ವಿಷಯದ ವಿವರಗಳಿಗೆ ದಾಟಿರಿ

Archive for

8
ಮಾರ್ಚ್

ಅರುಣಳ ಬಾಳಿಗೆ ಅರುಣೋದಯವೆಂದು

ರೂಪಾ

ಕೊನೆಗೂ ಅರುಣಾಗೆ ಅರುಣೋದಯ ಕಾಣಲೇ ಇಲ್ಲ . ಕೊನೆಗೆ ಈ ಜೀವನದಿಂದ ಬಿಡುಗಡೆ ಸಿಕ್ಕೀತೆ ಎಂಬ ನಿರೀಕ್ಷೆಯೂ ಇಲ್ಲವಾಗಿ ಹೋಗಿದೆ. ಜೀವ ಹೋಗುವ ತನಕ ದಿನದಿನವೂ ಸಾಯುತ್ತಲೇ ಜೀವಿಸಿರಲೇಬೇಕಾಗಿದೆ. ಅಷ್ಟಕ್ಕೂ ಈ ಅರುಣಾ ಶಾನಭಾಗ್ ಎಂಬ ನಮ್ಮ ಕರ್ನಾಟಕದ ಹುಡುಗಿ ಮಾಡಿದ ತಪ್ಪಾದರೂ ಏನು?

ಹೊನ್ನಾವರದ ಹಳದಿಪುರದಲ್ಲಿ ಹುಟ್ಟಿದಾಕೆಗೆ,  ಬಾಂಬೆಯ ಕೆಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಾಗ ರೋಗಿಗಳ ಸೇವೆಯಲ್ಲಿ ಬದುಕುವಾಸೆ ಕಂಡಿದ್ದಳೇನೋ,ಆದರೆ ಅವಳನ್ನು ಜೀವನವಿಡೀ ಜೀವಚ್ಛವವನ್ನಾಗಿ ಮಾಡುವ ಭೀಭತ್ಸ ಘಟನೆಯೊಂದು ಕಾದಿತ್ತು ಎಂದು ಅವಳಿಗಾದರೂ ಎಲ್ಲಿ ಗೊತಿತ್ತು?.
ಅರುಣಾ ಮಹತ್ವಾಕಾಂಕ್ಶೆಯ ಹುಡುಗಿ.ವಿದೇಶದಲ್ಲಿ ತನ್ನ ಓದನ್ನು ಮುಂದುವರೆಸುವ ಆಸಕ್ತಿ ಹೊಂದಿದ್ದಳು . ಇದನ್ನು ತನ್ನ ಕಸಿನ್ ಜೊತೆ ಹೇಳಿಕೊಂಡಿದ್ದಳು ನೋಡಲೂ ಚೆಂದವಿದ್ದಳು. ನಾಲಿಗೆ ಮಾತ್ರ ಸ್ವಲ್ಪ ಚುರುಕು ಎಂದು ಅವಳ ಸಹೋದ್ಯೋಗಿಗಳು ಹೇಳಿದ್ದಾರೆ. ಅದೇ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಡಾಕ್ಟರ್ ಒಬ್ಬರ ಜೊತೆ ಮದುವೆಯೂ ನಿಶ್ಚಯವಾಗಿ  ಸುಂದರ ಜೀವನದ ಕನಸು ಕಾಣುತ್ತಿದ್ದವಳನ್ನು, ಸೋಹನ್ ಲಾಲ್ ಭರ್ತ ವಾಲ್ಮೀಕಿ ಎಂಬ ಹೆಸರಿನ ವಾರ್ಡ್‌ ಬಾಯ್ ಮುಂದೆಂದೂ ಕನಸು ಕಾಣುವುದಿರಲಿ ಯೋಚಿಸಲೂ ಸಾಧ್ಯವಾಗದಂತಹ ಸ್ಥಿತಿಗೆ ದೂಡಿದ್ದ ಅರುಣಾ ಅವನ ಅವ್ಯವಹಾರವನ್ನು ಕಂಡು ಬೈದಿದ್ದನ್ನೇ ನೆಪ ಮಾಡಿಕೊಂಡು ಅವಳ ಮೇಲೆ ಅತ್ಯಾಚಾರವವೆಸಗುವ ಸಂದರ್ಭದಲ್ಲಿ ಅವಳ ಕುತ್ತಿಗೆಗೆ ನಾಯಿಯ ಚೈನ್ ಕಟ್ಟಿ ಪಶುವಿಗಿಂತ ಕೀಳು ಮತ್ತು ಅಸ್ವಾಭಾವಿಕ ರೀತಿಯಲ್ಲಿ  ತನ್ನ ತೃಷೆ ತೀರಿಸಿಕೊಂಡ .
ಇತ್ತ ಅರುಣಾಳ ಬಾಳಲ್ಲಿ ಮತ್ತೆ ಅರುಣೋದಯ ನೋಡುವ ಅವಕಾಶ ಬರಲೇ ಇಲ್ಲ.ಕಟ್ಟಿದ್ದ ಚೈನಿನ ಬಿಗಿತದಿಂದ ಮೆದುಳಿಗೆ ಆಮ್ಲಜನಕದ ಕೊರತೆಯುಂಟಾಗಿ,ಮೆದುಳು ನಿಷ್ಕ್ರಿಯವಾಗಿ ಜೀವಂತ ಹೆಣವಾಗಿ ಹೋದಳು ಅರುಣಾ.
8
ಮಾರ್ಚ್

ಹೆಣ್ಣೆಂದರೆ ಹೀಗೇಕೆ…..?

-ಶ್ರೀದೇವಿ ಅಂಬೆಕಲ್ಲು॒॒

೩೭ ವರ್ಷಗಳ ಹಿಂದೆ ವಾರ್ಡ್ ಹುಡುಗನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಮಾನಸಿಕ ಯಾತನೆ ಅನುಭವಿಸುತ್ತಿರುವ ನರ್ಸ್ ಅರುಣಾ ಶಾನ್‌ಭಾಗ್ ಅವರ ನರಳುವಿಕೆ, ಮಾನಸಿಕ ನೋವು ಮತ್ತು ಆಕೆಯ ಗೆಳತಿ ಪಿಂಕಿ ವಿರಾನಿ ಅರುಣಾಗೆ ದಯಾಮರಣ ನೀಡಬೇಕೆಂದು ಅರ್ಜಿ ಸಲ್ಲಿಸಿರುವ ವರದಿ ಇತ್ತೀಚೆಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ, ಕೇಳಿದ್ದೇವೆ. ಹೀಗೆ ಹೆಣ್ಣು ಮಗಳೊಬ್ಬಳು ದೌರ್ಜನ್ಯಕ್ಕೊಳಗಾಗಿ ಅನುಭವಿಸುತ್ತಿರುವ ಯಾತನಾಮಯ ಜೀವನ ಇನ್ಯಾವ ಹೆಣ್ಣು ಮಗಳಿಗೂ ಬಾರದಿರಲಿ ಅನ್ನೋದು ಎಲ್ಲ ತಾಯಿ ಹೃದಯದವರ ಆಶಯ.

ಹೆಣ್ಣು ಹೆಣ್ಣೆಂದು ಹೆಣ್ಣನ್ನೇಕೆ ಹೀಗಳೆಯುವಿರಿ…?ಹೆಣಲ್ಲವೇ ನಮ್ಮನ್ನ ಹೆತ್ತ ತಾಯಿ…?

ಮಾರ್ಚ್ ೮ ಅಂತರರಾಷ್ಟ್ರೀಯ ಮಹಿಳಾ ದಿನ.  ದಿನಾಚರಣೆಯ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷ ವಾಕ್ಯ ’ಶಿಕ್ಷಣ, ತರಬೇತಿ ಹಾಗೂ ವಿಜ್ಞಾನ, ತಂತ್ರಜ್ಞಾನಕ್ಕೆ ಸಮಾನ ಅವಕಾಶ-ಮಹಿಳೆಯರಿಗೆ ಒಳ್ಳೆಯ ಕೆಲಸಕ್ಕೆ ಹಾದಿ’.

ಒಬ್ಬ ಗಂಡಸಿನಷ್ಟೇ ಶ್ರಮ ವಹಿಸಿ ದುಡಿಯುವ ಹೆಣ್ಣು ಮಗಳಿಗೆ ನೀಡುವ ಸಂಬಳದಲ್ಲಿ ತಾರತಮ್ಯ ಮಾಡಲಾಗುತ್ತದೆ. ಗಂಡ ದಿನದ ೭ ಗಂಟೆ ದುಡಿದು ಬಂದು ತಾನೆ ಉತ್ಪಾದಕ ಎಂದು ಹೆಮ್ಮೆಯಿಂದ ಬೀಗಿಕೊಳ್ಳುತ್ತಾನೆ. ಇಡೀ ದಿನ ಮನೆಯಲ್ಲಿ ದುಡಿಯುವ ಹೆಂಡತಿಯ ಪರಿಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಒಂದು ಕಡೆ ವೇತನ ತಾರತಮ್ಯವಾದರೆ ಇನ್ನೊಂದೆಡೆ ಮಹಿಳಾ ದೌರ್ಜನ್ಯ ಪ್ರಕರಣಗಳು. ಮತ್ತೊಂದೆಡೆ ಕುಟುಂಬ ಜವಾಬ್ದಾರಿ ಹೊರಗಡೆಯೂ ದುಡಿಯಬೇಕು ಎಂಬ ಹೆಚ್ಚುವರಿ ಜವಾಬ್ದಾರಿ. ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಆದರೆ ಹೆಣ್ಣಿನ ಬದುಕು ಅಂದರೆ ಅದು ಕೇವಲ ನೋವುಗಳ ಸಂಕಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ.

ಮತ್ತಷ್ಟು ಓದು »

7
ಮಾರ್ಚ್

ಹಿರಿಯ ಜೀವದ ಮನ ಆ ಕ್ಷಣ ತಳಮಳಗೊಂಡಿದ್ಯಾಕೆ?

– ನಿಲುಮೆ 
 

Reading between the lines ಎಂಬ ಮಾತನ್ನು ಕೇಳಿರಬಹುದು. ಅಂತ ಮಾತಿಗೆ ಒಳ್ಳೆಯ ಉದಾಹರಣೆ ಚಿದಾನಂದ ಮೂರ್ತಿಯವರ ಪತ್ರ. ಪಾಪ ವಯಸ್ಸಾಯಿತು. ಅದರಿಂದ ಹೀಗೆಲ್ಲ ಬಡಬಡಿಸುತ್ತಿದ್ದಾರೆ ಅಂಥ ಕೆಲವು ಪತ್ರಿಕೆಗಳು ಬರೆದು ಕಾಸಿಗೆ ರಾಜ ಮಾರ್ಗ ಮಾಡಿಕೊಂಡವು. ನಿಜ.ಚಿಮೂ ಅವರಿಗೆ ವಯಸ್ಸಾಯಿತು.ಆದರೆ ಅವರಳೊಗಿನ ಸಂಶೋಧಕನಿಗೆ ಇತಿಹಾಸದ ಕ್ರೂರ ಅಧ್ಯಾಯಗಳ ಅರಿವಿದೆ. ಮೈ ಮರೆತರೆ ಮತ್ತೊಮ್ಮೆ ಇತಿಹಾಸ ಮರುಕಳಿಸಬಹುದೆಂದ ಸಹಜ ಆತಂಕವೂ ಇದೆ. ಹಂಪಿಯ ಬಗ್ಗೆ ಹೋರಾಡಿದವರ ಅರಿವಿಗೆ ದಂಡೆತ್ತಿ ಬಂದು ಧೂಳಿಪಟ ಮಾಡಿದವರ,ರಕ್ಕಸ ತಂಗಡಿಯ ನೆನಪು ಬಾರದಿರಬಹುದೇ? ಭಾವುಕ ಜೀವಿ ಚಿಮೂ ಅವರಿಗೆ ಇಳಿ ವಯಸ್ಸಿನಲ್ಲಿ ಇವೆಲ್ಲ ಇನ್ನೂ ಹೆಚ್ಚಾಗಿ ಕಾಡುತ್ತಿರಬಹುದು,ಅದರಲ್ಲೂ ಮೈ-ಕೈಗೆ ಎಣ್ಣೆ ಸವರಿಕೊಂಡು ಸತ್ಯ ಹೇಳಲು ಬಂದವರ ಕಣ್ಣಿಗೆ ಮಣ್ಣೇರಚಿ ಹಾದಿ ತಪ್ಪಿಸುವ ಜನರ ಮಧ್ಯೆ ಮಾತಾಡುವ ಚಾಣಕ್ಷ ಮಂದಿಯ ನಡುವೆ ದಿಗಿಲಿಗೆ ಬಿದ್ದ ಆ ಹಿರಿಯ ಜೀವದ ತಲ್ಲಣ ನಮಗರಿವಾಗುತ್ತಿಲ್ಲವಾ?
 
ಕೆಲ ದಿನಗಳ ಹಿಂದೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯಪಾಲರು ಹಿರಿಯ ವಿದ್ವಾಂಸ,ಸಂಶೋಧಕ ಚಿಮೂ ಅವರಿಗೆ ಡಾಕ್ಟರೇಟ್ ನಿರಾಕರಿಸಿದಾಗ ಕನ್ನಡ ಸಾರಸ್ವತ ಲೋಕವೇ ರಾಜ್ಯಪಾಲರೆಡೆಗೆ ತಿರುಗಿ ನಿಂತಿತ್ತು. ತಪ್ಪಿನ ಅರಿವಾದ ರಾಜ್ಯಪಾಲರು ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಆಯಿತು. ಹಾಗೆ ಡಾಕ್ಟರೇಟ್ ಪಡೆದ ನಂತರ ಚಿಮೂ ಅವರು ಪ್ರಜಾವಾಣಿಯಲ್ಲಿ ’ರಾಜ್ಯಪಾಲರು ಇದನ್ನು  ಗಮನಿಸಬೇಕು’ ಅನ್ನುವ ಶೀರ್ಷಿಕೆಯ ಪತ್ರವನ್ನು  ವಾಚಕರ ವಾಣಿಗೆ ಬರೆದ್ರು. ಅದರಲ್ಲಿ ಗೋರಿ ಪಾಳ್ಯದಲ್ಲಿ ಹಸಿರು ಬಾವುಟ ನೋಡಿದ್ದರ ಬಗ್ಗೆ, ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಮಾಂಸದಂಗಡಿಯ ಮುಂದೆ ನಿಂತ ಹಸುವಿಗೆ ಮರುಗುತ್ತ ಇದ್ದಿದ್ದನ್ನ ಹೇಳಿಕೊಂಡಿದ್ದಾರೆ. ಹಾಗೆಯೆ ಅದರಲ್ಲಿ ಮತಾಂತರದ ಬಗ್ಗೆಯು ಮಾತುಗಳಿವೆ.
7
ಮಾರ್ಚ್

ಮತ್ತೊಮ್ಮೆ ಹಳ್ಳಿಗೆ ಪ್ಯಾಟೆ ಹುಡುಗೀರು ಹೊಂಟಿದ್ದಾರೆ…

ಜಿ.ವಿ ಜಯಶ್ರೀ

(ದೃಶ್ಯ ಮಾಧ್ಯಮಗಳ ಎಡವಟ್ಟುಗಳ ಬಗ್ಗೆ ಕುಟುಕವ ಜಯಶ್ರೀ ಅವರು ಸುವರ್ಣ ವಾಹಿನಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫಿನ ಎಡವಟ್ಟಿನ ಬಗ್ಗೆ ಬರೆದಿದ್ರು.ಸುವರ್ಣ ವಾಹಿನಿಗೆ ದೇವರು ಒಳ್ಳೆ ಬುದ್ದಿ ಕೊಡಲಿ 😉 ಅಂತ ಕೇಳುತ್ತ,ಅವರ ಪುಟ್ಟ ಬರಹ ನಿಮಗಾಗಿ –ನಿಲುಮೆ)

ಸುವರ್ಣ ವಾಹಿನಿಯಲ್ಲಿ ಮತ್ತೊಮ್ಮೆ ಹಳ್ಳಿಗೆ ಪ್ಯಾಟೆ ಹುಡುಗೀರು ಹೊಂಟಿದ್ದಾರೆ. ಕಾಡಿಗೆ ಹೋಗುವಾಗ ಅವರ ಉಡುಪು ಹೇಗೆ ಇರಲಿ ತೊಂದ್ರೆ ಇಲ್ಲ ಆದ್ರೆ ನಾಡಿನ ರಿಯಾಲಿಟಿ ಷೋ ನಲ್ಲಿ ಉಡುಪುಗಳ ಬಗ್ಗೆ ಸ್ವಲ್ಪ ಗಮನ ಹರಿಸ ಬೇಕಿತ್ತು ಎಂದು ಗೆಳೆಯ ರಾಕೇಶ್ ಶೆಟ್ಟಿ ನನ್ನ ಬಳಿ ಬೇಸರದಿಂದ ಹೇಳಿದ್ರು. ಪಾಪ ಗಂಡು ಹಾರ್ಟ್ ವಿಲ ವಿಲ ಒಳ್ಳೆಯ ಗೆಳೆಯ ಆತ, ಅವರ ನೋವಿನ ಮಾತಿಗೆ ನಾನು ಪ್ರತಿಕ್ರಿಯೆ ತೋರದೆ ಇರಲು ಸಾಧ್ಯವೇ 😉

6
ಮಾರ್ಚ್

ಕನ್ನಡವೆನೆ ಕುಣಿದಾಡುವುದೆನ್ನೆದೆ…

– ಉಮೇಶ ದೇಸಾಯಿ

ಇತ್ತೀಚೆಗಿನ ಎರಡು ಸಂಗತಿಗಳು ನಮ್ಮ ಕನ್ನಡ ನುಡಿ ಈ ರಾಜ್ಯದ ಘನತೆ ಬಗ್ಗೆ ಹತ್ತು ಹಲವು ವಿಚಾರಗಳ ಚರ್ಚೆಗೆ ವೇದಿಕೆಯಾಗಿವೆ. ಅದು ಹೇಮಾಮಾಲಿನಿ ನಮ್ಮ ರಾಜ್ಯದಿಂದ ಆರಿಸಿ ಬಂದಿದ್ದಿರಬಹುದು ಅಥವಾ ಬೆಳಗಾವಿಯಲ್ಲಿ ನಾರಾಯಣ ಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿರುವುದು.

ಇವೇ ಆ ಎರಡು ವಿದ್ಯಮಾನಗಳು. ಪತ್ರಿಕೆಯಲ್ಲಿ ಮಾತ್ರವಲ್ಲದೇ ನೆಟ್ ಲೋಕದಲ್ಲು ಚರ್ಚೆಗೆ ಗ್ರಾಸವಾಗಿತ್ತು. ಇದು ಒಳ್ಳೆಯ ಬೆಳವಣಿಗೆ. ಚರ್ಚೆ ಯಾವಾಗಲೂ ಭಿನ್ನ ದನಿ ಗಳನ್ನು ಕೇಳಿಸುತ್ತದೆ. ಮತ್ತು ಭಿನ್ನ ಸ್ವರ ಕೇಳಿಸುತ್ತದೆ..ಆದರೆ ಪೂರ್ವಾಗ್ರಹ ಪೀಡಿತ ಕಿವಿಗಳಿಗೆ ಭಿನ್ನ ರಾಗ ಬೇಕಾಗಿಲ್ಲ.ಫೇಸ್ ಬುಕ್ ನಲ್ಲಿ ನಾ ಹಾಕಿದ ಕಾಮೆಂಟಿಗೆ ಉತ್ತರವಾಗಿ ನನ್ನ ಮಾತೃಭಾಷೆ ಯಾವುದೆಂದು ಪ್ರಶ್ನಿಸಲಾಯಿತು. ನಾ ಅದಕ್ಕೆ ಸರಿಯಾದ ಉತ್ತರ ಕೊಟ್ಟೆ. ಸ್ನೇಹಿತ ರೋರ್ವರು ಬರೆಯುತ್ತ ವಿಶ್ವಕನ್ನಡ ಸಮ್ಮೇಳನ ಮಲ್ಯ ಅವರು ಉದ್ಘಾಟಿಸಲಿ ಎಂದು ಕುಹಕವಾಡಿದರು. ಈಗ ಮೂರ್ತಿ ಅವರಿಗೂ ಇರಿಸುಮುರಿಸಾಗಿ ನಮ್ಮ ಮುಖ್ಯಮಂತ್ರಿ ಜೊತೆ ನಕಾರ ಸೂಚಿಸಿದ್ದರೂ ತಮ್ಮ ಮೂಗು ಎಲ್ಲಿ ಮಣ್ಣಾಗುತ್ತದೆ ಎಂಬ ಹೆದರಿಕೆ ಸರಕಾರಕ್ಕೂ ಬಂದು ಶತಾಯ ಗತಾಯ ಮೂರ್ತಿ ಅವರೇ ಅದನ್ನು ಉದ್ಘಾಟಿಸಲಿದ್ದಾರೆ ಅಂತ ಹೇಳಿಕೆ ಬಂದಿದೆ. ಮತ್ತಷ್ಟು ಓದು »

5
ಮಾರ್ಚ್

ಡಾಲರ್ ಲೆಕ್ಕಕ್ಕೆ : ಕನ್ನಡ ಪಕ್ಕಕ್ಕೆ

– ರಾಕೇಶ್ ಶೆಟ್ಟಿ

ಬೆಳಗಾವಿಯಲ್ಲಿ ನಡೆಯೋ ವಿಶ್ವ ಸಮ್ಮೇಳನದ ಉದ್ಘಾಟನೆಗಾಗಿ ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನ ಸರ್ಕಾರ ಆಹ್ವಾನಿಸಿದ್ದು, ಮತ್ತದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಕ್ಷೇಪಿಸಿ ಪತ್ರ ಬರೆದಿದ್ದು ಈದೀಗ ಚರ್ಚೆಗೆ ಗ್ರಾಸವಾಗಿದೆ.ಯಾರೇ ಕೂಗಾಡಲಿ ಊರೇ ಹೊರಾಡಲಿ ’ಇನ್ಫಿ ನಾಣಿ’ಯವ್ರೆ ಉದ್ಘಾಟನೆ ಮಾಡ್ತಾರೆ ಅಂತ ಯಡ್ಯೂರಪ್ಪನವ್ರು ಹೇಳಿಯಾಗಿದೆ.ಅದು ಬದಿಗಿರಲಿ.ಬರಗೂರರ ಪತ್ರಕ್ಕೆ ಪ್ರತಿವಾದವಾಗಿ ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ “ನಾರಾಯಣ ಮೂರ್ತಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟದ್ದು ಕನ್ನಡದ ಕೆಲಸವಲ್ಲವೇ?ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವೇ? ” ಅಂತ ಕೇಳಿದ್ದಾರೆ.ಮುಕ್ತ ಚರ್ಚೆಗೆ ಆಹ್ವಾನವನ್ನು ನೀಡಿದ್ದಾರೆ.ಅದನ್ನೆಲ್ಲ ಓದುವಾಗ ಬಹಳಷ್ಟು ಜನ ಬರಗೂರರಿಗೆನು ಹಕ್ಕಿದೆ?ಸಾಹಿತಿಗಳೇ ಏಕೆ ಬೇಕು ಅಂದಿದ್ದಾರೆ?

ನಿಜ.ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವಲ್ಲ ಅನ್ನುವ ಪ್ರತಾಪ್ ಮಾತು ಒಪ್ಪಲೆಬೇಕಾದದ್ದು.ಆದರೆ ಬೆಂಗಳೂರಿನ ಭಾಗ್ಯೋದಯಕ್ಕೂ ಇನ್ಫೋಸಿಸ್ ನಾರಾಯಣ ಮೂರ್ತಿಯವರೆ ಕಾರಣ ಅನ್ನುವ ರೀತಿಯ ಮಾತುಗಳು ಸಹ್ಯವೇ?ಸುಮ್ಮನೆ ಕನ್ನಡಿಗರಿಗೆ ಕೆಲಸ ಕೊಟ್ರೂ,ಜೀವನ ಕೊಟ್ರೂ ಅಂತ ಅಬ್ಬರಿಸಿದರಾಯಿತೆ.ಕನ್ನಡಿಗರಿಗೆ ಕೆಲಸ ಕೊಟ್ರೂ ಕೊಟ್ರೂ ಅನ್ನೋವ್ರು ಒಮ್ಮೆ ಹೋಗಿ ಮೂರ್ತಿಯವರ ಕಂಪೆನಿಯಲ್ಲಿ ಎಷ್ಟು ಪ್ರತಿಶತ ಜನ ಕನ್ನಡಿಗರಿದ್ದಾರೆ?ಅಲ್ಲಿರುವ ಕನ್ನಡಿಗರಾದರು ಯಾವ ಡೆಸಿಗ್ನೇಷನ್ ಹೊಂದಿದ್ದಾರೆ? ಅಸಲಿಗೆ ಅಲ್ಲಿನ ಕನ್ನಡಿಗ ಉದ್ಯೋಗಿಗಳ ಪಾಡೇನಿದೆ ಅನ್ನುವುದಾದ್ರು ಕೇಳಿ ನೋಡಿ.ಅಲ್ಲಿ ಯಾರ ಕಾರು-ಬಾರು ನಡೆಯುತ್ತಿದೆ ಅನ್ನುವುದು ತಿಳಿಯಬಹುದು. ಇವೆಲ್ಲದರ ಸತ್ಯ ದರ್ಶನವಾದರೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟರು ಅನ್ನುವಂತೆ ಮಾತಾಡಿರುವುದು ಸುಳ್ಳೇ ಸುಳ್ಳು ಅನ್ನುವುದು ಗೊತ್ತಾಗುತ್ತದೆ.

ಮತ್ತಷ್ಟು ಓದು »

4
ಮಾರ್ಚ್

ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?

ವಸಂತ್ ಶೆಟ್ಟಿ , ಬೆಂಗಳೂರು

ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಇನ್ ಫೋಸಿಸ್ ನ ನಾರಾಯಣ ಮೂರ್ತಿ “ಅವರನ್ನು ಆಯ್ಕೆ ಮಾಡಿದ ಸರ್ಕಾರದ ಕ್ರಮ ತಪ್ಪೆಂದೂ, ಅವರೊಬ್ಬ ಉದ್ಯಮಿಯೇ ಹೊರತು ಕನ್ನಡಕ್ಕೆ ಅವರ ಕೊಡುಗೆ ಶೂನ್ಯ” ಅಂತಲೂ ಅವರ ಆಯ್ಕೆಯ ಬಗ್ಗೆ ಅಪಸ್ವರ ಎದ್ದ ಸುದ್ದಿ ಪತ್ರಿಕೆಗಳಲ್ಲಿ,ಟಿವಿಗಳಲ್ಲಿ ನೋಡಿದೆ. ಅದೇ ಸಮಯಕ್ಕೆ ಕೆಲವು ಪತ್ರಿಕೆಗಳಲ್ಲಿ “ಅವರೊಬ್ಬ ಉದ್ಯಮಿ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿದ್ದಾರೆ, ಅವರ ಆಯ್ಕೆಯನ್ನು ವಿರೋಧಿಸಿರುವವರು ಕನ್ನಡಕ್ಕೆ ಏನ್ ಮಾಡಿದ್ದಾರೆ?” ಎಂದು ಮೂರ್ತಿ ಅವರ ಆಯ್ಕೆಯನ್ನು ಸಮರ್ಥಿಸುವ ಸುದ್ದಿಯನ್ನು ಕಂಡೆ. ಕರ್ನಾಟಕದ ಸಮಾಜಕ್ಕೆ ಮೂರ್ತಿ ಅವರ ಕೊಡುಗೆ ಏನೇನು ಇಲ್ಲ ಅನ್ನುವುದು ಎಷ್ಟು ತಪ್ಪೋ, ಮೂರ್ತಿ ಅವರ ಪರವಾಗಿ ಬರೆಯುವ ಆತುರದಲ್ಲಿ ಕನ್ನಡ, ಕರ್ನಾಟಕದ ಬಗ್ಗೆ ಅವರು ಮಾತಾಡಿದ್ದು, ಮಾಡಿದ್ದೆಲ್ಲ ಸರಿ ಅನ್ನುವ ಧೋರಣೆಯೂ ಅಷ್ಟೇ ತಪ್ಪು.

ಮೂರ್ತಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ !

ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿದ್ದರೂ, ಜಾಗತೀಕರಣದ ನಂತರ ತೆರೆದ ಮಾರುಕಟ್ಟೆ ಕೊಡ ಮಾಡುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ, ಪ್ರತಿಭೆ, ಪರಿಶ್ರಮಕ್ಕೆ ಬೆಲೆ ಕೊಡುವ ವ್ಯವಸ್ಥೆಯೊಂದನ್ನು ಕಟ್ಟಬಹುದು ಮತ್ತಷ್ಟು ಓದು »
4
ಮಾರ್ಚ್

ವಿಜಯ್ ಮಲ್ಯ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು!

-ಶ್ರೀಹರ್ಷ ಸಾಲಿಮಠ
ನಾರಾಯಣಮೂರ್ತಿಗಳಿಗಿಂತ  ವಿಜಯ್ ಮಲ್ಯ ಉತ್ತಮ ಕನ್ನಡಿಗರು.
ಪ್ರತಾಪ ಸಿಂಹರು ನಾರಾಯಣ ಮೂರ್ತಿಯವರನ್ನು ಶತಾಯಗತಾಯ ಸಮರ್ಥಿಸಿ ಕೊಂಡಿರುವ ರೀತಿ ಎಷ್ಟು ಹಾಸ್ಯಾಸ್ಪದವಾಗಿದೆಯೆಂದರೆ ಇದೆ ರೀತಿ ವಿಜಯ್ ಮಲ್ಯರ ಬಗ್ಗೆಯೂ ಸಮರ್ಥಿಸಿಕೊಳ್ಳಬಹುದು.ವಿಜಯ್ ಮಲ್ಯರ ಕರ್ಮಭೂಮಿ ಬೆಂಗಳೂರು. ಅವರ ಹೆಡ್ದಾಪೀಸು ಬೆಂಗಳೂರ್ನಲ್ಲಿದೆ. ಐ ಪಿ ಎಲ್ ನಲ್ಲಿ   ಬೇರೆ ಎಲ್ಲ ಪ್ರಾಂಚೈಸಿ ಗಳನ್ನೂ ಕಡಿಮೆ ಬೆಲೆಯಲ್ಲಿ ಕೊಳ್ಳುವ ಅವಕಾಶಗಳಿದ್ದರೂ ಹೆಚ್ಚಿನ ಬೆಲೆ ತೆತ್ತು ಬೆಂಗಳೂರನ್ನೇ ಕೊಂಡರು.
ರಾಜಕೀಯವಾಗಿ ಅವರು ಬೆಳೆಯಲು ಪ್ರಯತ್ನಿಸಿದ್ದು ಕರ್ನಾಟಕದಲ್ಲಿ. ಅವರ ಮಗನೂ ಸಹ ಅಪ್ಪಟ ಕನ್ನಡಿಗ ಏಕೆಂದರೆ ಕನ್ನಡತಿಯಾದ ದೀಪಿಕಾ ಪಡುಕೋಣೆಯೊಡನೆ  ಮಾತ್ರ ಡೇಟಿಂಗ್ ಮಾಡುತ್ತಾನೆ.ಶಿಲ್ಪಾ ಶೆಟ್ಟಿಯನ್ನು ತಮ್ಮ ರಾಜಕೀಯ ಪಕ್ಷದ ರಾಯಭಾರಿಯಾಗಿ ಕನ್ನಡಕ್ಕೆ ಕರೆತಂದರು. ಅವರು ಮನಸು ಮಾಡಿದ್ದರೆ ಬೆರಯವರನ್ನು ಕರೆತರಬಹುದಿತ್ತು. ಆದರೆ ಕನ್ನಡತಿಯನ್ನೇ ತಂದರು.
ಅವರ ಯುನೈಟೆಡ್ ಬೆವರೆಜಸ್ ನಲ್ಲಿ ಇನ್ಪೋಸಿಸ್ ಗಿಂತ ಹೆಚ್ಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಕೆಲಸ ಮಾಡುತ್ತಾರೆ. ಅವರಿಗೆಲ್ಲ ಉಚಿತವಾಗಿ ಮದ್ಯಾರಾಧನೆಯೂ ಆಗುತ್ತದೆ. ಅವರೂ ಸಹ ಅನೇಕ ಸಾಮಾಜಿಕ ಕೆಲಸಗಳನ್ನು ಕನ್ನಡದ ನೆಲದಲ್ಲಿ ಮಾಡಿದ್ದಾರೆ. ಅವರೂ ಸಹ ಕೋಟ್ಯಂತರ ರುಪಾಯಿಗಳನ್ನು ಮುಂಡಾಯಿಸಿದ್ದಾರೆ ಸರಕಾರಕ್ಕೆ. ಅವರೂ ಸಹ ಕೋರ್ಟ್ ತೀರ್ಪಿಗೆ ತಲೆಬಾಗುತ್ತಾರೆ. ಮತ್ತಷ್ಟು ಓದು »
4
ಮಾರ್ಚ್

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ !!!!

ಶ್ರೀದೇವಿ ಅಂಬೆಕಲ್ಲು

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ….ಈ ಪ್ರೀತಿ ಒಂಥರಾ ಕಚಗುಳಿ.. ಅದೊಂದು ಮಧುರ ಅನುಭೂತಿ. ಕೆಲವರಿಗೆ ಕಲ್ಪನೆಗೆ ನಿಲುಕದ್ದು, ಅಕ್ಷರಗಳಲ್ಲಿ ಬಣ್ಣಿಸಲಾಗದ್ದು…

ಆದ್ರೆ  ಪ್ರೀತಿ ಎಂದರೆ ಕೇವಲ ’ಮಾತಲ್ಲ’, ಪ್ರೀತಿ ಎಂದರೆ ’ಜವಾಬ್ದಾರಿ’, ’ಪ್ರೀತಿ ಎಂದರೆ ’ದುಡಿಮೆ’, ಪ್ರೀತಿ ಎಂದರೆ ’ಬದುಕು’. ಪ್ರೀತಿ ಅನ್ನೋ ಸಂಬಂಧದೊಳಗೆ ನಂಬಿಕೆ, ಕಳಕಳಿ, ಮನವಿ, ಕಾಳಜಿ, ಸ್ನೇಹ, ಸೆಳೆತ, ಹೊಂದಾಣಿಕೆ ಒಂದಷ್ಟು ಮುನಿಸು ಜತೆಗೆ ಒಪ್ಪಂದ ಈ ಎಲ್ಲ ಭಾವಗಳೂ ಸಮ್ಮಿಳಿತಗೊಂಡಿರಬೇಕು.

ಗಂಡು- ಹೆಣ್ಣಿನ ನಡುವಿನ ಪ್ರೀತಿಯ ಸಂಬಂಧ ಅದೊಂದು ವಿಸ್ಮಯ ಲೋಕ. ಅದರೊಳಗಿನ ಪಯಣ ಒಂದು ಅದ್ಭುತ ಯಾನ. ಅಲ್ಲಿ ಒಮ್ಮೊಮ್ಮೆ  ಮಳೆಯೂ ಇರುತ್ತದೆ. ಕಾಮನಬಿಲ್ಲೂ ಮೂಡುತ್ತದೆ. ಗೊತ್ತಲ್ವಾ… ಕಾಮನಬಿಲ್ಲು ಕಾಣಬೇಕು ಅಂದ್ರೆ ಮಳೆ ಬರಬೇಕು, ಬಿಸಿಲು ಇರಬೇಕು. ಹಾಗೆನೇ ಪ್ರೀತಿ ಉಳಿಬೇಕು ಅಂದ್ರೆ ಸಂಬಂಧದೊಳಗೆ ನಂಬಿಕೆನೂ ಇರಬೇಕು, ತ್ಯಾಗನೂ ಇರಬೇಕು. ಹಾಗಾಗಿ ನಂಬಿಕೆಯಲ್ಲಿ ರೂಪುಗೊಂಡ ಪ್ರೀತಿ ಕಳೆದುಕೊಳ್ಳುವುದಕ್ಕೆ ಸಾಧ್ಯ ಇಲ್ಲ, ಕಳೆದುಕೊಂಡ ಪ್ರೀತಿನ ಮರೆಯೋದಕ್ಕೂ ಸಾಧ್ಯ ಇಲ್ಲ. ಬದುಕಿರುವವರೆಗೆ ಪ್ರೀತಿ ’ಪ್ರೀತಿ’ಯಾಗಿ ಉಳಿಯದೇ ಹೋದರೂ ನೆನಪಾಗಿ ಕಾಡುವುದು ಖಂಡಿತ. ಮತ್ತಷ್ಟು ಓದು »

3
ಮಾರ್ಚ್

ಈ ಸುದ್ದಿ ಸಂಪಾದಕೀಯದ ಕಣ್ತಪ್ಪಿದ್ದು ಹೇಗೆ?

– ಕೃಷ್ಣ ಬಂಗೇರ
ಮೀಡಿಯಾ ಅಂದ್ರೆ ಹಾಗೆ. ಹೊರಗಿನ ಎಲ್ಲರ ವಿಷಯನ ಇವರು ಜಗತ್ತಿಗೆ ಸಾರುತ್ತಿದ್ರೂ ಹೊರಗಿನ ಜನಕ್ಕೆ ಸುದ್ದಿಮನೆಯೊಳಗಿನ ಕಥೆಗಳು ತಿಳಿಯೋದೆ ಇಲ್ಲ. ಅಲ್ಲೂ ಇರುವ ದ್ವೇಷ, ಕುಹಕ, ಸ್ವಜನಪಕ್ಷಪಾತ ಇಂಥ ವಿಷಯಗಳು ಸಾಮಾನ್ಯ ಜನರ ಪಾಲಿಗೆ ರಾಜರಹಸ್ಯಗಳು. ಅಂಥ ಮೀಡಿಯಾ ಎಂಬೋ ಮೀಡಿಯಾದ ನಡುಮನೆಯಿಂದಲೇ ಅಲ್ಲಿನ ಸುದ್ದಿಗಳನ್ನು ಹೊರಜಗತ್ತಿಗೆ ಹರಾಜಗೊಳಿಸಿದ್ದು ಸಂಪಾದಕೀಯ ಎಂಬ ಸುದ್ದಿಮನೆಯ ಒಳಗಿನ ಕಥೆಗಳನ್ನು ಹೇಳುವ ಬ್ಲಾಗು.ಹುಟ್ಟಿ ಅತಿ ಕಡಿಮೆ ಅವಧಿಯಲ್ಲೇ ಮಾಡಿದ ಮೋಡಿ ಕಡಿಮೆಯೇನಿಲ್ಲ. ಹತ್ತಿರಹತ್ತಿರ ಲಕ್ಷ ಹಿಟ್ಸ್ ಗಳ ಸಮೀಪದಲ್ಲಿರುವ ಈ ಬ್ಲಾಗು ಕೆಲವರ ಮುಖದಲ್ಲಿ ಬೆವರು ತರಿಸಿದಂತೂ ಹೌದು.ಈಗ ಸುದ್ದಿಮನೆಯ ಜನ ಪಿಟಿಐ ನ್ಯೂಸ್ ಆದ್ರೂ ಮರೆತರೂ ಆದ್ರೆ ದಿನಕ್ಕೊಮ್ಮೆಯಾದ್ರೂ ಈ ಬ್ಲಾಗ್ ನೊಳಗೆ ಇಣಕೋದು ತಪ್ಪಿಸೋದಿಲ್ಲ. ಇದೇ ಅಲ್ವೇನ್ರೀ ಜನಪ್ರಿಯತೆ ಅಂದ್ರೆ! ಇಂಥ ಎಷ್ಟೋ ಮಾಧ್ಯಮ ವಿಷಯಗಳನ್ನು ಚರ್ಚೆ ಮಾಡೋ ಬ್ಲಾಗುಗಳು ಬಂದು ಹೋಗಿವೆ. ಆದರೆ ಸಾಮಾಜಿಕ ಕಾಳಜಿಯ ಜೊತೆಗೆ ವಿಷಯದ ಆಳ ಅಗಲಗಳನ್ನು ಸಂಪಾದಕೀಯದಷ್ಟು ಚೆಂದದಲ್ಲಿ,ಸೆನ್ಸಿಬಲ್ ಆಗಿ ಹೇಳಿದ ಬ್ಲಾಗು ಮತ್ತೊಂದಿಲ್ಲ.

 

ವಿಶೇಷ ಅಂದ್ರೆ ಈ ಬ್ಲಾಗು ನಡೆಸೋರು ಯಾರು ಅಂತ ತಿಳಿಯೋಕೆ ಜನ್ರು ಮಾಡಿದ ತಿಣುಕಾಟ, ಹಾಕಿದ ಗೆಸ್ಸು ಕಡಿಮೆಯೇನಲ್ಲ. ಆದರೆ ಸಂಪಾದಕೀಯದ್ದು ಇದಕ್ಕೆಲ್ಲ ದಿವ್ಯಮೌನವೇ ಉತ್ತರ. ಇಂಥ ಮೌನವೇ ಜನರಿಗೆ ಈ ಬ್ಲಾಗಿನ ವಿಷಯಗಳಲ್ಲಿ ಓದುಗರಿಗೆ ಇನ್ನಷ್ಟು ಕುತೂಹಲ ಬೆಳೆಯುವಂತೆ ಮಾಡಿದೆ.ಸಂಪಾದಕೀಯ ಅಷ್ಟೇ ಮಾಡಿ ಸುಮ್ಮನಾಗಿದ್ರೆ ಅದರಲ್ಲಿ ಏನೂ ವಿಶೇಷ ಇರುತ್ತಿರಲ್ಲಿಲ್ಲ.ಟೀವಿ ಪೇಪರ್ ಹೀಗೆ ಎಲ್ಲ ಮಾಧ್ಯಮಗಳ ಆರೋಗ್ಯದ ಬಗ್ಗೆ ಆಗಾಗ ಮಾತಾಡ್ತಾ ಮೀಡಿಯಾಗಳ ಹಿಡನ್ ಅಜೆಂಡಾಗಳನ್ನು, ಹಿತಾಸಕ್ತಿಗಳನ್ನು ಜನರ ಎದುರಿಗೆ ಬೆತ್ತಲೆಗೊಳಿಸಿದ್ದು  ಸುಳ್ಳೇನಲ್ಲ.ಇದೊಂಥರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್ ಅನ್ನಿಸಿದ್ರೆ ವಿಶೇಷವೇನಿಲ್ಲ ಬಿಡಿ. ಮತ್ತಷ್ಟು ಓದು »