ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 16, 2013

25

ಅಂತರ್ಜಾತಿ ಮತ್ತು ಅಂತರ್ಧಮೀಯ ವಿವಾಹಗಳಿಂದ ಜಾತಿ ವಿನಾಶ ಸಾಧ್ಯವೆ?

‍ನಿಲುಮೆ ಮೂಲಕ

-ಮು.ಅ ಶ್ರೀರಂಗ, ಬೆಂಗಳೂರು

Intercaste Marriageನಮ್ಮ ಸಮಾಜದಲ್ಲಿ ಜನಸಾಮಾನ್ಯರಿಂದ ಹಿಡಿದು ಪ್ರಬುದ್ಧರವರೆಗೆ, ಸಾಹಿತಿಗಳು,ಚಿಂತನಶೀಲರನ್ನು ಕಾಡುತ್ತಿರುವುದು ಜಾತಿಯ ಸಮಸ್ಯೆ. ಇದೊಂದು ಸಮಸ್ಯೆ ಇಲ್ಲದಿದ್ದರೆ ಚೆನ್ನಾಗಿರುತಿತ್ತು ಎಂದು ನಮಗೆ ಒಂದಲ್ಲ ಒಂದು ಸಲ ಅನಿಸುವುದು ಸಹಜ ತಾನೇ?ಅಂತರ್ಜಾತಿ ಮತ್ತು ಅಂತರ್ಧಮೀಯ ವಿವಾಹಗಳಿಂದ ಈ ಸಮಸ್ಯೆಯನ್ನು ಆದಷ್ಟೂ  ನಿವಾರಿಸಬಹುದು ಎಂಬ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇಂತಹ ವಿವಾಹಗಳಿಗಿರುವ ಕೆಲವು ಸಮಸ್ಯೆಗಳನ್ನು ಮೂರು ಮುಖ್ಯವಾದ ಆಯಾಮಗಳಿಂದ ಚರ್ಚಿಸುವುದು ಈ ಲೇಖನದ ಉದ್ದೇಶ.

(೧) ಜಾತಿ ಮತ್ತು ಧರ್ಮ:-  ನಮ್ಮ ದೇಶದಲ್ಲಿರುವ ಜಾತಿಗಳು ಉಪಜಾತಿಗಳು ಅವುಗಳೊಳಗಿನ ಪಂಗಡಗಳು ಹಲವು. ಬಹು ಭಾಷಾ ಬಹು ಸಂಸ್ಕೃತಿಗಳ ನಮ್ಮ ದೇಶದಲ್ಲಿ ಇದು ಸಹಜ ಕೂಡ. ಪ್ರತಿಜಾತಿಗೂ ಹತ್ತಾರು ಉಪ ಜಾತಿಗಳು,ಪಂಗಡಗಳು. ಒಂದೇ ಜಾತಿಯವರಾದರೂ ಈ ಉಪ ಜಾತಿ ಪಂಗಡಗಳ ಕಾರಣದಿಂದ ಅವುಗಳ ನಡುವೆಯೇ ವಿವಾಹಕ್ಕೆ ಮೊದಲ ಪ್ರಾಶಸ್ತ್ಯ. ಬೇರೆ ಆಯ್ಕೆ ಇಲ್ಲವಾದರೆ ಮಾತ್ರ ಅದೇ ಜಾತಿಯ ಇತರ ಉಪಜಾತಿ, ಪಂಗಡಗಳ ನಡುವೆ ವಿವಾಹಕ್ಕೆ ಅರೆ ಮನಸ್ಸಿನಿಂದ ಒಪ್ಪಿಗೆ ನೀಡಬಹುದು. ಇಂತಹ ವಿದ್ಯಮಾನ ಇಂದು ಸರ್ಕಾರ ಮತ್ತು ಸಮಾಜ ಯಾವ ಜಾತಿಯವರನ್ನು ಮುಂದುವರಿದವರೆಂದು ಹೇಳುತ್ತಾ ಬಂದಿದೆಯೋ ಅವರಿಗಷ್ಟೇ ಸೀಮಿತವಾದುದಲ್ಲ. ಸಮಾಜದ ತೀರಾ ಕೆಳಸ್ತರದಲ್ಲಿರುವ ಜಾತಿಗಳ ತನಕ ಈ ತಾರತಮ್ಯ ಆಚರಣೆಯಲ್ಲಿದೆ. ಕೆಲವೊಂದು ಸಂದರ್ಭಗಳಲ್ಲಿ ಇವರುಗಳ ನಡುವೆ ಊಟ-ತಿಂಡಿಗಳ ಸೇವನೆ ಸಹ ನಿಷಿದ್ಧ ಎಂಬ ಪರಿಸ್ಥಿತಿ ಇದೆ. ಈ ರೀತಿ ಒಂದೇ ಜಾತಿಯೊಳಗೆ ವಿವಾಹಕ್ಕೆ ಇಷ್ಟೊಂದು ಸಮಸ್ಯೆಗಳಿರುವಾಗ ಒಂದೇ ಧರ್ಮದ ಬೇರೆ ಬೇರೆ ಜಾತಿಗಳ ನಡುವೆ ವಿವಾಹ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುತ್ತದೆ. ಇಲ್ಲ ಎನ್ನುವಂತಿಲ್ಲ. ಆದರೆ ಅದು ಒಂದು exಛಿeಠಿಣioಟಿ ಆಗಬಹುದಷ್ಟೆ. ಜತೆಗೆ ಇಂತಹ ವಿವಾಹಗಳ ಕಾರಣದಿಂದಲೇ ನಡೆಯುತ್ತಿರುವಂತಹ “ಮರ್ಯಾದ ಹತ್ಯೆಗಳು” ಈ ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸಿದೆ.

ಇನ್ನು ಅಂತರ್ಧಮೀಯರ  ನಡುವಿನ ವಿವಾಹ , ಅಪರೂಪದಲ್ಲಿ ಅಪರೂಪ. ಭಾರತದಿಂದ ವಿದೇಶಗಳಿಗೆ ಹೋದ ಗಂಡು ಹೆಣ್ಣುಗಳು ಅನ್ಯ ಧರ್ಮೀಯರನ್ನು ವಿವಾಹವಾಗಿರುವುದು ಉಂಟು. ಭಾರತದಲ್ಲಿದ್ದುಕೊಂಡೆ ಅನ್ಯಧರ್ಮೀಯರನ್ನು ವಿವಾಹವಾಗಿರುವ ಉದಾಹರಣೆಗಳೂ ನಮ್ಮಲ್ಲುಂಟು. ಇದು ನಮ್ಮ  ಸಮಾಜದ ಅತೀ ಶ್ರೀಮಂತರು, ಸಿನಿಮಾ ನಟ ನಟಿಯರು, ಕ್ರೀಡಾಪಟುಗಳಿಗೆ ಯಾವುದೇ ಸಮಸ್ಯೆಯಾಗದೇ ಮಾಮೂಲದ ಸಂಗತಿಗಳಾಗಿರಬಹುದು. ಆದರೆ  ಬಹುಪಾಲು ಜನಸಾಮಾನ್ಯರಿಗೆ ಇದು ಕೇವಲ ವಿವಾಹವಾಗುವ ಗಂಡು-ಹೆಣ್ಣಿಗೆ ಮಾತ್ರ ಸೀಮಿತವಾಗದೆ ಅವರ ಕುಟುಂಬವರ್ಗದವರು, ಆಪ್ತರು, ಬಂಧು-ಭಾಂದವರು ಜತೆಗೆ ಎರಡು ಧರ್ಮಗಳ ನಡುವಿನ  ಸಮಸ್ಯೆಯಾಗಿಬಿಡಬಹುದು.

(೨) ಆರ್ಥಿಕ ಪರಿಸ್ಥಿತಿ:- ಅಂತರ್ಜಾತಿ, ಅನ್ಯ ಧರ್ಮೀಯರ ನಡುವಿನ ವಿವಾಹದಲ್ಲಿ ಪ್ರಮುಖ ಪಾತ್ರವಹಿಸುವುದು ಗಂಡು ಹೆಣ್ಣಿನ ಆರ್ಥಿಕ ಪರಿಸ್ಥಿತಿ. ಇಬ್ಬರಿಗೂ ಪ್ರತಿ ತಿಂಗಳು ನಿಗದಿತವಾಗಿ ಸಂಬಳ ಬರುವಂತಹ ಕೆಲಸವಿದ್ದರೆ ಪರವಾಗಿಲ್ಲ. ಏಕೆಂದರೆ ಇಂತಹ ವಿವಾಹಗಳು ಒಂದು ಆದರ್ಶದ ಗುಂಗಿಗೋ,ಪರಸ್ಪರ ಪ್ರೇಮದ ಪರಿಣಾಮದಿಂದಲೋ ಆಗುವ ಸಂಭವಗಳೇ ಜಾಸ್ತಿ. ಹೀಗಾಗಿ ಆದರ್ಶದ ಗುಂಗು ಇಳಿದಮೇಲೆ ಸಹಜವಾಗಿ ಸಣ್ಣ ಪುಟ್ಟ ಕಾರಣಗಳಿಗೂ ಮನಸ್ತಾಪ ಹುಟ್ಟಬಹುದು. ನಿನ್ನನ್ನು ಮದುವೆಯಾಗಿ ನಾನು ಕೆಟ್ಟೆ ಎಂದು ಇಬ್ಬರಲ್ಲಿ ಒಬ್ಬರಿಗೆ ಅನ್ನಿಸಿದರೂ ಸಾಕು. ಕಡ್ಡಿಯೇ ಗುಡ್ದವಾಗಿ ವಿವಾಹ ವಿಚ್ಛೇದನೆ ತನಕ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು. ಆಗ ಹೆಣ್ಣಿಗೆ ಕೋರ್ಟು -ಕಛೇರಿಗಳು ಕೊಡಿಸಬಹುದಾದ ಪರಿಹಾರಧನ ಎಷ್ಟೇ ಇರಲಿ;ಆಕೆಗೂ ಒಂದು ಕೆಲಸವಿದ್ದರೆ ಎರಡು ಹೊತ್ತಿನ ಊಟಕ್ಕೆ ಚಿಂತೆಯಿಲ್ಲ. ಇಲ್ಲವಾದರೆ ಆಕೆಯ ಗತಿ ಏನು?ಜೀವನ ಸಾಗಿಸುವುದು ಹೇಗೆ? ನಾನು ಬಡವ ಆಕೆ ಬಡವಿ ಒಲವೇ ನಮ್ಮ ಬದುಕು, ಒಲವೇ ಜೀವನ ಸಾಕ್ಷಾತ್ಕಾರ ಮುಂತಾದ ಡೈಲಾಗುಗಳು ನಾಟಕ ಸಿನಿಮಾಗಳಲ್ಲಿ ಕೇಳುವುದಕ್ಕೆ ಚನ್ನಾಗಿರುತ್ತದೆ. ಆದರೆ ಜೀವನ ಎನ್ನುವುದು ನಾಟಕ, ಸಿನಿಮಾ ಅಲ್ಲ. ಹಸಿವು ಮುಂಬಾಗಿಲಿನಿಂದ  ಬಂದಾಗ ಆದರ್ಶ ಹಿಂಬಾಗಿಲಿನಿಂದ ಹೊರಟುಹೋಗುತ್ತದೆ ಎಂಬ ಮಾತೊಂದಿದೆ.

(೩) ರಾಜಕೀಯ ಪರಿಸ್ಥಿತಿ:- ನಮ್ಮದು ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವದ ದೇಶ. ಇಲ್ಲಿ ಜಾತಿ,ಮತ,ಸಾಮಾಜಿಕ ಅಂತಸ್ತು ಇತ್ಯಾದಿ ಯಾವುದೇ ಅಂಶಗಳಿಂದ  ಯಾರನ್ನೂ ಪ್ರತ್ಯೇಕಿಸಿ ನೋಡುವಂತಿಲ್ಲ.ಎಲ್ಲರೂ ಸಮಾನರು  ಇದು ನಮ್ಮ ಸಂವಿಧಾನದ ಆಶಯ ಮತ್ತು ಗುರಿ.ಸ್ವಾತಂತ್ರ್ಯಪೂರ್ವದ ಪರಿಸ್ಥಿತಿಗೂ  ಇಂದಿನ ಸ್ಥಿತಿಗೂ ಇಲ್ಲಿನ ಪ್ರಜೆಗಳ ಜೀವನ ಸಾಕಷ್ಟು ಸುಧಾರಿಸಿದೆ. ಐತಿಹಾಸಿಕ,ಸಾಮಾಜಿಕ ಕಾರಣಗಳಿಂದಾಗಿ ಹಿಂದೆ ಇರುವವರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಮ್ಮ ಸರ್ಕಾರಗಳಿಂದ ನಿರಂತರವಾಗಿ ನಡೆಯುತ್ತಲಿದೆ. ಇದು ಸ್ವಾಗತಾರ್ಹ. ಆದರೆ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಆಗಿರಬಹುದಾದಂತಹ  ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ   ಜಾತಿ-ಜಾತಿಗಳ ನಡುವಿನ ಅಂತರ ಜಾಸ್ತಿಯಾಗುತ್ತಿದೆಯೇ ಎಂಬ ಅನುಮಾನ ಕೆಲವೊಮ್ಮೆ ಬರುವುದು ಸಹಜ. ಈ ಅಂತರ ಆದಷ್ಟು ಬೇಗ ಕಡಿಮೆಯಾದರೆ ಅಂತರ್ಜಾತಿ ವಿವಾಹಗಳಿಗೆ ಅನುಕೂಲವಾಗಬಹುದು.

ಇಂತಹ ಸನ್ನಿವೇಶದಲ್ಲಿ ಒಂದು ಆಶಾಕಿರಣವೆಂದರೆ ಶಿಕ್ಷಣದ ಬಗ್ಗೆ ನಮ್ಮಲ್ಲಿನ ಎಲ್ಲಾ ಜಾತಿ-ಮತ-ಧರ್ಮದ ಜನರಲ್ಲಿ ಮೂಡಿರುವ ಅರಿವು ಮತ್ತು ಜಾಗೃತಿ. ಇದು ಸ್ವಾತಂತ್ರ್ಯಪೂರ್ವದ ದಿನಗಳಿಗೆ ಹೋಲಿಸಿದರೆ ಸಮಾಧಾನ ತರುವಂತಹ ವಿಷಯ. ಶಿಕ್ಷಣ ಪಡೆದವರೆಲ್ಲರೂ ಸುಸಂಸ್ಕೃತರೂ,ವಿಶಾಲ ಮನೋಭಾವದವರೂ ಆಗುತ್ತಾರೆಂದು ನಿರೀಕ್ಷಿಸಲಾಗದಿದ್ದರೂ  ಸಹ ಪಟ್ಟಣ ಪ್ರದೇಶಗಳಲ್ಲಿ,ನಗರಗಳಲ್ಲಿ ಅಲ್ಪ ಸ್ವಲ್ಪವಾದರೂ ಬದಲಾವಣೆಯ ಗಾಳಿ ಬೀಸುತ್ತಿದೆ. ಇದು ಒಳ್ಳೆಯ ಸೂಚನೆ. ಹಳ್ಳಿಗಳಲ್ಲಿ ಪರಿಸ್ಥಿತಿ ಸುಧಾರಿಸಬೇಕಾಗಿದೆ. ಆದರೆ ಈ ಜಾತಿ ಸಮಸ್ಯೆ ಅಲ್ಲಿ ಹಿಂದಿನಷ್ಟು ಭೀಕರವಾಗಿಲ್ಲ. ಜನಗಳಲ್ಲಿ ಜಾಗೃತಿಯೆನ್ನುವುದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಬರುವ ವಿದ್ಯಮಾನವಲ್ಲ. ಸಭೆಗಳಲ್ಲಿ ಜಾತಿ ವಿನಾಶದ ಪರ ಠರಾವು ಮಂಡಿಸಿ ಘೋಷಣೆ ಕೂಗಿದರೆ ಆಗುವಂತಹುದಲ್ಲ. ನಮ್ಮ ನಮ್ಮ ಮಿತಿಗಳಲ್ಲೇ ನಮ್ಮ ಅಕ್ಕ ಪಕ್ಕ ವಾಸಿಸುವ ಜನಗಳು ಯಾವುದೇ ಜಾತಿ-ಮತ-ಧರ್ಮಗಳಿಗೆ ಸೇರಿರಲಿ ಅವರ ಜತೆ ಸೌಹಾರ್ದಯುತವಾಗಿ ನಡೆದುಕೊಳ್ಳಲು ಪ್ರಾರಂಭಿಸಿ,ಅವರಲ್ಲಿರಬಹುದಾದ ಅನುಮಾನಗಳಿಗೆ ಯಾವುದೇ ಕಾರಣವಿಲ್ಲ ಎಂದು ನಮ್ಮ ನಡೆ-ನುಡಿಗಳಲ್ಲಿ ಬದಲಾವಣೆ ತಂದುಕೊಳ್ಳಬೇಕು. ಈ ಒಂದು ಪ್ರಯತ್ನವೇ-ಅದು ಎಷ್ಟೇ ಪುಟ್ಟ ಹೆಜ್ಜೆಯಾಗಿರಲಿ-ನಾವು ಸಾಗಬೇಕಾಗಿರುವ ಹಾದಿಗೆ ಇಡುವ ಮೊದಲ ಧೃಡ ಹೆಜ್ಜೆ ಆಗಬಹುದು.

ಗಂಡು-ಹೆಣ್ಣು ಮತ್ತು ಅವರಿಬ್ಬರ ತಂದೆ-ತಾಯಿಗಳು ಒಪ್ಪಿ ಮಾಡಿದ Arranged Marriage ಗಳು ವರ್ಷ ಕಳೆಯುವುದರೊಳಗೆ ಮುರಿದು ಬೀಳಬಹುದು;ಮುರಿದುಬಿದ್ದಿವೆ. ಅಂತರ್ಜಾತಿ ವಿವಾಹವಾದವರು ಸುಖವಾಗಿ ಸಂಸಾರ ನಡೆಸಿದ್ದಾರೆ;ನಡೆಸುತ್ತಲೂ ಇದ್ದಾರೆ. ನಮ್ಮ ನಮ್ಮ ಜೀವನಗಳಲ್ಲಿ ನಾವು ಎದುರಿಸಬೇಕಾಗಿಬರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಗಣಿತದ ಸೂತ್ರಗಳಂತಹ ಉಪಾಯಗಳಿಲ್ಲ. ಆಯಾ ಸನ್ನಿವೇಶಕ್ಕೆ ತಕ್ಕಂತೆ ನಾವೇ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಬೇಕು. ಬೇರೆ ದಾರಿ ಇಲ್ಲ.

ಚಿತ್ರ ಕೃಪೆ : http://www.mantraforvashikaran.com

25 ಟಿಪ್ಪಣಿಗಳು Post a comment
  1. Rajesh j
    ಆಕ್ಟೋ 16 2013

    Good article sir..last few lines are really good

    ಉತ್ತರ
  2. M.A.Sriranga
    ಆಕ್ಟೋ 16 2013

    In the 2nd para please read the English word as exception. I regret for the typing error

    ಉತ್ತರ
  3. Nagesh nayak
    ಆಕ್ಟೋ 16 2013

    ಒಳ್ಳೆಯ ಬರಹ ಶ್ರೀರಂಗರವರೇ.ನಿಲುಮೆ ಯಲ್ಲಿ ಶ್ರೀರಂಗ,ರಾಕೇಶ್ ಶೆಟ್ಟಿ ಮತ್ತು ಗುರುರಾಜ ಕೊಡ್ಕಣೀ ಯವರ ಬರಹ ಕೆಲವು ಪತ್ರಿಕಾ ಅಂಕಣಕಾರರ ಬರಹಕ್ಕಿಂತಲೂ ಚೆನ್ನಾಗಿರುತ್ತವೆ ಎಂದರೇ ತಪ್ಪಾಗಲಾರದು

    ಉತ್ತರ
  4. P@VI
    ಆಕ್ಟೋ 16 2013

    You have really put it well Sir.. real Practical analysis… Jaati bagge hinde Basavanna kaaladindalu jaagruti ittu , aadre iwaglu 21ne shatamaanadallu hogilla andre.. idu ontara kabbinanda kadale prashne alwa sir… ellaru tilidavare…. aadre antaryadalli Jaati anno feelingna alisakke aagalla ansutte…

    Olledu kettaddu prashne alla…idu kooda food choice ( Veg/N.Veg ) tara… yaavage mamage beko aavaga arsikolthivi… School alli iddaya ellaru geleyare.. Jaati adda baralla… aadre kelsa servaaga.. ayyo.. reservation siktu avange nange illa anta gol aadtivi.. innu maduwe bagge.. ayyo kelale bedi.. modulu nammvaraalli huduki .. opportunistic aagirthivi..

    ಉತ್ತರ
  5. Nagshetty Shetkar
    ಆಕ್ಟೋ 16 2013

    ಸಾಧ್ಯವಿಲ್ಲ ಎಂಬ ಪೂರ್ವನಿರ್ಧಾರದಿಂದ ಶುರು ಮಾಡಿ ಬರೆದ ಲೇಖನ.

    ಉತ್ತರ
  6. Nagshetty Shetkar
    ಆಕ್ಟೋ 17 2013

    Mr. Sriranga, Basavanna tried to build a society without castes. That’s the Lingayata dharma. But Vaidik Shahi inflitrated into it and produced caste-ridden Veerashaiva sect. More on this here: http://bit.ly/16csGMm

    ಉತ್ತರ
  7. ಗಿರೀಶ್
    ಆಕ್ಟೋ 17 2013

    ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣವಂತೆ ಅಂದ ಹಾಗಿದೆ. ಅಲ್ಲಾ ಸ್ವಾಮಿ, ಜಾತಿ ವಿರುದ್ದ ಹೋರಾಟ ಶುರು ಮಾಡಿದವರ ಒಳಗೆ ವೈಧಿಕರು ಹೇಗೆ ವೈರಸ್ ಬಿಡಕ್ಕಾಗುತ್ತೆ? ನಿಮ್ಮ ಮನೆ ಒಲೆ ಉರಿಯಲ್ಲಾಮ್ದ್ರೆ ಅದಕ್ಕೂ ವೈಧಿಕರೇ ಕಾರಣವ? ಬಣ್ಣದ ರೋಗದಿಂದ ಹೊರಬನ್ನಿ. ಶೆಟ್ಕರ್

    ಉತ್ತರ
    • Nagshetty Shetkar
      ಆಕ್ಟೋ 17 2013

      ಜಾತ್ಯತೀತ ಸಮಾಜ ನಿರ್ಮಾಣದಲ್ಲಿ ತೊಡಗಿದ್ದ ಶರಣರ ಕಗ್ಗೊಲೆ ನಡೆಸಲಿಲ್ಲವೇ ಸನಾತನಿಗಳು? ಹಿಂಸೆ, ದಬ್ಬಾಳಿಕೆ, ಆಮಿಷ ಮೊದಲಾದ ವೈದಿಕ ತಂತ್ರಗಳನ್ನು ಬಳಸಿಕೊಂಡು ಲಿಂಗಾಯತ ಧರ್ಮದೊಳಗೆ ವೈರಸ್ ಬಿಟ್ಟರಲ್ಲ ಬ್ರಾಹ್ಮಣರು. ಇದೆಲ್ಲ ಗೊತ್ತಿದ್ದೂ ಕುರುಡರಾಗಿದ್ದೀರೋ?

      ಉತ್ತರ
      • ವಿಜಯ್ ಪೈ
        ಆಕ್ಟೋ 18 2013

        ನಮ್ಮ ಶೆಟ್ಕರ್ ಗುರುಗಳು ಟೈಮ್ ಪಾಸ್ ಕಡ್ಲೆಕಾಯಿ ಇದ್ದ ಹಾಗೆ :)…

        ಉತ್ತರ
        • Nagshetty Shetkar
          ಆಕ್ಟೋ 19 2013

          Mr. Vijay, history tells unpleasant truths you don’t want to hear. Vachanakaras were massacred and for you its like eating peasants. No wonder you support NaMo who said those who were killed in Godhra were mosquitoes.

          ಉತ್ತರ
          • ನವೀನ
            ಆಕ್ಟೋ 19 2013

            “mosquitoes” or “dogs” …? don’t change pseudo secular stories sir … ok u spoke something about history.. Can you give proof for same?

            ಉತ್ತರ
          • ವಿಜಯ್ ಪೈ
            ಆಕ್ಟೋ 20 2013

            ಹೌದಾ ಗುರುಗಳೇ..ಗೋಧ್ರಾದಲ್ಲಿ ಸತ್ತವರು ಸೊಳ್ಳೆಗಳು ಅಂತ ಮೋದಿ ನಿಮ್ಮ ಹತ್ತಿರ ಪರ್ಸನಲ್ಲಾಗಿ ಹೇಳಿದ್ರಾ? ಇವೆಲ್ಲ ಗೊತ್ತೆ ಇರಲಿಲ್ಲ ನನಗೆ. ಅಂದ ಹಾಗೆ ಗುರುಗಳೆ..ಆಧುನಿಕ ಕಾಯಕಯೋಗಿ ಶರಣರಿಗೆ ಒಂದು ವರುಷದಲ್ಲಿ ಎಷ್ಟು ಸುಳ್ಳುಗಳನ್ನು ಆಡಲು ಪರ್ಮಿಶನ್ ಇದೆ? ನಿಮ್ಮ ಸ್ಪೀಡ್ ನೋಡಿದರೆ ನೀವು ನಿಮ್ಮ ಕೋಟಾ ಸಧ್ಯದಲ್ಲಿಯೇ ಖಾಲಿ ಮಾಡುತ್ತಿರೇನೊ ಅನಿಸುತ್ತೆ! 🙂

            ಉತ್ತರ
      • ವಿಜಯ್ ಪೈ
        ಆಕ್ಟೋ 18 2013

        ಶೆಟ್ಕರ್ ಸರ್..ನಿಮ್ಮ ಗುರುಗಳ ಲೇಖನ ಓದಿದೆ..ನಿಜವಾದ ಲಿಂಗಾಯಿತರು ಎಷ್ಟಿದ್ದಾರೆ ಕರ್ನಾಟಕದಲ್ಲಿ? ಎಣಿಸಬಹುದೆ ಕೈಬೆರಳುಗಳಲ್ಲಿ? ಅಂದಹಾಗೆ ನೀವು ಲಿಂಗಾಯಿತರೆ? ನಿಮ್ಮ ಗುರುಗಳು ಕೊಟ್ಟ ಹೋಲಿಕೆಗಳ ಪ್ರಕಾರ ಹೋದರೆ ಲಿಂಗಾಯಿತ ಧರ್ಮ ಇಸ್ಲಾಂ ಧರ್ಮಕ್ಕೆ ತುಂಬ ಹತ್ತಿರವಾಗಿದೆ. ನನಗನಿಸುವಂತೆ ನೀವೆಲ್ಲ ಅವರ ಜೊತೆ ಹೋದರೆ ಎಲ್ಲರಿಗೂ ಇದರಿಂದ ಲಾಭವಿದೆ.
        ೧) ನಿಮಗೆ ಅಲ್ಪಸಂಖ್ಯಾತರ ಕೋಟಾ ಸಿಗುತ್ತದೆ. ನಿಮ್ಮ ಗುರುಗಳಾದ ಆಧುನಿಕ ಚೆನ್ನಬಸವಣ್ಣನವರಿಗೂ ತುಂಬ ಸಂತೋಷವಾಗುತ್ತದೆ
        ೨), ನಿಮಗೆ ವೈದಿಕಶಾಹಿ ವೈರಸ್ಗಳಿಂದ ಮುಕ್ತಿ ದೊರೆಯುತ್ತದೆ..(ನಿಮ್ಮ ಗುಂಪಿನಲ್ಲಿಯೇ ನೀವು ಕಾಮಿಡಿ ಮಾಡುತ್ತ ಸಂತೋಷದಿಂದಿರಬಹುದು)
        ೩) ನಾವು ಈ ಆಧುನಿಕ ‘ಕಾಯಕಯೋಗಿ ಶರಣರ’ ಕೊರೆತದಿಂದ ಪಾರಾಗುತ್ತೇವೆ.

        ವಿಚಾರ ಮಾಡಿ ಗುರುಗಳೆ….

        ಉತ್ತರ
        • Nagshetty Shetkar
          ಆಕ್ಟೋ 19 2013

          Mr. Vijay, Islam is also a pro-people religion. Millions of backward caste Hindus converted to Islam in the history for this precise reason.

          ಉತ್ತರ
          • bhadravathi
            ಆಕ್ಟೋ 19 2013

            Shri. Shetkar, Not only backward caste, even folks from upper caste too fell for the beauty of lofty Islamic ideals and embraced Islam. It is not surprising to see the way you are being hounded and ridiculed just because you have opinions that differ from hardcore elements. whose myopic view has itself become a laughing stock.

            ಉತ್ತರ
          • ಗಿರೀಶ್
            ಆಕ್ಟೋ 19 2013

            What is pro people? Killing kafirs? Hahaha shekar. Saahebre, pls severe shortage of comedians in kannada industry y dont y try

            ಉತ್ತರ
            • bhadravathi
              ಆಕ್ಟೋ 19 2013

              yeah, sure why not, but there is a ಹೆಸರಾಂತ “ಇತಿಹಾಸ್ಯಕಾರ” ( (need mention his name?) who is donning the role of comedian. let his turn expire.

              ಉತ್ತರ
            • Nagshetty Shetkar
              ಆಕ್ಟೋ 20 2013

              Pro-people is establishing just society and administration, like Hyder Ali did in old Mysore region. Brahmins lost their privileges during his rule which they didn’t deserve any way.

              ಉತ್ತರ
              • ವಿಜಯ್ ಪೈ
                ಆಕ್ಟೋ 20 2013

                [Brahmins lost their privileges during his rule which they didn’t deserve any way.]

                ಗುರುಗಳೆ..ನಿಮ್ಮ ಪ್ರೊ-ಪಿಪಲ್ ಕಾನ್ಸೆಪ್ಟಗೆ ಮಾನದಂಡ ಇದು ಎಂದು ಮೊದಲಾದರೂ ಹೇಳಬಾರದಿತ್ತೆ..ಛೆ!..ನಮಗೆ ಗೊತ್ತೆ ಆಗಲ್ಲ..ನಿಮ್ಮ ಮಾನದಂಡಗಳು ಇಷ್ಟು ಸರಳವಾಗಿರುತ್ತವೆ ಅಂತ…

                ಉತ್ತರ
          • ವಿಜಯ್ ಪೈ
            ಆಕ್ಟೋ 20 2013

            [Mr. Vijay, Islam is also a pro-people religion. Millions of backward caste Hindus converted to Islam in the history for this precise reason.]

            ಅದಕ್ಕೆ ನಾನು ಹೇಳಿದ್ದು ಗುರುಗಳೆ…ಸಿರಿಯಸ್ಸಾಗಿಯೆ!…ನೀವು ಅಲ್ಲಿಗೆ ಹೋದರೆ, ನಮ್ಮಂತಹ ದುಷ್ಟರಿಂದ, ಫ್ಯಾಸಿಸ್ಟ್ ರಿಂದ, ಹಾರ್ಡಕೋರ ಎಲಿಮೆಂಟ್ ಗಳಿಂದ ನಿಮಗೆ ಮುಕ್ತಿ ಸಿಗುತ್ತದೆ,. ಮತ್ತೊಂದೇನೆಂದರೆ ಅಲ್ಲಿರುವವರೆಲ್ಲ ನಿಮ್ಮಂತೆಯೇ far-sighted ..ವಿಶಾಲದೃಷ್ಟಿಕೋಣ ಹೊಂದಿದವರು..ಸಮಾಜದ,ದೇಶದ,ಜಗತ್ತಿನ ಉನ್ನತಿಯ ಕುರಿತು ಯಾವಾಗಲೂ ವಿಚಾರ ಮಾಡುವವರು..ಅವರು ನಮ್ಮಂತೆ short-sighted,myopic ಗಳು ಅಲ್ಲ..ನೀವು ಅಲ್ಲಿ ಸುಖ,ಶಾಂತಿ,ನೆಮ್ಮದಿಯಿಂದ ನಗುತ್ತ, ನಗಿಸುತ್ತ , ಚಪ್ಪಾಳೆ ಹೊಡೆಸಿಕೊಳ್ಳುತ್ತ ಇರಬಹುದು ಎಂದು ನನ್ನ ಭಾವನೆ..ಏನಂತೀರಿ? 🙂

            ಉತ್ತರ
            • Nagshetty Shetkar
              ಆಕ್ಟೋ 20 2013

              Mr. Vijay, Lingayata religion is pro-human like Islam and hence good for me. So I don’t need to convert to Islam. But I’ve always admired Sufy tradition thanks to Darga Sir who is a mystic. I shall remain a Lingayat and fight the evils of Hinduism.

              ಉತ್ತರ
              • ವಿಜಯ್ ಪೈ
                ಆಕ್ಟೋ 20 2013

                ನಮ್ಮ ಧರ್ಮದ ಬಗ್ಗೆ ನಿಮ್ಮ ಕಾಳಜಿ ಮೆಚ್ಚತಕ್ಕದ್ದೆ..ಆದರೂ ದಯವಿಟ್ಟು ಬೇಡ ಗುರುಗಳೆ..ನಮ್ಮ ಧರ್ಮದಲ್ಲಿ ಶತ-ಶತಮಾನಗಳ ರಾಡಿ ಇದೆ.. ನಮ್ಮನ್ನು ತೊಳೆದು ಸ್ವಚ್ಚ ಮಾಡುವುದೇ ನಿಮಗೆ ಫುಲ್ ಟೈಮ್ ಕೆಲಸವಾಗಿ, ನಿಮ್ಮನ್ನು ತೊಳೆದುಕೊಳ್ಳಲು ಕೂಡ ಪುರುಸೊತ್ತು ಸಿಗುದೇ…ನಾರುವಂತಾಗಿದೆ.. ಛೆ..ಎಷ್ಟು ಅಂತ ನೀವು ಕಷ್ಟ ಪಡುವುದನ್ನು ನೋಡುವುದು..ಬೇಡ ಗುರುಗಳೇ..ನೀವು ಮತ್ತು ನಿಮ್ಮ ಉಳಿದ ಶರಣರು ನೆಮ್ಮದಿಯಿಂದಿರಬೇಕು..ನಿಮ್ಮದೇ ಧರ್ಮದಲ್ಲಿ ಇದ್ದಾದರೂ ಸರಿ…ಇಲ್ಲವಾದರೆ ಮಾನವೀಯತೆ ತುಂಬಿ ತುಳುಕುತ್ತಿರುವ ಪ್ರೊ-ಪಿಪಲ್ ರಿಲಿಜನ್ ಸೇರಿಕೊಂಡಾದರೂ ಸರಿ…

                ಉತ್ತರ
  8. ಆಕ್ಟೋ 18 2013

    Again comedy ha ha ha ha from Shetkar….

    ಉತ್ತರ
    • Nagshetty Shetkar
      ಆಕ್ಟೋ 19 2013

      Mr. Shetty, you CSLC folks have made a caricature out of truth. No wonder you count Jati/Kula in Vachanas and believe that you’ve done great research. You people are comedians not me.

      ಉತ್ತರ
  9. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ಉತ್ತರ

Leave a reply to Nagshetty Shetkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments