ವಚನ ಸಾರ (ದಕ್ಕಿದಷ್ಟು) : 1
– ಡಾ.ಸಂತೋಷ್ ಕುಮಾರ್ ಪಿ.ಕೆ
ವ್ಯಾಧನೊಂದು ಮೊಲವ ತಂದರೆ,
ಸಲುವ ಹಾಗಕ್ಕೆ ಬಿಲಿವರಯ್ಯ!
ನೆಲನಾಳ್ವನನ ಹೆಣನೆಂದರೆ, ಒಂದಡಿಕೆಗೆ ಕೊಂಬುವರಿಲ್ಲ ನೋಡಯ್ಯ!
ಮೊಲನಿಂದ ಕರಕಷ್ಟ ನರನ ಬಾಳುವೆ. ಸಲೆ ನಂಬೋ ನಮ್ಮ ಕೂಡಲ ಸಂಗಮದೇವನ
ಈ ವಚನವು ಅತ್ಯಂತ ಚಿಕ್ಕದಾಗಿದ್ದರೂ ಸಹ ಆಳವಾದ ಅರ್ಥವನ್ನು ಒಳಗೊಂಡಿದೆ. ಕಟ್ಟುಬಿಚ್ಚಿದ ನಾಯಿಯು ಎಗ್ಗಿಲ್ಲದೆ ಓಡುವಾಗ ಮಧ್ಯದಲ್ಲಿ ಏನೋ ಆಯಿತೆಂಬಂತೆ ನಿಲ್ಲುವ ರೀತಿಯಲ್ಲಿ ಒಮ್ಮೆ ತನ್ನ ಕುರಿತು ನಿಂತು ಆಲೋಚಿಸುವಂತೆ ಈ ವಚನವು ಮಾಡುತ್ತದೆ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಜೊತೆಗೆ ಮಾನವನ ಬದುಕೂ ಸಹ ಮಿಳಿತಗೊಂಡಿದೆ. ತಂತ್ರಜ್ಞಾನಕ್ಕೆ ವೇಗಕ್ಕೆ ಮನುಷ್ಯನು ಹೊಂದಿಕೊಳ್ಳುವ ಭರದಲ್ಲಿ ತನ್ನನ್ನು ಮತ್ತು ತನ್ನೊಂದಿಗಿರುವ ಸಮಾಜವನ್ನು ಅರಿತುಕೊಳ್ಳುವ ಸಂಮಯ ಇಂದು ಮಾಯವಾಗುತ್ತಿದೆ. ವಿಶ್ವ ಮಟ್ಟದಲ್ಲಿ ಮನುಷ್ಯ ಏನೇನನ್ನೋ ಕಂಡುಹಿಡಿದು, ತಾನೇ ಶ್ರೇಷ್ಠ ಎಂಬ ಹಮ್ಮು ಬಿಮ್ಮುಗಳೊಂದಿಗೆ ಮೆರೆಯುತ್ತಿದ್ದಾನೆ. ಆದರೆ ಅಂತಹ ಪರಿಸ್ಥಿತಿ ತಾತ್ಕಾಲಿಕ ಮಾತ್ರ ಎಂಬುದು ಮಾತ್ರ ಅವನ/ಳ ಸ್ಮತಿಪಟಲದಿಂದ ಹೊರಹೋಗಿರುತ್ತದೆ. ವೇಗವಾಗಿ ಚಲಿಸುತ್ತಿರುವ ಮನುಷ್ಯರೇ ಒಂದು ತಾಸು ನಿಂತು ನಿಮ್ಮ ಬಗ್ಗೆ ಆಲೋಚಿಸಿ ಎಂದು ಹೇಳುವ ಕಾರ್ಯವನ್ನು ಮೇಲಿನ ವಚನವು ಒಂದು ಉಪಮಾನವನ್ನು ಬಳಸಿಕೊಂಡು ಮಾಡುತ್ತದೆ. ಮತ್ತಷ್ಟು ಓದು