‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ
*ರಶ್ಮಿ. ಕಾಸರಗೋಡು
ಶರದ್ ಪವಾರ್ ಜೀ,
ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು …ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ?
ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ? ‘ಎಂಡೋ’ ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ. ಈ ಜನರ ಸಂಕಷ್ಟಕ್ಕೆ ನಿಮ್ಮ ಮನ ಮರುಗದೇ ಇದ್ದರೆ ನಿಮ್ಮದು ‘ಕಲ್ಲು ಹೃದಯ’ ಅಂತಾ ಅಂದುಕೊಳ್ಳುತ್ತೀನಿ.
ಮತ್ತಷ್ಟು ಓದು
ಹಿಂದಿ ಬೇಕು …. ಕೂಪಮಂಡೂಕತನ ಬೇಡ……..
*ಅನಿರುದ್ಧ ಕುಮಟ
ಮಕ್ಕಳ ಜಗಳದಲ್ಲಿ ಅಮ್ಮ ಬಡಪಾಯಿಯಾದಳು ಅಂತ ಒಂದು ಗಾದೆ ಮಾತು ಇದೆಯಾ? ಇಲ್ಲದಿರಲೂಬಹುದು. ಆದರೆ ನಿಮ್ಮ ಕನ್ನಡದ ಜಗಳ, ಆ ನೀರಿನ ಜಗಳ, ಆ ಧಾರ್ಮಿಕ ಕಲಹ ಇವನ್ನೆಲ್ಲ ನೋಡಿದಾಗ ನನಗೆನಿಸಿದ್ದು ಅಮ್ಮ ಬಡವಾಗಿದ್ದಾಳೆ ಅಂತ. ಅಲ್ಲಾರಿ ನೀವು ಪಕ್ಕದ ಮರಾಠಿಗರನ್ನು ಕಂಡರೆ ಬೆಂಕಿಕಾರುತ್ತಿರಿ. ಪಾಪ ಆ ತಮಿಳರು ಇಲ್ಲಿ ಬೆಳೆದರೆ ಕರಬುತ್ತೀರಿ. ಅಥವಾ ನೀರಿನ ವಿಷಯ ಹಿಡಿದುಕೊಂಡು ಸುನಾಮಿಯಂತೆ ಜಗಳ ಮಾಡುತ್ತೀರಿ…ಥಕ್ ನಿಮ್ಮ ಇಂತಹ ಜಗಳದಲ್ಲಿ ಬಡವಾದದ್ದು ಯಾರು. ಭಾರತವಲ್ಲವೇ. ಇಡೀ ಭಾರತದ ಬಗ್ಗೆ ಯೋಚಿಸಬೇಕಾದ ನಾವೆಲ್ಲ, ದಾಯಾದಿಗಳ ತರಹ ಯಾಕೆ ಕಿತ್ತಾಡಿಕೊಳ್ಳಬೇಕು? ನಿಮಗೆ ನಿಮ್ಮ ಬಗ್ಗೆಯೇ ಅಸಹ್ಯ ಎನಿಸುವುದಿಲ್ಲವೇ?
ಹಿಂದಿ ಜ್ವರಕ್ಕೆ ತುತ್ತಾದ ವಿಜಯ ಕರ್ನಾಟಕ ಅನ್ನೋ ಹೆಡ್ ಲೈನ್ ನಲ್ಲಿ ಪ್ರಕಟವಾದ ಲೇಖನವನ್ನೇ ನೋಡಿ. ಪತ್ರಿಕೆಯಲ್ಲಿ ವಿದೇಶಿಯರ ಹಿಂದಿ ಮೋಹ ಅನ್ನೋ ಲೇಖನ ಪ್ರಕಟಗೊಂಡರೆ ಸಾಕು. ಜಗತ್ತಿನಲ್ಲಿರುವ ಸಮಸ್ತ ಕನ್ನಡ ಪುಸ್ತಕಗಳೆಲ್ಲ ಬೆಂಕಿಯಲ್ಲಿ ಉರಿದು ಹೋಯ್ತು ಅನ್ನೋ ತರಹ ಯಾಕೆ ಉರಿದು ಹೋಗ್ತಿರಿ. ಅರೇ ಅದೊಂದು ಪತ್ರಿಕೆ. ಅದರಲ್ಲಿ ಭಿನ್ನ, ವಿಭಿನ್ನ ವಿಚಾರಧಾರೆಯ ಲೇಖನಗಳು ಪ್ರಕಟಗೊಳ್ಳುತ್ತವೆ. ಅವರೇನೂ ಹಿಂದಿಯಲ್ಲಿ ಬರೆದಿಲ್ಲ ನನಗಂತೂ ಕನ್ನಡಿಗರಲ್ಲಿ ಹಿಂದಿ ಕಲಿಸುವ ಒಂದು ಪ್ರಯತ್ನದಂತೆ ಆ ಲೇಖನ ಕಾಣಲೇ ಇಲ್ಲ. ನನ್ನ ಪ್ರಕಾರ ಕನ್ನಡಿಗರು ಮತ್ತಷ್ಟು ಓದು