ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 3, 2013

6

ಪ್ರೊ.ಬಾಲು ಅವರಿಗೆ ಚೆಕ್ ಗಣರಾಜ್ಯದ ಪಾರ್ದುಬಿತ್ಸೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್

‍ನಿಲುಮೆ ಮೂಲಕ

Prof Balu2ಕರ್ನಾಟಕದಲ್ಲಿ ಈಗ ಗೌರವ ಡಾಕ್ಟರೇಟ್ ಪದವಿ ಎನ್ನುವುದು ಮಾರುಕಟ್ಟೆಯಲ್ಲಿ ದೊರೆಯುವ ವಸ್ತುವಾಗಿರುವುದು ನಮಗೆಲ್ಲ ಗೊತ್ತಿರುವ ವಿಚಾರವೇ. ಆದರೆ ಯುರೋಪಿನ ವಿಶ್ವವಿದ್ಯಾಲಯಗಳಲ್ಲಿ ಇದು ಇನ್ನೂ ತನ್ನ ಘನತೆ ಹಾಗೆ ಉಳಿಸಿ ಕೊಂಡಿದೆ. ಉದಾಹರಣೆಗೆ, ಪ್ರೊಫೆಸರ್ ಎಸ್. ಎನ್. ಬಾಲಗಂಗಾಧರ ರಾವ್ ಅವರಿಗೆ ೩೦/೯/೨೦೧೩ರಂದು  ಗೌರವ ಡಾಕ್ಟರೇಟ್ ಪದವಿ ಮತ್ತು ಬಂಗಾರದ ಪದಕದೊಂದಿಗೆ ಸನ್ಮಾನ ಮಾಡಿದ ಚೆಕ್ ಗಣರಾಜ್ಯದ ಪಾರ್ದುಬಿತ್ಸೆ ವಿಶ್ವವಿದ್ಯಾಲಯ ತನ್ನ ೧೫ ವರ್ಷಗಳ ಇತಿಹಾಸದಲ್ಲಿ ಕೊಟ್ಟಿದ್ದು ಕೇವಲ ಬೆರಳೆಣಿಕೆಯಷ್ಟು ಗೌರವ ಡಾಕ್ಟರೇಟ್ ಪದವಿಗಳನ್ನು ಮಾತ್ರ.

ಈ ಸಂದರ್ಭದಲ್ಲಿ ಎಸ್. ಎನ್. ಬಾಲಗಂಗಾಧರ ರಾವ್ ಅವರ ಸಾಧನೆಗಳ ಕುರಿತು ಅಲ್ಲಿನ ಸಮಾಜ ವಿಜ್ಞಾನಗಳ ಡೀನ್ ಮಾಡಿದ ಭಾಷಣದ ಕನ್ನಡ ಅವತರಣಿಕೆಯನ್ನು ನಾವಿಲ್ಲಿ ಕೊಡುತ್ತಿದ್ದೇವೆ.

–      ನಿಲುಮೆ

 

ಪ್ರಶಂಸಾ ಭಾಷಣ

ಪ್ರೊಫೆಸರ್ ಎಸ್. ಎನ್. ಬಾಲಗಂಗಾಧರ ರಾವ್

____________________________________________________________

ಪಾರ್ದುಬಿತ್ಸೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕಾರ

  • ರಿಲಿಜನ್ ಮತ್ತು ಸಂಸ್ಕೃತಿಗಳ ತೌಲನಿಕ ವಿಜ್ಞಾನವನ್ನು ಉನ್ನತಮಟ್ಟದಲ್ಲಿ ಅಭಿವೃದ್ದಿ ಪಡಿಸಿದ್ದಕ್ಕಾಗಿ
  • ಭಾರತ ಮತ್ತು ಯುರೋಪಿನ ವಿಶ್ವವಿದ್ಯಾಲಯಗಳ ನಡುವೆ ಸಹಯೋಗವನ್ನು ಅಭಿವೃದ್ದಿ ಪಡಿಸಿದ್ದಕ್ಕಾಗಿ
  • ಪಾರ್ದುಬಿತ್ಸೆ ವಿಶ್ವವಿದ್ಯಾಲಯದ ಕಲಾ ಮತ್ತು ತತ್ವಶಾಸ್ತ್ರ ವಿಭಾಗದಲ್ಲಿ ರಿಲಿಜನ್ ಅಧ್ಯಯನವನ್ನು ಅಭಿವೃದ್ದಿ  ಪಡಿಸುವಲ್ಲಿ ಇವರ ಮಹತ್ವದ ಕೊಡುಗೆಗೆ

 ಗೌರವಾನ್ವಿತ ಮಹಿಳೆಯರೇ ಮತ್ತು ಪುರುಷರೇ,

Prof Balu1ನಮ್ಮ ವಿಶ್ವವಿದ್ಯಾಲಯ ಪ್ರಧಾನ ಮಾಡುವ ಗೌರವ ಡಾಕ್ಟರೇಟ್ ಪದವಿಗೆ ನಮ್ಮ ಕಲಾ ಮತ್ತು ತತ್ವಶಾಸ್ತ್ರ ವಿಭಾಗದ ಸೈಂಟಿಫಿಕ್ ಕೌನ್ಸಿಲ್ ಶಿಫಾರಸು ಮಾಡಿರುವ, ನಮ್ಮ ಮಧ್ಯೆ ಈಗ ಉಪಸ್ಥಿತರಿರುವ, ನುರಿತ ಮತ್ತು ಹೆಸರಾಂತ ಚಿಂತಕರಾದ ಪ್ರೊಫೆಸರ್ ಎಸ್.ಎನ್. ಬಾಲಗಂಗಾಧರರವರನ್ನು ನಿಮಗೆ ಪರಿಚಯ ಮಾಡಿಕೊಡ ಬಯಸುತ್ತೇನೆ. ಇವರು ಜನಿಸಿದ್ದು ಜನವರಿ 3, 1952ರಂದು ಭಾರತ ದೇಶದ ಬೆಂಗಳೂರು ನಗರದಲ್ಲಿ. ವಸಾಹತೋತ್ತರ ಭಾರತದ ತುರ್ತುಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಳಸಲಾಗುತ್ತಿದ್ದ ರಾಜಕೀಯ ಚಿಂತನೆ ಮತ್ತು ಧೋರಣೆಗಳ ಹಿಂದೆ ಇದ್ದ ಪ್ರಮುಖ ಚಿಂತಕರುಗಳ ಕೃತಿಗಳನ್ನು ಮೂಲದಲ್ಲೇ ಓದಿ ಅರ್ಥಮಾಡಿಕೊಳ್ಳಬೇಕು ಎಂಬ ಇವರ ಬಯಕೆ ಇವರನ್ನು ಯುರೋಪಿನ ತನಕ ಕರೆತರುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿತು. 1978 ಮತ್ತು 1982ರ ನಡುವೆ ಅವರು ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದ ಕಲಾ ಮತ್ತು ತತ್ವಶಾಸ್ತ್ರ ವಿಭಾಗದಲ್ಲಿ ಓದಿ, ಮುಂದೆ ಅಲ್ಲೇ ತಮ್ಮ ಪಿ.ಎಚ್.ಡಿ ಸಂಶೋಧನೆಯನ್ನೂ ಕೈಗೊಂಡರು. 1991ರಲ್ಲಿ ಇವರ ಪಿ.ಎಚ್.ಡಿ ಪ್ರಬಂಧವನ್ನು ಮನ್ನಿಸಿ ಘೆಂಟ್ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿಯನ್ನು ಕೊಟ್ಟಿತು. ಈ ನುರಿತ ಭಾರತೀಯ ಚಿಂತಕರಿಗೆ, ಯುರೋಪ್ ಅವರ ಎರಡನೆಯ ಮನೆಯಷ್ಟೇ ಅಲ್ಲ, ತನ್ನ ಮಗಳೊಬ್ಬಳನ್ನು ಇವರಿಗೆ ಧರ್ಮಪತ್ನಿಯಾಗಿ ಕೊಡುವ ಮೂಲಕ ಅವರ ಅತ್ತೆ, ಅಥವಾ ಎರಡನೆಯ ತಾಯಿಯೂ ಆಯಿತು. 1988ರಿಂದ ಇವರು ಸಂಶೋಧನಾ ಸಹಾಯಕರಾಗಿ, ತದನಂತರ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 1996ರಲ್ಲಿ ಫ್ಲೆಮಿಷ್ ಸರ್ಕಾರದ ಸಮಿತಿಯು ಇವರನ್ನು ಸಂಸ್ಕೃತಿಗಳ ತುಲನಾತ್ಮಕ ವಿಜ್ಞಾನದಲ್ಲಿ ಪ್ರಾಧ್ಯಾಪಕರನ್ನಾಗಿ ನೇಮಿಸಿತು. ಸಂಸ್ಕೃತಿಗಳ ತುಲನಾತ್ಮಕ ವಿಜ್ಞಾನಕೇಂದ್ರವನ್ನು ಇವರು 2003ರಲ್ಲಿ ಘೆಂಟ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿದರು ಮತ್ತು ಅಂದಿನಿಂದ ಇವರು ಈ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2006ರಲ್ಲಿ ಇವರು ಭಾರತದಲ್ಲಿ, ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ (ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ) ಎಂಬ ಒಂದು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. 2008ರಲ್ಲಿ ಇವರು ಇಂಡಿಯಾ ಪ್ಲಾಟ್ಫಾರ್ಮ್ ಎಂಬ ಒಂದು ವಿಶಿಷ್ಟ ವೇದಿಕೆಯನ್ನು ಹುಟ್ಟುಹಾಕಿದರು. ಇವರ ಮಾರ್ಗದರ್ಶನದಲ್ಲಿ ಆ ವೇದಿಕೆ ಇಂದು ಮೂವತ್ತಕ್ಕೂ ಹೆಚ್ಚಿನ ಯೂರೋಪಿನ ಮತ್ತು ಭಾರತದ ವಿಶ್ವವಿದ್ಯಾಲಯ ಹಾಗು ಸಂಸ್ಥೆಗಳ ನಡುವೆ ಸಹಯೋಗಗಳನ್ನು ಏರ್ಪಡಿಸುವ ಮತ್ತು ನಿರ್ವಹಿಸುವ ಕೆಲಸ ಮಾಡುತ್ತಿದೆ. ಎಸ್. ಎನ್. ಬಾಲಗಂಗಾಧರರವರು ಅಮೆರಿಕನ್ ಅಕಾಡೆಮಿ ಆಫ್ ರಿಲಿಜನ್ನಿನ ಹಿಂದೂಯಿಸಂ ಘಟಕದ ಕೋ-ಚೇರ್ ಆಗಿ, ಹಾಗು ಇಂತಹ ಹಲವು ಪ್ರಮುಖ ಅಧ್ಯಯನ ಸಂಸ್ಥೆಗಳ (ಉದಾ. ಅಮೆರಿಕನ್ ಅಸೋಸಿಯೇಷನ್ ಆಫ್ ಏಷ್ಯನ್ ಸ್ಟಡೀಸ್) ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತಕ್ಕೆ ತಮ್ಮ ಅಧಿಕೃತ ಭೇಟಿ ನೀಡಿದ ಬೆಲ್ಜಿಯಂ ದೇಶದ ರಾಜ ಮತ್ತು ರಾಣಿಯವರ ತಂಡದ ವಿಶೇಷ ಸದಸ್ಯರಾಗಿ ಇವರು ಆಯ್ಕೆಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಇಂತಹ ವಿಶೇಷ ವಿದ್ವಾಂಸರೊಬ್ಬರು 2007ರಿಂದ ನಮ್ಮ ವಿಶ್ವವಿದ್ಯಾಲಯದ ಕಲಾ ಮತ್ತು ತತ್ವಶಾಸ್ತ್ರ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ನಮಗೊಂದು ಹೆಮ್ಮೆಯ ವಿಚಾರ.

ಇನ್ನು ಇವರ ಚಿಂತನೆ ಮತ್ತು ಸಂಶೋಧನೆಯ ಕುರಿತು ಕೆಲವು ಮಾತುಗಳು. ಸಂಸ್ಕೃತಿಗಳು ಮತ್ತು ರಿಲಿಜನ್ನುಗಳ ತುಲನಾತ್ಮಕ ಅಧ್ಯಯನ ಕ್ಷೇತ್ರದಲ್ಲಿ ಎಸ್. ಎನ್. ಬಾಲಗಂಗಾಧರರವರನ್ನು ಒಬ್ಬ ಶ್ರೇಷ್ಠ ಚಿಂತಕ ಎಂದು ಪರಿಗಣಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹು ಚರ್ಚಿತ ಇವರ The Heathen in His Blindness… (1994) ಕೃತಿಯು ರಿಲಿಜನ್ನುಗಳ ಅಧ್ಯಯನ ಕ್ಷೇತ್ರದಲ್ಲಿ ಹೊಸ ದಾರಿಯನ್ನು ಹಾಕಿ ಕೊಟ್ಟ ಕೃತಿ ಎಂದೇ ಪರಿಗಣಿಸಲಾಗುತ್ತದೆ. ರಿಲಿಜನ್ ಅಧ್ಯಯನಗಳು, ಒರಿಯಂಟಲ್ ಅಧ್ಯಯನಗಳು, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮತ್ತು ಸಮಾಜ ವಿಜ್ಞಾನದ ಇತರ ಪ್ರಮುಖ ವಿಭಾಗಗಳ ಸಂಶೋಧಕರು ಬಾಲಗಂಗಾಧರರವರು ಎತ್ತಿರುವ ಪ್ರಶ್ನೆಗಳ ಮತ್ತು ಅವರ ಸಿದ್ಧಾಂತಗಳ ಪ್ರಾಮುಖ್ಯತೆಯನ್ನು ಇಂದು ಒಪ್ಪಿಕೊಂಡಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯು ಜಗತ್ತಿನ ಇತರ ದೊಡ್ಡ ಸಂಸ್ಕೃತಿಗಳನ್ನು ಹೇಗೆ ಅರ್ಥಮಾಡಿಕೊಂಡಿತು? ವಿಭಿನ್ನ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪಾಶ್ಚಾತ್ಯರ ರಿಲಿಜನ್ ಯಾವ ಪಾತ್ರ ವಹಿಸಿದೆ? ಯುರೋಪ್ ಇತರ ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕ್ರಿಶ್ಚಿಯನ್ ಥಿಯೋಲಾಜಿಯ ಚೌಕಟ್ಟು ಪ್ರಮುಖ ಪಾತ್ರ ವಹಿಸಿದೆ ಎಂಬ ಇವರ ಒಳನೋಟ ನಮಗೆ ಆಶ್ಚರ್ಯ ಉಂಟುಮಾಡಬೇಕು. ಇವರ ಇನ್ನೂ ಮಹತ್ವದ ಒಳನೋಟವೆಂದರೆ ಸೆಕ್ಯುಲರೀಕರಣದ (secularisation) ಪ್ರಕ್ರಿಯೆ ಕ್ರಿಶ್ಚಿಯನ್ ಥಿಯೋಲಾಜಿಯ ಈ ಚೌಕಟ್ಟನ್ನು ತೊಡೆದುಹಾಕುವ ಬದಲು ಅದನ್ನಿನ್ನೂ ಬಲಪಡಿಸಿದೆ. ಭಾರತೀಯ ಸಂಸ್ಕೃತಿಯಾದಿಯಾಗಿ ಇನ್ನಿತರ ಪಾಶ್ಚಾತ್ಯೇತರ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ನಾವಿನ್ನೂ ಬಹಳ ಹಿಂದೆ ಉಳಿದಿದ್ದೇವೆ ಎಂದು ಇವರು ನಿರ್ಣಾಯಕವಾಗಿ ನಮಗೆ ತೋರಿಸಿಕೊಟ್ಟಿದ್ದಾರೆ. ಈ ಒಳನೋಟಗಳು ಯುರೋಪ್ ಮತ್ತು ಭಾರತದ ಪರಸ್ಪರ ಗ್ರಹಿಕೆಗಳನ್ನು ಬಲಪಡಿಸುವಲ್ಲಿ ಮತ್ತು ಆ ಮೂಲಕ ಅಂತರರಾಷ್ಟ್ರೀಯ ರಾಜಕೀಯವನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಹೊಸ ಮಾರ್ಗಗಳನ್ನು ತೋರಿಸಿ ಕೊಟ್ಟಿದೆ. ಯುರೋಪ್, ಅಮೆರಿಕಾ, ಭಾರತ ಮತ್ತು ಇತರೆಡೆಯ ವಿದ್ವಾಂಸರು ಇವರ ಮೂಲಭೂತ ಒಳನೋಟಗಳನ್ನು ತಮ್ಮ ಸಂಶೋಧನೆಯಲ್ಲಿ ಬಳಸಲು ಪ್ರಾರಂಭಿಸಿದ್ದಾರೆ. ಉದಾಹರಣೆಗೆ ನೀವು ರಿಚರ್ಡ್ ಕಿಂಗ್, ಜೆಫ್ರಿ ಆಡಿ, ಡೇವಿಡ್ ಲಾಯ್, ಫಿಲಿಪ್ ಆಲ್ಮಂಡ್, ವಿವೇಕ್ ಧಾರೇಶ್ವರ್, ನವೋಮಿ ಗೋಲ್ಡನ್ಬರ್ಗ್, ಪೀಟರ್ ವಾನ್ ಡೆರ್ ವೀರ್, ತಿಮೋತಿ ಫಿಟ್ಜ್ಗೆರಾಲ್ಡ್, ಲಾರೀ ಪ್ಯಾಟನ್, ಶಾರದಾ ಸುಗಿರ್ಥರಾಜ, ವೆಂಕಟ್ ರಾವ್ ಮುಂತಾದವರ ಕೃತಿಗಳನ್ನು ನೋಡಬಹುದು.

ಅಂಕಿಅಂಶಗಳು ವೈಜ್ಞಾನಿಕ ಸಂಶೋಧನೆಯ ಹರವು ಮತ್ತು ಆಳವನ್ನು ತೋರಿಸಿಕೊಡುವಲ್ಲಿ ವಿಫಲವಾಗುತ್ತವಾದರೂ, ಒಬ್ಬ ಸಂಶೋಧಕನ ಕುರಿತು ಅವು ಒಂದಷ್ಟು ಉಪಯುಕ್ತ ಮಾಹಿತಿಯನ್ನು ಕೊಡದೇ ಇರುವುದಿಲ್ಲ. ಎಸ್.ಎನ್. ಬಾಲಗಂಗಾಧರರವರು ಏಳು ಪುಸ್ತಕಗಳನ್ನು, ಸುಮಾರು ಹದಿನೈದು ಪುಸ್ತಕದ ಅಧ್ಯಾಯಗಳನ್ನು ಮತ್ತು ಉನ್ನತ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಹಲವಾರು ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ.

ಆಕ್ಸ್ಫರ್ಡ್, ಬ್ರಿಲ್, ಮನೋಹರ್ ಮುಂತಾದ ಪ್ರತಿಷ್ಠಿತ ಪ್ರಕಾಶಕರು ಇವರ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಪುಸ್ತಕಗಳು ಮತ್ತು ಲೇಖನಗಳನ್ನು ನೂರಕ್ಕೂ ಹೆಚ್ಚು ಬಾರಿ ಉಲ್ಲೇಖ ಮಾಡಲಾಗಿದೆ. ಏಷ್ಯಾ-ಲಿಂಕ್ , ಇರಾಸ್ಮಸ್ ಮುಂಡುಸ್, VLIRಗಳಂಥ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಶೋಧನಾ ಯೋಜನೆಗಳನ್ನು ಇವರು ಪಡೆದುಕೊಂಡಿದ್ದಾರೆ. ರೀಥಿಂಕಿಂಗ್ ರಿಲಿಜನ್ ಇನ್ ಇಂಡಿಯಾ ಹಾಗು ಧರ್ಮ ಮತ್ತು ಎಥಿಕ್ಸ್ ಎಂಬ ಅಂತರರಾಷ್ಟ್ರೀಯ ಸಮಾವೇಶಗಳ ಸರಣಿಗಳನ್ನು ಇವರು ಮುಖ್ಯ ಸಂಘಟಕರಾಗಿ ಆಯೋಜಿಸುತ್ತಾ ಬಂದಿದ್ದಾರೆ.

ಅಮೆರಿಕನ್ ಅಕಾಡೆಮಿ ಆಫ್ ರಿಲಿಜನ್, ಅಸೋಸಿಯೇಷನ್ ಫಾರ್ ಏಷ್ಯನ್ ಸ್ಟಡೀಸ್, ಇಂಟರ್ನ್ಯಾಷನಲ್ ಕನ್ವೆನ್ಷನ್ ಆಫ್ ಏಷ್ಯಾ ಸ್ಕಾಲರ್ಸ್, ಯುರೋಪಿಯನ್ ಕಮಿಷನ್, ಬ್ರಿಟಿಷ್ ಅಸೋಸಿಯೇಷನ್ ಫಾರ್ ಸೌತ್ ಏಶಿಯನ್ ಸ್ಟಡೀಸ್, ಏಷ್ಯಾ ನೆಟ್ವರ್ಕ್ ಮತ್ತು ರಾಯಲ್ ಅಕಾಡೆಮಿ ಫಾರ್ ಓವರ್ಸೀಸ್ ಸೈನ್ಸಸ್ (ಬ್ರಸೆಲ್ಸ್) ಮುಂತಾದ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳು ಏರ್ಪಡಿಸುವ ಸಮಾವೇಶಗಳು ಮತ್ತು ಕಾರ್ಯಾಗಾರದಲ್ಲಿ ಇವರನ್ನು ಮುಖ್ಯ ಭಾಷಣಕಾರರಾಗಿ ಆಮಂತ್ರಿಸಲಾಗಿದೆ. ವಿಶ್ವದಾದ್ಯಂತ ಅನೇಕ ಪ್ರಮುಖ ವಿಶ್ವವಿದ್ಯಾಲಯಗಳು — ಉದಾಹರಣೆಗೆ, ಪ್ರಿನ್ಸ್ಟನ್, ಅರಿಜೋನ, ಲಂಕಸ್ಟೆರ್ (Lancaster), ಘ್ರೊನಿಂಗೆನ್, ಆಮ್ಸ್ಟರ್ಡ್ಯಾಮ್, ಬ್ಯಾಂಡಂಗ್ (Bandung), ಲಾಸನ್ನೆ (Lausanne), ಲುವೆನ್, ಬಾನ್, ದೆಹಲಿ, ಲೆಸ್ಟರ್ (Leicester), ಅಬರ್ಡೀನ್, ಒಟ್ಟಾವ, ಬ್ರಸೆಲ್ಸ್, ಟೊರಾಂಟೊ, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ — ಇವರ ಉಪನ್ಯಾಸಗಳನ್ನು ಏರ್ಪಡಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಂದು ವಿಶಿಷ್ಟ ವಿದ್ಯಮಾನವನ್ನೂ ಗಮನಿಸಲಾಗಿದೆ: ಭಾರತದಲ್ಲಿ ಇವರ ಸಾರ್ವಜನಿಕ ಭಾಷಣಗಳನ್ನು ಕೇಳಲು ನೂರಾರು ಜನರು ಸೇರುತ್ತಾರೆ. ಸಾಂಸ್ಕೃತಿಕ ಸಮಸ್ಯೆಗಳ ಕುರಿತ ಇವರ ಒಳನೋಟಗಳು ಅವರ ದೈನಂದಿನ ಸಮಸ್ಯೆಗಳಿಗೆ ಪರಿಹಾರಕೊಡುತ್ತಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಎಸ್.ಎನ್. ಬಾಲಗಂಗಾಧರರವರು ಓರ್ವ ದಾರ್ಶನಿಕ ಮಾತ್ರವಲ್ಲ, ಯೋಚಿಸಿದ್ದನ್ನು ಕಾರ್ಯರೂಪಕ್ಕಿಳಿಸುವ ಕ್ರಿಯಾಶೀಲ ಚಿಂತಕ ಕೂಡ. ನಾನು ಈ ಹಿಂದೆಯೇ ತಿಳಿಸಿದಂತೆ, ಇವರು ಪ್ರಾರಂಭಿಸಿದ ಇಂಡಿಯಾ ಪ್ಲಾಟ್ಫಾರ್ಮ್ ಇಂದು ಯುರೋಪ್ ಮತ್ತು ಭಾರತದ ಮೂವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಮತ್ತು ಸಂಸ್ಥೆಗಳ ಸಂಕೀರ್ಣವಾಗಿ ಬೆಳೆದಿದೆ. ಯುರೋಪಿನ ಘೆಂಟ್, ಘ್ರೊನಿಂಗೆನ್, ಆಂಟ್ವೆರ್ಪ್, ಅವೇಯ್ರೋ (Aveiro) ಮತ್ತು ಪಾರ್ದುಬಿತ್ಸೆ ವಿಶ್ವವಿದ್ಯಾಲಯಗಳು ಹಾಗೂ ಭಾರತದ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಮತ್ತು ಭಾರತದ ಗೋಕುಲ ಶಿಕ್ಷಣ ಪ್ರತಿಷ್ಠಾನ, ಅಮೃತಾ ವಿಶ್ವವಿದ್ಯಾಲಯ, ಐಐಟಿ ಜೋದಪುರ, ಇನ್ಸ್ಟಿಟ್ಯೂಟ್ ಆಫ್ ಫೈನಾನ್ಸ್ ಅಂಡ್ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಇವು ಇಂಡಿಯಾ ಪ್ಲಾಟ್ಫಾರಂನ ಪ್ರಮುಖ ಸದಸ್ಯರುಗಳು. ಇಂದು ಭಾರತದ ಹಲವು ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ನಮ್ಮ ವಿಶ್ವವಿದ್ಯಾಲಯ ಹೊಂದಿರುವ ಯೋಜನೆ ಮತ್ತು ಸಹಯೋಗಳ ಹಿಂದೆಯೂ ಎಸ್.ಎನ್. ಬಾಲಗಂಗಾಧರರವರ ಪ್ರೇರಣೆ ಮತ್ತು ಸಹಾಯ ಕೆಲಸ ಮಾಡಿದೆ. ಕಳೆದ ವರ್ಷ ನಮ್ಮ ರೆಕ್ಟರ್ ಪ್ರೊಫೆಸರ್ ಮಿರೊಸ್ಲವ್ ಲುಡ್ವಿಗ್ ರವರು ಇಂಡಿಯಾ ಪ್ಲಾಟ್ಫಾರಂನ ಮೂಲಕ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಸಲುವಾಗಿ ಭಾರತಕ್ಕೆ ಮತ್ತು ಬೆಲ್ಜಿಯಂಗೆ ನಮ್ಮ ವಿಶ್ವವಿದ್ಯಾಲಯದ ನಿಯೋಗ ತೆಗೆದುಕೊಂಡು ಹೋಗಿದ್ದರು. ಇದರ ನಂತರ, ನಮ್ಮ ವಿಶ್ವವಿದ್ಯಾಲಯದ ವಿವಿಧ ತಜ್ಞರನ್ನೂಳಗೊಂಡ ಮತ್ತೆರಡು ನಿಯೋಗಗಳನ್ನೂ ಇವರು ಭಾರತಕ್ಕೆ ಒಯ್ದಿದ್ದರು. ಹೊಸ ಸಂಶೋಧನೆ ಮತ್ತು ಶೈಕ್ಷಣಿಕ ಯೋಜನೆಗಳು ಹಾಗು ಭಾರತೀಯ ಸಂಶೋಧಕರ ರೂಪದಲ್ಲಿ ಈ ಕ್ರಮಗಳ ಫಲ ನಮಗೀಗಾಲೇ ದೊರೆಯತೊಡಗಿದೆ.

ಎಸ್.ಎನ್. ಬಾಲಗಂಗಾಧರರವರು 2007ರಿಂದ ನಮ್ಮ ಕಲಾ ಮತ್ತು ತತ್ವಶಾಸ್ತ್ರ ವಿಭಾಗದೊಂದಿಗೆ, ಸಂಶೋಧನೆ, ಶಿಕ್ಷಣ ಮತ್ತು ಪ್ರಮುಖ ಸಮಾವೇಶಗಳ ಸಂಘಟನೆಯ ವಿಚಾರದಲ್ಲಿ ಜತೆಗೂಡಿ ಕೆಲಸಮಾಡುತ್ತಿದ್ದಾರೆ. ರಿಲಿಜನ್ ಅಧ್ಯಯನಾ ವಿಭಾಗದಲ್ಲಿ ಪಿ.ಎಚ್.ಡಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಇಲ್ಲಿನ ಪಿ.ಎಚ್.ಡಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇವರು ತೆಗೆದುಕೊಂಡ ತರಗತಿಗಳು ಇಂದು ಹಲವಾರು ಪ್ರಕಟಣೆಗಳು ಮತ್ತು ಯೋಜನೆಗಳಿಗೆ ಸ್ಪೂರ್ತಿಯಾಗಿವೆ. ಇವರ ಸಹಯೋಗದಲ್ಲಿ ಪಾರ್ದುಬಿತ್ಸೆ ವಿಶ್ವವಿದ್ಯಾಲಯವು ಈ ಎರಡು ಪ್ರತಿಷ್ಠಿತ ಅಂತರರಾಷ್ಟ್ರೀಯ ಸಮಾವೇಶಗಳನ್ನು ಇತ್ತೀಚಿಗೆ ಆಯೋಜಿಸಿತ್ತು: 2011ರಲ್ಲಿ ಇಲ್ಲಿ ನಡೆದ ರೀಥಿಂಕಿಂಗ್ ರಿಲಿಜನ್ ಇನ್ ಇಂಡಿಯಾ3, ಮತ್ತು 2012ರಲ್ಲಿ ಭಾರತದ ಮಂಗಳೂರಿನಲ್ಲಿ ನಡೆದ ರೀಥಿಂಕಿಂಗ್ ರಿಲಿಜನ್ಇನ್ ಇಂಡಿಯಾ-4.

ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಪುರುಷರೇ, ನಾನು ಇನ್ನು ಇದಕ್ಕಿಂತ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದು ನಂಬಿದ್ದೇನೆ. ನಾನು ಪ್ರಸ್ತಾಪಿಸಿದ ಈ ಕೆಲವು ಮಾಹಿತಿಗಳು ಈ ವಿದ್ವಾಂಸರ ಬಹುಮುಖ ವ್ಯಕ್ತಿತ್ವದ, ಅವರ ಸಾಧನೆಗಳ ಸಣ್ಣ ಪರಿಚಯವನ್ನು ನಿಮಗೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸುತ್ತೇನೆ. ಎಸ್.ಎನ್. ಬಾಲಗಂಗಾಧರರವರು ಓರ್ವ ಉನ್ನತ ವಿದ್ವಾಂಸರಷ್ಟೇ ಅಲ್ಲ, ಒಬ್ಬ ಕಾರ್ಯಶೀಲ ನಾಯಕರು, ದೂರದೃಷ್ಟಿಯುಳ್ಳ ಚಿಂತಕರು ಹಾಗು ಸ್ಪೂರ್ತಿದಾಯಕ ವ್ಯಕ್ತಿ ಕೂಡ. ಇವರು ಗೌರವ ಡಾಕ್ಟರೇಟ್ ಪದವಿಗೆ ಅತ್ಯಂತ ಅರ್ಹ ವ್ಯಕ್ತಿ. ಈ ದಿನ ಇವರು ನಮ್ಮೊಂದಿಗಿದ್ದಾರೆ ಎನ್ನುವುದೇ ನಮಗೊಂದು ಗೌರವದ ವಿಚಾರ.

ಧನ್ಯವಾದಗಳು.

6 ಟಿಪ್ಪಣಿಗಳು Post a comment
  1. Nagshetty Shetkar's avatar
    Nagshetty Shetkar
    ಆಕ್ಟೋ 4 2013

    ಬಹುಶಃ ಈ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ದರ್ಗಾ ಸರ್ ಅವರ ವಚನ ಸಂಶೋಧನೆ ಬಗ್ಗೆ ಗೊತ್ತಿಲ್ಲ ಅನ್ಸುತ್ತೆ. ಇಲ್ಲವಾದರೆ ದರ್ಗಾ ಸರ್ ಅವರಿಗೆ ಗೌರವ ಪಿ ಎಚ್ ಡಿ ಕೊಡುತ್ತಿದ್ದರು. ಭಾರತೀಯ ಬಾಷೆಯಲ್ಲಿ ಬರೆಯುವವರಿಗೆ ಮೊದಲಿಂದಲೂ ಅನ್ಯಾಯವಾಗುತ್ತಿದೆ.

    ಉತ್ತರ
    • Siddha's avatar
      Siddha
      ಆಕ್ಟೋ 4 2013

      ಸಮ್ನಿರಿ ಶೇಟ್ಕರ್, ತುಂಬಾ ಕಾಮಿಡಿ ಮಾಡಬೇಡಿ… ನಗು ತಡಿಯಕ್ ಆಗ್ತಿಲ್ಲ.
      ಆದ್ರೂ ನೀವೂ, ನಿಮ್ಮ ಗುರುಗಳು ಅಂತ ಅವರ ಹೆಸರನ್ನೂ ಹೇಳಿ ಇಷ್ಟೊಂದು ಕಾಲೆಳೆಯೋಧಾ???

      ಉತ್ತರ
      • Manohar Naik's avatar
        Manohar Naik
        ಆಕ್ಟೋ 4 2013

        ನನಗೂ ನಗೆ ತಡೆಯೋಕೆ ಆಗ್ತಿಲ್ಲಾ ಸಿದ್ದ ಅವರೆ..ಈ ಯಪ್ಪ ಸುಮ್ನೆ ಅವರನ್ನೆಲ್ಲಾ ಹೊಗಳುವ ಭರಾಟೆಯಲ್ಲಿ ಅವರಿಗೆ ಇರುವ ಚೂರುಪಾರು ಮರ್ಯಾದೆನೂ ತೆಗೆತಾ ಇದಾರೆ..

        ಉತ್ತರ
  2. Nagshetty Shetkar's avatar
    Nagshetty Shetkar
    ಆಕ್ಟೋ 4 2013

    Mr. Siddha, what is wrong with you? What is comical in my comments? If Ballu Rao can get doctorate for merely counting Jati/Kula in Vachanas, then shouldn’t the doctorate have been given to Darga Sir long ago? Darga Sir has championed the voice of Vachanakaras in 21st century like none. He has discovered 14 meanings for the word Jangama. That has brought in new connections between Marxism and Vachanas and Declaration of Human Rights.

    ಉತ್ತರ
    • ಸಹನಾ's avatar
      ಸಹನಾ
      ಆಕ್ಟೋ 4 2013

      “Darga Sir has championed the voice of Vachanakaras in 21st century like none. He has discovered 14 meanings for the word Jangama. That has brought in new connections between Marxism and Vachanas and Declaration of Human Rights.”

      ಹೆ ಹೆ ಹೆ ಹೆ ಹೆ ಹೆ ಹೆ ಹೆ……………….. 🙂

      ಈ ರೀತಿ ಬುರುಡೆ ಬಿಡದಕ್ಕೆಲ್ಲಾ ಗೌಡಾ ಕೊಡಾದಾದರೆ….. ಪ್ರಾಚೀನ ಭಾರತದಲ್ಲಿ ಸಂವಿದಾನಾತ್ಮಕ ಆಳ್ವಿಕೆ ಇತ್ತು, ಪ್ರಜಾಪ್ರಭುತ್ವ ಇತ್ತು, ಉದಾರವಾದ ಇತ್ತು, ಗಣರಾಜ್ಯವಿತ್ತು, ರಾಕೆಟ್ ಸೈನ್ಸ್ ಇತ್ತು, ಎಂದೆಲ್ಲಾ ಕ್ರಿಶ 1912-13 ರ ಸುಮಾರಿಗೆ ಅಂದರೆ ಇಂದಿಗೆ ಒಂದು ಶತಮಾನಕ್ಕೆ ಮೊದಲು ಬುರುಡೆ ಬಿಡ್ತಿದ್ದವರಿಗೆಲ್ಲಾ ನೂರಾರು ಗೌಡಾ ಕೊಡಬೇಕಿತ್ತಲ್ವಾ??? !!!! ನಿಮ್ ದರ್ಗಾ 100 ವರ್ಷಗಳ ಹಿಂದ ಅವರುಗಳು ಬಿಟ್ಟ ಅದೇ ಬುರುಡೆಯನ್ನು 2013 ರಲ್ಲಿ ವಚನಗಳ ಹೆಸರಲ್ಲಿ ಬಿಡ್ತಿದ್ದಾರೆ. ಆಗಲಾದರೂ ಸಮಾಜವಿಜ್ಞಾನದ ವೈಜ್ಞಾನಿಕ ಚರ್ಚೆಗಳು ಭಾರತದಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿತ್ತು. ಆದರೆ ಇಂದು ತಮ್ಮ ವಾದದಲ್ಲಿನ ಧೋಷಗಳನ್ನು ಬುಡಸಮೇತ ಕಿತ್ತು ವೈಜ್ಞಾನಿಕವಾಗಿ ತೋರಿಸುತ್ತಿದ್ದರೂ ನಾಚಿಕೆ ಇಲ್ಲದೆ ಅದೇ ಹಳೇ ರಾಗವನ್ನು ಹೊಸದಾಗಿ ಸಂಶೋಧಿಸಿರುವಂತೆ “discovered 14 meanings” “brought in new connections” ಅಂತ ಭಂಡತನದಿಂದ ರೀಲು ಸುತ್ತುತ್ತಿದ್ದಾರಲ್ಲಾ ಈ ಗುರುಶಿಷ್ಯರು !!!!

      ನನಗೆ ಮೈಸೂರಿನ ತಲೆಮಾಸಿದ ಶಾಸಕರಾಗಿದ್ದವರೊಬ್ಬರು “ಮುಖ್ಯಮಂತ್ರಿ ಆಗೋ ಯೋಗ್ಯತೆ ನನಗೊಬ್ಬನಿಗೇ ಇರೋದು; ನನ್ನನ್ನೇ ಮಾಡಬೇಕಿತ್ತು” ಅಂತೆ ಹೀಗ್ಗೆ ಒಂದು ವರ್ಷದ ಹಿಂದೆ ಹೇಳುತ್ತಾ (ಶಂ.ಲಿಂ ಗೌಡ್ರು ಅಂತ ನೆನಪು) ಇದ್ದಂಗೆ ಈ ಯಡವಟ್ಟಪ್ಪ ಶೆಟ್ರ ಹೇಳಿಕೆಯೂ ಅನ್ಸುತ್ತೆ… ಈ ತಲೆಕೆಟ್ಟವರನ್ನೆಲ್ಲಾ ಸಂಶೋಧಕರು ಬುದ್ದಿಜೀವಿಗೆಳಂತೆ ಭಾವಿಸಿ ವಾದ ಮಾಡೋಕ್ಕೋಗೋವರ ತಲೆ ಹಾಳಾಗತ್ತೆ ಅಷ್ಟೇ!!!

      ಉತ್ತರ
    • Manohar Naik's avatar
      Manohar Naik
      ಆಕ್ಟೋ 4 2013

      ha ha ha ha ah aha ha ah ha ha ha ha ha ha ha ha ha ha ha ah ah ah aha haaaaaaaaaaaaaaaaaaaaaaaaaaaaaaaaa

      this is the best response to Shetkar and his gurru Krishnappa alias Darga

      ಉತ್ತರ

Leave a reply to Siddha ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments