ಅವರೆತ್ತರಕ್ಕೆ ಏರಲಾಗದಿದ್ದರೆ ತೆಪ್ಪಗಿರಿ…!
– ರಾಕೇಶ್ ಶೆಟ್ಟಿ
“ಇಂದಿನ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿ ಅವರು ಇದ್ದಿದ್ದರೆ, ಅವರು ಕೂಡಾ ಭ್ರಷ್ಟರಾಗುತ್ತಿದ್ದರು. ರಾಜಕೀಯದಲ್ಲಿ ಉಳಿಯಬೇಕಾದರೆ ಭ್ರಷ್ಟರಾಗದೆ ಇರಲು ಸಾಧ್ಯವೇ ಇಲ್ಲ” ಇಂತ ಹೇಳಿಕೆ ಕೊಟ್ಟೊವ್ರು ಯಾರು ಅನ್ನೋದು ಎಲ್ರಿಗು ಗೊತ್ತಿದೆಯಲ್ವಾ? ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವ್ರು.ಒಂದ್ ಕಡೆ ದೇವೆಗೌಡ್ರು ಫೋಟೊ,ಇನ್ನೊಂದ್ ಕಡೆ ಇದೇ ಮಹಾತ್ಮನ ಫೋಟೊ ಹಾಕೊಂಡಿರೋ ಪಕ್ಷದ ರಾಜ್ಯಾಧ್ಯಕ್ಷರ ಬಾಯಿಯಲ್ಲಿ ಬಂದ ಮುತ್ತಿನಂತ ಮಾತುಗಳಿವು.
ಮುತ್ತುಗಳು ಬಿದ್ದಾಗ ಆರಿಸಿ ಮನೆಗ್ ತಗೊಂಡು ಹೋಗೊದು ರೂಢಿ,ಆದ್ರೆ ಕುಮಾರ ಸ್ವಾಮಿ ಅವ್ರ ಮುತ್ತನ್ನ ಹಿಡಿದು ಅವರಿಗೆ ಪೈಡ್ ಪೈಡ್ ಅಂತ ಎಲ್ಲ ಕಡೆಯಿಂದ ಬಾರಿಸುತಿದ್ದಾರೆ.ಬಾರಿಸದೆ ಬಿಡ್ಬೇಕಾ? ಒಂದು ಕಡೆ ಮಹಾತ್ಮರ ಹೋರಾಟದಿಂದ ಸ್ಪೂರ್ತಿ ಪಡೆದ ೭೬ ವರ್ಷದ ಅಣ್ಣಾ ಹಜಾರೆಯಂತವರು ಸತ್ತತಿಂಹರನ್ನ ಬಡಿದೆಬ್ಬಿಸಲು ಉಪವಾಸ ಕೂತರೆ,ಇನ್ನೊಂದು ಕಡೆ ಈ ಕುಮಾರಸ್ವಾಮಿ ಮಹಾತ್ಮರ ಬಗ್ಗೆ ಇಂತ ಮಾತನಾಡಲು ಹೊರಟಿದ್ದಾರೆ!
ಇನ್ನೊಂದು ಸಮರಕ್ಕೆ ಸಿದ್ಧರಾಗಿ…
-ಸಂಪತ್ ಕುಮಾರ್
ಅಣ್ಣ ಹಜಾರೆಯವರ ಉಪವಾಸವೇನೋ ಮುಗಿಯಿತು. ರಂಗೋಲೆಯ ಕೆಳಗೆ ನುಸುಳುವ ಬುದ್ಧಿ ಉಳ್ಳ ರಾಜಕಾರಣಿಗಳು ಎಂತಹ ಕಾನೂನು ತಯಾರಿಸುತ್ತರೋ ಕಾದುನೋಡಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಲೋಕಾಯುಕ್ತದಂತಹ ಸಂಸ್ಥೆಯಿಂದ ಆಗುತ್ತಿರುವ ಭ್ರಷ್ಟಾಚಾರಿಗಳ ಬೇಟೆ ಅವರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿರುವುದು ಸರ್ವವೇದ್ಯ. ಅಲ್ಲದೆ ಇಂತಹ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದೂ ಅನುಮಾನ.ಇಂತಹ ಪರಿಸ್ತಿತಿಯಲ್ಲಿ ಇನ್ನೊದು ಹೋರಾಟದ ಅಗತ್ಯ ಇದೆ.
ಭಾರತದ ರಾಜಕಾರಣಿಗಳ ಕೋಟಿ ಕೋಟಿ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿದರೆ ಭಾರತ ತನ್ನೆಲ್ಲ ಸಾಲದಿಂದ ಮುಕ್ತವಾಗಿ, ಹಣ ದುಬ್ಬರ, ಬಡತನ, ಮುಂತಾದ ತನ್ನೆಲ್ಲ ಕಷ್ಟ ಕೋಟಲೆಗಳಿಂದ ಹೊರಬರಲು ಸಾಧ್ಯ. ಇದಕ್ಕಾಗಿ ಅಣ್ಣ ಹಜಾರೆ ಅವರನ್ನು ಈ ಉದ್ದೇಶಕ್ಕಾಗಿ ಪುನಃ ಉಪವಾಸ ಕೂರಲು ಹೇಳುವುದು ಸ್ವಾರ್ಥ ಎನಿಸಬಹುದು. ಈ ವಿಚಾರವನ್ನೇ ತನ್ನ ಚುನಾವಣ ಪ್ರಾಣಾಳಿಕೆ ಮಾಡಿಕೊಂಡಿರುವ ಭಾ.ಜ.ಪ. ದಿಂದ ಇದನ್ನು ರಾಜಕೀಯಗೊಳಿಸಬಾರದು.
ಮತ್ತಷ್ಟು ಓದು