ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 20, 2011

7

ಡಬ್ಬಿಂಗ್ ಬೇಕು/ಬೇಡ ಅನ್ನೋದನ್ನ ಪ್ರೇಕ್ಷಕ ನಿರ್ಧಾರ ಮಾಡ್ಲಿ

‍ನಿಲುಮೆ ಮೂಲಕ
ಮನೋರಂಜನೆ ಎನ್ನೋದು ಎಲ್ಲರ ಹಕ್ಕು, ಒಬ್ಬ ವ್ಯಕ್ತಿ ಮನೊರಂಜನೆಯನ್ನು ತನ್ನ ಭಾಷೆಯಲ್ಲೆ ಪಡೆಯುವುದು ಕೂಡ ಆ ವ್ಯಕ್ತಿಯ ಹಕ್ಕೂ ಕೂಡ. ಇದನ್ನ ತಡೆಯಲು ಯಾವುದೇ ಕಾನೂನು ಮುಂದೆಬರುವುದಿಲ್ಲ. ಇದಕ್ಕಾಗಿಯೇ ಇರಬೇಕು ಇಂದಿಗೂ ಕನ್ನಡಕ್ಕೆ ಡಬ್ ಮಾಡಬಾರದು ಅನ್ನೋ ಕಾನೂನು ಇಲ್ಲ.
ಚಲನಚಿತ್ರಗಳು, ವಾಣಿಜ್ಯ ಮಂಡಳಿ ಅಥವಾ ಇನ್ಯಾವುದೋ ಸಂಸ್ಥೆ ಪ್ರೇಕ್ಷಕನಿಗೆ ನೀಡುತ್ತಿರುವ ಬಿಕ್ಷೆಯಲ್ಲ. ಪ್ರತಿಯೊಬ್ಬ ಪ್ರೇಕ್ಷಕನೂ ತನಗೆ ಬೇಕಾದ ಚಿತ್ರವನ್ನು ದುಡ್ಡು ಕೊಟ್ಟು ನೋಡ್ತಾನೆ ಹೊರೆತು ಬಿಟ್ಟಿಯಾಗಿ ಅಲ್ಲ. ಅದರಿಂದ ಯಾವ ಸಿನೆಮಾ ನೋಡ್ಬೇಕು ಅಥವಾ ಯಾವ ಸಿನೆಮಾ ನೋಡ್ಬಾರ್ದು ಅನ್ನೊದನ್ನ ಪ್ರೇಕ್ಷಕ ನಿರ್ಧಾರ ಮಾಡ್ತಾನೆ. ಕಾನೂನು ಇಲ್ಲದಿದ್ದರೂ ಸಹ, ಕನ್ನಡಿಗನಿಗೆ ಪ್ರಪಂಚದ ಒಳ್ಳೆಒಳೆಯ ಚಿತ್ರಗಳನ್ನು ತನ್ನ ಭಾಷೆಯಲ್ಲೇ ನೋಡಲು ಆಗದಿರುವಂತೆ ಮಾಡಿರುವುದು ಗೋರ ಅಪರಾದ ಮತ್ತು ಇದು ಮಾನವ ಹಕ್ಕುಗಳ ಉಲ್ಲಂಗನೆ ಅಂತಲೂ ಹೇಳಬಹುದಾಗಿದೆ.
ಇಂದು ಡಬ್ಬಿಂಗ್ ಅನ್ನು ವಿರೋಧಿಸುತ್ತಿರುವವರು ಪರಭಾಶೆಯ ಚಿತ್ರವನ್ನೇ ನೋಡುತ್ತಿಲ್ಲ ಎಂದೇನಿಲ್ಲ. ಡಬ್ಬಿಂಗ್ ಸಿನೆಮಾ ಬಿಡುಗಡೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಹೇಳೋ ಚಿತ್ರರಂಗದ ನಾಯಕರೊಬ್ಬರ ಮನೆಯಲ್ಲಿ ಇಂದಿಗೂ ಪರಭಾಷೆಯ ಚಿತ್ರಗಳನ್ನ ತಮ್ಮ ಮನೆಗೇ ತರಿಸಿಕೊಂಡು ನೋಡೋ ಸಂಪ್ರದಾಯ ಇದೆಯಂತೆ….. ರಜನೀಕಾಂತ್ ಸೇರಿದಂತೆ ಹಲವಾರು ನಟರ ಅದ್ದೂರಿ ಸಿನೆಮಾಗಳನ್ನು ಬಿಡುಗಡೆಗೂ ಮುಂಚೆ ಈ ಕುಟುಂಬದವರಿಗೆಂದೇ ಒಂದು ಪ್ರದರ್ಶನ ಏರ್ಪಾಡು ಮಾಡಿದ್ದರೆಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಡಬ್ಬಿಂಗ್ ವಿರೋಧಿಸಿ ಕನ್ನಡಿಗರಿಗೆ ಓಳ್ಳೆಯ ಸಿನೆಮಾಗಳನ್ನು ನೋಡದಂತೆ ಮಾಡಿರೋ ಜನ ತಾವು ಮಾತ್ರ ಆ ಒಳ್ಳೆಯ ಸಿನೆಮಾಗಳನ್ನು ನೋಡೋದನ್ನ ಮಾತ್ರ ಮರೆತಿಲ್ಲ.
ಡಬ್ಬಿಂಗ್ ನಿಂದ ಕನ್ನಡದ ಸಂಸ್ಕೃತಿ ಹಾಳಾಗುತ್ತೆ ಅನ್ನೋ ಜನ ಅದೇ ಕನ್ನಡದ ಚಿತ್ರಗಳನ್ನ ಪರಭಾಷೆಗೆ ಡಬ್ ಮಾಡಿದಾಗ, ತಮ್ಮ ಮಾತನ್ನ ತಾವೇ ಮರೆತುಹೋಗುತ್ತಾರೆ. ನಿಜವಾಗಿಯೂ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡದ ಸಂಸ್ಕೃತಿ ಹಾಳಾಗೋದಾದ್ರೆ, ಕನ್ನಡ ಚಿತ್ರ ಬೇರೆ ಭಾಷೆಗೆ ಡಬ್ ಆದಾಗ ಆ ಭಾಷೆಯ ಸಂಸ್ಕೃತಿ ಹಾಳಾಗೋದಿಲ್ವ?
ಡಬ್ಬಿಂಗ್ ನಿಂದ ತೊಂದರೆಗೆ ಒಳಗಾಗೋರು ಒಬ್ರೆ, ಅವ್ರು talent ಇಲ್ಲದೇ ಪರಭಾಷೆಯ ಚಿತ್ರಗಳನ್ನ ಬಟ್ಟಿ ಇಳಿಸಿ ಇದಕ್ಕೆ ಇನ್ಯಾವುದನ್ನೋ ಸೇರಿಸಿ ಕಲೆಸಿ/ಬೆರೆಸಿ ರೀಮೇಕ್ ಮಾಡೋ ಜನ ಮಾತ್ರ. ಕನ್ನಡ ಚಿತ್ರರಂಗದಲ್ಲಿರೋ ನಿಜವಾದ talent ಗಳಿಗೆ ಡಬ್ಬಿಂಗ್ ಅಲ್ಲ, ಇನ್ಯಾವುದೋ ಒಂದು ಬೇರೆ ಗ್ರಹದಿಂದ ಇಳಿದು ಬಂದ್ರು ತೊಂದರೆ ಆಗಲ್ಲ. ಡಬ್ಬಿಂಗ್ ಕನ್ನಡ ಚಿತ್ರ ರಂಗನ ಜರಡಿ ಆಡಿ ಇಲ್ಲಿ talent ಇರೋರು ಮಾತ್ರ ಉಳಿಯೋ ಹಾಗೆ ಮಾಡುತ್ತೆ.
ಡಬ್ಬಿಂಗ್ ವಿರೋಧಿಸೋರು ಕನ್ನಡ…ಕನ್ನಡ…..ಅಂತ ಮುಂದೆ ಹೇಳಿ ಹಿಂದೆ ಪರಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡೊಕ್ಕೆ ಹೊರಟು, ಪರಭಾಷೆಯ ಚಿತ್ರರಂಗದ ಏಜೆಂಟ್ಗಳಂತೆ ಆಡ್ತಿರೋದು ಬಹಳ ಆತಂಕಕಾರಿ. ಡಬ್ಬಿಂಗ್ ಗೆ ವಿರೋಧಿಸೋ ಜನ ಪರಬಾಷೆ ಚಿತ್ರ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಕಡೆ ಬಿಡುಗಡೆ ಆಗ್ತಿರೋ ಬಗ್ಗೆ ಯಾಕೆ ಮಾತಾಡ್ತಿಲ್ಲ ಅಥವಾ ಅದಕ್ಕೆ ಪರಹಾರ ಯಾಕೆ ಹುಡುಕ್ತಿಲ್ಲ? ಇದರಿಂದ ನಿಜವಾಗಿಯೂ ಇವರಿಗೆ ಕನ್ನಡದ ಬಗ್ಗೆ ಕಾಳಜಿ ಇದ್ಯ ಅನ್ನೋದೇ ಒಂದು ಪ್ರಶ್ನೆಯಾಗಿದೆ. ಇವರು ಡಬ್ಬಿಂಗ್ ವಿರೋಧಿಸುತ್ತಿರೋದು ತಮ್ಮ ಬೇಳೆ ಬೇಯಿಸಿಕೊಳ್ಳೋಕ್ಕೆ ಹೊರೆತು ಕನ್ನಡಕ್ಕಾಗಿ ಅಲ್ಲ.
ಡಬ್ಬಿಂಗ್ ನಿಂದ ಅದು ಹಾಳಾಗುತ್ತೆ ಇದು ಹಾಳಾಗುತ್ತೆ ಅಂತ ತಮ್ಮ ಬೇಳೆ ಬೇಯಿಸಿಕೊಳ್ಳೊಕ್ಕೆ ಹೊರಟಿರೋ ಜನರ ಮಾತನ್ನ ತಲೆಗೆ ಹಾಕಿಕೊಳ್ಳಬೇಡಿ. ಅದೇ ಜನ ನಾಳೆ ಕಾಫಿ ಶಾಪ್ ಚಿತ್ರ ತೆಲುಗುಭಾಷೆನಲ್ಲಿ ಬಿಡುಗಡೆ ಆದ್ರೆ first day first show ನಲ್ಲಿ ನೋಡ್ತಾರೆ. ಕಾಫಿ ಶಾಪ್ ಚಿತ್ರ ಕನ್ನಡದಲ್ಲಿ ಬಂದ್ರೆ ಒಳ್ಳೆದೇ ಅಲ್ವ? ಸುಮ್ನೆ ಕಾಫಿ ಶಾಪ್ ಚಿತ್ರ ಕನ್ನಡಕ್ಕೆ ಡಬ್ ಆಗೋದನ್ನ ಬೆಂಬಲಿಸಿ. ಬಿಡುಗಡೆ ಆದ್ಮೇಲೆ ಆರಾಮಾಗಿ ಮಲ್ಟಿಪ್ಲೆಕ್ಸ್ ನಲ್ಲಿ ಹೋಗಿ ಕನ್ನಡದಲ್ಲೇ ಸಿನೆಮಾ ನೋಡಿ ಮಜ ಮಾಡಿ.
7 ಟಿಪ್ಪಣಿಗಳು Post a comment
  1. pavan's avatar
    ಏಪ್ರಿಲ್ 20 2011

    ಡಬ್ಬಿಂಗಾದ್ರೂ ಮಾಡ್ಲಿ ಬೇರೆ ಏನನ್ನದ್ರೂ ಮಾಡ್ಲಿ ಒಳ್ಳೆ ಕನ್ನಡ ಸಿನಿಮಾ ಮಾಡ್ಲಿ ಬಿಡಿ ಸಧ್ಯಕ್ಕೆ ಅಷ್ಟು ಮಾಡ್ಲಿ.

    ಉತ್ತರ
  2. Divakar's avatar
    Divakar
    ಏಪ್ರಿಲ್ 20 2011

    i am against it……
    we should encourage own script….

    ಉತ್ತರ
  3. chukkichandira's avatar
    ಏಪ್ರಿಲ್ 20 2011

    ಕನ್ನಡದಲ್ಲಿ ಬರೋ ಡಬ್ಬಾ ಫಿಲ್ಮ್ ಗಳಿಗೆ ಕಡಿವಾಣ ಹಾಕಲಾದರೂ ಡಬ್ಬಿಂಗ್ ಚಿತ್ರಗಳು ಬೇಕು. ಅವತಾರ್ ನಂತಹ ತ್ರಿಡಿ ಫಿಲ್ಮ್ ಗಳನ್ನು ನೋಡಬಹುದು. ಡಬ್ಬಿಂಗ್ ಮಾಡೋದ್ರಿಂದ ಕನ್ನಡಿಗರಿಗೆ ಅನುವಾದ ಇತ್ಯಾದಿ ಸಾಕಷ್ಟು ಉದ್ಯೋಗವಕಾಶನೂ ಸೃಷ್ಟಿಯಾಗುವುದು.

    ಉತ್ತರ
  4. vinayak's avatar
    vinayak
    ಏಪ್ರಿಲ್ 20 2011

    Yes Dubbing is required but not for all.
    I need dubbing for only below things
    – hollywood movies.
    – Science, Technology and educational channels like
    Discovery, National Geographic channel, Animal planet etc.

    And i dont think it is requied for anyother purpose..
    i am satisfied with this.

    ಉತ್ತರ
  5. SY's avatar
    SY
    ಏಪ್ರಿಲ್ 20 2011

    @Divakar – What has dubbing to do with encouraging own script? Dubbing maadilla andre remake madtaare. The point to be noted here is the dubbing ban is not just for films but to TV programs and documentaries regardless of the subject or nature of it.
    I feel this is anti-democratic. Things like this should be left to the consumer to decide. If it is good they will watch else they will not. Banning is not the right way.

    ಉತ್ತರ
    • ರಾಕೇಶ್ ಶೆಟ್ಟಿ's avatar
      ಏಪ್ರಿಲ್ 20 2011

      ಕಡೆ ಪಕ್ಷ,ಕನ್ನಡದ ಬಗ್ಗೆ ಮಾತನಾಡುವಾಗಲಾದರು ಕನ್ನಡ ಬಳಸಿ ಆತ್ಮೀಯ ಕನ್ನಡಿಗರೇ 🙂

      ಉತ್ತರ
  6. Pramod's avatar
    ಏಪ್ರಿಲ್ 20 2011

    ಡಬ್ಬಿಂಗ್ ನಿಂದ ಕನ್ನಡದ ಸಂಸ್ಕೃತಿ ಹಾಳಾಗುತ್ತೆ ಎ೦ಬುದು ಶುದ್ಧ ತಪ್ಪು. ಬರೀ ಸಿನೆಮಾದಿ೦ದ ಸ೦ಸ್ಕೃತಿ ಹೇಗೆ ಹಾಳಾಗುತ್ತೆ? ದೂರದರ್ಶನ ದಲ್ಲಿ ಬರುವ ಅ೦ತ್ಯವಿಲ್ಲದ, ಮನೆ ಮನ ಕೆಡಿಸುವ ಚಾನೆಲ್ ಗಳು, ಧಾರವಾಹಿಗಳು, ವಿದೇಶದಿ೦ದ ಆಮದು ಮಾಡಿದ ರಿಯಾಲಿಟೀ ಶೋಗಳು ಇವುಗಳು ಸ೦ಸ್ಕೃತಿಯನ್ನು ಉಳಿಸುತ್ತವೆಯೇ?
    ರಿಮೇಕ್ ಭಟ್ಟಿ ಇಳಿಸುವುದಕ್ಕಿ೦ತ ಡಬ್ಬಿ೦ಗ್ ಎಷ್ಟೋ ಉತ್ತಮ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments