ವಿಷಯದ ವಿವರಗಳಿಗೆ ದಾಟಿರಿ

Archive for

6
ಮೇ

ಕೊಟ್ಟಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು

unnamedರಾಘವೇಂದ್ರ ಸುಬ್ರಹ್ಮಣ್ಯ
ಜಗತ್ತಿನಲ್ಲಿ ಎಷ್ಟು ರಾಜಕಾರಣಿಗಳನ್ನು ನೀವು ನೋಡಿಲ್ಲ!? ಬೆಳಗೆದ್ದರೆ ಮನೆಯೆದುರು ಕಟ್ಟಿಹೋದ ಚರಂಡಿಯನ್ನು ಸರಿಪಡಿಸುತ್ತೇನೆಂದು ಆಶ್ವಾಸನೆ ಕೊಡುವ ಕಾರ್ಪೋರೇಟರನಿಂದ ಹಿಡಿದು, ವಿದೇಶದಿಂದ ಕಪ್ಪುಹಣ ಹಿಂದೆತರೆತ್ತೇನೆಂಬ ಭರವಸೆ ನೋಡುವ ಪ್ರಧಾನಿಯವರೆಗೆ, ಎಲ್ಲರನ್ನೂ ನೀವು ನೋಡಿದ್ದೀರ. ಎಲ್ಲರನ್ನೂ ಕೆಲಕಾಲದವರೆಗೆ ನಂಬಿದ್ದೀರ. ಎಲ್ಲರಿಂದಲೂ ಒಂದಲ್ಲ ಒಂದು ಬಾರಿ ಮೋಸ ಹೋಗಿದ್ದೀರ. ಅವರ ಆಶ್ವಾಸನೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದೀರ. ‘ಯಾರೂ ಆಶ್ವಾಸನೆಗಳನ್ನು ಪೂರ್ತಿ ಮಾಡಲ್ಲ. ಮತ್ಯಾವ ಸುಖಕ್ಕೆ ಅವನ್ನು ಕೊಡ್ತಾರೋ ಏನೋ’ ಅಂತಾ ಬೈದುಕೊಂಡೂ ಇದ್ದೀರಿ. ‘ಜಗತ್ತಿನಲ್ಲಿ ಯಾವ ರಾಜಕಾರಣಿಯೂ ತಾನು ಕೊಟ್ಟ ಆಶ್ವಾಸನೆಗಳನ್ನು ನೂರಕ್ಕೆ ನೂರು ಈಡೇರಿಸಿಲ್ಲ, ಇವನದ್ದೇನು ಬಿಡಿ, ಕೊಟ್ಟ ಇಪ್ಪತ್ತು ಆಶ್ವಾಸನೆಗಳಲ್ಲಿ ಎರಡನ್ನಾದರೂ ಈಡೇರಿಸಿದ್ದಾನೆ’ ಅಂತಾ ಕೆಲವೊಮ್ಮೆ ಸಮಾಧಾನವವೂ ಮಾಡಿಕೊಂಡಿದ್ದೀರಿ.
ಆದರೆ ಜಗತ್ತಿನಲ್ಲಿ ಕನಿಷ್ಟ ಒಬ್ಬ ರಾಜಕಾರಣಿ, ತಾನು ಕೊಟ್ಟ ಆಶ್ವಾಸನೆಗಳನೆಲ್ಲಾ ನೂರಕ್ಕೆ ನೂರು ಈಡೇರಿಸಿದ್ದಾನೆಂದರೆ ನಂಬುತ್ತೀರಾ? ಹೌದು ನೀವು ಓದಿದ್ದು ಸರಿಯಾಗಿದೆ. ರಾಜಕಾರಣಿಯೊಬ್ಬ ತಾನು ಚುನಾವಣೆಗೆ ಮೊದಲು ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು, ಆಡಳಿತಕ್ಕೆ ಬಂದಮೇಲೆ ಈಡೇರಿಸಿದ್ದಾನೆ!! ಅದೂ ಕೂಡ ಒಂದೇ ಒಂದು ಆಡಳಿತ ಕಾಲಾವಧಿಯಲ್ಲಿ!! ಒಬ್ಬ ರಾಜಕಾರಣಿ ಇದನ್ನು ಸಾಧಿಸಬೇಕಾದರೆ ಅವನಿಗೆ ಅದೆಂತಾ ದೂರದೃಷ್ಟಿಯಿರಬೇಕು ಮತ್ತು ತನ್ನಮೇಲೆ ಹಾಗೂ ತನ್ನ ತಂಡದ ಮೇಲೆ ಅದೆಷ್ಟು ವಿಶ್ವಾಸವಿರಬೇಕು, ಒಮ್ಮೆ ಯೋಚಿಸಿ.
ಅಂದಹಾಗೆ ಆ ರಾಜಕಾರಣಿ ಇವತ್ತು ನಿನ್ನೆಯವನಲ್ಲ. ಆತನ ಆಡಳಿತ ನಡೆದದ್ದು 1845 ಮತ್ತು 1849ರ ಮಧ್ಯೆ. ಅಮೇರಿಕಾ ಸಂಯುಕ್ತ ಸಂಸ್ಥಾನದ 11ನೇ ಅದ್ಜ್ಯಕ್ಷನಾಗಿ ಚುನಾಯಿತನಾದ ಜೇಮ್ಸ್.ಕೆ.ಪೋಲ್ಕ್ ಎಂಬ ರಾಜಕಾರಣಿಯ ಬಗ್ಗೆ ನಾವು ಮಾತನಾಡುತ್ತಿರುವುದು. 1795ರಲ್ಲಿ ಜನಿಸಿದ ಜೇಮ್ಸ್, ಹತ್ತುಮಕ್ಕಳಿದ್ದ ದೊಡ್ಡ ಕುಟುಂಬದ ಹಿರಿಮಗನಾಗಿ, ರೈತನಾಗಿ ಬೆಳೆದವ. ಕಷ್ಟಗಳನ್ನು ಅರಿತವ. ಇವನ ಬಗೆಗಿನ ಒಂದು ಕಥೆಯ ಪ್ರಕಾರ (ದಂತಕಥೆಯಲ್ಲ, ನಿಜವಾದ ಕಥೆ) 1812ರಲ್ಲಿ ಈತನಿಗೆ ಮೂತ್ರಕೋಶದ ಕಲ್ಲುಗಳಿಗಾಗಿ ಶಸ್ತ್ರಚಿಕಿತ್ಸೆ ಮಾಡುವಾಗ, ಈ ಪುಣ್ಯಾತ್ಮ ಇಡೀ ಶಸ್ತ್ರಚಿಕಿತ್ಸೆಯುದ್ದಕ್ಕೂ ಎಚ್ಚರವೇ ಇದ್ದನಂತೆ!! ಅಂದು ಆಸ್ಪತ್ರೆಯಲ್ಲಿ ಅರವಳಿಕಾಗಿ ಲಭ್ಯವಿದ್ದದ್ದು ಬ್ರಾಂಡಿ ಮಾತ್ರ. ಅಂತಾ ಗಟ್ಟಿಪಿಂಡ ಇವನು.

ಮತ್ತಷ್ಟು ಓದು »