ವೋಟ್ ಬ್ಯಾಂಕ್ ಭಾಷೆಯಾಗಲಿ ಕನ್ನಡ
– ರಾಕೇಶ್ ಶೆಟ್ಟಿ
ಪತ್ರಿಕೆಗಳಲ್ಲಿ ಆಗೀಗ ‘ಅನ್ನ ಕೊಡುವ ಭಾಷೆಯಾಗಲಿ ಕನ್ನಡ’ ಅನ್ನೋ ಕಳಕಳಿಯ ಲೇಖನಗಳು ಬರುತ್ತಲೇ ಇರುತ್ತವೆ.ಒಂದೆಡೆ ‘ಸರ್ವಂ ಇಂಗ್ಲೀಶ್ ಮಯಂ’ ಮತ್ತೊಂದೆಡೆ ‘ಏಕಮ್ ಭಾರತಂ ಹಿಂದಿಮಯಂ’ (ಈ ಮಂತ್ರ ಸರಿ ಇಲ್ಲ ಅಂತೆಲ್ಲ ಹೇಳ್ಬೆಡಿ 😉 ) ಅನ್ನೋ ಕೇಂದ್ರದ ನೀತಿಯ ನಡುವೆ ಕನ್ನಡ ‘ಅನ್ನ’ ಕೊಡುವ ಭಾಷೆಯಾಗುವುದು ಹೇಗೆ? ನನಗನ್ನಿಸುವ ಹಾಗೆ, ಈಗಿನ ಪರಿಸ್ಥಿತಿಯಲ್ಲಿ ಅನ್ನ ಕೊಡುವ ಭಾಷೆಯಾಗುವ ಶಕ್ತಿ ಬರಬೇಕೆಂದರೆ ಮೊದಲು ‘ವೋಟ್ ಕೊಡುವ ಭಾಷೆಯಾಗಬೇಕು ಕನ್ನಡ’.ಎಲ್ಲ ಪಕ್ಷಗಳು ಕುಣಿಯುವುದು ವೋಟಿಗಾಗಿ,ಪುಡಿ ವೋಟಿಗಾಗಿ ಅನ್ನೋ ಕಾಲವಿದು.ವೋಟಿಗಿರುವಷ್ಟು ಶಕ್ತಿ ಸದ್ಯಕ್ಕೆ ಯಾವುದಕ್ಕಿದೆ ನೀವೇ ಹೇಳಿ?
ಕೆಲವರು ನನ್ನ ಮಾತನ್ನು ಒಪ್ಪಬಹುದು ಇನ್ನ ಕೆಲವರು ಇದನ್ನ ನಿರಾಕರಿಸಬಹುದು. ನಿರಾಕರಿಸುವವರು ಭಾರತದ ರಾಜಕೀಯ ಇತಿಹಾಸವನ್ನೊಮ್ಮೆ ನೋಡುತ್ತಾ ಬನ್ನಿ.ಗಾಂಧೀಜಿ ಕಾಲದಿಂದ ಇಂದಿನವರೆಗೂ ನಮ್ಮಲ್ಲಿ ನಡೆಯುತ್ತಿರುವುದೇ ಓಲೈಕೆಯ ವೋಟ್ ಬ್ಯಾಂಕ್ ರಾಜಕಾರಣ ಅಲ್ವಾ?