ವಿಷಯದ ವಿವರಗಳಿಗೆ ದಾಟಿರಿ

Archive for

16
ಮೇ

ಪ್ರತಿಭಾಪಲಾಯನ

– ಮಯೂರ ಲಕ್ಷ್ಮಿ

ಪ್ರತಿಭಾಪಲಾಯನಅದೊಂದು ಕಾಲದಲ್ಲಿ ನಳಂದಾ, ತಕ್ಷಶಿಲಾ ಮುಂತಾದ ವಿಶ್ವವಿಖ್ಯಾತ ವಿದ್ಯಾಲಯಗಳಿಂದ ಪ್ರಸಿದ್ಧಿಹೊಂದಿ ಎಲ್ಲೆಡೆಯಿಂದ ಎಲ್ಲರನ್ನೂ ಆಕರ್ಷಿಸಿ ಜ್ಞಾನದೇಗುಲವೆನಿಸಿದ್ದ ಭಾರದ ದೇಶವು ತನ್ನ ಹಿಂದಿನ ವೈಭವಗಳನ್ನು ಮರೆತುಹೋಗುವ ಸ್ಥಿತಿ ತಲುಪಿದ್ದಾದರೂ ಏಕೆ? ಯಾವುದೇ ಒಂದು ದೇಶವು ಆರ್ಥಿಕವಾಗಿ ಸಧೃಢವೆನಿಸಿಕೊಳ್ಳಲು ದೇಶದ ಬೆನ್ನೆಲುಬಾದ ಯುವಶಕ್ತಿಯಿಂದ ಮಾತ್ರ! ಜಗತ್ತಿಗೆ ಅರಿವು ನೀಡುವ ಜ್ಞಾನದೇಗುಲವೆನಿಸಿದ್ದ ಭಾರತ ಮೆಕಾಲೆಯ ಆಗಮನದಿಂದ ತನ್ನ ಮೌಲ್ಯಾಧರಿತ ಶಿಕ್ಷಣ ವ್ಯವಸ್ಥೆಯನ್ನೇ ಕಳೆದುಕೊಂಡಿತು.

ಭಾರತವು ವಿಶ್ವಮಾನ್ಯವೆನಿಸಿದ್ದು ತನ್ನ ಜ್ಞಾನ-ವಿಜ್ಞಾನ, ತಂತ್ರಜ್ಞಾನಗಳಿಂದ ಪ್ರಪಂಚಕ್ಕೆ ನೀಡಿದ ಕೊಡುಗೆಯಿಂದ.ಕಾಲಕ್ರಮೇಣ ಜಾಗತೀಕರಣದೊಂದಿಗೆ ಬದಲಾಗತೊಡಗಿದ ಭಾರತವು ಎದುರಿಸಿದ ಆರ್ಥಿಕ ಸಮಸ್ಯೆಗಳಲ್ಲಿ ಅತಿ ಮುಖ್ಯವಾದ ಸಮಸ್ಯೆಯಾಗಿದ್ದು ಪ್ರತಿಭಾ ಪಲಾಯನ. ಅಂದಿನ ಸ್ವಾಮೀ ವಿವೇಕಾನಂದರಿಂದ ಇಂದಿನ ಅಬ್ದುಲ್ ಕಲಾಂರವರು ನಂಬಿರುವುದು ಸಧೃಢ ಭಾರತದ ನಿರ್ಮಾಣದ ಕನಸು ಸಾಕಾರಗೊಳ್ಳಬೇಕಾಗಿರುವುದು ಈ ದೇ±್ನುದ ಯುವಶಕ್ತಿಯಿಂದ ಎನ್ನುವ ಭರವಸೆ! ಅದರೆ ಭಾರತವನ್ನು ಇನ್ನೈದು ವರ್ಷಗಳಲ್ಲಿ ಮುಂದವರಿದ ದೇಶವನ್ನಾಗಿಸುವ ಹೊಣೆ ಹೊತ್ತಿರುವ ನಮ್ಮ ಯುವಶಕ್ತಿ ವಿದೇಶಗಳಲ್ಲಿ ಪೋಲಾಗುತ್ತುರುವುದು ದುಃಖದ ವಿಚಾರ.

ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ಉನ್ನತ ಶಿಕ್ಷಣ ಮತ್ತು ವೃತ್ತಿಗಳನ್ನರಸಿ ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳಿಗೆ ವಲಸೆ ಹೋಗಿ ಹಿಂದಿರುಗಿ ಬಾರದಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಭಾರತದ ಅಭಿವೃದ್ಧಿಯ ನಿಟ್ಟಿನಲ್ಲಿ ಮಾರಕವೇ.ಈ ಪ್ರತಿಭಾ ಪಲಾಯನವು ಮುಂದುವರಿದ ರಾಷ್ಟ್ರಗಳಿಗೆ ವರವಾದರೆ ಭಾರತದ ಮಟ್ಟಿಗೆ ಶಾಪವೇ ಸರಿ! ಭಾರತದಲ್ಲಿ ನಮ್ಮ ವ್ಯಕ್ತಿ ಸಂಪನ್ಮೂಲ ನಮ್ಮ ಆಧಾರಸ್ತಂಭ, ನಮ್ಮ ವ್ಯಕ್ತಿ-ಶಕ್ತಿಯನ್ನು ಕಳೆದುಕೊಳ್ಳುವುದು ಮುಂದಿನ ಅಭಿವೃದ್ಧಿಯ ದೃಷ್ಟಿಯಲ್ಲಿ ಆತಂಕದ ವಿಚಾರ.ನಮ್ಮ ಭಾರತೀಯ ಮನಸ್ಥಿತಿಯೂ ವಿಚಿತ್ರ, ಸಣ್ಣ ಪುಟ್ಟದ್ದಕ್ಕೂ ದೇಶಭಕ್ತಿಯನ್ನು ಮೆರೆಯುವುದೇ ನಮ್ಮ ಸಹಜ ಗುಣ. ನಮ್ಮ ದೇಶದ ಮೂಲ ವ್ಯಕ್ತಿಗಳು ಮತ್ತೆಲ್ಲೋ ಮಿಂಚಿ ಸುದ್ದಿಯಾದ ವಿಚಾರಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿ ಸುದ್ದಿಯಾಗಿಸುತ್ತೇವೆ.

ಮತ್ತಷ್ಟು ಓದು »