ಬಂಗಾರಪಲ್ಕೆಗೆ ಮುಕ್ತಿ ಎಂದು?
ಪವನ್ ಎಂ.ಟಿ
ನಮ್ಮ ಸರಕಾರ ಕ್ರಿಕೇಟ್ ಆಟಗಾರರಿಗೆ ೨೫ ಲಕ್ಷ ರೂಪಾಯಿ ಹಣವನ್ನು ಕೊಡಲು ಮುಂದಾಗಿದೆ. ಪಾಪ ಅವರಿಗೆ ಏನೂ ಇಲ್ಲ ನೋಡಿ ಅದಕ್ಕೆ ಕೊಡ್ಲಿ ಬಿಡಿ. ನಮ್ಮ ಸರಕಾರದ ಹಣೆ ಬರಹವೇ ಅಷ್ಟು. ಹಣ ಇರುವವರಿಗೆ ಹಣವನ್ನು ನೀಡುತ್ತಾರೆಯೇ ಹೊರತು ಬಡವರಿಗೆ ನೀಡುವುದಿಲ್ಲ. ನಮ್ಮಲ್ಲಿ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ವಿನಹ ಬಡವ ಶ್ರೀಮಂತನಾದದಿಲ್ಲ. ನಮ್ಮಲ್ಲಿ ಕಾನೂನನ್ನು ಪಾಲಿಸುವವರಿಗೆ ಮಾತ್ರ ಕಾನೂನಿದೆ. ಆದರೆ ನಮ್ಮಲ್ಲಿ ಒಂದು ಒತ್ತಿನ ಊಟಕ್ಕೂ ಕಷ್ಟಪಡೊ, ನಾಗರೀಕ ಸೌಲಭ್ಯವನ್ನೇ ಕಾಣದೆ ಇರೋ ಕೆಲವು ಗ್ರಾಮಗಳಿವೆ, ಜನರಿದ್ದಾರೆ ಅಂತ ಸರಕಾರಕ್ಕೆ ಗೊತ್ತೇ ಇಲ್ಲ ಅಂತ ಕಾಣ್‌ತ್ತದೆ. ಯಾಕಂದ್ರೇ ನಮ್ಮ ಸರಕಾರಕ್ಕೆ ಕುರ್ಚಿ ಉಳಿಸ್‌ಕೊಳ್ಳೊ ಚಿಂತೆಯಾದರೆ ವಿರೋಧ ಪಕ್ಷಕ್ಕೆ ಕುರ್ಚಿ ಬೀಳಿಸೋ ಚಿಂತೆ ಇದರ ನಡುವೆ ಸಿಲುಕಿರೂ ಜನರ ಗತಿ ಅದೋಗತಿ.
ನಿಮ್ಮ ಮನೆಗೆ ಇನ್ನಾರದೋ ಮನೆಯ ರಸ್ತೆಯಲ್ಲಿ ಅಥವ ತೋಟದ ರಸ್ತೆಯಲ್ಲಿ ಹೋಗಬೇಕು ಎಂದಾದರೆ ನಿಮಗೆ ಮನೆಗೆ ಅಥವ ತೋಟಕ್ಕೆ ಸಂಬಂಧಪಟ್ಟ ಮಾಲಿಕನಿಂದ ಏನೆಲ್ಲ ನಿರ್ಭಂದಗಳು ಬರಬಹುದೆಂದು ನೀವೆ ಯೋಚಿಸಿ. ನಿವು ಅವ್ರು ಹೇಳುವ ಎಲ್ಲಾ ಮಾತುಗಳನ್ನು ಸರಿಯಾಗಿ ಕೇಳಿದರೆ ಮಾತ್ರ ನಿಮಗೆ ಅಲ್ಲಿ ಸಂಚರಿಸಲು ಅವಕಾಶ. ಹಾಗೆಂದು ನಿರ್ಭಂದನೆಯನ್ನು ಸಹಿಸಿಕೊಂಡು ಎಷ್ಟುದಿನವೆಂದು ನೀವು ಓಡಾಡುತ್ತಿರಿ. ಅದು ನಿಮ್ಮಿಂದ ನಮ್ಮಿಂದ ಕಂಡಿತಾ ಸಾಧ್ಯವಿಲ್ಲ. ಆದ್ರೆ ಇಲ್ಲಿ ಎಲ್ಲ ನಿರ್ಭಂದನೆಗಳ ನಡುವೆ ಸರಿಯಾದ ರಸ್ತೆ ಇಲ್ಲದೆಬದುಕುತ್ತಿರುವವರು ಬೆಳ್ತಂಗಡಿತಾಲೂಕಿನ ದಿಡುಪೆಯ ಸಮೀಪದ ಬಂಗಾರು ಪಲ್ಕೆಯ ಮಲೆಕುಡಿರು. ಪಾಪ ಇವರ ಪರಿಸ್ಥಿತಿಯನ್ನು ನಮ್ಮಲ್ಲಿ ಆಡಳಿತಗಾರರೆಂದು ಕರೆಯಿಸಿಕೊಳ್ಳುವವರಿದ್ದಾರಲ್ಲ ಅವರೊಮ್ಮೆ ಬಂದು ನೋಡಬೇಕು.
ನಾವು ಮಲೆಕುಡಿಯರ ಪ್ರದೇಶಗಳಿಗೆ ಭೇಟಿ ನೀಡಿದಾಗ ನಮಗೆ ದಿಡುಪೆಯ ಬಂಗಾರು ಪಲ್ಕೆ ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿತ್ತು ಇಲ್ಲಿಯ ರಸ್ತೆ, ಜನ, ನಾಗರಿಕ ಸೌಲಭ್ಯ ಎಲ್ಲವೂ ಇಲ್ಲಿ ವಿಭಿನ್ನವೇ.
ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ದಿಡುಪೆ ಎನ್ನವ ಸ್ಥಳದಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿರುವ ಬಂಗಾರ್ ಪಲ್ಕೇಗೆ ತೆರಳಬೇಕಾದರೆ, ಪ್ರಪಂಚದ ಅತ್ಯಂತ ಕೆಟ್ಟದಾದ ರಸ್ತೆ ನಮಗೆ ಸಿಗುತ್ತದೆ. ಮನುಷ್ಯ ಸರಿಯಾಗಿ ಕಾಲು ನಡಿಗೆಯಲ್ಲಿಯೂ ಸಂಚರಿಸಲು ಸಾಧ್ಯವಿಲ್ಲದ ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉಧ್ಯಾನದ ಒಳಗಿದೆ. ಬೇಸಿಗೆ ಸಮಯವಾದುದರಿಂದ ನಮಗೆ ತೆರಲು ಒಂದೊ ೪ ವೀಲ್ ವ್ಯವಸ್ಥೆಯಿರುವ ಒಂದು ಜೀಪ್ ನಮಗೆ ಸಿಕ್ಕಿತು ಈ ೪ ವೀಲ್ ಜೀಪ್ ಬಿಟ್ಟು ಬೇರೆ ಯಾವುದೇ ವಾಹನ ಅಲ್ಲಿಗೆ ತೆರಳು ಸಾಧ್ಯವಿಲ್ಲ.
ಆ ರಸ್ತೆಯ ಎದುರು ನಿಂತು ನಾವು ಚಾಲಕನಲ್ಲಿ ಕೇಳಿದೆವು ಸರ್ ಜೀಪು ಯಾವುದು ಕಾಣುತಿಲ್ಲವಲ್ಲ ಎಂದು? ಅದಕ್ಕೆ ಆತ ನೋಡಿ ನಿಮ್ಮ ಮುಂದಿರುವ ರಸ್ತೆಯೇ ಅದರಲ್ಲಿಯೇ ನವು ಹೋಗಬೇಕಾದುದ್ದು ಎಂದು. ಆ ಮಾತನ್ನು ಕೇಳಿ ನಾವು ಆಶ್ಚರ್ಯ ವ್ಯಕ್ತಪಡಿಸಿದೆವು. ಯಾಕಂದ್ರೆ ಆ ರಸ್ತೆ ಅಷ್ಟು ಸುಂದರವಾಗಿತ್ತು. ಜೀಪು ಮುಂದೆ ಹೋಗುತಿದ್ದಂತೆ ನಮಗೆ ರಸ್ತೆಯ ಭಯಾನಕ ಚಿತ್ರಣಗಳು ಗೋಚರಿಸ ತೊಡಗಿದವು ಒಂದು ಜೀಪು ಹೋಗುವಷ್ಟು ಮಾರ್ಗದಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಚಕ್ರಕ್ಕೆ ಬಡಿಯುತಿದ್ದವು, ಅದಲ್ಲದೆ ಮರದ ಬೇರುಗಳಿಂದ ಏರು ತಗ್ಗುಗಳಿಂದ ಈ ರಸ್ತೇ ಕೂಡಿತ್ತು ಅದರಮೇಲೆ ಜೀಪು ಹೋಗುವಾಗ ಈಗ ಮಗುಚುತ್ತದೆ ಕಾಣುತ್ತದೆ ಎನ್ನುವ ಭಾವನೆ ಮತ್ತು ಒಂದು ವೇಳೆ ಮಗುಚಿದರೆ ನೇರವಾಗಿ ಪ್ರಪಾತಕ್ಕೆ. ಇಲ್ಲಿಯ ರಸ್ತೆಯುದ್ದಕ್ಕೂ ಬರೀ ಪ್ರಪಾತಗಳೇ ಕೂಡಿದ್ದವು. ಮಳೆಗಾಲವಲ್ಲವಾದೂದರಿಂದ ಜಿಗಣೆಯ ಕಾಟವಿರಲಿಲ್ಲ.
ಇಂತಹ ರಸ್ತೆಯಲ್ಲಿ ವಾಹನ ಚಾಲಕ ಜೀಪನ್ನು ಮುನ್ನಡೆಸುತ್ತಿರಬೇಕಾದರೆ ನಮಗೆ ಏನೋ ಸಾಧನೆಯನ್ನು ಮಾಡಿದ ಯಾವುದೋ ನಿಗೂಡ ಸ್ಥಳಕ್ಕೆ ತೆರಳಿದ ಅನುಭವವಾಗುತ್ತಿದ್ರೆ, ಇನ್ನೊಂದು ಕಡೆ ಇನ್ನೊಂದುಕಡೆ ದೇವರಲ್ಲಿ ನಮ್ಮನ್ನು ಸರಿಯಾಗಿ ದಡಮುಟ್ಟಿಸು ಎಂದು ಪ್ರಾರ್ಥನೆಯನ್ನು ಮಾಡಿದ ಸನ್ನಿವೇಶವಿತ್ತು.
ಈ ರಸ್ತೆ ರಾಷ್ಟ್ರೀಯ ಉಧ್ಯಾನದೊಳಗಿರುವುದರಿಂದ ಇದನ್ನು ಯವುದೇ ರೀತಿಯಲ್ಲಿ ಅಭಿವೃದ್ಧಿ ಪದಿಸುವಂತಿಲ್ಲ ಯಾವುದೋ ಒಂದು ಕಾಲದಲ್ಲಿ ಸರಕರದಿಂದ ಬಂದ ಹಣದಿಂದ ಈಗ ಇರುವ ರಸ್ತೆಯನ್ನು ಮಾಡಲಾಗಿತ್ತು. ಅದರಲ್ಲಿಯೇ ಇಲ್ಲಿಯ ಜನರು ಈಗಲೂ ಓಡಾಡಬೇಕಾಗಿದೆ. ಇಲ್ಲಿಯ ಜನರು ಹಣ ವಿದ್ದವರಾದರೆ ವಾಹನಕ್ಕೆ ಬೇಕಾದಷ್ಟು ಹಣವನ್ನು ನೀಡಿ ತಮ್ಮ ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ ಬಡವರು ಎಲ್ಲಾ ಸಮಯದಲ್ಲಿಯೂ ಕಾಲು ನಡಿಗೆಯಲ್ಲಿಯೇ ಸಂಚರಿಸಬೇಕು. ಮಳೆಗಾಲದಲ್ಲಿ ಏನೆ ಮಾಡಿದರೂ ಜೀಪು ಈ ರಸ್ತೆಯಲ್ಲಿ ಸಂಚರಿಸುದಿಲ್ಲ ಇಲ್ಲಿಯ ವೃದ್ಧೆಯೊಬ್ಬರನ್ನು ನಾವು ನೀವು ಮಳೆಗಾಲದಲ್ಲಿ ಜ್ವರಬಂದರೆ ಏನು ಮಾಡುತ್ತೀರಿ? ಎಂದು ಕೇಳಿದಾಗ ಅವರು ‘ಎಂತ ಮಾಡೋದು ಕಂಬಳಿ ಸುತ್ತಿ೧೫ ಕಿಲೋಮೀಟರ್ ಎತ್ತಿಕೊಂದು ಹೋಗುವುದು’ ಹೇಳಿ ಸುಮ್ಮನಾದರು. ಇಲ್ಲಿಯ ಮಲೆಕುಡಿಯ ಮಹಿಳೆಯರು ವರ್ಷಕ್ಕೆ ಒಮ್ಮೆಯು ಪಟ್ಟಣವನ್ನು ನೋಡವುದು ಕಷ್ಟ. ಮತ್ತು ಇಲ್ಲಿಯ ಕೆಲವು ಮನೆಯ ಜನರು ವಿಧ್ಯುತ್ ವ್ಯವಸ್ಥೆ ಇಲ್ಲದ ಕಾರಣ ಬೆಟ್ಟದಿಂದ ಬರುವ ನೀರಿನಲ್ಲಿ ವಿದ್ಯುತ್ ತಾಯಾರಿಸುತ್ತಾರೆ ಅದನ್ನು ತಯಾರಿಸಲು ಸಣ್ಣದಾದ ಯಂತ್ರವಿದೆ ಅದರಿಂದಲೇ ಬೆಳಕು. ಮತ್ತು ಇವರು ಎಲ್ಲಿಗೆ ಹೋಗಬೇಕಾದರೂ ಬೇರೆ ಪಟ್ಟೆದಾರರ ಮನೆಯ ತೋಟದ ರಸ್ತೆಯಲ್ಲಿಯೇ ಹೋಗಬೇಕು. ಅವರೆಲ್ಲಾರು ತಮ್ಮ ಜಾಗದಲ್ಲಿ ನೀವು ಸಂಚರಿಸುದು ಬೇಡವೆಂದರೆ ಇವರಿಗೆ ಸಂಚರಿಸಲು ಬೇರೆ ಮಾರ್ಗವೇ ಇಲ್ಲ. ಸರಕಾರದಿಂದ ಬರುವಂತಹ ಅನುಧಾನಗಳು ಇವರಿಗೆ ಯಾವುದೇ ರೀತಿಯಲ್ಲೂ ದೊರಕುತಿಲ್ಲ, ಬಂದ ಅನುಧಾನವನ್ನು ಪಟ್ಟಭದ್ರ ಹಿತಾಶಕ್ತಿಗಳು ಸಿಗುವುದಕ್ಕೆ ಬಿಡಿತ್ತಿಲ್ಲ. ಸರಕಾರದ ಅಧಿಕಾರಿಗಳು ಯಾರು ಸಹ ಭೇಟಿ ನೀಡುವುದಿಲ್ಲ. ಜನಪ್ರತಿನಿಧಿಗಳು ಕೇವಲ ಮತಯಾಚನೆಯ ಸಮಯದಲ್ಲಿ ಮಾತ್ರ ಬರುತ್ತಾರೆ ನಂತರ ಯಾವುದೇ ಸುದ್ಧಿ ಇರುವುದಿಲ್ಲ. ಜೊತೆಗೆ ನಕ್ಸ್‌ಲೇಟ್ ಮತ್ತು ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸುವ ಭಯದ ನಡುವೆ ಇವರ ಬದುಕು ನಡೆಯುತ್ತಿದೆ.
ಇಂತಹ ಸ್ಥಳಗಳಿಗೆ ಭೇಟಿ ನೀಡಿ ಇಲ್ಲಿಯ ಜನರ ಸಮಸ್ಯೆಯನ್ನು ಪರಿಹರಿಸದೇ ಸರಕಾರ ಬರೀ ಹಗರಣಗಳಲ್ಲಿಯೇ ಸಿಲುಕಿಕೊಂಡು ಕಾಲಕಳೆಯುತಿರುವುದು ನಮ್ಮೆಲ್ಲರ ದುರಾದೃಷ್ಟವೇ ಸರಿ.






ಐದನೇ ಪ್ಯಾರಾದ ಮೊದಲ ಸಾಲಿನಲ್ಲಿ “ಜೀಪು ಹೋಗುವ ರಸ್ತೆ “ಎನ್ನುವ ಪದ ಬಿಟ್ಟು ಹೋಗಿದೆ ಕ್ಷಮೆ ಇರಲಿ