ವಿಷಯದ ವಿವರಗಳಿಗೆ ದಾಟಿರಿ

Archive for

14
ಏಪ್ರಿಲ್

ಅಗೋಚರ….!

– ಜಿ.ವಿ ಜಯಶ್ರೀ

ಹೆಚ್ಚಾಗಿ ಪವಾಡಗಳು… ಪುರುಷರು… ಮಾಯಾ-ಮಂತ್ರ, ಭವಿಷ್ಯ ಮನುಷ್ಯರಿಗೆ ಇಷ್ಟ. ಯಾವ ಭಾಷೆಯಲ್ಲಿ ನೋಡಿದರು ಇಂತಹ ವಿಷಯಗಳಿಗೆ ಸಂಬಂಧಿಸಿದ ಕಥೆಗಳು , ಧಾರಾವಾಹಿಗಳು ಇದ್ದೆ ಇರುತ್ತದೆ. ಅದೊಂತರ ಸೀರಿಯಸ್ ವಿಷಯದ ಚರ್ಚೆ ಮಧ್ಯೆ ಸಣ್ಣ ಜಾಹಿರಾತು ಇದ್ದಂತೆ. ಬೇಕಾದವರು ನೋಡಬಹುದು ಬೇಡದೆ ಇದ್ದವರು ಬಿಸಾಡ ಬಹುದು.

ಹೆಚ್ಚು ಜನಪ್ರಿಯ ವ್ಯಕ್ತಿಗಳಲ್ಲಿ ಸಾಧು ಸಂತರು, ಬಾಬಗಳು ಸೇರುತ್ತಾರೆ. ಕಳೆದವಾರ ಅಣ್ಣ ಹಜಾರೆ ಅವರ ವಿಷಯದ ಜೊತೆಗೆ ಹೆಚ್ಚು ಚಾಲ್ತಿಯಲ್ಲಿ ಕಂಡ ಸಂಗತಿ ಪುಟ್ಟಪರ್ತಿ ಸಾಯಿ ಬಾಬ. ಅತ್ಯಂತ ಜನಪ್ರಿಯ ಬಾಬ ಅವರು, ಜೊತೆಗೆ ಅತ್ಯಂತ ವಿವಾದಿತ ಬಾಬ.

ಬಹುಸಂಖ್ಯಾತ ಉತ್ತರ ಭಾರತೀಯರು ಅವರ ಮನೆಯಲ್ಲಿ  ಇರುವ ಒಂದು ಚಂಬು ಪಕ್ಕದ ಮನೆಗೆ ಕೊಡಬೇಕಾದ್ರೂ ಸಾಯಿ ಬಾಬ ಅನುಮತಿ ಕೇಳ್ತಾರೆ ,ತಮಾಷೆ ಅಲ್ಲ ಕಣ್ರೀ ಅಷ್ಟೊಂದು ನಂಬಿಕೆ .ಏನೇ ಸಂಗತಿಗಳು ಇರಲಿ ಅವರು ಅತ್ಯಂತ ಹೆಚ್ಚು ಗಮನ ಸೆಳೆಯುವುದು ಸಮಾಜಮುಖಿ ಕೆಲಸಗಳಿಂದ.ಭಜನ್ ಮಾಡುವಾಗ ಸದಾ ಶಾಂತ ಸ್ಥಿತಿಯಲ್ಲಿರುವ ವದನ, ಆ ಮೌನ ಎಲ್ಲವೂ ಹೆಚ್ಚು ಆಕರ್ಷಣೆಯ  ಅಂಶ. ಅವರ ಭಜನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಸಂತೋಷದಿಂದ ಹೊರ ಬರುತ್ತಾರೆ.

ಮತ್ತಷ್ಟು ಓದು »

14
ಏಪ್ರಿಲ್

ಮೊದಲ ಬಾನಯಾನ : ಚಳಿಯಲ್ಲೂ ಬೆವೆತಿತ್ತು ಮನಸ್ಸು..!

– ಪ್ರಶಾಂತ್ ಯಳವಾರಮಠ

ನನ್ನ ಮುಂದಿನ ಪುಟ್ಟ ಸ್ಕ್ರೀನ್ ಮೇಲೆ ಚಲಿಸ್ತಾ ಇರೋ ವೇಗ ೭೫೦ ಮೈಲ್ಸ್/ಗಂಟೆಗೆ ಅಂತ ಮತ್ತು ಹೊರಗಡೆಯ ತಾಪಮಾನ -೬೩’ಸೆ ಅಂತ ತೋರಿಸ್ತಾ ಇದೆ !!! ನನ್ನ ಹೆಂಡತಿ ಹೇಳಿದಹಾಗೆ ಟೇಕ್ ಆಫ್ ಆಗುವಾಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ನಾನು ಕಣ್ಬಿಟ್ಟಾಗ ಕಂಡ ಮಾಹಿತಿ ಇದು! ಏರ್ ಫ್ರಾನ್ಸ್ ವಿಮಾನದಲ್ಲಿ ಅದೂ ಮೊಟ್ಟಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾ ಇರೋ ನನ್ನ ಹುಚ್ಚು ಮನಸ್ಸಿನಲ್ಲಿ ಸಾವಿರಾರು ಕೆಟ್ಟ ಯೋಚನೆಗಳು ಬಂದು ಮನಸ್ಸು ತನ್ನಷ್ಟಕ್ಕೆ ತಾನೆ ಭಯಬೀತಗೊಂಡಿತ್ತು. ಇದರಿಂದ ಅತ್ತಿಂದಿತ್ತ ನೋಡುತ್ತಾ ಪಕ್ಕದಲ್ಲಿ ಯಾವುದೇ ಫೀಲಿಂಗ್ಸ್ ಗಳು ಇರದೇ ಕುಳಿತುಕೊಂಡಿರುವ ಅಜ್ಜಿಯೊಬ್ಬಳನ್ನು ನೋಡಿ ಧೈರ್ಯತಂದುಕೊಳ್ಳಲು ಪ್ರಯತ್ನಿಸಿದೆ, ನಾನು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ಅದಕ್ಕೆ ಹೀಗೆಲ್ಲ ಅನಿಸುತ್ತಾ ಇದೆ ಅಂಥ ನನ್ನಷ್ಟಕ್ಕೆ ನಾನೆ ಗೊಂದಲಗಳಿಂದ ಕೂಡಿದ ಮನಸ್ಸಿಗೆ ಸಮಾಧಾನ ಹೇಳುತ್ತಾ ಇದ್ದೆ.

ಇವುಗಳ ಮದ್ದೆ ತಮ್ಮ ನಾಜೂಕಾದ ನಡಿಗೆಗಳಿಂದ ಮುಖದಲ್ಲಿ ತುಂಬು ಮುಗುಳ್ನಗೆಗಳನ್ನು ತುಂಬಿಕೊಂಡ ಗಗನಸಖಿಯರು ಅತ್ತಿಂದಿತ್ತ ಓಡಾಡ್ತಾ ಇದ್ದಾರೆ ಎಷ್ಟೋ ಜನ ಕೆಂಪು ಮುಖಗಳ ವಿದೇಶಿಯರು ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲಿ ಮಾತಾಡುತ್ತ, ನಗುತ್ತಾ ನಿರ್ಭೀತರಾಗಿ ಹರಟುತ್ತಿದ್ದಾರೆ. ವಿಮಾನದಲ್ಲಿ ಆಗ್ತಾ ಇರೋ ಈ ಎಲ್ಲ ಆಗುಹೋಗುಗಳಿಂದ ನನಗು ಸ್ವಲ್ಪ ಸಮಾಧಾನವಾಗಿ ಮನಸ್ಸು ಹಗುರವಾಯಿತು.

ಮತ್ತಷ್ಟು ಓದು »