ಮೂರ್ತಿಗಳ ದ್ವಂದ್ವಗಳು ಮತ್ತು ದೇವನೂರರ ಬಾಂಬುಗಳು
– ಮು.ಅ ಶ್ರೀರಂಗ, ಬೆಂಗಳೂರು
ಸುಮಾರು ಹತ್ತು ದಿನಗಳಿಂದ ಈಚೆಗೆ ನಮ್ಮೀ ಸುವರ್ಣ ಕರ್ನಾಟಕವು ಅನಂತಮೂರ್ತಿಯವರ ಹೇಳಿಕೆ,ಮರುಹೇಳಿಕೆ,ಅವುಗಳಿಗೆ ಮಾಧ್ಯಮಗಳ,ಜನರ ಪ್ರತಿಕ್ರಿಯೆಗಳು,ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಏನು ಎತ್ತ ಎಂದು ಇತರ ಬುದ್ಧಿಜೀವಿಗಳ ಪಾಠಗಳಿಂದ ತುಂಬಿ ಹೋಗಿದೆ. ಈರುಳ್ಳಿ ಬೆಲೆ ಎಷ್ಟು ಏರಿತು,ರುಪಾಯಿ ಎಷ್ಟು ಆಳಕ್ಕೆ ಬಿತ್ತು ಇತ್ಯಾದಿಗಳ ಕಡೆಗೆ ನಮಗೆ ಆಸಕ್ತಿಯಿಲ್ಲ. ಅನಂತಮೂರ್ತಿಯವರು ಏನು ಹೇಳಿದ್ದಾರೆ?ಈಗ ಎಲ್ಲಿದ್ದಾರೆ?ಏನು ಮಾಡುತ್ತಿದ್ದಾರೆ?ಇದೇ ಮುಖ್ಯವಾಗಿದೆ. ಇದರ ಜತೆಗೆ ಈಗ ನಮ್ಮ ಖ್ಯಾತ ದಲಿತ ಮತ್ತು ಬಂಡಾಯ ಸಾಹಿತಿಗಳಾದಂತಹ ಮಾನ್ಯ ದೇವನೂರು ಮಹಾದೇವ ಅವರು ಬೆಂಗಳೂರು ಸುತ್ತಮುತ್ತಲಿನ ಬ್ರಾಹ್ಮಣ ಮತ್ತು ಲಿಂಗಾಯಿತರ townshipಗಳನ್ನು ಪ್ರಾಣಹಾನಿ ಆಗದಂತೆ ಬಾಂಬ್ ಹಾಕಿ ನಾಶಪಡಿಸಲೇಬೇಕು ಎಂದು “ಫತ್ವಾ” ಹೊರಡಿಸಿದ್ದಾರೆ. . ಈ ಬಾಂಬ್ ಯೋಜನೆಯನ್ನು ಅವರು ಹೇಳಿದ್ದು ಕರ್ನಾಟಕ ಕೇಂದ್ರೀಯ ವಿ ವಿ ಮತ್ತು ಗುಲ್ಬರ್ಗ ವಿ ವಿ ಸಂಯುಕ್ತವಾಗಿ ಆಯೋಜಿಸಿದ ಕರ್ನಾಟಕ ದಲಿತ ಚಳುವಳಿ ಹಾಗು ಸಾಹಿತ್ಯದ “ಉದ್ಘಾಟನಾ” ಸಮಾರಂಭದಲ್ಲಿ. ಇದುವರೆಗೆ ವಿ ವಿ ಗಳ ಕೆಲವು ಅಧ್ಯಾಪಕರು ಮತ್ತು ಪ್ರಾಧ್ಯಾಪಕರು ನಕ್ಸಲರ ಮತ್ತು ಮಾವೋವಾದಿಗಳ ಹಿಂಸೆಗೆ ಬೌದ್ಧಿಕ ಬೆಂಬಲವನ್ನು ಮಾತ್ರ ಕೊಡುತ್ತಿದ್ದರು. ಇನ್ನು ಮುಂದೆ ಭೌತಿಕ ಬೆಂಬಲವನ್ನೂ ಸಹ ನಿರ್ಭಯವಾಗಿ ನೀಡಬಹುದು. ಏಕೆಂದರೆ ಬುದ್ಧಿಜೀವಿಗಳು ಹೇಳಿದ ಮೇಲೆ ಮುಗಿಯಿತು. ಅವರು ಏನೇ ಮಾಡಿದರೂ, ಹೇಳಿದರೂ ಅದು ಅಪರಾಧವಲ್ಲ.
ಅನಂತಮೂರ್ತಿ ಅವರಿಗೇನೋ ಅರಳು ಮರಳಿನ ವಯಸ್ಸು. ಪಾಪ ಎಂಬತ್ತು ವರ್ಷ ಮೀರಿದೆ. ಇವತ್ತು ಹೇಳಿದ್ದು ನಾಳೆಗೆ ಜ್ನಾಪಕವಿರುವುದಿಲ್ಲ. ಹೋಗಲಿ ಆ ಹಿರಿಯ ಜೀವವನ್ನು ನೋಯಿಸುವುದು ಬೇಡ ಎಂದು ಸುಮ್ಮನಾದರೂ ಅವರೇ ದಿನಾ ಜಗಳಕ್ಕೆ ಬಂದವರಂತೆ ಮಾತನಾಡುತ್ತಿದ್ದಾರೆ. ಪ್ರತಿ ದಿನ ಪತ್ರಿಕೆಗಳು ೨೪x೭ ಸುದ್ದಿವಾಹಿನಿಗಳೆಲ್ಲ “ಅನಂತಮಯ”ವಾಗಿ ಹೋಗುತ್ತಿದೆ. ಮಾಧ್ಯಮದವರು ಕಿಲಾಡಿಗಳು. ಬಿಡಲಿಕ್ಕೆ ಉಂಟಾ? ಒಂದು “ಕೈ”ಜಮಾಯಿಸಿ ಬಿಡುತ್ತಾರೆ. ಇಂತಹುದರಲ್ಲಿ ಮಾಧ್ಯಮದವರನ್ನು, ಜನಗಳನ್ನು ನಾನು ಹೇಳಿದ್ದು ಮಾತ್ರ ಬರೆಯಿರಿ,ಕೇಳಿಕೊಂಡು ಹೋಗಿ ಎಂದರೆ “ಜ್ಞಾನಪೀಠ”ಕ್ಕೆ ಶೋಭೆ ತರುವ ಮಾತಲ್ಲ. ೨೪-೯-೨೦೧೩ರ ಒಂದೇ ಒಂದು ಸಂವಾದ ಕಾರ್ಯಕ್ರಮದಲ್ಲಿ ಅವರು ಎಷ್ಟು ಗೊಂದಲದಲ್ಲಿದ್ದಾರೆ ಎಂದರೆ ಅಯ್ಯೋ ಅನಿಸುತ್ತದೆ,ತಾನು ಏನು ಹೇಳುತ್ತಿದ್ದೇನೆ ಎಂಬುದರ ಅರಿವೇ ಅವರಿಗೆ ಇದ್ದಂತಿಲ್ಲ ಅವರ ಸದ್ಯದ ಗೊಂದಲವನ್ನು ಈ ಕೆಳಕಂಡ ಆರೇಳು ಹೇಳಿಕೆಗಳೇ ಹೇಳುತ್ತವೆ.
೧. ಹಗರಣ ನಡೆದರೂ ಬಡವರ ಪ್ರೀತಿ ಕೇಂದ್ರ ಸರ್ಕಾರದ ಮೇಲೆಯೇ ಇದೆ. ಎಷ್ಟೇ ಗೊಂದಲಗಳು ಇದ್ದರೂ ಬದಲಾವಣೆಯನ್ನು ಕಾಂಗ್ರೆಸ್ಸಿನಿಂದ ನಿರೀಕ್ಷಿಸಬಹುದು. .
೨. ಈಗಿನ ಸನ್ನಿವೇಶದಲ್ಲಿ ನಾನು ಕಾಂಗ್ರೆಸ್ಸನ್ನು ಸಮರ್ಥಿಸಲಾರೆ;ಆದರೆ ಕಾಂಗ್ರೆಸ್ ಬತ್ತಲಾರದ ಗಂಗೆ.
೩. ನಾನು ನನ್ನ ಜೀವಮಾನದಲ್ಲಿ ಕಾಂಗ್ರೆಸ್ ಪರವಾಗಿರಲಿಲ್ಲ. ಆದರೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಹೇಳುವ ನೈತಿಕ ಅಗತ್ಯವಿತ್ತು.
೪. ಇಷ್ಟೆಲ್ಲಾ ಆದರೂ ಸಹ ನಾನು ಪ್ರಧಾನಿ ಮನಮೋಹನಸಿಂಗರನ್ನು ಸಮರ್ಥಿಸಿಕೊಳ್ಳುವುದಿಲ್ಲ.
೫. ಕಾಂಗ್ರೆಸ್ಸ್ ಪಕ್ಷದಿಂದ ಗೆದ್ದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು “ಕಾಂಗ್ರೆಸ್ಸೇತರ ವ್ಯಕ್ತಿ.
೬. ಮೋದಿ ಬಗ್ಗೆ ಭಯವಿಲ್ಲ,ಮಾತನಾಡುವುದಕ್ಕೆ ಅಂಜಿಕೆಯೂ ಇಲ್ಲ.
೭. ಅತ್ಯಂತ ಸಣ್ಣ ಗಾಣಿಗ ಜನಾಗದಿಂದ ಬಂದ ಮೋದಿ ಈ ದೇಶದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬೆಳೆದಿರುವುದಕ್ಕೆ ನನಗೆ ಹೆಮ್ಮೆ ಇದೆ.ಇದು ಭಾರತೀಯ ಪ್ರಜಾಪ್ರಭುತ್ವದ ಸೊಬಗು.
ಮೇಲಿನ ಹೇಳಿಕೆಗಳು ಹೇಗೆ ಒಂದಕ್ಕೊಂದು ತಾಳೆಯಾಗುತ್ತದೆ? ಎಲ್ಲವೂ ವಿರೋಧಾಭಾಸವಾಗಿದೆಯಲ್ಲವೇ?ಎಂದು ಯೋಚಿಸಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. “ನಗೆಹನಿ”,”ಜೋಕ್ಸ್” ಎಂದು ನಕ್ಕು ಹಾಯಾಗಿರುವುದು ಒಳ್ಳೆಯದು. ಇಲ್ಲವಾದರೆ ತಲೆನೋವು ಗ್ಯಾರಂಟಿ. ಬ್ರಾಹ್ಮಣರು ವೇದಗಳ ಕಾಲದಲ್ಲಿ ಗೋಮಾಂಸ ತಿನ್ನುತ್ತಿದ್ದರು ಎಂಬುದು ಹೊಸ ವಿಷಯವೇನಲ್ಲ. ಈಗಾಗಲೇ ಸಾಕಷ್ಟು ಮಂದಿ ಹೇಳಿಯಾಗಿದೆ. ಅನಂತಮೂರ್ತಿಯವರು ತಾವೇ ಸಂಶೋಧನೆ ಮಾಡಿರುವ ರೀತಿಯಲ್ಲಿ ಹೇಳುತ್ತಿದ್ದಾರೆ ಅಷ್ಟೇ.
“ನನಗೆ ಹೆಣ್ಣು ಮಕ್ಕಳೆಂದರೆ ಇಷ್ಟ. ಮೋದಿಯವರಿಗೆ ಏನು ಇಷ್ಟವೋ ಗೊತ್ತಿಲ್ಲ”ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಅನಂತಮೂರ್ತಿಯಂತಹವರು ಹೇಳಿದರೆ ಅದಕ್ಕೆ ನಾನಾ ಊಹಾಪೂಹಗಳು ರೆಕ್ಕೆ ಪುಕ್ಕ ಪಡೆದುಕೊಂಡು ಹಾರಾಡಬಹುದು. ಆಗ “ಹಕ್ಕಿ ಹಾರುತಿದೆ ನೋಡಿದಿರಾ” ಎಂದು ಬ್ರೇಕಿಂಗ್ ನ್ಯೂಸುಗಳು ಶುರುವಾಗುತ್ತದೆ! ಇದು ಅನಂತಮೂರ್ತಿಯವರಿಗೆ ಶೋಭೆ ತರುವ ಮಾತಂತೂ ಅಲ್ಲ.
ಇನ್ನು ನಮ್ಮ ಮಹಾದೇವರ ಬಾಂಬ್ ಯೋಜನೆಗೆ, ಯೋಚನೆಗೆ ಬರೋಣ. ಅಂಬಾನಿ ಬಂಗಲೆಗೆ ಬ್ರಾಹ್ಮಣರ ಮತ್ತು ಲಿಂಗಾಯಿತರ townshipಗಳಿಗೆ ಪ್ರಾಣಹಾನಿ ಆಗದಂತೆ ಬಾಂಬ್ ಹಾಕುವ ಮುನ್ನ ಅವುಗಳಲ್ಲಿ ವಾಸ ಮಾಡುತ್ತಿರುವವರ ಜತೆಗೆ ಅಕ್ಕ ಪಕ್ಕದ ನಿವಾಸಿಗಳಿಗೆ ಕೂಡ ಹಾನಿ ಆಗಬಾರದಲ್ಲವೇ? ಅವರಿಗೆಲ್ಲಾ “ನಿರಾಶ್ರಿತರ ಶಿಬಿರಗಳು ಮತ್ತು ಗಂಜಿ ಕೆಂದ್ರ”ಗಳನ್ನು ವ್ಯವಸ್ಥೆ ಮಾಡಬೇಕು. ಆನಂತರ ದೇವನೂರು ಮಹಾದೇವ ಅವರು ಬಾಂಬ್ ಹಾಕಬಹುದು. facebook ನಲ್ಲಿ ವ್ಯಂಗ್ಯ ಚಿತ್ರ ಬರೆದರೆ, ಅದನ್ನು like ಮಾಡಿದರೆ ಜೈಲು ಪಾಲಾಗುವ ಈ ದೇಶದಲ್ಲಿ ಕಾಲದಲ್ಲಿ ನಾವಿದ್ದೇವೆ. ಮುಝಾಫುರ್ ಗಲಭೆಗೆ “ನಕಲಿ ಸಿಡಿ”ಯನ್ನು upload ಮಾಡಿದ್ದೆ ಕಾರಣ ಎಂದು ಉತ್ತರ ಪ್ರದೇಶದ ಸರ್ಕಾರ ಆರೋಪ ಹೊರಿಸಿ ಒಬ್ಬ ಶಾಸಕರನ್ನು ಬಂಧಿಸಿದೆ. ಕೇಂದ್ರಿಯ ವಿ ವಿ ಯು ಆಯೋಜಿಸಿದ್ದ ಸಭೆಯಲ್ಲಿ “ಅಸಲಿ ಸಿಡಿ”ಯನ್ನೇ ಸ್ವತಃ play ಮಾಡಿದ ದೇವನೂರು ಮಾಹಾದೇವರ ಬಗ್ಗೆ ಯಾರೂ ಏನೂ ಹೇಳುವಂತಿಲ್ಲ. ಏಕೆಂದರೆ ಅವರು “ಬುದ್ಧಿಜೀವಿಗಳು”.
ಲಾಸ್ಟ್ ಬಾಲ್ ಆಫ್ ದಿ ಓವರ್ : http://www.gossip..raajadhaani railu .in ಪ್ರಕಾರ ಈ ಸಲದ ಜ್ಞಾನಪೀಠ ಪ್ರಶಸ್ತಿಯು ಕರ್ನಾಟಕದ ವಿವಿ ಒಂದರಲ್ಲಿ ಸಂಶೋಧನಾ ಕೆಂದ್ರವನ್ನು ಮುಚ್ಚಿಸಿದ “ಆಪರೇಷನ್ ಬಂದ್” ಕಾರ್ಯಾಚರಣೆಯ ಕ್ಯಾಪ್ಟನ್ ಅವರಿಗೆ “ನೀಡಲಾಗುವುದು”ಎಂದು ಕರ್ನಾಟಕದ ಮಹಾಜನತೆ ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರಂತೆ!
ಚಿತ್ರ ಕೃಪೆ : http://www.frontline.in





ಜ್ಞಾನಪೀಠ ಪ್ರಶಸ್ತಿ ರಾಜಕೀಯ ಒತ್ತಡ, ಲಾಬಿಗಳಿಗೆ ದೊರಕುವ ಪ್ರಶಸ್ತಿ ಅಲ್ಲ. ಅದಲ್ಲದೆ ಇದು ಸರ್ಕಾರವು ನೀಡುವ ಪ್ರಶಸ್ತಿಯೂ ಅಲ್ಲ. ಜ್ಞಾನಪೀಠ ಪ್ರಶಸ್ತಿ ಸಾಹು ಜೈನ್ ಕುಟುಂಬದಿಂದ (ಟೈಮ್ಸ್ ಆಫ್ ಇಂಡಿಯಾ ಪತ್ರಿಕಾಸಮೂಹ ನಡೆಸುತ್ತಿರುವ ಕುಟುಂಬ) ಸ್ಥಾಪಿಸಲ್ಪಟ್ಟಿರುವ ಪ್ರಶಸ್ತಿಯಾಗಿದ್ದು ಇದರ ಆಯ್ಕೆಗೆ ವ್ಯವಸ್ಥಿತ ಪ್ರಕ್ರಿಯೆ ಇದೆ. ಇದು ಸಾಹಿತ್ಯದಲ್ಲಿ ಉನ್ನತ ಸಾಧನೆ ಮಾಡಿರದ ವ್ಯಕ್ತಿಗೆ ಕೇವಲ ಲಾಬಿ, ಒತ್ತಡ, ಶಿಫಾರಸುಗಳಿಂದ ಸಿಕ್ಕಿದ ಉದಾಹರಣೆ ಇಲ್ಲ. ಹೀಗಾಗಿ ಇದು ತನ್ನ ಘನತೆಯನ್ನು ಕಾಯ್ದುಕೊಂಡಿದೆ. ಹೀಗಾಗಿ ಜ್ಞಾನಪೀಠ ಪ್ರಶಸ್ತಿಯ ವಿಷಯದಲ್ಲಿ ಅಥವಾ ಅದನ್ನು ಪಡೆದಿರುವವರ ವಿಷಯದಲ್ಲಿ ಹಗುರವಾಗಿ ಮಾತನಾಡುವುದರಿಂದ ಪ್ರಶಸ್ತಿಯ ಘನತೆಯಾಗಲೀ, ಪಡೆದವರ ಘನತೆಯಾಗಲೀ ಕುಂದಾಗುವುದಿಲ್ಲ ಬದಲಿಗೆ ಹಾಗೆ ಹಗುರವಾಗಿ ಮಾತಾಡಿದವರ ಬಗ್ಗೆಯೇ ಜನ ಅನುಮಾನದಿಂದ ನೋಡುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.
ಜ್ಞಾನಪೀಠ ಪ್ರಶಸ್ತಿ ಬಗ್ಗೆ ಮಾತ್ರವಲ್ಲ ಬಸವಶ್ರೀ ಪ್ರಶಸ್ತಿ ಬಗ್ಗೆಯೂ ಈ ಮನುವಿನ ಮೊಮ್ಮಕ್ಕಳು ಹಗುರವಾಗಿ ಮಾತನಾಡಿದ್ದಾರೆ! ವಚನ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡದೆ ದರ್ಗಾ ಸರ್ ಅವರಿಗೆ ಕೇವಲ ಲಾಬಿ, ಒತ್ತಡ, ಶಿಫಾರಸುಗಳಿಂದ ಸಿಕ್ಕಿದೆಯೇ?!
ಶೆಟ್ಕರ್ ಗುರುಗಳೆ..ನಿಮಗೂ ಯಾವುದಾದರೂ ಒಂದು..ಸಣ್ಣ ಸೈಜಿನ ಪ್ರಶಸ್ತಿಯಾದರೂ ಸರಿ… ಸಿಗಬೇಕು ಎಂದು ನನ್ನ ಇಚ್ಛೆ..ನೀವೂ ಕೂಡ ಸಾಧಾರಣ ಸಾಧಕರಲ್ಲ..ಇದನ್ನು ತಮ್ಮ ಹಿರಿ ಗುರುಗಳಾದ ‘ಕೃಷ್ಣಪ್ಪ’ ನವರು ಕೂಡ ಒಪ್ಪುತ್ತಾರೆ ಎಂಬ ಭರವಸೆಯಿದೆ ನನಗೆ.
Do you think D.V.G., M. Gopalakrishna Adiga, were not deserved to get Jnanapith Award. They didn’t lobbied for any award.
ಅದು ಕೇವಲ ಎಡಪಂಥೀಯ ಎಡಬಿಡಂಗಿಗಳಿಗೆ ಮಾತ್ರ ಸೀಮೀತಗೊಂಡ ಮೇಲೆ ಅದು ತನ್ನ ಮೌಲ್ಯವನ್ನು ಕಳೆದು ಕೊಂಡಿದೆ. ಅದರಲ್ಲೂ ಅಮೂರ್ತಿ ಮತ್ತು ಕಾರ್ನಾಡಂತವರಿಗೆ ಕೊಟ್ಟ ಮೇಲೆ ಅದಕ್ಕಿದ್ದ ಅಲ್ಪ ಸ್ವಲ್ಪ ಘನತೆಯೂ ಹೋಗಿ ಆಯ್ತು. ಈಗ ಅದೇನಿದ್ದರೂ ಕಾಸು ಕೊಟ್ಟು ಕೊಳ್ಳುವ ಗೌ.ಡಾ ದಂತೆ. ಪಾಪ ಅದನ್ನು ಪಡೆದ ಕನ್ನಡ ಹಿರಿಯ ಆತ್ಮಗಳು ಮಗ್ಗುಲು ಬದಲಿಸಿರಬಹುದು. 😀
ಎಡಪಂಥೀಯರಿಗೆ ಕೊಡದೆ ಮನುವಿನ ಮೊಮ್ಮಕ್ಕಳಿಗೆ ಕೊಡಬೇಕೇ?
ಸಾಹಿತ್ಯ ಎಂಬುದು ಕೇವಲ ಮನೋರಂಜನೆಗೆ ಅಥವಾ ಹೊತ್ತು ಕಳೆಯುವುದಕ್ಕಾಗಿ ಇರುವುದು ಅಲ್ಲ. ಅದು ಮನುಷ್ಯನ ಮನಸ್ಸನ್ನು ಅರಳಿಸಬೇಕು, ವಿಕಾಸಗೊಳಿಸಬೇಕು, ಚಿಂತನೆಗೆ ಹಚ್ಚಬೇಕು. ಇಂಥ ಸಾಹಿತ್ಯವೇ ಗಟ್ಟಿಯಾಗಿ ನಿಲ್ಲಬಲ್ಲ ಸಾಹಿತ್ಯವಾಗಿರುತ್ತದೆ. ಹೀಗಾಗಿ ಸಹಜವಾಗಿ ಹೆಚ್ಚಿನ ಸಾಹಿತಿಗಳು ಪ್ರಗತಿಶೀಲ ನಿಲುವು ಉಳ್ಳವರಾಗಿರುತ್ತಾರೆ. ಇದನ್ನು ಎಡಪಂಥೀಯತೆ ಎಂದು ಹೇಳಲಾಗದು. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಎಡಪಂಥೀಯ ರಾಜಕೀಯ ಎಂಬುದು ಪ್ರಪಂಚದಲ್ಲಿ ಹಾಗೂ ದೇಶದಲ್ಲಿ ಹಿನ್ನೆಲೆಗೆ ಸರಿದಿದೆ. ಹೀಗಿರುವಾಗ ಎಡಪಂಥೀಯರಿಗೆ ಜ್ಞಾನಪೀಠ ಪ್ರಶಸ್ತಿ ಸಿಗುತ್ತಿದೆ, ಇದರಿಂದ ಪ್ರಶಸ್ತಿಯ ಮೌಲ್ಯವೇ ಕಡಿಮೆಯಾಗಿದೆ ಎಂಬ ಅಭಿಪ್ರಾಯ ಬಲಪಂಥೀಯ ಒಲವು ಉಳ್ಳವರ ಹತಾಶೆಯ ಮಾತು ಎಂದು ಅನಿಸುತ್ತದೆ. ಎಟುಕದ ದ್ರಾಕ್ಷಿ ಯಾವಾಗಲೂ ಹುಳಿ ಅಲ್ಲವೇ?
[ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಎಡಪಂಥೀಯ ರಾಜಕೀಯ ಎಂಬುದು ಪ್ರಪಂಚದಲ್ಲಿ ಹಾಗೂ ದೇಶದಲ್ಲಿ ಹಿನ್ನೆಲೆಗೆ ಸರಿದಿದೆ.]
ಹಿರಿ ಶರಣರಾದ ‘ಕೃಷ್ಣಪ್ಪ’ನವರ ಈ ಮಾತು ಒಪ್ಪುವಂತದ್ದು..ನಮ್ಮ ದೇಶದ, ಒಂದು ಕಾಲದ ‘ಉಗ್ರ;ಎಡಪಂಥಿಯ ಸಾಹಿತಿಗಳೆಲ್ಲ ಈಗ ದಿಕ್ಕು ದೆಸೆ ಕಾಣದೆ, ಉಪವಾಸ ಬಿಳಬಾರದೆಂದು..ರಾಜಿಸೂತ್ರ ಅಳವಡಿಸಿಕೊಂಡು ನಿರಾಶ್ರಿತ ಕ್ಯಾಂಪುಗಳನ್ನು, ಗಂಜಿಕೇಂದ್ರಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.
ವಾತ್ಸಾಯನನ ಮಕ್ಕಳಾದ ಶೇಟ್ಕರ್ ಅವರೆ.. ನಿಮ್ಮ ದರ್ಗಾರವರು ವಚನದ ಕುರಿತು ಮಾಡಿರುವ ಶ್ರೇಷ್ಠವಾದ ಕೆಲಸದ ಕುರಿತು ಅವಧಿಯಲ್ಲಿ ತೊಳೆದಿದ್ದಾರೆ ಅಂತ ನೀವೇ ಹೇಳಿದ್ದೀರಿ..ತಿಳಿಯಿತಲ್ಲಾ ಅವರ ಸಾಧನೆ..
ಥೂ! ವಾತ್ಸಾಯನನ ಮಗು ಅಂತೆಲ್ಲ ಕರೆದು ನನಗೆ ಬ್ರಾಹ್ಮಣ್ಯವನ್ನು ಅಂಟಿಸಬೇಡಿ.
ನಾನೇನೂ ಅಂಟಿಸೋದು ತಾವು ಅದರಲ್ಲೇ ಅಲ್ಲವೆ ಇರೋದು..ಮನು ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಿದ್ದರೆ ಕಾಮ ವ್ಯವಸ್ಥೆಯನ್ನು ವಾತ್ಸಾಯನನೇ ನಿರ್ಮಿಸಿರಬೇಕು ಅಲ್ಲವೆ?
“ಈ ಸಲದ ಜ್ಞಾನಪೀಠ ಪ್ರಶಸ್ತಿಯು ಕರ್ನಾಟಕದ ವಿವಿ ಒಂದರಲ್ಲಿ ಸಂಶೋಧನಾ ಕೆಂದ್ರವನ್ನು ಮುಚ್ಚಿಸಿದ “ಆಪರೇಷನ್ ಬಂದ್” ಕಾರ್ಯಾಚರಣೆಯ ಕ್ಯಾಪ್ಟನ್ ಅವರಿಗೆ “ನೀಡಲಾಗುವುದು”ಎಂದು ಕರ್ನಾಟಕದ ಮಹಾಜನತೆ ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರಂತೆ!” ಶ್ರೀರಂಗ ಅವರೇ, ನಮ್ಮ ಚೆನ್ನಿ ಸರ್ ಅವರಿಗೆ ಜ್ಞಾನಪೀಠ ಸಿಗುವುದಾದರೆ ಅದಕ್ಕಿಂತ ಹೆಮ್ಮೆ ಕನ್ನಡಕ್ಕೆ ಬೇರೆ ಇದೆಯೇ? ಕನ್ನಡ ಸಾಹಿತ್ಯಕ್ಕೆ ಪ್ರಗತಿಪರ ಹೋರಾಟಗಳಿಗೆ ಚೆನ್ನಿ ಸರ್ ನೀಡಿರುವ ಕಾಣಿಕೆ ಅನನ್ಯ. ಸಿ ಎಸ ಎಲ್ ಸಿ ಮುಚ್ಚುವಿಕೆ ಕೂಡ ಪ್ರಗತಿಪರ ಹೋರಾಟದ ಫಲವೇ ಅಲ್ಲವೇ? ವಿಶ್ವವಿದ್ಯಾನಿಲಯಗಳು ಮನಸ್ಸು ಹೃದಯಗಳನ್ನು ಅರಳಿಸುವ ಕೆಲಸ ಮಾಡಬೇಕು, ಫ್ಯಾಸಿಸಂ ಅನ್ನು ಹೆಚ್ಚಿಸುವ ಕೆಲಸ ಮಾಡಕೂಡದು.
ಅಬ್ಬಬ್ಬಾ ಚೆನ್ನಿಗೂ ಗೂ ಜ್ಞಾನಪೀಠನಾ? ಶಿವ ಶಿವ ಅದರಲ್ಲಿ ಆಶ್ಚರ್ಯ ಏನಿಲ್ಲಾ ಬಿಡಿ, ಎಂತೆಂತರಿಗೋ ಸಿಕ್ಕಿರುವಾಗ ಚೆನ್ನಿಗೆ ಸಿಗಬೇಕಾದ್ದೇ ಸಿಗಬೇಕಾದ್ದೇ…ನಮಗೂ ತುಂಬಾ ಎಮ್ಮೆಯ ವಿಷಯ..ಅಲ್ಲಾ ಪ್ರಶಸ್ತಿ ಬರಲಿ ಅಂತಾನೇ ಇಂತ ಅಡ್ಡನಾಡಿ ಕೆಲಸ ಮಾಡ್ತಾರಲ್ಲಾ ಈ ಪ್ರಗತಿಪರರು ಚೂರು ಮಾನ ಮರ್ಯಾದೆ ನಾಚಿಕೆ ಅನ್ನೋದೆ ಇಲ್ಲವಾ ಇವರಿಗೆ..ಅಲ್ಲಾರಿ ಶೇಟ್ಕರ್ ಜ್ಞಾನಪೀಠದ ಜೊತೆಗೆ ದುಡ್ಡು ಎಷ್ಟು ಸಿಗುತ್ತೆ?
Mr. Naik, what’s wrong with you and Nilume? You guys made such a big news out of your Ghent Guru getting a honorary doctorate. Did Chenni Sir ask you “ಜೊತೆಗೆ ದುಡ್ಡು ಎಷ್ಟು ಸಿಗುತ್ತೆ?”. You say “ಅಲ್ಲಾ ಪ್ರಶಸ್ತಿ ಬರಲಿ ಅಂತಾನೇ ಇಂತ ಅಡ್ಡನಾಡಿ ಕೆಲಸ ಮಾಡ್ತಾರಲ್ಲಾ ಈ ಪ್ರಗತಿಪರರು ಚೂರು ಮಾನ ಮರ್ಯಾದೆ ನಾಚಿಕೆ ಅನ್ನೋದೆ ಇಲ್ಲವಾ ಇವರಿಗೆ”. What is the proof your Ghent Guru hasn’t done any of these for the honorary doctorate? As a Kannadiga you should be proud if Chenni Sir gets the award. Chenni Sir is one of the finest minds of Kannada. It is an honour for Kannada. It is also a victory against fascism.
ಶೆಟ್ಕರ್ ಅವರೆ,
ಸ್ವಲ್ಪ ತಾಳ್ಮೆಯಿಂದ ಮ,ನಾಯ್ಕರ ಕಮೆಂಟ್ ನೋಡಿ, ಪ್ರಶಸ್ತಿ ಜೊತೆ ಎಷ್ಟು ಹಣ ಸಿಗತ್ತೆ ಅಂತ ಅಲ್ಲಿ ಕೇಳಿರುವುದು. ನಿಮಗೆ ಗೊತ್ತಿಲ್ಲದಿದ್ದರೆ ಸುಮ್ಮನಿರಿ. ಬದಲಿಗೆ, ಏನೇನೋ ಕಲ್ಪಿಸಿಕೊಂಡು ನಿಮ್ಮ ಹೆಗಲನ್ನು ನೀವೇ ಏಕೆ ಮುಟ್ಟಿ ನೋಡಿಕೊಳ್ಳುತ್ತೀರಿ?.
>>>“ಈ ಸಲದ ಜ್ಞಾನಪೀಠ ಪ್ರಶಸ್ತಿಯು ಕರ್ನಾಟಕದ ವಿವಿ ಒಂದರಲ್ಲಿ ಸಂಶೋಧನಾ ಕೆಂದ್ರವನ್ನು ಮುಚ್ಚಿಸಿದ “ಆಪರೇಷನ್ ಬಂದ್” ಕಾರ್ಯಾಚರಣೆಯ ಕ್ಯಾಪ್ಟನ್ ಅವರಿಗೆ “ನೀಡಲಾಗುವುದು”
ಈ ಮಹಾನ್ ಸಾಧನೆಯನ್ನೇ ಮ,ನಾಯ್ಕ ಅವರು ಬಣ್ಣಿಸಿದ್ದು. ಅದನ್ನೇ ನಾನು ಬೌದ್ಧಿಕವಾಗಿ ಎದುರಿಸಲಾಗದವರು ಮೈ ಪರಚಿಕೊಂಡಿರುವರು ಎಂದು ಒಕ್ಕಣೆ ಮಾಡಿರುವುದು.
ಅದಕ್ಕೆ ಅವರಿಗೆ ‘ಸರಕಾರಿ ಸಾಹಿತಿಗಳು’ ಅಂತ ಕರಿಯೋದು ಅನಿಸತ್ತೆ. ಕೈಲಾಗದವರು ಮೈ ಪರಚಿಕೊಂಡ ಎಂಬಂತೆ ಇಂತಹ ಕೆಲಸ ಮಾಡಿದ್ದಾರೆ. ಮಾತಾಡೋದು ಆಚಾರ, ತಿನ್ನೋದು ಬದನೆಕಾಯಿ. ಬಾಯಿಬಿಟ್ರೆ ಅಭಿವ್ಯಕ್ತಿ ಸ್ವಾತಂತ್ರ ಅಂತ ಬುರುಡೆ ಬಿಡುವವರು ಅದನ್ನ ಗುತ್ತಿಗೆ ತೆಗೆದುಕೊಂಡವರಂತೆ ಮಾಡುತ್ತಿದ್ದಾರೆ. ಅವರನ್ನು ಭೌದ್ಧಿಕವಾಗಿ ಎದುರಿಸಲಾಗದೇ ಆ ರೀತಿ ವಾಮ ಮಾರ್ಗದಿಂದ ಮುಚ್ಚಿಸಿದ್ದಾರಷ್ಠೇ. ಓದುಗರಿಗೆ ಕಲವು ತಿಂಗಳ ಹಿಂದೆ ನಡೆದ ಅವರ ಮಾತು, ಚರ್ಚೇಗಳಲ್ಲೇ ಅವರ ‘ಪಾಂಡಿತ್ಯ’ವೇನೆಂಬುದು ವೇದ್ಯವಾಗಿದೆ. ಆದೇನೇ ಇರಲಿ ಸಂಶೋಧನೆ ನಡೆಯೋದು ತಲೆಯ ಒಳಗೆ, ಅದನ್ನ ತಡೆಯೋದಿಕ್ಕೆ ಯಾವ ದೊಣ್ಣೆ ನಾಯಕನಿಗೂ ಸಾಧ್ಯ ಇಲ್ಲ…
…ಅವರಿಗಿಂತ ಮೊದಲು, ಕಾಯಕಜೀವಿ, ದರ್ಗಾ ಸರ್ ಅವರಿಗೆ ಸಿಗಬೇಕಿತ್ತು. ನೀವು ಪಕ್ಷಪಾತಿ ಎನಿಸುತ್ತಿದೆ.
“ಅವರಿಗಿಂತ ಮೊದಲು, ಕಾಯಕಜೀವಿ, ದರ್ಗಾ ಸರ್ ಅವರಿಗೆ ಸಿಗಬೇಕಿತ್ತು” ದರ್ಗಾ ಸರ್ ಅವರಿಗೂ ಸಿಗುತ್ತದೆ ಎಂದು ನನಗೆ ಪೂರ್ಣ ವಿಶ್ವಾಸವಿದೆ. ಭಾರತರತ್ನವೂ ಸಿಗುತ್ತದೆ.
ಈಗ ಮೊದಲು ಇವರಿಗೆ ಬರಲಿ ನಂತರ ಇವರಿಗೆ ಎಂದರ್ಥವೇ? ಅಥವಾ ಅವರಿಗಿನ್ನೂ ಆ ಸಾಮರ್ಥ್ಯ ಬಂದಿಲ್ಲ ಎಂಬುದೇ? ಅರ್ಜೆಂಟಾಗಿ ಯಾವುದಾದರು ಸಂಶೋಧನ ಕೇಂದ್ರ ಸ್ಥಾಪಿಸಿ, ಅದನ್ನ ನಿಮ್ಮ ಗುರುಗಳಿಂದಲೇ ಮುಚ್ಚಿಸಿ. ಆದಷ್ಟು ಬೇಗ ಭಾರತ ರತ್ನವೂ ಸಿಗಬಹುದು, ಅಂತಹ ಕೆಲಸಗಳನ್ನು ಹೊರದೇಶಗಳಿಗೂ ವಿಸ್ತರಿಸಿ, ನೋಬೆಲ್ ಖಂಡಿತ ಸಿಗಬಹುದು…
Mr. Siddha, ಶರಣರು ಸೂಫಿ ಅನುಭಾವಿಗಳು ಪ್ರಶಸ್ತಿಯ ಆಸೆಗೆ ಕಾಯಕ ಮಾಡುವ ಅಲ್ಪರಲ್ಲ. ಜಂಗಮವು ಪ್ರಶಸ್ತಿ ಮನ್ನಣೆಗಳಿಂದ ಸಾಕ್ಷಾತ್ಕಾರಗೊಳ್ಳುವ ವಸ್ತು ಅಲ್ಲ!
ಶರಣರು ಪ್ರಶಸ್ತಿ ಸಿಗುವುದೆಂಬ ಆಸೆಗೋಸ್ಕರ ಕಾಯಕ ಯೋಗವ ಮಾಡುತ್ತಾರೆಂದು ನೀವು ತಿಳಿದಿದ್ದರೆ ಅದು ನಿಮ್ಮ ಮೌಡ್ಯ.
ಅಂತಹ ಕಾಯಕಯೋಗಿಗಳ ಪಾಂಡಿತ್ಯದ ಸಾಕ್ಷಾತ್ಕಾರ ನನಗೆ ಅವಧಿ ಮತ್ತಿತರೆಡೆಗಳಲ್ಲಿ ಆಗಿದ್ದು ಕೃತಾರ್ಥನಾಗಿದ್ದೇನೆ:-) ಹಾಗೆಯೇ, ಪ್ರಶ್ನೆಯಿಂದ ಪ್ರಶ್ನೆಗೆ, ಉದಾಹರಣೆಯಿಂದ ಉದಾಹರಣೆಗೆ ಉತ್ತರಿಸಲಾಗದೇ ಹಾರುವಂತಹ ನಿಮ್ಮ ತಳವಿಲ್ಲದ ಹೇಳಿಕೆಗಳನ್ನು ಅರಗಿಸಿಕೊಂಡ ನಾನೇ ಧನ್ಯೋಸ್ಮಿ… ಆದರೆ ಈ ಮಹಾ ಮೌಢ್ಯ ನಿಮಗೆಲ್ಲಿಂದ ಬಂತು? ಈ ಪಾಂಡಿತ್ಯವನ್ನು ನೀವು ಅವರಿಂದಲೇ ಪಡೆದಿರಬೇಕು…
ಹಾಗಾದರೆ, ನಿಮ್ಮ ಮಾತನ್ನೇ ಒಪ್ಪಿಕೊಳ್ಳುವುದಾದರೆ ಜ್ಞಾನಪೀಠದ ಸುದ್ದಿಯಲ್ಲಿರುವ ನಿಮ್ಮ ಗುರುಗಳು ಕಾಯಕಯೋಗಿಗಳಲ್ಲವೆಂದಾಯಿತು!! ಅವರು ಪ್ರಶಸ್ತಿಗಾಗಿಯೇ ಸಂಶೋಧನಾ ಕೇಂದ್ರ ಮುಚ್ಚಿಸಿದ್ದಾರಂದಾಯಿತು…
ಹ ಹ ಹ ಹ ಹ ಕಾಮಿಡಿ ಪೀಸ್ ಆದ ಶೇಟ್ಕರ್ ಅವರೆ..ತಾಳ್ಮೆ ಇಂದ ಇರಿ ಸ್ವಾಮಿ.. ಕಾಂಗ್ರೇಸ್ ಸರ್ಕಾರ ಇದ್ದರೆ ಗ್ಯಾರಂಟಿ ತಮ್ಮ ಆಸೆ ಈಡೇರುತ್ತದೆ..ಏಕೆಂದರೆ ಆಸ್ಥಾನ ಸಾಹಿತಿಗಳಿಗೆ ಪ್ರಶಸ್ತಿಯನ್ನು ಕೊಡದೆ ಇನ್ಯಾರಿಗೆ ಕೊಡ್ತಾರೆ? ಇವರೆಲ್ಲಾ ಕಾಂಗ್ರೆಸ್ ನ ಆಸ್ಥಾನ ಸಾಹಿತಿಗಳು ಆದರೂ ಅವರಲ್ಲೇ ಕಾಂಪಿಟಿಷನ್ ಇದ್ದರೆ ಕಷ್ಟ..
Mr. Naik, you guys are asking who should get Jnanapeetha first? I say, none other than the great Basavanna Bhandary for his Vachanas. Then Allama Prabhu should get. But Jnanapeetha is not given posthumously. So it should be given to representatives of Basavanna. Darga Sir has the best qualifications for the award.
ನಿಮ್ಮನ್ನ ಕಾಮಣ್ಣನ ಮಕ್ಕಳು ಅಂತ ಕರೀಬಹುದು ಅನ್ನಿಸುತ್ತೆ..ಅದರ ಮುಂದಿನ ಸಾಲು ಅನುಭವವೇದ್ಯವಾಗಿ ತಿಳಿದಿರಬೇಕಲ್ಲ ತಮಗೆ, ಇಲ್ಲವಾದರೆ ನಿಮ್ಮ ಗುರುವಿನ ಗುರುವಿಗೆ ಕೇಳಿನೋಡಿ
ಮನುವಿನ ಮೊಮ್ಮಕ್ಕಳಿಗೆ ಕೊಡದಿದ್ದಕ್ಕೆ ಇಂದು ಅದರ ಮೌಲ್ಯ ಎರಡಾಣೆಯಾಗಿರುವುದು. 😀
ಇಷ್ಟಕ್ಕೂ ಪ್ರಶಸ್ತಿ ಬರುವುದು, ಮೌಲ್ಯವಿರುವುದು ಓದುಗನನ್ನು ತಲುಪುವಲ್ಲಿ. ಯಾರ ಪುಸ್ತಕಗಳು ಎಷ್ಟು ಮಾರಾಟವಾಗುತ್ತವೆ? ಯಾವ ಪುಸ್ತಕವನ್ನು ಬಲವಂತವಾಗಿ ತುರುಕಲಾಗುತ್ತದೆ ಎಂದು ತಿಳಿದುಕೊಳ್ಳಿ
ಯಾವ ಪುಸ್ತಕ ಹೆಚ್ಚು ಮಾರಾಟವಾಗುತ್ತದೆ ಎಂಬುದರ ಮೇಲೆ ಕೃತಿಯ ಶ್ರೇಷ್ಠತೆ ನಿರ್ಧಾರವಾಗುವುದಿಲ್ಲ ಅಥವಾ ಜನಪ್ರಿಯತೆಯೇ ಶ್ರೇಷ್ಠತೆಯ ಮಾನದಂಡವೂ ಆಗಲಾರದು. ಹಾಗಿದ್ದರೆ ಯಂಡಮೂರಿ ವೀರೇಂದ್ರನಾಥರಂಥ ಜನಪ್ರಿಯ ಹಾಗೂ ಮನರಂಜನೆಯ ಧಾರಾವಾಹಿ ಕಾದಂಬರಿಗಳಿಗೆ /ಹೊತ್ತು ಕಳೆಯುವ ಕಾದಂಬರಿಗಳಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಾಗಿತ್ತು. ಅಂಥ ಕಾದಂಬರಿಗಳಿಗೆ ಪ್ರಶಸ್ತಿ ಸಿಗಲಾರದು ಏಕೆಂದರೆ ಅವುಗಳು ಸಾಹಿತ್ಯಿಕ ಮೌಲ್ಯ ಉಳ್ಳ ಜನರನ್ನು ಚಿಂತನೆಗೆ ಹಚ್ಚುವ ಕೆಲಸ ಮಾಡಲಾರವು. ಸಾಹಿತ್ಯಿಕ ಮೌಲ್ಯವುಳ್ಳ ಗಟ್ಟಿ ಕೃತಿಗಳಿಗೆ ಮಾತ್ರವೇ ಜ್ಞಾನಪೀಠ ದಂಥ ಶ್ರೇಷ್ಠ ಸಾಹಿತ್ಯಿಕ ಪ್ರಶಸ್ತಿ ಸಿಕ್ಕುವುದು. ಮೌಲ್ಯಯುತ ಸಾಹಿತ್ಯ ಕೃತಿಗಳು ಹೆಚ್ಚಾಗಿ ಪ್ರಗತಿಪರ ನಿಲುವುಳ್ಳ ಚಿಂತನಶೀಲ ಲೇಖಕರಿಂದ ಮಾತ್ರ ರಚನೆಯಾಗುತ್ತವೆ. ಜನಪ್ರಿಯ ರಂಜನೆಯ ಕೃತಿಗಳಲ್ಲಿ ಸಾಹಿತ್ಯಿಕ ಮೌಲ್ಯ ಇರುವುದಿಲ್ಲ.
ಸಾಹಿತ್ಯಿಕ ಮೌಲ್ಯಗಳು ಯಾವುವು ಕೃಷ್ಣಪ್ಪ ನವರೆ? ಹಾಗೆಯೇ ಪ್ರಗತಿಪರ ನಿಲುವು ಎಂದರೇನು? ಅವೆರಡೂ ಒಂದೇ ಆಗಿದ್ದರೆ ಬೂಸಾ ಸಾಹಿತ್ಯ ಬಿಡಿ
ಅದ್ಯಾರೋ ರಂಜಾನ್ ದರ್ಗಾ ಅಂತೆ, ವಚನಗಳ ಬಗ್ಗೆ ಸಿಕ್ಕಾಪಟ್ಟೆ ಗೀಚಿ ಹಾಕಿದರೆ, ಅದರಲ್ಲಿ ಏನೂ ಇಲ್ಲ ಅನ್ನಿ, ವಚನಗಳ ನೈಜ ವಿಶ್ಲೇಷಣೆ ಬಿಟ್ಟು ಉಳಿದೆಲ್ಲಾ ಕೆಲಸ ಮಾಡಿದ್ದಾರೆ, ಅದು ಸಾಹಿತ್ಯದ ಮೌಲ್ಯನಾ? ಹಾಗಿದ್ದರೆ ಸಾಹಿತ್ಯಕ್ಕೆ ಮೌಲ್ಯ ಇಲ್ಲ ಬಿಡಿ
ಇವರು ವಚನಗಳಲ್ಲಿ ಏನೇನು ಹೇಳಿದ್ದಾರೋ ಅದೊಂದನ್ನು ಬಿಟ್ಟು ಉಳಿದಿದ್ದೆಲ್ಲಾ ಹೇಳಿರೋದು ನಿಜ ಎನಿಸುತ್ತೆ. ಮಾರ್ಕ್ಸ್ ವಚನಗಳಿಂದ ತನ್ನ ಸಿದ್ಧಾಂತಕ್ಕೆ ಒಳನೋಟಗಳನ್ನು ಪಡೆದುಕೊಂಡರೂ ಅವನು ಎಲ್ಲಿಯೂ ಕೂಡ ವಚನಗಳನ್ನು ಅಥವಾ ಅವುಗಳ ಕರ್ತೃಗಳನ್ನು ಉಲ್ಲೇಖಿಸಿಲ್ಲ!!. ಇನ್ನು ಕೊನೆ ಪಕ್ಷ ಹಕ್ಕುಗಳ ಸಾರ್ವತ್ರಿಕ ಘೋಷಣೆಯಲ್ಲಾದರು ಉಲ್ಲೇಖಿಸಬೇಡವೇ? ಛೆ ಎಂತಹ ಅಪಚಾರ 🙂 ಇದು ಪಾಶ್ಚಾತ್ಯರಿಗೆ ಹಿಡಿದಿರುವ ಬ್ರಾಹ್ಮಣ್ಯವೆ ಇರಬೇಕು!!. ಆದರೂ ಅದನ್ನು ಬಿಡದೇ ಕಂಡು ಹಿಡಿದ ಇವರದು ಮಹಾನ್ ಸಾಧನೆಯೇ…!! ಕಳೆದೆರಡು ಶತಮಾನಗಳಿಂದ ಭಾರತದ ಕುರಿತು ಊದಿರುವ ಪುಂಗಿಯನ್ನೇ ಕೇಳಿ ಕೇಳಿಸಿಕೊಂಡದನ್ನೆಲ್ಲಾ ಯಥಾವತ್ ಕಾಪಿ ಹೊಡೆದು ಕಂಡ ಕಂಡದಕ್ಕೆಲ್ಲಾ ಆರೋಪಿಸಿ ಕಂಡುಹಿಡಿದೆ ಎಂದು ಬೆನ್ನು ತಟ್ಟಿಕೊಂಡರೆ ಹೀಗೆ ಆಗೋದು.
ಅದು ಸಾಹಿತ್ಯ, ಅಲ್ಲ ಅದು ಮೌಲ್ಯ, ಅಲ್ಲ ಅದು ವೈಚಾರಿಕತೆ, ಒಂದೊಂದೇ ಪ್ರಶ್ನೆ ಮಾಡ್ತಾ ಹೋದ್ರೆ ಹಿಗೆ ಜಂಪ್ ಮಾಡ್ತಾನೆ ಹೋಗ್ತಾರೆ…
ಯಾವುದೋ ಕೆಲಸಕ್ಕೆ ಬಾರದ ೪ ಜನಗಳಿಗೆ ಉಪಯೋಗವಾಗುವ ಬ್ರಾಹ್ಮಣ್ಯದ ಪ್ರತೀಕಗಳನ್ನು ಓದಲು ಜನ ಹೋಗುವುದಿಲ್ಲ. ಜನಗಳಿಗಾಗಿರದ ಪುಸ್ತಕಗಳು ತೌಡಿದ್ದಂತೆ. ಅದನ್ನೆ ಕುಟ್ಟಿಕೊಂಡು ಕೂತಿರಿ. ಯಾವುದೋ ಒಂದು ಸೈದ್ದಾಂತಿಕ ಅಭಿಪ್ರಾಯಕ್ಕೆ ಕೊಡುವ ಎಡಬಿಡಂಗಿ ಪ್ರಶಸ್ತಿ ಮೌಲ್ಯ ಕಳೆದುಕೊಂಡಿರುವುದು ಸತ್ಯ. ಜನರ ಬಳಿ ಹೋಗದ ಜನರ ಆಶಯಗಳಿಗೆ ಸ್ಪಂಧಿಸಿದ ಸಾಹಿತ್ಯ ಕೋಣನ ಮುಮ್ದೆ ಕಿನ್ನರಿ ಬಾರಿಸಿದಂತೆ.
ಜನತೆಯ ನೋವು ನಲಿವುಗಳಿಗೆ ಸ್ಪಂದಿಸಿದ ಮತ್ತು ಅವುಗಳನ್ನು ಎತ್ತಿ ಹಿಡಿದ ಕೃತಿಗಳಿಗೆ ಹೆಚ್ಚಾಗಿ ಜ್ಞಾನಪೀಠ ಪ್ರಶಸ್ತಿ ಸಿಕ್ಕಿರುವುದು. ಉದಾಹರಣೆಗೆ ಬಂಗಾಳಿ ಭಾಷೆಯ ಮಹಾಶ್ವೇತಾದೇವಿ ಅವರ ಕಾದಂಬರಿಗಳನ್ನು ನೋಡಬಹುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿಗಳು ಪ್ರತಿಗಾಮಿ, ಪುರೋಹಿತ ಶಾಹೀ ಮೌಲ್ಯಗಳನ್ನು ಎತ್ತಿ ಹಿಡಿದಿಲ್ಲ ಎಂಬ ಕಾರಣಕ್ಕೆ ನಗಣ್ಯವಾಗುವುದಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿಗಳು ಎಲ್ಲ ಭಾಷೆಗಳ ಪ್ರಜ್ಞಾವಂತರ ಮೆಚ್ಚುಗೆ ಗಳಿಸುತ್ತವೆ ಮತ್ತು ಅವುಗಳ ಬಗ್ಗೆ ಎಲ್ಲ ಭಾಷೆಗಳಲ್ಲಿ ಚರ್ಚೆ, ಸಂವಾದ ನಡೆಯುತ್ತದೆ ಮತ್ತು ಬೇರೆ ಭಾಷೆಗಳಿಗೆ ಅನುವಾದವೂ ಆಗುತ್ತವೆ. ಹೀಗಾಗಿ ಅವುಗಳು ಪ್ರತಿಗಾಮಿ ಚಿಂತನೆಯ ಜನರಿಗೆ ಇಷ್ಟವಾಗದಿದ್ದರೂ ವಿದ್ವತ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತವೆ.
ಉಧಾಹರಣೆಗಾಗಿ ಬೆಂಗಾಲಿ ಸಾಹಿತಿಗಳ ಮೊರೆ ಹೋಗಬೇಕಾಗಿರುವ ಧೌರ್ಭಾಗ್ಯವೇ ಇಲ್ಲಿಯ ಜ್ಞಾನಪೀಠಿಗಳ ಸ್ಥಿತಿಗೆ ಹಿಡಿದ ಕನ್ನಡಿಯಲ್ಲವೇ?
ಅಜ್ಞಾನಪೀಠಿಗಳು ಎಂಬ ಗುಸು ಗುಸು ಕೇಳಿಬರುತ್ತಿದೆ… ಮೇಲೆ ಕ್ರಿಷ್ಣಪ್ಪ ನವರು ಹೇಳಿದ ಯಾವ ಮಾನದಂಡ ಇಟ್ಟ್ಕೊಂಡರೂ ನಮ್ಮಲ್ಲಿ ಅಂತಹ ನೂರಾರು ಕೃತಿಗಳು ಸಿಗುತ್ತವೆ. ಅವರಾರಿಗೂ ಸಿಕ್ಕಿಲ್ಲ. ಅದರರ್ಥ ಜ್ಞಾನಪೀಠಿ ಆಗಬೇಕಾದರೆ ಇವು ಮಾನದಂಡ ಅಲ್ಲ, ಬೇರೆ ಏನೋ…. ಇರಬೇಕು ಅನ್ನೋದು ಸ್ಪಷ್ಟ ಆಗತ್ತೆ…
ಹೌದೇ? ಮೂರ್ತಿಯವರನ್ನೂ ಸೇರಿ ಆನಂತರ ಬಂದಿರುವ ಪೀಠ ಪ್ರಶಸ್ತಿಗಳು ಯಾವ ಜನತೆಯ ನೋವನ್ನು ಎತ್ತಿಹಿಡಿದಿವೆ?
ದುರ್ದೈವದ ಸಂಗತಿ ಅಂದ್ರೆ ಸಾಹಿತಿ ಅಂತ ಅನ್ನಿಸಿಕೊಂಡು ಇತ್ತ ಸಾಹಿತ್ಯಾಸಕ್ತರಿಗೂ ತಲುಪದೇ ಅತ್ತ ಫುಲ್ಲಟೈಮ್ ರಾಜಕಾರಣಿಯೂ ಆಗಲಿಕ್ಕಗದೆ ಅಂತರ್-ಪಿಶಾಚಿ ಗಳಾಗಿ, ತಾವು ಗೊಂದಲಕ್ಬಿದ್ದು ಇತರರಿಗೂ ಭ್ರಾಂತಿಗೆ ದೂಡುವ ಇಂತಹ ಜ್ನ್ಯಾನ ವಂತರಿಂದ ಯಾರ ಬಾಳು ಬೆಳಕು ಕಾಣಬಹುದು.
ನನ್ನ ಬಳಗವೇ ಆಗಿರುವ ವಾಮಪಂಥೀಯರು, ಸಮಾಜವಾದಿಗಳು ಅನ್ನಿಸಿಕೊಳ್ಳುವವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಿಂದೂತ್ವದ ಗುಂಪುಗಳು ಮಾಡುವ ದಾಂದಲೆಯನ್ನು ಟೀಕಿಸುವಷ್ಟು ಕಟುವಾಗಿ ಇಸ್ಲಾಮೀಯತ್ವದ ಗುಂಪುಗಳು ಮಾಡುವ ದಾಂದಲೆಯನ್ನು ಟೀಕಿಸುವುದಿಲ್ಲ, ಎದುರು ಹಾಕಿಕೊಳ್ಳು ವುದಿಲ್ಲ, ಯಾಕೆ? ಎಷ್ಟೋ ವೇಳೆ, ಈ ನನ್ನ ಬಳಗವು ಅಂಥದನ್ನು ಕುರಿತು ಒಂದು ಮಾತನ್ನೂ ಆಡುವುದಿಲ್ಲ, ಯಾಕೆ? ಇಲ್ಲಿ, ತಸ್ಲೀಮಾ ನಸ್ರೀನರ ಮೇಲೆ ಆಗುತ್ತ ಬಂದಿರುವ ದಾಳಿಯನ್ನು ನೋವಿನಿಂದ ನೆನೆಯುತ್ತಿ ದ್ದೇನೆ.
ಆಕೆ ನಮ್ಮ ದೇಶದ ಪ್ರಜೆಯಲ್ಲದಿರಬಹುದು; ಹಲವರು ಹೇಳುವಂತೆ, ಬರಿಯ ಸಾಹಿತ್ಯಿಕ-ಕಲಾತ್ಮಕವಾದ ನೋಟದಿಂದ ನೋಡಿದರೂ, ತೀರ ಎರಡನೆಯ ದರ್ಜೆಯ, ಅಥವಾ ಅದಕ್ಕಿಂತ ಕಡಿಮೆ ದರ್ಜೆಯ, ಲೇಖಕಿಯಾಗಿರಬಹುದು. ಆದರೆ, ‘ನನ್ನ ಬಂಗಾಳ, ನನ್ನ ಕೋಲ್ಕತ್ತ, ನನ್ನ ಬಾಂಗ್ಲಾ ನುಡಿ’ ಎಂದು ಮನಕಲಕುವಂತೆ ಹಲುಬುವ, ಕನವರಿಸುವ ಆ ಹೆಣ್ಣುಮಗಳ ಪರವಾಗಿ ನಾವು ನಿಲ್ಲದೆಯೇ ಹೋದೆವಲ್ಲ! ಪಶ್ಚಿಮ ಬಂಗಾಳದ ವಾಮಪಂಥೀಯ ಸರ್ಕಾರ ಮತ್ತು ಸೂಪರ್ಪವರ್ ದರ್ಜೆಯ ಕನಸು ಕಾಣುವ ಭಾರತದ ಘನ ಸರ್ಕಾರಗಳೆರಡೂ ಆಕೆಯನ್ನು ದೇಶದಿಂದಲೇ ಹೊರದೂಡಿ ದುವಲ್ಲ!
ಅದೂ ಈ ನಮ್ಮ ದೇಶವು ಆಕೆಗೆ ಅಭಯ, ಆಶ್ರಯಗಳನ್ನು ಕೊಟ್ಟಾದ ಮೇಲೆ! ಮೇಲಾಗಿ, ನನ್ನದು ಎಂದು ನಾನು ತಿಳಿದಿರುವ ಈ ಬಳಗವು ಇಂಥವರನ್ನು ತನ್ನ ದೇಶದವರು, ಹೊರದೇಶದವರು ಎಂದು ವಿಂಗಡಿಸಿ ನೋಡಹತ್ತಿದ್ದು ಎಂದಿನಿಂದ? ಜಗತ್ತಿನ ನೊಂದವರೆಲ್ಲ ತನ್ನವರು ಅನ್ನುವಂಥದಲ್ಲವೇ, ನನ್ನ ಬಳಗ? ಸಂಕಟ ವಾಗುತ್ತದೆ, ನಾಚಿಕೆಯಾಗುತ್ತದೆ, ಸಿಟ್ಟು ಬರುತ್ತದೆ; ಯಾವುದು ಹೆಚ್ಚೋ, ಹೇಳಲಾರೆ.
ಮತ್ತೊಂದು ಉದಾಹರಣೆ, ಈಗ್ಗೆ ಹತ್ತು ವರ್ಷದ ಹಿಂದೆ, ಕನ್ನಡ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಳು ಸೇರಿ ಹೊರತಂದ ‘ಕರ್ನಾಟಕ ಚಲನಚಿತ್ರ ಇತಿಹಾಸ’ ಅನ್ನುವ ಎರಡು ಸಂಪುಟಗಳ ಹೆಬ್ಬೊತ್ತಿಗೆಗೆ ಆದುದು. ಆ ವೇಳೆಯಲ್ಲಿ, ಆ ಹೊತ್ತಿಗೆಯ ಒಕ್ಕಣೆಯಲ್ಲಿ ಅಲ್ಲಿ ಇಲ್ಲಿ ತಮಗೆ ಒಪ್ಪಿಗೆಯಾಗುವಂಥದು ಇಲ್ಲವೆಂದೋ, ಅಲ್ಲಿ ಇಲ್ಲಿ ಅದು ಕೆಲವರನ್ನು ಕುರಿತು ಮಾಡಿರುವ ಟೀಕೆ-ಟಿಪ್ಪಣಿ ತಮಗೆ ಒಪ್ಪಿಗೆಯಾಗುವಂಥ ನುಡಿಗಟ್ಟಿನಲ್ಲಿಲ್ಲವೆಂದೋ ದೂರುವ ಬಲಿಷ್ಠರ ಒಂದು ಪಂಥವೇ ಹುಟ್ಟಿಕೊಂಡು, ಆ ಪಂಥವು ಮಾಡಿದ ವ್ಯವಸ್ಥಿತ ವಾದ ಒಳವೊಳಗಿನ ದಾಳಿಯಿಂದಾಗಿ ಆ ಪುಸ್ತಕದ ಮಾರಾಟವನ್ನೇ ನಿಷೇಧಿಸಲಾಯಿತು. ದುಃಖ ಮತ್ತು
ಆತಂಕದ ಮಾತೆಂದರೆ, ಇವರೂ ನನ್ನ ಬಳಗವೇ ಎಂದು ನಾನು ಹೇಳಬಹುದಾದವರು ಕೂಡ ಆ ಪಂಥದ ಮುಂಚೂಣಿಯಲ್ಲಿದ್ದು ಆ ಪುಸ್ತಕ ಪತಂಗವನ್ನು ಕಡ್ಡಿಪೆಟ್ಟಿಗೆಯಲ್ಲಿ ಕೂಡಿಹಾಕಿದುದು.
ಮುಕ್ತಿಯ ಪಥಕ್ಕೆ ಧರ್ಮಲಂಡರು, ಅಂದರೆ ಹಿಂದೂತ್ವ ವಾದಿಗಳು, ಇಸ್ಲಾಮೀಯತಾವಾದಿಗಳು ಮತ್ತು ಬೇರೆ ವಾದಪಂಥಗಳಿಗೆ ಸೇರಿದ ಅವರಂಥ ಬೇರೆಯವರು, ಅಡಚಣೆಯಾಗುವುದು ಆಶ್ಚರ್ಯದ ಮಾತಲ್ಲ. ಧರ್ಮಿಷ್ಠರೇ ಹಾಗೆ ಮಾಡುವುದು ಮಾತ್ರ ಆಶ್ಚರ್ಯದ ಮಾತಷ್ಟೇ ಅಲ್ಲ, ತುಂಬ ದುಃಖದ ಮಾತೂ ಹೌದು.
-ರಘುನಂದನ, ರಂಗಕರ್ಮಿ .
Prajavani 01-10-2013 – SANGATHA
ಪ್ರಗತಿ ಪರರಲ್ಲಿ ವ್ಯಕ್ತಿಪೂಜೆ ಇಲ್ಲ ಎಂದು ತಿಳಿದುಕೊಂಡಿದ್ದೆ. ಆದರೆ ಇಲ್ಲಿ ಶೆಟ್ಕರ್ ರಂಜನ್ ದರ್ಗಾರವರಿಗೆ ಅವರ ಅನುಪಸ್ಥಿತಿಯಲ್ಲೂ ಸರ್, ಸರ್ ಅಂತಿದ್ದಾರೆ. ನಾನೇ ನೋಡಿದಂತೆ ಅವರು ಕನಿಷ್ಟ ೧೦೦೦ ಬಾರಿಯಾದರೂ ಸರ್ ಜಪ ಮಾಡಿರುವುದು ವ್ಯಕ್ತಿಪೂಜೆಯ ಪರಾಕಾಷ್ಠೆ ಅಂತ ನನಿಗೆ ಅನ್ನಿಸುತ್ತಿದೆ.
Mr. Naik, you guys are asking who should get Jnanapeetha first? I say, none other than the great Basavanna Bhandary for his Vachanas. Then Allama Prabhu should get. Can any contemporary literary work meet the lofty standards of their Vachanas? But Jnanapeetha is not given posthumously. So it should be given to the best representatives of Basavanna as a token of respect to the Vachanakaras. Darga Sir has the best qualifications today for the award.
ರೀ ಶೆಟ್ಕರ್, ನೀವು ಸಿಕ್ಕಾ ಪಟ್ಟೆ ಜೋಕ್ ಮಾಡ್ತೀರಿ,… ಹೋಗೀಪ್ಪಾ!!!!
Ms. Sahana, what is funny in my comments? Call a dog mad and kill it. This has been your strategy.
ಎಲ್ಲಿಯ ಅಲ್ಲಮ-ಬಸವಣ್ಣವರ ಅನುಭಾವ , ಎಲ್ಲಿಯ ದರ್ಗಾರ ಬುರುಡೆ ಪುರಾಣಗಳು, ಎತ್ತಣಂದಿತ್ತ ಹೋಲಿಕೆ ??? ಅಯ್ಯೋ (ವಚನ)ಶಿವನೇ , ಈ ಯಡವಟ್ಟಪ್ಪನಿಗೆ ಬೇಗ ಬುದ್ದಿ ಸರಿಮಾಡಪ್ಪ!!!! ಅಯ್ಯೋ ಪಾಪ ಹೀಗಾಗ ಬಾರದಿತ್ತು!!!! ಹ್ಞಂ!!!!
ನಮ್ಮ ಶೆಟ್ಕರ್ ಗುರುಗಳು ತುಂಬ ನಿಸ್ವಾರ್ಥಿ..ತಮಗೆ ಜ್ನಾನಪೀಠ ಸಿಗಲಿ ಎಂಬ ಸ್ವಾರ್ಥ ಅವರಲ್ಲಿ ಎಳ್ಳಷ್ಟೂ ಇಲ್ಲ..ಇಂತವರು ನಮ್ಮ ಮಧ್ಯದಲ್ಲಿ ಇರುವುದು, ಜೀವಂತವಾಗಿರುವುದು, ಎಲ್ಲರನ್ನೂ ನಗಿಸುತ್ತ ಬಾಳುತ್ತಿರುವುದು ನಮ್ಮ ಸುದೈವ.
ನೋಡಿ ವಚನಗಳಷ್ಟು ಗುಣವನ್ನು ಇಂದಿನ ಯಾವ ಸಾಹಿತ್ಯವೂ ಹೊಂದಿಲ್ಲ ಎನ್ನುತ್ತೀರಿ.. ಹಾಗಾದರೆ ಬಸವಣ್ಣನವರನ್ನು ಪ್ರತಿನಿಧಿಸಿದರೂ ಸಹ ದರ್ಗಾ ರವರ ಸಾಹಿತ್ಯ ಬರಹ ಗಳು ಆ ಮಟ್ಟಿಗೆ ಇಲ್ಲ ಎಂದು ತಾವೇ ಒಪ್ಪಿಕೊಂಡ ಹಾಗೆ ಆಯಿತು ಅಲ್ಲವೆ ಶೇಟ್ಕರ್..ಆದರೂ ದರ್ಗಾ ರವರಿಗೆ ಒಂದು ಪ್ರಶಸ್ತಿ ಕೊಡಿಸಲೇಬೇಕು ಅಂತ ಪಣತೊಟ್ಟಿರುವ ತಮಗೆ ಶುಭವಾಗಲಿ, ಅಂತೂ ತಿಳಿಯಿತಲ್ಲ ದರ್ಗಾ ಬರೆಯುತ್ತಿರುವುದು ಪ್ರಶಸ್ತಿಗಾಗಿ ಅಂತ.. ಅಲ್ಲವೇ ಶೇಟ್ಕರ್.. ಬಹುಶಃ ನಿಮಗೂ ಸಮ್ ಥಿಂಗ್ ಸಿಗಬಹುದು ಅದಕ್ಕೆ ಇಷ್ಟು ಅವರ ಪರ ವಕಾಲತ್ತು ಅನ್ನಿಸುತ್ತೆ
Mr. Naik, where has Darga Sir said that he is as great as Basavanna or Allama? Where has he said he has written better Vachanas than them? Compared to Basavanna and Allama, who are among the greatest human beings man kind has ever seen in its history, Darga Sir is like a Pomeranian dog in front of lion and elephant. He is a humble servant of the great Sharanas and he serves his masters (i.e. Sharanas) with the same dedication a Pomeranian dog serves its masters. Doesn’t he know his position in the pantheon of Sharanas? Unlike your Ghent Guru, Darga Sir has no illusions about his worth. That’s why he didn’t beg any foreign university for honorary doctorate. Basavashree award was given to him because of his great service to Basava Dharma. He will get Jnanapeetha for the same reason. His works have taken the spirit of Basavanna to the masses and connected with humanism of the Western world.
‘Darga Sir is like a Pomeranian “DOG” ‘
ಹ್ಹ ಹ್ಹ ಹ್ಹ 🙂 !!!!! ಅಯ್ಯೋ (ವಚನ)ಶಿವನೇ!!!! ದರ್ಗಾರನ್ನು ‘ನಾಯಿ’ ಗೆ ಹೋಲಿಸುವು ಹೇಯ ಅಂತನೂ ಅನ್ನಿಸಿತ್ತಿಲ್ಲವಲ್ಲಾ ಈ ಹುಚ್ಚು ಯಡವಟ್ಟಪ್ಪಂಗೆ!!!!!
ದರ್ಗಾರನ್ನು ಆ ಶಿವನೇ ಕಾಪಾಡಬೇಕು,,
Ms. Sahana, don’t misinterpret my words. I never said that Darga Sir is a Pomeranian dog. Only fascists call him a dog. I never use the language of fascists. Mine is literary language. I wrote “Darga Sir is like a Pomeranian dog in front of lion and elephant”. Anyone with some literary sensibility knows the meaning of what I wrote. Pity you read it literally.
ಸಾರಿ ತಪ್ಪು ತಿಳಕೊಂಡೆ ರೀ… ದರ್ಗಾ ಸರ್ ನಾಯಿ (Darga sir is dog) ಅಲ್ಲ!!! ನಾಯಿ ತರ !!! (Darga sir is like a dog).. ಸರಿ… ಸರಿ.. ಬಿಡಿ. ನನಗೆ ಇಂಗ್ಷೀಷೆ ಬರೋವಲ್ಲದು ಇನ್ನೂ literary language ಎಲ್ಲಪ್ಪಾ ಅರ್ಥಾ ಆಗಬೇಕು!!! ನನ್ನ ತಪ್ಪು ತಿಳುವಳಿಕೆಯನ್ನು ಸರಿಪಡಿಸಿದ್ದಕ್ಕೆ ಧನ್ಯವಾದಗಳು… ಧರ್ಗಾ ಸರ್ ನಾಯಿ ಅಲ್ಲ !!! ನಾಯಿ ತರ.. !!!
ಪಾಪ ದರ್ಗಾರವರು ಈ ಯಡವಟ್ಟಪ್ಪನಿಂದ ಅವರಿಗೆ ಯಾವಾಗ ಬಿಡುಗಡೆ ದೊರೆಯೊತ್ತೋ ಆ (ವಚನ)ಶಿವನೇ ಬಲ್ಲ!!!
“ದರ್ಗಾ ಸರ್ ನಾಯಿ (Darga sir is dog) ಅಲ್ಲ!!! ನಾಯಿ ತರ !!! ” Ms Sahana, please don’t put your words into my mouth. I am a dog who will chew the bones you feed. This is my exact text: “where has Darga Sir said that he is as great as Basavanna or Allama? Where has he said he has written better Vachanas than them? Compared to Basavanna and Allama, who are among the greatest human beings man kind has ever seen in its history, Darga Sir is like a Pomeranian dog in front of lion and elephant. He is a humble servant of the great Sharanas and he serves his masters (i.e. Sharanas) with the same dedication a Pomeranian dog serves its masters. Doesn’t he know his position in the pantheon of Sharanas?”
ಪದೇ ಪದೇ ಯಡವಟ್ಟು ಮಾಡಬೇಡ್ರೀ “I am a dog who will chew the bones you feed.” ಅನ್ನೋದು I am NOT a dog who will chew the bones you feed. ಅಂತಾಗ ಬೇಕು. ಬಹುಷಃ ನೀವ ಹಾಗೆ ಅನ್ಕೊಂಡು ಅವಸರದಲ್ಲಿ ಯಡವಟ್ಟು ಮಾಡಿದೀರಿ ಅಂದ್ಕೋತೀನಿ!!!????
ಇರಲಿ ಬಿಡಿ, ಇಲ್ಲೂ ನಿಮ್ಮದೇ ಹಿಂದಿನ ಪಾಠದ ಪ್ರಕಾರ “I am not a dog” ಅಂದ್ರೆ ಅರ್ಥ “I am like a dog” (who sincerely serve Mr Darga) ಅಂತಾನಾ ??? ನಮಗೆ ಈ literary language ಅರ್ಥ ಆಗಲ್ಲಾರಿ ಸ್ವಲ್ಪ ಬಿಡಿಸಿ ಹೇಳಿ. ಮೊದಲೇ ನಾವು ಇಂಗ್ಲೀಷಲ್ಲಿ ವೀಕು….
ಅಷ್ಟೇ ಅಲ್ಲಾ ಅವರು ಬರೀ ನಾಯಿ ತರ ಅಲ್ಲ “ಕುಯ್ ಕುಯ್ ಅನ್ನೋ ಪೊಮೆರಿಯನ್” ನಾಯಿ ತರ ಅಂತ ಶೇಟ್ಕರ್ ಹೇಳ್ತಿರೋದು..ಸಹನಾ ರವರೆ, ಅವರು ಹೇಳಿದ್ದ ಮುಖ್ಯವಾದ ಪೊಮೆರಿಯನ್ ಅನ್ನೋ ಶಬ್ದನೇ ಬಿಡ್ತಾ ಇದಿರಲ್ಲಾ..ಹೀಗೆಲ್ಲಾ ಮಾಡಿದ್ರೆ ಶೇಟ್ಕರ್ ಶೆಟಕೊಂಡು ಬಿಡ್ತಾರೆ ನೋಡಿ..
ಹ್ಹ ಹ್ಹ ಹೌದು ನಾಯಕರೇ,, ಮುಖ್ಯವಾದ ಶಬ್ದವನ್ನೇ ಬಿಟ್ಟಿದ್ದೇನೆ, ನೆನೆಪಿಸಿದ್ದಕ್ಕೆ ಧನ್ಯವಾದಳು 🙂 !!!
ಮಿ. ಶೆಟ್ಕರ್, ಮತ್ತೆ ಮತ್ತೆ ನಗ್ಸಬೇಡಿ ಸರ್ ತೀರ ಇಷ್ಟೊಂದು 🙂
“Darga sir is like a dog” ಅಂದ್ರೆ, ನಾಯಿಗಿರುವ ಎಲ್ಲ ಗುಣಗಳೂ ಅವರಲ್ಲಿವೆ ಎಂದರ್ಥ! ನಾನಂತೂ ಇದನ್ನು ನೀವೇ ಹೇಳಿದಂತೆ literary language ನಲ್ಲಿಯೇ ಅರ್ಥಮಾಡಿಕೊಳ್ಳುತ್ತೇನೆ. ನೀಯತ್ತು ಅಂತ ತಗೊಂಡ್ರು : ಮಾರ್ಕ್ಸ್ ಗೆ ಭಾರತದಲ್ಲಿ ವಚನಗಳು ಅಂತ ಇದಾವೆ ಅನ್ನೋ ಕಲ್ಪನೆಯೇ ಇಲ್ಲದಿದ್ದರೂ ಆತನಿಗೂ ವಚನಗಳಿಗೂ ಸಂಬಂಧವಿದೆ ಎಂಬುದನ್ನು ಕಂಡು ಹಿಡಿದು ಮಾರ್ಕ್ಸ್ ಹೇಳಿರೋದನ್ನು ಬಸವಣ್ಣ ಆವಾಗಲೇ ಹೇಳಿದ್ದಾನೆ ಎಂದು ಏಕಕಾಲಕ್ಕೆ ಬಸವಣ್ಣ ಹಾಗೂ ಮಾರ್ಕ್ಸ್ ಗೂ, ಅವರ ವಿಚಾರಗಳಿಗೂ ಸಂಚಕಾರ ತರುವ ಇವರಲ್ಲಿ ಖಂಡಿತ ನೀಯತ್ತು ಕಾಣುವುದಿಲ್ಲ. ಇನ್ನೂ ನಾಯಿಗಿರುವ ಉಳಿದೆಲ್ಲ ಲಕ್ಷಣಗಳು ಇದಾವೋ ಇಲ್ವೋ ಅದನ್ನು ನೀವೆ ಬಿಡಿಸಿ ಹೇಳಬೇಕು…
ಹಂತ ಹಂತವಾಗಿ ನಮ್ಮ ಸಾರ್ ನಮ್ಮಸಾರ್ ಅಂತ ಹೇಳಿ ದರ್ಗಾರವರ ಕಾಲೆಳೆದು, ಅವರಿಗಿರಬಹುದಾದ ಮರ್ಯಾದೆಯನ್ನು ಕಣ್ಣೆದುರೇ ಪೋಸ್ಟ್ ಮಾರ್ಟಮ್ ಮಾಡ್ತೀರಲ್ರೀ…. ಹೋಗಿ ಹೋಗಿ ಪಮೆರಿಯನ್ ಗೆ ಹೋಲಿಸಿದ್ದೀರಲ್ಲ. ಕೋನೆ ಪಕ್ಷ ಒಂದು ಓಳ್ಳೆ ತಳಿ ನಾಯಿ ಹೆಸರು ಹೊಳಿಲಿಲ್ವ ನಿಮಗೆ…
ಶೆಟ್ಕರ್ ರವರು ತಮ್ಮ ಗುರು ದರ್ಗಾ ರವರನ್ನು ಹೋಲಿಸಿರುವ ಜಂತುವನ್ನು ಸ್ಮರಿಸಿಕೊಳ್ಳಲು ಇಲ್ಲಿ ನೋಡಿ:
http://goo.gl/epHSOo
http://goo.gl/ERWr1T
ಶೇಟ್ಕರ
ನನಗೆ ಯಾವ ಗುರುವೂ ಬೆಲ್ಜಿಯಂನಲ್ಲಿ ಇಲ್ಲ. ಅಲ್ಲಾ ಅವಾಗಷ್ಟೇ ದರ್ಗಾ ಗೂ ಅಲ್ಲಿನ ಪ್ರಶಸ್ತಿ ಬರಬೇಕಿತ್ತು ಅಂದಿರಿ, ಈಗ ನೋಡಿದರೆ ಅವರನ್ನ ನಾಯಿ ಗೀಯಿ ಅನ್ನುತ್ತೀರಿ..ಥೋ ವಿಚಿತ್ರವಾಗಿ ಮಾತನಾಡುತ್ತೀರಿ ಕಣ್ರೀ..ನಿಮ್ಮ ಸೋ ಕಾಲ್ಡ್ ದರಗಾ ಏನೇನು ಮಾಡಿದಾರೆ ಸಮಾಜದ ಉದ್ದಾರಕ್ಕೆ? ಸ್ವಲ್ಪ ಹೇಳಿ ನಿಮ್ಮ ನಾವು ತಿಳಿದುಕೊಳ್ಳಬೇಕು.. ಬಸವಣ್ಣ, ಅಲ್ಲಮ ಇವರುಗಳ ವಚನಗಳಾಗಲಿ ಅವರ ಆಕಾಂಕ್ಷೆಗಳಾಗಲಿ ನಿಮಗೆ ಅಥವಾ ನಿಮ್ಮ ಗುರು ದರ್ಗಾ ಗೆ ಅರ್ಥವಾಗಲು ಸಾಧ್ಯವೇ ಇಲ್ಲ. ಆದರೂ ಮನುಕುಲಕ್ಕೆ ಅದೇನೋ ಸಮಾಜ ಸೇವೆ ಮಾಡ್ತಾ ಇದಾರೆ ಅಂತ ಹೇಳ್ತಿದಿರಲ್ಲ ಅದೇನೇನು ಮಾಡಿದಾರೆ ಅದನ್ನ ಹೇಳಿ..ಅವರು ಬರೆದಿರುವುದನ್ನ ತಂದು ಇಲ್ಲಿ ಪೇಸ್ಟ್ ಮಾಡುದ್ರೆ ಅದು ನಿದರ್ಶನ ಆಗಲ್ಲ ಮೊದಲೇ ಹೇಳಿದ್ದೇನೆ.. ಹಾಗೇನಾದರೂ ಪೇಸ್ಟ್ ಮಾಡಿದರೆ ಅವರ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಲು ತಾವೇ ಪ್ರೋತ್ಸಾಹ ಕೊಡುತ್ತಿದ್ದೀರೆಂದು ನಂಬುತ್ತೇನೆ..
ಮಿ. ಶೆಟ್ಕರ್,
ಹಂತ ಹಂತವಾಗಿ ನಮ್ಮ ಸಾರ್ ನಮ್ಮಸಾರ್ ಅಂತ ಹೇಳಿ ದರ್ಗಾರವರ ಕಾಲೆಳೆದು, ಅವರಿಗಿರಬಹುದಾದ ಮರ್ಯಾದೆಯನ್ನು ಕಣ್ಣೆದುರೇ ಪೋಸ್ಟ್ ಮಾರ್ಟಮ್ ಮಾಡ್ತೀರಲ್ರೀ… ಹೋಗಿ ಹೋಗಿ ಪಮೆರಿಯನ್ ಗೆ ಹೋಲಿಸಿದ್ದೀರಲ್ಲ. ಕೋನೆ ಪಕ್ಷ ಒಂದು ಓಳ್ಳೆ ತಳಿ ನಾಯಿ ಹೆಸರು ಹೊಳಿಲಿಲ್ವ ನಿಮಗೆ…
Mr Siddha, Darga Sir is mystic. He is out of this world. He doesn’t care about your loose remarks.
ಜಗತ್ತಿನಿಂದಲೇ ಔಟ್ ಆದ ಮೇಲೆ ಲೂಸ್ ಕಮೆಂಟ್ಸ್ ಆದರೇನು ಟೈಟ್ ಕಮೆಂಟ್ಸ್ ಆದರೇನು ಕೇಳಲು ಆಗಬೇಕಲ್ಲ ಪಾಪ? ಇನ್ನಂದಷ್ಟು ಇದ್ದಿದ್ದರೆ ಚೆನ್ನಾಗಿತ್ತು, ದೇವರು ಆತ್ಮಕ್ಕೆ ಚಿರಶಾಂತಿ ನೀಡಲಿ..
ಶೆಟ್ಕರ್ ಅವರೇ, ದರ್ಗಾ ಅವರನ್ನು ಶರಣರು, ಕಾಯಕಯೋಗಿ, ಬಸವಣ್ಣನ ವಚನ ಪಾಲಕರು ಅಂತೆಲ್ಲಾ ಹೇಳಿ ಅವರದೇ ಧರ್ಮದವರ ವಿರುದ್ಧ ಎತ್ತಿ ಕಟ್ಟುವ ಹುನ್ನಾರ ನಿಮ್ಮದಲ್ಲವೇ ? ದೇವರನ್ನು (ಅಲ್ಲಾಹ್) ಬಿಟ್ಟು ಬೇರೆಯವರನ್ನು ಫಾಲೋ ಮಾಡಬಾರದು ಎಂದು ಇಸ್ಲಾಂ ಹೇಳುತ್ತದೆ. ಅದರ ಬಗ್ಗೆ ನಮಗೆ ಗೌರವವೂ ಇದೆ. ಆದರೆ ಇಲ್ಲಿ ನೀವು ಈ ರೀತಿ ಮಾಡಿ ಅವರನ್ನು ನಿಧಾನವಾಗಿ ಹಾಳು ಮಾಡುತ್ತಿದ್ದೀರಿ. ನಿಜವಾಗಿಯೂ ನೀವು ಗುರುದ್ರೋಹಿ ಅಂತ ನನಗೆ ಅನಿಸುತ್ತಿದೆ.
Mr. Vageesh, the God of Islam is the God of Basava Dharma is the God of whole world. There is one and only one God.
ಶೇಟ್ಕರ್ ಒಂದೇ ಗಾಡ್ ಅದು ದರ್ಗಾ ಗಾಡ್ ಹುರ್ರೆ..ಈ ಹೊಸ ಗಾಡ್ ನನ್ನು ಆರಾಧಿಸಲು ಶೇಟ್ಕರ್ ಆನ್ ಲೈನ್ ಭಕ್ತರ ಗುಂಪನ್ನ ಕಟ್ಟುತ್ತಾ ಇದಾರೆ
ಮಿ. ಶೆಟ್ಕರ್, ಯಪ್ಪ, ನೀವು ಇಷ್ಟು ಸೀರಿಯಸ್ಸಾಗಿ ದಯವಿಟ್ಟು ಕಾಮಿಡಿ ಮಾಡಬೇಡಿ.
ಬಸವಣ್ಣ ಯಾವಾಗ? ಎಲ್ಲಿ? ಅಲ್ಲಾನನ್ನು ಗಾಡ್ ಎಂದಿದ್ದ ಮಾರಾಯರೇ? ಖಂಡಿತ ಒಂದು ಗಾಡ್ ಇರೋದು ಇಸ್ಲಾಮ್ ನಲ್ಲಿ. ಒಂದೇ ಗಾಡ್ ಅಂತ ಪ್ರಪಂಚಕ್ಕೆ ನಂಬಿಸಲು ನೀವೇನು ಅದರ ಮೌಲ್ವಿಯಂತೂ ಅಲ್ಲ. ವಚನಕಾರರೇ ಒಬ್ಬೊಬ್ಬರು ಒಂದೊಂದು ದೇವರ ಬಗ್ಗೆ ಮಾತಾಡಿದಾರೆ. ಅಂತದ್ರಲ್ಲಿ ಅದು ಹೇಗೆ ಹೇಳುತ್ತೀರಿ ಗುರುವೇ? ಇಸ್ಲಾಮ್ ನ ಗಾಡ್ ಮತ್ತು ಬಸವಣ್ಣ ಹೇಳಿದ್ ಗಾಡ್ ಎರಡು ಒಂದೇ ಅಂತ?
ಅಷ್ಟೇ ಅಲ್ಲಾ ಅವರು ಬರೀ ನಾಯಿ ತರ ಅಲ್ಲ “ಕುಯ್ ಕುಯ್ ಅನ್ನೋ ಪೊಮೆರಿಯನ್” ನಾಯಿ ತರ ಅಂತ ಶೇಟ್ಕರ್ ಹೇಳ್ತಿರೋದು..ಸಹನಾ ರವರೆ, ಅವರು ಹೇಳಿದ್ದ ಮುಖ್ಯವಾದ ಪೊಮೆರಿಯನ್ ಅನ್ನೋ ಶಬ್ದನೇ ಬಿಡ್ತಾ ಇದಿರಲ್ಲಾ..ಹೀಗೆಲ್ಲಾ ಮಾಡಿದ್ರೆ ಶೇಟ್ಕರ್ ಶೆಟಕೊಂಡು ಬಿಡ್ತಾರೆ ನೋಡಿ..
Adu kooda Avara dharmadavaru teevravagi virodisuva NAAGIGE !