ಹ್ಯಾಮ್ ರೇಡಿಯೋ
– ಭರತೇಶ ಅಲಸಂಡೆಮಜಲು
ಜೀವನವೆಷ್ಟೇ ಸುಖ ನೆಮ್ಮದಿಯಿಂದಿದ್ದರೂ ಜೀವನದ ಸೃಜನಾತ್ಮಕತೆಗೆ ಗೊಬ್ಬರವ ನೀಡಿ ಸಮಯದ ಸದುಪಯೋಗದ ಜೊತೆಗೆ ಮನೋಚೈತನ್ಯ, ಮನೋವಿಕಾಸಕ್ಕೆ ದ್ರವ್ಯವಾಗಿ ಪೋಷಿಸುವುದು ನಮ್ಮ ಹವ್ಯಾಸಗಳು. ಹೌದು ವೈಜ್ಞಾನಿಕ ಹವ್ಯಾಸಗಳಲ್ಲಿ ಹ್ಯಾಮ್ ರೇಡಿಯೋವು ಒಂದು. ಇದು ರೇಡಿಯೋ ಸಾಧನದ ಮೂಲಕ ವಿಶ್ವ ಗೆಳೆತನವನ್ನು ಸಾಧಿಸುವುದು, ಭಾಷೆ, ದೇಶ, ಲಿಂಗ, ಧರ್ಮ,ಅಂತಸ್ತು ಮೀರಿ ಸಭಿರುಚಿಯ ಅಪರಿಚಿತರನ್ನು ಸ್ನೇಹಿತರನ್ನಾಗಿಸುವುದು. ವ್ಯಕ್ತಿಗತ, ಸಮೂಹ ಅಥವಾ ಸಂಸ್ಥೆಯೊಂದು ತನ್ನ ಸ್ವಂತ ಸ್ಥಾಪಿತ ರೇಡಿಯೋ ನೆಲೆಯಿಂದ ಮತ್ತೊಂದು ರೇಡಿಯೋ ಹವ್ಯಾಸಿಯೊಂದಿಗೆ ಸಂಪರ್ಕ ಸಾಧಿಸಿ ಸ್ನೇಹ ಬಯಸುವ ಹವ್ಯಾಸಿಗಳ ಬಳಗ ಅಂದರೆ ನಮ್ಮ ರೇಡಿಯೋದಿಂದ ಗೆಳೆಯನ ರೇಡಿಯೋಗೆ ಕರೆ ಮಾಡುವುದು.
ಇದು ದ್ವಿಮುಖಿ ಸಂವಹನ ಮಾಧ್ಯಮ ಇದರಲ್ಲಿ ಒಂದು ಪ್ರಸರಕವಾದರೆ(Transmitter) ಮತ್ತೊಂದು ಪಡೆಯಕ(Receiver) ಪ್ರತಿಯೊಬ್ಬ ಹವ್ಯಾಸಿಯು ತನ್ನದೇ ಅದ ಕರೆ ಗುರುತು ಸಂಖ್ಯೆ ಹೊಂದಿರುತ್ತಾನೆ. ಇದು ವ್ಯಕ್ತಿಗತ ಮನರಂಜನೆ, ಹಾಸ್ಯ, ವಾಣಿಜ್ಯೇತರ ಸಂದೇಶ, ನಿಸ್ತಂತು ಪ್ರಯೋಗ, ನಿಶ್ಚಿತವರದಿಗಾರಿಕೆ, ಹವಾಮಾನ, ವಾಹನ ಒತ್ತಡ, ತುರ್ತು ಸಂದೇಶ ರವಾನೆ, ಸ್ವತರಬೇತಿ, ಚರ್ಚೆ, ಸಂವಾದ ಮೂಲಕ ಸ್ವಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಹವ್ಯಾಸಗಳಲ್ಲೊಂದು. ಇತರ ಎಲ್ಲಾ ದೂರ ಸಂಪರ್ಕ ಮಾಧ್ಯಮಗಳು ನಿಷ್ಕ್ರಿಯಗೊಂಡಾಗ ಅತ್ಯುಪಯೋಗವಾಗುವ ಎಕೈಕ ಸಂಪರ್ಕ ಸಾಧನವೆಂಬ ಹೆಗ್ಗಳಿಕೆಯು ಇದಕ್ಕಿದೆ.
ಭೂಪಂಕ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಗಘಗಳ ಸಂದರ್ಭದಲ್ಲಿ ಎಲ್ಲ ಸಂಪರ್ಕ ಸಾಧನಗಳು ನೆಲಕಚ್ಚಿದಾಗ ಯಾವುದೇ ಮಾಧ್ಯಮಗಳ ಹಂಗಿಲ್ಲದೇ ಪೋಲಿಸ್, ಮಿಲಿಟರಿ ವ್ಯವಸ್ಥೆಗಳ ಜೊತೆ ಕೈಜೋಡಿಸಿ ಮಾಹಿತಿ ಕಲೆಹಾಕಿ ಸಾಮಾನ್ಯರ ಪಾಲಿನ ಬಂಧುವಾಗಿ ಸಹಾಯ ಮಾಡಬಲ್ಲುದು.
ಬಡವ ಯಾರು ?
– ಮಹೇಶ ಹುಂಡೆಕಾರ್
ಸಹಾಯಕ ಪ್ರಾಧ್ಯಾಪಕ,ಜಿ. ಎನ್. ಡಿ. ಇಂಜಿನಿಯರಿಂಗ್ ಕಾಲೇಜ,ಬೀದರ್
ಬಡವನಾದವನು ಧನಿಕನಿಗೆ ದಿನಾ ತನ್ನ ಅಸಲಿನ ಬಡ್ಡಿ ಕೊಟ್ಟು ಬದುಕುತ್ತಾನೆ, ಹಾಗೆಯೆ ಧನಿಕನು ದಿನಾ ಬಡ್ಡಿ ಎನ್ನುತ್ತಾ ಸಾಯುತ್ತಾನೆ. ದುಡ್ಡು ಪಡೆದವನಿಗೆ ಅಸಲು ಮತ್ತು ಬಡ್ಡಿ ಹೊಂದಿಸುವುದಷ್ಟೆ ಕೆಲಸ ಆದರೆ ಧನಿಕನಿಗೆ ಬಡ್ಡಿ ಪಡೆದ ಮೇಲೆ ಅದರ ಲೆಕ್ಕದ ಕೆಲಸ ಕೂಡ. ಒಂದರ್ಥದಲ್ಲಿ ಬಾಳಿ ಬದುಕುವವನು ಬಡವನೆ ಹೊರತು ಧನಿಕನಲ್ಲ.ಇಲ್ಲದ ಚಿಂತೆ ಮಾಡಿ ಬರದ ಕಾಯಿಲೆಗಳನೆಲ್ಲಾ ಬರಮಾಡಿಕೊಂಡು,ಬಡ್ಡಿ ಪಡೆದ ಹಣವು ಗುಳಿಗೆಗಳಿಗೆ ಮೀಸಲಿಟ್ಟು, ಹಣದ ಲೆಕ್ಕ ಮಾತ್ರ ಮಾಡುತ್ತ ಹಾಸಿಗೆ ಹಿಡಿದು ಕೂತಿದ್ದಾನೆ ನಮ್ಮ ಕಥಾನಾಯಕ ತಿಮಯ್ಯಸೆಟ್ಟರು ಜೊತೆಗೆ ಜೀವದ ಗೆಳೆಯರಾದ ಗುಣಲಿಂಗ ಹಾಗೂ ಶಾಂತರೂಪರು ಆಸಿನರಾಗಿದ್ದರೆ.ನಮ್ಮ ತಿಮ್ಮಯ್ಯಸೆಟ್ಟರ ಭಾರಿ ವಿಚಾರಗಳು ಮತ್ತು ಅದಕ್ಕೆ ಪೂರಕವಾಗಿ ತನ್ನ ಸುತ್ತಲಿನ ಪರಿಸರವನ್ನು ತಾನೆ ನಿರ್ಮಿಸಿಕೊಳ್ಳುತಿದ್ದ ಏಕೆಂದರೆ ಆ ಬಡಾವಣೆಯಲ್ಲಿ ತಾನೆ ಶ್ರೀಮಂತ “ಹಣದಲ್ಲಿ” ಹಾಗೆಯೆ ಅದರ ಮಹಿಮೆಯಿಂದ ಮೆರೆಯತೊಡಗಿದ.ಅನುಕಂಪದ ಆಧಾರದ ಮೇಲೆ ಸರಕಾರಿ ಕೆಲಸ ಗಿಟ್ಟಿಸಿಕೊಂಡು ಬಹಳ ಚಿಕ್ಕ ವಯಸ್ಸಿನಲ್ಲೇ ದುಡ್ಡಿನ ಹುಚ್ಚು ಆಡರಿಸಿಬಿಟ್ಟಿತು. “ದುಡ್ಡು ಜೀವನಕ್ಕೆ ಬಹಳ ಅಗತ್ಯ, ಆದರೆ ದುಡ್ಡೆ ಜೀವನವಲ್ಲ” ನಮ್ಮ ತಿಮ್ಮಯ್ಯಸೆಟ್ಟರದು ದುಡ್ಡು ಒಂದೆ ಬೇಕು ಜೀವನಕ್ಕೆ ಎಂದು ಊರೆಲ್ಲ ಹಲಗೆ ಹೋಡಿದು ಸಾರುತ್ತಿದ್ದರು.