ಮುನ್ನ [ ಕ್ರೂರತ್ವದ ನಡುವೆ ಪ್ರೀತಿಯ ಹುಡುಕಾಟ]
ದೀಪಕ್ ಮದೆನಾಡು
ಮಡಿಕೇರಿ ಸಮೀಪದ ಒಂದು ಹಳ್ಳಿ. ಶಾಲಿನಿಯದು ಅಪ್ಪ, ಅಮ್ಮ, ಮತ್ತು ತಮ್ಮನ್ನೊಂದಿಗೆ ಚಿಕ್ಕ- ಚೊಕ್ಕ ಸಂಸಾರ. ಆಗತಾನೆ ಶಾಲಿನಿ ಹೈಸ್ಕೂಲ್ ಮೆಟ್ಟಿಲೇರಿದ್ದಳು. ಜೀವನದಲ್ಲಿ ಶ್ರೀಮಂತೆಯಾಗಬೇಕೆಂಬುದು ಶಾಲಿನಿಯ ಬಹುದಿನಗಳ ಕನಸು. ಅದಕ್ಕೆ ಅವಳು ಹುಡುಕಿಕೊಂಡ ಮಾರ್ಗ ‘ ಹಂದಿ’ ಸಾಕುವುದು. ತಂದೆಯೊಡನೆ ಈ ವಿಷಯ ಪ್ರಸ್ತಾಪಿಸಿದಾಗ, ಉದಾಸಿನದ ನಿಟ್ಟುಸಿರು ಬಿಟ್ಟು ಸುಮ್ಮನಾದರು. ಹಠ ಬಿಡದ ಶಾಲಿನಿ ಅಮ್ಮನನ್ನು ಪೀಡಿಸಿದಳು. ಅಮ್ಮ ಅಪ್ಪನನ್ನು ಕಾಡಿದಳು. ಕೊನೆಗೂ ಅಪ್ಪನಿಂದ ‘ಹಂದಿ’ ಸಾಕಲು ಹಸಿರು ನಿಶಾನೆ ಸಿಕ್ಕಿತು.
ಆಹಾ!! ಶಾಲಿನಿಯ ಖುಷಿಗೆ ಪಾರವೇ ಇಲ್ಲದಂತಾಯ್ತು . ಕಪ್ಪು-ಬಿಳಿ ಬಣ್ಣ ಮಿಶ್ರಿತ ಗಂಡು ಹಂದಿ ಮರಿಯನ್ನು ತಂದಳು. ಅಪ್ಪ ಹೊಸ ಅಥಿತಿಯನ್ನು ಸ್ವಾಗತಿಸಲು ಹೊಸ ಗೂಡನ್ನು ನಿರ್ಮಿಸಿದರು. ಹಂದಿ ಮರಿ ಕಿರಿಚುವಾಗ ಓಡಿಹೋಗಿ ನೋಡುವುದು, ಗಂಜಿ- ನೀರು, ಸೊಪ್ಪು- ಸದೆ ಹಾಕುವುದು, ಗೂಡು ಗುಡಿಸುವುದು ಶಾಲಿನಿಯ ನಿತ್ಯದ ಕಾಯಕವಾಯ್ತು.
ಹಂದಿ ಮರಿಗೆ ‘ ಮುನ್ನ ‘ ಎಂದು ಹೆಸರಿಟ್ಟಳು. ಅವಳು ಗೂಡಿನ ಹತ್ತಿರ ಹೋದರೆ ಸಾಕು, ಮುನ್ನ ಓಡಿ ಬಂದು ಬಾಗಿಲ ಬಳಿ ನಿಲ್ಲುತ್ತಿತ್ತು . ಅದರ ಕಿವಿಯನ್ನೋ, ಹೊಟ್ಟೆಯನೋ, ಕೆರೆದರೆ ‘ ದಡಾರ್’ ಎಂದು ಬಿದ್ದುಕೊಳ್ಳುತಿತ್ತು. ಕೆರೆದಷ್ಹ್ತುಪರಮಾನಂದ, ಅವಳು ಸುಸ್ತಾಗಿ ಮನೆಗೆ ಹೊರಟರೆ ಮತ್ತೆ- ಮತ್ತೆ ಕೆರೆಯುವಂತೆ ‘ ಗುರು-…..ಗುರು….ಗುರು….’ ಎಂದು ಪೀಡಿಸುತಿತ್ತು. ಮುನ್ನನ ಬೆನ್ನಿಗೆ ಪ್ರೀತಿಯಿಂದ ಹೊಡೆದು ” ಹೋಗೊಲೋ ಗುಂಡಣ್ಣ ” ಎನ್ನುತ್ತಾ ಓಡಿ ಬಿಡುತ್ತಿದ್ದಳು. ದಿನ ಕಳೆದಂತೆ ಈ ಹಂದಿಯನ್ನು ಮಾರಾಟ ಮಾಡಬೇಕು, ಹಣ ಸಂಪಾದಿಸಬೇಕು ಎಂಬುದು ಮರೆತೇ ಹೋಗಿತ್ತು. ಪ್ರೀತಿಯಿಂದ ಸಾಕಿದ ಹಂದಿಯನ್ನು ಮಾರುವ ದಿನವು ಉಂಟೆ ??. ಮತ್ತಷ್ಟು ಓದು
ಸೀಟ್ ಬೇಕು ಆದ್ರೆ ರಾಜ್ಯ ಬೇಡಾ….
– ಚೇತನ್ ಜೀರಾಳ್
ಡಾ. ಬಿ. ಆರ್. ಅಂಬೇಡ್ಕರ್ ಅವರ ಜನುಮ ದಿನದಂದು ಒಂದು ಸೋಜಿಗದ ವಿಷಯ ಹೊರಬಿದ್ದಿದೆ. ಪತ್ರಿಕೆಗಳಲ್ಲಿ ಇದರ ಬಗ್ಗೆ ವರದಿಯಾದರು ಸಹ, ಇದನ್ನ ಪತ್ರಿಕೆಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ವಿಷಯ ಏನಪ್ಪ ಅಂದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ ಸಿಂಗ್ ಅವರು, ಸದ್ಯಕ್ಕೆ ಅಸ್ಸಾಂ ರಾಜ್ಯದಲ್ಲಿ ನೆಲೆಸುತ್ತಿದ್ದಾರೆ ಅನ್ನೋದನ್ನ ದಾಖಲೆಗಳು ಹೇಳುತ್ತಿವೆ. ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ದಿಸ್ಪುರ್ ಕ್ಷೇತ್ರದ ಮತದಾರರಾಗಿದ್ದು, ಈ ಸಾರಿಯ ಚುನಾವಣೆಯಲ್ಲಿ ಮತದಾನ ಮಾಡಿಲ್ಲ ಅಂತ ಪತ್ರಿಕೆಗಳಲ್ಲಿ ವರದಿಯಾಗಿದೆ ಹಾಗೂ ಇದನ್ನ ಆ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಚುನಾವಣಾ ಅಧಿಕಾರಿ ಸಹ ನಿಜವೆಂದು ಹೇಳಿದ್ದಾರೆ.
ಮುಖ್ಯವಾದ ವಿಷ್ಯ ಏನಪ್ಪಾ ಅಂದ್ರೆ ಡಾ. ಮನಮೋಹನ್ ಸಿಂಗ್, ಅಸ್ಸಾಂನಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಬಂದಿದ್ದಾರೆ ಹಾಗೂ ಹಿಂದೆಯೂ ಆಯ್ಕೆಯಾಗಿದ್ದರು. ಮತದಾನ ಪ್ರತಿಯೊಬ್ಬ ನಾಗರೀಕನ ಮೂಲ ಕರ್ತವ್ಯ ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದು ಜನಪ್ರಿಯ ಸರ್ಕಾರವನ್ನು ಆರಿಸಲು ಪ್ರತಿಯೊಬ್ಬ ಪ್ರಜೆಗೂ ನೀಡಲಾಗಿರುವ ಪವಿತ್ರ ಹಕ್ಕು ಅನ್ನೋದನ್ನ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮರೆತು ಬಿಟ್ಟಿದ್ದಾರೆಯೇ?? ಪ್ರಜ್ಞಾವಂತ ಜನರು ಚುನಾವಣೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳುತ್ತಿರವ ಈ ಸಮಯದಲ್ಲಿ ಒಬ್ಬ ರಾಜಕಾರಣಿ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಮನಮೋಹನ್ ಸಿಂಗ್ ಅವರಿಂದ ಇಂತಹ ನಡೆ ಸರಿಯಾದುದಲ್ಲ.
ಪೂರ್ವಾವಲೋಕನ : ಒಂದು ಸಂವಾದ
– CSLC
ಕನ್ನಡದ ವಿದ್ವಾಂಸ ಜಗತ್ತಿಲ್ಲಿ ನಮ್ಮ ಸಮಾಜದ ಮತ್ತು ಸಮಾಜವಿಜ್ಞಾನದ ಕುರಿತು ವೈಜ್ಞಾನಿಕವಾಗಿ ಹೆಚ್ಚು ಚರ್ಚೆಯಾಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರರ ಹಲವಾರು ಆಂಗ್ಲ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿಲಾದ ’ಪೂರ್ವಾವಲೋಕನ’ ಕೃತಿಯನ್ನು (ಅಭಿನವ ಪ್ರಕಾಶನ) ಇತ್ತೀಚೆಗೆ ಪ್ರಕಟಿಸಲಾಗಿದೆ. ಈ ಪುಸ್ತಕದಲ್ಲಿರುವ ಕೆಲವಾರು ಲೇಖನಗಳ ಆಧಾರದ ಮೇಲೆ “ಪೂರ್ವಾವಲೋಕನ : ಒಂದು ಸಂವಾದ” ಒಂದು ದಿನ ಕಾರ್ಯಾಗಾರವನ್ನು ಇದೇ ತಿಂಗಳ ೨೪ ರಂದು ಸರ್ಕಾರಿ ಕಲಾ ಕಾಲೇಜು, ಕೆ.ಆರ‍್. ಸರ್ಕಲ್ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.