ರಾಜು ಪ್ರಿಯಾಂಕಳಾಗಿ ಬದಲಾದ ರೀತಿ…!
-ನಾಗರಾಜ್, ಬೆಂಗಳೂರು
ನಮಸ್ಕಾರ ಕೇಳುಗರೇ ನೀವು ಕೇಳ್ತಾ ಇದ್ದೀರಾ ೯೦.೪ ಕಂಪನಾಂಕಗಳಲ್ಲಿ ರೇಡಿಯೊ ಆಕ್ಟೀವ್. ಇದೇನಪ್ಪ ನ್ಯೂಸ್ ಲೆಟರ್‌ನಲ್ಲಿ ರೇಡಿಯೋ ಸ್ಟೈಲ್ ಅಂತಾ ಇದ್ದೀರಾ ಇಲ್ಲ ರೀ ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಹುಡುಗಿ ರೇಡಿಯೋ ಜಾಕಿ ಪ್ರಿಯಾಂಕ ಸ್ಟೈಲ್. ಇದ್ಯಾರು ಪ್ರಿಯಾಂಕ ಅಂತ ಯೋಚಿಸ್ತಾ ಇದ್ದಿರಾ ? ಅವರೇ ರೀ ನೆನ್ನೆ ಮೊನ್ನೆ ತನಕ ಲೈಂಕಿಕ ವೃತ್ತಿಯನ್ನು ಮಾಡುತ್ತಿದ್ದ ಟ್ರಾನ್ಸ್ ಜೆಂಡರ್ ಪ್ರಿಯಾಂಕ.
ರಾಜು ಪ್ರಿಯಾಂಕಳಾಗಿ ಬದಲಾದ ರೀತಿ
ಪ್ರಿಯಾಂಕಳ ಮೊದಲ ಹೆಸರು ರಾಜು ಓದಿದ್ದು ೯ನೇ ತರಗತಿ ಮಾತ್ರ ತಾನು ೯ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡ್ತಾ ಇರುವಾಗ ಎಲ್ಲರಂತೆ ತನ್ನಲ್ಲಿ ಅನೇಕ ಬದಲಾವಣೆಗಳು ಆಗತೊಡಗಿದವು ತನಗೆ ಹುಡುಗಿಯ ಆವಭಾವ ಉಂಟಾಗುತ್ತಿತ್ತು. ಬೆರಳುಗಳಿಗೆ ನೈಲ್ ಪಾಲೀಷ್ ಹಾಕಿಕೊಳ್ಳುವುದು ಲಿಪ್‌ಸ್ಟೀಕ್ ಹಚ್ಚಿಕೊಳ್ಳಬೇಕು ಹೀಗೆ ಅನೇಕ ರೀತಿಯಾಗಿ ಹುಡುಗಿಯರ ಥರಾ ಮೇಕಪ್ ಮಾಡಿಕೊಳ್ಳತೊಡಗಿದ ಜೊತೆಗೆ ತನ್ನ ಕೈಲಿ ಹುಡುಗರು ಮಾಡುವ ಸಾಮಾನ್ಯ ಕೆಲಸಗಳನ್ನು ಮಾಡುವುದು ಕಷ್ಟವೆನಿಸಿತು. ಅದೇ ರಂಗೋಲಿ ಹಾಕು, ಪಾತ್ರೆ ತೊಳಿ, ಮನೆ ಒರೆಸು, ಬಟ್ಟೆ ಒಗಿ ಅಂದ್ರೆ ಎಲ್ಲಿಲ್ಲದ ಸಂತೋಷ. ಹೀಗೆ ರಾಜುವಿನಲ್ಲಿನ ಬದಲಾವಣೆಗಳನ್ನು ಕಂಡ ಸ್ನೇಹಿತರು ಹಿಯಾಳಿಸತೊಡಗಿದರು, ಶಿಕ್ಷಕರು ಸಹ ಕೀಳಾಗಿ ಕಂಡರು ಅಂತೂ ಇಂತು ೯ನೇ ತರಗತಿಯಲ್ಲಿ ಓದುತ್ತಿದ್ದ ರಾಜು ತನ್ನ ಪೋಷಕರ ಬಳಿ ತನ್ನಲ್ಲಾಗುತ್ತಿರುವ ಬದಲಾವಣೆಗಳು, ಆಸೆಗಳು ಎಲ್ಲವನ್ನೂ ಎಲೆ ಎಲೆಯಾಗಿ ಬಿಚ್ಚಿಟ್ಟ ಆದ್ರೆ ಇದಕ್ಕೆ ಪೋಷಕರ ಬೆಂಬಲ ಸಿಗಲಿಲ್ಲ. ಇದನ್ನು ಅರಿತ ೧೪ ವರ್ಷದ ರಾಜು ೯ನೇ ತರಗತಿಗೆ ಮದ್ಯದಲ್ಲೇ ತಿಲಾಂಜಲಿ ಆಡಿ ಮನೆ ಬಿಟ್ಟು ತನ್ನದೇ ಪ್ರಪಂಚಕ್ಕೆ ಓಡಿ ಹೋದ ಹೊಟ್ಟೆಪಾಡಿಗಾಗಿ ಸಿಕ್ಕ ಸಿಕ್ಕಲ್ಲಿ ಕೆಲ್ಸ ಮಾಡಿದ ಆದ್ರೆ ತನ್ನೊಳಗಿನ ಬಾವಣೆಗಳು ಮಾತ್ರ ಕಾಡುತ್ತಾ ಇತ್ತು. ಹೇಗೋ ರಾಜು ಬೆಂಗಳೂರು ಬಿಟ್ಟು ಬಾಂಬೆ ಸೇರಿಕೊಂಡು ಲೈಂಗಿಕ ವೃತ್ತಿಯನ್ನು ಪ್ರಾರಂಬಿಸಿದ ಬಿಕ್ಷಾಟನೆಯಲ್ಲಿ ತೊಡಗಿದ ಅದರಲ್ಲಿ ಮೂರು ಕಾಸು ಕೂಡಾಕಿ ತನ್ನ ಆಸೆಯಂತೆ ಹುಡುಗನಿಂದ ಹುಡುಗಿಯಾಗಿ ೨೦೦೧ ರಲ್ಲಿ ಲಿಂಗ ಪರಿವರ್ತನೆಯನ್ನು ಮಾಡಿಸಿಕೊಂಡು ರಾಜು ಆಗಿದ್ದ ಹುಡುಗ ಪ್ರಿಯಾಂಕಳಾಗಿ ಮಾರ್ಪಟ್ಟಲು.
ಪ್ರಿಯಾಂಕಳಾದ ಬಳಿಕ
ಸಂಪೂರ್ಣವಾಗಿ ಹುಡುಗಿಯಾದ ಪ್ರಿಯಾಂಕ ತನ್ನ ಬಿಕ್ಷಾಟನೆ ಮತ್ತು ಲೈಂಕಿಕ ವೃತ್ತಿಯನ್ನು ಮುಂದುವರೆಸಿದಳು. ಲೈಂಕಿಕ ವೃತ್ತಿಯನ್ನು ಮುಂದುವರೆಸುತ್ತಾ ಹೋದಂತೆ ಹಲವಾರು ತೊಂದರೆಗಳು ಸಹ ಉಂಟಾದವು ಅನೇಕ ಬಾರಿ ಗೂಂಡಾಗಳು, ಮತ್ತು ಪುಂಡರ ಕೈಗೆ ಸಿಕ್ಕ ಪ್ರಿಯಾಂಕ ಅನೇಕ ಕಷ್ಟಗಳನ್ನು ಅನುಭವಿಸಿದಳು ಇಂತಹವರಿಗೆ ಆಗುತ್ತಿರುವ ತೊಂದರೆ ನಿವಾರಣೆ ಮತ್ತು ಸಹಾಯಕ್ಕಾಗಿ ಸಂಗಮ ಸಂಸ್ಥೆಯು ಸಮರ ಸಂಸ್ಥೆಯನ್ನು ಹುಟ್ಟುಹಾಕಿತ್ತು ಸಮರ ಸಂಸ್ಥೆಯು ಲೈಂಗಿಕ ಅಲ್ಪಸಂಖ್ಯಾತರಿಗೆ ಸಹಾಯ ಮಾಡುತ್ತಿದ್ದುದ್ದು ಗೊತ್ತಾಗಿ ಸಮರ ಸಂಸ್ಥೆಗೆ ಹೋಗಿ ನೋವುಗಳನ್ನು ಮತ್ತು ಕಷ್ಟಗಳನ್ನು ಹಂಚಿಕೊಂಡಳು ನಂತರ ಅಲ್ಲಿಯೇ ಸಮರ ಸಂಸ್ಥೆಗೆ ಸೇರಿ ಹಲವಾರು ಪ್ರತಿಭಟನೆಗಳು, ಹೋರಾಟಗಳು ಮತ್ತು ರ್ಯಾಲಿಗಳಲ್ಲಿ ಭಾಗವಹಿಸುವುದರ ಜೊತೆಗೆ ಸಮರ ಸಂಸ್ಥೆಯ ಹಲವಾರು ಕೆಲಸಗಳನ್ನು ಮಾಡಿದ ಪ್ರಿಯಾಂಕ ಅಲ್ಲಿ ಸಹ ಸೈ ಅನಿಸಿಕೊಂಡಳು. ಹೀಗೆ ಸಮರದಲ್ಲಿ ಕೆಲಸ ಮಾಡುತ್ತಿರಬೇಕಾದರೆ ರೇಡಿಯೋ ಆಕ್ಟೀವ್‌ನ ತಂಡ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಟ್ರಾನ್ಸ್‌ಜೆಂಡರ್ಸ್‌ರ ಜೀವನ ಶೈಲಿ ಬಗ್ಗೆ ಕಾರ್ಯಕ್ರಮ ಧ್ವನಿಮುದ್ರಿಸಲು ಬಂದರು ಆ ಸಮಯದಲ್ಲಿ ಪ್ರಿಯಾಂಕ ಪಟಪಟನೆ ಮಾತಾಡಿ ಒಳ್ಳೆ ಕಾರ್ಯಕ್ರಮವನ್ನು ನೀಡಿದರು. ಹೀಗೆ ದ್ವನಿಮುದ್ರಿತ ಕಾರ್ಯಕ್ರಮ ರೇಡಿಯೋದಲ್ಲಿ ಪ್ರಸಾರವಾದಾಗ ಅದನ್ನ ಕೇಳಿ ಪ್ರಿಯಾಂಕ ಸಂಭ್ರಮಿಸಿದಳು. ಆಗ ಅವಳ ಮನಸ್ಸಿನಲ್ಲಿ ನಾನು ಯಾಕೆ ರೇಡಿಯೋ ಜಾಕಿ ಆಗಬಾರದು ಅನ್ನೋ ಆಲೋಚನೆ ಬಂತು ಆದ್ರೆ ನನಗೆ ಯಾರು ಕೊಡ್ತಾರೆ ರೇಡಿಯೋ ಜಾಕಿ ಕೆಲ್ಸ ಓದಿರೋದು ೯ನೇತರಗತಿ ಅಷ್ಟೆ ಅನ್ನೋ ಬೇಸರ ಉಂಟಾಯಿತು.
ಆರ್.ಜೆ ಯಾಗಿ ಪ್ರಿಯಾಂPಳ ಸಾಧನೆ
ಇತ್ತ ಕಡೆ ಪ್ರಿಯಾಂಕ ಹಲವಾರು ಬಾರಿ ರೇಡಿಯೋ ಆಕ್ಟೀವ್ ನಲ್ಲಿ ಕಾರ್ಯಕ್ರಮವನ್ನು ನೀಡುತ್ತಾ ಹೋದಳು. ಕಡೆಗೆ ಒಮ್ಮೆ ರೇಡಿಯೋ ಆಕ್ಟೀವ್ ಕಡೆಯಿಂದ ಒಂದು ಸುವರ್ಣಾವಕಾಶ ಒದಗಿ ಬಂತು ಅದೇನು ಅಂದ್ರೆ ಸಮುದಾಯದಿಂದ ಯಾರಾದ್ರು ರೇಡಿಯೋ ಜಾಕಿಯಾಗಿ ನಿಭಾಯಿಸುವ ಕೆಲ್ಸ ಇದು ಪ್ರಿಯಾಂಕಗೆ ಎಲ್ಲಿಲ್ಲದ ಸಂಭ್ರಮ ಯಾಕೆ ಅಂದ್ರೆ ಸಮುದಾಯದಿಂದ ಆಯ್ಕೆ ಮಾಡಿದ್ದು ಸಹ ಪ್ರಿಯಾಂಕಳನ್ನ ಕಡೆಗೂ ತನ್ನ ಮಹದಾಸೆಯ ರೇಡಿಯೋ ಜಾಕಿಯ ಕೆಲಸಕ್ಕೆ ಸೇರಿ ತನ್ನ ಆಸೆಯನ್ನು ತೀರಿಸಿಕೊಂಡಳು.
ಈಗ ಪ್ರಿಯಾಂಕ ರೇಡಿಯೋ ಜಾಕಿಯಾಗಿ ಪಟಪಟನೆ ನಿರರ್ಗಳವಾಗಿ ಮಾತಾಡುತ್ತಾಳೆ. ರೇಡಿಯೋ ಆಕ್ಟೀವ್ ಕೇಳುಗರಿಗೆ ಪ್ರಿಯಾಂಕಳ ಮಾತಿನ ದಾಟಿ ಎಂದರೆ ತುಂಬಾ ತುಂಬಾ ಇಷ್ಟಪಡುತ್ತಾರೆ. ಎಲ್ಲಾ ದಿನಪತ್ರಿಕೆಗಳಲ್ಲಿ, ಟಿ.ವಿ ವಾಹಿನಿಗಳಲ್ಲಿ ಪದೇ ಪದೇ ಕಾಣಿಸಿಕೊಂಡ ಪ್ರಿಯಾಂಕ ಜನಪ್ರಸಿದ್ದಿಯಾಗಿದ್ದಾಳೆ. ಇತ್ತೀಚೆಗೆ ಬೆಂಗಳೂರಿನ ಆಲ್ ಇಂಡಿಯಾ ರೇಡಿಯೋದ (ಂIಖ) ಎಫ್.ಎಂ. ರೈನ್‌ಬೋನಲ್ಲಿ ಕಾಕಂಭಿ ಕಾರ್ಯಕ್ರಮದಲ್ಲಿ ಪ್ರಿಯಾಂಕಳ ಬಗ್ಗೆ ಒಂದು ಗಂಟೆಯ ಕಾಲ ಕಾರ್ಯಕ್ರಮವನ್ನು ಮಾಡಿದರು ಇದರಿಂದ ಪ್ರಿಯಾಂಕಳ ಜನಪ್ರಿಯತೆ ಇನ್ನೂ ಹೆಚ್ಚಾಯಿತು. ಪ್ರಿಯಾಂಕ ತಮ್ಮ ರೇಡಿಯೋ ಜಾಕಿ ಕೆಲಸದ ಜೊತೆಗೆ ಸಮುದಾಯದ ಹೋರಾಟಕ್ಕೆ ಕೈ ಜೋಡಿಸುತ್ತಾಳೆ ಮತ್ತು ವಾರಕ್ಕೊಮ್ಮೆ ಸಮುದಾಯದವರ ಬಗ್ಗೆ ಕಾರ್ಯಕ್ರಮ ಮಾಡುತ್ತಾಳೆ. ಇದೆಲ್ಲದರ ಜೊತೆಗೆ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಸಮುದಾಯ ರೇಡಿಯೋ ಬಗ್ಗೆ ತರಬೇತಿ ನೀಡುತ್ತಾ ಇತರರಿಗೂ ಮಾರ್ಗದರ್ಶಿಯಾಗಿ ತನ್ನ ಪ್ರತಿಭೆಯನ್ನು ಇನ್ನಷ್ಟು ಇಮ್ಮುಡಿಗೊಳಿಸ್ತಾ ಇದ್ದಾಳೆ.
ಮುಂದಿನ ಗುರಿ……
ಟ್ರಾನ್ಸ್‌ಜೆಂಡರ್ ಆಗಿ ಇಷ್ಟೆಲ್ಲಾ ಸಾಧನೆ ಮಾಡಿದ ಪ್ರಿಯಾಂಕಳಿಗೆ ಇನ್ನೆರಡು ಮಹದಾಸೆಗಳು ಇವೆ ಒಂದು ತಾನು ಯಾವುದಾದರು ಟಿ.ವಿ ವಾಹಿನಿಯಲ್ಲಿ ಕೆಲಸ ಮಾಡುವುದು. ಮತ್ತೊಂದು ತನ್ನ ಸಮುದಾಯದ ಜನರು ಲೈಂಗಿಕ ವೃತ್ತಿ ಮತ್ತು ಬಿಕ್ಷಾಟನೆಯನ್ನು ಬಿಟ್ಟು ಬೇರೆ ಎಲ್ಲಿಯಾದರು ಸಮಾಜದಲ್ಲಿ ಒಳ್ಳೆ ಕೆಲಸ ಮಾಡುವ ಹಾಗೆ ಮಾಡಬೇಕು ಅನ್ನೋದು ಇದಕ್ಕಾಗಲೇ ಪ್ರಿಯಾಂಕ ಯೋಜನೆಯನ್ನು ಸಹ ಮಾಡಿದ್ದಾಳೆ. ಇಷ್ಟೆಲ್ಲಾ ಸಾಧನೆ ಮಾಡಿದ ಪ್ರಿಯಾಂಕಳನ್ನ ಯಾರು ಸಹ ತಾನು ಟ್ರಾನ್ಸ್‌ಜೆಂಡರ್ ಅನ್ನೋದನ್ನೆ ಮರೆತು ಸಾಮಾನ್ಯ ಹುಡುಗಿಯಂತೆ ಕಾಣುತ್ತಿದ್ದಾರೆ ಇದರ ಜೊತೆಗೆ ತನ್ನ ಲೈಂಗಿಕ ವೃತ್ತಿಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರ ಹಾಗೆ ಸ್ವಚ್ಚಂದ ಜೀವನವನ್ನು ನಡೆಸುತ್ತಾ ಇದ್ದಾಳೆ.
ಕೈ ಜೋಡಿಸಿ
ಪ್ರಿಯಾಂಕಳ ಮಹದಾಸೆಗಳನ್ನು ಈಡೇರಿಸಲು ಟಿ.ವಿ ವಾಹಿನಿಯವರು ಪ್ರಿಯಾಂಕಳ ವಾಕ್‌ಚಾತುರ್ಯವನ್ನು ಗುರ್ತಿಸಿ ಟಿ.ವಿ. ವಾಹಿನಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕಿದೆ. ಮತ್ತು ಸಮುದಾಯದವರ ಏಳಿಗೆಗಾಗಿ ಪ್ರಿಯಾಂಕಳ ಆಲೋಚನೆಗೆ ಮತ್ತು ಯೋಜನೆಗೆ ಖಾಸಗಿ ಸಂಸ್ಥೆಯವರು ಬೆಂಬಲ ಸೂಚಿಸಲು ಮುಂದೆ ಬರಬೇಕಾಗಿದೆ.
(ಚಿತ್ರ ಕೃಪೆ :http://www.findyourfate.com)





