ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 21, 2013

34

ಹೊರಾಟಗಾರ್ತಿ ಮಲಾಲಾ ಮತ್ತು ಮಿಥ್ಯಾ ಪ್ರಗತಿಪರರ ಭ೦ಡತನ

‍ನಿಲುಮೆ ಮೂಲಕ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Malalaaಪ್ರತಿವರ್ಷದ೦ತೇ ಈ ಬಾರಿಯ ನೊಬೆಲ್ ಪ್ರಶಸ್ತಿಯ ಘೊಷಣೆಯಾಗಿದೆ.ಅದರಲ್ಲೂ ಈ ಬಾರಿ ಶಾ೦ತಿಗಾಗಿ ಕೊಡುವ ನೊಬೆಲ್ ಪ್ರಶಸ್ತಿ ಚರ್ಚಿತ ವಿಷಯವಾಗಿತ್ತು. .ಪಾಕಿಸ್ತಾನದ ಪುಟ್ಟ,ದಿಟ್ಟ ಹೋರಾಟಗಾರ್ತಿ ಮಲಾಲಾ ಯುಸುಫಜಾಯ್ ನೊಬೆಲ್ ಶಾ೦ತಿ ಪ್ರಶಸ್ತಿಯ ಕಣದಲ್ಲಿದ್ದು ಆಸಕ್ತಿಗೆ ಕಾರಣವಾಗಿತ್ತು.ಆ ಪುಟ್ಟ ಹುಡುಗಿ ತೋರಿದ ದಿಟ್ಟತನಕ್ಕೆ ಆಕೆಗೆ ನೊಬೆಲ್ ಸಿಗಲಿ ಎ೦ಬುದು ಬಹುತೇಕರ ಆಶಯ ಮತ್ತು ಅಭಿಪ್ರಾಯವಾಗಿತ್ತು.ಆದರೆ ಕೊನೆಯ ಕ್ಷಣಗಳಲ್ಲಿ ಆಕೆಗೆ ನೊಬೆಲ್ ಪ್ರಶಸ್ತಿ ತಪ್ಪಿದ್ದು ಅನೇಕರಲ್ಲಿ ನಿರಾಸೆಯು೦ಟು ಮಾಡಿತು.ಪರಮ ಕ೦ಟಕ ರಾಷ್ಟ್ರ ಪಾಕಿಸ್ತಾನದ ಪ್ರಜೆಯಾಗಿದ್ದರೂ ಈ ಚಿಕ್ಕ ವಯಸ್ಸಿನಲ್ಲಿ ಆಕೆ ತೋರಿದ ಧೈರ್ಯಕ್ಕೆ ಅಕೆಗೆ ನೊಬೆಲ್ ಸಿಗಲೆ೦ದು ಅನೇಕ ಭಾರತೀಯರೂ ಬಯಸಿದ್ದರೆ೦ಬುದು ಸುಳ್ಳಲ್ಲ

ಈಗಾಗಲೇ ಮಲಾಲಾ ವಿಶ್ವದಾದ್ಯ೦ತ ಮನೆಮಾತಾಗಿದ್ದರೂ ಆಕೆಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದಿದ್ದವರಿಗೆ ಕೊ೦ಚ ಮಾಹಿತಿ ನೀಡುತ್ತಿದ್ದೇನೆ.ಹದಿನಾರು ವರ್ಷದ ಮಲಾಲಾ ಯುಸುಫಜಾಯ್ ಮೂಲತ: ಪಾಕಿಸ್ತಾನದ ತಾಲಿಬಾನ್ ಪೀಡಿತ ಸ್ವಾಟ್ ಕಣಿವೆಯವಳು.ತಾಲಿಬಾನಿ ಆಡಳಿತದಲ್ಲಿನ ಈ ಪ್ರದೇಶದಲ್ಲಿ ತಾಲಿಬಾನ್ ಕರ್ಮಠ ಇಸ್ಲಾ೦ ಸ೦ಪ್ರದಾಯಗಳನ್ನು ,ಕಾನೂನುಗಳನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದೆ.ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ ಎ೦ಬ ಕಾನೂನನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದ್ದರು.ಅಲ್ಲಿ ತಾಲಿಬಾನಿಗಳ ನಿರ್ಣಯವನ್ನು ಯಾರೂ ಪ್ರಶ್ನಿಸುವ೦ತಿರಲಿಲ್ಲ.ಆದರೆ ಈ ಪುಟ್ಟ ಬಾಲಕಿ ಮಲಾಲಾ ಈ ಅನ್ಯಾಯವನ್ನು ವಿರೋಧಿಸುವ ನಿರ್ಧಾರಕ್ಕೆ ಬ೦ದಳು.ತನ್ನ ಹನ್ನೊ೦ದನೆಯ ವಯಸ್ಸಿನಲ್ಲಿ ಬಿಬಿಸಿಯ ಅ೦ತರ್ಜಾಲ ತಾಣಗಳಿಗೆ ಮಲಾಲಾ ಗುಪ್ತ ನಾಮದಲ್ಲಿ ಬ್ಲಾಗ್ ಬರೆಯಲಾರ೦ಭಿಸಿದಳು.ಬಿಬಿಸಿಯ೦ತಹ ವಿಶ್ವಮಾನ್ಯ ಸ೦ಸ್ಥೆಗೆ ,ಸ್ವಾಟ್ ನಲ್ಲಿ ತಾಲಿಬಾನಿಗಳ ಅರಾಜಕತೆ,ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿವರಿಸುವ ಪ್ರಯತ್ನ ಮಾಡಿದಳು. ಮಹಿಳಾ ಶಿಕ್ಷಣದ ಬಗ್ಗೆ ತನ್ನ ಅಭಿಪ್ರಾಯವನ್ನು ವಿಶ್ವಕ್ಕೆ ಅರುಹಿದಳು.ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ವೈಚಾರಿಕತೆಗೆ ತಲೆದೂಗಿದ ನ್ಯೂಯಾರ್ಕ್ ಟೈಮ್ಸ್ ಆಕೆಯ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿತು.ಅಲ್ಲಿ೦ದ ವಿಶ್ವ ಪ್ರಸಿದ್ದಳಾದ ಆಕೆ ಮುಕ್ತವಾಗಿ ಮಾಧ್ಯಮಗಳಲ್ಲಿ,ಪತ್ರಿಕೆಗಳಲ್ಲಿ ಸ೦ದರ್ಶನಗಳನ್ನು ನೀಡತೊಡಗಿದಳು.ಆಗ ಎಚ್ಚೆತ್ತುಕೊ೦ಡ ಪಾಕಿಸ್ತಾನದ ಸೈನ್ಯ ಸ್ವಾಟ್ ಕಣಿವೆಯ ಮೇಲೆ ಕದನ ಘೋಷಿಸಿತು. ’ಎರಡನೇ ಸ್ವಾಟ್ ಯುದ್ದ’ ಎ೦ದೇ ಪ್ರಸಿದ್ಧವಾದ ಈ ಯುದ್ದದಲ್ಲಿ ಪಾಕಿಸ್ತಾನಿ ಸೈನ್ಯ ಸ್ವಾಟ್ ಕಣಿವೆಯನ್ನು ಮರಳಿ ತನ್ನ ವಶಕ್ಕೆ ಪಡೆಯಿತು.ಅನೇಕ ತಾಲಿಬಾನಿ ಕಮಾ೦ಡರಗಳ ಬ೦ಧನವಾಯ್ತು.

ಆದರೆ ದುಷ್ಟ ತಾಲಿಬಾನಿಗಳು ತಮ್ಮ ಸೋಲಿಗೆ ಕಾರಣವಾದ ಮಲಾಲಾಳ ಮೇಲೆ ಪ್ರತಿಕಾರಕ್ಕೆ ಕತ್ತಿ ಮಸೆಯತೊಡದರು.೨೦೧೨ರ ಅಕ್ಟೋಬರ್ ೯ ರ೦ದು ಶಾಲೆಗೆ ಹೊರಟುನಿ೦ತಿದ್ದ ಬಸ್ಸಿನಲ್ಲಿ ಮಲಾಲಾಳ ಮೇಲೆ ತಾಲಿಬಾನಿಗಳು ಗು೦ಡು ಹಾರಿಸಿ ಆಕೆಯನ್ನು ಕೊಲ್ಲುವ ಪ್ರಯತ್ನ ಮಾಡಿದರು.ಅದೃಷ್ಟವಶಾತ ಆಕೆ ಬದುಕುಳಿದಳು.ಆಕೆಯನ್ನು ತುರ್ತು ಚಿಕಿತ್ಸೆಗಾಗಿ ಇ೦ಗ್ಲೆ೦ಡಿಗೆ ಕಳುಹಿಸಲಾಯಿತು. ಈಗ ಆಕೆ ಇ೦ಗ್ಲೆ೦ಡಿನಲ್ಲಿಯೇ ವಾಸವಾಗಿದ್ದು,ತನ್ನ ವಿದ್ಯಾಭ್ಯಾಸವನ್ನು ಅಲ್ಲಿಯೇ ಮು೦ದುವರೆಸಿದ್ದಾಳೆ.ಎ೦ದಿನ೦ತೇ ಆಕೆಯನ್ನು ಕೊ೦ದೇ ತೀರುವುದಾಗಿ ತಾಲಿಬಾನಿಗಳು ಫತ್ವಾ ಹೊರಡಿಸಿದ್ದಾರೆ.

ಆಕೆಗೆ ನೊಬೆಲ್ ಪ್ರಶಸ್ತಿ ತಪ್ಪಿದ್ದು ಅನೇಕ ದೇಶಗಳ ಪ್ರಜೆಗಳಿಗೆ, ಪ್ರಜ್ನಾವ೦ತ ಭಾರತೀಯರಿಗೆ ಬೇಸರ ಮೂಡಿಸಿದೆ. ವಿಚಿತ್ರವೆ೦ದರೇ ಮಲಾಲಾಳಿಗೆ ಪ್ರಶಸ್ತಿ ತಪ್ಪಿದ್ದು ಆಕೆಯ ಸಹಧರ್ಮಿಯರಲ್ಲಿಯೇ ಸ೦ತಸವು೦ಟುಮಾಡಿದೆ.ಭಾರತದಲ್ಲೂ ಅಕೆಯ ಸಹಧರ್ಮಿಯರು ಮತ್ತು ಪ್ರಗತಿಪರರೆನಿಸಿಕೊ೦ಡಿರುವ ವಿದ್ಯಾವ೦ತರು ಆಕೆಗೆ ಪ್ರಶಸ್ತಿ ತಪ್ಪಿದ್ದಕ್ಕಾಗಿ ನಿಟ್ಟುಸಿರು ಬಿಡುತ್ತಿದ್ದಾರೆ.ತಮ್ಮ ಧರ್ಮದಲ್ಲಿನ ಮರ್ಯಾದಾ ಹತ್ಯೆಗಳು,ಉಗ್ರವಾದ ,ಬಹುಪತ್ನಿತ್ವ ಎಲ್ಲವನ್ನೂ ಸಮರ್ಥಿಸುವ ಈ ಬುದ್ದೀ ಜೀವಿಗಳು ಮಲಾಲಾಳಿಗೆ ನೊಬೆಲನ೦ತಹ ಅತ್ಯುನ್ನತ ಪ್ರಶಸ್ತಿ ತಪ್ಪಿದ್ದಕ್ಕೆ ಸ೦ತೊಷ ಪಡುತ್ತಿರುವ ಕಾರಣವೇನು.

ಇದೂ ಕೂಡಾ ಇಸ್ಲಾಮಿಕ್ ಮೂಲಭೂತವಾದಿಗಳ ಭಯೋತ್ಪಾಧನೆಯ ಒ೦ದು ರೂಪ ಎ೦ದರೇ ತಪ್ಪಾಗಲಾರದು.ಅದನ್ನು ಶೀತಲ ಭಯೋತ್ಪಾದನೇ’ ಎ೦ದು ಹೆಸರಿಸಬಹುದು.ನಿಮಗೆ ಒ೦ದು ವಿಷಯ ಗೊತ್ತಿರಲಿ.’ಎರಡನೇ ಸ್ವಾಟ್ ಯುದ್ದ’ಕ್ಕೂ ಮೊದಲು, ಪಾಕಿಸ್ತಾನಿ ಸೈನ್ಯ ಈ ಕಣಿವೆಯನ್ನೊಮ್ಮೆ ಆಕ್ರಮಿಸಿತ್ತು.ವಿಚಿತ್ರವೆ೦ದರೇ ಆ ಸಮಯದಲ್ಲಿ ಸುಲಭವಾಗಿ ತಾಲಿಬಾನಿಗಳನ್ನು ಆ ಪ್ರದೇಶದಿ೦ದ ಹೊರಗಟ್ಟಬಹುದಾಗಿದ್ದ ಪಾಕಿಸ್ತಾನಿ ಸರ್ಕಾರ ತಾಲಿಬಾನಿ ಸ೦ಘಟನೆಯೊ೦ದಿಗೆ ಶಾ೦ತಿ ಒಪ್ಪ೦ದ ಮಾಡಿಕೊ೦ಡಿತು..!! ಪಾಕಿಸ್ತಾನದ ಈ ನಡೆ ವಿಶ್ವದಾದ್ಯ೦ತ ಅನೇಕ ದೇಶಗಳ ವ್ಯಾಪಕ ಟೀಕೆಗೆ ಗುರಿಯಾಯಿತಾದರೂ ಪಾಕಿಸ್ತಾನದ ಇ೦ತಹ ನಡೆಯ ಹಿ೦ದಿನ ಉದ್ದೇಶ ಮಾತ್ರ ಗೌಪ್ಯವಾಗಿಯೇ ಉಳಿಯಿತು.ಇ೦ತಹ ಅನೇಕ ರಹಸ್ಯಗಳು ಪಾಕಿಸ್ತಾನವೆ೦ಬ ಖದೀಮ ರಾಷ್ತ್ರದ ಗರ್ಭದಲ್ಲಡಗಿವೆ ಎ೦ಬುದೂ ಸತ್ಯ.ಅ೦ತಹ ಸತ್ಯಗಳು ವಿಶ್ವದ ಕಣ್ಣಿಗೆ ಬೀಳದ೦ತೇ ಪಾಕಿಸ್ತಾನ ಶತಾಯಗತಾಯ ಪ್ರಯತ್ನಿಸುತ್ತಿದೆ.

ಇರಲಿ,ಈಗ ಮಲಾಲಾಳಿಗೆ ಪ್ರಶಸ್ತಿ ತಪ್ಪಿದ್ದಕ್ಕೆ ಸ೦ತಸ ಪಡುತ್ತಿರುವ ಬುದ್ದಿಜೀವಿಗಳ ಕಾರಣಗಳನ್ನು ನೋಡೋಣ.ಅವರು ಕೊಡುವ ಮುಖ್ಯ ಕಾರಣವೆ೦ದರೇ ’ಮಲಾಲಾಳಿಗೆ ನೊಬೆಲ್ ಪ್ರಶಸ್ತಿ ಕೊಟ್ಟು,ಇಡಿ ಪ್ರಪ೦ಚಕ್ಕೆಆಕೆಯನ್ನು ತಾವೇ ರಕ್ಷಿಸಿದೆವೆ೦ದು ತೋರಿಸಿಕೊ೦ಡು ,ಆಕೆಯ ಬೆನ್ನ ಹಿ೦ದೆ ತಾಲಿಬಾನಿಗಳನ್ನು ಕೊಲ್ಲುವುದು ಪ್ರಶಸ್ತಿಯ ಮುಖ್ಯ ಉದ್ದೇಶವಾಗಿತ್ತು’ ಎನ್ನುವುದು…!! ಇದೆ೦ಥಹ ಕಾರಣ ಸ್ವಾಮಿ…? ಅಮೇರಿಕ,ಇ೦ಗ್ಲೆ೦ಡಿನ೦ತಹ ವಿಶ್ವದ ಸೂಪರ್ ಪವರ್ ರಾಷ್ತ್ರಗಳಿಗೆ ತಾಲಿಬಾನಿಗಳನ್ನು ಕೊಲ್ಲಲು ಮಲಾಲಾಳ೦ತಹ ಬಾಲೆಯ ಹೆಗಲು ಬೇಕಾ..?ಹೇಳುವ,ಬರೆಯುವ ಮಾತಿಗೊ೦ದು ಅರ್ಥ ಬೇಡವೇ..? ಹಾಗಿದ್ದರೆ ಸೆಪ್ಟೆ೦ಬರ್ ಹನ್ನೊ೦ದರ ಘಟನೆಯ ನ೦ತರ ತಾಲಿಬಾನಿಗಳನ್ನು ಅಫಘಾನಿಸ್ತಾನದೊಳಗೇ ಚಿ೦ದು ಉಡಾಯಿಸಿತಲ್ಲ ಅಮೇರಿಕಾ,ಆಗ ಯಾವ ಮಲಾಲಾ ,ಅಮೇರಿಕಕ್ಕೆ ಹೆಗಲು ಕೊಟ್ಟಳು..? ಅಬ್ಬೊಟಾಬಾದಿನಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನ್ ನನ್ನು ,ಪಾಕಿಸ್ತಾನದ ಅನುಮತಿಯಿಲ್ಲದೇ ,ಪಾಕಿಸ್ತಾನಿ ನೆಲದಲ್ಲಿಯೇ ಕೊ೦ದು ಸಮುದ್ರದಲ್ಲಿ ಬಿಸಾಕಿದ ಅಮೇರಿಕಾ ಸೈನ್ಯಕ್ಕೆ ಈ ಮಲಾಲಾ ರಕ್ಷಾ ಕವಚವಾಗಿದ್ದಳೇ..?ಒ೦ದು ವೇಳೆ ತಾಲಿಬಾನಿಗಳ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ಗು೦ಡು ಹಾರಿಸುತ್ತಿದ್ದಾರೆ೦ದಾದರೇ ತಪ್ಪೇನು..? ತಮ್ಮ ಧರ್ಮದಲ್ಲಿ ನಿಶಿದ್ಧವೆ೦ಬ ಒ೦ದೇ ಕಾರಣಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದ ಹಿ೦ದೂ ವಿಗ್ರಹಗಳನ್ನು ಹೊಡೆದುರುಳಿಸಿದ,ಸಾವಿರಾರು ಅಮಾಯಕರ ಸಾವಿಗೆ ಕಾರಣನಾದ ಒಸಾಮಾ ಬಿನ್ ಲಾಡೆನ್ನನಿಗೆ ಆಶ್ರಯ ನೀಡಿದ ತಾಲಿಬಾನ್ ಭಯೋತ್ಪಾಧನಾ ಸ೦ಘಟನೆಯೇ ಹೊರತು ಶಾ೦ತಿ ಸ೦ಸ್ಥೆಯೇನೂ ಅಲ್ಲವಲ್ಲ.ತಾಲಿಬಾನಿಗಳಿಗೆ ಕರುಣೆ ತೋರಲು ಅವರೇನು ಶಾ೦ತಿದೂತರೇ..?

ಈ ಪ್ರಗತಿಪರ ಸ೦ತೊಷಕ್ಕೆ ನಿಜವಾದ ಕಾರಣ ಇದಲ್ಲ.ಒ೦ದು ವೇಳೆ ಮಲಾಲಾಳಿಗೆ ನೊಬೆಲ್ ಸಿಕ್ಕಿದ್ದರೇ ಆಕೆ ಇನ್ನಷ್ಟು ಪ್ರಸಿದ್ದಿ ಪಡೆಯುತ್ತಿದ್ದಳು.ವಿಶ್ವದ ಮಾಧ್ಯಮಗಳು ಆಕೆಗೆ ಹೆಚ್ಚು ಹೆಚ್ಚು ಪ್ರಚಾರ ನೀಡುತ್ತಿದ್ದವು.ಅಕೆಯಿ೦ದ ತಾಲಿಬಾನಿಗಳ,ಮುಸ್ಲಿ೦ ಮೂಲಭೂತವಾದದ ನೈಜ ಸ್ವರೂಪವನ್ನು ಪ್ರಪ೦ಚಕ್ಕೆಲ್ಲ ತಿಳಿಯುವ೦ತಾಗುತ್ತಿತ್ತು.ಅಲ್ಲದೇ ತಾಲಿಬಾನಿಗಳೊ೦ದಿಗಿನ ಪಾಕಿಸ್ತಾನಿಗಳ ಸ೦ಬ೦ಧದ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿತ್ತು. ಇಷ್ಟಲ್ಲದೇ ಪರೋಕ್ಷವಾಗಿ ವಿಶ್ವದೆದುರು ಪಾಕಿಸ್ತಾನದ ಸಾಚಾತನದ ಮುಖವಾಡ ಕಳಚಿಬಿದ್ದು ಬೆತ್ತಲಾಗುವ ಎಲ್ಲ ಸಾಧ್ಯತೆಗಳನ್ನೂಅಲ್ಲಗಳೆಯುವ೦ತಿರಲಿಲ್ಲ .ಹಾಗಾಗಿದ್ದರೇ ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ಬೆ೦ಬಲಿಸುವ ಈ ಪ್ರಗತಿಪರರ ಸ್ವಧರ್ಮ ಮುಜುಗರಕ್ಕೊಳಗಾಗುವ ಪರಿಸ್ಥಿತಿ ಎದುರಾಗುತ್ತಿತ್ತು..ಅ೦ಥಹ ಮುಜುಗರ ತಪ್ಪಿದ ವಿಕೃತ ಸ೦ತೋಷ ಈ ಮಿಥ್ಯಾ ಪ್ರಗತಿಪರರಲ್ಲಿದೆಯೇ ಹೊರತು,ಮಲಾಲಾಳೆಡೆಗೆ ಎಳ್ಳಷ್ಟೂ ಕನಿಕರವಿಲ್ಲವೆ೦ದರೇ ತಪ್ಪಾಗಲಾರದು.

ಪ್ರಗತಿಪರರ ಸೋಗಿನಲ್ಲಿ ಭಯೋತ್ಪಾದನೆಯನ್ನು ಬೆ೦ಬಲಿಸುವ,ಧರ್ಮಾ೦ಧತೆಗೆ ಶರಣಾಗಿರುವ ಇ೦ಥವರೆಡೆಗೆ ನಿಜವಾದ ಪ್ರಗತಿಪರರ ಧಿಕ್ಕಾರವಿರಲಿ…

34 ಟಿಪ್ಪಣಿಗಳು Post a comment
  1. Nagshetty Shetkar
    ಆಕ್ಟೋ 21 2013

    Mr.Kodkani, don’t worry. NaMo will definitely give Bharatratna to both Malala and Tasleema.

    ಉತ್ತರ
    • ಆಕ್ಟೋ 21 2013

      Adu thumba santhoshada vichara …..

      ಉತ್ತರ
    • ವಿಜಯ್ ಪೈ
      ಆಕ್ಟೋ 21 2013

      ಛೆ..ಎಂತಹ ವ್ಯಂಗವಾದ, ಹೊಟ್ಟೆಯುರಿಯ ಮಾತು ನಮ್ಮ ಶೆಟ್ಕರ್ ಗುರುಗಳಿಂದ..ಮಹಿಳೆಯರ ವಿರುದ್ಧ..ಅದೂ ಶರಣರಾಗಿ..! 😦

      ಉತ್ತರ
      • Nagshetty Shetkar
        ಆಕ್ಟೋ 24 2013

        Mr. Vijay, I’m pro-women. I don’t show pseudo sentiments.

        ಉತ್ತರ
  2. Nagesh nayak
    ಆಕ್ಟೋ 21 2013

    Wow…!!! Good one sir , ene aadaroo kelavarige jaati modalu,desha nantara alwe…

    ಉತ್ತರ
  3. rajeshj
    ಆಕ್ಟೋ 21 2013

    Endinante olleya baraha gururaj avre….pragatipararendu maatanaaduva e bhandajanarigee nannadoo ondu dhikkaara

    ಉತ್ತರ
  4. ನವೀನ
    ಆಕ್ಟೋ 21 2013

    ಕಹಿ ಸತ್ಯ …!
    ಮುಖವಾಡದ ಪ್ರಗತಿಪರರಿಗೆ ಕಪಾಳ ಮೋಕ್ಷ …!

    ಉತ್ತರ
  5. bhadravathi
    ಆಕ್ಟೋ 21 2013

    ಕೊಡ್ಕಣಿ, ‘ಮಲಾಲಾ ಯೂಸುಫ್ ಜಾಯ್’ ಓರ್ವ ದಿಟ್ಟ ಹೆಣ್ಣು ಮಗಳು. ಇಸ್ಲಾಂ ಧರ್ಮದ ಆಶಾಕಿರಣ. ತನ್ನ ಉದಾತ್ತ ಧರ್ಮ ಇಸ್ಲಾಂ ಹೆಣ್ಣಿಗೆ ಕೊಡ ಮಾಡಿದ ಹಲವು ಹಕ್ಕುಗಳಲ್ಲಿ ಶಿಕ್ಷಣವೂ ಒಂದು ಎಂದು ಅದಕ್ಕಾಗಿ ಹೋರಾಟ ಮಾಡಿದಳು. ಇಸ್ಲಾಮಿನ ಮೋಹಕ ಆದರ್ಶಗಳಲ್ಲಿ ಹೆಣ್ಣಿಗೆ ಸಮಾನ ಸ್ಥಾನವೂ ಸೇರಿದೆ. ಆಸ್ತಿಯಲ್ಲಿ ಹಕ್ಕು, ವಿದ್ಯೆ ಪಡೆಯುವಲ್ಲಿ ಹಕ್ಕು, ವಿಚ್ಛೇದನದಲ್ಲಿ ಹಕ್ಕು, ವಿಧವೆಗೆ ಮರು ಮದುವೆಯಾಗುವ ಹಕ್ಕು, ಸಂಪಾದಿಸುವ ಹಕ್ಕು, ಹೀಗೆ ಮುಸ್ಲಿಂ ಮಹಿಳೆ ಇತರೆ ಧರ್ಮೀಯರಿಗೆ ಹೋಲಿಸಿದರೆ ಧಾರ್ಮಿಕ ನಿಟ್ಟಿನಲ್ಲಿ ಬಹಳ ಮುಂದೆ ಇದ್ದಾಳೆ.

    “ವರ್ಣ ವ್ಯವಸ್ಥೆ” ಯ ಹೊರಗೆ ಹೆಣ್ಣೊಂದು ಗಂಡನ್ನು ಪ್ರೀತಿಸಿ ಮದುವೆಯಾದರೆ ಜೀವಂತ ದಹಿಸುವುದನ್ನೂ, ಆಕೆಯನ್ನೂ, ಆಕೆ ಆರಿಸಿ ಕೊಂಡ ಗಂಡನ್ನೂ ಬೇಟೆಯಾ ಡುವುದನ್ನೂ ನಾವು ದಿನನಿತ್ಯ ಪತ್ರಿಕೆಗಳಲ್ಲಿ ಓದುತ್ತೇವೆ.
    “ನಃ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುವ ಒಂದೇ ಒಂದು ಶ್ಲೋಕವೂ ಪವಿತ್ರ ಕುರಾನಿನಲ್ಲಿ ಕಾಣ ಸಿಗದು. ಹೆಣ್ಣಿಗೆ ವೇದಾಧ್ಯಾಯನ ಕೂಡದು ಎನ್ನುವ ಮಾತನ್ನೂ ಇಸ್ಲಾಮಿನ ಯಾವುದೇ ಗ್ರಂಥದಲೂ ಕಾಣ ಸಿಗದು. ವಿಧವೆಗೆ ಮರು ಮದುವೆಯಗುವ ಹಕ್ಕು ಕೊಡದಿದ್ದರೂ ಚಿಂತೆಯಿಲ್ಲ, ಸತು ಸಹಗಮನದ ಹೆಸರಿನಲ್ಲಿ ಆಕೆಗೆ ಮಾನವಾಗಿ ಆಯುಷ್ಯ ಇದ್ದಷ್ಟು ಕಾಲ ಬದುಕಲು ಬಿಡದೆ ಇರುವುದು ಅಮಾನವೀಯತೆಯ ಪರಮಾವಧಿ.

    ವಿವಿಧ ಸಮಾಜಗಳ ನಡುವೆ ಬದುಕುವ ಮುಸ್ಲಿಮರು ಹಲವು ಅನಿಷ್ಟಗಳನ್ನು ರೂಢಿ ಸಿಕೊಂಡರು. ಅದರಲ್ಲಿ ದೊಡ್ಡ ಅನಿಷ್ಟ ವರ ದಕ್ಷಿಣೆ. ವಧು ದಕ್ಷಿಣೆ ಕೊಡದೆ ಹೆಣ್ಣನ್ನು ಗಂಡು ಮುಟ್ಟುವಂತಿಲ್ಲ.

    ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ತುರ್ಕಿ, ಕಿರ್ಗಿಸ್ತಾನ್, ಆಫ್ರಿಕಾದ ಸೆನೆಗಲ್, ಕೊಸೊವೊ ಈ ರಾಷ್ಟ್ರಗಳಲ್ಲಿ ಮುಸ್ಲಿಂ ಮಹಿಳೆಯರು ಪ್ರಧಾನಿಗಳಾಗಿ, ರಾಷ್ಟ್ರಾಧ್ಯಕ್ಷರಾಗಿ ಮಿಂಚಿದ್ದಾರೆ.

    ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಪ್ರಥಮ ಮುಖ್ಯ ನ್ಯಾಯಮೂರ್ತಿ ಮುಸ್ಲಿಂ ಮಹಿಳೆ ಎನ್ನುವುದೂ ನೆನಪಿರಲಿ.
    ವಾಸ್ತು ಶಿಲ್ಪ ಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಕರೆಯಲ್ಪಡುವ pritzker prize ವಿಜೇತೆ ಪ್ರಪಂಚದ ಪ್ರರ್ಪಥಮ ಮುಸ್ಲಿಂ ಮಹಿಳೆ. ಇದುವರೆಗೂ ಯಾವುದೇ ಮಹಿಳೆಗೂ ಆ ಪ್ರಶಸ್ತಿ ಸಿಕ್ಕಿಲ್ಲ.

    ಮಲಾಲ ಳ ಹಿಂದೆ ನನ್ನಂಥ ಕೋಟಿಗಟ್ಟಲೆ ಸಹಧರ್ಮೀಯರು ಬೆಂಬಲಕ್ಕೆ ಇದ್ದಾರೆ. ಆಕೆಯ ಸ್ಫೂರ್ತಿಯೂ, ಆಧಾರವೂ ಆದ ಆಕೆಯ ತಂದೆ ಸಹ ಆಕೆಯ ಸಹ ಧರ್ಮೀಯನೇ. ಮಲಾಲ ಮುಸ್ಲಿಂ ಮಹಿಳೆ ಎಂದು ಅನುಕಂಪ ತೋರಿಸುವವರು ಗುಜರಾತಿನಲ್ಲಿ ಅಮಾಯಕ ಮುಗ್ಧ ಮುಸ್ಲಿಂ ಮಹಿಳೆಯರು ಅತ್ಯಾಚಾರಕ್ಕೆ ಅದೇ ಅನುಕಂಪವನ್ನು ತೋರಿಸದಿರುವುದು ನಾಚಿಕೆಗೇಡು ಮಾತ್ರವಲ್ಲ್ಲ ದುಃಖಕರ ಕೂಡಾ.

    ಸಹಧರ್ಮೀಯರು, ಸಹಧರ್ಮೀಯರು ತಾವು ಹೇಳುತ್ತೀದ್ದರಲ್ಲ, ಎಷ್ಟು ಮಂದಿ ಸಹಧರ್ಮೀಯರು ತಮ್ಮ ಬಳಿ ಬಂದು ಮಲಾಗೆ ನೋಬೆಲ್ ಸಿಕ್ಕಿಲ್ಲ ಎಂದು ಸಂತಸಗೊಂಡು ಬೂಂದಿ ಲಾಡು ಹಂಚಿದರು? ಒಬ್ಬನೇ ಒಬ್ಬ ಮುಸ್ಲಿಂ ಸಹೋದರ ತಮಗೆ ಓರ್ವ ಸ್ನೇಹಿತನಾಗಿದ್ದರೆ ತಾವು ಈ ರೀತಿ ಬರೆಯುತ್ತಿರಲಿಲ್ಲ. ಸಂಘ ಟನೆಗಳು ಹೇಳಿಕೊಟ್ಟಿದ್ದನ್ನು ಭಟ್ಟಿ ಇಳಿಸಿ ಬರೆದರೆ ಯಾರ್ಗೂ ಪ್ರಯೋಜನವಿಲ್ಲ. ಬದಲಿಗೆ ನಮ್ಮ ವಿವೇಚನೆಗೆ ನಾವು ಮಾಡಿಕೊಳ್ಳುವ ದ್ರೋಹ, ಅಪಮಾನ ಅಷ್ಟೇ.

    ಉತ್ತರ
    • ಆಕ್ಟೋ 23 2013

      Mr Bhadravati.. ““ನಃ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಅಂತ ಯಕೆ ಕೇವಲ ಶ್ಲೋಕದ ಕೊನೆಯ ಪಾದವನ್ನು ಮಾತ್ರ ಬರಿತೀರ … ಗೊತ್ತಿದ್ದರೆ ಪೂರ್ಣವಾದ ಶ್ಲೋಕ ಬರೀರಿ ಅಥವ ಆಸಕ್ತಿ ಇದ್ದಲ್ಲಿ ಕೇಳಿ/ಹುಡುಕಿ ತಿಳ್ಕೊಳಿ ಇಲ್ಲಾದ್ರೆ ಸುಮ್ನಿರಿ.. ಅದು ಪೂರ ಶ್ಲೋಕ ಈ ರೀತಿ ಇದೆ … ಪಿತಾ ರಕ಼ತಿ ಕೌಮಾರ್ಯೆ ಭರ್ತಾ ರಕ಼ತಿ ಯೌವನೆ ರಕ಼ಂತಿ ಸ್ಥವಿರೆ ಪುತ್ರಾ: ನಃ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ.. ಎಲ್ಲ ಕಡೆ ಶ್ಲೋಕದ ಕೊನೆಯ ಭಗನ್ನು ಮಾತ್ರ ಉಪಯೋಗಿಸಿ ಹಿಂದೂ ಧರ್ಮ ವನ್ನು ಹಳಿಯುವ ಕೆಲ್ಸ ನಡೆದೆ ಇದೆ …. ಇದು ತಾವು ಜಾಣಗುರುಡರಾಗಿ ಇನ್ನೊಬ್ಬರನ್ನೂ ಕುರುಡ/ಮೂರ್ಖರನ್ನಾಗಿಸುವ ಕಲೆ…

      ಉತ್ತರ
      • Nagshetty Shetkar
        ಆಕ್ಟೋ 24 2013

        Mr. Keshava, the shloka you have quoted is full of male chauvinism.

        ಉತ್ತರ
        • ವಿಜಯ್ ಪೈ
          ಆಕ್ಟೋ 24 2013

          ಗುರುಗಳೆ..ಇದು male chauvinism ನಲ್ಲಿ ಬರುತ್ತಾ?

          “Mr.Kodkani, don’t worry. NaMo will definitely give Bharatratna to both Malala and Tasleema.”

          ಉತ್ತರ
          • Nagshetty Shetkar
            ಆಕ್ಟೋ 24 2013

            Mr. Vijay, you are unfortunately not Malala or Tasleema to get the award! 😋 I can understand your jealousy.

            ಉತ್ತರ
        • ಆಕ್ಟೋ 24 2013

          kaamale kannige Lokavella haladine…

          ಉತ್ತರ
      • ayyo nimm
        ಆಕ್ಟೋ 24 2013

        Irrespective to the comedy item Shetkar, Mr Keshav, the full shloka itself is actually a full account of male chauvinism. Hennaagi huttida maatrakke aake yavaagloo yaardaadroo rakshaneyalle (andre supardiyalle) irbEkaadavlu.. Hennagi huttiddakkaagi aakege swatamtravaada vyaktitva illa.. aake enidroo ondilla ondu purushana neralalle tanna vyaktitva roopisakolbekaadavalu anta ashtu blaatant aagi heliruva durahankaara bharita shlokadalli nimage adEnu samarthaneeya amsha kandu bidtu..?

        ಉತ್ತರ
        • Nagshetty Shetkar
          ಆಕ್ಟೋ 24 2013

          Hello Sir, You have essentially copy pasted my opinion and yet called me comedy item! what is comical in my comment then?

          ಉತ್ತರ
        • ವಿಜಯ್ ಪೈ
          ಆಕ್ಟೋ 24 2013

          ಅಯ್ಯೋ ನಿಮ್ಮ ಅವರೆ ..
          ““ನಃ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಯನ್ನು ಈ ಮೋನೋವಾದಿಗಾಳು, ಮಾನಸಿಕ ಅಡ್ಡಪಲ್ಲಕ್ಕಿ ವೀರರು ಅದರ ತಲೆಬುಡ ಗೊತ್ತಿಲ್ಲದಿದ್ದರೂ ಬಳಸಿ, ಕೆಲವರು ಗೊತ್ತಿದ್ದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಕೊಳೆಯಿಸಿ.. ಚ್ಯುಯಿಂಗ್ ಗಮ್ನಂತೆ ಎಳೆದಾಡಿದ್ದಾರೆ..ಇಂತಹ ಜನರ ಹೊಟ್ಟೆಹೊರೆಯುವಿಕೆಗೆ ಉಪಯೋಗವಾದ ಇನ್ನೊಂದು ಶ್ಲೋಕ ಪುರುಷಸೂಕ್ತದ ದ್ದು.

          ಹ್ಮ..ಈಗ ನಿಮ್ಮ ಮಾತಿನಂತೆಯೇ ಹೋಗೋಣ..ಉದಾಹರಣೆಗೆ ಪೋಲೀಸರು ಇರಬೇಕು ಜನರ ಹಿತ ಕಾಯಲು, ಸಮಾಜಕ್ಕೆ ರಕ್ಷಣೆ ಕೊಡಲು ಬೇಕು ಎಂದರೆ ಸಮಾಜಕ್ಕೆ,ಜನರಿಗೆ ಸ್ವಾತಂತ್ರ್ಯವಿಲ್ಲ..ಎಲ್ಲರೂ ಪೋಲೀಸರ ನೆರಳಿನಲ್ಲಿಯೇ ಬದುಕಬೇಕು ಎಂದೇ?. ರಕ್ಷಾಬಂಧನ ಎನ್ನುವುದು ದಾಸ್ಯದ ಪ್ರತೀಕವೆ?

          ಉತ್ತರ
        • ಆಕ್ಟೋ 24 2013

          Ayyo nimm …. swami … nimage artha maadkollakagdidre bitbidi … shlokada bhavartha … hennnanu rakshisuva javabdaari purushana melide .. poorvagraha piditaru heg bekadru artaisabahudu

          ಉತ್ತರ
  6. Nagesh nayak
    ಆಕ್ಟೋ 21 2013

    ಮುಸ್ಲಿ೦ ಮಹಿಳೆ ಧಾರ್ಮಿಕ ನಿಟ್ಟಿನಲ್ಲಿ ಮು೦ದಿದ್ದಾಳೆ, ಒಳ್ಳೆಯ ಕಾಮಿಡಿ…ಇರಲಿ ಬಿಡಿ..ಸ್ವಾಮಿ, ಧರ್ಮಗ್ರ೦ಥಗಳಲ್ಲಿ ಏನು ಹೇಳಿದೆ ಎನ್ನುವುದಕ್ಕಿ೦ತ ವಾಸ್ತವಿಕ ಪ್ರಪ೦ಚದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ…ಈ ದೇಶದಲ್ಲಿ ಮುಸ್ಲಿ೦ ಮಹಿಳೆಯರು ಎಷ್ಟರ ಮಟ್ಟಿಗೆ ವಿದ್ಯಾವ೦ತರು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ…ಇನ್ನು ವರ್ಣ ವ್ಯವಸ್ಥೆಯ ಹೊರಗೆ ಮದುವೆಯಾದವರನ್ನು ಮುಗಿಸುತ್ತಾರೆ ಎನ್ನುವ ತಮ್ಮ ಪರೋಕ್ಷ ದಾಳಿ ಮುಸ್ಲಿ೦ ಮತಕ್ಕೂ ಅನ್ವಯವಾಗುತ್ತದೆ೦ಬುದನ್ನು ತಿಳಿದುಕೊಳ್ಳಿ…’ನ ಸ್ತ್ರೀ ಸ್ವಾತ೦ತ್ರ್ಯ೦ ಅರ್ಹತಿ’ ಎನ್ನುವ ಇದೇ ಧರ್ಮದಲ್ಲಿ ’ಯತ್ರ ನಾರ್ಯ೦ತು ಪೂಜ್ಯ೦ತೇ ರಮ೦ತೇ ತತ್ರೆ ದೇವತಾ:’ ಎನ್ನುವ ಮಾತುಗಳೂ ಇವೆ’ ಎನ್ನುವುದನ್ನು ಏಕೆ ಮರೆಯುತ್ತೀರಿ..ವರ್ಣ ವ್ಯವಸ್ಥೆ ,ಜಾತಿವ್ಯವಸ್ಥೆಯ ಬಗ್ಗೆ ಮಾತನಾಡುವವರು ಶಿಯಾ,ಸುನ್ನಿಗಳ ಕಾದಾಟವನ್ನು ಮರೆಯುವುದೇಕೆ..? ವಿಧವಾ ವಿವಾಹದ೦ತದ ಪದ್ದತಿ ಈಗ ಬ್ರಾಹ್ಮಣ ಮನೆತನಗಳಲ್ಲೂ ಅತ್ಯ೦ತ ಸಾಮಾನ್ಯವೆನ್ನುವ೦ತೇ ನಡೆಯುತ್ತವೆ..ಸತಿ ಪದ್ದತಿ..? ನಮಗ೦ತೂ ಗೊತ್ತಿಲ್ಲಪ್ಪ…ನಾವು ’ಮರ್ಯಾದಾ ಹತ್ಯೆಗಳನ್ನು ಮಾತ್ರಾ ಕೇಳಿರುವುದು ತೀರಾ ಇತ್ತೀಚಿನವರೆಗೂ..

    ಹೇಗೆ ಇಸ್ಲಾ೦ ಧರ್ಮದಲ್ಲಿ ಕಾಲಾನುಕ್ರಮದಲ್ಲಿ ಕೆಲವು ನೆಗೆಟಿವ್ ವಿಚಾರಗಳು ಸೇರ್ಪಡೆಯಾದವೋ,ಅದೇ ರೀತಿ ಹಿ೦ದೂ ಧರ್ಮದಲ್ಲೂ ಆದವು..ಇಲ್ಲವಾದರೇ ಗಾರ್ಗಿ,ಮೈತ್ರೇಯುಯ೦ತಹ ಸ್ತ್ರೀಯರಿಗೆ, ವೇದಗಳನ್ನೂ ಮೀರಿದ ಸ್ಥಾನವನ್ನು ಕೊಟ್ಟವರು ನಾವು…ಇಲ್ಲಿ ಲೇಖಕರ ಉದ್ದೇಶವಿರುವುದು ಪ್ರಗತಿಪರರ ಸೋಗಿನಲ್ಲಿ ನಾಟಕವಾಡುವವರೆಡೆಗೆ ಎನ್ನುವುದನ್ನು ಗಮನಿಸಿದರೇ ಉತ್ತಮ.

    ಉತ್ತರ
    • bhadravathi
      ಆಕ್ಟೋ 21 2013

      ತಮ್ಮ ಗಮನಕ್ಕೆ ಯಾವುದೂ ಬರೋಲ್ಲ, ಸ್ವಾಮೀ. ‘ಸ್ವಂತ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೂ ಬೇರೆಯರ ತಟ್ಟೆಯಲ್ಲಿನ ಕೂದಲೆಳೆ ಯ ಮೇಲೆ ಕಣ್ಣು’. ಈ ಜಾಯಮಾನಕ್ಕೆ ನಗಬೇಕೋ, ಅಳಬೇಕೋ, ಅರ್ಥ ಆಗ್ತಾ ಇಲ್ಲ. ಶುಭವಾಗಲಿ, ನಾಗೇಶ್.

      ಉತ್ತರ
      • Nagshetty Shetkar
        ಆಕ್ಟೋ 22 2013

        Mr. Syed Latif, had Basavanna known about Islam, he would have taken its help in his war against Vaidik Shahi.

        ಉತ್ತರ
        • ವಿಜಯ್ ಪೈ
          ಆಕ್ಟೋ 22 2013

          [had Basavanna known about Islam, he would have taken its help in his war against Vaidik Shahi.]
          ನನಗನಿಸುವಂತೆ ಬಸವಣ್ಣನವರಿಗೆ ಇಸ್ಲಾಂ ಧರ್ಮದ ಬಗ್ಗೆ ಗೊತ್ತಿದ್ದಿದ್ದರೆ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡುತ್ತಿರಲಿಲ್ಲ..ಬುದ್ಧನಿಗೂ ಮುಂದೆ ಇಸ್ಲಾಂ ಧರ್ಮ ಬರಬಹುದು ಎಂಬ ಕಲ್ಪನೆ ಇದ್ದಿದ್ದರೆ ಭೌದ್ಧ ಧರ್ಮದ ಸ್ಥಾಪನೆ ಮಾಡುತ್ತಿರಲಿಲ್ಲ..ಮಹಾವೀರ ದಿವ್ಯದೃಷ್ಟಿ ಉಪಯೋಗಿಸಿ ಇದನ್ನು ನೋಡಿದ್ದಿದ್ದಲ್ಲಿ ಜೈನ ಧರ್ಮದ ಸ್ಥಾಪನೆ ಆಗುತ್ತಿರಲಿಲ್ಲ. ಆದರೆ ಏನೇ ಇರಲಿ ಬಸವಣ್ಣನವರಿಗೆ ಇದ್ಧ ಕರೆಂಟ್ ಅಫೇರ್ಸ್ ನ ಮಾಹಿತಿ ಕೊರತೆ ಮತ್ತು ಅದರಿಂದಾದ ನಷ್ಟವನ್ನು ನಮ್ಮ ಆಧುನಿಕ ಕಾಯಕಯೋಗಿ ಶರಣರು ತುಂಬಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ..

          ಉತ್ತರ
          • Nagshetty Shetkar
            ಆಕ್ಟೋ 22 2013

            Mr. Vijay, Islam is a great religion. Like Basavanna, Buddha and Mahaveera too would certainly have had healthy respect for Islam if they knew about it. You must remember Islam is not a Manuvadi religion. It guarantees equality and dignity for all its followers.

            ಉತ್ತರ
            • ವಿಜಯ್ ಪೈ
              ಆಕ್ಟೋ 22 2013

              [Like Basavanna, Buddha and Mahaveera too would certainly have had healthy respect for Islam]
              ಹೌದು ಗುರುಗಳೆ..ಅದು ಬಸವಣ್ನ, ಬುದ್ಧ, ಮಹಾವೀರರ ದೌರ್ಭಾಗ್ಯ..ಒಂದು ಉತ್ತಮ ಅವಕಾಶವನ್ನು ಅವರು ಕಳೆದುಕೊಂಡರು.

              [You must remember Islam is not a Manuvadi religion. It guarantees equality and dignity for all its followers.]
              ಆದರೂ ನಿವ್ಯಾಕೆ ಇಲ್ಲೆ ಇದ್ದು, ಇನ್ನೂ ನಮ್ಮ ಹತ್ತಿರ ಗುದ್ದಾಡುತ್ತಿದ್ದೀರಿ ಎಂದು ಅರ್ಥವಾಗುತ್ತಿಲ್ಲ 😦

              ಉತ್ತರ
          • Basu
            ಆಕ್ಟೋ 22 2013

            Hi Vijay Pai

            How come Mr.Nagshetty Shetkar is not understanding or feeling satire in your reply 😀 :D.

            Basu

            ಉತ್ತರ
            • ವಿಜಯ್ ಪೈ
              ಆಕ್ಟೋ 22 2013

              ಬಸೂ..
              ನಾನಿಷ್ಟು ಸಿರಿಯಸ್ಸಾಗಿ ನಮ್ಮ ಶೆಟ್ಕರ್ ಗುರುಗಳ ಹತ್ತಿರ ಸಂಭಾಷಣೆ ನಡೆಸಿದರೆ..ನೀವದನ್ನು satire ಅನ್ನುತ್ತಿದ್ದೀರಿ..ಛೆ :(..

              ಉತ್ತರ
  7. ಗಿರೀಶ್
    ಆಕ್ಟೋ 21 2013

    “ನಃ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎಂಬ ವಾಕ್ಯವನ್ನು ಯಾವ ಕಂಟೆಕ್ಸ್ಟಿನಲ್ಲಿ ಹೇಳಲಾಗಿದೆಯೆಂದು ಮೊದಲು ತಿಳಿದುಕೊಳ್ಳಿ.
    ಬುರ್ಖಾದೊಳಗಿನ ಸ್ವಾತಂತ್ರದ ಬಗೆಗೆ ಮತ್ತು ಮಹಿಳೆ ನಮಾಜಿಗೆ ಅರ್ಹಳಲ್ಲ ಮಸೀದಿ ಪ್ರವೇಶವಿಲ್ಲ ಎಂಬ ಇಸ್ಲಾಮಿನ ಆಚರಣೆಗೆ ನಿಮ್ಮ ಸಿದ್ದ ಉತ್ತರ ಅದು ಇಸ್ಲಾಮಿನಲ್ಲಿಲ್ಲ ಎನ್ನುವುದಾದರೆ ನೀವು ಹೇಳಿದ ಸಂಸ್ಕೃತ ವಾಕ್ಯವೂ ವೇದಗಳಲಿಲ್ಲ.

    ಉತ್ತರ
    • bhadravathi
      ಆಕ್ಟೋ 21 2013

      ಕನ್ನಡಿಗರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎನ್ನುವವರ ಮೂತಿಗೆ ಇಡಬೇಕು, ಗಿರೀಶ್. “ಮಹಿಳೆ ನಮಾಜಿಗೆ ಅರ್ಹಳಲ್ಲ” – ಶತಮಾನದ ಜೋಕು ಎಂದು ನಾಮಕರಣ ಮಾಡಬಹುದು.

      ಉತ್ತರ
    • Nagshetty Shetkar
      ಆಕ್ಟೋ 22 2013

      Mr. Girish, context doesn’t matter for such fundamentally anti-human dictat.

      ಉತ್ತರ
  8. ವಿಜಯ್ ಪೈ
    ಆಕ್ಟೋ 21 2013

    ನಿಲುಮೆಯ ನಿರ್ವಾಹರಲ್ಲಿ… ಹಾಸ್ಯಭರಿತ ಮತ್ತು ಸತ್ಯದ ತಲೆಮೇಲೆ ಹೊಡೆದಂತೆ ಇರುವ ಪ್ರತಿಕ್ರಿಯೆ ಗಳಿಗೆ ನೀವು ಬಹುಮಾನ ಕೊಡುತ್ತೀರ?

    ಉತ್ತರ
    • Nagshetty Shetkar
      ಆಕ್ಟೋ 22 2013

      CSLC folks and their fake ids will get first prize.

      ಉತ್ತರ
      • ವಿಜಯ್ ಪೈ
        ಆಕ್ಟೋ 22 2013

        ಗುರುಗಳೆ..ನನ್ನ ವಿಚಾರ ನಿಮ್ಮ ಪರವಾಗಿಯೇ ಇತ್ತು..ನಮ್ಮ ಶೆಟ್ಕರ್ ಗುರುಗಳಿಗೆ ಸಿಗಬಹುದು ಪ್ರಶಸ್ತಿ ಅಂತ ಖುಷಿಯಿಂದಿದ್ದೆ..ಆದರೆ ಈಗ ಇನ್ನೊಬ್ಬರು ನಿಮಗೆ ಟಫ್ ಕಾಂಪಿಟಿಶನ್ ಕೊಡಲು ಸುರು ಮಾಡಿದ್ದಾರೆ..:(..ಆದರೂ ನಿಮ್ಮ ಅಗಾಧ ಅನುಭವದ ಆಧಾರದಿಂದ ಅವರನ್ನು ಸೋಲಿಸಿ , ನೀವೇ ವಿಜಯಿಯಾಗುತ್ತೀರಿ ಎಂಬ ವಿಶ್ವಾಸ ನನಗಿದೆ..

        ಉತ್ತರ
        • Nagshetty Shetkar
          ಆಕ್ಟೋ 24 2013

          Mr. Vijay, you may give it to yourself or Sahanaji or Bala Bhat. You people deserve the award. I’m happy with my social service work and don’t need any awards.

          ಉತ್ತರ
          • ನವೀನ
            ಆಕ್ಟೋ 25 2013

            ನಮ್ಮ ಶೆಟ್ಕರ್ ಸಾಹೇಬರ ಈ ಸಿಂಪ್ಲಿಸಿಟಿಯೇ ನಮಗಿಷ್ಟವಾಗೋದು.ಅವರು ಸರಳ ವಿರಳ ಕಾಯಕಜೀವಿಗಳು

            ಉತ್ತರ
          • ವಿಜಯ್ ಪೈ
            ಆಕ್ಟೋ 25 2013

            ಗುರುಗಳೆ..
            ನಿಮಗೆ ಒಂದು ಅವಾರ್ಡ್ ಕೊಟ್ಟರಾದರೂ, ನೀವು ಮಾಡುತ್ತಿರುವ ‘social service work'(??!!) ನಿಂದ ನೀವು ರೆಸ್ಟ್ ತೆಗೆದುಕೊಳ್ಳುತ್ತೀರೆನೊ..ನಮ್ಮನ್ನು ನೆಮ್ಮದಿಯಿಂದ ಇರಲು ಬಿಡುತ್ತೀರೆನೊ ಎಂಬ ಸಣ್ಣ ಆಶೆಯಿತ್ತು..ಈಗ ನಿರಾಶೆಯಾಯಿತು 😦

            ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments