ಸೆಕ್ಯುಲರಿಸಂ ವರ್ಸಸ್ ಮೂಲಭೂತವಾದ…?
– ಡಾ. ಪ್ರವೀಣ್ ಟಿ. ಎಲ್, ಶಿವಮೊಗ್ಗ
ಪ್ರಜಾವಾಣಿಯ ಚರ್ಚೆಯೊಂದಕ್ಕೆ ಬರೆದ ಪ್ರತಿಕ್ರಿಯೆ. ಪ್ರತಿದಿನ ‘ಮೂಲಭೂತವಾದ, ಕೋಮುವಾದ/ಕೋಮುವಾದಿ ರಾಜಕಾರಣ ಅಪಾಯಕಾರಿ’ ಎಂದು ಊಳಿಡುವ ಲೇಖನಗಳನ್ನು ಪ್ರಕಟಿಸುವ ಪತ್ರಿಕೆಗೆ ಈ ಪ್ರತಿಕ್ರಿಯೆಯು ಅಪಥ್ಯವಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಏಕೆಂದರೆ ಪ್ರಕಟಿಸಿದರೆ ಕೆಲವರ ‘ವಿಶ್ವಾಸಾರ್ಹ’ತೆಯನ್ನು ಕಳೆದುಕೊಳ್ಳುವ ಭಯ. ಅದೇನೆ ಇರಲಿ ಸದ್ಯಕ್ಕೆ ಪತ್ರಿಕೆಯ ‘ವಿಶ್ವಾಸಾರ್ಹ’ತೆಯನ್ನು ಪ್ರಶ್ನಿಸುವುದು ಈ ಲೇಖನದ ಕಾಳಜಿ ಅಲ್ಲ.
ಹಿನ್ನೆಲೆ:
ಪ್ರೊ. ಮುಜಾಫ್ಫರ್ ಅಸ್ಸಾಧಿಯವರ “ರಾಜಕಾರಣದ ಲೆಕ್ಕಾಚಾರ ಮತ್ತು ಕಥನ” ಎಂಬ ಲೇಖನವನ್ನು ಪ್ರಜಾವಾಣಿಯಲ್ಲಿ 19-09-2015ರಂದು ಪ್ರಕಟಿಸಲಾಗಿತ್ತು. ಲೇಖನವು ವಸಾಹತುಶಾಹಿ ಪಳೆಯುಳಿಕೆಯಾದ ಜನಗಣತಿ ಮಾದರಿಯನ್ನು ನಿರ್ವಸಾಹತೀಕರಣಗೊಳಿಸುವ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಈ ಜನಗಣತಿ ಮಾದರಿಯು ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ವರ್ಗೀಕರಣಕ್ಕೆ ನಾಂದಿಹಾಡುತ್ತದೆ. ಇದರ ಲಾಭವನ್ನು ಕೋಮುವಾದಿ ರಾಜಕಾರಣವು ತನ್ನದನ್ನಾಗಿಸಿಕೊಳ್ಳುತ್ತದೆ. ಹಾಗಾಗಿ ವಸಾಹತುಶಾಹಿ ನಿರ್ಮಿಸಿದ ಈ ಜನಗಣತಿ ಮಾದರಿಗಳನ್ನು ನಿರ್ವಸಾಹತೀಕರಣಕ್ಕೊಳಪಡಿಸಬೇಕು ಎಂಬುದನ್ನು ವಿವರಿಸಿದ್ದರು. ಡಾ. ಅಜಕ್ಕಳ ಗಿರೀಶ್ ಅಲ್ಪಸಂಖ್ಯಾತ- ಬಹುಸಂಖ್ಯಾತ ಎಂಬ ವರ್ಗೀಕರಣಗಳೂ ವಸಾಹತುಶಾಹಿಯ ಪಳೆಯುಳಿಕೆಗಳೇ ಅಲ್ಲವೇ? ಎಂಬ ಪ್ರಶ್ನೆಯನ್ನು ಎತ್ತಿದ್ದರು. ಆದರೆ ಇಬ್ಬರ ಕಾಳಜಿಯೂ ಭಾರತದಲ್ಲಿನ ಧರ್ಮಾಧಾರಿತ ಪ್ರಕ್ಷುಬ್ಧತೆಗಳನ್ನು, ಸಂಘರ್ಷಗಳನ್ನು ತೊಲಗಿಸಿ, ಅವುಗಳ ನಡುವೆ ಸೌಹಾರ್ಧತೆಯನ್ನು ತರುವುದರ ಕುರಿತೇ ಆಗಿತ್ತು. ಈ ಕಾಳಜಿಯು ಅತ್ಯಂತ ಅಭಿನಂದನಾರ್ಹ ಕೂಡ. ಹಾಗೂ ಇಂದಿನ ತುರ್ತೂ ಕೂಡ. ಏಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ನೋಡಿದರೆ, ‘ಧಾರ್ಮಿಕ’ ಗುಂಪುಗಳ ನಡುವಿನ ವೈರತ್ವಕ್ಕೆ ಕಾರಣವೇನು? ಯಾಕೆ ದಿನೇ ದಿನೇ ಹೆಚ್ಚಾಗುತ್ತಿದೆ? ಎಂಬುದನ್ನು ತಿಳಿಯುವ ಅನಿವಾರ್ಯತೆ ಹಾಗೂ ಅದಕ್ಕೆ ಪರಿಹಾರವನ್ನು ಸೂಚಿಸುವ ಒತ್ತಡ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಅಸ್ಸಾಧಿಯವರು ಹೇಳುವಂತೆ ನಿರ್ವಸಾಹತೀಕರಣದ ಅಗತ್ಯತೆ ಇಂದಿನ ಜರೂರು. ಅದರೆ ಅದು ಅವರು ಸೂಚಿಸುವಂತೆ ಜನಗಣತಿಯ ಮಾದರಿಯಲ್ಲಿ ಮಾತ್ರವಲ್ಲ ಬದಲಾಗಿ ಸೆಕ್ಯುಲರ್ ತತ್ವದಲ್ಲಿಯೇ ಆಗಬೇಕಿದೆ.
ಅಸ್ಸಾಧಿಯವರ ಲೇಖನದ ಕುರಿತ ಚರ್ಚೆಯಲ್ಲಿ, ಡಾ. ಕಿರಣ್ ಎಂ. ಗಾಜನೂರರ ಪ್ರತಿಕ್ರಿಯೆಯೂ ಒಂದು. ಭಾರತೀಯ ಸೆಕ್ಯುಲರ್ ನೀತಿಯು ಮೂಲ ಐರೋಪ್ಯ ತತ್ವಕ್ಕೆ ಪ್ರತಿಯಾಗಿ ರೂಪುಗೊಂಡಿದೆ. ಅದೇನೆಂದರೆ ‘ಪ್ರಭುತ್ವವು ತಟಸ್ಥವಾಗಿರುವುದಲ್ಲ, ಬದಲಾಗಿ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ನೋಡವುದು’. ಈ ನೆಲೆಯಲ್ಲಿ ನೋಡಿದರೆ ‘ಧರ್ಮದ ಕಾರಣಕ್ಕೆ ಯುದ್ಧ ಮಾಡುತ್ತಿರುವ ಶಕ್ತಿಗಳನ್ನು ಮಣಿಸಲು ಸಾಧ್ಯ’ ಎನ್ನುತ್ತಾರೆ. ಆದರೆ ಈ ಸೆಕ್ಯುಲರ್ ನೀತಿಯಿಂದಾಗಿ ಹೇಗೆ ಸೌಹಾರ್ಧ ಸಾಧ್ಯ ಎಂಬುದನ್ನು ಸಾಭೀತುಪಡಿಸುವ ಗೋಜಿಗೆ ಹೋಗದ ಅವರು ಇದನ್ನು ಗ್ರಹಿಸಲು ಅಜಕ್ಕಳರವರು ತಮ್ಮ ‘ಸೀಮಿತ’ ಓದಿನಿಂದ ಹೊರಬರಬೇಕೆಂದು ತೀರ್ಪು ನೀಡುತ್ತಾರೆ.ಆದರೆ ಅವರ ಅಭಿಪ್ರಾಯದಲ್ಲಿಯೇ ಮೂಲಭೂತ ಸಮಸ್ಯೆ ಇದೆ. ನೆಹರೂ ಮಾದರಿ ಪಶ್ಚಿಮದ ತತ್ವದ ಪ್ರತಿರೂಪವಾಗಿದ್ದು, ಅದನ್ನೇ ಭಾರತಕ್ಕೆ ಅಳವಡಿಸಿಕೊಳ್ಳಲಾಗಿರುವುದು ಸ್ಪಷ್ಟ. ಅಂದರೆ ಪಶ್ಚಿಮದ ಅರ್ಥದ ಸೆಕ್ಯುಲರಿಸಂ ಅನ್ನೇ ಅಳವಡಿಸಿಕೊಂಡಿರುವುದು. ಅದೇನೆ ಇರಲಿ, ‘ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುವುದು’ ಎಂಬರ್ಥವೆಂದುಕೊಂಡರೂ ಅಥವಾ ‘ಧರ್ಮಗಳ ಕುರಿತು ತಟಸ್ಥವಾಗಿರುವುದು’ ಎಂದು ಕೊಂಡರೂ ಪ್ರಭುತ್ವಕ್ಕೆ ಅವೆರಡೂ ಅಸಾಧ್ಯ ಎಂಬುದನ್ನು ಗಮನಿಸಬೇಕಿದೆ(ಬಾಲಗಂಗಾಧರ).
ಸರ್ಕಾರ ಸರ್ವ‘ಧರ್ಮ’ಗಳನ್ನು ಸಮಾನವಾಗಿ ನೋಡಲು ಸಾಧ್ಯವೇ?
ಇಲ್ಲಿ ಧರ್ಮ ಎಂದರೆ ರಿಲಿಜನ್ ಎಂಬ ಅರ್ಥ ಎಂಬುದು ಸ್ಪಷ್ಟ. ಈಗ ‘ಹಿಂದೂ’ ಎಂಬುದನ್ನೊಂದು ರಿಲಿಜನ್ ಎಂದು ಪರಿಗಣಿಸಿರೆ, ಹಿಂದೂಗಳು ಬಹುಸಂಖ್ಯಾತರಾಗಿ ಬಿಡುತ್ತಾರೆ. ಬಹುಸಂಖ್ಯಾತರು ಇಲ್ಲಿನ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಶೋಷಣೆ ನಡೆಸುತ್ತವೆ, ಅಲ್ಪಸಂಖ್ಯಾತರ ಅಸ್ತಿತ್ವಕ್ಕೆ ದಕ್ಕೆ ಉಂಟಾಗುತ್ತದೆ ಎಂಬ ನಿಲುವಿಗೆ ಪ್ರಭುತ್ವವು ಅನಿವಾರ್ಯವಾಗಿ ಬರಬೇಕಾಗುತ್ತದೆ. ಅಲ್ಲದೇ ಅಲ್ಪಸಂಖ್ಯಾತ ಪರವಾದ ನೀತಿ ನಿಯಮಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಅಂದರೆ ಧರ್ಮಗಳನ್ನು(ರಿಲಿಜನ್) ಅಸಮಾನವಾಗಿಯೇ ನೋಡುವ ಅಗತ್ಯತೆ ಸೃಷ್ಟಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ತಟಸ್ಥವಾಗಿರುವುದು ಕೂಡ ಅಸಾಧ್ಯ.
ಆಗ ಕೆಲವರು ‘ಹಿಂದೂ’ವನ್ನು ರಿಲಿಜನ್ ಅಲ್ಲ ಎಂದು ಪರಿಗಣಿಸಿದ್ದರಿಂದಾಗಿಯೇ ಸೆಕ್ಯುಲರ್ ನೀತಿಯನ್ನು ಬದಲಾಯಿಸಿ ಅಳವಡಿಸಿಕೊಳ್ಳಲಾಗಿದೆ ಎನ್ನಬಹುದು.ಆದರೆ ಹಾಗೆ ಪರಿಗಣಿಸಿದರೆ, ಹಿಂದೂ ಸಂಪ್ರದಾಯಗಳನ್ನು ಬಿಟ್ಟು, ಉಳಿದ ಕ್ರಿಶ್ಚಿಯನ್, ಇಸ್ಲಾಂಗಳನ್ನು ಮಾತ್ರ ಸಮಾನವಾಗಿ ನೋಡಬೇಕಾಗುತ್ತದೆಯೇ ಹೊರತು ಹಿಂದೂ ಸಂಪ್ರದಾಯಗಳನ್ನಲ್ಲ. ಇಲ್ಲ ರಿಲಿಜನ್‍ಗಳನ್ನು, ಹಿಂದೂ ಮತಸಂಪ್ರದಾಯಗಳನ್ನು ಸಮಾನವಾಗಿ ನೋಡುವುದು ಎಂದರ್ಥ ಎಂದು ವಾದಿಸಬಹುದು. ಆಗ ರಿಲಿಜನ್ನಿನ ಮೂಲ ಗುಣಲಕ್ಷಣಗಳಿಗೂ, ಭಾರತೀಯ ಮತಸಂಪ್ರದಾಯಗಳಿಗೂ ಮೂಲಭೂತ ವ್ಯತ್ಯಾಸಗಳಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಅಂತಹ ಒಂದಂಶವನ್ನು ಇಲ್ಲಿ ಗಮನಿಸುವುದಾದರೆ, ರಿಲಿಜನ್ ತನ್ನ ಮಾರ್ಗವನ್ನು ಸತ್ಯವಾದ ಮಾರ್ಗವೆಂದು, ಉಳಿದವುಗಳೆಲ್ಲಾ ತಪ್ಪು ಮಾರ್ಗಗಳೆಂದು ಪರಿಗಣಿಸುತ್ತದೆ. ಹಾಗಾಗಿ ತಪ್ಪು ಮಾರ್ಗದಲ್ಲಿರುವವರನ್ನು ಸತ್ಯದಾರಿಗೆ ತರುವುದು ರಿಲಿಜನ್ನಿಗೆ ಸೇರಿದವರ ಮೂಲಭೂತ ಕರ್ತವ್ಯವಾಗಲಿದೆ. ಹಾಗಾಗಿ, ಮತಾಂತರ ಮಾಡುವುದು ಅವರ ರಿಲಿಜನ್ನಿನ ಹಕ್ಕಾಗಿರುತ್ತದೆ. ಅದನ್ನು ಪೋಷಿಸುವುದು ಸರ್ಕಾರದ ಕರ್ತವ್ಯವಾಗಲಿದೆ.
ಇನ್ನು ಭಾರತೀಯ ಸಂಪ್ರದಾಯಗಳ ವಿಚಾರಕ್ಕೆ ಬಂದರೆ, ಅವುಗಳೆಂದೂ ತಮ್ಮ ಮಾರ್ಗವೊಂದೇ ಸತ್ಯವಾದುದು, ಉಳಿದವುಗಳು ತಪ್ಪುಮಾರ್ಗಗಳೆಂದು ಪರಿಭಾವಿಸುವುದಿಲ್ಲ. ಈ ಅಂಶವು ವಸಾಹತುಶಾಹಿ ಸಂದರ್ಭದಲ್ಲಿನ ಮಿಶನರಿಗಳ ವರದಿಗಳಿಂದ ಹೆಚ್ಚು ಸ್ಪಷ್ಟವಾಗುತ್ತದೆ. ಭಾರತೀಯರನ್ನು ಎದುರಾದಾಗ ಈ ರೀತಿಯ ಉತ್ತರ ಸರ್ವೇ ಸಾಮಾನ್ಯವಾಗಿತ್ತು: ‘ನಮಗೆ ನಮ್ಮ ದೇವರು ಶ್ರೇಷ್ಟ, ನಿಮಗೆ ನಿಮ್ಮ ದೇವರು ಶ್ರೇಷ್ಟ; ನಿಮ್ಮ ಮಾರ್ಗ ನಿಮಗೆ, ನಮ್ಮ ಮಾರ್ಗ ನಮಗೆ’. ಭಾರತೀಯರ ಈ ಉತ್ತರಗಳು ಇಲ್ಲಿನ ಮತ ಸಂಪ್ರದಾಯಗಳು ಅಂತಿಮ ಸತ್ಯದ ಪ್ರತಿಪಾದನೆ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಗೊಳಿಸುತ್ತದೆ. ಹಾಗಾಗಿ ಮತಾಂತರ ಮಾಡುವುದು ಅವರ ಗುಣವೂ ಅಲ್ಲ, ಅದರ ಅಗತ್ಯವೂ ಇಲ್ಲ. ಹಾಗಾಗಿಯೇ ‘ಘರ್ ವಾಪಾಸಿ’ ಎಂಬುದು ಮರುಮತಾಂತರ ಎಂದಾದರೆ ಭಾರತದ ಸಂದರ್ಭದಲ್ಲಿ ಹಾಸ್ಯಾಸ್ಪದವೇ ಸರಿ. ‘ಅವರವರ ಮಾರ್ಗ ಅವರವರಿಗೆ’ ಎಂಬ ಧೋರಣೆ ಇರುವಲ್ಲಿ ಮತಾಂತರ ಮಾಡುವುದು ಒಪ್ಪತಕ್ಕ ವಿಚಾರವೂ ಅಲ್ಲ. ಮತಾಂತರವು ಇನ್ನೊಂದು ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡಿದಂತಾಗುವುದರಿಂದ ಅದು ಒಪ್ಪತಕ್ಕದ್ದಲ್ಲ.
ಅಂತಹ ಸಂದರ್ಭದಲ್ಲಿ ಪ್ರಭುತ್ವವು ಧಾರ್ಮಿಕ ಹಕ್ಕಿನ ಹೆಸರಿನಲ್ಲಿ ಮತಾಂತರಕ್ಕೆ ಅವಕಾಶ ಕೊಟ್ಟರೆ ಸೆಮೆಟಿಕ್ ರಿಲಿಜನ್‍ಗಳಾದ ಕ್ರಿಶ್ಚಿಯನ್, ಇಸ್ಲಾಂ ಪರವಹಿಸಿದಂತಾಗುತ್ತದೆ. ಇಲ್ಲ ಮತಾಂತರವನ್ನು ನಿಷೇಧಿಸಿದರೆ ಭಾರತೀಯ ಪರಂಪರೆ ಪರವಹಿಸಿ, ಸೆಮೆಟಿಕ್ ರಿಲಿಜನ್‍ಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕಿದಂತಾಗುತ್ತದೆ. ಈ ಎರಡೂ ಸಂದರ್ಭಗಳಲ್ಲಿಯೂ ಪ್ರಭುತ್ವವು ಎಲ್ಲಾ ‘ಧರ್ಮ’ಗಳನ್ನು ಸಮಾನವಾಗಿ ನೋಡುವುದೂ ಸಾಧ್ಯವಿಲ್ಲ, ಹಾಗೆಯೇ ತಟಸ್ಥವಾಗಿರಲೂ ಬರುವುದಿಲ್ಲ.
ಹಿಂದೂ ರಿಲಿಜನ್ ಇಲ್ಲವೆಂದಾದರೆ ಹಿಂದೂ ಮೂಲಭೂತವಿರಲು ಸಾಧ್ಯವೇ?
ಈಗ ‘ಹಿಂದೂ ಎಂಬ ಏಕರೂಪಿ ಸಮುದಾಯ ಇಲ್ಲವೆಂದಾದರೆ ಹಿಂದೂ ಮೂಲಭೂತವಾದ ಹುಟ್ಟಿದ್ದು ಹೇಗೆ?’ ಎಂಬ ಪ್ರಶ್ನೆಯನ್ನು ಅದೇ ಚರ್ಚೆಯಲ್ಲಿ ಎತ್ತಲಾಗಿತ್ತು. ಅದಕ್ಕೂ ಉತ್ತರಿಸುವ ಯತ್ನವನ್ನು ಮಾಡಲಾಗಿದೆ. ‘ಹಿಂದೂ’ ಎಂಬುದನ್ನು ರಿಲಿಜನ್ ಎಂದು ಪರಿಗಣಿಸುವ ಅಥವಾ ಪರಿಗಣಿಸದಿರುವ ಎರಡೂ ಸಂದರ್ಭಗಳಲ್ಲಿಯೂ ಪ್ರಭುತ್ವವು ಸೆಮೆಟಿಕ್ ರಿಲಿಜನ್‍ಗಳ ಪರವಾದ ನಿಲುವನ್ನೇ ವ್ಯಕ್ತಪಡಿಸುತ್ತಿದೆ. ಸೆಕ್ಯುಲರ್ ನೀತಿ ಇಂದಾಗಿ ಪ್ರಭುತ್ವಕ್ಕೆ ಆ ನಿಲುವು ಅನಿವಾರ್ಯವೂ ಆಗಿದೆ. ಅಂದರೆ ಅಲ್ಪಸಂಖ್ಯಾತರಿಗೆ ವಿಶೇಷ ಸವಲತ್ತು, ರಕ್ಷಣೆಯನ್ನು ನೀಡುವುದು, ಹಾಗೂ ಅವರ ಧಾರ್ಮಿಕ ಹಕ್ಕನ್ನು ರಕ್ಷಿಸುವ ಕಾರಣಕ್ಕೆ, ಧರ್ಮಗಳ ವಿಚಾರದಲ್ಲಿ ತಟಸ್ಥವೂ ಆಗಿಲ್ಲದ, ಸಮಾನವೂ ಅಗಿಲ್ಲದ ನಿಲುವು ಪ್ರಭುತ್ವದ್ದಾಗಿದೆ. ಅದರ ಈ ನಿಲುವನ್ನು ಖಂಡಿಸುವುದು ಇಲ್ಲಿನ ಸಂಪ್ರದಾಯಗಳಿಗೆ ಮುಖ್ಯವಾಗುತ್ತದೆ. ಹಾಗಾಗಿಯೇ ಮತಾಂತರದಂತಹ ಕೃತ್ಯಗಳನ್ನು ವಿರೋಧಿಸುವ ಪ್ರವೃತ್ತಿಯು ಪ್ರತಿರೋಧದ ರೂಪದಲ್ಲಿ ವ್ಯಕ್ತವಾಗುತ್ತದೆ. ಆಗ ಸರ್ಕಾರ ತನ್ನ ನೀತಿಯನ್ನು (ಧಾರ್ಮಿಕ ಹಕ್ಕಿನ ರಕ್ಷಣೆ/ಸೆಕ್ಯುಲರ್ ನೀತಿ) ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗುತ್ತದೆ. ಅಂದರೆ ಸೆಕ್ಯುಲರ್ ನೀತಿಯನ್ನು ಇನ್ನೂ ಸಮರ್ಥವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತದೆ. ಆಗ ಭಾರತೀಯ ಮತಸಂಪ್ರದಾಯಗಳ ಪ್ರತಿರೋಧವು ಹೆಚ್ಚಾಗುತ್ತದೆ. ಈ ಪ್ರತಿರೋಧವನ್ನೇ ಹಲವರು ‘ಹಿಂದೂ ಮೂಲಭೂತವಾದ’ ಎಂದು ಕರೆಯುತ್ತಿರುವುದು. ಇದೇ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವುದು. ಇದನ್ನೇ ಹಲವರು ಹಿಂದೂ ರಿಲಿಜನ್ನಿನ ಅಸ್ತಿತ್ವಕ್ಕೂ, ಅದರ ಮೂಲಭೂತವಾದಕ್ಕೂ ಸಾಕ್ಷಿಯನ್ನಾಗಿಸುತ್ತಾರೆ. ಆದರೆ ಈ ಪ್ರತಿರೋಧದ ಅಸ್ತಿತ್ವವು ಹಿಂದೂ ರಿಲಿಜನ್ನಿನ ಅಸ್ತಿತ್ವಕ್ಕೆ ಸಾಕ್ಷಿಯಾಗಲಾರದು. ಆದ್ದರಿಂದಲೇ ಹಿಂದೂರಿಲಿಜನ್ ಇಲ್ಲದಿದ್ದರೂ ಈ ಅರ್ಥದ ‘ಮೂಲಭೂತವಾದ’ ಇರಲು ಸಾಧ್ಯವಾಗಿರುವುದು. ಈ ಪ್ರತಿರೋಧವನ್ನು ಮೂಲಭೂತವಾದಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಮೂಲಭೂತವಾದವು (ಜಿuಟಿಜಚಿmeಟಿಣಚಿಟism) ರಿಲಿಜನ್ನಿನ ಹುಟ್ಟುಗುಣ(ಠಿಡಿoಠಿeಡಿಣಥಿ)ವಾಗಿದ್ದು, ಅದನ್ನು ರಿಲಿಜನ್ನೇ ಪೋಷಿಸುತ್ತದೆ.
ಹಾಗಾಗಿ ಸೆಕ್ಯುಲರಿಸಂ ಮತ್ತು ಹಿಂದೂ ‘ಮೂಲಭೂತವಾದ’(ಪ್ರತಿರೋಧಗಳು) ಎರಡೂ ವೈರಿಗಳಲ್ಲ, ಒಂದೇ ತಾಯಿಯ ಮಕ್ಕಳು. ಈ ಮಕ್ಕಳನ್ನು ರಾಜಕಾರಣದಲ್ಲಿ ಪಕ್ಷಗಳು ತಮಗೆ ಬೇಕಾದಂತೆ ದುಡಿಸಿಕೊಳ್ಳುತ್ತಿವೆಯಷ್ಟೇ. ಕಾಂಗ್ರೆಸ್ ಒಂದನ್ನು ದತ್ತುತೆಗೆದುಕೊಂಡರೆ, ಬಿ.ಜೆ.ಪಿ ಮತ್ತೊಂದನ್ನು ದತ್ತು ತೆಗೆದುಕೊಂಡಿದೆ. ಒಂದು ಸೆಕ್ಯುಲರ್ ರಾಜಕಾರಣ ಎನಿಸಿಕೊಂಡರೆ, ಮತ್ತೊಂದು ಕೋಮುವಾದಿ ರಾಜಕಾರಣವೆನಿಸಿಕೊಳ್ಳುತ್ತದೆ. ಇದರಲ್ಲಿ ಒಂದನ್ನು ಅಪಾಯಕಾರಿ, ಮತ್ತೊಂದನ್ನು ಉಪಕಾರಿ ಎಂದು ತೀರ್ಮಾನಿಸಲು ಸಾಧ್ಯವಿಲ್ಲ.
ಭಾರತೀಯ ಪರಂಪರೆಗಳು ಇಲ್ಲಿನ ರಿಲಿಜನ್‍ಗಳನ್ನು ವೈರಿಗಳೆಂದು ಪರಿಗಣಿಸುವಂತಾಗುವುದಕ್ಕೂ, ಹಾಗೂ ಅವುಗಳ ನಡುವಿನ ಪ್ರಕ್ಷುಬ್ಧತೆಗಳಿಗೂ ಸೆಕ್ಯುಲರ್ ನೀತಿಯೇ ಹೊಣೆ. ಅಂದರೆ ಪಾಶ್ಚಾತ್ಯ ಮತ್ತು ಭಾರತೀಯ ಎರಡೂ ಸೆಕ್ಯುಲರಿಸಂಗಳ ನೆಲೆಯು ನಮ್ಮ ದೇಶದಲ್ಲಿ ‘ಧರ್ಮ’ಸಂಘರ್ಷಗಳನ್ನು ಹೆಚ್ಚಿಸುತ್ತದೆಯೇ ಹೊರತು ಕಡಿಮೆ ಮಾಡುವುದಿಲ್ಲ. ಹಾಗಾಗಿ ಈ ಸಂಘರ್ಷಗಳನ್ನು ನಿವಾರಿಸಬೇಕಾದರೆ, ಜನಗಣತಿಯ ಮಾದರಿಗಳನ್ನು ನಿರ್ವಸಾಹತೀಕರಣಗೊಳಿಸಿದರೆ ಸಾಲದು, ವಸಾಹತು ಸಂದರ್ಭದಲ್ಲಿ ಅಳವಡಿಸಿಕೊಂಡ ಹಲವಾರು ನೀತಿಗಳನ್ನು ನಿರ್ವಸಾಹತೀಕರಣಗೊಳಿಸಬೇಕಿದೆ. ಆ ಮೂಲಕ ಈಗಿನ ಹಲವು ರಾಜಕೀಯ ಸಮಸ್ಯೆಗಳಿಗೆ ಪರಿಹಾರಗಳು ದೊರಕುವ ಸಾಧ್ಯತೆಗಳಿವೆ.
ಪ್ರಜಾವಾಣಿಯಲ್ಲಿ ಪ್ರಕಟವಾಗಲಿಲ್ಲ ಎಂದು ಗೋಳಿಡುವುದರ ಅವಶ್ಯಕತೆ ಇತ್ತಾ?
ರಿಲಿಜನ್ ಪರಿಕಲ್ಪನೆ (ಸೆಮೆಟಿಕ್ ಮಾದರಿಯಲ್ಲಿ)) ಬರುವ ಮೊದಲೇ ಗೋಮಾಂಸ ಭಕ್ಷಣೆಯ ವಿರೋಧಿ ಭಾರತೀಯರಲ್ಲ ಬೆಳೆದಿದ್ದಿರಬಹುದು. ಎಲ್ಲದಕ್ಕೂ ಗ್ರಂಥ ಉಲ್ಲೇಖಿಸಿ ತರ್ಕ ಆಚರಣೆಗಳನ್ನು ಅನುಷ್ಠಾನಕ್ಕೆ ತರುವ ಸಂಸ್ಕೃತಿ ಇಲ್ಲಿಯದಲ್ಲ. ಸಮಸ್ಯೆಗಳನ್ನು,, ಜಿಜ್ಞಾಸೆ ಬಂದಾಗ ಗ್ರಂಥಗಳು ದಾರಿ ತೋರಿರಬಹುದು.
ಎಷ್ಟೋ ಬಾರಿ ಸಮಾಜದ ಹಿತಚಿಂತಕರು ಒಂದು ಪದ್ಧತಿ ಅನುಷ್ಠಾನ ಮಾಡಿ ಅದಕ್ಕೆ ಧಾರ್ಮಿಕ ಅಧಿಕೃತತೆ ಕೊಟ್ಟಿರಬಹುದು.
ಜೈನರ ಅಹಿಙಸಾಮಾರ್ಗ,ಶಾಖಾಹಾರಿ ಪದ್ಧತಿಯ ಬೆಳವಣಿಗೆಯನ್ನು ಈ ನಿಟ್ಟಿನಲ್ಲಿ ನೋಡಬಹುದು.
ಗೋಳಾಟದಂತೆ ನನಗೆ ಕಾಣಲಿಲ್ಲ, ವಸ್ತು ನಿಷ್ಠ ನಿರೂಪಣೆಯ ರೀತಿಯಲ್ಲಿ ಕಂಡಿತು.
ಕುಚೋದ್ಯದ ಮನಸ್ಥಿತಿ ಇಟ್ಟು ನೋಡಿದರೆ ಗೋಳಾಟ ಅನ್ನಿಸಬಹುದೇನೋ!
ನನ್ನ ಪೀಠಿಕೆಯಲ್ಲಿ ‘ಗೋಳಾಟ’ ಕಂಡರೆ ಅದು ನಿಮ್ಮ ದೋಷವೇ ಹೊರತು, ನನ್ನದಲ್ಲ. ಆದರೆ ಅದನ್ನು ಪ್ರಸ್ತಾಪಿಸುವ ಅಗತ್ಯ ಇತ್ತು. ಏಕೆಂದರೆ, 1. “ಕರ್ನಾಟಕದ ವಿಶ್ವಾಸಾರ್ಹ ಸುದ್ಧಿ ಮಾಧ್ಯಮ” ಚರ್ಚೆಯೊಂದನ್ನು ಎತ್ತಿ ಕೊಂಡಾಗ, ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸಬೇಕಾಗುತ್ತದೆ. ಇಲ್ಲದಿದ್ದರೆ ಅದರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗುತ್ತದೆ. 2. ಪ್ರಜಾವಾಣಿಗೆ ಬರೆದ ಪ್ರತಿಕ್ರಿಯೆಯೇ ಆಗಿರುವುದರಿಂದ ಅದನ್ನು ಉಲ್ಲೇಖಿಸುವುದು ನನ್ನ ಕರ್ತವ್ಯ.
ಚರ್ಚೆಗೆ ಅವಕಾಶ ಕೊಡದ ಮೇಲೆ “ಚರ್ಚೆ” ಅನ್ನೋ ಟ್ಯಾಗ್ ನಲ್ಲಿ ಸೆಕ್ಯುಲರ್ ಅಂದ್ರೇನೂ ಅಂತನೇ ಗೊತ್ತಿಲ್ಲದ ‘ಕಾಪಿಪೇಸ್ಟ್’ ಸಂಶೋಧಕನ ಅಸಂಬದ್ದವನ್ನ ಮಾತ್ರ ಯಾವ ಸ್ತ್ರೀ/ಪರುಷಾರ್ಥಕ್ಕಾಗಿ ಪ್ರಕಟಿಸಬೇಕಿತ್ತು???
“ಹಾಗಾಗಿಯೇ ಮತಾಂತರದಂತಹ ಕೃತ್ಯಗಳನ್ನು ವಿರೋಧಿಸುವ ಪ್ರವೃತ್ತಿಯು ಪ್ರತಿರೋಧದ ರೂಪದಲ್ಲಿ ವ್ಯಕ್ತವಾಗುತ್ತದೆ. ಆಗ ಸರ್ಕಾರ ತನ್ನ ನೀತಿಯನ್ನು (ಧಾರ್ಮಿಕ ಹಕ್ಕಿನ ರಕ್ಷಣೆ/ಸೆಕ್ಯುಲರ್ ನೀತಿ) ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಾಗುತ್ತದೆ. ಅಂದರೆ ಸೆಕ್ಯುಲರ್ ನೀತಿಯನ್ನು ಇನ್ನೂ ಸಮರ್ಥವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತದೆ. ಆಗ ಭಾರತೀಯ ಮತಸಂಪ್ರದಾಯಗಳ ಪ್ರತಿರೋಧವು ಹೆಚ್ಚಾಗುತ್ತದೆ. ಈ ಪ್ರತಿರೋಧವನ್ನೇ ಹಲವರು ‘ಹಿಂದೂ ಮೂಲಭೂತವಾದ’ ಎಂದು ಕರೆಯುತ್ತಿರುವುದು.”
ಗೋಮಾಂಸ ಭಕ್ಷಣೆಯ ವಿರೋಧವನ್ನು ಯಾವ ರೀತಿ ವ್ಯಾಖ್ಯಾನಿಸುವಿರಿ? ಅದು ಸೆಕ್ಯುಲರೀಕರಣದ ನೀತಿಯ ಪರಿಣಾಮವೇ?
ಹೌದು.. ಸೆಕ್ಯುಲರ್ ನೀತಿಗೆ ಪ್ರತಿರೋಧವನ್ನು ಮಾಡುವ ಒಂದು ಮಾದರಿ ಎಂದರೆ ತಮ್ಮದೂ ರಿಲಿಜನ್ ಎಂದು ತೋರ್ಪಡಿಸುವುದು. ರಿಲಿಜನ್ನಾಗಿ ಮಾಡುವ ವ್ಯರ್ಥ ಪ್ರಯತ್ನದ ಒಂದು ತುಣುಕು ಈ ಗೋಮಾಂಸ ಭಕ್ಷಣೆಯ ವಿರೋಧ.
ಸರಿ. ರಿಲಿಜನ್ನಾಗಿ ಮಾಡುವ ಪ್ರಯತ್ನ ಗೋಮಾಂಸ ವಿರೋಧವನ್ನು ಹುಟ್ಟುಹಾಕಿತು ಎಂದರೆ ಭಾರತೀಯ ಸಂಪ್ರದಾಯವು ತಾನು ಕಂಡುಕೊಂಡ ರಿಲಿಜಿಯನ್ ನಲ್ಲಿ ಗೋಮಾಂಸದ ನಿಷೇಧವನ್ನು ಸೃಷ್ಟಿಸಿಕೊಂಡಿತು ಎಂದಾಯಿತು. ಹಾಗಾಗಲು ಕಾರಣಗಳೇನು? ಭಾರತೀಯ ಸಂಪ್ರದಾಯದಲ್ಲಿ ಗೋಮಾಂಸ ನಿಷೇಧವಾಗಿತ್ತೆ? ಅಥವಾ ಯಾವುದಾದರೂ ಗ್ರಂಥದ ಮೊರೆ ಹೋಯಿತೆ?
ನಿಷೇಧವಿದ್ದಂತಿಲ್ಲ. ಹಲವು ಸಂಪ್ರದಾಯಗಳ/ಗುಂಪುಗಳ ಆಹಾರ ಕ್ರಮದಲ್ಲಿ ಗೋಮಾಂಸ ಸೇವನೆ ಇರಲಿಲ್ಲವಷ್ಟೇ.. ರಿಲಿಜನ್ ಮಾಡುವ ಪ್ರಕ್ರಿಯೆಯಲ್ಲಿ ಗ್ರಂಥದ ಮೊರೆಹೋಗುವುದು ಸಾಮಾನ್ಯ. ಈ ವಿಚಾರದಲ್ಲಿಯೂ ಹಾಗೇ ಆಗಿದೆ..
ಯಾವ ಗ್ರಂಥದ ಮೊರೆ ಹೋಗಲಾಗಿದೆ?
ಈ ಯಮ್ಮ/ಪ್ಪಂದು ಟ್ರೋಲಿಂಗೋ ಟ್ರೋಲಿಂಗು … 🙂 ಗೋಮಾಂಸ ಭಕ್ಷಣೆ ಬಗ್ಗೆ ಈ ಗುಂಪ್ನೋರು ಏನ್ ಹೇಳ್ತಾರಂತೆ ಒಸಿ ಇಲ್ಲಿ ಓದ್ಕೋ ಹೋಗಮ್ಮ/ಪ್ಪ!!!! 🙂
https://cslcku.wordpress.com/2015/06/10/%E0%B2%85%E0%B2%82%E0%B2%95%E0%B2%A3-%E0%B2%A8%E0%B2%B5%E0%B2%A8%E0%B3%80%E0%B2%A4-20/
ಈ ಯಮ್ಮ/ಪ್ಪಂದು ಟ್ರೋಲಿಂಗೋ ಟ್ರೋಲಿಂಗು … 🙂 ಗೋಮಾಂಸ ಭಕ್ಷಣೆ ಬಗ್ಗೆ ಈ ಗುಂಪ್ನೋರು ಏನ್ ಹೇಳ್ತಾರಂತೆ ಒಸಿ ಇಲ್ಲಿ ಓದ್ಕೋ ಹೋಗಮ್ಮ/ಪ್ಪ!!!! 🙂
_https://cslcku.wordpress.com/2015/06/10/%E0%B2%85%E0%B2%82%E0%B2%95%E0%B2%A3-%E0%B2%A8%E0%B2%B5%E0%B2%A8%E0%B3%80%E0%B2%A4-20/
ನನ್ನ ಪ್ರಶ್ನೆ ‘ನಿಮ್ಮ ಗುಂಪಿನವರು ಗೋಹತ್ಯೆ ಬಗ್ಗೆ ಏನು ಹೇಳುತ್ತಾರೆ’ ಎನ್ನುವದಲ್ಲ. ಪ್ರವಿಣ್ ಅವರು ಈ ಮೇಲೆ ಹೀಗೆ ಬರೆದಿದ್ದಾರೆ “ರಿಲಿಜನ್ ಮಾಡುವ ಪ್ರಕ್ರಿಯೆಯಲ್ಲಿ ಗ್ರಂಥದ ಮೊರೆಹೋಗುವುದು ಸಾಮಾನ್ಯ. ಈ ವಿಚಾರದಲ್ಲಿಯೂ ಹಾಗೇ ಆಗಿದೆ” ಎನ್ನುತ್ತಾರೆ. ಹಾಗಿದ್ದರೆ ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿ ಯಾವ ಗ್ರಂಥದ ಮೊರೆ ಹೋಗಿದ್ದಾರೆ ಎನ್ನುವದು ನನ್ನ ಪ್ರಶ್ನೆ.
ಈ ಯಪ್ಪ/ಮ್ಮಂದು ಎಷ್ಟು ಚಾಣಾಕ್ಷ (ಕೇಡು)ಬುದ್ದಿ ಎಂದರೆ ಒಂದು ಪತ್ರಿಕೆಯಲ್ಲಿ ಸೆಕ್ಯುಲರಿಸಂಗೆ ಸಂಬಂದಿಸಿದ ಚರ್ಚೆಯಲ್ಲಿ ಎತ್ತಿದ ವಿಚಾರಗಳ ಕುರಿತು ಇರುವ ಲೇಖನವನ್ನು ತಲೆಬುಡ ಇಲ್ಲದ ಇನ್ನಾವುದೋ ವಿಚಾರವನ್ನು ಪ್ರಸ್ತಾಪಿಸತ್ತೆ … 🙂 ಅದಕ್ಕೇನಾದರೂ ಪ್ರತಿಕ್ರಿಯಿಸಿದಿರೋ ಮುಗಿಯಿತು … ಅಲ್ಲಿಂದ ಲೇಖನದ ವಿಚಾರವನ್ನು ಬದಿಗೆ ಸರಿಸಿ ಇಡೀ ಚರ್ಚೆಯನ್ನೇ ಹಳ್ಳಹಿಡಿಸಿಕೊಂಡು “ಅದಕ್ಕೇನಂತೀರಿ?… ಇದಕ್ಕೇನಾಧಾರ?…. ಇದನ್ನ ಬಾಲಗಂಗಾಧರರು ಹೇಳಿಯೇ ಇಲ್ಲ… ” ಅಂತ ವರಾತ ಸುರು ಹಚ್ಕೋತು ಅಂದ್ರೆ ಅಲ್ಲಿಗೆ ಚರ್ಚೆಯ ವಿಚಾರ ಮಠಾಶ್!! 🙂 🙂
ಇದರಲ್ಲಿ ಇನ್ಯಾವುದೋ ವಿಷಯವನ್ನು ಎಲ್ಲಿ ಪ್ರಸ್ತಾಪಿಸಲಾಗಿದೆ? ಈ ಲೇಖನದಲ್ಲಿ ಸೆಕ್ಯುಲರ್ ನೀತಿ ಹೇಗೆ ಹಿಂದು ಮೂಲಭೂತವಾದವನ್ನು ಹುಟ್ಟು ಹಾಕಿದೆ ಎಂದು ವಿವರಿಸಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ಕೊಡುತ್ತಾ, ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿ ಗ್ರಂಥದ ಮೊರೆ ಹೋಗಿದ್ದಾರೆ ಎಂದು ಪ್ರವೀಣ್ ಹೇಳಿದ್ದಾರೆ. ಹಾಗಿದ್ದರೆ ಯಾವ ಗ್ರಂಥದ ಮೊರೆ ಹೋದರು ಎನ್ನುವದು ನನ್ನ ಸಧ್ಯದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಲಾಗದಿದ್ದರೆ ಲೇಖನದ ವಿವರಣೆ ತೋಪಾಗುತ್ತದೆ.
ಅಷ್ಟಕ್ಕೂ ನಿಮ್ಮ ಉತ್ತರದಲ್ಲಿ ಬಾಲಗಂಗಾಧರರ ವಿವರಣೆಯನ್ನುನಿರೀಕ್ಷಿಸುವದರಲ್ಲಿ ತಪ್ಪೇನಿದೆ. ನಿಮ್ಮ ಉತ್ತರದಲ್ಲಿ ಬಾಲಗಂಗಾಧರರ ವಿವರಣೆ (ಅದೇ ವಿವರಣೆ: ಎಲ್ಲವೂ ಕ್ರಿಶ್ಚಿಯನ್ ಥಿಯಾಲಜಿಯಿಂದ ಬಂದದ್ದು ಎನ್ನುವದು) ಇಲ್ಲದೆ ಸ್ವಂತ ವಿವರಣೆಯಾದರೆ ಒಳ್ಳೆಯದೇ.
ಲೇಖನಕ್ಕೆ ಸಂಬಂಧಿಸಿರದ ವಿಷಯದ ಚರ್ಚೆ ಮಾಡತಕ್ಕದ್ದಲ್ಲ.ಇದನ್ನು ಯಾರೂ ಪುರಸ್ಕರಿಸಬಾರದು
ರಿಲಿಜನ್ ಪರಿಕಲ್ಪನೆ (ಸೆಮೆಟಿಕ್ ಮಾದರಿಯಲ್ಲಿ)) ಬರುವ ಮೊದಲೇ ಗೋಮಾಂಸ ಭಕ್ಷಣೆಯ ವಿರೋಧಿ ಭಾರತೀಯರಲ್ಲ ಬೆಳೆದಿದ್ದಿರಬಹುದು. ಎಲ್ಲದಕ್ಕೂ ಗ್ರಂಥ ಉಲ್ಲೇಖಿಸಿ ತರ್ಕ ಆಚರಣೆಗಳನ್ನು ಅನುಷ್ಠಾನಕ್ಕೆ ತರುವ ಸಂಸ್ಕೃತಿ ಇಲ್ಲಿಯದಲ್ಲ. ಸಮಸ್ಯೆಗಳನ್ನು,, ಜಿಜ್ಞಾಸೆ ಬಂದಾಗ ಗ್ರಂಥಗಳು ದಾರಿ ತೋರಿರಬಹುದು.
ಎಷ್ಟೋ ಬಾರಿ ಸಮಾಜದ ಹಿತಚಿಂತಕರು ಒಂದು ಪದ್ಧತಿ ಅನುಷ್ಠಾನ ಮಾಡಿ ಅದಕ್ಕೆ ಧಾರ್ಮಿಕ ಅಧಿಕೃತತೆ ಕೊಟ್ಟಿರಬಹುದು.
ಜೈನರ ಅಹಿಙಸಾಮಾರ್ಗ,ಶಾಖಾಹಾರಿ ಪದ್ಧತಿಯ ಬೆಳವಣಿಗೆಯನ್ನು ಈ ನಿಟ್ಟಿನಲ್ಲಿ ನೋಡಬಹುದು.
ನಿಮ್ಮ ಈ ನಿಲುಮೆಯು ಚೆನ್ನಾಗಿದೆ. ಇದರ ಒಂದು ಆಂಗ್ಲಭಾಷೆಯ ಅವತರಣಿಕೆಯನ್ನು ಏಕೆ ನಮ್ಮ ಕೇಂದ್ರ ಸರ್ಕಾರದ ಗಮನಕ್ಕೆ ತರಬಾರದು? ಬಹುಶಃ ಇದರಿಂದ ನಮ್ಮ ಈ ಅಪಭ್ರಂಶಗೊಂಡಿರುವ ಸಮಾಜವನ್ನು ತಿದ್ದಲು ಸಹಕಾರಿಯಾಗಬಹುದೇನೋ?
ಪ್ರಿಯ ಫೇಕಾನಂದರೇ, ಗ್ರಂಥ ಗಳು ಇಂತಿವೆ: ಸಂಸ್ಕಾರ, ಭಾರತೀಪುರ, ಕುಸುಮಬಾಲೆ, ಇತ್ಯಾದಿ. .
ನೀವು ಲೇಖನವನ್ನು ಬರೆದಿರುವಾಗ ಸಾಮಾಜಿಕ ಸ್ಥಿತಿಯನ್ನು ಗಂಭೀರವಾಗಿಯೇ ಪರಿಗಣಿಸಿ ಬರೆದಿರಬಹುದೆಂದು ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ಆದರೆ ನಿಮ್ಮ ಈ ಉತ್ತರ ಅದನ್ನು ಹುಸಿ ಮಾಡಿದೆ. ನಿಮ್ಮ ಅಧ್ಯಯನದಲ್ಲಿ, ನೀವು ನಂಬಿದ ಸಂಶೋಧನೆಯಲ್ಲಿ ನಿಮಗೆ ವಿಶ್ವಾಸ ಇಲ್ಲದಿರುವದು ಇದಕ್ಕೆ ಕಾರಣವಿರಬಹುದು. ಒಟ್ಟಿನಲ್ಲಿ ಇದು ಬಾಲಗಂಗಾಧರರ ಸಂಶೋಧನೆಗೆ ಶಿಷ್ಯಕೋಟಿಗಳಿಂದಲೆ ಆದ ಅವಮಾನ. ಬುದ್ದಿಜೀವಿಗಳೊಂದಿಗೆ ಸೆಣಸಾಡುವಾಗ ಚರ್ಚೆಗೆ ಬಾರದಿದ್ದರಿಂದ ಅವರನ್ನು ಪಲಾಯನವಾದಿಗಳು ಎನ್ನುವ ನೀವು ಈಗ ಅವರಿಗಿಂತಲೂ ಭಿನ್ನವೇನಿಲ್ಲ. ಬುದ್ದಿಜೀವಿಗಳ ಮೌಡ್ಯವನ್ನು ಬಯಲಿಗೆಳೆದಿದ್ದೆವೆ ಎನ್ನುವ ನೀವು ನಿಮ್ಮ ಸಂಶೋಧನೆಯ ಬಗ್ಗೆ ಪ್ರಶ್ನಿಸಿದಾಗ ಹಿಡಿಯುವ ದಾರಿಯೂ ಬುದ್ಧಿಜೀವಿಗಳಿಗಿಂತ ಭಿನ್ನವಾಗಿಲ್ಲ.
ಧನ್ಯವಾದ.
ಪ್ರಶ್ನೆ ಕೇಳುವ ರೀತಿಯೇ ಸೂಚಿಸುತ್ತದೆ ಕೆಲವರ ಚರ್ಚೆ ಮಾಡುವ ತುಡಿತ ಎಂದದ್ದು ಎಂಬುದನ್ನು. ..1. ನಿಜವಾದ ತುಡಿತ ಇರುವವರು ಫೇಕ್ ಆಗಿರುವುದಿಲ್ಲ. ಇದು ನೀವೆಷ್ಟು ಗಂಭೀರವಾಗಿದ್ದೀರ ಎಂಬುದನ್ನು ತಿಳಿಸುತ್ತದೆ. 2. ನಮ್ಮ ಚರ್ಚೆಗೆ ಯಾವ ಗ್ರಂಥ ಎಂಬುದು ಮುಖ್ಯವಾಗಿರಲಿಲ್ಲ. ಹಾಗಾಗಿ ನನ್ನ ಉತ್ತರ ಭಿನ್ನವಾಗಿತ್ತು.
ಬಾಲುರವರಿಗೆ ಹೇಗೆ ಗೌರವ ಸಲ್ಲಿಸಬೇಕೆಂಬುದನ್ನು ನಿಮ್ಮಿಂದ ಕಲಿಯುವ ಅಗತ್ಯ ಅವರ ಶಿಷ್ಯಕೋಟಿಗಳಿಗಿಲ್ಲ.
“ಪ್ರಶ್ನೆ ಕೇಳುವ ರೀತಿಯೇ ಸೂಚಿಸುತ್ತದೆ ಕೆಲವರ ಚರ್ಚೆ ಮಾಡುವ ತುಡಿತ ಎಂದದ್ದು ಎಂಬುದನ್ನು”
ಒಬ್ಬ ಒಂದು ವಿಷಯವನ್ನು ಸಂಶೋಧಿಸಿದಾಗ ಅದನ್ನು ವಿಮರ್ಶೆಗೊಳಪಡಿಸಲು ಯಾವ ತುಡಿತ ಹೊಂದಿರಬೇಕು ಎನ್ನುವದು ಮುಖ್ಯವಾಗಿರುವದಿಲ್ಲ. ಸಂಶೋಧನಾತ್ಮಕ ನಿಲುವು ಇರಬೇಕು ಅಷ್ಟೆ. ಡಾರ್ವಿನ್ ವಿಕಾಸವಾದ ಮಂಡಿಸಿದಾಗ ಅದನ್ನು ವಿರೋಧಿಸಲು ಅಥವಾ ಒಪ್ಪಲು ವೈಜ್ಞಾನಿಕ ಕಾರಣಗಳು ಮುಖ್ಯವಾಗುತ್ತದೆಯೇ ಹೊರತು ತುಡಿತ ಬಡಿತ ಗಳಲ್ಲ. ‘ನೀನು ಡಾರ್ವಿನ್ ವಾದವನ್ನು ವಿರೋಧಿಸುವಂತಿಲ್ಲ, ಯಾಕೆಂದರೆ ನಿನ್ನ ತುಡಿತ ಸರಿಯಿಲ್ಲ’ ಎನ್ನುವದು ಮೂರ್ಖತನವಾಗುತ್ತದೆ. ನಿಮ್ಮಲ್ಲಿ ಸರಿಯಾದ ಉತ್ತರವಿದ್ದಿದ್ದರೆ ಫೇಕ್ ಪ್ರೊಫೈಲ್ ಗಾದರೂ ಉತ್ತರಿಸುತ್ತಿದ್ದೀರಿ. ಅಲ್ಲದೆ ಒಂದಂಕಿ ಶಿಷ್ಯಕೋಟಿಗಳೆ ನೂರಾರು ಫೇಕ್ ಅಕೌಂಟ್ ಗಳಲ್ಲಿ ಇಲ್ಲಿ ಬಂದು ಉತ್ತರಿಸುತ್ತಿದ್ದಾರೆ.
“ನಮ್ಮ ಚರ್ಚೆಗೆ ಯಾವ ಗ್ರಂಥ ಎಂಬುದು ಮುಖ್ಯವಾಗಿರಲಿಲ್ಲ. ಹಾಗಾಗಿ ನನ್ನ ಉತ್ತರ ಭಿನ್ನವಾಗಿತ್ತು.”
ಯಾಕೆ ಮುಖ್ಯವಾಗುವದಿಲ್ಲ? ರಿಲಿಜಿಯನ್ ಎಂದರೆ ಪ್ರಾಫೆಟ್ , ಸ್ಕ್ರಪ್ಚರ್ ಹಾಗೂ ಅದನ್ನು ನಿರ್ವಹಿಸುವ ಸಂಸ್ಥೆ, ವ್ಯವಸ್ಥೆ ಇರಬೇಕೆಂದು ನೀವೆ ಹೇಳುತ್ತೀರಿ. ‘ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆ ನಡೆದಿದೆ’ ಎಂದು ನೀವು ಎನ್ನುತ್ತಿರುವಿರೆಂದಾದರೆ ರಿಲಿಜಿಯನ್ ಅನ್ನು ರೂಪಿಸುವ ಈ ಮೇಲಿನ ಅಂಶಗಳ (ಪ್ರಾಫೆಟ್ , ಸ್ಕ್ರಪ್ಚರ್ ಹಾಗೂ ಅದನ್ನು ನಿರ್ವಹಿಸುವ ಸಂಸ್ಥೆ, ವ್ಯವಸ್ಥೆ ) ಬಗ್ಗೆ ನಿಮಗೆ ಸ್ಪಷ್ಟ ಮಾಹಿತಿ ಇರಬೇಕಲ್ಲವೇ?ಇಲ್ಲದಿದ್ದರೆ ಅದು ಸಂಶೋಧನೆ ಹೇಗಾಗುತ್ತದೆ? ಬುದ್ದಿಜೀವಿಗಳನ್ನು ಆರೋಪಿಸುವ ನೀವುಗಳು ಅವರಿಗಿಂತ ಭಿನ್ನವಾಗಳು ಸಾಧ್ಯವಿಲ್ಲ.
ಮಂಕುದಿಣ್ಣೆಗಳು ಟ್ರೋಲ್ ಗಳ ಜೊತೆಗೆಲ್ಲಾ ಕೆಲಸವಿಲ್ಲದ ಬಡಗಿ ಕೆತ್ಕೊಂಡು ಕೂತ್ಕೋಬಹುದಷ್ಟೇ.
ಯಾವ ಗ್ರಂಥ ಅಂತೆ ಯಾವ ಗ್ರಂಥ! 🙂 ಒಂದು ತಲೆ ವೇದ ಅನ್ನತ್ತೆ, ಇನ್ನೊಂದು ಭಗವದ್ಗೀತೆ ಅನ್ನತ್ತೆ, ಮತ್ತೊಂದು ಸ್ಮೃತಿ ಪುರಾಣಗಳು ಅಂದ್ರೆ, ಇನ್ಕೆಲವು ನಮಗೆ ಒಂದೇ ಅಲ್ಲ ಇವೆಲ್ಲವೂ ಮಾತ್ರ ಅಲ್ಲ ಇನ್ನೂ ಅಷ್ಟು ಇವೆ ಅಂತ ಬಡ್ಕೋತಾ ಬರ್ತಿವೆ, ಅಲ್ವಾ? ಅವೆಲ್ಲಾ ಗೊತ್ತಿಲ್ದಿರೋ ಪೆದ್ದಿ/ದ್ದ ನಾ ಈ ಯಪ್ಪ/ಮ್ಮ? ಇದರದ್ದು ನಾಟಕನೋ ಇಲ್ಲ ಮಾಡಕ್ಕೆ ಕ್ಯಾಮೆ ಇಲ್ದೆ ಇರೋ ಹುಚ್ಚಾಟ ಆಡೋ ಛಟನೋ? ಸುಮ್ಕೆ ಈ ಅಡ್ಡಕಸಬುಗಳಿಗೆ ಟೈಮ್ ವೇಸ್ಟ್ ಮಾಡದೆ ನಿಮ್ ಕೆಲಸ ನೋಡ್ರಪ್ಪ!
“ಯಾವ ಗ್ರಂಥ ಅಂತೆ ಯಾವ ಗ್ರಂಥ! 🙂 ಒಂದು ತಲೆ ವೇದ ಅನ್ನತ್ತೆ, ಇನ್ನೊಂದು ಭಗವದ್ಗೀತೆ ಅನ್ನತ್ತೆ, ಮತ್ತೊಂದು ಸ್ಮೃತಿ ಪುರಾಣಗಳು ಅಂದ್ರೆ, ಇನ್ಕೆಲವು ನಮಗೆ ಒಂದೇ ಅಲ್ಲ ಇವೆಲ್ಲವೂ ಮಾತ್ರ ಅಲ್ಲ ಇನ್ನೂ ಅಷ್ಟು ಇವೆ ಅಂತ ಬಡ್ಕೋತಾ ಬರ್ತಿವೆ, ಅಲ್ವಾ?”
ಗುಡ್. ಈಗ ಇಂತಹ ಉತ್ತರಗಳನ್ನು ನಿಮ್ಮ ರಿಲಿಜಿಯನ್ ವಿವರಣೆಯ ಜೊತೆ ತಾಳೆ ನೋಡಿ. ಸರಿ ಹೊಂದುತ್ತದಾ? ಇಲ್ಲವಲ್ಲ. ರಿಲಿಜಿಯನ್ ಪ್ರಕ್ರಿಯೆಯಲ್ಲಿ ಭಾರತೀಯ ಸಂಸ್ಕೃತಿ ತೊಡಗಿದ್ದರೆ ಯಾವುದೋ ಒಂದು ಗ್ರಂಥವನ್ನು ಮಾತ್ರ ಪ್ರಮಾಣೀಕರಿಸುತ್ತಿದ್ದರು, ಆ ಗ್ರಂಥದ ವಿವರಣೆಯನ್ನು ಕಾರ್ಯರೂಪಕ್ಕೆ ತರಲು ಸಂಸ್ಥೆ ಕಾರ್ಯ ನಿರ್ವಹಿಸುತ್ತಿತ್ತು. ಆ ಸಂಸ್ಥೆಯೊಂದು ಇದೆಯೇ? ಆದರೆ ಏಕ ಗ್ರಂಥವನ್ನು, ಏಕ ದೇವನನ್ನು ಪ್ರಮಾಣ ಎಂದು ಸಮಗ್ರವಾಗಿ ಒಪ್ಪಿಕೊಳ್ಳದಿದ್ದಾಗ ಹಾಗೂ ಅದನ್ನು ಕಾರ್ಯರೂಪಕ್ಕೆ ತರಲು ಒಂದು ಸಂಸ್ಥೆ ಎನ್ನುವದು ಇರದಿರುವಾಗ ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಹೇಗೆ ಆರೋಪಿಸುತ್ತೀರಿ?
ಈ ಪ್ರಜ್ನೆಯ ತಿಳಿವಳಿಕೆ ಅಗಾಧವಾದುದು! ವಸಾಹತುಶಾಹಿ ಪ್ರಜ್ನೆಯ ಪಳೆಯುಳಿಕೆ ಇನ್ನೂ ಇದೆ ಎಂಬುದಕ್ಕೆ ಈ ಪ್ರಜ್ನೆಗಿಂತ ಬೇರೆ ಪುರಾವೆಯೇ ಬೇಕಿಲ್ಲ. ಪ್ರೀಸ್ಟ್ ಹುಡ್ ಗೆ ಪರ್ಯಾಯವಾಗಿ “ಪುರೋಹಿತಶಾಹಿ”ಯನ್ನೂ ನಿರ್ದಿಷ್ಟ ಕಾನೂನು ಗ್ರಂಥವೆಂದು ಮನುಸ್ಮೃತಿಯನ್ನೂ ಹೈ ಕಲ್ಚರ್ ಗೆ ಬ್ರಾಹ್ಮಣರನ್ನೂ ಲೋ ಕಲ್ಚರ್ ಗೆ ಶೂದ್ರರನ್ನೂ ಅನ್ವಯಿಸಿ ಇತಿಹಾಸ ರಚಿಸಿ ಅದನ್ನೇ ಬಿಂಬಿಸುತ್ತ ಬಂದಿರುವುದು; ಅರ್ಥಶಾಸ್ತ್ರದ ಸಬಲ ಮತ್ತು ದುರ್ಬಲ ರಾಜರ ಮೈತ್ರಿ ನೀತಿಯನ್ನು ವರ್ಗ ಸಂಘರ್ಷವೆಂದು (ಆಲಿವೆಲ್, ೨೦೦೨; ಮತ್ತು ಟೇಲರ್ ೨೦೦೭), ಸಸ್ಯಾಹಾರವನ್ನು ಮಾಂಸಾಹಾರಕ್ಕಿಂತ ಶ್ರೇಷ್ಠವೆಂದು ಬಿಂಬಿಸಲು ಪಂಚತಂತ್ರ ಹುನ್ನಾರ ನಡೆಸಿದೆ ಎನ್ನುತ್ತ ಹಿರಣ್ಯ (ಇಲಿ) ಮತ್ತು ಲಘುಪತನಕ (ಕಾಗೆ)ರ ಸಂವಾದವನ್ನು ರಿಲೀಜಿಯಸ್ ನೆಲೆಯಲ್ಲಿ ಇನ್ನೂ ಸ್ಥಾಪಿಸಲು ಯತ್ನಿಸುವುದು-ಇಂಥ ನೂರಾರು ನಿದರ್ಶನಗಳಿವೆ. ಭಾರತದ ವೈವಿಧ್ಯದ ಸಂಸ್ಕೃತಿಯನ್ನು ಏಕ ಗ್ರಂಥ, ಏಕ ನಿಯಾಮಕ ಇತ್ಯಾದಿಗಳಿಂದ ಏಕರೂಪಗೊಳಿಸುವ ನಿರಂತರ ವೈವಿಧ್ಯಮಯ ಯತ್ನಗಳಿವು ಅನಿಸದೇ? ಭಗವದ್ಗೀತೆ, ಪುರಾಣ…ಹೀಗೆ ಏನೆಲ್ಲವನ್ನೂ ಇಂಥ ಸಮರ್ಥನೆಗೆ ಬಳಸಿಕೊಳ್ಳಲಾಗಿದೆ. ನಮ್ಮ ದೇಶದ ವೈವಿಧ್ಯದಂತೆಯೇ ಈ ಯತ್ನಗಳೂ ಇವೆ ಎಂಬುದು ಸುಳ್ಳಲ್ಲ…ಹೀದನ್ ಓದಿ…ಪೂರ್ವಾವಲೋಕನ ಓದಿ.
ಮೇಷ್ಟ್ರೇ , ಎಲ್ಲಾನೂ ಸುಳ್ಳುಸುಳ್ಳೇ ಓದಿದೆಯಂತೆ…. ಇದು ಸವಾಲ್….. 🙂
ಈ ತರದ ಕಾಮಿಡಿ ಸ್ಟಾರ್ ಬಾಲು ಗುಂಪಿನ ಸಂಶೋಧನೆಯಲ್ಲಿ ಸಮಸ್ಯೆಯನ್ನು ಹೇಗೆ ಗುರುತಿಸಿಕೊಂಡು ಸವಾಲ್ ಹಾಕತ್ತೆ ಅನ್ನೋದಕ್ಕೆ ಒಂದು ಸ್ಯಾಂಪಲ್ ಬೇಕಾ? ನೋಡಿ :
http://kiranbatni.com/2014/12/the-balagangadhara-problem/
ಶ್ರೀಪಾದ ಅವರಿಗೆ –
ಊಟ ಆಯ್ತಾ ಅಂತ ಕೇಳಿದ್ರೆ ಇನ್ನೆನೋ ಹೇಳಿದ ಹಾಗಾಯ್ತು. ನಾನು ಕೇಳಿದ ಪ್ರಶ್ನೆಯೇ ಬೇರೆ, ನೀವು ಉತ್ತರಿಸುತ್ತಿರುವದೆ ಬೇರೆ. ಅಥವಾ ವಿಷಯವನ್ನು ಡೈವರ್ಟ್ ಮಾಡುವದು ನಿಮ್ಮ ಇನ್ನೊಂದು ಟೆಕ್ನಿಕ್ ಇರಬಹುದು. ದಯವಿಟ್ಟು ಇಲ್ಲಿ ನಡೆದ ಚರ್ಚೆಯನ್ನು ಓದಿ, ನಂತರ ಉತ್ತರಿಸಿ.
ಮೊದ್ಲು ತಾವೂ ಅದನ್ನೇ ಮಾಡಪ್ಪ/ಮ್ಮ!!! ತಾವು ಕೇಳಿದ್ದ ಪ್ರಶ್ನೆ, ಹೇಳಿದ್ದೆ ಚರ್ಚೆ ಅಂತ ಎಲ್ರೂ ಒಪ್ಕೋಬೇಕಂತ ರೂಲ್ಸ್ ಮಾಡಂಡಿದಿರೇನೂ???? 🙂 🙂 ತಲೆಬುಡ ಇಲ್ಲದ ಒದರೋದನ್ನೇ ಚರ್ಚೆ ಅನ್ನೋದನ್ನು ಬಿಟ್ಟು ಮೊದ್ಲು ಹೋಗಿ ‘ಹೀದನ್ ….’ ಓದಿಕೊಂಡು ಬಂದ್ರೆ ಏನಾರ ಇಲ್ಲಿರೋರು ತಮ್ತವ ಚರ್ಚೆ ಅಂತ ಮಾತಾಡಬಹುದು. ಇಲ್ಲಾಂದ್ರೆ ಎಲ್ರಿಗೂ ಮಾಡಕ್ಕೆ ಕ್ಯಾಮೆ ಇದೆ ಅನ್ಕತಿನಿ.. 🙂
ಶ್ರೀಪಾದರವರು ಹೇಳುತ್ತಿರುವದು ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಚೌಕಟ್ಟಿನಲ್ಲಿ ಗ್ರಹಿಸಿ ವಿವರಣೆ ನೀಡಿದ ಬುದ್ದಿಜೀವಿಗಳ(ಎಡ ಪಂಥೀಯರ) ಬಗ್ಗೆ. ನಾನು ಕೇಳಿದ್ದು ‘ರಿಲಿಜಿಯನ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಲ್ಪಟ್ಟ ಬಲಪಂಥೀಯರು ಎನ್ನಿಸಿಕೊಂಡವರ ಕುರಿತು ನಿಮ್ಮ ಗುಂಪಿನವರು ನೀಡಿದ ವಿವರಣೆಯ ಬಗ್ಗೆ. ನಿಮಗೆ ನನ್ನ ಪ್ರಶ್ನೆಗೆ ಉತ್ತರಿಸಲಾಗದಿದ್ದರೆ ‘ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆ ನಡೆದಿದೆ’ ಎಂದು ನಿಮಗೆ ಸಾಧಿಸಲು ಸಾಧ್ಯವಿಲ್ಲವೆಂದರ್ಥ. ಹಾಗಾಗಿ ಈ ಲೇಖನದಲ್ಲಿ ವಿವರಿಸಿರುವ ‘ಹಿಂದೂ ಮೂಲಭೂತವಾದದ’ ವಿವರಣೆ ತೋಪಾಗುತ್ತದೆ. ಈ ಬಗ್ಗೆ ನಿಮಗೂ ಗೊತ್ತಿಲ್ಲದಲ್ಲ. ಆದರೆ ನಿಮ್ಮ ಸಂಶೋಧನೆಗಳ ತಪ್ಪುಗಳನ್ನು ತೋರಿಸಹೊರಟರೆ ಪಲಾಯನವಾದವೇ ನಿಮ್ಮ ಅಂತಿಮ ಮಾರ್ಗ ಎನ್ನುವದು ಇದರಿಂದ ಗೊತ್ತಾಗುತ್ತದೆ ಅಷ್ಟೆ.
ಊಟ ಆಯ್ತಾ ಅಂದ್ರೆ ಇನ್ನೇನೋ ಹೇಳಿದ್ರಂತೆ ಅಲ್ಲ, ‘ಊಟ ಆಯ್ತಾ ಅಂದ್ರೆ ಮುಂಡಾಸು ಮೂವತ್ತು ಮೊಳ ಅಂದ’ ಎಂದು ಗಾದೆ. ಅದಿರಲಿ. ನೀವು ಕೇಳಿದ್ದು: “ಆದರೆ ಏಕ ಗ್ರಂಥವನ್ನು, ಏಕ ದೇವನನ್ನು ಪ್ರಮಾಣ ಎಂದು ಸಮಗ್ರವಾಗಿ ಒಪ್ಪಿಕೊಳ್ಳದಿದ್ದಾಗ ಹಾಗೂ ಅದನ್ನು ಕಾರ್ಯರೂಪಕ್ಕೆ ತರಲು ಒಂದು ಸಂಸ್ಥೆ ಎನ್ನುವದು ಇರದಿರುವಾಗ ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಹೇಗೆ ಆರೋಪಿಸುತ್ತೀರಿ?”
ಕೆಲವು ಉದಾಹರಣೆ ನೀಡಿ ನಾನು ಹೇಳಿದ್ದು: “ಭಾರತದ ವೈವಿಧ್ಯದ ಸಂಸ್ಕೃತಿಯನ್ನು ಏಕ ಗ್ರಂಥ, ಏಕ ನಿಯಾಮಕ ಇತ್ಯಾದಿಗಳಿಂದ ಏಕರೂಪಗೊಳಿಸುವ ನಿರಂತರ ವೈವಿಧ್ಯಮಯ ಯತ್ನಗಳಿವು ಅನಿಸದೇ? ಭಗವದ್ಗೀತೆ, ಪುರಾಣ…ಹೀಗೆ ಏನೆಲ್ಲವನ್ನೂ ಇಂಥ ಸಮರ್ಥನೆಗೆ ಬಳಸಿಕೊಳ್ಳಲಾಗಿದೆ. ನಮ್ಮ ದೇಶದ ವೈವಿಧ್ಯದಂತೆಯೇ ಈ ಯತ್ನಗಳೂ ಇವೆ ಎಂಬುದು ಸುಳ್ಳಲ್ಲ…ಹೀದನ್ ಓದಿ…ಪೂರ್ವಾವಲೋಕನ ಓದಿ”. ಚರ್ಚೆಯನ್ನು ಹಾದಿ ತಪ್ಪಿಸುವ ಯತ್ನ ಇಲ್ಲಿ ಎಲ್ಲಿದೆ? ಗೊತ್ತಾಗುತ್ತಿಲ್ಲ.
ಆದರೆ ಪ್ರಜ್ನಾ ಆನಂದ ಪ್ರಶ್ನೆಗೆ ಉತ್ತರವೇನು….?? ಯಾರೂ ಹೇಳಲಿಲ್ಲ …!!
ರಾಜೇಶ್ ಅವರಿಗೆ-
ಉತ್ತರಿಸದೆ ಶಿಷ್ಯಕೋಟಿಗಳು ಪಲಾಯನಗೈಯ್ಯುತ್ತಿರುವದು ಇದೆ ಮೊದಲ ಸಲ ಅಲ್ಲ. ಈ ಮೊದಲ ಲೇಖನಗಳಲ್ಲಿ ನಡೆದ ಚರ್ಚೆಯನ್ನು ನೋಡಿ. ‘ಸಲ್ಲೇಖನ ವ್ರತದ ನಿಷೇಧದ ಹಿಂದಿನ ವಸಾಹತುಶಾಹಿ ಪ್ರಜ್ಞೆ’, ‘Sin ಅನ್ನು ಭಾಷಾಂತರಿಸಿದ ಪಾಪವೇ ವಸಾಹತುಪ್ರಜ್ಞೆ’, ‘ವಸಾಹತುಪ್ರಜ್ಞೆಯ ಪ್ರಾಯೋಜಿತ ಪಂದ್ಯಾವಳಿಗಳು – ಭಾಗ ೧’ ಗಳಲ್ಲಿ ಶಿಷ್ಯಕೋಟಿಗಳ ಲಾಜಿಕಲ್ ಫಾಲಸಿಯನ್ನು ಸರಿಯಾಗಿ ವಿವರಿಸಿದ್ದೇನೆ. ಪ್ರಶ್ನೆಗಳಿಗೆ ಉತ್ತರಿಸದೆ ಪಲಾಯನಗೈದಿದ್ದಾರೆ.
<>
ಇದರಲ್ಲಿ ಉತ್ತರವಿಲ್ಲವೇ ರಾಜೇಶ್?
ಶ್ರೀಪಾದ್ ರವರ ಕೊನೆಯ ಭಾಗದಲ್ಲಿ ಉತ್ತರವಿಲ್ಲವೇ ರಾಜೇಶ್ ? ಉತ್ತರ ವಿದ್ದರೂ ಜಾಣಕುರುಡುತನ ತೋರಿದರೆ, ಚರ್ಚೆಯೇ ತೋಪಾಗುತ್ತದೆ…
ಶ್ರೀಪಾದ್ ರವರ ಪ್ರತಿಕ್ರಿಯೆಯ ಕೊನೆಯ ಭಾಗದಲ್ಲಿ ಉತ್ತರವಿಲ್ಲವೇ ರಾಜೇಶ್ ? ಉತ್ತರ ವಿದ್ದರೂ ಜಾಣಕುರುಡುತನ ತೋರಿದರೆ, ಚರ್ಚೆಯೇ ತೋಪಾಗುತ್ತದೆ…
ಜಾಣ ಕುರುಡುತನ ಯಾರದ್ದು ಪ್ರವೀಣ್ ಅವರೇ? ನನ್ನ ಪ್ರಶ್ನೆಗೆ ಅವರ ಉತ್ತರಕ್ಕೆ ಇರುವ irrelevance ಅನ್ನು ತಿಳಿಯದಷ್ಟು ಜಾಣ ಕುರುಡರೆ ನೀವು. ಶ್ರೀಪಾದರ ಉತ್ತರದಲ್ಲಿದ್ದ irrelevance ಅನ್ನುಇಲ್ಲಿಯೇ ಹೇಳಿದ್ದನ್ನು ನೀವು ಓದಿಕೊಂಡಿಲ್ಲವೆ? ಬೇಕಾದರೆ ಮತ್ತೊಮ್ಮೆ ಇಲ್ಲಿ ಹಾಕುತ್ತೇನೆ ತಿಳಿದುಕೊಳ್ಳಿ.
‘ಶ್ರೀಪಾದರವರು ಹೇಳುತ್ತಿರುವದು ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಚೌಕಟ್ಟಿನಲ್ಲಿ ಗ್ರಹಿಸಿ ವಿವರಣೆ ನೀಡಿದ ಬುದ್ದಿಜೀವಿಗಳ(ಎಡ ಪಂಥೀಯರ) ಬಗ್ಗೆ. ನಾನು ಕೇಳಿದ್ದು ‘ರಿಲಿಜಿಯನ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಲ್ಪಟ್ಟ, ಬಲಪಂಥೀಯರು ಎನ್ನಿಸಿಕೊಂಡವರ ಕುರಿತು ನಿಮ್ಮ ಗುಂಪಿನವರು ನೀಡಿದ ವಿವರಣೆಯ ಬಗ್ಗೆ’
ಈಗಲೂ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿ.
ಹಿಂದೂ ಅನ್ನು ರಿಲಿಜಿಯನ್ ಅನ್ನಾಗಿ ಮಾಡ ಹೊರಟವರು ಯಾವ ಗ್ರಂಥದ ಮೊರೆ ಹೋಗಿದ್ದಾರೆ? ಎಂದು ಕೇಳಿದ್ದೆ. ಅದಕ್ಕೆ ಸಿಕ್ಕ ಉತ್ತರ ಈ ಮೇಲೆಯೆ ಇದೆ. ಅದಕ್ಕೆ ನನ್ನ ಪ್ರಶ್ನೆ ‘ ರಿಲಿಜಿಯನ್ ಪ್ರಕ್ರಿಯೆಯಲ್ಲಿ ಭಾರತೀಯ ಸಂಸ್ಕೃತಿ ತೊಡಗಿದ್ದರೆ ಯಾವುದೋ ಒಂದು ಗ್ರಂಥವನ್ನು ಮಾತ್ರ ಪ್ರಮಾಣೀಕರಿಸುತ್ತಿದ್ದರು. ಆದರೆ ಜನರು ಬೇರೆ ಬೇರೆ ಗ್ರಂಥವನ್ನು ತಮ್ಮ ಧರ್ಮ ಗ್ರಂಥವೆಂದರೆ ಅದು ರಿಲಿಜಿಯನ್ನಿನ ವ್ಯಾಖ್ಯಾನದಡಿಯಲ್ಲಿ ಬರಲು ಸಾಧ್ಯವೇ? ಅಲ್ಲದೆ ರಿಲಿಜಿಯನ್ನುಗಳಲ್ಲಿ ಧರ್ಮಗ್ರಂಥದ ವಿವರಣೆಯನ್ನು ಕಾರ್ಯರೂಪಕ್ಕೆ ತರಲು ಸಂಸ್ಥೆ ಕಾರ್ಯ ನಿರ್ವಹಿಸುತ್ತಿತ್ತು.ಆ ಸಂಸ್ಥೆಯೊಂದು ಇದೆಯೇ? ಆದರೆ ಏಕ ಗ್ರಂಥವನ್ನು, ಏಕ ದೇವನನ್ನು ಪ್ರಮಾಣ ಎಂದು ಸಮಗ್ರವಾಗಿ ಒಪ್ಪಿಕೊಳ್ಳದಿದ್ದಾಗ ಹಾಗೂ ಅದನ್ನು ಕಾರ್ಯರೂಪಕ್ಕೆ ತರಲು ಒಂದು ಸಂಸ್ಥೆ ಎನ್ನುವದು ಇರದಿರುವಾಗ ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಹೇಗೆ ಆರೋಪಿಸುತ್ತೀರಿ?’ ಎಂದು ಕೇಳಿದ್ದೆ. ಇದಕ್ಕೆ ನಿಮ್ಮ ಉತ್ತರವೇನು?
” ಆದರೆ ಏಕ ಗ್ರಂಥವನ್ನು, ಏಕ ದೇವನನ್ನು ಪ್ರಮಾಣ ಎಂದು ಸಮಗ್ರವಾಗಿ ಒಪ್ಪಿಕೊಳ್ಳದಿದ್ದಾಗ ಹಾಗೂ ಅದನ್ನು ಕಾರ್ಯರೂಪಕ್ಕೆ ತರಲು ಒಂದು ಸಂಸ್ಥೆ ಎನ್ನುವದು ಇರದಿರುವಾಗ ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಮಾಡುವ “ಪ್ರಕ್ರಿಯೆ ನಡೆದಿದೆ ಎಂದು ಹೇಗೆ ಆರೋಪಿಸುತ್ತೀರಿ?’ ಎಂದು ಕೇಳಿದ್ದೆ. ಇದಕ್ಕೆ ನಿಮ್ಮ ಉತ್ತರವೇನು?”
– ನೀವು ಮತ್ತೆ ಅದನ್ನೇ ಗೊಂದಲ ಮಾಡಿಕೊಂಡು ಮೂಟೆ ಕಟ್ಟುವ ಹಗ್ಗವನ್ನು ನಿಮ್ಮ ಕಾಲಿಗೇ ಸುತ್ತಿಕೊಂಡು ಗಂಟು ಬಿಡಿಸಲು ಬೇರೆಯವರ ನೆರವು ಕೇಳುತ್ತಿದ್ದೀರಿ!
ಹಾಗೆ ಸ್ಥಾಪಿಸುವ ನಿಮ್ಮ ಕಕ್ಷಿದಾರರಾದ ಎಡ ಮತ್ತು ಪ್ರತಿವಾದಿಗಳಾದ (ಇದ್ದರೆ) ಬಲ ಗುಂಪಿನವರು ಮತ್ತೆ ವಸಾಹತು ಪ್ರಜ್ನೆಯಲ್ಲೇ ಇದ್ದೀರಿ ಎಂದರ್ಥ. ಹಿಂದೂವನ್ನು ರಿಲೀಜಿಯನ್ ಮಾಡಹೊರಟವರು ನಾನು ಈಗಾಗಲೇ ಹೇಳಿದ ವೇದ, ಪುರಾಣ, ಗೀತೆ, ಸ್ಮೃತಿ ಎಲ್ಲವನ್ನೂ ಬಳಸಿಕೊಳ್ಳುವುದಿದೆ.
‘ಗ್ರಂಥವನ್ನು ಕಾರ್ಯರೂಪಕ್ಕೆ ತರಲು ಸಂಸ್ಥೆಯೊಂದು ಇದೆಯೇ?’ ಈ ಪ್ರಶ್ನೆಗೆ ನೀವ್ಯಾಕೆ ಉತ್ತರಿಸಿಲ್ಲ? ‘ಹಿಂದೂವನ್ನು ರಿಲೀಜಿಯನ್ ಮಾಡಹೊರಟವರು ನಾನು ಈಗಾಗಲೇ ಹೇಳಿದ ವೇದ, ಪುರಾಣ, ಗೀತೆ, ಸ್ಮೃತಿ ಎಲ್ಲವನ್ನೂ ಬಳಸಿಕೊಳ್ಳುವುದಿದೆ’ ಎಂದಿದ್ದೀರಿ. ಹಾಗೂ ‘ಭಾರತದ ವೈವಿಧ್ಯದ ಸಂಸ್ಕೃತಿಯನ್ನು ಏಕ ಗ್ರಂಥ, ಏಕ ನಿಯಾಮಕ ಇತ್ಯಾದಿಗಳಿಂದ ಏಕರೂಪಗೊಳಿಸುವ ನಿರಂತರ ವೈವಿಧ್ಯಮಯ ಯತ್ನಗಳಿವು ಅನಿಸದೇ? ಭಗವದ್ಗೀತೆ, ಪುರಾಣ…ಹೀಗೆ ಏನೆಲ್ಲವನ್ನೂ ಇಂಥ ಸಮರ್ಥನೆಗೆ ಬಳಸಿಕೊಳ್ಳಲಾಗಿದೆ’ ಎಂದೂ ಹೇಳಿದ್ದೀರಿ.ಏಕ ಗ್ರಂಥವನ್ನು ಧರ್ಮಗ್ರಂಥವನ್ನಾಗಿ ಮಾಡಹೊರಟವರು ಒಂದೆ ಗ್ರಂಥವನ್ನು ಬಳಸಿಕೊಳ್ಳಬೇಕಿತ್ತು. ಆದರೆ ಇಲ್ಲಿ ಬೇರೆ ಬೇರೆ ಗ್ರಂಥವನ್ನು ಯಾಕೆ ಬಳಸಿಕೊಳ್ಳಲಾಗಿದೆ? ಸ್ಮೃತಿ, ವೇದ, ಪುರಾಣಗಳು ಬೇರೆ ಬೇರೆ ಗ್ರಂಥಗಳಲ್ಲವೆ?
ಅಮ್ಮಾ ತಾಯಿ,೧. ಅಂಥದ್ದೊಂದು ಸಂಸ್ಥೆ ಇದ್ದರೆ ತಾನೆ ಹೇಳಲು ಸಾಧ್ಯವಾಗೋದು? ಇಲ್ಲ. ೨. ಅನೇಕ ಗ್ರಂಥಗಳನ್ನು ಯಾಕೆ ಹೇಳಿದ್ದಾರೆ ಅಂದರೆ ಇಲ್ಲಿ ಬೈಬಲ್, ಕುರ್ ಆನ್ ಗಳಂತೆ ಯಾವೊಂದು ರಿಲೀಜಿಯಸ್ ಸ್ಕ್ರಿಪ್ಚರ್ ಅಂತಿಲ್ಲ. ಹೀಗೆ ಮಾಡುವ ಯತ್ನವನ್ನು ಅನೇಕಾನೇಕ ವ್ಯಕ್ತಿಗಳು ಮಾಡುತ್ತಿದ್ದಾರೆ, ಹೇಗಾದರೂ ಮಾಡಿ ತಗುಲಿಸಲೇಬೇಕು ಎಂದು ನಿಮ್ಮಂತೆ ನೂರಾರು ವರ್ಷಗಳಿಂದ ರಚ್ಚೆ ಹಿಡಿದಿದ್ದಾರೆ. ಆಗಿಲ್ಲ, ಆಗುವುದೂ ಇಲ್ಲ! ಅಷ್ಟಕ್ಕೂ ಇಲ್ಲಿ ಅಂಥದ್ದು ಇದ್ದೇ ಇದೆ ಎಂಬ ಹಠ ಯಾಕೆ?
“ಅಮ್ಮಾ ತಾಯಿ,೧. ಅಂಥದ್ದೊಂದು ಸಂಸ್ಥೆ ಇದ್ದರೆ ತಾನೆ ಹೇಳಲು ಸಾಧ್ಯವಾಗೋದು?”
ಹೌದು ಸರ್ ನೀವು ಹೇಳಿದ್ದು ಅದೆಷ್ಟು ನಿಜ. ಆ ಒಂದು ಸಂಸ್ಥೆಯೇ ಇಲ್ಲದಿದ್ದರೆ ರಿಲಿಜಿಯನ್ ಪ್ರಕ್ರಿಯೆಯಲ್ಲಿ ತೊಡಗಿರುವವರು ಯಾರು? ಸಂಸ್ಥೆಯಿಲ್ಲದೆ ವ್ಯಕ್ತಿಗಳಿಂದ ರಿಲಿಜಿಯನ್ ಕಟ್ಟಲು ಸಾಧ್ಯವೇ?
“ಅನೇಕ ಗ್ರಂಥಗಳನ್ನು ಯಾಕೆ ಹೇಳಿದ್ದಾರೆ ಅಂದರೆ ಇಲ್ಲಿ ಬೈಬಲ್, ಕುರ್ ಆನ್ ಗಳಂತೆ ಯಾವೊಂದು ರಿಲೀಜಿಯಸ್ ಸ್ಕ್ರಿಪ್ಚರ್ ಅಂತಿಲ್ಲ.ಹೀಗೆ ಮಾಡುವ ಯತ್ನವನ್ನು ಅನೇಕಾನೇಕ ವ್ಯಕ್ತಿಗಳು ಮಾಡುತ್ತಿದ್ದಾರೆ, ಹೇಗಾದರೂ ಮಾಡಿ ತಗುಲಿಸಲೇಬೇಕು”
ಆ ವ್ಯಕ್ತಿಗಳು ಯಾರು ವಿವರಿಸಿ.
“ಅಷ್ಟಕ್ಕೂ ಇಲ್ಲಿ ಅಂಥದ್ದು ಇದ್ದೇ ಇದೆ ಎಂಬ ಹಠ ಯಾಕೆ?”
ಯಾವ ಹಠವೂ ನಮಗೆ ಇಲ್ಲವಲ್ಲ.
“ರಿಲಿಜನ್ನು ಮಾಡುವ ಪ್ರಕ್ರಿಯೆ ನಡೆದಿದೆ” ಅಂದ್ರೆ ರಿಲಿಜನ್ ಮಾಡಿಯಾಗಿದೆ ಅಂತ ತಿಳ್ಕೊಂಡ್ಬಿಟ್ಟಿದೆ ಈ ಬೆಪ್ಪು, ಥೋ! ಹಾಗಾಗದಿದ್ರೆ ಹಿಂದೂ ರಿಲಿಜನ್ ಇಲ್ಲಾ ಅಂತ ಹೆಂಗ್ ವಾದಿಸ್ತಿದ್ರು ಅನ್ನೋದು ಗೊತ್ತಿಲ್ಲದ ಪೇದ್ದಾ ಇದು! ಇದೆಂಥ ಫಾಲ್ಲಸಿನಪ್ಪಾ???!!! 🙂
ಧರ್ಮಗ್ರಂಥ ವಾಗಿ ಮಾಡೋಕೆ ಹೊರಡೋರು ಒಂದಿಟ್ಕೊಳ್ದೆ ಬೇರೆಬೇರೆದನ್ನಿಟ್ ಕೊಂಡ್ರೆ ಏನಪ್ಪ/ಮ್ಮ ನಿನ್ ತೊಂದ್ರೆ? ಯಾಕಪ್ಪ/ಮ್ಮ ಮಾಡ್ಬಾರ್ದು! ಅವರಿಗೆಲ್ಲಾ ಒಂದೊಂದೇ ಇಟ್ಕೊಂಡ್ರೇ ಇವರು ಬೇರ್ಬೇರೆ ಮಾಡ್ಕೊತ್ತಾರಪ್ಪ ನಿಂಗೇನಮ್ಮ/ಪ್ಪ ಸಮಸ್ಯೆ. ಸುಮ್ನೆ ಎಲ್ಲೆಲ್ಲೋ ಹುಳ ಯಾಕ್ ಬುಟ್ಕೊತಿಯಾ?? 🙂 ಹೋಗ್ ಹೀದನ್ … ಓದ್ ಮೊದ್ಲು ಸುಮ್ನೆ ತಲೆಬುಡ ಇಲ್ದೆ ಒದ್ರಿಕೊಂಡು ನೀನೇ ತೋಪೆದ್ದು ಹೋಗ್ತಿದಿಯಾ ಅಷ್ಟೆ
“ಧರ್ಮಗ್ರಂಥ ವಾಗಿ ಮಾಡೋಕೆ ಹೊರಡೋರು ಒಂದಿಟ್ಕೊಳ್ದೆ ಬೇರೆಬೇರೆದನ್ನಿಟ್ ಕೊಂಡ್ರೆ ಏನಪ್ಪ/ಮ್ಮ ನಿನ್ ತೊಂದ್ರೆ?”
ಹುಹ್! ನಮ್ ತೊಂದ್ರೆ ಏನಿಲ್ಲ. ಆದ್ರೆ ಆದ್ರೆ ರಿಲಿಜಿಯನ್ ಅಂದ್ರೆ ಬೇರೆ ಬೇರೆ ಗ್ರಂಥಗಳನ್ನ ಹೇಗೆ ಒಪ್ಪಿಕೊಳ್ಳುತ್ತೆ? ಯಾಕೆ ಒಪ್ಪಿಕೊಳ್ಳಲ್ಲ ಅಂದ್ರೆ ಬೇರೆ ಬೇರೆ ಗ್ರಂಥಗಳಲ್ಲಿ ದೇವರ ಬಗೆಗಿನ ವಿವರಣೆಗಳು ಬೇರೆ ಬೇರೆ ತೆರನಾಗಿಯೇ ಇರುತ್ತೆ. ರಿಲಿಜಿಯನ್ ಅನ್ನೋದು ಇಂತಹ ವೈವಿಧ್ಯಗಳನ್ನು ತನ್ನೊಳಗೆ ಸೆರಿಸಿಕೊಳ್ಳಲ್ಲ. ಉದಾರಣೆಗೆ ಒಂದು ಪುರಾಣ ಶಿವ ಶ್ರೇಷ್ಟ ಅಂದ್ರೆ ಇನ್ನೊಂದು ಪುರಾಣ ವಿಷ್ಣು ಶ್ರೇಷ್ಠ ಅನ್ನುತ್ತೆ. ವೇದಗಳು ಇನ್ನು ಬೇರೇನೋ ಹೇಳಬಹುದು. ಆದರೆ ರಿಲಿಜಿಯನ್ ಇದಕ್ಕೆ ತದ್ವಿರುದ್ಧವಾಗಿ ದೇವರ ಬಗೆಗೆ ಒಂದೆ ವಿವರಣೆಯನ್ನು ಮಂಡಿಸುತ್ತದೆ. ಇದು ಬಾಲಗಂಗಾಧರರ ರಿಲಿಜಿಯನ್ ಬಗೆಗಿನ ವಿವರಣೆಯಲ್ಲಿಯೆ ಇದೆ(ನೀವೇ ಸರಿಯಾಗಿ ಹೀದನ್ ಓದಿಲ್ಲವೇನೊ!). ಹಾಗಾಗಿ ಹಿಂದುವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿಯೂ ಕೂಡ ಧರ್ಮಗ್ರಂಥವಾಗಿ ಪುರಾಣ, ವೇದ, ಸ್ಮೃತಿ ಇವುಗಳೆಲ್ಲವೂ ಒಳಗೊಳ್ಳಲು ಸಾಧ್ಯವಿಲ್ಲ. ಈಗ ನೀವೆ ಉತ್ತರಿಸಿ. ಒಂದು ರಿಲಿಜಿಯನ್ ಆಗುವ ಪ್ರಕ್ರಿಯೆಯಲ್ಲಿಯೂ ಕೂಡ ಅದು ದೇವರ ಬಗೆಗೆ ಬೇರೆ ಬೇರೆ ವಿವರಣೆಗಳನ್ನು ಒಳಗೊಳ್ಳಲು ಸಾಧ್ಯವೇ? ಬಾಲಗಂಗಾಧರರ ವಿವರಣೆಗಳ ಮುಖಾಂತರ ವಿವರಿಸಿ.
“ಆ ಒಂದು ಸಂಸ್ಥೆಯೇ ಇಲ್ಲದಿದ್ದರೆ ರಿಲಿಜಿಯನ್ ಪ್ರಕ್ರಿಯೆಯಲ್ಲಿ ತೊಡಗಿರುವವರು ಯಾರು? ಸಂಸ್ಥೆಯಿಲ್ಲದೆ ವ್ಯಕ್ತಿಗಳಿಂದ ರಿಲಿಜಿಯನ್ ಕಟ್ಟಲು ಸಾಧ್ಯವೇ?”
– ಈ ಮೊದಲು ಇಷ್ಟುದ್ದ ಪಟ್ಟಿ ಕೊಟ್ಟು ರಿಲೀಜಿಯಸ್ ಗೊಳಿಸುವ ಪ್ರಕ್ರಿಯೆಯಲ್ಲಿ ಯಾರೆಲ್ಲ ಹೇಗೆ ತೊಡಗಿದ್ದಾರೆ ಅಂದಾಗ ‘ಮುಂಡಾಸು ಮೂವತ್ತು ಮೊಳ’ ಗಾದೆ ನೆನಪಾಗಿದ್ದು ಯಾಕೆ? ಎಲ್ಲ ಕೆಲಸವನ್ನೂ ಸಂಸ್ಥೆಗಳೇ ಮಾಡಬೇಕಿಲ್ಲ, ಆತನ ಕೆಲಸ ಕಾಲಾಂತರದಲ್ಲಿ ಸಾಂಸ್ಥಿಕ ರೂಪ ಪಡೆಯಬಹುದು-ಇದೊಂದು ಪ್ರಾಥಮಿಕ ತಿಳಿವಳಿಕೆ.
“ಅನೇಕ ಗ್ರಂಥಗಳನ್ನು ಯಾಕೆ ಹೇಳಿದ್ದಾರೆ ಅಂದರೆ ಇಲ್ಲಿ ಬೈಬಲ್, ಕುರ್ ಆನ್ ಗಳಂತೆ ಯಾವೊಂದು ರಿಲೀಜಿಯಸ್ ಸ್ಕ್ರಿಪ್ಚರ್ ಅಂತಿಲ್ಲ.ಹೀಗೆ ಮಾಡುವ ಯತ್ನವನ್ನು ಅನೇಕಾನೇಕ ವ್ಯಕ್ತಿಗಳು ಮಾಡುತ್ತಿದ್ದಾರೆ, ಹೇಗಾದರೂ ಮಾಡಿ ತಗುಲಿಸಲೇಬೇಕು”
“ಆ ವ್ಯಕ್ತಿಗಳು ಯಾರು ವಿವರಿಸಿ”
– ವಚನಗಳನ್ನು ಹಾಗೆ ನೋಡಿ ಈಗಲೂ ಹಾಗೇ ನೋಡುವಂತೆ ದಾರಿ ಮಾಡಿದ ಬ್ರೌನ್, ಪುರಾಣ, ಸ್ಮೃತಿಗಳ ಹೊಸ ವ್ಯಾಖ್ಯೆ ನೀಡಿದ ಜೋನ್ಸ್, ಆಲಿವೆಲ್-ಟೇಲರ್, ನಮ್ಮವ್ರೇ ಆದ ಹಳಕಟ್ಟಿ, ನಾರಾಯಣಾಚಾರ್ಯ, ದರ್ಗಾ…ಒಂದೇ ಎರಡೇ? ಕೊನೆಗೆ ಅದು ನೀವೂ ಆಗಬಹುದು!
ಯಾವ ಹಠವೂ ನಮಗೆ ಇಲ್ಲವಲ್ಲ”.
-ಸಂತೋಷ.
@ಪ್ರಜ್ನಾ ಆನಂದ್: ಅಂದಹಾಗೆ…ಒಂದು ವಿಷಯ ಮರೆತಿದ್ದೆ, ಹುಲುಮಾನವ ನೋಡಿ, ಅದಕ್ಕೆ…ನಾನೇನೂ ‘ನಿಮಗೆ’ ಎಂಬ ಪ್ರಯೋಗ ಬಳಸಿರಲಿಲ್ಲ, ಆದರೂ “ಯಾವ ಹಠವೂ ನಮಗೆ ಇಲ್ಲವಲ್ಲ” ಎಂದು ಉತ್ತರಿಸಿದ್ದೀರಿ. ನೀವು ಎಷ್ಟು ಜನ? ಒಬ್ಬರೋ ಸಂಸ್ಥೆಯೋ? ಅಥವಾ ಜಗದ್ಗುರುಗಳೋ ಮಹಾಪ್ರಭುಗಳೋ? ಅಲ್ಲೆಲ್ಲ “ಏಕವಚನಕ್ಕೆ ಬಹುವಚನವಕ್ಕುಂ”. ದಯಮಾಡಿ ತಿಳಿಸಿ. ಆಗ ಇನ್ಮುಂದೆ ‘ಅಗತ್ಯ ಬಿದ್ದರೆ’ ತಮ್ಮ ಸನ್ನಿಧಾನದೊಂದಿಗೆ ಸಂವಾದ ನಡೆಸುವಾಗ ಅಪಚಾರವಾಗದಂತೆ ಎಚ್ಚರವಹಿಸಲು ಅನುಕೂಲವಾಗುತ್ತದೆ.
“ವಚನಗಳನ್ನು ಹಾಗೆ ನೋಡಿ ಈಗಲೂ ಹಾಗೇ ನೋಡುವಂತೆ ದಾರಿ ಮಾಡಿದ ಬ್ರೌನ್, ಪುರಾಣ, ಸ್ಮೃತಿಗಳ ಹೊಸ ವ್ಯಾಖ್ಯೆ ನೀಡಿದ ಜೋನ್ಸ್, ಆಲಿವೆಲ್-ಟೇಲರ್, ನಮ್ಮವ್ರೇ ಆದ ಹಳಕಟ್ಟಿ, ನಾರಾಯಣಾಚಾರ್ಯ, ದರ್ಗಾ”
ಹಾಗಿದ್ದರೆ ಗೋಮಾಂಸ ವಿರೋಧವನ್ನು ಹುಟ್ಟುಹಾಕಿದ್ದು ನೀವು ಮೇಲೆ ಹೆಸರಿಸಿದ ವ್ಯಕ್ತಿಗಳಾ? ಗೋಮಾಂಸದ ವಿಷಯ ಯಾಕೆ ಎತ್ತಿದೆನೆಂದರೆ ಪ್ರವೀಣ್ ಅವರು ಇಲ್ಲಿ ಹೇಳಿದ್ದರು, ಗೋಮಾಂಸ ಭಕ್ಷಣೆಯ ವಿರೋಧವು ಭಾರತೀಯ ಸಂಪ್ರದಾಯವನ್ನು ರಿಲಿಜಿಯನ್ ಆಗಿಸುವಿಕೆಯಿಂದ ಆದ ಪರಿಣಾಮ ಎಂದು. ನೀವು ಮೇಲೆ ಹೆಸರಿಸಿದ ವ್ಯಕ್ತಿಗಳು ಹಿಂದೂ ವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದರೆ ಅವರು ಗೋಮಾಂಸ ಭಕ್ಷಣೆಯನ್ನು ವಿರೋಧಿಸಿರಲೆ ಬೇಕು. ಅದಕ್ಕೆ ರೆಫೆರೆನ್ಸ್ ಕೊಡುವಿರಾ?
ಈ ಪ್ರಶ್ನೆಗೆ ನೀವು ಉತ್ತರಿಸಿಲ್ಲ, ದಯವಿಟ್ಟು ಉತ್ತರಿಸಿ:
‘ಒಂದು ರಿಲಿಜಿಯನ್ ಆಗುವ ಪ್ರಕ್ರಿಯೆಯಲ್ಲಿಯೂ ಕೂಡ ಅದು ದೇವರ ಬಗೆಗೆ ಬೇರೆ ಬೇರೆ ವಿವರಣೆಗಳನ್ನು ಒಳಗೊಳ್ಳಲು ಸಾಧ್ಯವೇ?’
ತಾವು ಇನ್ನೂ ಜಗದ್ಗುರುಗಳೇ ಮಹಾಪ್ರಭುಗಳೇ ಇಬ್ಬರೇ ಸಂಸ್ಥೆಯೇ ಎಂದು ತಿಳಿಸಿಲ್ಲವಾದ ಕಾರಣ ಯಾವುದೋ ಒಂದು ಸಾಮಾನ್ಯ ಪ್ರಜೆ ಅಂದುಕೊಂಡು ಮುಂದುವರೆಯುತ್ತೇನೆ. ಕ್ಷಮಿಸಿ!
೧. ಪ್ರಶ್ನೆಗೆ ನಿರ್ದಿಷ್ಟ ಉತ್ತರ ಬೇಕಿದ್ದರೆ ಅದನ್ನು ಕೇಳಲೂ ಒಂದು ನಿರ್ದಿಷ್ಟ ಕ್ರಮ ಇರಬೇಕು. ಲಾಗಾಯ್ತಿನಿಂದ ನಿಮ್ಮ ಪ್ರಶ್ನೆಗಳನ್ನು ಗಮನಿಸುತ್ತ ಬಂದಿದ್ದೇನೆ. ಅದು ಅಂದ್ರೆ ಇದು, ಇದು ಅಂದ್ರೆ ಅದು ಅನ್ನುವಂತಿದೆ. ಪುರಾಣವೋ ನೀವು ಮತ್ತೆ ಮತ್ತೆ ಬಯಸುವ ದನದ ಮಾಂಸದ ಪ್ರಶ್ನೆಯೋ ಮತ್ತೊಂದೋ ಒಟ್ಟಿಗೆ ಒಂದು ಲಿಸ್ಟ್ ಮಾಡಿ. ಉತ್ತರ ಹುಡುಕುವ ಯತ್ನ ಮಾಡೋಣ.
೨. ಪ್ರಶ್ನೆ ಕೇಳಿ ಮಜಾ ತೆಗೆದುಕೊಳ್ಳುವ-ಕಾಲಹರಣದ ಉದ್ದೇಶವಿದ್ದರೆ ಪ್ರಶ್ನೆ ಕೇಳುವ ಅಗತ್ಯವೇ ಇಲ್ಲ. ನಿಮ್ಮ ಪ್ರಶ್ನೆಗಳ ದಾಟಿ ಯಾರೇನು ಹೇಳ್ತಾರೋ ನೋಡೋಣ ಅನ್ನುವಂತೆ ಕಾಣುತ್ತಿದೆ. ನಿಮಗೆ ಬೇಕಾದುದು ಉತ್ತರವಲ್ಲ ಅನಿಸುತ್ತಿದೆ. ಇರಲಿ, ನೀವು ಕೇಳುವ ಪ್ರಶ್ನೆಗಳೇ ನಿಮ್ಮ ಗುಣ ಹೇಳುತ್ತವೆ-ಮೊದಲು ಒಂದು ಕ್ರಮದಲ್ಲಿ ಕೇಳಿ.
ಇದಪ್ಪ ಪಲಾಯನವಾದ ಅಂದ್ರೆ, ಪ್ರಶ್ನೆ ಸರಿ ಇಲ್ಲ ಅಂದ್ಬಿಡೋದು.
ಗೋಮಾಂಸ ಭಕ್ಷಣೆಯ ವಿರೋಧ ರಿಲಿಜನ್ನಾಗಿ ಮಾಡುವ ವ್ಯರ್ಥ ಪ್ರಯತ್ನದ ಒಂದು ತುಣುಕು ಎಂದು ಲೇಖಕರು ಒಪ್ಪಿಕೊಂಡಿದ್ದು ಆಯ್ತು. ಅಂದಮೇಲೆ ನೀವು ಹೆಸರಿಸಿದ ವ್ಯಕ್ತಿಗಳು ರಿಲಿಜಿಯನ್ ಮಾಡ ಹೊರಟವರಾಗಿದ್ದರೆ ಗೋಮಾಂಸ ಭಕ್ಷಣೆಯ ವಿರೋಧದ ಸಂಗತಿಯನ್ನು ಹೇಳಿರಲೇ ಬೇಕು. ಒಂದು ವೇಳೆ ಅವರು ಹಾಗೆ ಹೇಳಿರದಿದ್ದರೆ ಅವರು ಹಿಂದೂ ವನ್ನು ರಿಲಿಜಿಯನ್ ಮಾಡ ಹೊರಟವರಲ್ಲ ಎಂದಾಯಿತು.
“ರಿಲಿಜನ್ನಾಗಿ ಮಾಡುವ ವ್ಯರ್ಥ ಪ್ರಯತ್ನದ ಒಂದು ತುಣುಕು ಎಂದು ಲೇಖಕರು ಒಪ್ಪಿಕೊಂಡಿದ್ದು ಆಯ್ತು.” ಅಂತ ಈ ಯಪ್ಪ/ಮ್ಮಂಗೆ ಗೊತ್ತಿದ್ ಮೇಲೆ “ರಿಲಿಜನ್ನು ಮಾಡುವ ಪ್ರಕ್ರಿಯೆ” ಅಂತ ಹೇಳಿದ್ದನ್ನು ಹಿಡ್ಕೊಂಡು ‘ಹಿಂದೂ ಅನ್ನೋ ರಿಲಿಜನ್ನು ಮಾಡಿಯೇ ಬಿಟ್ಟಿದ್ದಾರೆ’ ಅಂತ ಲೇಖಕರು ವಾದಿಸ್ತಿದಾರೆ ಅನ್ನೋತರ ಬಿಂಬಿಸಿ [ ಭಗವದ್ಗೀತೆ, ಪುರಾಣ…ಹೀಗೆ ಏನೆಲ್ಲವನ್ನೂ ಇಂಥ ಸಮರ್ಥನೆಗೆ ಬಳಸಿಕೊಳ್ಳಲಾಗಿದೆ’ ಎಂದೂ ಹೇಳಿದ್ದೀರಿ.ಏಕ ಗ್ರಂಥವನ್ನು ಧರ್ಮಗ್ರಂಥವನ್ನಾಗಿ ಮಾಡಹೊರಟವರು ಒಂದೆ ಗ್ರಂಥವನ್ನು ಬಳಸಿಕೊಳ್ಳಬೇಕಿತ್ತು. ಆದರೆ ಇಲ್ಲಿ ಬೇರೆ ಬೇರೆ ಗ್ರಂಥವನ್ನು ಯಾಕೆ ಬಳಸಿಕೊಳ್ಳಲಾಗಿದೆ? ಸ್ಮೃತಿ, ವೇದ, ಪುರಾಣಗಳು ಬೇರೆ ಬೇರೆ ಗ್ರಂಥಗಳಲ್ಲವೆ?] ಹೀಗೆಲ್ಲ ಒದರಿ ಒಂದೇ ಗ್ರಂಥ ಇಡ್ಕೋಬೇಕಿತ್ತು ಬೇರೆಬೇರೆ ಯಾಕಿಟ್ಕೊಂಡ್ರು ಅಂತ ಕೊಯ್ದಿದ್ಯಾಕೆ? ಇದೊಳ್ಳೆ ನಸುಗನ್ನಿ ಅನ್ಸುತ್ತೆ!
ಇಲ್ಯಾರು ಹಿಂದೂರಿಲಿಜನ್ನು ಮಾಡಿಬಿಟ್ಟಿದ್ದಾರೆ ಅಂತ ವಾದಿಸಿದ್ದಾರೆ? ಅಂತ ಪ್ರಶ್ನೆಗೆ ಉತ್ರನೇ ಕೊಡದೆ ತಾನೇ ಫಲಾಯನಾ ಮಾಡ್ಕೊಂಡು ಹೋಗ್ತಿದೆ!!! 🙂 🙂 🙂
+1
[ರಿಲಿಜಿಯನ್ ಮಾಡ ಹೊರಟವರಾಗಿದ್ದರೆ ಗೋಮಾಂಸ ಭಕ್ಷಣೆಯ ವಿರೋಧದ ಸಂಗತಿಯನ್ನು ಹೇಳಿರಲೇ ಬೇಕು.]
ಯಾಕಕ್ಕ/ಣ್ಣ ಹೇಳಿರಲೇ ಬೇಕು? ಸುಮ್ನೆ ಕಾಗಕ್ಕ ಗೂಗಕ್ಕನ್ ಕಥೆ ಹೊಡೀತಿದಿಯಾ?
ಸರಿ ಹೇಳಿಲ್ಲ ಅಂದ್ರೆ, ಗೋಮಾಂಸ ಭಕ್ಷಣೆಯ ವಿರೋಧ ಅನ್ನೋದು ‘ರಿಲಿಜನ್ ಅನ್ನಾಗಿ ಮಾಡುವ ಪ್ರಕ್ರಿಯೆ’ ಯ ಪರಿಣಾಮ ಎನ್ನುವ ಮಾತು ಸುಳ್ಳಾಗುತ್ತದೆ. ಅದನ್ನು ಲೇಖಕರು/ನೀವು/ನಿಮ್ಮ ಗುಂಪಿನವರು ಒಪ್ಪಿಕೊಳ್ಳಲಿ. ಹಾಗಾಗಿ ಇದು ಸೆಕ್ಯುಲರಿಸಮ್ಮಿನ ಪರಿಣಾಮ ಎನ್ನುವದು ತೋಪಾಗುತ್ತದೆ.
[ಸರಿ ಹೇಳಿಲ್ಲ ಅಂದ್ರೆ, ಗೋಮಾಂಸ ಭಕ್ಷಣೆಯ ವಿರೋಧ ಅನ್ನೋದು ‘ರಿಲಿಜನ್ ಅನ್ನಾಗಿ ಮಾಡುವ ಪ್ರಕ್ರಿಯೆ’ ಯ ಪರಿಣಾಮ ಎನ್ನುವ ಮಾತು ಸುಳ್ಳಾಗುತ್ತದೆ] ಯಾಕೆ ಸುಳ್ಳಾಗುತ್ತದೆ? ತಾವು ಹಾಗೆ ಘೋಷಿಸ್ ಬುಟ್ರಿ ಅಂತಾನಾ?
ಲಾಜಿಕ್ ತುಂಬಾ ಸಿಂಪಲ್ ಸರ್.
‘ಗೋಮಾಂಸ ಭಕ್ಷಣೆಯ ವಿರೋಧ’ ರಿಲಿಜನ್ನಾಗಿ ಮಾಡುವ ಪ್ರಯತ್ನದ ಒಂದು ತುಣುಕಾದರೆ, ಅದರ ಮೂಲ ಎಲ್ಲಿಂದ ಬಂತು? ಇಲ್ಲಿರುವ ಸಾಧ್ಯತೆಯೆಂದರೆ ರಿಲಿಜಿಯನ್ ಕಟ್ಟಲು ಪ್ರಯತ್ನಿಸುತ್ತಿರುವವರು ಗ್ರಾಂಥಿಕ ಆಧಾರದಿಂದ ಗೋಮಾಂಸ ಭಕ್ಷಣೆ ತಪ್ಪು ಎಂಬ ವಿದಿಯನ್ನು ಅನುಯಾಯಿಗಳಿಗೆ ವಿದಿಸಬೇಕು. ಇಲ್ಲದಿದ್ದರೆ ವಿರೋಧ ಹುಟ್ಟಲು ಹೇಗೆ ಸಾಧ್ಯ?
ಹಾಗಾಗಿ ‘ಗೋಮಾಂಸ ಭಕ್ಷಣೆಯ ವಿರೋಧ’ ರಿಲಿಜನ್ನಾಗಿ ಮಾಡುವ ಪ್ರಯತ್ನದ ಒಂದು ತುಣುಕಾದರೆ ನೀವು ಸೂಚಿಸಿದ ಆ ವ್ಯಕ್ತಿಗಳು (ಜೋನ್ಸ್, ಆಲಿವೆಲ್-ಟೇಲರ್, ನಮ್ಮವ್ರೇ ಆದ ಹಳಕಟ್ಟಿ, ನಾರಾಯಣಾಚಾರ್ಯ, ದರ್ಗಾ), ಗೋಮಾಂಸವನ್ನು ವಿರೋಧಿಸಿರಬೇಕು ಎಂದಾಯಿತು. ಯಾಕೆ ಎಂದರೆ ಅವರು ಗೋಮಾಂಸ ಭಕ್ಷಣೆಯ ವಿರೋಧಿಸಿರದಿದ್ದರೆ ಅವರು ರಿಲಿಜಿಯನ್ನಾಗಿಸುವ ಪ್ರಕ್ರಿಯೆಯಲ್ಲಿ ಗೋಮಾಂಸದ ವಿರೋಧ ಇರುತ್ತಿರಲಿಲ್ಲ.
ಇಲ್ಲದಿದ್ದರೆ ‘ಗೋಮಾಂಸ ಭಕ್ಷಣೆಯ ವಿರೋಧ’ ರಿಲಿಜನ್ನಾಗಿ ಮಾಡುವ ಪ್ರಯತ್ನದ ಭಾಗ ಅಲ್ಲ ಎನ್ನುವದು ಪ್ರೂವ್ ಆಗುತ್ತದೆ ಅಷ್ಟೆ. ಹೀದನ್ ಓದಿಕೊಂಡವರಿಗೆ ಇಷ್ಟು ಸಿಂಪಲ್ ಲಾಜಿಕ್ ಅರ್ಥವಾಗುವದಿಲ್ಲವೇ?
+1
ಪ್ರಶ್ನೆ ಸರಿ ಇಲ್ಲ ಎಂದು ನಾನು ಹೇಳಿಲ್ಲ, ಇಲ್ಲಿ ಬರೆದುದನ್ನು ಸರಿಯಾಗಿ ಓದಲು ಬಾರದ ತಮ್ಮ ಪ್ರತಿಭಾ ‘ಕಿರಣ’ ಇನ್ನು ‘ಹೀದನ್…’ ಏನು ಅರ್ಥಮಾಡಿಕೊಂಡೀತು? ಪಾಪ, ತಾವು ತಮ್ಮಲ್ಲಿ ಮೊದಲೇ ಇರುವ ಒಂದಿಷ್ಟು ಉತ್ತರ ಎಂಬ ಸರಕಿಗೆ ‘ಪ್ರಶ್ನೆ’ ಜೋಡಿಸುವವರು. ಸಾಮಾನ್ಯವಾಗಿ ಮೊದಲು ಪ್ರಶ್ನೆ ಹುಟ್ಟುತ್ತದೆ, ಅದಕ್ಕೆ ಸೂಕ್ತ ಉತ್ತರವನ್ನು ಹುಡುಕಲಾಗುತ್ತದೆ. ತಮ್ಮ ಕೇಸು ಉಲ್ಟಾ ಆದ್ದರಿಂದ ನಿಮ್ಮ ನಿರೀಕ್ಷೆಯ ಉತ್ತರ ಯಾರಿಂದಲೂ ಬರಲು ಸಾಧ್ಯವೇ ಇಲ್ಲ.
ತಮ್ಮ ಘನ ವಾದ ಹೀಗಿದೆ:
“ಇದಪ್ಪ ಪಲಾಯನವಾದ ಅಂದ್ರೆ, ಪ್ರಶ್ನೆ ಸರಿ ಇಲ್ಲ ಅಂದ್ಬಿಡೋದು.
ಗೋಮಾಂಸ ಭಕ್ಷಣೆಯ ವಿರೋಧ ರಿಲಿಜನ್ನಾಗಿ ಮಾಡುವ ವ್ಯರ್ಥ ಪ್ರಯತ್ನದ ಒಂದು ತುಣುಕು ಎಂದು ಲೇಖಕರು ಒಪ್ಪಿಕೊಂಡಿದ್ದು ಆಯ್ತು. ಅಂದಮೇಲೆ ನೀವು ಹೆಸರಿಸಿದ ವ್ಯಕ್ತಿಗಳು ರಿಲಿಜಿಯನ್ ಮಾಡ ಹೊರಟವರಾಗಿದ್ದರೆ ಗೋಮಾಂಸ ಭಕ್ಷಣೆಯ ವಿರೋಧದ ಸಂಗತಿಯನ್ನು ಹೇಳಿರಲೇ ಬೇಕು. ಒಂದು ವೇಳೆ ಅವರು ಹಾಗೆ ಹೇಳಿರದಿದ್ದರೆ ಅವರು ಹಿಂದೂ ವನ್ನು ರಿಲಿಜಿಯನ್ ಮಾಡ ಹೊರಟವರಲ್ಲ ಎಂದಾಯಿತು.
ಇದರಲ್ಲಿ ನಿಮ್ಮ ಪ್ರಶ್ನೆ ಯಾವುದು ತರ್ಕ ಯಾವುದು? ತುಸು ಬೆಳಕಿನ ‘ಕಿರಣ’ ಹರಿಸಿ ಉಪಕರಿಸಿ.
ಲಾಜಿಕ್ ತುಂಬಾ ಸಿಂಪಲ್ ಸರ್.
‘ಗೋಮಾಂಸ ಭಕ್ಷಣೆಯ ವಿರೋಧ’ ರಿಲಿಜನ್ನಾಗಿ ಮಾಡುವ ಪ್ರಯತ್ನದ ಒಂದು ತುಣುಕಾದರೆ, ಅದರ ಮೂಲ ಎಲ್ಲಿಂದ ಬಂತು? ಇಲ್ಲಿರುವ ಸಾಧ್ಯತೆಯೆಂದರೆ ರಿಲಿಜಿಯನ್ ಕಟ್ಟಲು ಪ್ರಯತ್ನಿಸುತ್ತಿರುವವರು ಗ್ರಾಂಥಿಕ ಆಧಾರದಿಂದ ಗೋಮಾಂಸ ಭಕ್ಷಣೆ ತಪ್ಪು ಎಂಬ ವಿದಿಯನ್ನು ಅನುಯಾಯಿಗಳಿಗೆ ವಿದಿಸಬೇಕು. ಇಲ್ಲದಿದ್ದರೆ ವಿರೋಧ ಹುಟ್ಟಲು ಹೇಗೆ ಸಾಧ್ಯ?
ಇಲ್ಲಿ ನೀವು ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಕೆಲವು ವ್ಯಕ್ತಿಗಳ ಹೆಸರನ್ನು ನೀವು ಸೂಚಿಸಿದ್ದೀರಾ.
ಹಾಗಾಗಿ ‘ಗೋಮಾಂಸ ಭಕ್ಷಣೆಯ ವಿರೋಧ’ ರಿಲಿಜನ್ನಾಗಿ ಮಾಡುವ ಪ್ರಯತ್ನದ ಒಂದು ತುಣುಕಾದರೆ ನೀವು ಸೂಚಿಸಿದ ಆ ವ್ಯಕ್ತಿಗಳು (ಜೋನ್ಸ್, ಆಲಿವೆಲ್-ಟೇಲರ್, ನಮ್ಮವ್ರೇ ಆದ ಹಳಕಟ್ಟಿ, ನಾರಾಯಣಾಚಾರ್ಯ, ದರ್ಗಾ), ಗೋಮಾಂಸವನ್ನು ವಿರೋಧಿಸಿರಬೇಕು ಎಂದಾಯಿತು. ಯಾಕೆ ಎಂದರೆ ಅವರು ಗೋಮಾಂಸ ಭಕ್ಷಣೆಯ ವಿರೋಧಿಸಿರದಿದ್ದರೆ ಅವರು ರಿಲಿಜಿಯನ್ನಾಗಿಸುವ ಪ್ರಕ್ರಿಯೆಯಲ್ಲಿ ಗೋಮಾಂಸದ ವಿರೋಧ ಇರುತ್ತಿರಲಿಲ್ಲ.
ಇಲ್ಲದಿದ್ದರೆ ‘ಗೋಮಾಂಸ ಭಕ್ಷಣೆಯ ವಿರೋಧ’ ರಿಲಿಜನ್ನಾಗಿ ಮಾಡುವ ಪ್ರಯತ್ನದ ಭಾಗ ಅಲ್ಲ ಎನ್ನುವದು ಪ್ರೂವ್ ಆಗುತ್ತದೆ ಅಷ್ಟೆ. ಹೀದನ್ ಓದಿಕೊಂಡವರಿಗೆ ಇಷ್ಟು ಸಿಂಪಲ್ ಲಾಜಿಕ್ ಅರ್ಥವಾಗುವದಿಲ್ಲವೇ?
ಅಯ್ಯೋ ಕರ್ಮವೇ! ಹೇಳಿದ್ದನ್ನು ಅಡ್ಡಡ್ಡ ಓದಿಕೊಂಡರೆ ಹೀಗೇ ಆಗುವುದು. ಜೋನ್ಸ್ ಇತ್ಯಾದಿಗಳನ್ನು ನಾನು ಹೇಳಿದ್ದು ನಿಮ್ಮ ‘ಹಿಂದೂವನ್ನು ರಿಲಿಜನ್ನಾಗಿ ಮಾಡಲು ಯತ್ನಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ. ದನ ತಿನ್ನುವುದನ್ನು ರಿಲೀಜನ್ನಾಗಿ ಮಾಡಿದರು ಎಂಬ ಹೊಸ ಸೇರ್ಪಡೆ ಈಗ ಮಾಡಿಕೊಂಡು ಜೋನ್ಸ್ ಹಾಗೆಲ್ಲಿ ಹೇಳಿದ್ದಾರೆ? ದರ್ಗಾ ಹಾಗೆಲ್ಲಿ ಹೇಳಿದ್ದಾರೆ? ಅಂದರೆ? ದನ ಅಂತಲ್ಲ, ಮಾಂಸಾಹಾರ ಮಾಡಬಾರದು ಎಂದು ಜೈನ, ದ್ವೈತ, ಅದ್ವೈತ, ಶಕ್ತಿ ವಿಶಿಷ್ಟಾದ್ವೈತ ಇತ್ಯಾದಿಗಳು ಹೇಳಿವೆ, ಸ್ಮೃತಿಗಳೂ ಹೇಳಿವೆ. ಬೇಕಾದವರು ಬೇಕಾದ್ದು ತಿಂದುಕೊಳ್ಳಲಿ, ಯಾವ ಆಹಾರ ನಿಷಿದ್ಧ ಎಂಬುದು ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿರುವವರಿಗೆ ಮುಖ್ಯವೇ ವಿನಾ ಸಾಮಾನ್ಯರಿಗಲ್ಲ. ಮಾಂಸವಷ್ಟೇ ಅಲ್ಲ, ತರಕಾರಿಯಲ್ಲೂ ನಿಷಿದ್ಧಗಳಿವೆ. ಇಂಥ ನೂರಾರು ವಿಧಿಗಳಿವೆ. ಇವುಗಳನ್ನು ಯಾರೋ ಒಬ್ಬರು, ಒಂದು ನಿರ್ದಿಷ್ಟ ಕೃತಿಯಲ್ಲಿ ಹೇಳಿದ್ದಲ್ಲ. ಹೀಗೆ ಅಲ್ಲಲ್ಲಿ ಹೇಳಲಾದ ಇಂಥ ಸಂಗತಿಯನ್ನು ಎತ್ತಿಕೊಂಡು ಹಿಂದೂ ರಿಲೀಜನ್ ಸ್ಥಾಪಿಸುವ ಯತ್ನ ನಡೆಯುತ್ತಲೇ ಇದೆ.
-ಈಗಾದರೂ ತಮ್ಮ ಘನ ಪ್ರಶ್ನೆಗೆ ಸಮಾಧಾನ ದೊರೆತಿದೆ ಅಂದುಕೊಂಡಿದ್ದೇನೆ.
-ಏನೋ ಸಿಕ್ಕಿದ್ದು ಓದಿಕೊಳ್ಳುವುದು ದೊಡ್ಡದಲ್ಲ, ಕಲಿತದ್ದು ತಪ್ಪಿರಬಹುದು, ಅನ್ ಲರ್ನಿಂಗ್ ಮಾಡಿಕೊಳ್ಳುವುದು ಕಷ್ಟ. ನಿಮ್ಮ ಸಮಸ್ಯೆ ಇದೇ ಅನಿಸುತ್ತಿದೆ.
“ಜೋನ್ಸ್ ಇತ್ಯಾದಿಗಳನ್ನು ನಾನು ಹೇಳಿದ್ದು ನಿಮ್ಮ ‘ಹಿಂದೂವನ್ನು ರಿಲಿಜನ್ನಾಗಿ ಮಾಡಲು ಯತ್ನಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ. ದನ ತಿನ್ನುವುದನ್ನು ರಿಲೀಜನ್ನಾಗಿ ಮಾಡಿದರು ಎಂಬ ಹೊಸ ಸೇರ್ಪಡೆ ಈಗ ಮಾಡಿಕೊಂಡು ಜೋನ್ಸ್ ಹಾಗೆಲ್ಲಿ ಹೇಳಿದ್ದಾರೆ? ದರ್ಗಾ ಹಾಗೆಲ್ಲಿ ಹೇಳಿದ್ದಾರೆ? ಅಂದರೆ?”
ಹಾಗಿದ್ದರೆ ರಿಲಿಜಿಯನ್ನಾಗಿ ಮಾಡಲು ಯತ್ನಿಸಿದವರೇ ‘ದನ ತಿನ್ನುವದು ನಿಷಿದ್ಧ’ ಎಂದು ಹೇಳಲಿಲ್ಲವೆ? ಅಂದರೆ ಗೋಮಾಂಸ ಭಕ್ಷಣೆಯ ವಿರುದ್ಧದ ಕೂಗಿಗೂ, ರಿಲಿಜಿಯನ್ ಮಾಡುವ ಪ್ರಕ್ರಿಯೆಗೂ ಯಾವ ಸಂಬಂಧವೂ ಇಲ್ಲವೇ? ಸಂಬಂಧ ಇದೆ ಎಂದಾದರೆ ಹೇಗೆ ವಿವರಿಸಿ? ಸಂಬಂದ ಇದೆ ಎಂದಾದರೆ ರಿಲಿಜಿಯನ್ ಮಾಡಲು ಯತ್ನಿಸಿದ ನೀವು ಹೆಸರಿಸಿದ ವ್ಯಕ್ತಿಗಳು ಗೋಮಾಂಸ ಭಕ್ಷಣೆಯ ವಿರುದ್ಧದ ಹೋರಾಟಕ್ಕೆ ಯಾವುದಾದರೂ ರೀತಿಯಿಂದ ಪ್ರಭಾವಿಸಿರಲೇ ಬೇಕು. ಅದನ್ನು ವಿವರಿಸಿ.
[ರಿಲಿಜಿಯನ್ ಅಂದ್ರೆ ಬೇರೆ ಬೇರೆ ಗ್ರಂಥಗಳನ್ನ ಹೇಗೆ ಒಪ್ಪಿಕೊಳ್ಳುತ್ತೆ? ಯಾಕೆ ಒಪ್ಪಿಕೊಳ್ಳಲ್ಲ ಅಂದ್ರೆ ಬೇರೆ ಬೇರೆ ಗ್ರಂಥಗಳಲ್ಲಿ ದೇವರ ಬಗೆಗಿನ ವಿವರಣೆಗಳು ಬೇರೆ ಬೇರೆ ತೆರನಾಗಿಯೇ ಇರುತ್ತೆ. ರಿಲಿಜಿಯನ್ ಅನ್ನೋದು ಇಂತಹ ವೈವಿಧ್ಯಗಳನ್ನು ತನ್ನೊಳಗೆ ಸೆರಿಸಿಕೊಳ್ಳಲ್ಲ. ಉದಾರಣೆಗೆ ಒಂದು ಪುರಾಣ ಶಿವ ಶ್ರೇಷ್ಟ ಅಂದ್ರೆ ಇನ್ನೊಂದು ಪುರಾಣ ವಿಷ್ಣು ಶ್ರೇಷ್ಠ ಅನ್ನುತ್ತೆ. ವೇದಗಳು ಇನ್ನು ಬೇರೇನೋ ಹೇಳಬಹುದು. ಆದರೆ ರಿಲಿಜಿಯನ್ ಇದಕ್ಕೆ ತದ್ವಿರುದ್ಧವಾಗಿ ದೇವರ ಬಗೆಗೆ ಒಂದೆ ವಿವರಣೆಯನ್ನು ಮಂಡಿಸುತ್ತದೆ. ಇದು ಬಾಲಗಂಗಾಧರರ ರಿಲಿಜಿಯನ್ ಬಗೆಗಿನ ವಿವರಣೆಯಲ್ಲಿಯೆ ಇದೆ(ನೀವೇ ಸರಿಯಾಗಿ ಹೀದನ್ ಓದಿಲ್ಲವೇನೊ!). ]
ಅಯ್ಯಯ್ಯಪ್ಪ! ಹೌದಾ!! ನಾನ್ ನಿಮ್ತರ ಮಹಾಮೇಧಾವಿ ಏನಲ್ವಲಾ !! ಈ ಮತಗಳು ತದ್ವಿರುದ್ದ ವಿವರಣೆ ಇವೆ ಇವು ವಿಭಿನ್ನಸಂಪ್ರದಾಯಗಳ ಗುಣಗಳಾಗಿ ವಿವರಿಸಿದ್ದಾರೆ ಅಂತ ಕೇಳಿದೀನಿ. ಮತ್ತು ಈ ಗುಣದ ಕಾರಣದಿಂದನೇ ರಿಲಿಜನ್ನುಮಾಡುವ ಪ್ರಕ್ರಿಯೆ ಕೂಡ ಯಶಸ್ಸಾಗಿಲ್ಲ, ತೋಪಾಗಿದೆ. ಅಂತನೂ ಹೇಳ್ತಾರೆ ಅಂತ ಕೇಳಿದೀನಪ್ಪ. ಅದ್ರೆ ಇದರರ್ಥ ಹಿಂದುತ್ವವಾದದ ಪ್ರಯತ್ನ ರಿಲಿಜನ್ನು ಮಾಡುವ ಪ್ರಯತ್ನವೇ ಆಗ್ತಿಲ್ಲ ಅನ್ನಕ್ಕಯ್ತದೇ ನಮ್ಮಣ್ಣಿ? ಅದೆಂಗೆ ಒಸಿ ಹೇಳಮ್ಮಿ
[ಹಾಗಾಗಿ ಹಿಂದುವನ್ನು ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿಯೂ ಕೂಡ ಧರ್ಮಗ್ರಂಥವಾಗಿ ಪುರಾಣ, ವೇದ, ಸ್ಮೃತಿ ಇವುಗಳೆಲ್ಲವೂ ಒಳಗೊಳ್ಳಲು ಸಾಧ್ಯವಿಲ್ಲ. ಈಗ ನೀವೆ ಉತ್ತರಿಸಿ. ಒಂದು ರಿಲಿಜಿಯನ್ ಆಗುವ ಪ್ರಕ್ರಿಯೆಯಲ್ಲಿಯೂ ಕೂಡ ಅದು ದೇವರ ಬಗೆಗೆ ಬೇರೆ ಬೇರೆ ವಿವರಣೆಗಳನ್ನು ಒಳಗೊಳ್ಳಲು ಸಾಧ್ಯವೇ? ಬಾಲಗಂಗಾಧರರ ವಿವರಣೆಗಳ ಮುಖಾಂತರ ವಿವರಿಸಿ.]
ಸುಮ್ನೆ ಯಾಕಪ್ಪ ಬುಡ್ ಬುಡಿಕೆ ಆಡಿಸ್ತಿದಿಯಾ? ರಿಲಿಜನ್ ಮಾಡುವ ಪ್ರಕ್ರಿಯೆ ಮಾಡಿದ್ರು ಅಂದ್ರೆ ಅರ್ಥ ರಿಲಿಜನ್ನೇ ಮಾಡಿಬುಟ್ರು ಅಂಥ ಅರ್ಥನಾ? ಪ್ರಯತ್ನ ಮಾಡಿ ತಾವೇ ಹೇಳೋ ಈ ವೈರುದ್ಯ ಅಂಶಗಳ ಕಾರಣದಿಂದ ಅದು ವಿಫಲವೂ ಆಗ್ತಿದೆ ಅಂತ ಅರ್ಥಮಾಡ್ಕೋಬಹುದಲ್ಲ!?
ಇಲ್ಯಾರಾದ್ರೂ ಹಿಂದೂ ರಿಲಿಜ್ಜನು ಮಾಡ್ ಬುಟ್ಟವರೇ ಅದು ಇಲ್ಲಿ ಇದೆ ಅಂತ ಏನಾರೂ ಹೇಳವ್ರ? ಸುಮ್ನೆ ಖಾಲಿ ಬುರುಡೆಯೊಳಗೆರಡು ಒಣಸಗಣಿ ಹಾಕ್ಕೊಂಡು ಅಲ್ಲಾಡಿಸ್ಕೊಂಡು ಕೂಂತಿದಿಯಲ್ಲಾ?
“ರಿಲಿಜನ್ ಮಾಡುವ ಪ್ರಕ್ರಿಯೆ ಮಾಡಿದ್ರು ಅಂದ್ರೆ ಅರ್ಥ ರಿಲಿಜನ್ನೇ ಮಾಡಿಬುಟ್ರು ಅಂಥ ಅರ್ಥನಾ?”
ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿಯೂ ಕೂಡ ರಿಲಿಜಿಯನ್ನಾಗಿ ಮಾಡುವ ವ್ಯಕ್ತಿಗಳು/ಸಂಸ್ಥೆ ಬಹು ಗ್ರಂಥಗಳನ್ನು ಒಳಗೊಳ್ಳಲು ಹೇಗೆ ಸಾಧ್ಯ? ‘ರಿಲಿಜಿಯನ್ ಮಾಡುವ ಪ್ರಕ್ರಿಯೆ’ ಎಂದರೇ ಏಕ ಗ್ರಂಥವನ್ನಾಗಿ, ದೇವರ ಕುರಿತ ಏಕ ವಿವರಣೆಯನ್ನು ಮಾಡುವ ಪ್ರಯತ್ನ. ಆ ಪ್ರಯತ್ನ ಬಹುತ್ವವನ್ನು ಒಳಗೊಳ್ಳಲು ಸಾಧ್ಯವೇ ಇಲ್ಲ.
ಸರಿ ಈಗ ಉತ್ತರಿಸಿ. ರಿಲಿಜಿಯನ್ ಮಾಡುವ ಪ್ರಯತ್ನದಲ್ಲಿ ಹಿಂದೂ ಸಂಪ್ರದಾಯಸ್ಥರು ಯಾವ ಗ್ರಂಥವನ್ನು, ದೇವರ ಕುರಿತ ಯಾವ ವಿವರಣೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದರು? ಆಧಾರ ಸಹಿತ ವಿವರಿಸಿ. (ಅದು ವಿಫಲ ಆಯ್ತೋ, ಸಫಲ ಆಯ್ತೋ ಅನ್ನುವದು ನಂತರ. ಆ ಪ್ರಯತ್ನ ನಡೆದಿರಲೇ ಬೇಕಲ್ಲ! ವಿವರಿಸಿ.)
ರಿಲಿಜನ್ನು ಮಾಡೋ ಪ್ರಕ್ರಿಯೆ ನಡೆದೇ ಇರಲಿಲ್ಲ ಅಂತ ಆಧಾರ ಸಹಿತ ನೀವು ವಿವರಿಸಿ ಅಮ್ಮೋರೆ!!?
ತಮ್ಗೆ ರಿಲಿಜನ್ನಿನ ಚೌಕಟ್ಟು ಇಟ್ಕೊಂಡು ಇಲ್ಲಿಯ ಸಂಪ್ರದಾಯಗಳನ್ನು ಗ್ರಂಥಗಳನ್ನು ವಿವರಿಸಕೊಳ್ಳೋಕೆ ಹೋದ್ರು ಅಂದ್ರೆ ಅದು ರಿಲಿಜನ್ನಾಗಿ ಮಾಡಿಕೊಳ್ಳೋ ಪ್ರಕ್ರಿಯತರ ಕಾಣ್ತಿಲ್ವಲ್ಲಾ? ಇದನ್ನು ಆಧಾರ ಸಮೇತ ತೋರಿಸಲಾಗಿದೆ. ಬೇಕೂಂದ್ರೆ ಹೋಗಿ ಈ ಗುಂಪ್ನೋರ ಪುಸ್ತಕಗಳನ್ನು ಕೊಂಡ್ಕೊಂಡು ಓದಿ. : -) ಇಂಗ್ಲೀಷ್ ಬರೋಕಿಲ್ಲಾ ಅಂದಿದ್ದಲ್ವಾ? ಕನ್ನಡದಲ್ಲಿ ಬೇಕೆಂದ್ರೆ ‘ಪೂರ್ವಾಲಕೋನ’ ಬುಕ್ಕಲ್ಲಿ ‘ಸೆಕ್ಯುಲರಿಸಂ ನ ಕರಿನೆರಳು’ ಅಂತ ಒಂದು ಲೇಖ್ನ ಇದೆ ಹೋಗಿ ಓದ್ಕೋ.. ಆಧಾರ ಸಮೇತ ಹೇಳೋವ್ರೆ! ಎಲ್ಲಾನ್ನೂ ಪುಕ್ಸಟ್ಟೆನೇ ಸಿಗಲ್ಲ ! 🙂 🙂 🙂 ಅಷ್ಟು ಓದಾಕ್ಕಾಗಾಕ್ಕಿಲ್ಲ ಅಂದ್ರೆ ಇನ್ನೆಂಥ ಮಣ್ಣಾಂಗಟ್ಟಿನೂ ತೋರ್ಸೋಕ್ ಆಗಲ್ಲ!
“ರಿಲಿಜನ್ನು ಮಾಡೋ ಪ್ರಕ್ರಿಯೆ ನಡೆದೇ ಇರಲಿಲ್ಲ ಅಂತ ಆಧಾರ ಸಹಿತ ನೀವು ವಿವರಿಸಿ ಅಮ್ಮೋರೆ!!?”
ರಿಲಿಜಿಯನ್ ಚೌಕಟ್ಟು ಹಾಕಲು ಏಕ ಗ್ರಂಥವನ್ನು ಮತ್ತು ಏಕ ದೇವನ ವಿವರಣೆಯನ್ನು ಹುಟ್ಟುಹಾಕುವದಾಗಲೀ, ಹಾಗೂ ಅದನ್ನು ಜಾರಿಗೆ ತರಲು ಸಂಸ್ಥೆಯನ್ನು ಹುಟ್ಟುಹಾಕುವ ಯಾವ ಪ್ರಯತ್ನಗಳು ನಡೆದಿಲ್ಲ. ಇದ್ದರೆ ವಿವರಿಸಿ. ಅದನ್ನೇ ಅಲ್ವೇ ನಿಮಗೆ ಕೇಳಿದ್ದು. ಉತ್ತರಿಸಿ.
“ತಮ್ಗೆ ರಿಲಿಜನ್ನಿನ ಚೌಕಟ್ಟು ಇಟ್ಕೊಂಡು ಇಲ್ಲಿಯ ಸಂಪ್ರದಾಯಗಳನ್ನು ಗ್ರಂಥಗಳನ್ನು ವಿವರಿಸಕೊಳ್ಳೋಕೆ ಹೋದ್ರು ಅಂದ್ರೆ ಅದು ರಿಲಿಜನ್ನಾಗಿ ಮಾಡಿಕೊಳ್ಳೋ ಪ್ರಕ್ರಿಯತರ ಕಾಣ್ತಿಲ್ವಲ್ಲಾ?”
ನಿಮಗೆ ಇಲ್ಲೇ ಅಜ್ಞಾನ ಇರುವದು. ವಿವರಿಸಿದ ತಕ್ಷಣ ಅದು ರಿಲಿಜಿಯನ್ ಪ್ರಕ್ರಿಯೆ ಹೇಗಾಗುತ್ತದೆ? ವಿವರಣೆ ಎಂದರೆ ಒಂದು ಸಂಗತಿಯನ್ನು ವಿವರಿಸುವದು. ರಿಲಿಜಿಯನ್ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಬೇಕಾಗುವದು, ಧರ್ಮಗ್ರಂಥವನ್ನು ಹುಟ್ಟುಹಾಕುವದು, ಸಂಸ್ಥೆಯೊಂದನ್ನು ತೆರೆಯುವ ಪ್ರಯತ್ನ ಇತ್ಯಾದಿ. ಇಷ್ಟೂ ಅರ್ಥವಾಗುವದಿಲ್ಲವೇ?
(ರಿಲಿಜಿಯನ್ ಚೌಕಟ್ಟು ಹಾಕಲು ಏಕ ಗ್ರಂಥವನ್ನು ಮತ್ತು ಏಕ ದೇವನ ವಿವರಣೆಯನ್ನು ಹುಟ್ಟುಹಾಕುವದಾಗಲೀ, ಹಾಗೂ ಅದನ್ನು ಜಾರಿಗೆ ತರಲು ಸಂಸ್ಥೆಯನ್ನು ಹುಟ್ಟುಹಾಕುವ ಯಾವ ಪ್ರಯತ್ನಗಳು ನಡೆದಿಲ್ಲ.)
ನಾನ್ಹೇಳಿದ್ ಲೇಖನ ಹೋಗ್ ನೋಡಮ್ಮೋ !! ನಿಂಗೊತ್ತಿಲ್ಲ ಅಂದ್ರೆ ನಡೆದೇ ಇಲ್ಲಾಂತಗತ್ತಾ? ಸ್ಯಾಂಪಲ್ ಗೆ ಹೇಳ್ಬೇಕಂದ್ರೆ ದಯಾನಂದ ಸರಸ್ವತಿ ಇಂಥದ್ದೊಂದು ವಿಫಲ ಯತ್ನ ಆರಂಭಿಸಿದ್ರು ಒಬ್ಬ ಗಾಡ್-Aum or Om , ಒಂದು ಡಾಕ್ಟ್ರೀನ್ -ವೇದ, ಸಂಸ್ಥೆ-ಆರ್ಯಸಮಾಜ.
http://www.aryasamajjamnagar.org/chapterseven.htm
(ವಿವರಿಸಿದ ತಕ್ಷಣ ಅದು ರಿಲಿಜಿಯನ್ ಪ್ರಕ್ರಿಯೆ ಹೇಗಾಗುತ್ತದೆ? ವಿವರಣೆ ಎಂದರೆ ಒಂದು ಸಂಗತಿಯನ್ನು ವಿವರಿಸುವದು. ರಿಲಿಜಿಯನ್ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಬೇಕಾಗುವದು, ಧರ್ಮಗ್ರಂಥವನ್ನು ಹುಟ್ಟುಹಾಕುವದು, ಸಂಸ್ಥೆಯೊಂದನ್ನು ತೆರೆಯುವ ಪ್ರಯತ್ನ ಇತ್ಯಾದಿ.) ಅಯ್ಯೋ ಅಯ್ಯೋ ಕಾಮಿಡಿ ಪೀಸು ಅದೇನು ತಲೇನೋ ಏನೋ ! ಹೋಗ್ಲಿ ಬಿಡು ನಿಂಗೆ ನೀನೇಳಿತ್ತರ ಇದ್ರೆ ಮಾತ್ರ ‘ರಿಲಿಜನ್ ಪ್ರಕ್ರಿಯೆ’ ಅನ್ನು ಕೂಪಮಂಡೂಕ ಜ್ಞಾನಕ್ಕೆ ತಕ್ನಾಗೇ ಆರ್ಯಸಮಾಜಿಗಳ ಉದಾಹರಣೆ ಇಟ್ಕೊ! ! ಥೋ ಥೋ ತನ್ನ ಅಜ್ಞಾನ ಎಲ್ಲಾ ಕಡೆ ಕಾಣತ್ತೆ ಇದಕ್ಕೆ! 🙂
“ನಾನ್ಹೇಳಿದ್ ಲೇಖನ ಹೋಗ್ ನೋಡಮ್ಮೋ !! ನಿಂಗೊತ್ತಿಲ್ಲ ಅಂದ್ರೆ ನಡೆದೇ ಇಲ್ಲಾಂತಗತ್ತಾ? ಸ್ಯಾಂಪಲ್ ಗೆ ಹೇಳ್ಬೇಕಂದ್ರೆ ದಯಾನಂದ ಸರಸ್ವತಿ ಇಂಥದ್ದೊಂದು ವಿಫಲ ಯತ್ನ ಆರಂಭಿಸಿದ್ರು ಒಬ್ಬ ಗಾಡ್-Aum or Om , ಒಂದು ಡಾಕ್ಟ್ರೀನ್ -ವೇದ, ಸಂಸ್ಥೆ-ಆರ್ಯಸಮಾಜ.”
ಹೌದಾ. ಹಾಗಿದ್ದರೆ ಆರ್ಯ ಸಮಾಜದ ದೇವರ ವಿವರಣೆಯ ಪ್ರಕಾರ ಪ್ರಾಫೆಟ್(ಧರ್ಮ ಸಂಸ್ಥಾಪಕ) ಯಾರು? ಅವರು ತಾವೇ ಸನಾತನ ಧರ್ಮದ ಪ್ರಾಫೆಟ್ ಎಂದೇನು ಹೇಳಿಲ್ಲ.
ಅಲ್ಲದೆ ಆರ್ಯ ಸಮಾಜ ಕ್ಕೂ ಚರ್ಚ್ ಮಾದರಿಗೂ ಹೋಲಿಸುವದು ಅಸಂಬದ್ಧ. ಚರ್ಚ್ ಸಾಮಾಜದ ಮೇಲೆ ಅಧಿಕಾರವನ್ನು ಹೊಂದಿತ್ತು. ಬೈಬಲ್ ಗೆ ವಿರುದ್ಧವಾಗಿ(ಹೆರೆಸಿ) ನಡೆದವರನ್ನು ಶಿಕ್ಷಿಸುವ ಅಧಿಕಾರವನ್ನು ಹೊಂದಿತ್ತು. ಹಾಗೂ ಬೈಬಲ್ಲಿನ ತನ್ನ ವಿವರಣೆಯನ್ನು ಸಮಾಜದ ಮೇಲೆ ಹೇರಿತ್ತು. ಆದರೆ ಆರ್ಯ ಸಮಾಜ ಇಂತಹ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಚರ್ಚ್ ನ ಯಾವ ಲಕ್ಷಣಗಳೂ ಇಲ್ಲ. ಆರ್ಯ ಸಮಾಜದಂತೆ ಬ್ರಹ್ಮಸಮಾಜ, ಚಿಂತನ ಮಿಶನ್, ರಾಮಕ್ರಷ್ಣ ಮಿಶನ್, ಬ್ರಹ್ಮಕುಮಾರಿಸ್ ಹಲವಾರು ಆಧ್ಯಾತ್ಮಿಕ ಸಂಸ್ಥೆಗಳು ಇವೆ. ರಿಲಿಜಿಯನ್ನಿನ ಉದ್ದೇಶ ಲಕ್ಷಣಗಳು ಈ ಯಾವ ಸಂಸ್ಥೆಗಳಿಗೂ ಇಲ್ಲ. ಹಾಗಾಗಿ ಚರ್ಚ್ ಎನ್ನುವದು ವ್ಯವಸ್ಥೆ ಯಾದರೆ, ಆರ್ಯಸಮಾಜ ವ್ಯವಸ್ಥೆಯಲ್ಲ. ಹೀದನ್ ಪುಸ್ತಕವನ್ನು ನೀವೇ ಸರಿಯಾಗಿ ಓದಿಲ್ಲವೇನೋ.
ಅದಿರಲಿ, ಶ್ರೀಪಾದರವರು ನೋಡಿದರೆ ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದರ ಬೇರೆಯದೇ ಹೆಸರನ್ನು(ಜೋನ್ಸ್, ಆಲಿವೆಲ್-ಟೇಲರ್, ನಮ್ಮವ್ರೇ ಆದ ಹಳಕಟ್ಟಿ, ನಾರಾಯಣಾಚಾರ್ಯ, ದರ್ಗಾ) ಹೇಳುತ್ತಾರೆ. ನೀವು ನೋಡಿದರೆ ಆರ್ಯಸಮಾಜ ಅಂತೀರಿ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಅಂದಂತಾಯ್ತು.
@ಪ್ರಜ್ನಾ: “ಅದಿರಲಿ, ಶ್ರೀಪಾದರವರು ನೋಡಿದರೆ ರಿಲಿಜಿಯನ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದರ ಬೇರೆಯದೇ ಹೆಸರನ್ನು(ಜೋನ್ಸ್, ಆಲಿವೆಲ್-ಟೇಲರ್, ನಮ್ಮವ್ರೇ ಆದ ಹಳಕಟ್ಟಿ, ನಾರಾಯಣಾಚಾರ್ಯ, ದರ್ಗಾ) ಹೇಳುತ್ತಾರೆ. ನೀವು ನೋಡಿದರೆ ಆರ್ಯಸಮಾಜ ಅಂತೀರಿ. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಅಂದಂತಾಯ್ತು”
– ಆರ್ಯ ಸಮಾಜ ಮತ್ತಿತರ ಸಂಸ್ಥೆಗಳ ಬಗ್ಗೆ ನೀವು ಹೇಳಿದ್ದು ಸರಿ. ನಾನು ನೀಡಿದ ಸ್ಯಾಂಪಲ್ ಹೆಸರುಗಳಲ್ಲಿ ಆರ್ಯ ಸಮಾಜವೂ ಸೇರಿದಂತೆ ತಾವು ಉಲ್ಲೇಖಿಸಿದ ಸಂಸ್ಥೆಗಳೂ ಸೇರುತ್ತವೆ, ಹಾಗಾಗಿಯೇ ನಾನು ಒಂದೇ ಎರಡೇ ಎಂದಿದ್ದು, ನಿಮ್ಮನ್ನೂ ಸೇರಿಸಬಹುದು, ಅಂದಿದ್ದೆ. ಈಗ ತಮ್ಮ ಸಮಸ್ಯೆ ಏನು? ದನ ತಿನ್ನುವುದು ಮಾತ್ರವಲ್ಲ, ಇಂಥ ಇನ್ನಷ್ಟು ಯಾವುದೇ ಬಿಡಿ ಯತ್ನಗಳನ್ನೂ ಅದಕ್ಕೆ ಸೇರಿಸಿಕೊಳ್ಳಿ (ಉದಾ: ರಾಮಾಯಣ ಅಥವಾ ಮಹಾಭಾರತವನ್ನು ಭಾರತದ ರಾಷ್ಟ್ರೀಯ ಕಾವ್ಯವೆಂದು ಸರ್ಕಾರ ಘೋಷಿಸುವಂತೆ ಹೇಳುವುದು). ಹುಡುಕಿದಷ್ಟೂ ಇಂಥ ನಿದರ್ಶನಗಳು ದೊರೆಯುತ್ತವೆ. ನೀವು ಯೋಚಿಸುವ ದಾರಿ ಸರಿ ಇದೆ…ಆದರೆ ತೀರ್ಮಾನಕ್ಕೆ ಬರುವಾಗ ಅನಗತ್ಯ ಗೊಂದಲ ಏಕೆ?
“ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಅಂದಂತಾಯ್ತು” ಅನ್ನುವುದೇನೂ ಇಲ್ಲಿ ಇಲ್ಲ, ಇವೆರಡೂ ಅತ್ತಿತ್ತ ಎಳೆದಾಡುವುದನ್ನು “ಎಮ್ಮೆಯಂತೆ” ಯಾರೂ ನೋಡುತ್ತಲೂ ಇರಬೇಕಿಲ್ಲ.
ಆರ್ಯ ಸಮಾಜಕ್ಕೂ ಹಾಗೂ ರಿಲಿಜಿಯನ್ ನ್ನಿನ ಉದ್ದೇಶ ಲಕ್ಷಣಗಳಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದೇನೆ. ಅದಕ್ಕೆ ನಿಮ್ಮ ಉತ್ತರ?
ವಿವರಣೆಗೆ ಯಾರು ಉತ್ತರಿಸುತ್ತಾರೆ? ಹೆಚ್ಚೆಂದರೆ ಯಾವುದೇ ವಿವರಕ್ಕೆ ತಕರಾರು ತೆಗೆಯಬಹುದು. ನಾನೇನಿದ್ದರೂ (ಪ್ರಶ್ನೆ ಕೇಳುವವರು ಹೇಗಾದರೂ ಇರಲಿ, ಯಾರಾದರೂ ಇರಲಿ) ಪ್ರಶ್ನೆ ಸರಿ ಅನಿಸಿದರೆ ಮಾತ್ರ ಉತ್ತರಿಸುತ್ತೇನೆ.
ಸರಿ ನಿಮ್ಮ ತಕರಾರಾದರೂ ಹೇಳಿ. ಆರ್ಯ ಸಮಾಜ ರಿಲಿಜಿಯನ್ ಮಾಡುವ ಯತ್ನ ಅಲ್ಲ ಎಂದು ವಿವರಿಸಿದ್ದೇನೆ. ಅದಕ್ಕೆ ನಿಮ್ಮ ತಕರಾರು ಆದರೂ ಇದೆಯಾ? ಹಾಗೆಯೇ ಇನ್ನೊಂದು ಪ್ರಶ್ನೆಯನ್ನು ಮೊದಲು ಕೇಳಿದ್ದೆ, ದಯವಿಟ್ಟು ಅದಕ್ಕೆ ಉತ್ತರಿಸಿ:
ಅಲ್ಲಾರಿ, ವಿವರಣೆ ನೀಡುವದಕ್ಕೂ, ನಿರ್ಮಿಸುವ ಪ್ರಯತ್ನಕ್ಕೂ ವ್ಯತ್ಯಾಸ ಗೊತ್ತಿಲ್ವೇನ್ರಿ? ತಾಜ್ ಮಹಲ್ ಹೀಗಿದೆ ಅಂತ ವಿವರಿಸಿಬಿಟ್ರೆ ಅದನ್ನು ಕಟ್ಟುವ ಪ್ರಯತ್ನ ಅಂತಾರಾ? ಮನಸ್ಸಿನಲ್ಲಿ ಮಂಡಿಗೆ ತಿಂದು, ಮಾತಲ್ಲಿ ಮಹಲ್ ಕಟ್ಟುವ ಸಂಶೋಧನಾಗಾರರಿಗೆ ಹಾಗನ್ನಿಸುವದು ಸಹಜವೇ ಬಿಡಿ 😀
@ ಪ್ರಜ್ನಾ ಆನಂದ್: ನೀವು ಹೇಳಿದ್ದು-“ಸರಿ ನಿಮ್ಮ ತಕರಾರಾದರೂ ಹೇಳಿ. ಆರ್ಯ ಸಮಾಜ ರಿಲಿಜಿಯನ್ ಮಾಡುವ ಯತ್ನ ಅಲ್ಲ ಎಂದು ವಿವರಿಸಿದ್ದೇನೆ. ಅದಕ್ಕೆ ನಿಮ್ಮ ತಕರಾರು ಆದರೂ ಇದೆಯಾ? ಹಾಗೆಯೇ ಇನ್ನೊಂದು ಪ್ರಶ್ನೆಯನ್ನು ಮೊದಲು ಕೇಳಿದ್ದೆ, ದಯವಿಟ್ಟು ಅದಕ್ಕೆ ಉತ್ತರಿಸಿ”
ನಾನು ಹೇಳೋದು: ಯಾಕೆ ತಕರಾರು ಹೇಳಬೇಕು? ಬರೆದುದು ನೋಡಿ, ಅದು ಅರ್ಥವಾಗಿ ಏನಾದರೂ ಹೇಳಬೇಕೆನಿಸಿದರೆ ತಾನೆ ಹೇಳೋಕೆ? ತಲೆ ಬುಡವಿಲ್ಲ-ತಕರಾರು ತೆಗೀಬೇಕಂತೆ! ಸಂಶೋಧನಾ ಬರಹ ಬಾಲು ಅವರ ಬರಹದಂತೆ ಇರಬೇಕು-ಅದು ನೋಡಿ-ಅವರೇನಾದರೂ ಕೇಳಿದ್ರಾ ಪ್ರಜ್ನಾ ಅವರೇ ತಕರಾರು ಎತ್ತಿ ಅಂತ? ಏನೋ ಹೊಳೆದುದು ಗೀಚಿ ಯಾರೂ ತಕರಾರೆತ್ತಿಲ್ಲ ಎಂದು ಒದರಿದರೆ ಏನು ಪ್ರಯೋಜನ?
ಏನೋ ಮಹಾ ತಿಳಿವಳಿಕಸ್ಥರು ಬರೆದುಕೊಂಡಿದ್ದಾರೆ ಹೋಗ್ಲಿ ಬಿಡು ಎಂದು ಸುಮ್ಮನಾದರೆ…ಪಲಾಯನವಾದ ಅಂತೀರಿ?! ನಿಮ್ಮಂಥವರನ್ನು ನೋಡಿಯೇ ಇರಬೇಕು ಕುವೆಂಪು ಹೇಳಿದ್ದು-‘ನವಿಲಿನ ಪುಕ್ಕ ಸಿಕ್ಕಿಸಿಕೊಂಡ ಕೆಂಬೂತ’ ಎಂದು! ನವಿಲು ಕಂಡು ಸಂತೋಷ ಪಡ್ತೀರಾ ನನ್ನನ್ನೂ ನೋಡಿ ಎಂದು ಗೋಗರೆಯುವುದರಲ್ಲಿ ಅರ್ಥವಿದೆಯಾ?
-ಇಲ್ಲ-ನಿಮ್ಮ ವಿವರ ನಿಮ್ಮದು. ನಾನೇಕೆ ತಕರಾರು ಎತ್ತಲಿ?
– ಮೊದಲು ಒಂದು ಪ್ರಶ್ನೆ ಕೇಳಿದ್ದೆ ಅಂದ್ರೆ ಯಾವುದು? ಕೇಳಿದ್ದಕ್ಕೆಲ್ಲ ಉತ್ತರಿಸುತ್ತೇನೆ ಎಂದೇನೂ ಇಲ್ಲ, ಅರ್ಥವಿರುವ ಪ್ರಶ್ನೆಗಷ್ಟೇ ನನ್ನ ಉತ್ತರ ಸೀಮಿತ. ನಾನೂ ‘ತಾವು ಜಗದ್ಗುರುಗಳೋ, ಮಹಾಪ್ರಭುಗಳೋ’ ಎಂದು ಕೇಳಿದ್ದೆ-ಉತ್ತರಿಸಿದ್ರಾ? ಇಲ್ವಲ್ಲಾ.
ಇದನ್ನು ಪಲಾಯನವಾದ ಎನ್ನದೆ ಇನ್ನೇನನ್ನು ಹೇಳಲು ಸಾಧ್ಯವಿಲ್ಲ. ನಾನು ಇಲ್ಲಿನ ಚರ್ಚೆಯಲ್ಲಿ ಬಳಸಿದ್ದು ಬಾಲಗಂಗಾಧರ ಅವರ ರಿಲಿಜಿಯನ್ ಕುರಿತ ವಿವರಣೆಗಳೆ. ನಿಮ್ಮ ವಿವರಣೆಗಳನ್ನು ಬಳಸಿ ನಿಮ್ಮ ಲೇಖನದಲ್ಲಿನ ವಾದಗಳನ್ನೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ‘ಸೆಲ್ಫ್ ಕಾಂಟ್ರಾಡಿಕ್ಷನ್’ ನಲ್ಲಿ ವಿವರಣೆ ನಿಲ್ಲುತ್ತದೆ ಎಂದು ಸಾಭೀತಾಯಿತು ಅಷ್ಟೆ. This is the fatal flaw of an argument. ನಾನು ನಿಮ್ಮ ಪ್ರಶ್ನೆ ‘ ‘ತಾವು ಜಗದ್ಗುರುಗಳೋ, ಮಹಾಪ್ರಭುಗಳೋ’ ಗೆ ಉತ್ತರಿಸಿಲ್ಲ. ಯಾಕೆಂದ್ರೆ ಅದು ಚರ್ಚೆಗೆ ಅನವಶ್ಯಕ ಅಂತ. ಅವಶ್ಯಕ ಅನ್ನಿಸಿದ್ರೆ ಉತ್ತರಿಸುತ್ತೇನೆ. ನಾನೊಬ್ಬ ಆಮ್ ಆದ್ಮಿ. ಸಾಮಾನ್ಯ ಮನುಷ್ಯ.
‘ಸೆಲ್ಫ್ ಕಾಂಟ್ರಾಡಿಕ್ಷನ್’ ನಲ್ಲಿ ವಿವರಣೆ ನಿಲ್ಲುತ್ತದೆ ಎಂದು ಸಾಭೀತಾಯಿತು ಅಷ್ಟೆ”
-ಅದು ಎಂದೋ ಸಾಬೀತಾಗಿದೆ. ನಿಮ್ಮ ವಿವರ ಮುಂದೆ ಯಾಕೆ ಹೋಗಲಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕಷ್ಟೇ!
@ಪ್ರಜ್ನಾ ಆನಂದ್: ಅಂದಹಾಗೆ…ಒಂದು ವಿಷಯ ಮರೆತಿದ್ದೆ, ಹುಲುಮಾನವ ನೋಡಿ, ಅದಕ್ಕೆ…ನಾನೇನೂ ‘ನಿಮಗೆ’ ಎಂಬ ಪ್ರಯೋಗ ಬಳಸಿರಲಿಲ್ಲ, ಆದರೂ “ಯಾವ ಹಠವೂ ನಮಗೆ ಇಲ್ಲವಲ್ಲ” ಎಂದು ಉತ್ತರಿಸಿದ್ದೀರಿ. ನೀವು ಎಷ್ಟು ಜನ? ಒಬ್ಬರೋ ಸಂಸ್ಥೆಯೋ? ಅಥವಾ ಜಗದ್ಗುರುಗಳೋ ಮಹಾಪ್ರಭುಗಳೋ? ಅಲ್ಲೆಲ್ಲ “ಏಕವಚನಕ್ಕೆ ಬಹುವಚನವಕ್ಕುಂ”. ದಯಮಾಡಿ ತಿಳಿಸಿ. ಆಗ ಇನ್ಮುಂದೆ ‘ಅಗತ್ಯ ಬಿದ್ದರೆ’ ತಮ್ಮ ಸನ್ನಿಧಾನದೊಂದಿಗೆ ಸಂವಾದ ನಡೆಸುವಾಗ ಅಪಚಾರವಾಗದಂತೆ ಎಚ್ಚರವಹಿಸಲು ಅನುಕೂಲವಾಗುತ್ತದೆ.
@ಶ್ರೀಪಾದ್, ಹುಲುಮಾನವನಿಂದ ಶ್ರೇಷ್ಠ ಮಾನವನಾಗಿ. ಬಹುವಚನ ಸಂಬೋಧನೆಯನ್ನು ಕಲಿತುಕೊಳ್ಳಿ.
ಕೊನೆ ಪಕ್ಷ ವ್ಯಕ್ತಿತ್ವದಲ್ಲಾಗದಿದ್ದರೆ ಭಾಷಾ ಸೌಜನ್ಯದಲ್ಲಿಯಾದರೂ ಶ್ರೇಷ್ಠತೆ ಇರಲಿ.
ಫೇಕಾನಂದರೇ, ನಿಮ್ಮ ಪ್ರಕಾರ ಮನೆಮನೆಗೆ ಭಗವದ್ಗೀತೆ ಹಂಚುವುದು ವಿವರಿಸುವುದೋ ಅಥವಾ ನಿರ್ಮಿಸುವ ಪ್ರಯತ್ನವೋ?
ಪ್ರವೀಣ್,
ಭಗವದ್ಗೀತೆಯನ್ನು ಹಂಚುವದಕ್ಕೆ ಬೇಕಾದಷ್ಟು ಕಾರಣಗಳಿರಬಹುದು. ಕೇವಲ ಭಗವದ್ಗೀತೆಯನ್ನು ಹಂಚುವದು ಮಾತ್ರವಲ್ಲ, ಬ್ರಿಟಿಷರು ಬರುವ ಮೊದಲೇ ಅನೇಕ ಸಂತರು ತಮ್ಮ ತಮ್ಮ ದರ್ಶನಗಳನ್ನು ಸಾರಿದ್ದಾರೆ, ಪಸರಿಸಿದ್ದಾರೆ. ಹೊಸದಾಗಿ ಚರ್ಚೆ ಶುರು ಮಾಡುವ ಬದಲು ನಾನು ಕೇಳಿದ ಪ್ರಶ್ನೆಯಲ್ಲಿಯೇ ಚರ್ಚೆಯನ್ನು ಮುಂದುವರೆಸಬಹುದಿತ್ತು.
@ನಿಲುಮೆ ಅಡ್ಮಿನ್,
ನಿನ್ನೆ ಸಂತೋಶ್ ಶೆಟ್ಟಿಯವರು, ಚರ್ಚೆಯಲ್ಲಿ ‘naani’ ಬಳಸಿದ ಭಾಷೆಯನ್ನು ವಿರೋಧಿಸಿ ಕಮೆಂಟಿಸಿದ್ದರು. ಅದು ಈಗ ಡಿಲಿಟ್ ಆಗಿದೆ. ಸಂತೋಶ್ ಶೆಟ್ಟಿಯವರ ಆ ಕಮೆಂಟ್ ಅನುಚಿತವಾಗಿತ್ತೇನು? ದಯವಿಟ್ಟು ಸ್ಪಷ್ಟಪಡಿಸಿ.