ವಿಷಯದ ವಿವರಗಳಿಗೆ ದಾಟಿರಿ

Archive for

16
ಏಪ್ರಿಲ್

ಗುಲ್ಬರ್ಗ ಜಿಲ್ಲೆ ಯಾವುದೇ ಕಲೆ/ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ?

– ಅರುಣ್ ಜಾವಗಲ್

ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ಹಲವಾರು ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ.ಈ ಕಾರ್ಯಕ್ರಮಗಳು ಕರ್ನಾಟಕದ ಜನರ ತೆರಿಗೆ ಹಣದಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಯ ಮತ್ತು ನಮ್ಮ ನಾಡಿನ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶವಿರಬೇಕು.ಆದರೆ ಆ ಪ್ರದೇಶದ ಮತ್ತು ನಮ್ಮ ನಾಡಿನ ಇತರೇ ಕಲಾವಿದರನ್ನ ಮರೆತಿರುವ ಸರಕಾರ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಉತ್ಸವಗಳನ್ನ ನಡೆಸುತ್ತಿದೆ.

ಕೆಲವು ದಿನಗಳ ಹಿಂದೆ ನಡೆದ ಬೀದರ್ ಉತ್ಸವದಲ್ಲಿ ಶೇಕಡಾ 90% ರಷ್ಟು ಕಾರ್ಯಕ್ರಮ ನಡೆಸಿಕೊಟ್ಟವರು ಬೀದರ್ ಜಿಲ್ಲೆಗಾಗಲೀ ಅಥವಾ ನಮ್ಮ ನಾಡಿಗೆ ಯಾವುದೇ  ಸಂಭಂದವಿಲ್ಲದವರು.ಇದೀಗ ಇದೇ ತಿಂಗಳ 15 ರಿಂದ 17 ರ ವರೆಗೆ ಕರ್ನಾಟಕ ಸರಕಾರ ಗುಲ್ಬರ್ಗ ಉತ್ಸವವನ್ನ ಆಯೋಜಿಸಿದೆ.ಯಾವುದೇ ಅನುಮಾನವಿಲ್ಲದಂತೆ ಈ ಕಾರ್ಯಕ್ರಮಕ್ಕೂ ಸಹ ಪರಭಾಷಿಕರಿಗೆ ಬಹುಪರಾಕ್ ಹೇಳಲಾಗಿದೆ.

ಮತ್ತಷ್ಟು ಓದು »

16
ಏಪ್ರಿಲ್

ಕನ್ನಡಕ್ಕೆ ಚಪ್ಪಲಿ ತೋರಿಸಿದವರು ಮಣ್ಣು ಮುಕ್ಕಲಿ…!

– ಜಯತೀರ್ಥ ನಾಡಗೌಡ, ವಿಜಾಪುರ

ಕನ್ನಡಕ್ಕೆ ಚಪ್ಪಲಿ ತೋರಿಸಿ ಕರ್ನಾಟಕದಲ್ಲೇ ಮೇಯರ್ ಆಗಲು ಸಾಧ್ಯವೇ! ಹೌದು ಇಂಥ ಘನಘೋರ ಕೃತ್ಯಗಳು ನಮ್ಮ ರಾಜ್ಯದಲ್ಲಿ ಮಾತ್ರ ಕಾಣ ಸಿಗುತ್ತವೆ. ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ, ನಡೆಸಕೂಡದು ಎಂದು ಅಡ್ಡಿಪಡಿಸಿ ಚಪ್ಪಲಿ ತೋರಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನ ನಿರ್ಲಜ್ಜ ಮಹಿಳೆ ಮಂದಾ ಬಾಳೆಕುಂದ್ರಿ ಬೆಳಗಾವಿಯ ಮೇಯರ್ ಆಗಿರುವುದು, ಎಲ್ಲ ಕನ್ನಡಿಗರು ತಮ್ಮ ಎಕ್ಕಡದಿಂದ ತಾವೇ ಹೊಡೆದುಕೊಂಡಂತೆ.

ಎಲ್ಲ ವರದಿ, ತೀರ್ಪುಗಳು ಬಂದು ಬೆಳಗಾವಿ ಕನ್ನಡದ ಅವಿಭಾಜ್ಯ ಅಂಗ ಅಂತ ಸಾಬೀತಾದರೂ, ಹಾಳು .ಈ.ಎಸ್ ನ ಕಾರ್ಯಕರ್ತರು ಪುಂಡಾಟಿಕೆ ಮಾಡುತ್ತಿರುವುದು ನಮ್ಮ ಆಳಿದ/ಆಳುವ ಘನಂದಾರಿ ಪಕ್ಷಗಳ ಕಾಣಿಕೆಯೇ ಸರಿ. ಕ.ರ.ವೇ ಸತತ ಪರಿಶ್ರಮದಿಂದ ಜಾಗ ಖಾಲಿ ಮಾಡಿದ್ದ ಶಿವಸೇನೆ, ಎಂಇಎಸ್ ನವರನ್ನು ಮತ್ತೆ ಬೆಳೆಯಲು ಬಿಟ್ಟು ಇಂಥ ರಾಜದ್ರೋಹಿಗಳೊಂದಿಗೆ ಚುನಾವಣ ಹೊಂದಾಣಿಕೆ ಮಾಡಲು ಕೂಡ ನಮ್ಮ ಕೆಲ ಧುರೀಣರು ಮನಸ್ಸು ಮಾಡಿದ್ದು ಎಲ್ಲರಿಗೂ ಗೊತ್ತಿದ್ದ ಸತ್ಯ.

ಮತ್ತಷ್ಟು ಓದು »