುಕರ ದೇಶ ಅಂದರೂ ತಪ್ಪಲ್ಲ. ಯಾವುದೇ ದೇಶ ಕೂಡ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿ ಉದ್ಧಾರ ಆದ ಉದಾಹರಣೆಗಳಿಲ್ಲ. ಇಷ್ಟಕ್ಕೂ ಭಯೋತ್ಪಾದನೆಯೊಂದನ್ನು ಬಿಟ್ಟರೆ, ಆ ದೇಶಕ್ಕೆ ತಮ್ಮನ್ನು ಮಾರ್ಕೆಟ್ ಮಾಡಿಕೊಳ್ಳುವಂಥ ಇನ್ನೊಂದು ವಸ್ತುವಿಲ್ಲ. ಈ ದೇಶದ ಪರಿಸ್ಥಿತಿ ಹೇಗಿದೆಯಂದರೆ, ಪ್ರಜಾಪ್ರಭುತ್ವವನ್ನು ಹೇರಿಕೆಯೆಂಬ ರೀತಿ ಒಪ್ಪಿಕೊಳ್ಳುವ ವಿಷಮ ಸ್ಥಿತಿ ತಲುಪಿದ್ದಾರೆ. ಮಾತು ಮಾತಿಗೂ, ಪಶ್ಚಿಮ ರಾಷ್ಟ್ರಗಳ ಬಳಿಹೋಗಿ, ತಮ್ಮ ದೇಶಕ್ಕೆ ಸಹಾಯ ಹಸ್ತ ಚಾಚಿ ಎಂದು ಅಂಗಲಾಚುವುದರಲ್ಲೇ ಇವರು ಬರೋಬ್ಬರಿ ೬೫ ವರ್ಷಗಳನ್ನು ನಮ್ಮ ಭಾರತ ದೇಶದೊಂದಿಗೆ ಸವೆಸಿದ್ದಾರೆ. ನಮ್ಮ ದೇಶದಲ್ಲಿ ರಾಹುಲ್ ಗಾಂಧಿ ಎಂಬೋ ಮಹಾನ್ ಬುದ್ಧಿವಂತನಿಗೆ ಎಷ್ಟು ಮರ್ಯಾದೆ ಇದೆಯೋ, ಅಷ್ಟೇ ಮರ್ಯಾದೆ ಆ ನವಾಜ್ ಷರೀಫ್ ಎಂಬ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಇದೆ. ಆ ದೇಶದ ನಿಜವಾದ ಆಡಳಿತವಿರುವುದೇ ಅವರ ಸೈನ್ಯಕ್ಕೆ. ೧೯೪೭ ರಿಂದಲೂ ಇದೆ ರೀತಿ ನಡೆದು ಬರುತ್ತಿದೆ. ಈ ಸಂಧರ್ಭದಲ್ಲಿ, ಈ ಹುರಿಯತ್ ಎನ್ನುವ ಸಂಘಟನೆ ಕೂಡ, ತನ್ನ ಬೇಳೆ ಬೇಯಿಸಿಕೊಳ್ಳಲು ಶುರು ಮಾಡಿದೆ. ಇದರ ಪರಿಣಾಮ ಭಾರತ ದೇಶದ ಹಲವಾರು ಬುದ್ಧಿಜೀವಿಗಳು ತಮ್ಮ ಅತಿ-ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗಿರುವುದೇ ನಮ್ಮ ದೇಶದ ದುರಂತ.
ಇಷ್ಟೆಲ್ಲಾ ಹುಳುಕು ತುಂಬಿರುವ ಪಾಕಿಸ್ತಾನ ಎಂಬ ದೇಶದ ಬಗ್ಗೆ, ನಮ್ಮ ಬುಜೀಗಳ ಕಲ್ಪನೆ ನಿಜಕ್ಕೂ ಅದ್ಭುತ. ನಿಜಕ್ಕೂ ಆ ದೇಶದೊಂದಿಗೆ ಮಾತುಕತೆ ನಡೆಸಬೇಕಂಬ ಇವರ ಆಲೋಚನೆ ನಿಜಕ್ಕೂ ಆಘಾತಕಾರಿ. ಇಷ್ಟಕ್ಕೂ ಏನೂ ಸರಿಯಿಲ್ಲದ ಆ ದೇಶದ ಜೊತೆ ಮಾತನಾಡಲು ಏನಿದೆ? ಒಂದು ಪ್ರಜಾಪ್ರಭುತ್ವ ಸರ್ಕಾರದ ಮಾತನ್ನು ಕೇಳುವ ತಾಳ್ಮೆಯಾಗಲಿ, ಅಥವಾ ಸಂಯಮವಾಗಲಿ ಇಲ್ಲ. ಒಂದು ಸರ್ಕಾರ ಕೊಟ್ಟ ನಿರ್ಧಿಷ್ಟ ಅಂಶಗಳ ಬಗ್ಗೆ ಮಾತುಕತೆ ನಡೆಸುವಲ್ಲಿ ತಯಾರಿಲ್ಲ.
ಕೊಟ್ಟ ಕುದುರೆಯನೇರಲರಿಯದೆ… -ಪುಸ್ತಕ ವಿಮರ್ಶೆ
-ವಿನುತಾ ಎಸ್ ಪಾಟೀಲ್. ಕುವೆಂಪು ವಿಶ್ವವಿದ್ಯಾನಿಲಯ
ವಚನಸಾಹಿತ್ಯವು ಜಾತಿ ವಿರೋಧಿ ಚಳುವಳಿಯೇ? ಹೌದಾದರೆ, ವಚನಕಾರರೇ ಅದಕ್ಕೆ ವಿರುದ್ಧವಾಗಿ ಮಾತನಾಡುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಜಾತಿ ವಿನಾಶವೇ ವಚನಕಾರರ ಉದ್ದೇಶವಾಗಿದ್ದರೆ ಅವರೇಕೆ ಜಾತಿಯ ಮೂಲಕ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ? ದಲಿತ ಪರವು ಸ್ತ್ರೀಪರವು ಆಗಿರುವ ವಚನಕಾರರು ಅವರ ಬಗ್ಗೆ ಕೀಳಾಗಿ ಮಾತನಾಡಲು ಹೇಗೆ ಸಾಧ್ಯ? ನಿಲುಮೆ ಪ್ರಕಾಶನದಿಂದ ಹೊರಬಂದಿರುವ ‘ಕೊಟ್ಟ ಕುದುರೆಯನೇರಲರಿಯದೆ…’ ಎಂಬ ಪ್ರಸ್ತುತ ಕೃತಿಯು ಇಂತಹ ಅನೇಕ ಗೊಂದಲಗಳನ್ನು ದೂರ ಮಾಡುವ ಮೂಲಕ ವಚನಗಳ ಅಧುನಿಕ ನಿರೂಪಣೆಗಳ ಆಚೆಗೆ ವಚನಸಾಹಿತ್ಯವನ್ನು ಅರ್ಥಮಾಡಿಸುವಲ್ಲಿ ಸಫಲವಾಗಿದೆ ಎಂದು ಹೇಳುವುದು ಅತಿಶೋಕ್ತಿಯಾಗಲಾರದು.
ಕಳೆದ ಕೆಲವು ವರ್ಷಗಳಿಂದ ಎಸ್.ಎನ್. ಬಾಲಗಂಗಾಧರ ಮತ್ತವರ ಸಂಶೋಧನಾ ತಂಡದವರ ಸಂಶೋಧನೆ ಮತ್ತು ವಾದಗಳು ಕನ್ನಡದ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಸುಳ್ಳಲ್ಲ. ಇದು ವಚನಗಳ ಕುರಿತ ಚರ್ಚೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ವಚನಸಾಹಿತ್ಯವು ಜಾತಿವಿರೋಧಿ ಚಳವಳಿ ಎಂಬುದು ಕನ್ನಡದ ಬೌದ್ಧಿಕವಲಯದ ನಂಬಿಕೆ. ಇದನ್ನು ಪ್ರಶ್ನಿಸುವ ಬಾಲಗಂಗಾಧರ ಅವರು ವಚನಸಾಹಿತ್ಯವು ‘ಜಾತಿವಿರೋಧಿ ಚಳುವಳಿ’ ಎಂದು ಹೇಳುವುದಕ್ಕೆ ಯಾವುದೇ ಅಧಾರವಿಲ್ಲ. ವಚನಕಾರರನ್ನು ಸಾಮಾಜಿಕ ಹೋರಾಟಗಾರರಂತೆ ನೋಡುವುದು ಗೊಂದಲಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಅದನ್ನು ಅಧ್ಯಾತ್ಮ ಸಾಧನೆಯ ಮಾರ್ಗ ಎಂದು ನೋಡಿದಲ್ಲಿ ಹೆಚ್ಚು ಸುಸಂಬದ್ಧವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎನ್ನುತ್ತಾರೆ. ಬಾಲಗಂಗಾಧರ ಅವರ ಈ ವಾದವು ಪ್ರಜಾವಾಣಿಯ ಪತ್ರಿಕೆಯಲ್ಲಿ ಚರ್ಚೆಗೆ ಕಾರಣವಾಗುವುದರ ಜೊತೆಗೆ, ಚರ್ಚೆಯ ಸಂದರ್ಭದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿಯೂ ಹೊರತರಲಾಯಿತು. ಒಂದು ಗುಂಪಿನ ವಾದಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದ ಈ ಪುಸ್ತಕದ ವಿಚಾರಗಳು ವಚನಸಾಹಿತ್ಯದ ಕುರಿತ ಗೊಂದಲಗಳನ್ನು ಪರಿಹರಿಸುವ ಬದಲಾಗಿ ಬಾಲಗಂಗಾಧರ ಅವರ ಸಂಶೋಧನೆಯ ಹೊಸತನವನ್ನು ತಿಳಿಯಲು ತಡೆಯುಂಟುಮಾಡಿತ್ತು. ಪ್ರಸ್ತುತ ಕೃತಿಯು ಎಲ್ಲಾ ಲೇಖನಗಳು ವಚನಸಾಹಿತ್ಯದ ಕುರಿತ ಗೊಂದಲಗಳನ್ನು ನಿವಾರಿಸುವ ಮೂಲಕ ಬಾಲಗಂಗಾಧರ ಅವರ ಸಂಶೋಧನೆಯ ಹೊಸತನವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮತ್ತಷ್ಟು ಓದು 
ಹುಳಿಮಾವಿನ ಮರ: ಪಿ.ಲಂಕೇಶ್ ಅವರ ಆತ್ಮಕಥನ
– ರಾಜಕುಮಾರ.ವ್ಹಿ.ಕುಲಕರ್ಣಿ
ಮುಖ್ಯಗ್ರಂಥಪಾಲಕ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ,ಬಾಗಲಕೋಟ
‘ಹುಳಿಮಾವಿನ ಮರ’ ಕನ್ನಡದ ಶ್ರೇಷ್ಟ ಲೇಖಕ ಹಾಗೂ ಪತ್ರಕರ್ತ ಪಿ.ಲಂಕೇಶ್ ಅವರ ಆತ್ಮಕಥನ. ಲಂಕೇಶ್ ಲೇಖಕರಾಗಿ ಮತ್ತು ಪತ್ರಕರ್ತರಾಗಿ ಕನ್ನಡಿಗರಿಗೆ ಚಿರಪರಿಚಿತರು. ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿಯೊಂದರ ರೈತಕುಟುಂಬದಲ್ಲಿ ಜನಿಸಿ ತನ್ನೊಳಗಿನ ಪ್ರತಿಭೆ ಮತ್ತು ಪ್ರಯತ್ನದಿಂದ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಹೆಸರು ಮಾಡಿದ ಪ್ರತಿಭೆ ಈ ಲಂಕೇಶ್. ಲಂಕೇಶರ ಆಸಕ್ತಿಯ ಕ್ಷೇತ್ರದ ಹರವು ಬಹುದೊಡ್ಡದು. ಬರವಣಿಗೆ, ಪತ್ರಿಕೋದ್ಯಮ, ನಾಟಕ, ಅಧ್ಯಾಪನ, ಕೃಷಿ, ಚಳವಳಿ,ಫೋಟೋಗ್ರಾಫಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಲೆದಾಡಿ ಕೊನೆಗೆ ತನ್ನ ಛಾಪನ್ನು ಮೂಡಿಸಿದ್ದು ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ. ಹತ್ತೊಂಬತ್ತು ವರ್ಷಗಳ ಕಾಲ ಅಧ್ಯಾಪಕರಾಗಿ ದುಡಿದು ವೃತ್ತಿಯ ಏಕತಾನತೆ ಬೇಸರ ಮೂಡಿಸಿದಾಗ ಮುಲಾಜಿಲ್ಲದೆ ರಾಜಿನಾಮೆಯಿತ್ತು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ವಿಚಿತ್ರ ವ್ಯಕ್ತಿತ್ವ ಪಿ.ಲಂಕೇಶ್ ಅವರದು. 1978 ರಿಂದ 1980ರ ವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿಯೂ ಕನ್ನಡ ಚಿತ್ರೋದ್ಯಮದ ಪಟ್ಟುಗಳು ಅರ್ಥವಾಗದೇ ಹೋದಾಗ ಲಂಕೇಶರ ಆಸಕ್ತಿ ಪತ್ರಿಕೋದ್ಯಮದತ್ತ ಹೊರಳುತ್ತದೆ. 1980 ರಲ್ಲಿ ‘ಲಂಕೇಶ್ ಪತ್ರಿಕೆ’ಯನ್ನು ಆರಂಭಿಸುವುದರೊಂದಿಗೆ ಲಂಕೇಶ್ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯದ ಬಹುದೊಡ್ಡ ಪಲ್ಲಟಕ್ಕೆ ಕಾರಣರಾಗುತ್ತಾರೆ. ಪತ್ರಿಕೋದ್ಯಮ ಎನ್ನುವುದು ರಾಜಕಾರಣಿಗಳ ಮತ್ತು ಧನಿಕರ ಸೊತ್ತು ಎಂದು ಅದುವರೆಗೂ ತಿಳಿದುಕೊಂಡಿದ್ದ ಜನಸಾಮಾನ್ಯರಿಗೆ ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಜನರ ಧ್ವನಿ ಎಂದು ಅರ್ಥಮಾಡಿಸುತ್ತಾರೆ. ಲಂಕೇಶ್ ಸಾಹಿತ್ಯ ಮತ್ತು ಸಿನಿಮಾಕ್ಕಿಂತ ಪತ್ರಿಕೆಯ ಮೂಲಕವೇ ಜನರಿಗೆ ಹೆಚ್ಚು ಹತ್ತಿರವಾದರು. ಬದುಕಿನ ಕೊನೆಯ ದಿನದವರೆಗೂ ಪತ್ರಿಕೋದ್ಯಮಕ್ಕೆ ನಿಷ್ಟರಾಗುಳಿದ ಲಂಕೇಶ್ ತಮ್ಮ ಪತ್ರಿಕೆಯನ್ನು ಕನ್ನಡದ ಜಾಣ-ಜಾಣೆಯರ ಪತ್ರಿಕೆಯಾಗಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದರು. ಪತ್ರಿಕಾ ಬರವಣಿಗೆಯಾಚೆಯೂ ಲಂಕೇಶ್ ಕಥೆ, ನಾಟಕ, ಕಾದಂಬರಿ, ಕವಿತೆ, ಗದ್ಯ, ಅನುವಾದದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಕನ್ನಡದ ಅನನ್ಯ ಬರಹಗಾರ. ಓದಿದ್ದು ಇಂಗ್ಲಿಷ್ ಸಾಹಿತ್ಯ, ಹತ್ತೊಂಬತ್ತು ವರ್ಷಗಳ ಕಾಲ ಪಾಠ ಮಾಡಿದ್ದು ಕೂಡ ಇಂಗ್ಲಿಷ್ ಸಾಹಿತ್ಯವನ್ನೇ ಆದರೆ ಬರೆದದ್ದು ಮಾತ್ರ ಕನ್ನಡದಲ್ಲಿ. ಲಂಕೇಶ್ ಅವರಂತೆ ಅನಂತಮೂರ್ತಿ, ಭೈರಪ್ಪ, ತೇಜಸ್ವಿ, ಚಂಪಾ, ಚಿತ್ತಾಲ ಇವರುಗಳೆಲ್ಲ ತಮ್ಮ ಅಧ್ಯಯನದ ವಿಷಯದಾಚೆಯೂ ಕನ್ನಡದಲ್ಲಿ ಶ್ರೇಷ್ಟ ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಲಂಕೇಶರ ಸಮಕಾಲೀನ ಬರಹಗಾರರು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡು ಬಂದ ಈ ಪ್ರವೃತ್ತಿ ಕನ್ನಡದ ಬರಹಗಾರರ ವಿಶಿಷ್ಟ ಗುಣದ ದ್ಯೋತಕವಾಗಿದೆ ಮತ್ತು ಅವರಲ್ಲಿನ ಈ ಗುಣ ಕನ್ನಡ ಸಾಹಿತ್ಯವನ್ನು ಸಾಕಷ್ಟು ಸಮೃದ್ಧಗೊಳಿಸಿತು.
ಪ್ರಗತಿಪರರ ಸಮರ್ಥನೆಯಲ್ಲಡಗಿರುವ ಮೂಢನಂಬಿಕೆಯ ಮೂಲ ಹಿಡಿದು
ಡಾ. ಸಂತೋಷ್ ಕುಮಾರ್ ಪಿ.ಕೆ
ಕನ್ನಡದ ಒಂದು ಪತ್ರಿಕೆಯಲ್ಲಿ ದಿನಾಂಕ 5 ಅಕ್ಬೋಬರ್ 2015 ರಂದು ಸಮ್ವರ್ಥ ಸಾಹಿಲ್ ರವರು ಭಗವಾನರ ಹೇಳಿಕೆಯನ್ನು ಸಮರ್ಥಿಸಿಕೊಂಡು ಇಂದಿಷ್ಟು ವಿಚಾರಗಳನ್ನು ಹೊರಗೆಡಹಿದ್ದಾರೆ. ಅವರ ವಾದವನ್ನು ಸಾರಾಂಶೀಕರಿಸುವುದಾದರೆ, ಭಗವಾನ್ ರವರು ‘ರಾಮ ಅಪ್ಪನಿಗೆ ಹುಟ್ಟಿದವನಲ್ಲ’ ಎಂಬ ಹೇಳಿಕೆಗೆ ಜನರು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಹೊಸದೊಂದು ಕಾರಣವನ್ನು ಹುಡುಕಿದ್ದಾರೆ. ಭಗವಾನ್ ರವರ ಹೇಳಿಕೆಯಿಂದ ಜನರಿಗೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಿಲ್ಲ, ಬದಲಿಗೆ ಸಮಾಜದಲ್ಲಿ ಅಡಗಿರುವ ಪುರುಷ ಪ್ರಾಬಲ್ಯಕ್ಕೆ ಧಕ್ಕೆ ಬಂದಂತಾಗಿ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎನ್ನುವುದೇ ಅವರ ಹೊಸ ಹುಡುಕಾಟವಾಗಿದೆ. ಸಮ್ವರ್ಥರ ಸಮರ್ಥನೆಯನ್ನು ಸ್ವಲ್ಪ ಪರಿಶೀಲಿಸುವ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ.
ಮೊದಲಿಗೆ ಸಾಹಿಲ್ ರ ಸಮರ್ಥನೆಯಾಗಲಿ ಅಥವಾ ಅವರು ನಗಣ್ಯ ಮಾಡುವ ಸಂಗತಿಯಾಗಲಿ ಎರಡೂ ವಾಸ್ತವವಲ್ಲ. ಅಂದರೆ ಪುರುಷ ಅಹಂಕಾರಕ್ಕೆ ಧಕ್ಕೆಯಾಗಿ ಜನರು ಆಕ್ರೋಶ ವ್ಯಕ್ತಪಡಿಸಿಲ್ಲ ಹಾಗೂ ಜನರ ಧಾರ್ಮಿಕ ಭಾವನೆ ಧಕ್ಕೆಯಾಗಿರಬಹುದು ಎಂಬುದು ಸತ್ಯವಲ್ಲ. ಇಲ್ಲಿ ನಾವು ಎರಡು ಅಂಶಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ, ಅವುಗಳೆಂದರೆ ಒಂದು ಇವೆರಡೂ ಕಾರಣಗಳು ಸತ್ಯವಾಗಿರದಿದ್ದರೆ ಮತ್ತೇಕೆ ಜನರು ಆಕ್ರೋಶವನ್ನು ವ್ಯಕ್ತಪಡಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಹಾಗೂ ಕೆಲವು ಸೋ ಕಾಲ್ಡ್ ವಿದ್ವಾಂಸರುಗಳು ಇಂತಹ ತಲೆಮಾಸಿದ ಸಮರ್ಥನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ? ಈ ಎರಡೂ ಅಂಶಗಳನ್ನು ಅರ್ಥಮಾಡಿಕೊಂಡರೆ ಜನರ ವಿರೋಧಕ್ಕೆ ಕಾರಣಗಳು ಹಾಗೂ ಪ್ರಗತಿಪರರ ಹಿಪೋಕ್ರಸಿಯನ್ನು ಅರರ್ಥೈಸಿಕೊಳ್ಳಲು ಸಾಧ್ಯವಾಗಬಹುದು. ಮತ್ತಷ್ಟು ಓದು 
ಸಣ್ಣಕತೆಗಳ ಕೊರತೆಯ ನಡುವೆ ನೆನಪಾದವನು ಹೆಮ್ಮಿ೦ಗ್ವೆ…!!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ನಾವಿನ್ನೂ ಹಾಸಿಗೆಯಲ್ಲಿರುವಾಗಲೇ ಅವನು ನಮ್ಮ ಕೋಣೆಗೆ ಬ೦ದು ಕಿಟಕಿ ಮುಚ್ಚಲು ಪ್ರಯತ್ನಿಸುತ್ತಿದ್ದ.ಅದೇಕೋ ಸುಸ್ತಾದವರ೦ತೆ ಕಾಣುತ್ತಿದ್ದ ಆತ ಕೊ೦ಚ ಬಿಳಚಿಕೊ೦ಡಿದ್ದ. ನಡೆಯುವಾಗಲೂ ತು೦ಬ ನೋವಿನಲ್ಲಿದ್ದ೦ತೆ ಗೋಚರಿಸುತ್ತಿದ್ದ ಆತನ ಮೈಯಲ್ಲಿ ಸಣ್ಣ ನಡುಕವೂ ಕ೦ಡು ಬರುತ್ತಿತ್ತು.’ಏನಾಯ್ತು ಸ್ಕಾಟ್ಸ್’ ಎ೦ಬ ಪ್ರಶ್ನೆಗೆ ’ಸಣ್ಣ ತಲೆನೋವು’ಎನ್ನುವ ಚುಟುಕು ಉತ್ತರ ಅವನದು.’ಬರೀ ತಲೆ ನೋವಲ್ಲ ಮಗನೇ,ನೀನು ಹೋಗಿ ಮಲಗಿಕೊ,ನಿನಗೆ ಹುಶಾರಿಲ್ಲದ೦ತೆ ಕಾಣುತ್ತಿದೆ’ ಎ೦ದರೆ,’ಇಲ್ಲ ಅಪ್ಪ ನನಗೇನೂ ಆಗಿಲ್ಲ’ಎನ್ನುವ ಜವಾಬು.’ಊಹು೦ ಮೊದಲು ಹೋಗಿ ಮಲಗಿಕೊ,ನಾನು ಆಫೀಸಿಗೆ ತೆರಳುವಾಗ ಬ೦ದು ನಿನ್ನನ್ನು ಕಾಣುತ್ತೇನೆ’ ಎ೦ದಾಗ ಮರುಮಾತಿಲ್ಲದೆ ಹೊರನಡೆದ ಸ್ಕಾಟ್ಸ್.ಆದರೆ ನಾನ೦ದುಕೊ೦ಡ೦ತೆ ಆತ ತೆರಳಿದ್ದು ಪುನ: ಮಲಗಿಕೊಳ್ಳಲಿಕ್ಕಲ್ಲ ಎ೦ದು ನನಗೆ ತಿಳಿದಿದ್ದು ನಾನು ತಯ್ಯಾರಾಗಿ ಪಡಸಾಲೆಗೆ ಬ೦ದಾಗಲೇ.ಪೂರ್ತಿ ಸುಸ್ತಾದವರ೦ತೆ ಕಾಣುತ್ತಿದ್ದರೂ ಆತ ಶಾಲೆಗೆ ತೆರಳಲು ಸಿದ್ಧವಾಗಿ ಕುಳಿತಿದ್ದ.ನಾನು ಆತನ ಹಣೆಯ ಮೇಲೆ ಕೈಯಿಟ್ಟು ನೋಡಿದೆ.ಆತನಿಗೆ ಜ್ವರವಿರುವುದು ನನಗೆ ತಿಳಿಯಿತು.ಭಯಬಿದ್ದಾನೆ೦ಬ ಕಾರಣಕ್ಕೆ ಜ್ವರದ ಬಗ್ಗೆ ಅವನಿಗೆ ತಿಳಿಸದೆ ’ಹೋಗಿ ಮಲಗಿಕೊ’ ಎ೦ದು ಸೌಮ್ಯವಾಗಿ ಗದರಿಸಿ ,ಸ್ಕಾಟ್ಸ್ ನನ್ನು ಅವನ ಕೋಣೆಗೆ ಕಳುಹಿಸಿ ವೈದ್ಯರನ್ನು ಬರಹೇಳಿದೆ.
ಎತ್ತಿನ ಹೊಳೆ ಯೋಜನೆ: ವಿರೋಧಿಸುವುದಕ್ಕೂ ಕಾರಣಗಳಿವೆ!
– ಪ್ರಸಾದ್ ಕುಮಾರ್,ಮಾರ್ನಬೈಲ್
ಒಂದೆಡೆ ಕಳಸಾ ಬಂಡೂರಿ ಯೋಜನೆ. ಇನ್ನೊಂದೆಡೆ ಎತ್ತಿನಹೊಳೆ ನದಿ ತಿರುವು ಯೋಜನೆ. ಒಂದರಲ್ಲಿ ಉತ್ತರಕರ್ನಾಟಕದ ಜನರ ಆಕ್ರೋಶವಾದರೆ ಇನ್ನೊಂದರಲ್ಲಿ ಕರಾವಳಿಗರ ಆಕ್ರೋಶ. ವಿಚಿತ್ರವೆಂದರೆ ಅತ್ಯವಶ್ಯಕವಾಗಿರುವ ಕಳಸಾ ಬಂಡೂರಿ ವಿಚಾರದಲ್ಲಿ ಅಂಗೈ ಅಗಲದ ಗೋವಾದ ರಾಜಕಾರಣದ ಮುಂದೆ ನಮ್ಮ ಸರಕಾರ ಕುಬ್ಜವಾಗಿ ಕೂತಿದ್ದರೆ,ಸಂಶಯಾಸ್ಪದವಾಗಿರುವ ಎತ್ತಿನಹೊಳೆಯ ವಿಚಾರದಲ್ಲಿ ಮಾತ್ರ ಅನಾವಶ್ಯಕ ಪೌರುಷದ ಪ್ರದರ್ಶನ ನೀಡುತ್ತಿದೆ! ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಕಳಸಾ ಬಂಡೂರಿ ಯೋಜನೆಯೇನಾದರೂ ಜಾರಿಯಾದರೆ ಅದರಿಂದ ರಾಜ್ಯಕ್ಕೆ ಲಾಭವಲ್ಲದೆ ಯಾವ ವಿಧದ ನಷ್ಟವೂ ಇಲ್ಲ. ಆದರೆ ಅದೇ ಎತ್ತಿನ ಹೊಳೆ ಯೋಜನೆಯೇನಾದರು ಕಾರ್ಯರೂಪಕ್ಕೆ ಬಂತು ಎಂದಾದರೆ ಅದರಿಂದ ರಾಜ್ಯವು ಗಳಿಸುವುದಕ್ಕಿಂತಲೂ ಕಳೆದುಕೊಳ್ಳುವುದೇ ಅಧಿಕ! ಕರಾವಳಿಗರ ಭಾವನೆಗಳಿಗೆ ಬೆಲೆ ನೀಡದೆ ಅತ್ತ ಬಯಲು ಸೀಮೆಗೂ ಸರಿಯಾಗಿ ನೀರು ದೊರೆಯದೆ ಎಲ್ಲಾ ರೀತಿಯಲ್ಲೂ ವಂಚನೆಗೈದಂತಾಗಲಿದೆ ಇಲ್ಲಿ! ಮೇಲಾಗಿ ಇದು ಸುಪ್ತವಾಗಿರುವ ಕರಾವಳಿಗರ ಪ್ರತ್ಯೇಕತೆಯ ಕೂಗಿಗೂ ಭವಿಷ್ಯದಲ್ಲಿ ಒಂದಷ್ಟು ಪುಷ್ಠಿ ನೀಡುವ ಸಾಧ್ಯತೆಯೂ ಇದೆ! ಮೇಲಾಗಿ ಇಲ್ಲಿ ಸಿಗುವ ನೀರಿನ ಬಗ್ಗೆಯೇ ದೊಡ್ಡ ಮಟ್ಟದ ಸಂಶಯವಿರುವುದರಿಂದ ಪೂರ್ಣ ಯೋಜನೆಯೇ ಅಂತಿಮವಾಗಿ ವಿಫಲವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ!
ಹಾಗಿದ್ದರೂ ಯಾಕಿಷ್ಟು ಆತುರ!?
ಮತ್ತಷ್ಟು ಓದು 




