ವಿಷಯದ ವಿವರಗಳಿಗೆ ದಾಟಿರಿ

Archive for

15
ಏಪ್ರಿಲ್

ಬೃಹತ್ ಬ್ರಹ್ಮಾಂಡದ ವಿರುದ್ಧ ಆಂದೋಲನದ ನೀಲನಕ್ಷೆ…

(ಪ್ರಳಯಾಂತಕ (ಪ್ರಳಯ’ಹಂತಕ’) ಟಿವಿ ಜ್ಯೋತಿಷಿಗಳ ವಿರುದ್ಧ ಸಂಪಾದಕೀಯ ತಂಡ ಹೊರಟು ನಿಂತಿದೆ.ಸಾಮಾಜಿಕ ಕಾಳಜಿಯುಳ್ಳ ಕೆಲಸಗಳಿಗೆ ಹೆಗಲು ಕೊಡಬೇಕಾದದ್ದು ನಮ್ಮ ಕರ್ತವ್ಯ.ಸಂಪಾದಕೀಯದ ಈ ಹೋರಾಟ ಹೆಚ್ಚು ಜನರಿಗೆ ತಲುಪಲಿ ಅನ್ನುವ ಉದ್ದೇಶದಿಂದ ಈ ಲೇಖನವನ್ನ ಇಲ್ಲಿ ಪ್ರಕಟಿಸುತಿದ್ದೇವೆ – ನಿಲುಮೆ)   
 
– ಸಂಪಾದಕೀಯ
 
ಎಲ್ಲ ಟಿವಿ ಚಾನಲ್‌ಗಳಲ್ಲೂ ಜ್ಯೋತಿಷಿಗಳ ಆರ್ಭಟ ನಿರಂತರವಾಗಿ ಸಾಗಿದೆ. ಪರಸ್ಪರ ಫೈಟಿಂಗಿಗೆ ಬಿದ್ದ ಹಾಗೆ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮಗಳನ್ನು ಟಿವಿ ವಾಹಿನಿಗಳು ಎಗ್ಗಿಲ್ಲದೆ ಪ್ರಸಾರ ಮಾಡುತ್ತಿವೆ. ಜೀ ಟಿವಿಯಲ್ಲಿ ಬರುವ ನರೇಂದ್ರ ಶರ್ಮರ ಅವಾಂತರಗಳ ಕುರಿತು ಈ ಹಿಂದೆ ಬರೆದಿದ್ದೆವು. ನೀವೂ ಸಹ ಪ್ರತಿಕ್ರಿಯಿಸಿದ್ದಿರಿ. ಈ ವರ್ಷ ಇಡೀ ಪ್ರಪಂಚ ಮುಳುಗಿ ಹೋಗುತ್ತದೆ ಎಂದು ಹೇಳಿದ ಈ ಮಹಾನುಭಾವ, ಯುಗಾದಿಯ ದಿನ ಇಡೀ ವರ್ಷದ ಭವಿಷ್ಯ ಯಾರಿಗೆ ಹೇಗೆ ಇದೆ ಎಂದು ಹೇಳುತ್ತಾರೆ. ಎರಡನ್ನೂ ನಾಚಿಕೆಯಿಲ್ಲದಂತೆ ಚಾನಲ್ ಪ್ರಸಾರ ಮಾಡುತ್ತದೆ. ಜಗತ್ತೇ ನಾಶವಾದ ಮೇಲೆ ವರ್ಷ ಭವಿಷ್ಯ ಯಾಕೆ ಒದರುತ್ತ ಕೂತಿದ್ದೀರಿ ಎಂದು ಚಾನಲ್ ನವರು ಪ್ರಶ್ನಿಸಲಿಲ್ಲ. ನೋಡುವ ವೀಕ್ಷಕರಿಗೂ ಅದು ಹೊಳೆಯಲಿಲ್ಲ.

ಮತ್ತಷ್ಟು ಓದು »

15
ಏಪ್ರಿಲ್

ದಯವಿಟ್ಟು ಗುದ್ದಲಿಪೂಜೆಗೆ ಬನ್ನಿ…

– ಕಿರಣ ಬಾಟ್ನಿ

’ನಿಲುಮೆ’ಯಲ್ಲಿ ಪ್ರಕಟವಾಗಿದ್ದ ಶ್ರೀ ಅಜಕ್ಕಳ ಗಿರೀಶಬಟ್ಟಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ? ಎಂಬ ಬರಹಕ್ಕೆ ಉತ್ತರವಾಗಿ ನಾನು ಬರೆದಿದ್ದ ಇಗೋ, ಇದರಲ್ಲಿ ಮುಂದಿದೆ ಎಂಬ ಬರಹಕ್ಕೆ ಹಲವರು ತಮ್ಮ ಅನಿಸಿಕೆಯನ್ನು ತಿಳಿಸಿ, ಅದರ ಬಗ್ಗೆ ’ನಿಲುಮೆ’ಯಲ್ಲಿ ಚರ್ಚೆಯಾಗಿರುವುದು ಮನಸ್ಸಿಗೆ ಮುದ ತಂದಿದೆ. ಕನ್ನಡದ ಸೊಲ್ಲರಿಮೆ ಮತ್ತು ನುಡಿಯರಿಮೆಗಳ ವಿಶಯ ಬಹಳ ಮುಕ್ಯವಾದುದು. ಹಾಗೆಯೇ, ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಕಾಳಜಿಯುಳ್ಳವರು ಇದನ್ನು ಕುರಿತು ನೆಮ್ಮದಿಯ ಮನಸ್ಸಿನಿಂದ ಚಿಂತಿಸುವುದು ಕೂಡ ಬಹಳ ಮುಕ್ಯವಾದುದು. ಆದುದರಿಂದ ನನ್ನ ಬರಹಕ್ಕೆ ಬಂದ ಅನಿಸಿಕೆಗಳನ್ನು ನಿದಾನವಾಗಿ ಕುಳಿತು ಯೋಚಿಸಿ ಉತ್ತರಿಸಲು ಸಮಯವನ್ನು ಕೊಟ್ಟ ’ಒಡ-ಕಾಳಜಿಗ’ರಿಗೆ ದನ್ಯವಾದಗಳು. ಇಲ್ಲಿ ನಾನು ಮಂಡಿಸಿದ ವಿಶಯಕ್ಕೆ ಸಂಬಂದಿಸಿದ ಅನಿಸಿಕೆಗಳಿಗೆ ನನ್ನ ಟಿಪ್ಪಣಿಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

ಕನ್ನಡದಾ ಮಕ್ಕಳೆಲ್ಲ ಒಂದಾಗಿಮಕ್ಕಳಲ್ಲ!

ಮೊದಲನೆಯದಾಗಿ, ಶ್ರೀ ನರೇಂದ್ರಕುಮಾರ್ ಎಸ್. ಎಸ್. ಅವರು ನಾನು ಪ್ರಶ್ನೆಗಳನ್ನು ಸ್ವಾಗತಿಸುವೆನೆಂದೂ, ಪ್ರಶ್ನಿಸಿದವರ ಮೇಲೆ ಹಾರಾಡುವುದಿಲ್ಲವೆಂದೂ, ತರ್ಕಬದ್ದವಾದುದನ್ನು ಒಪ್ಪುವೆನೆಂದೂ ಎಣಿಸಿ ಕೆಲ ಪ್ರಶ್ನೆಗಳನ್ನು ನನ್ನ ಮುಂದಿಟ್ಟಿದ್ದಾರೆ. ಅವರ ಈ ಪೀಟಿಕೆ ಬಹಳ ಸಂತಸ ತಂದಿತು, ಏಕೆಂದರೆ ಈ ನಂಬುಗೆಯು ಯಾವರೀರ್ವರ ನಡುವೆ ಇರುವುದಿಲ್ಲವೋ, ಅವರ ನಡುವೆ ಚರ್ಚೆಗೆ ಅರ್ತವಿಲ್ಲ. ಆ ನಂಬುಗೆಯನ್ನು ನಾನು ಈ ನನ್ನ ಟಿಪ್ಪಣಿಯಲ್ಲಿ ಉಳಿಸಿಕೊಳ್ಳುತ್ತೇನೆ ಎಂದು ನಂಬಿದ್ದೇನೆ.

ಮತ್ತಷ್ಟು ಓದು »