ವಿಷಯದ ವಿವರಗಳಿಗೆ ದಾಟಿರಿ

Archive for

14
ಮೇ

ಶ್ರೀ ಶಂಕರಾಚಾರ್ಯ ಜೀವನ ಸಂದೇಶ

– ರಾಘವೇಂದ್ರ ಅಡಿಗ ಎಚ್ಚೆನ್

Shankaraacharya1ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ಕಳೆದ ಮೇ 4 ರಂದು ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವಾದ್ಯಂತ ಆಚರಿಸಲಾಯಿತು.

ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ತಾವು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶ್ರೀ ಶಂಕರಾಚಾರ್ಯರು. ಶಂಕರಾಚಾರ್ಯರು ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದವರು. ಇವರು ಯಾವೊಂದು ಹೊಸತಾದ ಮತ, ಪಂಥಗಳನ್ನು ಸ್ಥಾಪಿಸಿಲ್ಲವಾದರೂ ಹಿಂದೂ ಧರ್ಮದಲ್ಲಿನ ವೇದಸಂಪ್ರದಾಯವನ್ನೇ ಎತ್ತಿಹಿಡಿದರು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದರೆ ತಪ್ಪಾಗಲಾರದು.

ಜೀವನ

ಅದು ಎಂಟು-ಒಂಭತ್ತನೇ ಶತಮಾನಗಳ ಮಧ್ಯದ ಅವಧಿ. ಭಾರತ ದಕ್ಷಿಣ ಸಮುದ್ರ ತೀರದ ಕೇರಳ ರಾಜ್ಯದ ಕಾಲಟಿ ಎಂಬೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಶಿವಗುರು ಹಾಗೂ ಆರ್ಯಾಂಬರೆನ್ನುವ ಬಡ ಬ್ರಾಹ್ಮಣಾ ದಂಪತಿಗಳು ವಾಸವಾಗಿದ್ದರು. ಊಟ, ವಸತಿಗಳಎಲ್ಲಾ ಅದು ಹೇಗೋ ದಿನನಿತ್ಯವೂ ನಡೆಯುತ್ತಿದ್ದರೂ ಆ ದಂಪತಿಗಳೈಗೆ ‘ತಮ್ಮದಾದ ಒಂದು ಮಗುವಿಲ್ಲ, ತಮಗೆ ಸಂತಾನಭಾಗ್ಯವಿಲ್ಲ’ ಎನ್ನುವ ಚಿಂತೆಯು ಬಲವಾಗಿ ಕಾಡುತ್ತಿತ್ತು. ಹೀಗಿರಲು ಇದೇ ಚಿಂತೆಯಲ್ಲಿ ಆ ಈರ್ವರೂ ತಾವು ಈ ಕುರಿತು ಪರಮೇಶ್ವರನ ಮೊರೆಹೋಗಲು ತೀರ್ಮಾನಿಸಿ ಅದರಂತೆ ಪರಮೇಶ್ವರನನ್ನು ಶ್ರದ್ದಾ ಭಕ್ತಿಗಳಿಂದ ಆರಾಧಿಸಿಲು ಮುಂದಾದಾರು. ಅದೊಂದು ದಿನ ಪರಮೇಶ್ವರನು ತಾನು ಶಿವಗುರುವಿನ ಕನಸಿನಲ್ಲಿ ಕಾಣಿಸಿಕೊಂಡು- “ಭಕ್ತಾ, ನಿನ್ನ ಪೂಜೆಗೆ ಮೆಚ್ಚಿದ್ದೇನೆ. ನಿನ್ನ ಕೋರಿಕೆಯನ್ನು ನಾನು ಈಡೇರಿಸಲಿದ್ದೇನೆ, ನಿನಗೆಂತಹಾ ಮಗನು ಬೇಕು? ಮಹಾನ್ ಜ್ಞಾನಿಯಾದ, ಆದರೆ ಅಲ್ಪಾಯುವದ ಮಗನು ಬೇಕೋ, ಇಲ್ಲವೇ ಅಲ್ಪ ಜ್ಞಾನಿಯಾದ ದೀರ್ಘಾಯುವಾದ ಮಗನು ಬೇಕೋ?” ಎಂದೆನ್ನಲು ಶಿವಗುರುವು ತಾನು ಕ್ಷಣಕಾಲವೂ ಯೋಚಿಸದೆ- “ನನಗೆ ಮಹಾಜ್ಞಾನಿಯಾದ ಮಗನು ಬೇಕು” ಎಂದೆನ್ನಲು “ತಥಾಸ್ತು” ಎಂದ ಪರಮೇಶ್ವರನು ತಾನು ಅಂತರ್ಧಾನನಾದನು. ಅದಾದ ಕೆಲ ತಿಂಗಳಿನಲ್ಲಿಯೇ ಮಾತೆ ಆರ್ಯಾಂಬಾ ಜನ್ಮತಃ ಮಹಾಜ್ಞಾನಿಯಾದ ಶಂಕರನಿಗೆ ಜನ್ಮವಿತ್ತಳು.

Read more »

13
ಮೇ

ಸುಪ್ರೀಂ ತೀರ್ಪಿಗೆ ತಕರಾರೆತ್ತುವ ಮುನ್ನ…

– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ, ತುಮಕೂರು ವಿವಿ

kannaಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲ ಎಂದು ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಖಾಸಗಿ ಶಾಲೆಯವರಿಗೆ ಸಂಭ್ರಮವಾದರೆ, ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳಿಗೆ ಸಂಕಟ ಆರಂಭವಾಗಿದೆ. ರಾಜ್ಯ ಮಟ್ಟದ ಪತ್ರಿಕೆಯ ಮಿತ್ರರೊಬ್ಬರು ಕರೆ ಮಾಡಿ ಈ ತೀರ್ಪು ಸರಿ ಇಲ್ಲ, ಇದರಿಂದ ಕನ್ನಡ ಸರ್ವನಾಶವಾಗುತ್ತದೆ. ಇದನ್ನು ಕುರಿತು ಸ್ಟ್ರಾಂಗ್ ಆಗಿ ಲೇಖನ ಬರೆದುಕೊಡಿ ಸಾರ್ ಎಂದರು. ಇಲ್ಲ, ಸುಪ್ರೀಂ ತೀರ್ಪು ಸರಿಯಾಗಿಯೇ ಇದೆ ಎಂದು ನನ್ನ ಅಭಿಪ್ರಾಯ ಹೇಳುವಷ್ಟರಲ್ಲಿ ಏನ್ ಸಾರ್, ಕನ್ನಡ ಮೇಷ್ಟ್ರಾಗಿ ನೀವೇ ಹಿಂಗದ್ರೆ ಹೆಂಗೆ ಎನ್ನುತ್ತ ಆಮೇಲೆ ಕರೆ ಮಾಡ್ತೀನಿ ಅಂತ ಫೋನ್ ಇಟ್ಟರು. ಅವರು ನನ್ನನ್ನು ಕನ್ನಡ ವಿರೋಧಿ ಸ್ಥಾನದಲ್ಲಿ ಸ್ಥಾಪಿಸಿಬಿಟ್ಟರು. ಈ ತೀರ್ಪು ಕುರಿತಂತೆ ಕನ್ನಡ ಪರ ಎಂದುಕೊಳ್ಳುವ ಬಹುತೇಕರ ನಿಲುವು ಹೀಗೇ ಇದ್ದರೆ ಅಚ್ಚರಿ ಇಲ್ಲ.

ಸಮಸ್ಯೆಯ ಮೂಲ 33 ವರ್ಷಗಳ ಹಿಂದಿದೆ. ಗೋಕಾಕ್ ಸಮಿತಿ 1981ರಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡವೇ ಕಲಿಕಾ ಮಾಧ್ಯಮವಾಗಬೇಕು ಎಂದು ವರದಿ ನೀಡಿದ್ದರ ಆಧಾರದಲ್ಲಿ 1982ರಲ್ಲಿ ಸರ್ಕಾರ ಹೀಗೆ ಆದೇಶ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 1984ರಲ್ಲಿ ಕೇಸು ಬಿತ್ತು. ಸ್ವಲ್ಪ ಕಾಲ ಸುಮ್ಮನಿದ್ದ ಸರ್ಕಾರ ಮತ್ತೆ 1994ರಲ್ಲಿ 1ರಿಂದ 4 ನೇ ತರಗತಿವರೆಗೆ ಕನ್ನಡವಲ್ಲದೇ ಬೇರೆ ಮಾಧ್ಯಮದಲ್ಲಿ ಕಲಿಸುವ ಶಾಲೆಗಳಿಗೆ ಅನುಮತಿ ಕೊಡುವುದಿಲ್ಲ ಎಂದು ಆದೇಶಿಸಿತು. ಕೆಲವು ಖಾಸಗಿ ಶಾಲೆಗಳು ಕನ್ನಡದಲ್ಲೇ ಕಲಿಸುತ್ತೇವೆಂದು ಅನುಮತಿ ಪಡೆದು ಇಂಗ್ಲಿಷ್‍ನಲ್ಲಿ ಬೋಧಿಸತೊಡಗಿದವು. ಮತ್ತೆ ತಕರಾರು ಎದ್ದು ನ್ಯಾಯಾಲಯದ ಮೆಟ್ಟಿಲಿಗೆ ಹೋಯಿತು. ಮತ್ತೆ ಸರ್ಕಾರದ ಆದೇಶ ಬಿತ್ತು. 2009ರಲ್ಲಿ ಕೇಸು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಈಗ ತೀರ್ಪು ಹೊರಬಿದ್ದಿದೆ. ಈ ತೀರ್ಪಿನಿಂದ ಕನ್ನಡ ಶಾಶ್ವತವಾಗಿ ಸತ್ತೇ ಹೋಗುತ್ತದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಹೌದೇ? ಇದರಿಂದ ಕನ್ನಡ ಸತ್ತೇ ಹೋಗುತ್ತಾ?

Read more »

12
ಮೇ

ರಾಜಕೀಯದ ‘ಬಂಡವಾಳ’

– ಸಂದೀಪ ಫಡ್ಕೆ, ಮುಂಡಾಜೆ

ಪಾರ್ಟಿ ಫಂಡ್ಅಧಿಕಾರದ ಚುಕ್ಕಾಣಿ ಹಿಡಿಯಲು, ರಾಜಕೀಯ ಪಕ್ಷಗಳಿಗೆ ಜನರ ಬೆಂಬಲ ಅವಶ್ಯಕ. ವಿವಿಧ ಆಶೋತ್ತರಗಳನ್ನು ಈಡೇರಿಸುವ ವಾಗ್ದಾನ ಮಾಡುವ ಇವರಿಗೆ, ಕಿಂಚಿತ್ತು ಸಹಾಯ ಮಾಡುವ ಅವಕಾಶ ನಮ್ಮ ಸಂವಿಧಾನ ಕೊಟ್ಟಿದೆ. ಪ್ರಜಾಪ್ರಭುತ್ವದ ದೃಷ್ಟಿಯಿಂದಲೂ, ನಾಗರಿಕರ ಹಕ್ಕು ಕೇವಲ ಮತದಾನಕಷ್ಟೇ ಸೀಮಿತವಾಗಬಾರದು. ಹಾಗಾಗಿ ಅರ್ಹ ವ್ಯಕ್ತಿ ಯಾ ಪಕ್ಷಕ್ಕೆ ದೇಣಿಗೆಯ ರೂಪದಲ್ಲಿ ಹಣದ ನೆರವನ್ನು ನೀಡಬಹುದು. ಆದರೆ, ಇತ್ತೀಚೆಗೆ ಸಂತ್ರಸ್ತರ ಪರಿಹಾರ ನಿಧಿಗೆ ಅಥವಾ ಸಮಾಜ ಸೇವೆಗೆ ಸಂದಾಯವಾಗುವ ಹಣಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಪಾಲಾಗುತ್ತಿದೆ. ಸ್ವಾರ್ಥ ರಕ್ಷಣೆಗಾಗಿ, ಬೃಹತ್ ಉದ್ದಿಮೆದಾರರ ಕಪಿಮುಷ್ಠಿಯಲ್ಲಿ ಪಕ್ಷಗಳು ನಲುಗುತ್ತಿವೆ. ಇದರ ಇನ್ನೊಂದು ಮುಖವೆಂಬಂತೆ ಅಭ್ಯರ್ಥಿ ಯಾ ಪಕ್ಷಕ್ಕೆ ಹಣದ ಹೊಳೆ ಹರಿಯುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲೂ, ಉದ್ಯಮರಂಗ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಸದಸ್ಯತ್ವ ಶುಲ್ಕ ಮತ್ತು ವೈಯುಕ್ತಿಕ ದೇಣಿಗೆಯಿಂದ ಚುನಾವಣೆಯ ವೆಚ್ಚ ಭರಿಸಲು ಪಕ್ಷಗಳಿಗೆ ಸಾಧ್ಯವಾಗದೇ ಇದ್ದುದ್ದು ಇದಕ್ಕೆ ಪ್ರಮುಖ ಕಾರಣ. ಕಾಲಕ್ರಮೇಣ ಚುನಾವಣೆಯ ಸಿದ್ಧತೆ ಮತ್ತು ಕಾರ್ಯಗತಗೊಳಿಸುವುದು ದುಬಾರಿಯಾಗುತ್ತಾ ಹೋಯಿತು. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಸರ್ಕಾರ ಸುಮಾರು 1120 ಕೋಟಿ ರೂಪಾಯಿ ವ್ಯಯಿಸಿದೆ. ಅಲ್ಲದೇ, ವಿವಿಧ ಅಭ್ಯರ್ಥಿ ಮತ್ತು ಪಕ್ಷಗಳು ಒಟ್ಟು ಸುಮಾರು 14 ಸಾವಿರ ಕೋಟಿ ಖರ್ಚು ಮಾಡಿರುವುದು ಅಂದಾಜಿಸಲಾಗಿದೆ. ಹೀಗಾಗಿ, ರಾಜಕೀಯ ಪಕ್ಷಗಳು ಹೆಚ್ಚಿನ ಹಣವನ್ನು ಕಂಪನಿಗಳಿಂದ ಪಡೆಯುತ್ತಿವೆ. ಈ ಸಲುವಾಗಿ, 1960ರಲ್ಲಿ ಕಂಪನಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಕಂಪನಿಗಳು ನಿಗದಿತ ಮೊತ್ತದಷ್ಟು ಹಣವನ್ನು ಪಕ್ಷಗಳಿಗೆ ನೀಡಬಹುದೆಂದು ಕಾಯ್ದೆ ಉಲ್ಲೇಖಿಸಿತ್ತು. ಆದರೆ ಇದು ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಯಿತು. ಸರ್ಕಾರ ಕೇವಲ ತನಗೆ ಸಹಕರಿಸಿದ ಬೃಹತ್ ಉದ್ದಿಮೆದಾರರ ಹಿತ ಕಾಪಾಡುವಲ್ಲಿ ಶಾಮೀಲಾಯಿತು. ಹೀಗೆ ಟೀಕೆಗೊಳಪಟ್ಟ ಕಾಯ್ದೆಗೆ 1969ರಲ್ಲಿ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿ, ರಾಜಕೀಯ ಪಕ್ಷಗಳಿಗೆ ಹಣ ಪೂರೈಸುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿತು. ಆದರೆ, ಈ ‘ದೇಣಿಗೆ’ಯಿಂದ ಪಕ್ಷ ಮತ್ತು ಕಂಪನಿಗಳಿಗೆ ಪ್ರಯೋಜನವಿತ್ತು. ಆದ್ದರಿಂದ, ಅಕ್ರಮವಾಗಿ ಹಣ ರವಾನಿಸುವ ಚಟುವಟಿಕೆಗಳು ಶುರುವಾದವು. 1985ರಲ್ಲಿ ಮತ್ತೊಂದು ತಿದ್ದುಪಡಿ ತರಲಾಯಿತಾದರೂ ಪರಿಣಾಮ ಬೀರಲಿಲ್ಲ.

Read more »

10
ಮೇ

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ-೨

– “ನಿಲುಮೆ”ಗಾಗಿ  (೧) ಬಾಲಿವುಡ್  ಮತ್ತು  (೨) ಜೈಲು ಈ ಎರಡು ಲೇಖನಗಳ  ಸಾರಾಂಶ  ಮಾಡಿದ್ದು :-  ಮು. ಅ . ಶ್ರೀರಂಗ,  ಬೆಂಗಳೂರು

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ –೧

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು             (೧)  ಬಾಲಿವುಡ್
                     ———-

  ಮೂಲ ಲೇಖಕರು : ಎಂ. ಕೆ. ರಾಘವೇಂದ್ರ          ಕನ್ನಡಕ್ಕೆ : ಅಕ್ಷರ  ಕೆ. ವಿ.

ಮುಂಬಯಿಯಲ್ಲಿ ತಯಾರಾಗುವ ಹಿಂದಿ ಭಾಷೆಯ ಚಲನಚಿತ್ರ ಪ್ರಕಾರಕ್ಕೆ ‘ಬಾಲಿವುಡ್’ ಎಂಬ ಹೆಸರನ್ನು ಕೊಡಲಾಗಿದೆ.  ಈ ಚಲನಚಿತ್ರಗಳಿಗೆ ಭಾರತದಲ್ಲಿನ  ಪ್ರೇಕ್ಷಕರ ಜತೆಗೆ ಏಶಿಯಾ,ಆಫಿಕ್ರಾದಾದ್ಯಂತ ಹರಡಿರುವ ಅಪಾರ ಪ್ರೇಕ್ಷಕ ಸಮೂಹವೇ ಇದೆ. ವದಂತಿಗಳ ಪ್ರಕಾರ (ಅವು ಉತ್ಪ್ರೇಕ್ಷಿತ ವಾಗಿರಲೂಬಹುದು) ಜೋಸೆಫ್ ಸ್ಟಾಲಿನ್ ಮತ್ತು ಮಾವೊತ್ಸೆತುಂಗರಂಥವರೂ ತಮ್ಮ ತಮ್ಮ ‘ ಕಾಲಗಳಲ್ಲಿ ಬಾಲಿವುಡ್ಡಿನ ಚಿತ್ರಗಳ ಭಕ್ತರಾಗಿದ್ದರಂತೆ! ಮಾವೋ ಅವರು ರಾಜಕಪೂರನ “ಆವಾರಾ” ವನ್ನು ನಲವತ್ತು ಬಾರಿ ನೋಡಿದ್ದರಂತೆ!

ಬಾಲಿವುಡ್ ಚಿತ್ರಗಳ ಕೆಲವು ಲಕ್ಷಣಗಳನ್ನು ಬಹುಶಃ ಈ ರೀತಿ ಪಟ್ಟಿಮಾಡಬಹುದು.

(೧) ರಂಜನೆ

(೨) ಸಾವಿನ ಅಂಚಿನಲ್ಲಿರುವ ಶ್ರೀಮಂತ ವಿಧವೆ ಸಾವನ್ನು ಎದುರುನೋಡುತ್ತ ಮುಂಬರುವ ಭಾವುಕ ಉತ್ತುಂಗಕ್ಕೆ ಕಾರಣಲಾಗುವುದು

(೩) ತನ್ನಪ್ಪನ ಸಾವಿಗೆ ಕಾರಣನಾದ ಖಳನಾಯಕನಿಗೆ ಪ್ರತೀಕಾರಮಾಡಲು ಕಾಯುತ್ತಿರುವ ನಾಯಕ

(೪) ಹುಟ್ಟುವಾಗಲೇ ಸಂತತ್ವವನ್ನು ಪಡೆದ ಸಂತರು

(೫) ಯಾವಾಗಲೂ ಶೋಕದಲ್ಲೇ ಮುಳುಗಿರುವ ವಿಧವೆಯರು

(೬) ಗೃಹಿಣಿಯರಾಗಲು ಸಾಧ್ಯವಾಗದ ವೇಶ್ಯೆಯರು.

Read more »

9
ಮೇ

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 3

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

80 ಮತ್ತು 84ರ ಸಂದರ್ಭದಲ್ಲಿ ಕೆಲವು ಅನಾಹುತಗಳು ಸಂಭವಿಸಿದವು. 84ರ ಚುನಾವಣೆಯಲ್ಲಿ ನಿರ್ಣಾಯಕವಾದದ್ದು ಭಾವನಾತ್ಮಕ ಓಟುಗಳು. ಆರ್ಥಿಕ ಪರಿಕಲ್ಪನೆಗಳು ಅಥವಾ ದೇಶದ ಇತರ ಯಾವುದೇ ವಿಚಾರಗಳಿಗೆ ಬದಲಾಗಿ, ನಮ್ಮ ಪರವಾಗಿ ನಿಂತಿದ್ದಂತಹ ಒಬ್ಬ ನಾಯಕಿಗೆ ತೊಂದರೆಯಾಯಿತು. ಆಕೆಯ ಕೊಲೆಯಾಯ್ತು ಎನ್ನುವ ಕಾರಣಕ್ಕೋಸ್ಕರ ಈ ಸಂದರ್ಭದಲ್ಲಿ ಅವರ ಜೊತೆಗಿರಬೇಕು ಎನ್ನುವ ಭಾವನಾತ್ಮಕ ಅಂಶವೇ ಮುಖ್ಯವಾಯಿತು. ಹಾಗಾಗಿ, ಆಗ ಒಂದೇ ಪಕ್ಷದ ಪರವಾಗಿ ಮತಗಳು ಚಲಾವಣೆಯಾಗಿ ಕಾಂಗ್ರೇಸ್ ಅಧಿಕಾರಕ್ಕೆ ಬಂತು.

ಈ ಸಂದರ್ಭದಲ್ಲಿ ಎಷ್ಟೋ ಜನ ಯೋಗ್ಯರು, ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮವಾದ ಕೆಲಸ ನಿರ್ವಹಿಸಿರುವಂತಹ ಅನೇಕರು ಸೋತು ಬಿಟ್ಟರು. ಚಂದ್ರಶೇಖರ್, ಅಟಲ್ಜಿ ಅವರಂತಹ ನಾಯಕರೇ ಸೋತುಬಿಟ್ಟರು.ಅಟಲ್ ಬಿಹಾರಿ ವಾಜಪೇಯಿಯವರಿಗಿಂತ ಒಬ್ಬ ದೊಡ್ಡ ಸಂಸದೀಯ ಪಟುವಿನ ಹೆಸರು ಹೇಳುವುದೇ ಕಷ್ಟ. ಇಡೀ ಸ್ವತಂತ್ರ ಭಾರತದಲ್ಲಿ ತುಂಬಾ ಪ್ರಮುಖರು ಎಂದು ಹೇಳುವ ಕೆಲವೇ ಕೆಲವರ ಹೆಸರಿನಲ್ಲಿ ಅಟಲ್ಜಿ ಕೂಡಾ ಒಬ್ಬರು.ಹೀಗೆ ಅವರದಲ್ಲದೇ ಇರುವಂತಹ ಹಲವು ಕಾರಣಗಳಿಂದಾಗಿ ಕೆಲವು ಬಾರಿ ಚುನಾವಣಾ ಫಲಿತಾಂಶಗಳು ವ್ಯತ್ಯಾಸವಾಗುತ್ತವೆ. ಯಾರೋ ಒಬ್ಬತಜ್ಞರು ಹೇಳುವಂತೆ; ‘Truth is not determined by mejarity votes’ ಈ ರೀತಿಯಲ್ಲಿ ಸತ್ಯವೇ ಆಗಬೇಕು, ಸತ್ಯದ ಪರವಾಗೇ ಚುನಾವಣೆ ಫಲಿತಾಂಶ ಇರಬೇಕು ಎಂದೇನಿಲ್ಲ. ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ರೂಪುಗೊಳ್ಳುತ್ತದೆ ಅಷ್ಟೆ. ಇದಕ್ಕೆ ಮತ್ತೆ ಬೇರೆ ಯಾವುದೇ issue ಮುಖ್ಯವಾಗಿರಲಿಲ್ಲ. Read more »

9
ಮೇ

ಒಂದು ರಾಜಕೀಯ ವಿಡಂಬನೆ:ಬಪ್ಪರೆ ಬಪ್ಪ.. ತಿಪ್ಪರ್ ಲಾಗ ಹಾಕಪ್ಪಾ…

– ತುರುವೇಕೆರೆ ಪ್ರಸಾದ್

indian-politician1            ಎಲೆಕ್ಷನ್ ಆದ್ಮೇಲೆ ಯಾವ ಯಾವ ಮುಖಂಡರು ಏನೇನು ಮಾಡ್ತಿದಾರೆ ಅಂತ ಸಮೀಕ್ಷೆ ಮಾಡೋಕೆ ರಾಂಪ ಪಕ್ಷಭೇದ ಮರೆತು ಎಲ್ಲರ ಮನೆ, ಪಕ್ಷಗಳ ಅಡ್ಡೆಗೆ ಬಿಜುಗೈದ. ವಿವಿಧ ರಾಜಕೀಯ ಮುಖಂಡರು ರಿಸಲ್ಟ್ ಬರೋತನಕ ಏನು ಸ್ಟಾಪ್‍ಗ್ಯಾಪ್ ಅರೇಂಜ್‍ಮೆಂಟ್ ಮಾಡ್ಕೊಂಡಿದಾರೆ ಅನ್ನೋ ರಾಂಪನ ಪ್ರಶ್ನೆಗೆ ಬಂದ ಪ್ರತಿಕ್ರಿಯೆಗಳು ಕೆಳಕಂಡಂತಿವೆ.

ಜೋಕುಮಾರ್:ನಿಜ! ರಿಸಲ್ಟ್ ಗೆ ಒಂದು ತಿಂಗಳು ಕಾಯೋದು ಅಂದ್ರೆ ತುಂಬಾ ಕಷ್ಟ. ಈ ಕಾಲ್ದಲ್ಲಿ ಸಿಇಟಿ ರಿಸಲ್ಟೇ 15ದಿನಕ್ಕೆ ಬರುತ್ತೆ. ಅಂತಾದ್ರಲ್ಲಿ ಎಲೆಕ್ಷನ್ ರಿಸಲ್ಟ್ ಇಷ್ಟು ಲೇಟಾದ್ರೆ ಹೇಗೆ? ಈ ಒಂದು ತಿಂಗಳಲ್ಲಿ ಎಲ್ಲಾ ದೇಸೀ ಅಂಗಮರ್ದನ, ಫಾರಿನ್ ಮಸಾಜ್ ಸೆಂಟರ್‍ಗಳನ್ನ ವಿಸಿಟ್ ಮಾಡ್ಬೇಕು ಅಂದ್ಕೊಂಡಿದೀನಿ. ಹಾಗೇ ಹೊಸ ಚಿತ್ರ ‘ಕಣ್ಣೀರ್ ಕಣ್ಣೀರ್’ ಡಾಕ್ಯುಮೆಂಟರಿನ ಸಹಾರಾ ಡೆಸರ್ಟ್‍ನಲ್ಲಿ ಶೂಟ್ ಮಾಡ್ಬೇಕು ಅಂತ ಪ್ಲಾನಿದೆ. ರೈತರಿಗಾಗಿ ನೀರು ಮರುಪೂರಣ ತರ ಕಣ್ಣೀರು ಮರುಪೂರಣ ಮಾಡೋ ಬಗ್ಗೆ ಹೊಸ ಹೊಸ ಯೋಜನೆಗಳ ಸ್ಕೆಚ್ ಹಾಕಿದೀನಿ. ಇದು ಯಾವಾಗ್ಲೂ ಕಣ್ಣಿರು ಸುರಿಸೋ ರೈತರಿಗೆ ಹಾಗೂ ರಾಜಕೀಯ ಮುಖಂಡರಿಗೆ ಉಪಯೋಗ ಆಗುತ್ತೆ.

ಮುದ್ದೇಗೌಡರು:ಮುದ್ದೆ ತಿಂದ ತಕ್ಷಣ ಕಣ್ ಎಳ್ಕೊಂಡು ಹೋಗ್ತಿತ್ತು. ಈಗ ಯಾಕೋ ಕಾಂಪೋಸ್ ನುಂಗುದ್ರೂ ನಿದ್ದೆ ಹತ್ತುತ್ತಿಲ್ಲ. ಕೇಳ್ಕೊಂಡು ತೂಕಡಿಸೋಣ ಅಂದ್ರೆ ಲೋಕಲ್ ಭಾಷಣಗಳೂ ಇಲ್ಲ. ಕೇರಳದಲ್ಲಿ ಯಾರೋ ನಿದ್ದೆಗೆ ಆಯುರ್ವೇದ ಔಷಧಿ ಕೊಡ್ತಾರಂತೆ, ಅಲ್ಲಿಗೆ ಹೋಗೋಣ ಅಂದ್ಕೊಂಡಿದೀನಿ..ಹಾಗೇ ಬರ್ತಾ ನಮ್ ಪಕ್ಷದ ಬಗ್ಗೆ ಹೀನಾಯವಾಗಿ ಮಾತಾಡ್ದೋರಿಗೆ ನಿದ್ದೆ ಕೆಡಿಸೋಕೆ ಏನಾದ್ರೂ ಮದ್ದು, ನಿಂಬೇಹಣ್ಣು ತಂದೇ ತರ್ಬೇಕು ಅಂದ್ಕೊಂಡಿದೀನಿ..

ಹುಡ್ಕೋ ಕುಮಾರ್:ಸಂಜಯ್ ಬಾರು ಅವರ ಪುಸ್ತಕ ಸ್ವಲ್ಪ ಲೇಟಾಗಿ ಸಿಕ್ತು. ಇಲ್ಲ ಅಂದಿದ್ರೆ ಕೈ ಪಕ್ಷದೋರು ಬಾರಲ್ಲೇ ಕೂದಲು ಕಿತ್ಕೊಳೋ ಹಾಗೆ ಮಾಡ್ತಿದ್ದೆ. ಈಗ ಅದನ್ನ ಸ್ಟಡಿ ಮಾಡ್ತಿದೀನಿ. ಅದೇ ಮಾದರಿಲಿ ‘ಮೇಕಿಂಗ್ ಆಫ್ ಮುದ್ದರಾಮಯ್ಯ- ಭಾಗ್ಯ ಬಂಡಲ್ಸ್ ‘ ಅಂತ ಒಂದು ನಾವೆಲ್ ಬರೆಯೋ ಸಿದ್ಧತೇಲಿದೀನಿ.ಹಾಗೇ ಒಂದು ಪದ್ಯ ಬರ್ದಿದೀನಿ ಕೇಳಿ..

ಸಂಜಯ ಬರು

ಎಬ್ಸಿದ್ದಾರೆ ಕೈ ಸಿಬಿರು

ಸಿಂಗ್ ಬರೀ ಡಾಲು

ಸೋನಿಯಾದೇ ಡೌಲು?

ಚಂದನ್ ಕಣಿ:‘ದೇಹಕೆ ಉಸಿರೇ ಸದಾ ಭಾರ, ಇಲ್ಲ ಆಧಾರ’ ಈ ಹಳೇ ಹಾಡಿಗೆ ‘ಕೈ ಪಕ್ಷಕೆ ಸಂಜಯ ಸದಾ ಭಾರ, ಆರೋಪಕಿಲ್ಲ ಆಧಾರ’ ಅಂತ ಹೊಸ ಟ್ಯೂನ್ ಹಾಕ್ತಿದೀನಿ. ಎಲ್ಲರ ಅಧಿಕೃತ, ಅನಧಿಕೃತ ಹೆಂಡ್ತೀರನ್ನ ಹುಡುಕೋ ಒಂದು ಹೊಸ ಸಾಫ್ಟ್ವೇರ್ ಡವಲಪ್ ಮಾಡ್ಬೇಕು ಅಂತ ಪ್ಲಾನ್ ಮಾಡ್ತಿದೀನಿ Read more »

8
ಮೇ

ದುಡಿಮೆಗಾಗಿ ಹೊರದೇಶಕ್ಕೆ ಹೋಗಿ ತಪ್ಪಿಲ್ಲ,ಆದರೆ…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಹೊರದೇಶ ಪ್ರಯಾಣಕೆಲವು ತಿ೦ಗಳುಗಳ ಕಾಲವೋ,ಕೆಲವು ವರ್ಷಗಳ ಕಾಲವೋ ವಿದೇಶ ಪ್ರಯಾಣದಿ೦ದ(ಮುಖ್ಯವಾಗಿ ಅಮೇರಿಕಾದಿ೦ದ) ಮರಳಿ ಭಾರತಕ್ಕೆ ಬರುವವನನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವನ ದೇಹಚರ್ಯೆ,ಮಾತಿನಲ್ಲೊ೦ದು ವಿಚಿತ್ರ ಆತ್ಮವಿಶ್ವಾಸ ಪುಟಿಯುತ್ತಿರುತ್ತದೆ .ವಿದೇಶಕ್ಕೆ ಹೋಗಿ ಬ೦ದವನನ್ನು ಬಿಡಿ,ಅವನ ತ೦ದೆತಾಯಿಯರ ಮಾತಿನ ಶೈಲಿಯೂ ಬದಲಾಗಿರುತ್ತದೆ.ಹಾಗೆ ವಿದೇಶ ಪ್ರಯಾಣದಿ೦ದ ಹಿ೦ತಿರುಗಿ ಬ೦ದವನ ಪೋಷಕರು,ತಮ್ಮ ಸ್ನೇಹಿತರ ಮು೦ದೆ ” ಅಮೇರಿಕಾದಲ್ಲಿ ರಸ್ತೆ ತು೦ಬಾ ಕ್ಲೀನ್ ಅ೦ತೆ ಕಣ್ರೀ,ಅಲ್ಲಿ ಭ್ರಷ್ಟಾಚಾರವೇ ಇಲ್ಲವ೦ತೆ,ಅ೦ಥಾ ಸ್ಥಳಕ್ಕೆ ಹೋಗೋಕೆ ನಮ್ಮ ಮಗ ಪುಣ್ಯ ಮಾಡಿದ್ದ ಬಿಡಿ” ಎನ್ನುತ್ತ ಮಗನ ಗುಣಗಾನ ಮಾಡುತ್ತಿದ್ದರೇ,ಕೇಳುತ್ತಿರುವ ಸ್ನೇಹಿತರ ಮನಸ್ಸಿನಲ್ಲಿ ಏನೋ ಹಿ೦ಸೆ,ತಮ್ಮ ಮಗ ಅಥವಾ ಮಗಳು ಇ೦ತಹ ಪುಣ್ಯ ಮಾಡಿಲ್ಲವಲ್ಲ ಎನ್ನುವ ಅಸಮಾಧಾನ. ಪ್ರತಿ ಮಾತಿಗೂ ಮೊದಲು ” ವೆನ್ ಐ ವಾಸ್ ಇನ್ ಅಮೇರಿಕಾ” ಎ೦ದಾರ೦ಭಿಸಿ ಮಾತನಾಡುವ ಹುಡುಗನ ಮಾತುಗಳನ್ನು ಕೇಳುತ್ತ ಅವನ ಸುತ್ತ ಕುಳಿತ ಸ್ನೇಹಿತರಿಗ೦ತೂ ಅಕ್ಷರಶ: ಪುರುಷ ಶ್ರೇಷ್ಠನ ಪಾದತಲದಲ್ಲಿ ಕುಳಿತ ಅನುಭವ.

ಹೀಗೆ ವಿದೇಶಕ್ಕೆ ಹೋಗಿ ಬ೦ದವರಲ್ಲಿ ಅನೇಕರು ಭಾರತವನ್ನು ಮಾತುಮಾತಿಗೂ ಮೂದಲಿಸುವುದು೦ಟು.ಕೆಲವರ೦ತೂ ತಾವು ತಾತ್ಕಾಲಿಕವಾಗಿ ನೆಲೆಸಿರುವ ಪರದೇಶವೇ ತಮ್ಮ ತಾಯ್ನೆಲವೇನೋ ಎ೦ಬ೦ತೆ ಅತಿರೇಕವಾಗಿ ವರ್ತಿಸುತ್ತಿರುತ್ತಾರೆ. ಅವರಿಗೆ ಈ ದೇಶದ ರಸ್ತೆಗಳ ಬಗ್ಗೆ ಸಮಸ್ಯೆಯಿರುತ್ತದೆ.ಈ ದೇಶದಲ್ಲಿನ ಭ್ರಷ್ಟಾಚಾರ,ನಿರುದ್ಯೋಗ ಸಮಸ್ಯೆಯ ಬಗ್ಗೆ ಸಿಡಿಮಿಡಿಯಿರುತ್ತದೆ.”ಥೂ, ಇದೊ೦ದು ದರಿದ್ರ ದೇಶಾನಪ್ಪ” ಎನ್ನುತ್ತ ಅಮೇರಿಕಾದ(ಅಥವಾ ತಾವು ನೆಲೆಸಿರುವ ದೇಶದ) ಶ್ರೇಷ್ಠತೆಯನ್ನು ವರ್ಣಿಸುತ್ತ,ಮಾತೃಭೂಮಿಯಾಗಿರುವ ಈ ದೇಶವನ್ನು ತಮ್ಮ ಭಾರತೀಯ ಸ್ನೇಹಿತರೆದುರು ಈ ಮಹಾಶಯರು ತೆಗಳುತ್ತಿದ್ದರೇ,ತಮಗೆ ಬಿಟ್ಟಿಯಾಗಿ ಸಿಗಬಹುದಾದ ವಿದೇಶಿ ಮದ್ಯಕ್ಕಾಗಿಯೋ,ಚಾಕಲೇಟಿಗಾಗಿಯೋ ಅವನ ಎಲ್ಲ ಮಾತುಗಳೂ ಪರಮ ಸತ್ಯ ಎ೦ಬ೦ತೆ ಅವರ ಸ್ನೇಹಿತರು ತಲೆಯಾಡಿಸುತ್ತಿರುತ್ತಾರೆ೦ಬುದೂ ಕಟುವಾಸ್ತವ.ಭಾರತದಲ್ಲಿ ಜಾಗತೀಕರಣದ ನ೦ತರ,ಸಾಫ್ಟವೇರ್ ಕ್ರಾ೦ತಿಯ ನ೦ತರ ವಿದೇಶ ಪ್ರಯಾಣವೆ೦ಬುದು ಮೊದಲಿನ೦ತೆ ವಿಶೇಷವಾಗಿ ಉಳಿದಿಲ್ಲ .ಕೆಲವು ಐಟಿ ಕ೦ಪನಿಗಳ೦ತೂ ವಿಶೇಷ ತರಬೇತಿಗಾಗಿ ತನ್ನ ಉದ್ಯೋಗಿಗಳನ್ನು ಆಗಾಗ ವಿದೇಶಕ್ಕೆ ಕಳುಹಿಸುವುದು ಈಗ ಸರ್ವೇ ಸಾಮಾನ್ಯವೆನ್ನುವ೦ತಾಗಿದೆ.ಆದರೂ ಸಹ ಅನೇಕ ಭಾರತಿಯರಿಗೆ ಇ೦ದಿಗೂ ವಿದೇಶ ಪ್ರಯಾಣದ ಬಗ್ಗೆ,ವಿದೇಶ ಪ್ರಯಾಣ ಮಾಡಿ ಬ೦ದವರ ಮಾತುಗಳ ಬಗ್ಗೆ ಆಕರ್ಷಣೆ ಸ್ವಲ್ಪವೂ ಕಡಿಮೆಯಾಗಿಲ್ಲ.ವಿದೇಶಗಳು ಸಕಲ ಸುಖಗಳಿ೦ದ ಕೂಡಿದ ಸ್ವರ್ಗದ೦ತೆ,ಅವುಗಳೆದುರು ಭಾರತವೆನ್ನುವುದು ಸಮಸ್ಯೆಗಳಿ೦ದ ಕೂಡಿದ ನರಕಕ್ಕೆ ಸಮಾನ ಎನ್ನುವ ಭಾವ ಇ೦ದಿಗೂ ಅನೇಕ ಭಾರತೀಯರ ಮನದಲ್ಲಡಗಿದೆ.

Read more »

7
ಮೇ

ಪಂಕ್ತಿ ಭೋಜನದ ಸುತ್ತಮುತ್ತ

-ಪ್ರಜ್ಞಾ ಆನಂದ್

ಪ್ರತ್ಯೇಕ ಪಂಕ್ತಿ ಬೇಧಉಡುಪಿಯಲ್ಲಿ ಊಟದ ಮಧ್ಯೆ ಬ್ರಾಹ್ಮಣಳಲ್ಲವೆಂಬ ಕಾರಣಕ್ಕೆ ಓರ್ವ ಮಹಿಳೆಯನ್ನು ಊಟದ ಪಂಕ್ತಿಯಿಂದ ಹೊರಹಾಕಿದ ಘಟನೆ ಬಹಳ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಆ ಘಟನೆಯನ್ನು ವಿಶ್ಲೇಶಿಸುವ ಸಂದರ್ಭದಲ್ಲಿ ಪರ ಹಾಗೂ ವಿರೋಧದ ಬಗ್ಗೆ ನಡೆದ ಚರ್ಚೆಗಳು ತೀರ ಬಾಲಿಶವಾಗಿಯೂ, ಅನುಚಿತವಾಗಿಯೂ ಇದ್ದಂತೆ ಕಂಡುಬಂದಿತು;ಒಂದು ರೀತಿಯಲ್ಲಿ ನಿಷ್ಪ್ರಯೋಜಕವೂ ಹೌದು.ಪರವಾಗಿ ವಾದಿಸಿದ ಬಹುತೇಕರು ಹೇಳಿದ್ದೇನೆಂದರೆ ಊಟ ಎನ್ನುವದು ಬ್ರಾಹ್ಮಣರಿಗೆ ಯಜ್ಞ ಇದ್ದಂತೆ ಹಾಗೂ ಅನೇಕ ವಿಧಿ ವಿಧಾನಗಳನ್ನು ಅನುಸರಿಸಬೇಕಾದ್ದರಿಂದ ಬ್ರಾಹ್ಮಣರಿಗೆ ಬೇರೆಯದೆ ಪಂಕ್ತಿಭೋಜನ ಸರಿ ಎಂದು. ಇದನ್ನು ವಿರೋಧಿಸಿ ಹೇಳಿದವರಲ್ಲಿ ಇದೊಂದು ಅಮಾನವೀಯ, ಹಿಂದೂ ಧರ್ಮಕ್ಕೆ ತೊಡಕು, ಜಾತ್ಯಾತೀತವಲ್ಲ ಇತ್ಯಾದಿ ಹೇಳಿಕೆಗಳು. ಬಹುತೇಕವಾಗಿ ಎಲ್ಲರೂ ಜಾತ್ಯಾತೀತದ ಆಧಾರದ ಮೇಲೆ ಇದನ್ನು ವಿರೋದಿಸಿದ್ದಾರೆ. ಬ್ರಾಹ್ಮಣ, ಶೂದ್ರ ಇತ್ಯಾದಿಯಾಗಿ ಹೈಪೊಥೆಟಿಕಲ್ ಥಿಯರಿಯನ್ನು ಹೊಂದಿದ್ದವನಿಗೆ ಈ ಘಟನೆ ಹೊಸ ಫಾರ್ಮುಲಾದ ಅವಿಷ್ಕಾರವನ್ನು ನೀಡಿರಬಹುದು. ಇದಕ್ಕೂ ಮೀರಿದ ರೀತಿಯಲ್ಲಿ ಪಂಕ್ತಿಭೇದದ ಬಗ್ಗೆ ವಿವರಣೆಯನ್ನು ನೀಡಬಹುದಾದರೆ ನೈಜತೆಯ ಬಗ್ಗೆ ಪರಿಶೀಲಿಸಲು ಅನುಕೂಲವಾಗಬಹುದು.

ಪಂಕ್ತಿಭೇದದ ಪರ ವಾದಿಸುವವರನ್ನು ತೆಗೆದುಕೊಂಡರೆ ಅವರ ಪ್ರಕಾರ ಬ್ರಾಹ್ಮಣರ ಊಟ ಎಂಬುದು ಯಜ್ಞ.ಈ ವಿಧಿ ವಿಧಾನದ ಆಚರಣೆಗೋಸ್ಕರ ಪ್ರತ್ಯೇಕ ಪಂಕ್ತಿಭೋಜನದ ಅಗತ್ಯತೆಯನ್ನು ವಿವರಿಸುತ್ತಾರೆ. ಆದರೆ ಅದು ನಿಜವಾದಲ್ಲಿ, ಎಲ್ಲಾ ಬ್ರಾಹ್ಮಣರೂ ಎಲ್ಲಾ ಪ್ರದೇಶದಲ್ಲಿಯೂ, ಎಲ್ಲಾ ಸಂದರ್ಭದಲ್ಲಿಯೂ ಅಂತಹ ಆಚರಣೆಗಳನ್ನು ಅನುಸರಿಸಬೇಕಾಗಿತ್ತು. ಆದರೆ ಇಂತಹ ಆಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವ ಬ್ರಾಹ್ಮಣರು ತೀರ ಅತ್ಯಲ್ಪ;ದೇವಾಲಯ, ಮಠಗಳಲ್ಲಿರುವ ಕೆಲವೇ ಮಂದಿ ಮಾತ್ರ. ಉಳಿದವರು ಕಟ್ಟುನಿಟ್ಟಾಗಿ ಆಚರಣೆಗಳನ್ನು ಪಾಲಿಸುವವರಲ್ಲ. ಎಷ್ಟೋ ಸಮಯದಲ್ಲಿ ಹೊಟೆಲ್ ಗಳಲ್ಲಿ ತಿನ್ನುವದು ಸಾಮಾನ್ಯವೆ. ಅಲ್ಲೆಲ್ಲಾ ಪಂಕ್ತಿಬೇದಗಳೂ ಲೆಕ್ಕಕ್ಕಿರುವದಿಲ್ಲ, ಅಡುಗೆ ಮಾಡಿದ ಜನರ ಕುಲ ಗೋತ್ರಗಳೂ ಲೆಕ್ಕಕ್ಕಿರುವದಿಲ್ಲ. ಊಟದ ಆಚರಣೆ/ಪದ್ದತಿಗಳೂ ಅನುಸರಿಸಲೇಬೇಕಾದ ಯಜ್ಞವೆಂಬಂತೆ ಎಲ್ಲಾ ಬ್ರಾಹ್ಮಣರಿಗೆ ತೋರುವದೂ ಇಲ್ಲ. ಕೆಲವು ದಿವಸಗಳಲ್ಲಿ, ಕೆಲವು ಸಂದರ್ಭಗಳಲ್ಲಿ, ಕೆಲವು ಸ್ಥಳಗಳಲ್ಲಿ ಮಾತ್ರ ಆ ಸ್ಥಳದ ಸಂಪ್ರದಾಯ ಎಂಬಂತೆ ಪಾಲಿಸುತ್ತಾರೆ.ಹಾಗಾಗಿ, ಉಡುಪಿ ಮಠದಲ್ಲಿನ ಪಂಕ್ತಿಭೇದ ಆ ಸ್ಥಳಕ್ಕೆ, ಸಂದರ್ಭಕ್ಕೆ ಮಾತ್ರ ಸೀಮಿತವಾಗಿರುವದೇ ಹೊರತು, ಬ್ರಾಹ್ಮಣ ಆಚರಣೆ/ವಿಧಿ ವಿಧಾನಗಳು, ಯಜ್ಞ ಎಂಬೆಲ್ಲಾ ಕಾರಣ ಕೊಟ್ಟು ಸಮರ್ಥಿಸುವದು ಹಾಸ್ಯಾಸ್ಪದ.

Read more »

5
ಮೇ

ರಾಜಕೀಯ ಪಕ್ಷಗಳಿಗೆ ಬೇಕು, RTI ಬ್ರೇಕು!

– ತುರುವೇಕೆರೆ ಪ್ರಸಾದ್           

RTI Political partiesನಾವು ಮತ್ತೊಂದು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದೇವೆ.ರಾಜಕೀಯ ಪಕ್ಷಗಳು ತಮ್ಮ ಮಾಮೂಲಿ ಬೂಟಾಟಿಕೆ ಹಾಗೂ ಡೋಂಗಿ ಮಾತುಗಳೊಂದಿಗೆ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿವೆ. ಆಶ್ವಾಸನೆಗಳ ಸುರಿಮಳೆಯನ್ನೇ ಸುರಿಸುತ್ತಿವೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತದ ಭರವಸೆಗಳ ಮಹಾಪೂರವೇ ಹರಿಯುತ್ತಿದೆ. ಆದರೆ 9ತಿಂಗಳ ಹಿಂದೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಕಾಂಗ್ರೆಸ್, ಬಿಜೆಪಿ,ಸಿಪಿಐ, ಸಿಪಿಐ-ಎಂ, ಬಿಎಸ್ಪಿಷ ಹಾಗೂ ಎನ್ಸಿಿಪಿ-ಈ 6ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಸಾರ್ವಜನಿಕ ಸಂಸ್ಥೆಗಳು ಎಂದು ಘೋಷಿಸಿತ್ತು. ಸಿಐಸಿಯ ಆ ಆದೇಶವನ್ನು ಎಲ್ಲಾ ರಾಜಕೀಯ ಪಕ್ಷಗಳು ಧಿಕ್ಕರಿಸಿವೆ. ಆ ಬಗ್ಗೆ ಚಕಾರವೆತ್ತದೆ ಮತದಾರರೂ ಎಲ್ಲಾ ಮರೆತಂತಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತರಾದ ಸುಭಾಷ್ ಅಗರ್ವಾದಲ್ ಮತ್ತು ಅನಿಲ್ ಬೈರ್ವಾೋಲ್ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ ಪಕ್ಷಗಳ ದೇಣಿಗೆ ಸ್ವೀಕೃತಿ ಹಾಗೂ ಖರ್ಚು-ವೆಚ್ಚಗಳ ಮಾಹಿತಿ ಕೋರಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ತಾವು ಸಾರ್ವಜನಿಕ ಸಂಸ್ಥೆಗಳಲ್ಲ ಹಾಗೂ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಯಡಿ ಬರುವುದಿಲ್ಲ ಎಂದು ತಿಳಿಸಿದ್ದವು. ಆದರೆ ಮಾಹಿತಿ ಹಕ್ಕು ಕಾರ್ಯಕರ್ತರು ರಾಜಕೀಯ ಪಕ್ಷಗಳನ್ನೂ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಎಚ್) ಅಡಿ ಸಾರ್ವಜನಿಕ ಸಂಸ್ಥೆಗಳೆಂದು ಘೋಷಿಸಬೇಕೆಂದು ಸಿಐಸಿಗೆ ಮನವಿ ಮಾಡಿದ್ದರು.ಅದರಂತೆ ಆಯೋಗದ ಪೂರ್ಣ ಪೀಠ ಜೂನ್ 3, 2013ರಂದು ಮೇಲಿನ 6ರಾಜಕೀಯ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಅವು ಉತ್ತರದಾಯಿತ್ವ ಹೊಂದಿವೆ ಎಂದು ಆದೇಶ ನೀಡಿತು. ಅದಕ್ಕೆ ಸಿಐಸಿ ಕಾರಣಗಳನ್ನೂ ನೀಡಿತ್ತು. ಎಲ್ಲಾ 6ರಾಜಕೀಯ ಪಕ್ಷಗಳು ಪರೋಕ್ಷವಾಗಿ ಕೇಂದ್ರ ಸರ್ಕಾರದಿಂದ ಸಹಾಯ ಧನ ಪಡೆದಿದ್ದವು. ದೆಹಲಿಯ ಹೃದಯ ಭಾಗದಲ್ಲಿ ಅತಿ ಕಡಿಮೆ ಅಥವಾ ಪುಕ್ಕಟೆಯಾಗಿ ನಿವೇಶನ/ಕಟ್ಟಡಗಳನ್ನು ಪಡೆದಿದ್ದವು. ಎಲ್ಲಾ ಪಕ್ಷಗಳಿಗೂ ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ರೂ.28.56ಲಕ್ಷ ಮೌಲ್ಯದ ಉಚಿತ ಪ್ರಸಾರ ಸೇವೆ ನೀಡಲಾಗಿತ್ತು. 2006-09ರ ಅವಧಿಯಲ್ಲಿ ಎಲ್ಲಾ ಪಕ್ಷಗಳಿಗೆ ಒಟ್ಟಾರೆ 510ಕೋಟಿ ಆದಾಯ ಕರ ವಿನಾಯತಿಯನ್ನು ನೀಡಲಾಗಿತ್ತು.

Read more »

3
ಮೇ

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 2

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

ಬದಲಾಗುತ್ತಿರುವ ಪ್ರಾತಿನಿಧ್ಯದ ಸ್ವರೂಪಗಳು
ಸಂವಿಧಾನ ರಚನಾ ಸಭೆಯಲ್ಲಿ ಹಲವು ಬಾರಿ ಈ ಚರ್ಚೆ ನಡೆದಿದೆ. ನಂತರ ಸಂಸದೀಯ ಪ್ರಜಾಪ್ರಭುತ್ವವನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡರು.ಈ ಸಂದರ್ಭದಲ್ಲಿ ಪ್ರತಿನಿಧಿತ್ವ ಅಂದರೆ ಎಲ್ಲರನ್ನೂ ಹಾಗೂ ಅವರ ಎಲ್ಲ ವಿಚಾರಗಳನ್ನು ಪ್ರತಿನಿಧಿಸುವಂತವರು ಎನ್ನುವ ಪರಿಕಲ್ಪನೆಯಿತ್ತು. ಇಲ್ಲಿ ಯಾರು ಓಟು ಕೊಟ್ಟರು, ಯಾರು ಕೊಡಲಿಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಹಾಗಾಗಿ ಕೆಲವು ಬಾರಿ ಬಹಳ ನಿರೀಕ್ಷೆ ಮಾಡಿರುವಂತಹ ಸಂದರ್ಭದಲ್ಲಿ ಓಟು ಕೊಟ್ಟಿರುವುದಿಲ್ಲ. ಕೆಲವೊಮ್ಮೆ ನಿರೀಕ್ಷೆ ಮಾಡಿರದ ಸಂದರ್ಭದಲ್ಲಿ ಕೊಟ್ಟಿರುತ್ತಾರೆ.ಇದಕ್ಕೆ ಪೂರಕವಾಗಿ ಎಂ.ಪಿ.ಪ್ರಕಾಶ್ ಅವರ ಉದಾಹರಣೆಯನ್ನ ನೋಡುವುದಾದರೆ, ಬಹಳ ಒಳ್ಳೆ ಅಭಿವೃದ್ಧಿ ಮಾಡಿರುವಂತಹ ಎಲ್ಲ ಪಕ್ಷದ ಅನೇಕ ಜನ ಸೋತಿರುವುದನ್ನ ಕೂಡಾ ನೋಡಿದ್ದೇವೆ. ಅದೇ ರೀತಿಯಾಗಿ, ಯಾವುದೇ ಅಭಿವೃದ್ಧಿ ಮಾಡದೇ, ಜನರ ಕೈಗೇ ಸಿಗದಿರುವಂತಹ ಅನೇಕರು ಚುನಾವಣೆಯಲ್ಲಿ ಸತತವಾಗಿ ಗೆದ್ದಿರುವಂತವರನ್ನು ಸಹ ನೋಡಿದ್ದೇವೆ. ಈ ಯಾವುದಕ್ಕೂ ಕೂಡಾ ನಿರ್ದಿಷ್ಟವಾದಂತಹ ವ್ಯಾಖ್ಯಾನವನ್ನು ಮಾಡಲಿಕ್ಕೆ, ಅರ್ಥೈಸಲಿಕ್ಕೆ ಸಾಧ್ಯ ಆಗುವುದಿಲ್ಲ. ಅದೇ ರೀತಿ, ಬಹಳಷ್ಟು ಮಟ್ಟಿಗೆ ಒಂದು ಹಂತದಲ್ಲಿ ನನ್ನ ಸಂಶೋಧನೆ ಪ್ರಬಂಧದ ಒಂದು ಅಧ್ಯಾಯದಲ್ಲಿ ಈ ಪ್ರಾತಿನಿಧ್ಯದ ಸಮಸ್ಯೆಯನ್ನು ಚರ್ಚೆಗೆ ಒಳಪಡಿಸಿದ್ದೇನೆ.

ಸ್ವಾತಂತ್ರ ಬಂದು ಕೆಲವು ದಿನಗಳ ಕಾಲ ಜನ ಮತ್ತು ಪ್ರತಿನಿಧಿಗಳು ಸ್ವಾತಂತ್ರ ಹೋರಾಟದ ಗುಂಗಿನಲ್ಲೇ ಇದ್ದರು. ಆಗ ಪ್ರತಿನಿಧಿತ್ವ ಅಂದರೆ ಇಡೀ ದೇಶದಲ್ಲಿ ಯಾವ ಕಾರಣಕ್ಕಾಗಿ ಸ್ವಾತಂತ್ರ್ಯವನ್ನು ಪಡೆದದೆವೋ ಅದೇ ಐಡಿಯಾಲಜಿಯನ್ನು ಪ್ರತಿನಿಧಿಸುವುದು ರೂಢಿಯಲ್ಲಿತ್ತು. ನಮ್ಮ ದೇಶದ ಎಲ್ಲ ಜನರಿಗೂ ಕೂಡಾ ಒಂದು ನೆಮ್ಮದಿಯ ಸಮಾಧಾನಕರ ಬದುಕನ್ನು ಸಾಧ್ಯವಾಗಿಸುವುದು ಅಂದಿನ ಪ್ರತಿನಿಧಿತ್ವದ ಆಶಯವಾಗಿತ್ತು, ಅದು ಸುಮಾರು 10-20 ವರ್ಷಗಳ ಕಾಲ ನಡೆದುಕೊಂಡು ಬಂದಿತು. ಆಗ ಎಲ್ಲ ಕೂಡಾ ನ್ಯಾಶನಾಲಿಸ್ಟ್ ಐಡಿಯಾಲಜಿನಲ್ಲೇ ಇದ್ದರು. ದೇಶದ ಬಗ್ಗೆಯೇ ಚಿಂತನೆ ನಡೆಸುತ್ತಿದ್ದರು.ಗಾಂಧೀಜಿ, ಜಯಪ್ರಕಾಶ ನಾರಾಯಣ್,ಮತ್ತು, ವಿನೋಬಾ ಭಾವೆಯಂತವರ ಜಾತಿ ಯಾವುದು ಅಂತ ಯಾರು ನೋಡುತ್ತಿರಲಿಲ್ಲ. ಹಾಗೆ ಕೇಳಿದ್ದನ್ನು ಕೂಡಾ ಯಾರು ಕೇಳಿಲ್ಲ ಮತ್ತು ಕೇಳುವುದು ಇಲ್ಲ. ಹಾಗೆಯೆ ಇತ್ತೀಚೆಗೆ ಅಣ್ಣಾ ಹಜಾರೆಯವರ ಜಾತಿ ಯಾವುದು ಅಂತ ಯಾರಾದರು ಕೇಳುತ್ತಾರಾ?ಕೇಳುವುದಿಲ್ಲ. ಆದರೆ, ಇವರೆಲ್ಲರಿಗೂ ಒಂದು ಕಾರಣ ಇತ್ತು. ಆ ಕಾರಣ ಮುಖ್ಯ ಅದಕ್ಕಾಗಿ ಅವರು ಮಾಡುತ್ತಿದ್ದಾರೆ. ಹಾಗಾಗಿ ಅವರು ಯಾರು ಎನ್ನುವುದು ಮುಖ್ಯವಾಗುವುದಿಲ್ಲ. ಈ ಸಣ್ಣ ಪುಟ್ಟ ಪ್ರಶ್ನೆಗಳೆಲ್ಲಾ ಬರುವುದು ಈ ನಮ್ಮಂತವರೆಲ್ಲಾ ಚುನಾವಣೆಗೆ ನಿಂತಾಗ ಮಾತ್ರ. ಹಾಗಾಗಿ ಸ್ವಾತಂತ್ರ ಬಂದ ಮೊದಲ ಇಪ್ಪತ್ತು ವರ್ಷಗಳ ಕಾಲ 1952ರ ಚುನಾವಣೆಯಿಂದ ಸುಮಾರು 70ರ ದಶಕದವರೆಗೆ ಜಾತಿ ಅಥವಾ ಇತ್ಯಾದಿ ಸಣ್ಣ ಪುಟ್ಟ ಪ್ರಶ್ನೆಗಳು ಇರಲಿಲ್ಲ. ಬದಲಾಗಿ, ಪ್ರತಿನಿಧಿತ್ವ ಅಂದರೆ, ದೇಶವನ್ನು ಪ್ರತಿನಿಧಿಸುವುದು ಎನ್ನುವಂತೆಯೇ ನೋಡಲಾಗುತ್ತಿತ್ತು. ಒಂದು Cause, National Spirit ಅನ್ನು Represent ಮಾಡುತ್ತಿದ್ದಾನೆ ಎನ್ನುವ ಅರ್ಥ ಇತ್ತು ಮತ್ತು ಹಾಗೆಯೇ ನಡೆದುಕೊಂಡು ಬರುತ್ತಿತ್ತು. Read more »