ವಿಷಯದ ವಿವರಗಳಿಗೆ ದಾಟಿರಿ

Archive for

13
ಏಪ್ರಿಲ್

ಜಲಿಯನ್ ವಾಲಾಬಾಗ್ ಒಂದು ಘೋರ ನೆನೆಪು

– ಜಯಂತ್ ರಾಮಾಚಾರ್

ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೨ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ ಹಿಂದೂ, ಮುಸ್ಲಿಂ, ಸಿಖ್ ಬಾಂಧವರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು ಈ ಜಲಿಯನ್ ವಾಲಾಬಾಗ್. ಜಲಿಯನ್ ವಾಲಾಬಾಗ್ ಒಂದು ಚಚ್ಚೌಕವಾದ ಪ್ರದೇಶ, ಇದಕ್ಕೆ ಹೋಗಿಬರಲು ಇದ್ದ ದಾರಿಗಳು ವಿರಳ. ಎತ್ತರೆತ್ತರದ ಗೋಡೆಗಳು, ಮಧ್ಯದಲ್ಲಿ ಬಾವಿ, ಮನೆ ಕಟ್ಟಲು ಬಳಸುತ್ತಿದ್ದ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಜಾಗ.

ಏಪ್ರಿಲ್ ೧೩, ೧೯೧೯ ಅಂದು ವೈಶಾಖಿಯ ಸಂಭ್ರಮ. ವೈಶಾಖಿಯ ಸಂಭ್ರಮವೆಂದರೆ ಕಣಜ ತುಂಬಿಸುವ, ಸುಗ್ಗಿಯ ಸಂಭ್ರಮ. ಆದರೆ ಪ್ರತಿ ವೈಶಾಖಿಗೂ ೧೯೧೯ರ ವೈಶಾಖಿಗೂ ವ್ಯತ್ಯಾಸವಿತ್ತು. ಏಕೆಂದರೆ ಅದೇ ಸಮಯದಲ್ಲಿ ಗಾಂಧಿಜಿ ಅವರನ್ನು ಬ್ರಿಟಿಶ್ ಸರ್ಕಾರ ಬಂಧಿಸಿತ್ತು. ಅದರ ಪ್ರತೀಕಾರ ತೀರಿಸಿಕೊಳ್ಳಲು ಜನ ಹಾತೊರೆಯುತ್ತಿದ್ದರು. ಎಂದಿನಂತೆ ಹೊರವಲಯದಲ್ಲಿ ಸೇರದ ಜನ ಅಂದು ಜಲಿಯನ್ ವಾಲಾಬಾಗ್ ನಲ್ಲಿ ಸುಮಾರು ೨೦ ಸಾವಿರ ಮಂದಿ ನೆರೆದಿದ್ದರು. ಸುತ್ತಲೂ ಜನ ಮಧ್ಯದಲ್ಲಿ ವೇದಿಕೆಯಿದ್ದು ಅದರ ಮೇಲೆ ಹಂಸರಾಜ್ ಎಂಬುವವರು ಭಾಷಣ ಶುರು ಮಾಡಿದ್ದರು. ಭಾಷಣ ಶುರುವಾಗಿ ಹೆಚ್ಚು ಸಮಯವೇನು ಆಗಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ತನ್ನ ಸೈನ್ಯದೊಂದಿಗೆ ಆಗಮಿಸಿದ ಜನರಲ್ ಡಯರ್ ನೇರವಾಗಿ ಗುಂಡಿನ ಸುರಿಮಳೆಗೈಯ್ಯಲು ಆದೇಶವಿತ್ತ. ಸಂಜೆ ಐದೂವರೆಗೆ ಶುರುವಾದ ಈ ಹತ್ಯಾಕಾಂಡ ಕೆಲವೇ ಕೆಲವು ನಿಮಿಷಗಳಲ್ಲಿ ಸುಮಾರು ಎರಡು ಸಾವಿರ ಮಂದಿಯ ಪ್ರಾಣ ತೆಗೆದು ಹಾಕಿತ್ತು.

ಮತ್ತಷ್ಟು ಓದು »

13
ಏಪ್ರಿಲ್

ರಾಷ್ಟ್ರೀಯ ಪಕ್ಷಗಳ ಒಡೆದು ಆಳುವ ನೀತಿ…!

– ಚೇತನ್ ಜೀರಾಳ್

ಕಳೆದ ಎರಡು ವಾರಗಳಲ್ಲಿ ನಡೆದಿರುವ ಸುದ್ದಿಗಳ ಬಗ್ಗೆ ನಿಮ್ಮ ಗಮನ ಹರಿಸಲು ಇಷ್ಟಪಡುತ್ತೇನೆ. ಪತ್ರಿಕೆಗಳಲ್ಲಿ ಕೇವಲ ಸುದ್ದಿ ಎನ್ನುವಂತೆ ಇವುಗಳನ್ನು ಬಿತ್ತರಿಸಲಾಯಿತು, ಆದರೆ ಇವುಗಳ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ.

ಮರುಚುನಾವಣೆ ಹಾಗೂ ತೆಲುಗಿನಲ್ಲಿ ಭಾಷಣ:
ಮೊನ್ನೆ ನಡೆದ ಮರುಚುನಾವಣೆಯ ಪ್ರಚಾರಕ್ಕಾಗಿ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡವು, ಅದಕ್ಕಾಗಿಯೇ ಹೊರರಾಜ್ಯದ ಚಲನಚಿತ್ರ ನಟ/ನಟಿಯರನ್ನು ಕರೆಸಿದ್ದವು. ಮತದಾರನನ್ನು ಓಲೈಸುವ ಭರದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಿರುವ ತಪ್ಪುಗಳು ಮಾತ್ರ ಬಹಳ ದೊಡ್ಡದಾಗಿವೆ. ಬಂಗಾರ ಪೇಟೆಯಲ್ಲಿ ನಡೆದ ಉಪಚುನಾವಣೆಗಾಗಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಲಗು ಚಿತ್ರನಟ ಚಿರಂಜೀವಿಯನ್ನು ಬಳಸಿಕೊಂಡಿತ್ತು. ಅವರು ಸಹ ಭರ್ಜರಿಯಾಗಿ ತೆಲುಗಿನಲ್ಲಿ ಭಾಷಣ ಮಾಡಿ ಹೊರಟು ಹೋದರು. ಇದರಲ್ಲಿ ತಪ್ಪೇನು ಅಂತೀರಾ? ಮತದಾರನನ್ನು ಓಲೈಸುವ ಭರದಲ್ಲಿ ಕರ್ನಾಟಕದ ವಿವಿಧ ಭಾಷಿಕರಲ್ಲಿ ಒಡಕುಂಟು ಮಾಡಲಾಗುತ್ತಿದೆ. ಮೊನ್ನೆ ನಡೆದಿದ್ದು ಸಹ ಅದೇ, ಹಲವು ಶತಮಾನ ಅಥವಾ ಹಲವು ದಶಕಗಳಿಂದ ಇಲ್ಲಿ ನೆಲೆಸಿರುವ ತೆಲುಗು ಭಾಷಿಕರು ಕನ್ನಡದವರೇ ಆಗಿಹೋಗಿದ್ದಾರೆ. ಆದರೆ ನೀವು ತೆಲುಗರು ನೀವು ಕನ್ನಡಿಗರಲ್ಲಾ ಅಂತಾ ತೋರಿಸೋ ಪ್ರಯತ್ನಗಳೇ ಚಿರಂಜೀವಿ ಯಂತಹ ತೆಲುಗು ನಟರನ್ನು ಕರೆದುಕೊಂಡು ಬಂದು ಕರ್ನಾಟಕದಲ್ಲಿ ಭಾಷಣ ಮಾಡಿಸುವುದು. ಕರ್ನಾಟಕದ ಜನರನ್ನ ಓಲೈಸಲು ಆಂಧ್ರಪ್ರದೇಶದ ಕರಾವಳಿ ತೀರದ ಒಬ್ಬ ನಟ ಬಂದು ನೀವು ಕನ್ನಡಿಗರಲ್ಲಾ ಎಂದು ಸಂದೇಶ ನೀಡಿಸುವ ಕೆಲಸ ಮಾಡುತ್ತಿರುವ ಪಕ್ಷಗಳು ಮಾಡುತ್ತಿರುವುದಾದರು ಏನು ಅನ್ನೋದನ್ನ ತಾವೇ ಪ್ರಶ್ನಿಸಿಕೊಳ್ಳಲಿ.

ಮತ್ತಷ್ಟು ಓದು »