‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು
ಅರೆಹೊಳೆ ಸದಾಶಿವರಾಯರು
ಫೇಸ್ ಬುಕ್‌ನಲ್ಲಿ ಒಂದು ಸಾಲು ಓದಿದೆ. ‘ಮ್ಯಾಜಿಷಿಯನ್’ ಸತ್ಯ ಸಾಯಿಬಾಬಾ ಇನ್ನಿಲ್ಲ ಎಂದು ಒಬ್ಬರು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಮುಂದುವರಿಯುತ್ತಾ, ಈ ಸತ್ಯಸಾಯಿಬಾಬಾ ಎಂಬ ಜಾದೂಗಾರನನ್ನು ಕೇವಲ ಮಾಧ್ಯಮಗಳು ಈ ಮಟ್ಟಿಗೆ ದೇವಮಾನವನನ್ನಾಗಿ ಮಾಡಿವೆ ಎಂದೂ ಸೇರಿಸಿಕೊಂಡಿದ್ದರು.
ಮೊದಲಾಗಿ ಮಾನವ ಎಂದರೆ ಏನು ಎಂಬತ್ತ ಗಮನ ಹರಿಸಬೇಕು. ಅದಕ್ಕೂ ಮೊದಲಾಗಿ ಒಂದು ವಿಷಯ ಸ್ಪಷ್ಟೀಕರಣದೊಂದಿಗೇ ಲೇಖನ ಆರಂಭಿಸಬೇಕು. ಅದೆಂದರೆ ನಾನು ಸಾಯಿ ಬಾಬಾ ಅವರ ಭಕ್ತನೂ ಅಲ್ಲ ಮತ್ತು ಅವರ ಪವಾಡಗಳ ಕುರಿತು ಪರ-ವಿರೋಧ ಎಂದು ಹೇಳಿಕೊಳ್ಳುವಷ್ಟು, ಜ್ಞಾನಿಯೂ ಅಲ್ಲ. ಆ ಮಟ್ಟಿಗೆ ಈ ವಿಷಯದಲ್ಲಿ ನಾನು ತಟಸ್ಥ. ಇನ್ನು ಮಾನವ ಎಂದರೆ…..!. ಜೀವಂತ ಇರುವ ಎಲ್ಲವೂ ಮಾನವನಾಗುವುದಿಲ್ಲ ಅಥವಾ ಮನುಷ್ಯಗರ್ಭದಲ್ಲಿ ಜನಿಸಿದ ಎಲ್ಲರೂ ಮಾನವನಂತೆ ಬದುಕುವುದಿಲ್ಲ. ಪರಸ್ಪರರನ್ನು ಪ್ರೀತಿಸುತ್ತಾ ಸಾಧ್ಯವಾದಷ್ಟೂ ಜನರ ಬಳಿ, ಜನರನ್ನು ಗೌರವಿಸುತ್ತಾ ಬದುಕುವುದು ಮಾನವೀಯ ಧರ್ಮ ಎನಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜನಸೇವೆಯೇ ಜನಾರ್ದನ ಸೇವೆ ಎಂದುಕೊಂಡು, ಅಕ್ಷರಶ: ಅದನ್ನೇ ಪಾಲಿಸಿದರೆ ಆತ ಜನರ ಪಾಲಿಗೆ ಜನಾರ್ದನನಾಗುತ್ತಾನೆ;ದೇವತ್ವವನ್ನು ಪಡೆಯುತ್ತಾನೆ-ಸಾಯಿಬಾಬಾ ವಿಷಯದಲ್ಲಿಯೂ ಅದೇ ಆಗಿದೆ. ಮತ್ತಷ್ಟು ಓದು
ಬಂಜರಾದ ಬಾಂಜಾರು
ಪವನ್ ಎಂ. ಟಿ
ಪ್ರಿಯ ನಿಲುಮೆಯ ಓದುಗರೆ ಕಳೆದ ಕೆಲವು ದಿನಗಳ ಹಿಂದೆ ನಿಲುಮೆಯಲ್ಲಿ ಮಲೆಕುಡಿಯರ ಪ್ರದೇಶವಾದ ಬಂಗಾರ್ ಪಲ್ಕೆಯ ಕುರಿತಂತೆ, ಅಲ್ಲಿಯ ಸಾಮಾಜಿಕ ಸಮಸ್ಯೆಗಳ ಕುರಿತಂತೆ ಲೇಖನವೊಂದು ಪ್ರಕಟವಾಗಿತ್ತು. ಇನ್ನೊಂದು ವಿಭಿನ್ನ ಪ್ರದೇಶವಾದ ಬಾಂಜಾರು ಮಲೆಯ ಮಲೆಕುಡಿಯರ ಕುರಿತಂತೆ, ಅವರ ಕಷ್ಟದ ಪರಿಪಾಟಲಿನ ಕುರಿತ ಸಣ್ಣ ಪರಿಚಯವನ್ನು ಈ ಲೇಖನದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಚಾರ್ಮಾಡಿ ರಸ್ತೆಯಲ್ಲಿ ಸುಮಾರು ೪೦ ಕಿಲೋಮೀಟರ್ ಪ್ರಯಾಣಿಸಿದರೆ ಘಾಟ್‌ನ ೯ ನೇ ತಿರುವಿನಲ್ಲಿ ಬಲಬದಿಗೆ ಒಂದು ಕಿರಿದಾದ ಕಚ್ಚಾ ರಸ್ತೆ ಸಿಗುತ್ತದೆ. ಈ ಕಚ್ಚಾ ರಸ್ತೆ ಹೆಚ್ಚು ದೂರದ ವರೆಗೆ ಇಲ್ಲ. ಎಲ್ಲಿಯಾದರೂ ಸಾಮಾನ್ಯ ಜನರೀಗೆ ಇದರಿಂದ ಉಪಯೋಗವಾಗಿ ಬಿಟ್ಟರೆ ಕಷ್ಟ ನೋಡಿ ಅದಕ್ಕೆ ಈ ರಸ್ತೆ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಎಸ್ಟೇಟ್ ನ ಅಥಿತಿ ಗೃಹದ ವರೆಗೆ ಮಾತ್ರವಿದೆ. ಇಲ್ಲಿ ಖಾಸಗಿ ಎಸ್ಟೇಟ್ ನವರು ಒಂದು ದೊಡ್ಡ ಗೇಟು ಹಾಕಿದ್ದಾರೆ ಈ ಗೇಟನ್ನು ಒಳ ಪ್ರವೇಶ ಮಾಡಿಯೇ ನಾವು ಬಾಂಜಾರು ಮಲೆಗೆ ಹೋಗಬೇಕು. ಇಲ್ಲಿ ಎಸ್ಟೇಟ್ ಮಾಲಿಕರ ಪರವಾನಿಗೆ ಇಲ್ಲದೇ ನಾವು ಒಳ ಹೋಗುವಂತಿಲ್ಲ. ಮೊದಲು ನಮಗೆ ಮಲೆಕುಡಿಯರಲ್ಲಿಗೆ ಹೋಗುವುದಕ್ಕೆ ಎಸ್ಟೇಟ್‌ನವರ ಒಪ್ಪಿಗೆ ಯಾಕೆ ಪಡೆಯಬೇಕು ಎಂಬ ಪ್ರಶ್ನೆ ಮೂಡಿತು . ಆದರೆ ನಮ್ಮ ಕೆಲಸ ಆಗಬೇಕಾದರೆ ನಾವು ಒಪ್ಪಿಗೆ ಪಡೆಯಲೇ ಬೇಕಲ್ಲಾ ಅದಕ್ಕೆ ಆ ಕೆಲಸವನ್ನು ಮೊದಲು ಮಾಡಿದೆವು. ಮುಂದೆ ಸಾಗಿದಂತೆ ಆ ಅಥಿತಿ ಗೃಹದಲ್ಲಿ ಕೆಲಸ ಮಾಡುವ ಮಲೆಕುಡಿಯರನ್ನು ಕಂಡೆವು. ಇದೆಲ್ಲವನ್ನು ನೋಡುವಾಗ ನನ್ನಲ್ಲಿ ಮೂಡಿದ ಪ್ರಶ್ನೆ? ಎಸ್ಟೇಟ್ ನವರು ಯಾಕೆ ಈ ರೀತಿ ಗೇಟ್ ಹಾಕಿದ್ದಾರೆ? ಮಲೆಕುಡಿಯರನ್ನು ನಿಯಂತ್ರಣದಲ್ಲಿಟ್ಟಿರ ಬಹುದೇ? ನಮ್ಮನ್ನು ಯಾಕೆ ಪರೀಕ್ಷಿಸಿಯೇ ಒಳ ಬಿಡುತ್ತಾರೆ? ಇದರ ಹಿಂದೆ ಏನಿದೆ? ಮಲೆಕುಡಿಯರು ಯಾಕೆ ಇವರಲ್ಲಿಯೇ ಕೆಲಸ ಮಾಡುತಿದ್ದಾರೆ? ಎಂದು. ನಂತರ ಬಾಂಜಾರಿನ ಮಲೆಕುಡಿಯರೇ ಹೇಳಿದರೂ ಎಸ್ಟೇಟ್ ನವರು ನಮಗೆ ೫ ಎಕರೆ ಜಾಗವನ್ನು ಪ್ರತಿಯೊಬ್ಬರಿಗೂ ನೀಡಿದ್ದಾರೆ ಅದರಲ್ಲಿ ಕೃಷಿ ಮಾಡಿಕೊಂಡು ಮತ್ತು ಎಸ್ಟೇಟ್‌ನ ಕೆಲಸವನ್ನು ಮಾಡಿಕೊಂಡು ನಾವು ಬದುಕುತ್ತಿದ್ದೇವೆ. ಈ ಮಾತನ್ನು ಕೇಳಿದಾಗ ನನ್ನಲ್ಲಿ ಮೂಡಿದ್ದ ಪ್ರಶ್ನೆಗಳಿಗೆ ಅಲ್ಪ ಸ್ವಲ್ಪ ಉತ್ತರ ಸಿಕ್ಕಿದಂತಾಯಿತು. ಮತ್ತಷ್ಟು ಓದು
ಎಲ್ಲಿ ಹೋದವು ಆ ವೈಶಾಖದ ದಿನಗಳು …..

ಅಜ್ಜಿ ಮನೆಯಲ್ಲಿ ಇಗ ಮರದ ತುಂಬಾ ಮಾವು ಹಲಸು,ಅಜ್ಜನ ಕಿಟಿಪಿಟಿ ಒಂದನ್ನು ಬಿಟ್ಟರೆ ….ಅಜ್ಜಿ ಮನೆ ಎಂಬುದು ಅಧ್ಭುತ ಮಾಯಾಲೋಕ…ನನ್ನ ಎಲ್ಲಾ ಅಕ್ಕ ಅಣ್ಣಂದಿರು…ಅಲ್ಲಿ ಬಂದಿರುತ್ತಿದ್ದರು…ಎಲ್ಲಾ ಸೇರಿ ಆ ಎರಡು ತಿಂಗಳು ..ಖುಷಿಯನ್ನು ಲೂಟಿ ಮಾಡುತ್ತಿದ್ದೆವು…ಅದೂ ಮೇ …..ತಿಂಗಳು ಮದುವೆ, ಮುಂಜಿ, ಚೌಲ ….ಒಂದೇ ಎರಡೇ…ಅಜ್ಜಿ ಜೊತೆಗೆ ಹೋಗಲು ನಾ ಮುಂದು ನೀ ಮುಂದು ಎಂದು ಲಡಾಯಿ..ಮಾಡುತ್ತಿದ್ದ ಆ ದಿನಗಳು…
ಅಜ್ಜನಿಗೆ ಮಕ್ಕಳೆಂದರೆ ಅಷ್ಟಕ್ಕಷ್ಟೇ…ಆತ ಯಾವತ್ತೂ ಮೊಮ್ಮೊಕ್ಕಳಿಗೆ ಸಲಿಗೆ ಕೊಟ್ಟಿರಲಿಲ್ಲ…ನಮಗೂ ಅವ ದೊಡ್ಡ ಪ್ರತಿಸ್ಪರ್ಧಿಯಂತೆ… ಭಾಸವಾಗುತ್ತಿದ್ದ …ಬೇಕಂತಲೇ ಅವನಿಗೆ ತೊಂದರೆ ಕೊಡುತ್ತಿದ್ದೆವು…ಆ ದಿನ ಬಾಯಿರಿಗಳ ಮನೆತನಕ ಶಾರ್ಟ್ ಕಟ್ನಲ್ಲಿ ಹೋಗಲು ಹೋಗಿ ಮರದ ಬೇರಿಗೆ ಎಡವಿ ಮೂತಿ ಚಚ್ಚಿ ಕೊಂಡು ಆಸ್ಪತ್ರೆ ಸೇರಿದ ಅಜ್ಜ…ಇನ್ನೆರಡು ದಿನ ಬಿಟ್ಟು ಬರಲಿ ಎಂದು ಆಶಿಸುತ್ತಿದ್ದ ಆ ದಿನಗಳು….