ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 26, 2013

10

ರೋಗಿಗಳ ದೀರ್ಘಕಾಲದ ನೋವನ್ನು ಅರ್ಥೈಸಿಕೊಳ್ಳುವಾಗ ನೋಡಬೇಕಾದ ಮನೋ-ಸಾಮಾಜಿಕ ಮತ್ತು ಕೌಟುಂಬಿಕ ಅಂಶಗಳು

‍ನಿಲುಮೆ ಮೂಲಕ

-ಡಾ| ಸುಧಾ ಪ್ರಸಾದ್

Painಭೌತ-ಸಾಮಾಜಿಕ, ಮನೋ-ಸಾಮಾಜಿಕ, ವಾತಾವರಣಾವಲಂಬಿತ ಮತ್ತು ಕೌಟುಂಬಿಕ ಸ್ಥಿತಿಗತಿಗಳನ್ನವಲಂಬಿತ ಅಂಶಗಳು ರೋಗಿಯ ದೀರ್ಘಕಾಲದ ನೋವಿಗೆ ಕಾರಣಗಳಾಗಿರಬಹುದು. ದೀರ್ಘಕಾಲದ ನೋವು ಕೌಟುಂಬಿಕವಾಗಿ ಮನೆಯ ಸದಸ್ಯರಮೇಲೆ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಸತತ ನೋವೆಂದು ಹೇಳುವುದನ್ನು ಅನುಮೋದಿಸುವ ಕುಟುಂಬ, ಅಂತಹ ನೋವಿಗೆ ಭಾಗಶಃ ತಾನೇ ಕಾರಣವಾಗಿರಲೂಬಹುದು!  

65 ವರ್ಷದ ಶ್ರೀಮತಿ ಲಕ್ಷ್ಮಿ ಎಂಬಾಕೆ ಮೊಳಕಾಲುಗಂಟಿನ ನೋವಿನ ಪರಿಹಾರಕ್ಕಾಗಿ ಎರಡೂ ಮೊಳಕಾಲುಗಂಟುಗಳ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ಪಡೆಯಬೇಕಾದ ಪುನರುಜ್ಜೀವನ ಚಿಕಿತ್ಸೆಗಳನ್ನು ಆಕೆ ಅದೇ ಆಸ್ಪತ್ರೆಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ; ಆದರೆ ಆಸ್ಪತ್ರೆಯಿಂದ ಮರಳಿ ಮನೆಗೆ ಕಳಿಸುವಾಗ ಕೊಟ್ಟ ಚಿಕಿತ್ಸಾಕ್ರಮಗಳ ಸಾರಾಂಶಯಾದಿಯಲ್ಲಿ ಹೇಳಲಾದ  ವ್ಯಾಯಾಮಗಳನ್ನೆಲ್ಲ ಆಕೆ ಮನೆಯಲ್ಲೇ ನಡೆಸಿದರು. ಶಸ್ತ್ರಚಿಕಿತ್ಸೆ ಮುಗಿದು ಒಂದು ತಿಂಗಳ ನಂತರವೂ ಸಹ ಆಕೆ ಎತ್ತರದ ಕುರ್ಚಿಯಲ್ಲೇ ಕುಳಿತಿದ್ದರು, ಮಲಗುವುದಕ್ಕೆ ಆಧಾರವಾಗಿ ಹಲವು ದಿಂಬುಗಳನ್ನು ಒಂದರಮೇಲೊಂದರಂತೇ ಇಟ್ಟುಕೊಂಡಿದ್ದರು, ನಡೆಯುವುದಕ್ಕೆ ವಾಕರ್ ಬಳಸುತ್ತಿದ್ದರು ಅಥವಾ ಯಾರನ್ನೋ ಹಿಡಿದುಕೊಂಡು ನಡೆದಾಡುತ್ತಿದ್ದರು. ನೋವು ಬರುತ್ತದೆ, ಬುದ್ದುಬಿಡುತ್ತೇನೆ ಎಂಬ ಹೆದರಿಕೆ ಆಕೆಯ ಮನದಲ್ಲಿ ಆಳವಾಗಿ ಬೇರೂರಿ ಆಕೆ ಮಲಗೇ ಇರುವಂತೇ ಮಾಡಿತ್ತು. ಆಕೆಯ ಕುಟುಂಬದವರು ಆಕೆಗೆ ಇನ್ನೇನೋ ತೊಂದರೆಯಿರಬೇಕೆಂಬ ಅನಿಸಿಕೆಯಿಂದ ನಮ್ಮ ಕ್ಲಿನಿಕ್ಕಿನ ಸಲಹೆ-ಸಹಾಯ ಬಯಸಿ ನಮ್ಮಲ್ಲಿಗೆ ಬಂದರು. ಒಬ್ಬ ಅನುಭವಿಯ ಮಾರ್ಗದರ್ಶನದಲ್ಲಿ ಒಂದೇ ವಾರದಲ್ಲಿ ಆಕೆ ಯಾರ ಸಹಾಯವೂ ಇಲ್ಲದೇ ನಡೆಯುವಂತಾದರು. ವಾರಗಳ ನಂತರ ಯಾವ ಹೆದರಿಕೆಯೂ ಇಲ್ಲದೇ ನಡೆದಾಡಿದರೆ, ತಿಂಗಳನಂತರ ಮೆಟ್ಟಿಲುಗಳನ್ನೇರಲು ತೊಡಗಿದರು, ಕಾರನ್ನೇರಿ ಎಲ್ಲರಂತೇ ಆರಾಮವಾಗಿ ಇರಲಾರಂಭಿಸಿದರು. ಮನಸ್ಸಿನಾಳದಲ್ಲಿದ್ದ ನೋವು ಮತ್ತು ಬೀಳುವ ಭಯವನ್ನು ಪರಿಹರಿಸದಿದ್ದರೆ, ಶಸ್ತ್ರಕ್ರಿಯೆಯ ಬಳಿಕವೂ ದೀರ್ಘಕಾಲದ ನೋವಿನಿಂದ ಆಕೆ ಬಳಲುತ್ತಲೇ ಇರಬೇಕಾಗುತ್ತಿತ್ತು. ಬಹಳದೊಡ್ಡ ಶಸ್ತ್ರಚಿಕಿತ್ಸೆಯಿಂದ ಆಯಾಸಗೊಂಡಿರುತ್ತಾರೆಂಬ ಸಹಾನುಭೂತಿಯಿಂದ ಹೆಜ್ಜೆಹೆಜ್ಜೆಗೂ ಆಕೆಗೆ ಸಹಾಯಮಾಡಲು ಮುಂದಾಗುವ ಕುಟುಂಬ ತಮಗರಿವಿಲ್ಲದೇ ಆಕೆಯ ನೋವು ದೀರ್ಘಕಾಲ ಅಥವಾ ಶಾಶ್ವತವಾಗಿ ಹಾಗೇ ಉಳಿದುಬಿಡಲು ಕಾರಣೀಭೂತರಾಗಬಹುದಿತ್ತು!      

ಮನೋ-ಭೌತಿಕ ಕುಟುಂಬಗಳೆಂದರೇನು?

 ಕುಟುಂಬದಲ್ಲಿ ಕಾಣುವ ಅತಿಯಾದ ಕಾಳಜಿ, ಕುಟುಂಬದ ಸದಸ್ಯರ ನಡುವಣ ಸ್ವಾಭಿಮಾನದ ಗೋಡೆಗಳು, ಕಟ್ಟುನಿಟ್ಟಾದ ನಿಯಮಗಳು ಮತ್ತು ಅವುಗಳ ಅನುಸರಣೆಗಳಂತಹ ನಿಗದಿತ ನಡವಳಿಕೆಗಳ ಅಸ್ಥಿತ್ವ ಮನೆಯ ಸದಸ್ಯರಲ್ಲಿ ಯಾರಲ್ಲಾದರೊಬ್ಬರಲ್ಲಿ ದೀರ್ಘಕಾಲದ ನೋವಿಗೆ, ದೌರ್ಬಲ್ಯಕ್ಕೆ ಕಾರಣವಾಗಬಹುದು. ಉದಾಹರಣೆಗೆ: ತನ್ನ ಬೆಳೆದ ಮಕ್ಕಳು ತನ್ನನ್ನು ಲಕ್ಷ್ಯಿಸುತ್ತಿಲ್ಲ ಎಂದು ತಾಯಿಯೊಬ್ಬಳು ಬೇಸರಗೊಳ್ಳಬಹುದು. ದೀರ್ಘಕಾಲ ತಾನು ಬಾಯ್ಬಿಟ್ಟು ಕಾಳಜಿವಹಿಸಿರೆಂದು ಕೇಳಲಾಗದ್ದನ್ನು ಶಾರೀರಕ ನೋವೆನ್ನುತ್ತಾ ಪಾಲನೆ, ಪೆÇೀಷಣೆಮಾಡಿಸಿಕೊಳ್ಳುವುದರ ಮೂಲಕ ಪರೋಕ್ಷವಾಗಿ ಮಕ್ಕಳು ಕಾಳಜಿನೀಡುವಂತೇ ಅವಕಾಶ ಕಲ್ಪಿಸಿಕೊಳ್ಳಬಹುದು.

 ಮಕ್ಕಳಲ್ಲಿ ಹೇಗೆ ಇಂತಹ ನೋವು ಬರಬಹುದೆಂದು ಅವಲೋಕಿಸೋಣ:

 15 ವರ್ಷದ ರಮೇಶ ತನಗೆ ತೀವ್ರ ತಲೆನೋವೆಂದು ಹೇಳುತ್ತಿದ್ದುದು ಆತ ಶಾಲೆಗೆ ಹೋಗದೇ  ತಪ್ಪಿಸಿಕೊಳ್ಳುವಂತಾಗುತ್ತಿತ್ತು. ತಾರುಣ್ಯದ ಹೊಸ್ತಿಲಲ್ಲಿರುವ ಆತನಿಗೆ ಮನೆಯಲ್ಲಿ ಪಾಲಕರ ಪೆÇ್ರೀತ್ಸಾಹ ಕಮ್ಮಿ ಇರುವುದು ಆತನ ತಲೆನೋವಿಗೆ ಕಾರಣವಾಗಿರಬಹುದು.

ಇನ್ನೊಂದೆಡೆ, 6ವರ್ಷದ ಕೃಷ್ಣ ಮತ್ತೆ ಮತ್ತೆ ಹೊಟ್ಟೆನೋವೆನ್ನುತ್ತಾ ಸ್ಕೂಲಿಗೆ ಚಕ್ಕರ್ ಹೊಡೆಯುತ್ತಿದ್ದ. ತರಗತಿಯ ಎಲ್ಲಾ ಪರೀಕ್ಷೆಗಳಲ್ಲಿ ಆತ ಅನುತ್ತೀರ್ಣನಾಗಿದ್ದ! ಹೊಟ್ಟೆನೋವಿದೆಯೆಂದು ಹೇಳಿ, ಶಾಲೆಗೆ ಹೋಗದಿರಲು ಪಾಕರಿಂದ ಆಗಾಗ ಅನುಮತಿ ಗಿಟ್ಟಿಸಿಕೊಳ್ಳುತ್ತಿದ್ದ ಆ ಬಾಲಕನ ಜೊತೆಗೆ ನಾವು ಮಾತನಾಡಿ ಆತನ ನೈಜ ಸಮಸ್ಯೆ ಏನೆಂದು ತಿಳಿದುಕೊಳ್ಳಬಹುದು.

ಸಾಮಾಜಿಕ ಭದ್ರತೆಯ ಅಂಶಗಳು

ಮನೆ, ಕಚೇರಿಯಲ್ಲಿನ ಮಾರ್ಗದರ್ಶನ ಮತ್ತು ಹೊಂದಾಣಿಕೆ, ಆದಾಯ, ಕಾನೂನು ಸಮಸ್ಯೆಗಳು, ಸಾಲಗಳು, ಪರಿಹಾರ ಇವುಗಳಿಗೆ ಸಂಬಂಧಿತವಾದ ತೊಂದರೆ ಕೆಲಸಕ್ಕೆ ಹಾಜರಾಗದಿರುವುದಕ್ಕೆ ಕಾರಣವಾಗಿರಬಹುದು. ಮನಸ್ಸನ್ನು ಬೇರೆಡೆಗೆ ಸೆಳೆಯುವುದರಿಂದ ಅಥವಾ ಸಲಹೆಯ ಮೇರೆಗೆ ತನ್ನನ್ನೇ ತಾನು ವಿಮರ್ಶೆಮಾಡಿಕೊಳ್ಳುವುದರಿಂದ ಸಮಸ್ಯೆ ನಿವಾರಣೆಯಾಗಬಹುದು.

ಕೆಲಸದಿಂದ ತಪ್ಪಿಸಿಕೊಳ್ಳಲು ಚಿಕ್ಕಪುಟ್ಟ ಗಾಯಗಳು-ಆಘಾತ ಅಥವಾ ರೋಗ-ಇವುಗಳ ಸಬೂಬನ್ನು ಹೇಳುತ್ತಾ ದೀರ್ಘಕಾಲ ಹಾಗೆ ಮಾಡುವುದರಿಂದ ನೋವು ಉಲ್ಬಣಿಸಬಹುದು.

ನೋವಿನ ವ್ಯವಸ್ಥಾಪನೆಯ ಸಮಗ್ರ ಅನುಸಂಧಾನ

ನೋವಿನ ವ್ಯವಸ್ಥಾಪನೆಯ ಪ್ರಮುಖ ಉದ್ದೇಶ ದೈಹಿಕ, ಭೌತ-ಸಾಮಾಜಿಕ, ಮನೋ-ಸಾಮಾಜಿಕ, ವಾತಾವರಣಾವಲಂಬಿತ ಮತ್ತು ಕೌಟುಂಬಿಕ ಸ್ಥಿತಿಗತಿಗಳಿಂದ ತಲೆದೋರಬಹುದಾದ ನೋವುಗಳನ್ನು ನಿವಾರಿಸುವುದಾಗಿದೆ.

 ಡಾ| ಸುಧಾ ಪ್ರಸಾದ್ ಅವರ ಸಂಪರ್ಕ :

Jaya Pain Clinic & Diagnostic Center, 9448848973, Blog: http://jayapainclinicanddiagnostics.blogspot.in/

ಚಿತ್ರ ಕೃಪೆ : http://www.timelesshypnotherapy.com

 

Read more from ಲೇಖನಗಳು
10 ಟಿಪ್ಪಣಿಗಳು Post a comment
  1. Prasanna Rameshwara T S's avatar
    Prasanna Rameshwara T S
    ಆಕ್ಟೋ 26 2013

    ಡಾ|| ಸುಧಾ ಅವರೇ ನಿಮ್ಮ ಸಾಮಯಿಕ ಲೇಖನ ಸಮಂಜಸವಾಗಿಯೂ, ಅಷ್ಟೋ ರೋಗಿಗಳ ಮತ್ತು ಅವರ ಕುಟುಂಬದವರನ್ನೂ ಕಣ್ಣು ತೆರೆಸುವಂತಿದೆ. ಯಾವುದೇ ಖಾಯಿಲೆ ಬಂದಮೇಲೆ ರೋಗಿ ಸಾಧ್ಯವಾದಷ್ಟೂ ಅದನ್ನು ಅತಿ ಉದ್ವೇಗದಿಂದ ತೆಗೆದುಕೊಳ್ಳದೆ ಸಾಮಾನ್ಯವಾಗಿರಲು ಯತ್ನಿಸಿದರೆ ಅದರ ಉಲ್ಬಣತೆಯನ್ನು ಕಡಮೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ನನ್ನದೇ ಉದಾಹರಣೆ ಇದೆ. ನನ್ನ ಎರಡು ಕಿಡ್ನಿಗಳೂ ವೈಫಲ್ಯಗೊಂಡಿರುವುದಾಗಿ ಈಗ್ಗೆ ಐದು ವರ್ಷಗಳ ಹಿಂದೆ ತಪಾಸಣೆಯಿಂದ ಗೊತ್ತಾದಾಗ ಅಂಥ ರೋಗ ಮತ್ತು ಡಯಾಲಿಸಿಸ್ ಬಗ್ಗೆ ಏನೂ ಗೊತ್ತಿಲ್ಲದ ನನಗೆ ದಿಕ್ಕೇ ತೋಚದಂತಾಯಿತು. ಇದ್ದ ಕೆಲಸವೂ ಮುಂದುವರೆಸಲು ಸಾಧ್ಯವಾಗದೇ ಹೋಯಿತು. ಏಕೆಂದರೆ ವಾರಕ್ಕೆ ಮೂರು ಬಾರೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿಬಿಟ್ಟಿತು. ಬರುಬರುತ್ತಾ ನಾನು ಅದಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿದೆ. ಇಂಥ ಖಾಯಿಲೆ ಬಂದವರು ಆರು ತಿಂಗಳು ಮಾತ್ರ ಬದುಕಬಹುದೆಂದು ಅನೇಕರು ಅಭಿಪ್ರಾಯಪಟ್ಟರು. ವೈದ್ಯರೂ ಈ ಬಗ್ಗೆ ಏನೂ ಭರವಸೆ ಕೊಡದಾದರು. ಈ ಮಧ್ಯೆ ಬಲತೊಡೆಯಲ್ಲಿ ಸ್ವಲ್ಪ ಹೊಡೆತ ಬಿದ್ದಿದ್ದರಿಂದ ರಕ್ತ ಹೆಫ್ಫುಗಟ್ಟಿದ್ದರಿಂದ ಸುಮಾರು ಹನ್ನೆರಡು ಇಂಚು ಕೊಯ್ದು ಆಪರೇಷನ್ ಮಾಡಿಸಿಕೊಳ್ಳಬೇಕಾಯಿತು ನಂತರ ನನ್ನ ಎಡ ಕಾಲಿನ ಹೆಬ್ಬೆಟ್ಟನ್ನು ತೆಗೆಯಬೇಕಾದ ಪ್ರಸಂಗವೂ ಬಂತು. ಆ ದಿನಗಳಲ್ಲಿ ನಮ್ಮ ವಾಸದ ಮನೆಯನ್ನು ಮೊದಲ ಮಹಡಿಯಿಂದ ನೆಲ ಮಹಡಿಯ ಮನೆಗೆ ಬದಲಾಯಿಸಬೇಕಾಯಿತು. ಸ್ವಲ್ಪ ಕಾಲದ ನಂತರ ನಾನು ನಿಧಾನವಾಗಿ ಓಡಾದುವುದನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಂಡೆ ಮತ್ತು ಬೆಳಗಿನ ಹಾಲು ಮತ್ತು ಇತರ ಸಾಮಾನುಗಳನ್ನು ತರುವುದನ್ನೂ ರೂಢಿಸಿಕೊಂಡೆ. ಆ ವಾಸಗೃಹದಲ್ಲಿನ ನ್ಯೂನತೆಗಳಿಂದ ಬದಲಾಯಿಸಬೇಕಾಯಿತು. ನನ್ನ ಮಗ ಒಂದು ಉತ್ತಮವಾದ ಮನೆಯನ್ನು ಬಯಸಿದ ಅದರೆ ನನ್ನ ಮೆಟ್ಟಲೇರುವ ಸಮಸ್ಯೆಯ ಬಗ್ಗೆ ಚಿಂತಿತನಾಗಿದ್ದ. ಆದರೆ ನಾನು ಅದನ್ನು ಸಂಭಾಳಿಸುವುದಾಗಿ ಅವನಿಗೆ ಮನವರಿಕೆಮಾಡಿಕೊಟ್ಟ ಮೇಲೆ ಆ ಮನೆಗೆ ಸ್ಥಳಾಂತರಗೊಂಡೆವು ಮತ್ತು ನನ್ನ ಈ ೬೦ ವರ್ಷ ವಯಸ್ಸಿನಲ್ಲಿ ನನ್ನ ಕಾಯಕ [ಮುಂಜಾನೆ ಹಾಲು ತರುವುದು ಮುಂತಾದ ಕೆಲಸಗಳಿಗೆ] ಓಡಾಡುವುದನ್ನು ಮುಂದುವರಿಸಿರುತ್ತೇನೆ. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಗಾಗಿ ನಾನೇ ಹೋಗಿ ಬರುತ್ತೇನೆ. ಇದನ್ನೆಲ್ಲಾ ಏಕೆ ಹೇಳುತ್ತೇನೆಂದರೆ ನೀವು ಲೇಖನದಲ್ಲಿ ತಿಳಿಸಿರುವಂತೆ ನಾವು ಸಾಮಾನ್ಯ ಜೀವಿನ ನಡೆಸಲು ಪ್ರಯತ್ನಿಸಿದರೆ ಯಾವುದೇ ರೋಗಿಯಾಗಲೀ ತನ್ನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

    ಉತ್ತರ
    • Nagshetty Shetkar's avatar
      Nagshetty Shetkar
      ಆಕ್ಟೋ 27 2013

      ಪ್ರಸನ್ನ ಅವರೇ, ನಿಮ್ಮ ಜೀವನಪ್ರಿಯತೆ ಶ್ಲಾಘನೀಯವಲ್ಲವೇ! ನಿಮ್ಮ ವಯಸ್ಸಿನಲ್ಲಿ ಬಹುತೇಕ ಹಿಂದೂಗಳು ಬಾಬ ಸ್ವಾಮಿಗಳ ಹಿಂದೆ ಬಿದ್ದು ಮನೆಯಲ್ಲಿ ಆಸ್ಥ ಚಾನಲ್ ನೋಡುತ್ತಾ ಸೋಮಾರಿಯಾಗಿ ಜೀವನವಿಮುಖರಾಗಿ ಬಾಳುತಿದ್ದಾರೆ. ಕಾಯಕತತ್ವದಲ್ಲಿ ನಂಬಿಕೆ ಇಟ್ಟು ಎಲ್ಲಾ ದೈಹಿಕ ಬಾಧೆಗಳ ನಡುವೆಯೂ ಕಾಯಕದಲ್ಲಿ ತೊಡಗಿರುವ ನೀವು ಹಿಂದೂ ವೃದ್ಧರಿಗೆ ಆದರ್ಶಪ್ರಾಯರು. ನಿಮಗೆ ಕೂಡಲಸಂಗಮದೇವರ ಆಶೀರ್ವಾದ ಎಂದೆಂದಿಗೂ ಇರಲಿ.

      ಉತ್ತರ
  2. ವಿಜಯ್ ಪೈ's avatar
    ವಿಜಯ್ ಪೈ
    ಆಕ್ಟೋ 27 2013

    @ಡಾಕ್ಟರ್ ಸುಧಾ ಪ್ರಸಾದ್..
    ರೋಗಿಗಳಿಗೆ ಮನೋಸ್ಥೈರ್ಯ ತುಂಬುವ ಲೇಖನಕ್ಕೆ ಧನ್ಯವಾದಗಳು :). ನಿಮ್ಮಿಂದ ಇನ್ನಷ್ಟು ಮಾಹಿತಿಪೂರ್ಣ ಲೇಖನಗಳು ನಿಲುಮೆಯಲ್ಲಿ ಬರಲಿ ಎಂಬ ನಿರೀಕ್ಷೆ.

    @ಪ್ರಸನ್ನ ರಾಮೇಶ್ವರ್..
    ನಿಮ್ಮ ಸ್ವಂತ ಅನುಭವ ಹಂಚಿಕೊಂಡು, ಈ ತರಹ ದೀರ್ಘಕಾಲಿಕ ಚಿಕಿತ್ಸೆಯ ಅನಿವಾರ್ಯತೆಗೆ ಒಳಗಾಗಿರುವವರಿಗೆ ಸ್ಥೈರ್ಯ ತುಂಬಿದ್ದಿರಿ. ಧನ್ಯವಾದಗಳು..ನಿಮ್ಮ ಉತ್ತಮ ಆರೋಗ್ಯ ಉತ್ತಮವಾಗಲಿ ಎಂಬ ಪ್ರಾರ್ಥನೆ 🙂

    @ ‘ಕಾಯಕ’ಯೋಗಿ ಶೆಟ್ಕರ್ ಗುರುಗಳು.
    ಪಾಪ..ಕೆಲವಕ್ಕೆ ಎಲ್ಲಿಯಾದರೂ ಬೆಂಕಿ ಬಿದ್ದಿದೆ ಅಂದ್ರೆ..ಅಲ್ಲಿಗೆ ಹೋಗಿ ಬೀಡಿ ಹಚ್ಚಬಹುದೇನೊ ಎಂಬ ಯೋಚನೆಯೇ ಬರುತ್ತೆ!..
    ಸ್ವಾಮಿ..ಪ್ರಸನ್ನವರು ನಿಮ್ಮ (ಅಂದರೆ “ನಿಮ್ಮ ” ,ದೊಡ್ಡ ಅಕ್ಷರಗಳಲ್ಲಿ ಓದಿಕೊಳ್ಳಿ) ) ಪುಂಗಿ, ತುತ್ತೂರಿ ಊದುವ, ಸುಮ್ಮನಿರದೆ ಇರುವೆ ಬಿಟ್ಟುಕೊಳ್ಳುವ ‘ಕಾಯಕ’ ತತ್ವ ರೂಢಿಸಿಕೊಂಡಿಲ್ಲ!..ಅವರು ಮಾತನಾಡಿರುವುದು ನೋವಿನ ನಡುವೆಯೂ,ಸಹಜ ಜೀವನ ಬದುಕಬಹುದು ಎಂಬ ಬಗ್ಗೆ. ಎಲ್ಲರನ್ನು ನಿಮ್ಮ ಗುಂಪಿಗೆ ಸೇರಿಸಿ, ಅವರ ಮಾನ ಕಳೆಯದಿರಿ..ನಿಮ್ಮ ಪ್ರಚಾರ ನಿಮ್ಮ ‘ಕಾಯಕಯೋಗಿ’ ಸಂಘಕ್ಕೆ ಮತ್ತು ನಿಮ್ಮ ಪ್ರೊಗ್ರಾಮ್ ಪಾರ್ಟನರ್ ಗಳ ಗುಂಪಿಗೆ ಮೀಸಲಿಡಿ.

    ಉತ್ತರ
    • ವಿಜಯ್ ಪೈ's avatar
      ವಿಜಯ್ ಪೈ
      ಆಕ್ಟೋ 27 2013

      ತಿದ್ದುಪಡಿ:
      ಕ್ಷಮಿಸಿ..
      [ನಿಮ್ಮ ಉತ್ತಮ ಆರೋಗ್ಯ ಉತ್ತಮವಾಗಲಿ ಎಂಬ ಪ್ರಾರ್ಥನೆ] ಎಂಬುದು ‘ನಿಮ್ಮ ಆರೋಗ್ಯ ಇನ್ನೂ ಉತ್ತಮವಾಗಲಿ ಎಂಬ ಪ್ರಾರ್ಥನೆ’ ಎಂದಾಗಬೇಕು.

      ಉತ್ತರ
    • Nagshetty Shetkar's avatar
      Nagshetty Shetkar
      ಆಕ್ಟೋ 27 2013

      Mr. Vijay, isn’t what I said about Hindu aged people true? Why are religious tv channels so popular? How did Ravishankar & Nityananda become popular? What would have happened if Mr. Prasanna had subscribed to those channels? Don’t attack me answer my questions.

      ಉತ್ತರ
      • ನವೀನ's avatar
        ನವೀನ
        ಆಕ್ಟೋ 28 2013

        ಶೆಟ್ಕರ್ ಸರ್,
        ನಿಮ್ಮ ಗುರುಗಳಿಗೂ ಒಂದು ಚಾನೆಲ್ ಮಾಡಲು ಹೇಳಿ.ಹಾಗೆಯಾದರೂ ಈ ವೈದಿಕ ವೈರಸ್ ಗಳ ಅಟ್ಟಹಾಸ ನಿಲ್ಲಬಹುದು

        ಉತ್ತರ
        • Nagshetty Shetkar's avatar
          Nagshetty Shetkar
          ಆಕ್ಟೋ 28 2013

          Mr. Naveen, it takes a lot of capital investment to start a tv channel. We are Sharanas and not filthy rich capitalists.

          ಉತ್ತರ
          • ನವೀನ's avatar
            ನವೀನ
            ಆಕ್ಟೋ 28 2013

            Yes. You r right sir … y dont u think of taking slot in any kananda channels and start this. That shouldn’t be taking much money … if TRP is gud then u might get paid for it…

            ಉತ್ತರ
  3. Prasanna Rameshwara T S's avatar
    Prasanna Rameshwara T S
    ಆಕ್ಟೋ 27 2013

    ಶ್ರೀಯುತ ನಾಗ್ ಶೆಟ್ಟಿ ಮತ್ತು ಶ್ರೀಯುತ ವಿಜಯ್ ಪೈ ಅವರೇ, ತಮ್ಮ ಪ್ರತಿಕ್ರಿಯೆಗಾಗಿ ಮತ್ತು ಹುರಿದುಂಬಿಸುವ ಪದಗಳಿಗಾಗಿ ತುಂಬಾ ಧನ್ಯವಾದಗಳು. ಅಂತೆಯೇ ತುಂಬಾ ಸೀರಿಯಸ್ ಆಗಿರುವ ಹೊರತಾಗಿ ಶುಶ್ರೂಷೆ ಪಡೆಯುತ್ತಿರುವ ಯಾವುದೇ ರೋಗಿಗಳನ್ನು ಅವರ ಸಂಬಂಧಿಗಳು ತೀರಾ ಮುತುವರ್ಜಿ ವಹಿಸದೇ ಅಗತ್ಯವಿದ್ದಷ್ಟು ಮಾತ್ರ ಆವರಿಗೆ ಬೆನ್ನೆಲುಬಾಗಿ ನಡೆದುಕೊಳ್ಳುವುದು ಒಳ್ಳೆಯದು. ಇದರಿಂದ ರೋಗಿಗೆ ತಮ್ಮ ಸ್ವಾಭಾವಿಕ ನಡವಳಿಕೆಗೆ ಶೀಘ್ರವಾಗಿ ಹೊಂದಿಕೊಳ್ಳಲು ಸಹಾಯವಾಗುತ್ತದೆ. ಉತ್ತಮ ಲೇಖನಕ್ಕಾಗಿ ಡಾ|| ಸುಧಾ ಪ್ರಸಾದ್ ಅವರಿಗೂ ಮತ್ತೊಮ್ಮೆ ಧನ್ಯವಾದ ಹೇಳಬಯಸುವೆ.

    ಉತ್ತರ
    • ನವೀನ's avatar
      ನವೀನ
      ಆಕ್ಟೋ 28 2013

      ಪ್ರಸನ್ನ ಸರ್,
      ನಿಮ್ಮ ಜೀವನ ಪ್ರೀತಿಗೆ ವಂದಿಸುವೆ. ನಿಮ್ಮ ಆರೋಗ್ಯ ಇನ್ನೂ ಉತ್ತಮವಾಗಲಿ ಎಂದು ಪ್ರಾರ್ಥಿಸುವೆ.

      ಒಳ್ಳೆಯ ಲೇಖನಕ್ಕೆ ಡಾ | ಸುಧಾ ಪ್ರಸಾದ್ ಅವರಿಗೆ ವಂದನೆಗಳು

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments