ಬಾಪೂ ನೇತಾಜಿಯನ್ನು ತುಳಿದರೆ ?
– ಶ್ರೀಹರ್ಷ ಸಾಲೀಮಠ
ಸುಭಾಷ ಚಂದ್ರ ಭೋಸರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಕಂಡ ಅತ್ಯಂತ ಚಾರ್ಮಿಂಗ್ ವ್ಯಕ್ತಿ. ಅವರು ಹುಟ್ಟಾ ಜಿನಿಯಸ್. ಕೇವಲ ಎಂಟು ತಿಂಗಳ ಅವಧಿಯ ಸಿದ್ಧತೆಯಲ್ಲಿ
ಐ.ಸಿ.ಎಸ್ ಪರೀಕ್ಷೆಯಲ್ಲಿ ನಾಲ್ಕನೆಯ ರ್‍ಯಾಂಕ್ ಪಡೆದ ಮೇಧಾವಿ. ಸುಭಾಷ್ ರ ಚರಿಷ್ಮಾ ಹಿಟ್ಲರ್‌ನಂತಹವನನ್ನೇ ಬೆರಗುಗೊಳಿಸಿತ್ತು. ದೇಶಬಂಧು ಚಿತ್ತರಂಜನ್ ದಾಸ್ ರ ಗರಡಿಯಲ್ಲಿ ಪಳಗಿದ ನೇತಾಜಿ ಕ್ರಿಯಾಶಿಲತೆಯಲ್ಲೂ ಎಲ್ಲರಿಗಿಂತ ಒಂದು ಕೈ ಮೇಲು. ದೇಶಸೇವೆಯ ಕೈಂಕರ್ಯಕ್ಕೆ ಓಗೊಟ್ಟು ಐ.ಸಿ.ಎಸ್ ನಂತಹ ಹುದ್ದೆಯನ್ನು ಬಿಟ್ಟು ಮರಳಿದವರು. ನೇತಾಜಿಯ ದೇಶಭಕ್ತಿಯ ಬಗ್ಗೆ ಯಾರಿಗೂ ಅನುಮಾನಗಳಿರಲಿಲ್ಲ; ಇಂದಿಗೂ ಇಲ್ಲ!
ಸುಭಾಷರಿಗೂ ಬಾಪೂರಿಗೂ ತಾತ್ವಿಕವಾದ ಅಭಿಪ್ರಾಯಬೇಧಗಳಿದ್ದವು. ಅದನ್ನು ವೈಯಕ್ತಿಕ ಮಟ್ಟದ ಬೇಧಗಳು ಎಂಬಂತೆ ಚಿತ್ರಿಸಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಕಸ್ತುರ್ ಬಾ ಹೇಳುತ್ತಾರೆ “ಗಾಂಧೀಜಿ ಮತ್ತು ಸುಭಾಷರು ಚರ್ಚೆಗೆ ಕುಳಿತರೆ ಇಬ್ಬರು ದೈವಿಪುರುಷರು ಸಂಭಾಷಣೆಗೆ ತೊಡಗಿದಂತೆ ತೋರುತ್ತಿತ್ತು.” ಅಭಿಪ್ರಾಯಗಳಲ್ಲಿ ಬಲವಾದ ಬೇಧಗಳಿದ್ದರೂ ನೇತಾಜಿ ಮತ್ತು ಬಾಪೂಜಿಯವರಲ್ಲಿ ವಯಕ್ತಿಕ ಮಟ್ಟದ ದ್ವೇಷಗಳಿರಲಿಲ್ಲ.
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ವಿದೇಶಿ ತಾಕತ್ತು ಹಾಗೂ ಸೈನ್ಯದ ನೆರವು ಪಡೆಯಬೇಕು ಎಂಬ ಅಭಿಪ್ರಾಯ ನೇತಾಜಿಯವರಾಗಿತ್ತು. ಸಂಪೂರ್ಣ ಸ್ವದೇಶಿ ಮಾರ್ಗದಲ್ಲೇ ಸ್ವಾತಂತ್ರ್ಯ ಪಡೆಯಬೇಕೆಂಬುದು ಗಾಂಧೀಜಿಯ ಅಭಿಪ್ರಾಯವಾಗಿತ್ತು. ಯುದ್ಧಾಸ್ತ್ರಗಳು, ಬಾಂಬುಗಳ ಸಹಾಯದಿಂದ ನೆತ್ತರು ಹರಿಸಿ ಸ್ವಾಯತ್ತೆ ಪಡೆಯಬೇಕೆಂಬುದು ನೇತಾಜಿ ಚಿಂತನೆಯಾಗಿದ್ದರೆ ಸತ್ಯ ಮತ್ತು ಅಹಿಂಸೆ ಗಾಂಧೀಜಿಯ ಮಂತ್ರವಾಗಿತ್ತು. ಇದು ಅವರ ನಡುವೆ ಸಾಕಷ್ಟು ಜಿಜ್ಞಾಸೆ, ಚರ್ಚೆಗಳಿಗೆ ದಾರಿ ಮಾಡಿಕೊಂಡಿತ್ತು. ಹಾಗಂತ ಇಬ್ಬರೂ ಪರಸ್ಪರ ದ್ವೇಷಿಸುತ್ತಿರಲಿಲ್ಲ.
ನಾ ಕಂಡಂತೆ ನಮ್ಮ ಬೆಳಗಾವಿ
– ಚೇತನ್ ಜೀರಾಳ್
ಉತ್ತರ ಕರ್ನಾಟಕದವನಾದ ನನಗೆ, ಬೆಳಗಾವಿ ನನ್ನ ಬೆಳವಣಿಗೆಯ ಒಂದು ಭಾಗವೇ ಅಂದರೆ ತಪ್ಪಲ್ಲ. ವರ್ಷಗಳು ಕಳೆದಂತೆ ನನ್ನ ಜೊತೆಯೇ ಬೆಳಗಾವಿಯ ಸ್ವರೂಪ ಬದಲಾಗುತ್ತಾ ಬಂತು. ಉತ್ತರ ಕರ್ನಾಟಕದ ಜಿಲ್ಲೆಗಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಒಳ್ಳೆಯ ಓದು ಅಥವಾ ಉನ್ನತ ಶಿಕ್ಷಣ ಪಡೆಯಬೇಕೆಂದರೆ ನಾವು ಹುಬ್ಬಳ್ಳಿ, ಧಾರವಾಡ ಇಲ್ಲವೆಂದರೇ ಬೆಳಗಾವಿಗೆ ಹೋಗಿ ಓದಬೇಕು. ಪಿಯುಸಿ ಮುಗಿಸಿದ ಮೇಲೆ ಇಂಜಿನಿಯರಿಂಗ್ ಒದಲು ನನಗೆ ಸಿಕ್ಕಿದ್ದು ಬೆಳಗಾವಿಯ ಒಂದು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ. ಅದು 2003-04ರ ಸಮಯ, ಕಾಲೇಜಿಗೆ ಸೇರಿಕೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇದ್ದವು, ಆಗ ಒಂದು ಕಡೆ ಖುಷಿಯಾಗುತ್ತಿದ್ದರೆ ಮತ್ತೊಂದು ಕಡೆ ಭಯ ಕಾಡುತ್ತಿತ್ತು ಕಾರಣ ನಾನು ಹೋಗುತ್ತಿರುವುದು ಬೆಳಗಾವಿ ಅನ್ನೋ ಊರಿಗೆ. ಜೊತೆಗೆ ಹಿಂದೆ ನನ್ನ ತಂದೆ ಇಲ್ಲಿ ಓದುತ್ತಿದ್ದಾಗ ಅವರಿಗೆ ಆಗಿದ್ದ ಅನೇಕ ಕಹಿ ಘಟನೆಗಳು. ಹೆದರಿಕೆಗೆ ಕಾರಣವಿದ್ದದ್ದು ಬೆಳಗಾವಿಯಲ್ಲಿ ಮರಾಠಿಗರು ಹೆಚ್ಚು, ಅಲ್ಲಿ ಕನ್ನಡ ಮಾತನಾಡುವವರನ್ನು ಹೊಡೆಯುತ್ತಾರೆ ಅನ್ನೋ ಭಯ, ಕಾರಣ ನನ್ನ ತಂದೆ 70ರ ದಶಕದಲ್ಲಿ ಇಲ್ಲಿ ಓದುತ್ತಿದ್ದಾಗ ಕನ್ನಡ ಮಾತನಾಡಿದ್ದಕ್ಕಾಗಿ ಮರಾಠಿಗರು ನನ್ನ ತಂದೆ ಜೊತೆ ಜಗಳವಾಡಿ ಅವರನ್ನ ಹೊಡೆದಿದ್ದರು ಕೂಡ.
ಓದೋದೊಂದು, ಮಾಡೋದೊಂದು
ಆತ ಕಂಪ್ಯೂಟರ್ ಸೈನ್ಸಿನಲ್ಲಿ ಡಿಗ್ರಿ ಪಡೆದಿರುತ್ತಾನೆ ಆದರೆ ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆಕೆ ಟಿಸಿಎಚ್ ಮಾಡಿಕೊಂಡು ಕಾಲ್ ಸೆಂಟರಿನಲ್ಲಿ ದುಡಿಯುತ್ತಿರುತ್ತಾಳೆ. ಈಕೆಯದು ಬಿಕಾಂ ಪದವಿ ಆದರೆ ಕೆಲಸ ಮಾಡುವುದು ಇಂಜಿನಿಯರಿಂಗ್ ಕಂಪೆನಿಯಲ್ಲಿ. ಅವರಿಗೆ ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳಲ್ಲಿ ಡಾಕ್ಟರೇಟ್ ಇರುತ್ತದೆ, ಜಾಹೀರಾತು ಕಂಪೆನಿಯ ವ್ಯವಸ್ಥಾಪಕರಾಗಿರುತ್ತಾರೆ. ಕೆಲವು ಮಂದಿ ಇಂಜಿನಿಯರಿಂಗ್ ಓದಿರುತ್ತಾರೆ ಪತ್ರಿಕೋದ್ಯಮದ ಗಿರಣಿಗೆ ಬಿದ್ದಿರುತ್ತಾರೆ. ಎಂಬಿಬಿಎಸ್ ಓದಿ ರಾಷ್ಟ್ರ ಜಾಗೃತಿಗಾಗಿ ಸಂಘಟನೆ ಕಟ್ಟಿಕೊಂಡಿರುತ್ತಾರೆ. ಗಮನಿಸುತ್ತಾ ಹೋದರೆ ಹತ್ತರಲ್ಲಿ ಐದು ಮಂದಿ ಓದುವುದೇ ಒಂದು ಮುಂದೆ ಜೀವನದಲ್ಲಿ ಮಾಡುವುದೇ ಮತ್ತೊಂದು!
ಓದಿ ಓದಿ ಮರುಳಾದ!
ಶಿಕ್ಷಣವೆನ್ನುವುದು ಮೂಲಭೂತವಾಗಿ ಶುರುವಾಗಿದ್ದು ಉದ್ಯೋಗ ಹಿಡಿದು ಕಮಾಯಿ ಮಾಡಲಿ ಎನ್ನುವ ಕಾರಣಕ್ಕಲ್ಲ. ಅಕ್ಷರಗಳನ್ನು ಓದಲು, ಬರೆಯಲು ಕಲಿಯುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಿತ್ತು. ಓದು ಬರಹ ಕಲಿತವನಿಗೆ ನಾಗರೀಕತೆಯ ಪರಿಚಯವಾಗಿರುತ್ತದೆ, ಶಿಸ್ತು ರೂಢಿಯಾಗಿರುತ್ತದೆ. ಶಿಕ್ಷಿತ ವ್ಯಕ್ತಿಯು ಮುಂದೆ ಸಮಾಜ ಸತ್ಪ್ರಜೆಯಾಗುತ್ತಾನೆ ಎನ್ನುವುದು ರೂಢಿಗತ ನಂಬಿಕೆಯಾಗಿತ್ತು. ಹೀಗಾಗಿ ಓದಿಗೂ ಹೊಟ್ಟೆ ಪಾಡಿಗಾಗಿ ಹಿಡಿಯುವ ನೌಕರಿಗೂ ಅಂತಹ ಸಂಬಂಧವೇನೂ ಇರಲಿಲ್ಲ. ಅಲ್ಲದೆ, ಇಂದಿನ ಹಾಗೆ ವೃತ್ತಿ ಪರ ಶಿಕ್ಷಣ ಕೋರ್ಸುಗಳ ಹಾವಳಿಯೂ ಇಲ್ಲದ ದಿನಗಳಲ್ಲಿ ಶಿಕ್ಷಣವೆಂದರೆ ದಿನಪತ್ರಿಕೆ ಓದಬಲ್ಲಷ್ಟು, ಪತ್ರ, ಅರ್ಜಿಗಳನ್ನು ಬರೆಯಬಲ್ಲಷ್ಟು, ಕೂಡು, ಕಳೆ, ಗುಣಿಸು ಎನ್ನುವ ಗಣಿತವನ್ನೂ ಕಲಿಯುವುದು ಎಂದೇ ಭಾವಿಸಲಾಗುತ್ತಿತ್ತು. ಮತ್ತಷ್ಟು ಓದು 
ಮರಳಿ ಎದ್ದು ಬಾ ಜಪಾನ್…
ಮತ್ತೆ ಅದೇ ಹಾಡು ಕೇಳುವ ಪ್ರಸಂಗ ಬರುತ್ತದೆ ಎಂದುಕೊಂಡಿರಲಿಲ್ಲ.
ರೈಲಿನಲ್ಲಿ ಹೋಗುತ್ತಿರುವಾಗ ನಾಲ್ವರು ವಿದೇಶಿಯರು ಇದಕ್ಕಿದ ಹಾಗೆ ಎದ್ದು ನಿಂತು ಹಾಡತೊಡಗಿದರು. ಬೋಗಿಯಲ್ಲಿನ ಜನರಿಗೆಲ್ಲ ಆಶ್ಚರ್ಯ. ಯಾರೋ ಹಿರಿಯರು ಆ ವಿದೇಶಿಯರನ್ನು ಕೇಳಿದಾಗ ಅಲ್ಲಿದ್ದ ಜನರಿಗೆ ಕಣ್ಣಾಲಿಗಳು ತುಂಬಿ ಬಂದವು. ವಿಷಯವಿಷ್ಟೇ. ಅವರು ಜಪಾನಿಯರು. ಅದರಲ್ಲಿ ಒಬ್ಬ ರೇಡಿಯೋ ಕೇಳುತ್ತಿದ್ದ. ಇದಕ್ಕಿದ ಹಾಗೆ ರೇಡಿಯೋದಲ್ಲಿ ಜಪಾನ್ ನಲ್ಲಿ ಭೂಕಂಪವಾಗಿ ಸಾಕಷ್ಟೂ ಸಾವು ನೋವುಗಳಾಗಿರುವುದು ತಿಳಿದುಬಂತು. ಆಗ ಆ ಜಪಾನಿಯರು ಎದ್ದು ನಿಂತು ತಮ್ಮ ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ಸಾವು ನೋವುಗಳಿಗೆ ಈಡಾದ ತಮ್ಮ ದೇಶವಾಸಿಗಳಿಗೆ ಸಂತಾಪ ಸೂಚಿಸಿದ್ದರು. ಇದು ಎಲ್ಲೋ ಓದಿದ್ದ ಸಂಗತಿ.
ಮತ್ತೆ ಈಗ ನೆನಪಾದದ್ದು ಘೋರವಾಗಿ ಅಪ್ಪಳಿಸಿದ ಸಮುದ್ರದ ಸುನಾಮಿಯ ಹೊಡೆತಕ್ಕೆ ಸಿಕ್ಕಿ ಜಪಾನಿನ ಒಂದು ಭಾಗವೇ ಉಳಿದ ಪ್ರದೇಶದೊಂದಿಗೆ ಸಂಪರ್ಕ ಕಳೆದುಕೊಂಡಿದೆ. ೮.೯ ಮ್ಯಾಗ್ನಟ್ಯುಡ್ ಇದ್ದ ಭೂಕಂಪ ಇಂಥ ಸುನಾಮಿಯನ್ನು ಎಬ್ಬಿಸಿದೆ. ಲಕ್ಷಸಂಖ್ಯೆಯ ಜನರು ಸಂತ್ರಸ್ತರಾಗಿದ್ದಾರೆ. ಇದರ ಭೀಕರತೆಯ ವಿವರ ತಿಳಿದು ಬರಬೇಕಷ್ಟೇ.
ವಿಶ್ವ ಕನ್ನಡ ಸಮ್ಮೇಳನ – ಏನಿದೆ, ಏನಿರಬೇಕಾಗಿತ್ತು?
ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನೇನು ಹೊತ್ತು ಎಣಿಕೆ ಶುರುವಾಗಿದೆ. ನಾಟಕ, ಕವನ ವಾಚನ, ಗಮಕ ವಾಚನ, ಕುಣಿತ, ಹಾಡುಗಾರಿಕೆ ಸೇರಿದಂತೆ ನಾಡಿನ ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅನ್ನುತ್ತೆ ಸಮ್ಮೇಳನದ ವೆಬ್ ಸೈಟ್ ಅಲ್ಲಿರೋ ಕರೆಯೋಲೆ. ಇದಲ್ಲದೇ, ಕೆಲವು ಒಳ್ಳೆಯ ವಿಷಯಗಳ ಬಗ್ಗೆ ಚರ್ಚಾ ಗೋಷ್ಟಿಯನ್ನು ಏರ್ಪಡಿಸಲಾಗಿದೆ ಅಂತಲೂ ಕಂಡೆ. ಕನ್ನಡ, ಕನ್ನಡಿಗ, ಕರ್ನಾಟಕ ಇತಿಹಾಸದಲ್ಲೆಂದೂ ಕಂಡಿರದಂತಹ ಸವಾಲುಗಳನ್ನು ಎದುರಿಸುತ್ತಿರುವ ಜಾಗತೀಕರಣದ ನಂತರದ ಈ ದಿನಗಳಲ್ಲಿ ಇಂತಹ ಸಮ್ಮೇಳನಗಳು ಹೆಚ್ಚಿನ ಮಹತ್ವ ಪಡೆದಿವೆ ಕೂಡಾ. ಈ ಸಮ್ಮೇಳನ ಕರ್ನಾಟಕದ, ಕನ್ನಡಿಗರ ನಾಳೆಗಳನ್ನು ಕಟ್ಟಲು ಆಗಬೇಕಾದ ಕೆಲಸಗಳ ಬಗ್ಗೆ, ಇವತ್ತು ನಾವೆಲ್ಲಿದೀವಿ, ಈ ದಿನ ನಮ್ಮೆದುರು ಇರುವ ಸವಾಲುಗಳೇನು, ನಾವು ಸಾಗಬೇಕಾದ ದಾರಿ ಯಾವುದು, ಎಂತದ್ದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವ, ಹೊಸ ದಿಕ್ಕು,ದೆಸೆ ನೀಡುವ ವೇದಿಕೆಯಾಗುತ್ತೆ ಅನ್ನುವುದು ನನ್ನ ನಿರೀಕ್ಷೆಯಾಗಿತ್ತು, ಆದರೆ ಕಾರ್ಯಕ್ರಮದ ಪಟ್ಟಿ ನೋಡಿದಾಗ ಕೆಲ ಮಟ್ಟಿಗೆ ನಿರಾಸೆಯಾಗಿದೆ ಅಂತಲೇ ಹೇಳಬೇಕು. ಜ್ಞಾನಾಧಾರಿತ ಹೊಸ ಜಗತ್ತಿನ ಸವಾಲುಗಳನ್ನು ಎದುರಿಸಿ ಗೆಲ್ಲಲು ಕನ್ನಡಿಗರ ಕಲಿಕೆ, ದುಡಿಮೆಯ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಚೆನ್ನಾಗಿ ಕಟ್ಟಿಕೊಳ್ಳಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ. ಆದರೆ ಕಾರ್ಯಕ್ರಮದ ಪಟ್ಟಿ ನೋಡಿದ್ರೆ, ಈ ಸಮ್ಮೇಳನ ಹೊಟ್ಟೆಗೆ ಹಿಟ್ಟಿನ ವಿಷಯಗಳಿಗಿಂತ ಹೆಚ್ಚು ಜುಟ್ಟಿನ ಮಲ್ಲಿಗೆಯ ವಿಷಯಗಳತ್ತಲೇ ಗಮನ ಹರಿಸಿದೆಯೆನೋ ಅನ್ನುವಂತಿದೆ !
ಏನಿದೆ?
ಹಾಗಂತ, ಸಮ್ಮೇಳನದಲ್ಲಿ ಪ್ರಯೋಜನವಾಗುವಂತಹ ವಿಷಯಗಳೇ ಇಲ್ಲ ಅಂತಿಲ್ಲ. ಜಾಗತೀಕರಣ, ಮಾರುಕಟ್ಟೆ ಮತ್ತು ಯುವಕರ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಜಾಗತೀಕರಣ ಕರ್ನಾಟಕ ಅನ್ನುವ ಗೋಷ್ಟಿ, ಗಡಿನಾಡಲ್ಲಿರುವ ಕನ್ನಡಿಗರ ಶಿಕ್ಷಣ ಸವಾಲುಗಳು, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಗಡಿನಾಡ ಕನ್ನಡಿಗರು ಅನ್ನುವ ಗೋಷ್ಟಿ, ಕನ್ನಡ ತಂತ್ರಾಂಶ, ವಿಜ್ಞಾನ ಶಿಕ್ಷಣದಂತಹ ವಿಷಯಗಳ ಬಗೆಗಿನ ಜ್ಞಾನ-ವಿಜ್ಞಾನ-ತಂತ್ರಜ್ಞಾನ-ಕರ್ನಾಟಕಅನ್ನುವ ಗೋಷ್ಟಿ, ಆಡಳಿತದಲ್ಲಿ ಕನ್ನಡ ಬಳಕೆ ಬಗೆಗಿನ ಕನ್ನಡ ಭಾಷಾ ಬಳಕೆ ಅನ್ನುವ ಗೋಷ್ಟಿ, ಕೃಷಿ ರಂಗ ಎದುರಿಸುತ್ತಿರುವ ಸವಾಲುಗಳ ಬಗೆಗಿನ ಕೃಷಿ-ಸಾಧನೆ ಸವಾಲು ಗೋಷ್ಟಿಗಳು ಈ ಕಾಲಮಾನಕ್ಕೆ ಪ್ರಸ್ತುತವೆನ್ನಿಸುವಂತಹ ಗೋಷ್ಟಿಗಳಾಗಿವೆ. ಇಲ್ಲಿ ಪಾಲ್ಗೊಳ್ಳುತ್ತಿರುವವರು ಅಷ್ಟೇ ಯೋಗ್ಯರು ಅನ್ನುವುದು ಕೂಡಾ ಗಮನಿಸಬೇಕಾದದ್ದು. ಮತ್ತಷ್ಟು ಓದು 
ಸೌರ ವಿದ್ಯುತ್ ಅವಕಾಶಗಳು
– ಗೋವಿಂದ ಭಟ್
ವಿಚಾರ ಮನಸ್ಸಿಗೆ ಬಂದರೂ ಅವಕಾಶಗಳ ಬಗ್ಗೆ ಕೆದಕುತ್ತಾ ಸಾಗಿದಂತೆ ಸಾದ್ಯತೆಗಳು ಸ್ಪಷ್ಟವಾಗುತ್ತಾ ಬಂತು.ಒಮ್ಮೆ ಹೊಸ ಕೊಳವೆ ಬಾವಿಗೆ ಸೌರ submersible ಪಂಪಿನ ವಿಚಾರಣೆಗೆ ಹೋಗಿದ್ದೆ. ಆಗ ಒಂದು ಮಾಮೂಲಿ surface ಪಂಪಿಗೆ ಸಬ್ಸಿಡಿ ಇದ್ದ ಕಾಲ. ಹಾಗಾಗಿ ಅಂಗಡಿಯವರು ಅಷ್ಟೊಂದು ಫಲಕಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆಲೋಚನೆ ಮಾಡಿ ಎಂದು ಪುಸಲಾಯಿಸಿದರು. ಅಂದಿಗೆ ಹದಿನೆಂಟು ವರ್ಷ ಹಿಂದೆ ಸೈಕಲಿನಲ್ಲಿ ದೆಹಲಿಗೆ ಸಾಗುವಾಗ ಟಿಲೋನಿಯದಲ್ಲಿ ಸೌರ ವಿದ್ಯುತ್ ಬಳಸಿ ರಾತ್ರಿ ಶಾಲೆ ಕಾರ್ಯಾಚರಿಸುವುದನ್ನು ಕಂಡಿದ್ದೆ. ಆಗಲೇ ಈ ಸೌರ ವಿದ್ಯುತ್ ಉಪಯೋಗ ಬಗೆಗೆ ಮನದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಿತು. ನನಗೆ ಬೇಕಾದ ಪಂಪ್ ಅಲ್ಲವಾದರೂ ಇದನ್ನು ಬಳಸಬಹುದೆಂಬ ಅಲೋಚನೆಯಿಂದ ಒಪ್ಪಿದೆ.
ಹಾಗೆ 2002ರಲ್ಲಿ ಒಂದಷ್ಟು ಫಲಕಗಳೊಂದಿಗೆ ಒಂದು ಸೌರ ಶಕ್ತಿಯ ಪಂಪು ನಮ್ಮಲ್ಲಿಗೆ ಬಂತು. ಅಂದಿನಿಂದ ಇಂದಿನ ವರೆಗೆ ಸೌರ ವಿದ್ಯುತ್ ಗರಿಷ್ಟ ಉಪಯೋಗದ ಬಗೆಗೆ ಆರು ಇಂಚು ಮೇಲೆ ಸರಿದರೆ ಮೂರು ಇಂಚು ಕೆಳಗೆ ಜಾರುವುದು ಎನ್ನುವ ಕಪ್ಪೆಯಾಟ ನಿರಂತರವಾಗಿ ಸಾಗುತ್ತಲೇ ಇದೆ.
ಅವಳೊಂದಿಗೆ ಆ ಭಾಷೆಯೂ ಮಣ್ಣಾಯಿತು!
– ಚಿತ್ರಾ ಸಂತೋಷ್
ಕಾಡುಹಂದಿ ಬೇಟೆ ಅಂದ್ರೆ ಅವಳಿಗಿಷ್ಟ. ದಟ್ಟಾರಣ್ಯದಲ್ಲಿ ಹೆಜ್ಜೆಗೊಂದು ಸಿಗುತ್ತಿದ್ದ ಆಮೆಗಳನ್ನೂ ಅವಳು ಬಿಟ್ಟವಳಲ್ಲ. ತಾನು ಹೋದಲೆಲ್ಲಾ ಬಿಲ್ಲು ಬಾಣಗಳನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ಆ ಹೆಣ್ಣುಮಗಳು ತನ್ನ ಜೀವನಶಾಲೆಯನ್ನು ತಾನೇ ನಿರ್ಮಿಸಿಕೊಂಡವಳು. ಅವಳು ಹುಟ್ಟಿದ್ದು ಉತ್ತರ ಅಂಡಮಾನ್‌ನ ದಟ್ಟ ಕಾನನದಲ್ಲಿ. ೮೫ ವರ್ಷಗಳ ಹಿಂದೆ ಅವಳು ಹುಟ್ಟಿದಾಗ ಅವಳ ಜೊತೆ ಒಡನಾಡುವ ಸಂಗತಿಗಳಿದ್ದರು. ಸಮಾಜದ ಮುಖ್ಯವಾಹಿನಿ ಅಂದ್ರೆ ಅವಳಿಗೇನೂ ಗೊತ್ತಿಲ್ಲ. ವಿದ್ಯೆಯೆಂಬುವುದರ ನಂಟು ಆ ಕಾಡಿಗಿಲ್ಲ. ಭಾರತದಲ್ಲಿ ಬ್ರಿಟಿಷ್ ಅಧಿಪತ್ಯವಿದ್ದಾಗ ಅಂಡಮಾನನ್ನು ‘ಶಿಕ್ಷಾರ್ಹ ತಾಣ’ವೆಂದು ಪರಿಗಣಿಸಿ, ಸ್ವಾತಂತ್ರಕ್ಕಾಗಿ ಹೋರಾಡಿದ ಅದೆಷ್ಟೋ ಭಾರತೀಯರನ್ನು ಅಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದಾಳೆ. ತನ್ನ ಪರಿವಾರದವರು ಕಳ್ಳಭಟ್ಟಿ ಕುಡಿದು ಎಂಜಾಯ್ ಮಾಡುತ್ತಿದ್ದಾಗ ತಾನೂ ಅವರೊಂದಿಗೆ ಸಂಭ್ರಮಿಸಿದ್ದಾಳೆ. ೨೦೦೪ರಲ್ಲಿ ಅಂಡಮಾನ್ ಪ್ರದೇಶಕ್ಕೆ ಭೀಕರ ಸುನಾಮಿ ಕಾಲಿಟ್ಟಾಗ ೩೫೧೩ ಮಂದಿ ಸಾವನ್ನಪ್ಪಿದ್ದರೂ, ಈಕೆ ಮಾತ್ರ ಬದುಕುಳಿದಿದ್ದಳು. ಇದು ಅವಳ ಅದೃಷ್ಟವೋ ಏನೋ?
ಅಂಥ ಉತ್ಸಾಹದ ಬದುಕು ಕಂಡ ಆ ಕಾಡಿನ ಮಹಿಳೆಯ ಹೆಸರು ಬೋ ಎಸ್‌ಆರ್…
ಅದೇನು ವಿಶೇಷ ಅಂತೀರಾ? ಇತ್ತೀಚೆಗಷ್ಟೇ ಬೋ ಎಸ್‌ಆರ್ ನಿಧನವಾಗಿದ್ದಾಳೆ. ಇದು ಇವಳ ಸಾವು ಮಾತ್ರವಲ್ಲ, ದೇಶದ ಪುರಾತನ ಭಾಷೆಯ ಸಾವು, ಸಾಂಸ್ಕೃತಿಕ ಪರಂಪರೆಯ ಸಾವು ಕೂಡಾ ಹೌದು.
ಬೋ ಎಂದರೆ….
ಬೋ ಎಂಬುವುದು ವಿಶಿಷ್ಟವಾದ ಬುಡಕಟ್ಟು ಭಾಷೆ. ಈ ಭಾಷೆಯ ತವರು ಆಫ್ರಿಕಾ. ೭೦,೦೦೦ ವರ್ಷಗಳ ಹಿಂದೆಯೇ ಬೋ ಎನ್ನುವ ಬುಡಕಟ್ಟು ಜನಾಂಗ ಆಗ್ನೇಯ ಏಷ್ಯಾ ಭಾಗಕ್ಕೆ ವಲಸೆ ಬಂದಿದ್ದರು. ಅಂತೆಯೇ ಅಂಡಮಾನಿನಲ್ಲೂ ಬೋ ಜನಾಂಗ ಅಸ್ತಿತ್ವ ಕಂಡುಕೊಂಡಿತ್ತು. ೧೮೫೮ರಲ್ಲಿ ಅಂಡಮಾನಿನಲ್ಲಿ ಬೋ ಜನಾಂಗಕ್ಕೆ ಸೇರಿದ ಸುಮಾರು ೫ ಸಾವಿರ ಜನರಿದ್ದರು. ಕ್ರಮೇಣ ಅಲ್ಲಿ ಬ್ರಿಟೀಷರು ತಮ್ಮ ಅಧಿಪತ್ಯ ಸ್ಥಾಪಿಸಿದಾಗ ಅಮಾಯಕ ಬೋ ಜನಾಂಗ ಬ್ರಿಟೀಷರ ದಬ್ಬಾಳಿಕೆಗೆ ಬಲಿಯಾದರು. ಸಮಾಜದ ಮುಖ್ಯವಾಹಿನಿಯ ಕುರಿತು ಒಂದಿಷ್ಟೂ ತಿಳಿವಿರದ ಬೋ ಜನರಿಗೆ ರೋಗಗಳು ಬಂದರೂ ಅದಕ್ಕೂ ಸಾವೇ ಪರಿಹಾರ. ಬ್ರಿಟೀಷರ ದಬ್ಬಾಳಿಕೆ ಮತ್ತು ಹೇಳಿಕೇಳದೆ ಬರುವ ಹಲವಾರು ಸಾಂಕ್ರಾಮಿಕ ರೋಗಗಳ ಪರಿಣಾಮ ಬೋ ಜನಾಂಗ ವಿನಾಶದ ಹಾದಿ ಹಿಡಿಯಿತು.
ಕಳೆದ ನಲವತ್ತು ವರ್ಷದಿಂದ ಬೋ ಎಸ್‌ಆರ್ ಅವಳದು ಏಕಾಂಗಿ ಬದುಕು. ಅವಳಿಗೆ ಬರುವುದು ಅದೊಂದೇ ಭಾಷೆ ಬೋ. ಹಾಗಾಗಿ ಸುತ್ತಮುತ್ತಲಿನ ಯಾರ ಜೊತೆಯೂ ಸಂವಹನ ಸಾಧ್ಯವಿರಲಿಲ್ಲ. ೧೯೭೦ರಲ್ಲಿ ಭಾರತ ಸರ್ಕಾರ ಅಂಡಮಾನಿನಲ್ಲಿದ್ದ ಬೋ ಎಸ್‌ಆರ್ ಸೇರಿದಂತೆ ವಿವಿಧ ಬುಡಕಟ್ಟು ಜನಾಂಗಗಳಿಗೆ ಕಾಂಕ್ರೀಟ್ ಮನೆ ಮತ್ತು ೫೦೦ ರೂ. ಪಿಂಚಣಿ ಒದಗಿಸಿತ್ತು. ಆ ಪುಟ್ಟ ಮನೆಯೊಂದೇ ಬೋ ಸಂಸಾರ. ಬಹಳಷ್ಟು ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡ ಬೋ ಎಸ್‌ಆರ್‌ಗೆ ಮಕ್ಕಳೂ ಇರಲಿಲ್ಲ. ಜೀವನದ ಕೊನೆ ಗಳಿಗೆಯಲ್ಲಿ ಆಕೆ, ”ನಮ್ಮ ಜನಾಂಗದಲ್ಲಿ ನಾನು ಒಬ್ಬಳೇ ಉಳಿದಿದ್ದೇನೆ. ನಾನು ಕೊನೆಯವಳು ಎಂಬುವುದು ಹೆಮ್ಮೆಯಾಗುತ್ತಿದೆ. ಆದರೆ, ನಾನು ಮತ್ತೆ ಹುಟ್ಟಿದ ಆ ದಟ್ಟಾರಣ್ಯಕ್ಕೆ ಮರಳಬೇಕು. ಈ ನಾಡಿಗಿಂತ ಆ ಕಾಡು ಚೆನ್ನ. ಅದೇ ಮುಳ್ಳುಹಂದಿ, ಆಮೆ ಬೇಟೆಯಾಡಬೇಕು. ಕಾಡಿನೊಂದಿಗೆ ಮತ್ತೆ ನಾನು ಬದುಕಬಲ್ಲೆ. ಕಾಡಿನಲ್ಲಿ ನನ್ನ ಭವಿಷ್ಯ ಇದೆ, ಕಾಡಾದರೂ ನನಗೆ ಸಂಗಾತಿಯಾಗುತ್ತಿತ್ತು…. ”ಎಂದು ಹಂಬಲಿಸುತ್ತಿದ್ದಳಂತೆ. ಮತ್ತಷ್ಟು ಓದು 
ಅತ್ಮಹತ್ಯೆಯಲ್ಲಿ ಹತ್ಯೆಯಾಗುವುದು ದೇಹ ಮಾತ್ರ…!
ಇಂಡಿಯಾ ಟುಡೇ ಇತ್ತೀಚೆಗಷ್ಟೇ ರಾಷ್ಟ್ರವ್ಯಾಪ್ತಿಯಾಗಿ ಸಮೀಕ್ಷೆಯನ್ನು ನಡೆಸಿತು. ಆ ಸಮೀಕ್ಷೆಯ ಪ್ರಕಾರ ಈ ದೇಶದಲ್ಲಿ ನಡೆಯುವ ಆತ್ಮಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ಫಲಿತಗಳನ್ನು ತಿಳಿಸುತ್ತಾರೆ.
೧. ಕಳೆದ ಐದು ವರ್ಷಗಳಿಂದ ಈಚೆಗೆ ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಎಂಟು ಶೇಕಡ ವೃದ್ಧಿಯಾಗುತ್ತಿದೆ.
೨. ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಮಾಣವನ್ನು ಗಮನಿಸಿದರೆ ಹಳ್ಳಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಮಾಣದಲ್ಲಿ ಹೆಚ್ಚಿದೆ.
೩. ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣವನ್ನು ಒಟ್ಟು ಗಮನಿಸಿದರೆ ೮೮% ದಷ್ಟು ಆತ್ಮಹತ್ಯೆಗಳಾಗುತ್ತಿರುವುದು ೧೬ ರಿಂದ ೨೪ ವರ್ಷ ಪ್ರಾಯದ ವಯಸ್ಸಿನವರ ಮಧ್ಯೆ.
೪. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಒಟ್ಟು ಸಂಖ್ಯೆಯಲ್ಲಿ ೬೫% ಹುಡುಗರಿದ್ದಾರೆ. ೩೫%ದಷ್ಟು ಹುಡುಗಿಯರಿದ್ದಾರೆ ಎಂದು. ಈ ಫಲಿತಗಳನ್ನು ಇಟ್ಟುಕೊಂಡು ಅಥವ ಈ ಮಾದರಿಯ ಆಂಕಿ ಅಂಶಗಳನ್ನು ಇಟ್ಟುಕೊಂಡು ಹದಿಹರೆಯದವರು ಯಾಕೆ ಇಷ್ಟು ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸಂಶೋಧಿಸಲಾಯಿತು.
ಸಾಮಾನ್ಯವಾಗಿ ಆತ್ಮಹತ್ಯೆಗೂ ಯೌವ್ವನಕ್ಕೂ ಆತ್ಯಂತ ನಿಕಟ ಸಂಬಂಧವಿದೆ. ನೆನಪಿಟ್ಟು ಕೊಳ್ಳಬೇಕಾದ ಅಂಶವೆಂದರೆ ಆತ್ಮಹತ್ಯೆ ಎನ್ನುವುದು ಹೊಸ ಬೆಳವಣಿಗೆಯೇನಲ್ಲ. ಅದೆಷ್ಟೋ ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಎಷ್ಟೋ ಬಾರಿ ಆತ್ಮಹತ್ಯೆಗೆ ಕಾರಣ ಮಾಧ್ಯಮಗಳ ಪ್ರಭಾವ. ವಿಶೇಷವೆಂದರೆ ನಮ್ಮಲ್ಲಿ ಜನ ಸಂಖ್ಯೆ ಯಾವ ರೀತಿಯಲ್ಲಿ ವೃದ್ಧಿಯಾಗುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ಆತ್ಮಹತ್ಯೆಯೂ ವೃದ್ಧಿಯಾಗುತ್ತಿದೆ. ಮತ್ತಷ್ಟು ಓದು 
ಕರಾವಳಿಗರನ್ನು ಬಲಿ ತೆಗೆದುಕೊಳ್ಳಲಿರುವ ನೇತ್ರಾವತಿ ನದಿ ತಿರುವು ಯೋಜನೆ…!
-ಶಂಶೀರ್, ಬುಡೋಳಿ
ಯಾರಾದರೂ ಊಹಿಸಿರಬಹುದೇ?
ತಣ್ಣನೆಯ ಹಾದಿಯಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಗೋಸ್ಕರ ಒಂದೊಮ್ಮೆ ಹೋರಾಟ ನಡೆಸುವ ಬಗ್ಗೆ ನಮ್ಮ ಹಿರಿಯರು ಕನಸು ಕೂಡಾ ಕಂಡಿರಬಹುದೇ? ಇಲ್ಲ. ಸಾಧ್ಯವೇ ಇಲ್ಲ. ಯಾಕೆಂದರೆ ನದಿಯ ಮೂಲ ಶೋಧಿಸಬೇಡ ಎನ್ನುವ ಮಾತನ್ನು ಅವರು ನಂಬಿದ್ದರು. ಹಾಗಾಗಿ ಅವರು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ.ಪಶ್ಚಿಮ ಘಟ್ಟದ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ನಂತರ ಕರಾವಳಿಗರು ನಡೆಸುತ್ತಿರುವ ನೇತ್ರಾವತಿ ನದಿ ಉಳಿಸುವ ಹೋರಾಟ ಇವತ್ತಿಗೂ ನಡೆಯುತ್ತಲೇ ಇದೆ.ಮೊನ್ನೆಯ ವಿಶ್ವ ತುಳು ಸಮ್ಮೇಳನದಲ್ಲೂ ಸಹ ಈ ಬಗ್ಗೆ ಚರ್ಚೆ ಉಂಟಾಗಿತ್ತು. ಇತ್ತೀಚಿಗೆ ಪರಮಶಿವಯ್ಯನವರು ಈ ಬಗ್ಗೆ ಚಕಾರವೆತ್ತಿದ್ದು ತನ್ನ ವರದಿ ಅಸಮರ್ಪಕವಾಗಿದ್ಜದರೆ ತಾನು ಯಾವ ಶಿಕ್ಷಾರ್ಹ ಕ್ರಮಕ್ಕೂ ಬದ್ಧ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಸರಕಾರ ಮಾತ್ರ ತೆಪ್ಪಗಾಗಿದೆ. ವಿಜ್ಞಾನ-ತಂತ್ರಜ್ಞಾನ,ಭ್ರಷ್ಟ ರಾಜಕಾರಣ,ಬಂಡವಾಳಶಾಹಿತ್ವದ ವಿರುದ್ಧದ ಹೋರಾಟದ ತರಹೇ ಈ ನೇತ್ರಾವತಿ ನದಿ ಉಳಿಸುವ ಹೋರಾಟ. ಈ ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು ಮಾತ್ರ ಬೆಂಬಲ ಕೊಡುತ್ತಿರುವುದರಿಂದ ಬಲಪಂಥೀಯ ಎನ್ನಿಸುವ ಸಂಘಟನೆಗಳ ವಿರುದ್ಧದ ಆಟದಿಂದ ಇವತ್ತು ಈ ಹೋರಾಟ ಮುಂದುವರಿಯುತ್ತಲೇ ಇದೆ. ಹಾಗಾಗಿ ಪಕ್ಷಾತೀತವಾದ ಸ್ವತಂತ್ರ ಸಂಘಟನೆಗಳು, ಸೇವಾ ಸಂಸ್ಥೆಗಳು ಮಾತ್ರ ಈ ಹೋರಾಟದಲ್ಲಿ ಭಾಗಿಯಾಗಿರುವುದನ್ನು ನಾವು ನೋಡ್ತಾ ಇದ್ದೇವೆ. ಉದಾಹರಣೆಗೆ ಭಾರತೀಯ ಕಿಸಾನ್ ಸಂಘ,ನಾಗರಿಕ ಸೇವಾ ಟ್ರಸ್ಟ್ ಮುಂತಾದ ಸಂಘಟನೆಗಳನ್ನ ಗುರುತಿಸಬಹುದು. ೨೦೦೯ಸಾಗಿದ್ದರೂ ಈ ವರ್ಷದಲ್ಲಿ ನೇತ್ರಾವತಿ ನದಿಯ ಹರಿವನ್ನು ನಿಲ್ಲಿಸಿ ಬೆಂಗಳೂರಿನಲ್ಲಿ ನದಿ ತಿರುಗಿಸುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.
ಹೆಣ್ಣು ಮಹಿಳೆಯಾಗುತ್ತಿದ್ದಾಳೇಯೇ?
– ರೂಪ ರಾವ್
ನಿನ್ನೆ ಮಹಿಳಾ ದಿನಾಚರಣೆ, ಎಷ್ಟೊ ಶುಭಾಶಯಗಳು, ಆಕಾಂಕ್ಷೆಗಳು. ಹಾರೈಕೆಗಳು. ಒಮ್ಮೆಗೆ ಕೂತು ಯೋಚಿಸುತ್ತಿದ್ದಾಗ, ಮೂಡಿದ ಯೋಚನೆಗಳು ಹಲವಾರು ಅದರಲ್ಲಿ ಮೂಡಿದ ಒಂದು ಪ್ರಶ್ನೆ,
ಮಹಿಳೆ ಎನಿಸಿಕೊಳ್ಳುವ ಹಂಬಲದಲ್ಲಿ ಹೆಣ್ಣಿನ ಸಹಜ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದೇವೆಯೇ ನಾವುಗಳು? ಅಷ್ಟಕ್ಕೂ ಹೆಣ್ಣಿಗೂ ಮಹಿಳೆಗೂ ಏನು ವ್ಯತ್ಯಾಸ?
ಹೌದು ಅರ್ಥದ ಪ್ರಕಾರ ಯಾವುದೂ ಇಲ್ಲ
ಆದರೆ ಮನಸಿಗೆ ಹೆಣ್ಣು ಆಪ್ತಳಾಗುತ್ತಾಳೆ, ಆದರೆ ಮಹಿಳೆ ದೂರದಲ್ಲಿಯೇ ನಿಲ್ಲುತ್ತಾಳೆ .
ಇದರ ಬಗ್ಗೆ ನನ್ನದೊಂದಿಷ್ಟು ಸಂವೇದನೆಗಳು
ಹೆಣ್ಣಿನ ಮೊದಲ ಹಂತವೇ ಹೆಣ್ಣಾಗುವುದು.
ಬಾಲಕಿ ಹೆಣ್ಣಾಗುವ ಆ ಹಂತದಲ್ಲಿ ಎಷ್ಟೋ ಕಾತುರತೆ,ನಿರೀಕ್ಷೆಗಳು,ನಾಚಿಕೆ,ಲಜ್ಜೆ,ಕನಸುಕಂಗಳು,ಕೆನ್ನೆಯ ಚುಂಬಿಸುತ್ತಲೆ ಇರುವ ರೆಪ್ಪೆಗಳು… ಹೀಗೆ ಏನೇನೋ ಲಕ್ಷಣಗಳು … ಹೌದು ಇವೆಲ್ಲಾವನ್ನು ಓದಿರುತ್ತೇವೆ, ನೋಡಿರುತ್ತೇವೆ ಎಲ್ಲಿ ಕಥೆಗಳಲ್ಲಿ ಕಾವ್ಯಗಳಲ್ಲಿ,ನಮ್ಮ ತಾಯಿ ಅಥವಾ ಅವರ ತಾಯಿಯ ಕಾಲಕ್ಕಿರಬಹುದೇನೋ…!
ಈಗ ಬಾಲಕಿ ಹೆಣ್ಣಾಗುವುದಿಲ್ಲ ಸೀದಾ ಮಹಿಳೆಯಾಗುವ ಹಂತಕ್ಕೆ ತಲುಪಿರುತ್ತಾಳೆ, ಅದೇನು ಗಾಂಭೀರ್ಯ,ಎಲ್ಲವನ್ನೂ ತಿಳಿದಿರುವವರ ಲಕ್ಷಣ, ಹುಡುಗರೆಂಬ ಕುತೂಹಲವಿರಲಿ ಅವರನು ಹೇಗೆ ಆಟ ಆಡಿಸುವುದೆಂಬ ಯೋಚನೆಯಲ್ಲಿ ತೊಡಗುತ್ತಾಳೆ.ಯಾವುದೇ ವಿಚಾರಕ್ಕಿರಲಿ ದೊಡ್ಡವರನ್ನು ಕೇಳಬೇಕಾದ ಅನಿವಾರ್ಯತೆ ಈಗ ಇಲ್ಲ.ಎಲ್ಲಕ್ಕೂ ಅಂತರ್ಜಾಲವಿದೆ. ಯಾವುದೇ ಕುತೂಹಲ,ಪ್ರಶ್ನೆಗೆ ಉತ್ತರ ಅಗತ್ಯಕ್ಕಿಂತ ಹೆಚ್ಚಾಗಿಯೇ ಸಿಗುತ್ತದೆ.ಹಾಗಾಗಿ ಲೈಂಗಿಕತೆ ಎಂಬುದು ಅವಳಿಗೆ ದೊಡ್ಡ ವಿಷಯವೇ ಅನ್ನಿಸುವುದಿಲ್ಲ.
ಈಗೀಗ ಕಾಲೇಜಿನಲ್ಲಿ ಹುಡುಗ ಕೈ ಕೊಟ್ಟ ಎಂಬ ಮಾತುಗಳಿಗಿಂತ ಹುಡುಗಿ ಬಿಟ್ಟು ಹೋದಳು ಎಂಬ ದೂರುಗಳೇ ಹೆಚ್ಚು.
ಅಪ್ಪ ಅಮ್ಮನ ನಂತರ ಹುಡುಗಿ ಹುಡುಕುವುದೇ ಸೂಕ್ತ ಗೆಳೆಯನಿಗಾಗಿ, ಹುಡುಗನಲ್ಲಿ ಗೆಳೆಯನನ್ನು ಹುಡುಕುತ್ತಾಳೆ,ಆಪ್ತವಾದ ಭಾವನೆ ಹುಟ್ಟು ಹಾಕುವ ಹುಡುಗ ಅವಳಿಗೆ ಹಿಡಿಸುತ್ತಾನೆ. ಆದರೆ ಯಾವುದೋ ಒಂದು ಘಳಿಗೆ ಯಲ್ಲಿ ತಾನು ಬಂದಿರುವುದು ಓದಲು ಪ್ರೀತಿಸಲು ಅಲ್ಲ ಎಂಬ ದಿವ್ಯ ತಿಳುವಳಿಕೆ ಬರುತ್ತದೆ. ಇದ್ದಕ್ಕಿದ್ದಂತೆಯೇ ಬಾಳಿನ ಗುರಿಗಳು ನೆನಪಾಗುತ್ತವೆ. ತನ್ನ ಮೊದಲ ಆದ್ಯತೆ ತಂದೆ ತಾಯಿ ಹಾಗು ಗುರಿ ಈ ಹುಡುಗ ಅಲ್ಲ ಎಂಬ ಆಲೋಚನೆಗಳು ಮುತ್ತಿಡಲಾರಂಭಿಸಿದೊಡನೆಯೇ ಹುಡುಗನ ಚಿತ್ರ ಮನದಿಂದ ದೂರವಾಗಲಾರಂಭಿಸುತ್ತದೆ. ಅದು ತಾತ್ಕಾಲಿಕ, ಮತ್ತೊಬ್ಬ ಹುಡುಗ ಬಂದು ಮನದಲ್ಲಿ ಕೂರುವವರೆಗೆ…








