ಸುದ್ದಿ ‘ಮೋಹ’ದ ಪತ್ರಿಕೆಗಳ ಬಗ್ಗೆ…..
ಅರೆಹೊಳೆ ಸದಾಶಿವರಾಯರು
ಕಟೀಲು ದೇವಳಕ್ಕೆ ಶಿಲ್ಪಾ ಶೆಟ್ಟಿ ಬಂದರು!. ಇದು ನಮ್ಮ ಪತ್ರಿಕೆಗಳ ಮಟ್ಟಿಗೆ ಬಹು ಮುಖ್ಯ ಸುದ್ದಿಯಾಯಿತು! ಆಶ್ಚರ್ಯವೆಂದರೆ, ನಮ್ಮ ಪತ್ರಿಕೆಗಳು ಇದನ್ನು ಮುಖ ಪುಟದಲ್ಲಿ ಪ್ರಕಟಿಸಿ ಕೃತಾರ್ಥವಾದುವು. ಆಕೆ ತನ್ನದೇ ಹುಟ್ಟೂರಿಗೆ ಬಂದದ್ದು, ತನ್ನ ಅಜ್ಜಿಮನೆಯಲ್ಲಿ ಓಡಾಡಿದ್ದು, ಕೋಳಿ ಸುಕ್ಕಾ ತಿಂದದ್ದು…..ಎಲ್ಲವು ಸುದ್ದಿಯಾಯಿತು. ಮತ್ತೂ ಒಂದು ವಿಶೇಷ ಸುದ್ದಿ ಎಂದರೆ ಕಟೀಲು ಕ್ಷೇತ್ರವೇ ಈಕೆಯ ಭೇಟಿಯಿಂದ ಪವಿತ್ರವಾಯಿತೇನೋ ಎಂಬಷ್ಟೂ ಸುದ್ದಿಯನ್ನು ಆಕೆ ವಿಮಾನದಲ್ಲಿ ಬಂದಿಳಿದಿದ್ದರಿಂದ, ಮರಳಿ ವಿಮಾನವೇರುವ ತನಕ ಬರೆಯಲಾಯಿತು. ಎಲ್ಲಾ ಪತ್ರಿಕೆಗಳ ಒಬ್ಬೊಬ್ಬ ಪತ್ರಕರ್ತನೂ ಅಷ್ಟು ಹೊತ್ತಿನ ಮಟ್ಟಿಗೆ ಆಕೆಯ ಸಂಸಾರದ ಹಿಂದಿದ್ದ.!
ಈ ಕ್ಷಣದಲ್ಲಿ ನನಗೊಂದು ವಿಷಯ ನೆನಪಿಗೆ ಬರುತ್ತದೆ. ಇತ್ತೀಚೆಗೆ ನಾವು ಒಂದು ಸಮ್ಮೇಳನವನ್ನು ಆಯೋಜಿಸಿದ್ದೆವು. ಅದರ ಉದ್ಘಾಟನಾ ಸಮಾರಂಭದ ವರದಿ ಸವಿಸ್ತಾರವಾಗಿ ಪ್ರಕಟವಾಯಿತು. ಉದ್ಘಾಟನೆ ಮುಗಿಯುತ್ತಲೇ, ಒಂದು ಮಗು ವಾಮಾಚಾರಕ್ಕೆ ಬಲಿಯಾದ ಘಟನೆ ಬಹಿರಂಗ ಗೊಂಡಿತು. ಅದೇ ಸಂಜೆ ನಮ್ಮ ಸಮ್ಮೇಳನದ ಸಮಾರೋಪವೂ ನಡೆಯುತ್ತಿತ್ತು. ಆದರೆ ಸಂಜೆ ಒಬ್ಬನೇ ಒಬ್ಬ ಪತ್ರಕರ್ತನೂ ಅಲ್ಲಿರಲಿಲ್ಲ. ಅಲ್ಲಿನ ಯಾವ ವರದಿಯೂ ದಾಖಲಾಗಲಿಲ್ಲ. ಸಮ್ಮೇಳನದಲ್ಲಿಯೇ ತಲ್ಲೀನರಾಗಿದ್ದ ನಮಗೆ ಇದೇಕೆ ಎಂದು ಆಶ್ಚರ್ಯವಾಯಿತು. ನಂತರ, ನಮಗೆ ಆ ವಾಮಾಚಾರದ ಘಟನೆಯಿಂದ ಸಂಭ್ರಮದ ಘಟನೆಯನ್ನೂ ಮರೆಯುವಷ್ಟು ಘಾಸಿಯಾಯಿತು-ಖೇದವಾಯಿತು. ಮತ್ತಷ್ಟು ಓದು
ಸ್ನೇಹಿತ ಮೊದಲ ಬಾರಿ ಅತ್ತುಬಿಟ್ಟ…!
ಪ್ರವೀಣಚಂದ್ರ, ಪುತ್ತೂರು
ಬಸ್ ವೇಗವಾಗಿ ಸಾಗುತ್ತಿತ್ತು. ಊರಿಗೆ ಬಂದ ಸಂಭ್ರಮವನ್ನು ಕಿತ್ತುಕೊಂಡ ಆ ಕ್ಷಣದ ಕುರಿತು ಯೋಚಿಸುತ್ತಿದ್ದೆ. ಬಸ್ಸಿನ ಕಿಟಕಿ ಹಾಕಿದ್ದರೂ ಚಳಿ ಕಾಡುತ್ತಿತ್ತು. ಹೃದಯವೂ ತಣ್ಣಗಿತ್ತು. ಅಪದಮನಿ ಅಭಿದಮನಿಗಳೆರಡೂ ನೋವಿನಲ್ಲಿತ್ತು. ಆಪ್ತ ಸ್ನೇಹಿತನೊಬ್ಬನ ಮುಂದೆ ಸ್ವಾಭಿಮಾನದ ಪ್ರಶ್ನೆಯೆದ್ದು ಅಹಲ್ಯೆಯಂತೆ ಕಲ್ಲಾದ ಪರಿಣಾಮವದು. ನನ್ನ ಎದುರು ಮಾತು ಆತನಿಗೆ ಅನಿರೀಕ್ಷಿತವಾಗಿತ್ತು. ನನಗೆ ಅನಿವಾರ್ಯವಾಗಿತ್ತು.
***
ಬ್ಯಾಗಿನಲ್ಲಿದ್ದ ಪತ್ರಿಕೆಯೊಂದನ್ನು ಕೈಗೆತ್ತಿಕೊಂಡೆ. ಅಲ್ಲಿ ನಾಗತಿಹಳ್ಳಿ ಸಂಬಂಧದ ಕುರಿತು ಬರೆದಿದ್ದರು. ಸಂಬಂಧವೆಂದರೆ ಬೆಂಕಿ ಮತ್ತು ಚಳಿ ಕಾಯುವವನ ನಡುವಿನ ಅಂತರದಂತೆ. ಚಳಿಯಾಗುತ್ತೆ ಎಂದು ಬೆಂಕಿಯನ್ನು ಮುಟ್ಟುವ ಹಾಗಿಲ್ಲ. ಬೆಂಕಿಗೂ ವ್ಯಕ್ತಿಗೂ ಒಂದಿಷ್ಟು ಅಂತರ ಕಾಯ್ದುಕೊಳ್ಳಬೇಕು ಅಂತ ಬರೆದಿದ್ದರು. ಸ್ನೇಹಕ್ಕೂ ಇದು ಅನ್ವಯವಾಗುತ್ತಾ? ನಾನು ಯೋಚಿಸತೊಡಗಿದೆ. ಸ್ನೇಹಕ್ಕೆ ಯಾವುದೇ ಅಂತರಗಳೇ ಇಲ್ಲವಾ ಅರ್ಥವಾಗಲಿಲ್ಲ.
***
ಇನ್ ಬಾಕ್ಸ್ ತೆರೆದು ನೋಡಿದಾಗ ಸ್ನೇಹದ ಮಹತ್ವ ಸಾರುವ ಹತ್ತಾರು ಸಂದೇಶಗಳು ಬಂದು ಕೂತ್ತಿದ್ದವು. ನಮ್ಮ ಕೋಪನೋಡಿ ಸ್ನೇಹಿತರೇ ಕಳುಹಿಸುತ್ತಿದ್ದರು. ಬೇರೆ ಸಂದರ್ಭದಲ್ಲಿಯಾದರೆ ಡಿಲಿಟ್ ಮಾಡಿ ಬಿಡುತ್ತಿದ್ದೆ. ಈಗ ಪ್ರತಿಪದಗಳು ಅರ್ಥವತ್ತಾಗಿ ಗೋಚರಿಸುತ್ತಿದ್ದವು. ನಮ್ಮೊಳಗೆ ಯಾಕೆ ಜಗಳ ಎಂದು ಸ್ನೇಹಿತರೆಲ್ಲರ ಗೋಗೆರತದಂತೆ ಕಾಡುತ್ತಿದ್ದವು.
***
ಅವನಲ್ಲಿ ಜಗಳ ಮಾಡಿದ ಮರುಕ್ಷಣವೇ ಆತನೊಂದಿಗೆ ಮನಸ್ಸು ರಾಜಿಯಾಗಿತ್ತು. ಆದರೆ ಮಾತನಾಡಲು ಮನಸ್ಸು ಇಚ್ಚಿಸಲಿಲ್ಲ. ಏನು ನಡೆಯಿತು ಎಂದು ಬರೆಯಲು ಕಷ್ಟ. ಯಾಕೆಂದರೆ ಅದರ ಯಾತನೆ ಅನುಭವವೇದ್ಯ. ಇಲ್ಲೊಂದು ಕತೆ ಓದಿ.
***
ಮತ್ತಷ್ಟು ಓದು