ವಿಷಯದ ವಿವರಗಳಿಗೆ ದಾಟಿರಿ

Archive for

28
ಮೇ

ಮೂಲೆ ಸೇರಲು ಮುಂದಾಗಿರುವ ಕರ್ನಾಟಕದ ಮತ್ತೊಂದು ವರದಿ

– ಕೆ.ಎಂ.ವಿಶ್ವನಾಥ ಮರತೂರ

ಮಾನವ ಅಭಿವೃದ್ಧಿ ಸೂಚ್ಯಂಕಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ, ಎಂದು ಕವಿ ಕುವೆಂಪು ಹಾಡಿದ್ದಾರೆ. ಸಮೃದ್ಧಭರಿತವಾದ ಕರ್ನಾಟಕವು ಅನೇಕ ಅನೇಕ ವರದಿಗಳನ್ನು ಬಿತ್ತರಿಸಿದೆ ಅವುಗಳಲ್ಲಿ ಕೆಲವು ಪಟ್ಟಿ ಮಾಡುವುದಾದರೆ ನಂಜುಂಡಪ್ಪ ವರದಿ, ಸರೋಜಿನಿ ಮಹಿಶಿ ವರದಿ, ಗೋಕಾಕ್ ವರದಿ ಇತ್ಯಾದಿಗಳಲ್ಲಿ ಕೆಲವು ಅನುಷ್ಠಾನವಾದರೆ ಇನ್ನು ಕೆಲವು ಹೋರಾಟ ಚೀರಾಟದ ಹಾದಿಯಲ್ಲಿಯೇ ಆಮೆಗತಿಯಲ್ಲಿಯೇ ಮೂಲೆ ಸೇರಿವೆ. ಈ ಸಂಧರ್ಭದಲ್ಲಿಯೇ ರಾಷ್ಟ್ರೀಯ ಯೋಜನಾ ಇಲಾಖೆಯ ಮಹತ್ವ ಯೋಜನೆಯಾದ ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯೂ ಇದೀಗ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳು ಬಹುತೇಕ ಮುಗಿಸಿದ್ದು ಇನ್ನೇನು ರಾಜ್ಯ ಮಾನವ ಅಭಿವೃದ್ಧಿ ವರದಿಯು ಮುಗಿಯುವ ಹಂತ ತಲುಪಿದೆ.

ಜಿಲ್ಲಾ ಮಾನವ ಅಭಿವೃದ್ಧಿ ವರದಿಯು (ಡಿಹೆಚ್‍ಡಿಆರ್) ಕೇವಲ ತಾಲ್ಲೂಕು ಮಟ್ಟದ ಮಾನವ ಅಭಿವೃದ್ಧಿ ಸ್ಥಿತಿಗತಿಗಳನ್ನು ನಿರ್ಣಯಿಸುವ ಪ್ರಯತ್ನವಷ್ಟೇ ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿಯೂ ನಗರಾಭಿವೃದ್ಧಿಯನ್ನು ಅಂದಾಜಿಸಲು ಪ್ರಯತ್ನಿಸಿದೆ. ಇದನ್ನು 126 ಸೂಚಕಗಳನ್ನು ಆಧರಿಸಿದ 7 ಅಭಿವೃದ್ಧಿ ಸೂಚ್ಯಂಕಗಳನ್ನು ಲೆಕ್ಕ ಹಾಕುವುದರ ಮೂಲಕ ಪಡೆಯಲಾಗುತ್ತದೆ. ಈ ಸೂಚಕಗಳು ಮುಖ್ಯವಾಗಿ ಶೇಕಡವಾರು, ಅನುಪಾತ ಹಾಗೂ ಏಕ ವ್ಯಕ್ತಿ ಮೌಲ್ಯಗಳಿಂದ ಕೂಡಿರುತ್ತದೆ.

ಮತ್ತಷ್ಟು ಓದು »