ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 27, 2011

1

ಬಂಜರಾದ ಬಾಂಜಾರು

‍Jagannath Shirlal ಮೂಲಕ

ಪವನ್ ಎಂ. ಟಿ

ಪ್ರಿಯ ನಿಲುಮೆಯ ಓದುಗರೆ ಕಳೆದ ಕೆಲವು ದಿನಗಳ ಹಿಂದೆ ನಿಲುಮೆಯಲ್ಲಿ ಮಲೆಕುಡಿಯರ ಪ್ರದೇಶವಾದ ಬಂಗಾರ್ ಪಲ್ಕೆಯ ಕುರಿತಂತೆ, ಅಲ್ಲಿಯ ಸಾಮಾಜಿಕ ಸಮಸ್ಯೆಗಳ ಕುರಿತಂತೆ ಲೇಖನವೊಂದು ಪ್ರಕಟವಾಗಿತ್ತು.  ಇನ್ನೊಂದು ವಿಭಿನ್ನ ಪ್ರದೇಶವಾದ ಬಾಂಜಾರು ಮಲೆಯ ಮಲೆಕುಡಿಯರ ಕುರಿತಂತೆ, ಅವರ ಕಷ್ಟದ ಪರಿಪಾಟಲಿನ ಕುರಿತ ಸಣ್ಣ ಪರಿಚಯವನ್ನು ಈ ಲೇಖನದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಚಾರ್ಮಾಡಿ ರಸ್ತೆಯಲ್ಲಿ ಸುಮಾರು ೪೦ ಕಿಲೋಮೀಟರ್ ಪ್ರಯಾಣಿಸಿದರೆ ಘಾಟ್‌ನ ೯ ನೇ ತಿರುವಿನಲ್ಲಿ ಬಲಬದಿಗೆ ಒಂದು  ಕಿರಿದಾದ ಕಚ್ಚಾ ರಸ್ತೆ ಸಿಗುತ್ತದೆ. ಈ ಕಚ್ಚಾ ರಸ್ತೆ ಹೆಚ್ಚು ದೂರದ ವರೆಗೆ ಇಲ್ಲ. ಎಲ್ಲಿಯಾದರೂ ಸಾಮಾನ್ಯ ಜನರೀಗೆ ಇದರಿಂದ ಉಪಯೋಗವಾಗಿ ಬಿಟ್ಟರೆ ಕಷ್ಟ ನೋಡಿ ಅದಕ್ಕೆ  ಈ ರಸ್ತೆ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಎಸ್ಟೇಟ್ ನ ಅಥಿತಿ ಗೃಹದ ವರೆಗೆ ಮಾತ್ರವಿದೆ. ಇಲ್ಲಿ ಖಾಸಗಿ ಎಸ್ಟೇಟ್ ನವರು ಒಂದು ದೊಡ್ಡ ಗೇಟು ಹಾಕಿದ್ದಾರೆ ಈ ಗೇಟನ್ನು ಒಳ ಪ್ರವೇಶ ಮಾಡಿಯೇ ನಾವು ಬಾಂಜಾರು ಮಲೆಗೆ ಹೋಗಬೇಕು. ಇಲ್ಲಿ ಎಸ್ಟೇಟ್ ಮಾಲಿಕರ ಪರವಾನಿಗೆ ಇಲ್ಲದೇ ನಾವು ಒಳ ಹೋಗುವಂತಿಲ್ಲ.                                                                                                                                                                                                   ಮೊದಲು ನಮಗೆ ಮಲೆಕುಡಿಯರಲ್ಲಿಗೆ ಹೋಗುವುದಕ್ಕೆ ಎಸ್ಟೇಟ್‌ನವರ ಒಪ್ಪಿಗೆ ಯಾಕೆ ಪಡೆಯಬೇಕು ಎಂಬ ಪ್ರಶ್ನೆ ಮೂಡಿತು . ಆದರೆ ನಮ್ಮ ಕೆಲಸ ಆಗಬೇಕಾದರೆ ನಾವು ಒಪ್ಪಿಗೆ ಪಡೆಯಲೇ ಬೇಕಲ್ಲಾ ಅದಕ್ಕೆ ಆ ಕೆಲಸವನ್ನು ಮೊದಲು ಮಾಡಿದೆವು.  ಮುಂದೆ ಸಾಗಿದಂತೆ ಆ ಅಥಿತಿ ಗೃಹದಲ್ಲಿ ಕೆಲಸ ಮಾಡುವ ಮಲೆಕುಡಿಯರನ್ನು ಕಂಡೆವು.  ಇದೆಲ್ಲವನ್ನು ನೋಡುವಾಗ ನನ್ನಲ್ಲಿ ಮೂಡಿದ ಪ್ರಶ್ನೆ? ಎಸ್ಟೇಟ್ ನವರು ಯಾಕೆ ಈ ರೀತಿ ಗೇಟ್ ಹಾಕಿದ್ದಾರೆ? ಮಲೆಕುಡಿಯರನ್ನು ನಿಯಂತ್ರಣದಲ್ಲಿಟ್ಟಿರ ಬಹುದೇ? ನಮ್ಮನ್ನು ಯಾಕೆ ಪರೀಕ್ಷಿಸಿಯೇ ಒಳ ಬಿಡುತ್ತಾರೆ? ಇದರ ಹಿಂದೆ ಏನಿದೆ? ಮಲೆಕುಡಿಯರು ಯಾಕೆ ಇವರಲ್ಲಿಯೇ ಕೆಲಸ ಮಾಡುತಿದ್ದಾರೆ? ಎಂದು. ನಂತರ ಬಾಂಜಾರಿನ ಮಲೆಕುಡಿಯರೇ ಹೇಳಿದರೂ ಎಸ್ಟೇಟ್ ನವರು ನಮಗೆ ೫ ಎಕರೆ ಜಾಗವನ್ನು ಪ್ರತಿಯೊಬ್ಬರಿಗೂ ನೀಡಿದ್ದಾರೆ ಅದರಲ್ಲಿ ಕೃಷಿ ಮಾಡಿಕೊಂಡು ಮತ್ತು ಎಸ್ಟೇಟ್‌ನ ಕೆಲಸವನ್ನು ಮಾಡಿಕೊಂಡು ನಾವು ಬದುಕುತ್ತಿದ್ದೇವೆ. ಈ ಮಾತನ್ನು ಕೇಳಿದಾಗ ನನ್ನಲ್ಲಿ ಮೂಡಿದ್ದ ಪ್ರಶ್ನೆಗಳಿಗೆ ಅಲ್ಪ ಸ್ವಲ್ಪ ಉತ್ತರ ಸಿಕ್ಕಿದಂತಾಯಿತು.

ಬಾಂಜಾರಿಗೆ  ಜೀಪ್‌ನಿಂದ ಮಾತ್ರ ತೆರಳಲು ಸಾಧ್ಯ. ಇಲ್ಲಿಯ ರಸ್ತೆಗಳು ಕಲ್ಲು ಮುಳ್ಳುಗಳಿಂದ ಕೂಡಿದ್ದು ಜನರ ಸಂಚಾರವಿಲ್ಲದೆ ಅನಾಥವಾಗಿದೆ. ಇಲ್ಲಿ ಅಪರೂಪಕ್ಕೆ ಒಮ್ಮೆ ಎಸ್ಟೇಟನ ಜೀಪ್ ತಿರುಗಾಡುತ್ತಿರುತ್ತದೆ.  ಈ ರಸ್ತೆಯಲ್ಲಿ ಖಾಸಗಿ ಎಸ್ಟೇಟ್ ನಿಂದ ಸುಮಾರು ೭ ಕಿಲೋಮಿಟರ್‌ನಷ್ಟು ಮುನ್ನಡೆದರೆ ಬಾಂಜಾರು ಮಲೆಯ ದರುಶನವಾಗುತ್ತದೆ. ಇಲ್ಲಿ ನಾಗರೀಕ ಸೌಲಭ್ಯಗಾಳಾವುದೂ ಕಂಡು ಬರುದಿಲ್ಲ. ಎಸ್ಟೇಟ್ ಮಾಲಿಕರಿಂದ ಪಡೆದ ಜಾಗದಲ್ಲಿ ಕೃಷಿಯನ್ನು ಮಾಡಿಕೊಂಡು ಸಣ್ಣ ಪುಟ್ಟ ಹುಲ್ಲು, ಮತ್ತು ಹಂಚಿನ ಮನೆಗಳಲ್ಲಿ ಬಾವಿಯಲ್ಲಿಯ ಕಪ್ಪೆಗಳಂತೆ ತಾವಿರುವ ಪ್ರಪಂಚವೇ ದೊಡ್ಡದು ಎಂದು ಇಲ್ಲಿಯ ಮಲೆಕುಡಿಯರು ಬದುಕುತ್ತಿದ್ದಾರೆ.

ಇಲ್ಲಿ ಸುಮಾರು ೪೦ಕ್ಕೂ ಹೆಚ್ಚು ಕುಟುಂಬಗಳೆವೆ ಅವೆಲ್ಲವು ಮಲೆಕುಡಿಯರದ್ದು. ಇವರೆಲ್ಲರೂ ಸರಕಾರದ ಅಲಕ್ಷ್ಯಕ್ಕೆ ಎಷ್ಟು ಗುರಿಯಾಗಿದ್ದಾರೆ ಎಂದರೆ, ನೂರಾರು ವರ್ಷಗಳಿಂದ ಇಲ್ಲಿಯೇ ಇದ್ದರೂ ಇವರು ಇನ್ನೂ ಸರಿಯಾದ ಮನೆಯನ್ನು ಕಟ್ಟಿಕೊಂಡಿಲ್ಲ. ಕಟ್ಟಿರುವ ಮನೆಗಳಲ್ಲಿ ಶೌಚಾಲಯವಿಲ್ಲ, ಏನಾದರೂ ಅಗತ್ಯವಸ್ತುಗಳನ್ನು ತರಬೇಕೆಂದರೆ ದೂರದ ಕಕ್ಕಿಂಜೆಗೆ ಹೋಗಬೇಕು. ಮತ್ತು ಸಮೀಪದಲ್ಲಿ ಎಲ್ಲಿಯೂ ಆಸ್ಪತ್ರೇ ಗಳಿಲ್ಲ. ಮತ್ತು ಈ ರಸ್ತೆಯಲ್ಲಿ ಆನೆ, ಹುಲಿ, ಕಾಡು ಕೋಣ ಮೊದಲಾದವು ತಿರುಗಾಡುವುದರಿಂದ ಒಬ್ಬೊಬ್ಬರೇ ತಿರುಗಾಡಲು ಸಾಧ್ಯವಿಲ್ಲ ಮಳೆಗಾಲದಲ್ಲಿ ಪ್ರಯಾಣ ಮಾಡುವುದು ಕನಸಿನ ಮಾತೇ ಸರಿ. ಇಲ್ಲಿ ಜನರು ವಾರಕ್ಕೊಮ್ಮೆ ಜೀಪ್ ಮಾಡಿಕೊಂಡು ಸಂತೆಗೆ ಹೋಗುತ್ತಾರೆ. ಎಲ್ಲಾರು ಒಟ್ಟು ಸೇರಿ ಹೋಗುವುದರಿಂದ ಸ್ವಲ್ಪ ಖರ್ಚಿನಲ್ಲಿ ಹೋಗಿ ಬರಬಹುದು. ಚಾರ್ಮಾಡಿ ಘಾಟ್ ಮತ್ತು ಬಾಂಜರು ಮಲೆಗೆ ಸಂಪರ್ಕ ಹೊಂದುವ ಸ್ಥಳದಲ್ಲಿ ಬಸ್‌ಸ್ಟ್ಯಾಂಡ್ ಇಲ್ಲದ ಕಾರಣದಿಂದ  ಇಲ್ಲಿ ಒಂದು ರಸ್ತೆಯಿದೆ ಎಂದು ಯಾರಿಗೂ ಗೊತ್ತಾಗುದಿಲ್ಲ. ಮತ್ತು ಇಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ತೆರಳುವ ಯಾವ ಬಸ್ಸುಗಳು ನಿಲ್ಲುವುದಿಲ್ಲ. ಆದೂದರಿಂದ ದೂರದ ಪ್ರದೇಶಗಳಿಗೆ ಹೋಗುವವರರ ಗೋಳು ದೇವರಿಗೆ ತೃಪ್ತಿ.

ಬಾಂಜಾರು ಮಲೆಯ ಜನರು ಜಿಲ್ಲಾಧಿಕಾರಿ ಬರುತ್ತಾರೆಂದು ಸುಮಾರು ೨೦ ವರ್ಷದಿಂದ ಕಾಯುತ್ತಿದ್ದಾರೆ. ಆದರೆ ಇದುವರೆಗೆ ಯಾರು ಇಲ್ಲಿಗೆ ಬಂದಿಲ್ಲ. ಮೊದಲೊಮ್ಮೆ ಜಿಲ್ಲಾಧಿಕಾರಿ ಬರುತ್ತೇನೆ ಎಂದು ಹೇಳಿದಾಗ  ಅದಕ್ಕೆ ಇಲ್ಲಿಯ ಜನರು ಸೀಮೆಂಟು ಮತ್ತು ಕಲ್ಲುಗಳಿಂದ ವೇದಿಕೆಯೊಂದನ್ನು ನಿರ್ಮಿಸಿದ್ದರು. ಆದರೇ ಜಿಲ್ಲಾಧಿಕಾರಿ  ಬಾರದೇ ಹೋದಕಾರಣ ಆ ಕಟ್ಟೆ ಈಗಲೂ ಹಾಗೆಯೇ ಉಳಿದು ಕೊಂಡಿದ್ದು ಮಲೆಕುಡಿಯರು ದಣಿವಾಗಿ ಬಂದಾಗ ಕುಳಿತು ಕೊಳ್ಳಲು, ಮತ್ತು ಒಟ್ಟು ಸೇರಿ ಮಾತನಾಡಲು ಬಳಸುತ್ತಿದ್ದಾರೆ.

ನಮ್ಮಲ್ಲಿ ಚುನಾವಣೆಯ ಸಂದರ್ಭದಲ್ಲಿ ಕಣ್ಣಿಗೆ ಕಾಣದ ಊರುಗಳೂ ಸಹ ಜನಪ್ರತಿನಿಧಿಗಳಿಗೆ ಕಾಣಸಿಗುತ್ತದೆ. ಆದರೆ ಚುನಾವಣೆಯಲ್ಲಿ ಮತ ಪಡೆದ ನಂತರ ಯಾವುದೇ ಕಷ್ಟಕ್ಕೂ ಅವರ ಸಹಾಯವಿಲ್ಲ, ಅವರ ಭೇಟಿ ನಂತರದ ಚುನಾವಣೆಗೆ. ಇಲ್ಲಿ ಜನಪ್ರತಿನಿಧಿಗಳಿಗೆ ರಸ್ತೆಸೇರುವಲ್ಲಿ ಒಂದು ಬಸ್‌ಸ್ಟ್ಯಾಂಡ್ ಮಾಡಿಕೊಡುವ ಸಣ್ಣ ಆಲೋಚನೆಯೂ ಇಲ್ಲದಾಗಿದೆ. ಇಲ್ಲಿ ಬಸ್ ಸ್ಟ್ಯಾಂಡ್ ವ್ಯವಸ್ಥೆಯಾದರೆ ಜನರಿಗೆ ಇಲ್ಲಿಯೂ ಒಂದು ಜನರಿರುವ ಪ್ರದೇಶವಿದೆ ಎಂದಾದರೂ ತಿಳಿಯುತ್ತದೆ. ಇವೇನೆ ಇರಲಿ ಬಾಂಜಾರು ಮಲೆಗೆ ನಮ್ಮ ಜನ ನಾಯಕರೆಂದು ಕರೆಯಿಸಿಕೊಳ್ಳುವ ಮಂತ್ರಿಗಳು ಒಮ್ಮೆ ಹೋಗಿ ಬಂದರೆಸಾಕು, ಅವರ ಕಷ್ಟ ಎಲ್ಲವೂ ತಿಳಿಯುತ್ತದೆ. ಆದರೇ ಅಷ್ಟು ಒಳ್ಳೆಯ ಬುದ್ಧಿ ನಮ್ಮ ಜನಪ್ರತಿನಿಧಿಗಳಿಗೆ ಸರಕಾರಕ್ಕೆ ಎಲ್ಲಿದೆ? ಇವರ ಸೀಟನ್ನು ಯಾರಾದರು ಕದ್ದು ಬಿಟ್ಟರೆ………..

 

1 ಟಿಪ್ಪಣಿ Post a comment
  1. subhash rao's avatar
    subhash rao
    ಏಪ್ರಿಲ್ 27 2011

    lekana uttama. adre title astu olleydilla.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments