ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 21, 2011

7

ಮುನ್ನ [ ಕ್ರೂರತ್ವದ ನಡುವೆ ಪ್ರೀತಿಯ ಹುಡುಕಾಟ]

‍ನಿಲುಮೆ ಮೂಲಕ

ದೀಪಕ್ ಮದೆನಾಡು
ಮಡಿಕೇರಿ ಸಮೀಪದ ಒಂದು ಹಳ್ಳಿ. ಶಾಲಿನಿಯದು ಅಪ್ಪ, ಅಮ್ಮ, ಮತ್ತು ತಮ್ಮನ್ನೊಂದಿಗೆ ಚಿಕ್ಕ- ಚೊಕ್ಕ ಸಂಸಾರ. ಆಗತಾನೆ ಶಾಲಿನಿ ಹೈಸ್ಕೂಲ್ ಮೆಟ್ಟಿಲೇರಿದ್ದಳು. ಜೀವನದಲ್ಲಿ ಶ್ರೀಮಂತೆಯಾಗಬೇಕೆಂಬುದು ಶಾಲಿನಿಯ ಬಹುದಿನಗಳ ಕನಸು. ಅದಕ್ಕೆ ಅವಳು ಹುಡುಕಿಕೊಂಡ ಮಾರ್ಗ ‘ ಹಂದಿ’ ಸಾಕುವುದು. ತಂದೆಯೊಡನೆ ಈ ವಿಷಯ ಪ್ರಸ್ತಾಪಿಸಿದಾಗ, ಉದಾಸಿನದ ನಿಟ್ಟುಸಿರು ಬಿಟ್ಟು ಸುಮ್ಮನಾದರು. ಹಠ ಬಿಡದ ಶಾಲಿನಿ  ಅಮ್ಮನನ್ನು ಪೀಡಿಸಿದಳು. ಅಮ್ಮ ಅಪ್ಪನನ್ನು ಕಾಡಿದಳು. ಕೊನೆಗೂ ಅಪ್ಪನಿಂದ ‘ಹಂದಿ’ ಸಾಕಲು ಹಸಿರು ನಿಶಾನೆ ಸಿಕ್ಕಿತು.

ಆಹಾ!! ಶಾಲಿನಿಯ ಖುಷಿಗೆ ಪಾರವೇ ಇಲ್ಲದಂತಾಯ್ತು . ಕಪ್ಪು-ಬಿಳಿ ಬಣ್ಣ ಮಿಶ್ರಿತ ಗಂಡು ಹಂದಿ ಮರಿಯನ್ನು ತಂದಳು. ಅಪ್ಪ ಹೊಸ ಅಥಿತಿಯನ್ನು ಸ್ವಾಗತಿಸಲು ಹೊಸ ಗೂಡನ್ನು ನಿರ್ಮಿಸಿದರು. ಹಂದಿ ಮರಿ ಕಿರಿಚುವಾಗ ಓಡಿಹೋಗಿ ನೋಡುವುದು, ಗಂಜಿ- ನೀರು, ಸೊಪ್ಪು- ಸದೆ ಹಾಕುವುದು, ಗೂಡು ಗುಡಿಸುವುದು ಶಾಲಿನಿಯ ನಿತ್ಯದ ಕಾಯಕವಾಯ್ತು.

ಹಂದಿ ಮರಿಗೆ ‘ ಮುನ್ನ ‘ ಎಂದು ಹೆಸರಿಟ್ಟಳು. ಅವಳು ಗೂಡಿನ ಹತ್ತಿರ ಹೋದರೆ ಸಾಕು, ಮುನ್ನ ಓಡಿ ಬಂದು ಬಾಗಿಲ ಬಳಿ ನಿಲ್ಲುತ್ತಿತ್ತು . ಅದರ ಕಿವಿಯನ್ನೋ, ಹೊಟ್ಟೆಯನೋ, ಕೆರೆದರೆ ‘ ದಡಾರ್’ ಎಂದು ಬಿದ್ದುಕೊಳ್ಳುತಿತ್ತು. ಕೆರೆದಷ್ಹ್ತುಪರಮಾನಂದ, ಅವಳು ಸುಸ್ತಾಗಿ ಮನೆಗೆ ಹೊರಟರೆ ಮತ್ತೆ- ಮತ್ತೆ ಕೆರೆಯುವಂತೆ ‘ ಗುರು-…..ಗುರು….ಗುರು….’ ಎಂದು  ಪೀಡಿಸುತಿತ್ತು. ಮುನ್ನನ ಬೆನ್ನಿಗೆ ಪ್ರೀತಿಯಿಂದ ಹೊಡೆದು ” ಹೋಗೊಲೋ ಗುಂಡಣ್ಣ ” ಎನ್ನುತ್ತಾ ಓಡಿ ಬಿಡುತ್ತಿದ್ದಳು. ದಿನ ಕಳೆದಂತೆ ಈ ಹಂದಿಯನ್ನು  ಮಾರಾಟ ಮಾಡಬೇಕು, ಹಣ ಸಂಪಾದಿಸಬೇಕು ಎಂಬುದು ಮರೆತೇ ಹೋಗಿತ್ತು. ಪ್ರೀತಿಯಿಂದ  ಸಾಕಿದ ಹಂದಿಯನ್ನು ಮಾರುವ ದಿನವು ಉಂಟೆ ??.

ಒಂದು ದಿನ ಶಾಲಿನಿಯ ಅಪ್ಪ ” ಮಗಳೇ ‘ಕೈಲು- ಮುರ್ಹೂತ’ ಹಬ್ಬ ಹತ್ತಿರ ಬಂತು, ಮುನ್ನನನ್ನು ಕೊಡೋಣ ” ಎಂದುರು .ಶಾಲಿನಿಗೆ ಕರಳು ಕಿತ್ತು ಬಂದಂತಾಯಿತು.ಇಂದಲ್ಲದಿದ್ದರೆ  ನಾಳೆಯಾದರೂ  ಮುನ್ನ ಇಹಲೋಕ ತ್ಯಜಿಸಲೇ ಬೇಕಲ್ಲ ಎಂದು ತನ್ನನ್ನು ತಾನು ಸಮಾದಾನ ಪಡಿಸಿಕೊಂಡು, ಅಪ್ಪನ ಮಾತಿಗೆ’ ಸರಿ’ ಎಂದು ಒಲ್ಲದ ಮನಸ್ಸಿನಿಂದ  ತಲೆಯಲ್ಲಾಡಿಸಿದಳು.

ಹಬ್ಬದ ದಿನವು ಬಂತು. ಬೆಳಗ್ಗೆ ಕೋವಿ ಹಿಡಿದ ಇಬ್ಬರು ಆಜಾನು  ಬಾಹುಗಳು ಮನೆಯ ಮುಂದೆ ಹಾಜರ್!   ಸರಿ, ಶಾಲಿನಿಯೇ ಹಂದಿ ಗೂಡಿಗೆ ಹೋಗಿ ಬಾಗಿಲು ತೆರೆದಳು. ಚಿಕ್ಕಂದಿನಿಂದ ಗೂಡನ್ನೇ   ಪ್ರಪಂಚ ಎಂದು ತಿಳಿದ ಬೆಳೆದ ಮುನ್ನನಿಗೆ ಹೊರ ಜಗತ್ತು ವಿಸ್ಮಯವಾಗಿ ಕಾಣಿಸ ತೊಡಗಿತ್ತು!. ಲವಲವಿಕೆಯಿಂದ  ಮನೆಯ ಹಿಂದಿನ ಮಣ್ಣನ್ನು ಚುಕ್ಕುತ್ತ- ಚುಕ್ಕುತ್ತ ಆಟವಾದ ತೊಡಗಿತು. ಶಾಲಿನಿ ಅಂಗಳದ ಒಂದು ಬದಿಯಲ್ಲಿ ಮೌನವಾಗಿ ನಿಂತಿದ್ದಳು.

ಅಂಗಳದ ಮತ್ತೊಂದು ಬದಿಯಲ್ಲಿ ಕೋವಿ ಹಿಡಿದವರು ನಿಂತಿದ್ದರು . ಒಬ್ಬಾತ ಸಮಯ ಸಾಧಿಸಿ ಕೊವಿಯ ಟ್ರಿಗರ್ ಒತ್ತಿಯೇ ಬಿಟ್ಟ!   ಢಂ!! ಎಂದಾಕ್ಷಣ  “ಕಿರಿಯೋ…… ಕಿರಿಯೋ……” ಎಂದು ಬೊಬ್ಬಿಡುತ ಶಾಲಿನಿ ಇದ್ದಲ್ಲಿಗೆ ಮುನ್ನ ಓಡಿ ಬರತೊಡಗಿತು, ಅವಳ ಹಿಂದೆ  ರಕ್ತ ಸುರಿಸುತ್ತಾ ನಿಂತಿತ್ತು !ರಕ್ಷಣೆಗಾಗಿ ಶಾಲಿನಿಯ ಆಸರೆ ಬಯಸಿತ್ತು. ತಲೆಗೆ ಹಿಡಿದ ಗುರಿ ಮುನ್ನನ ಭುಜಕ್ಕೆ ಬಡಿದಿತ್ತು!. ತಕ್ಷಣ ಕೊವಿ  ಹಿಡಿದವನು ಮತ್ತೊಂದು ತೋಟ ರೆಡಿ ಮಾಡಿಕೊಂಡ. ” ಬೇಡಾಆಆ ……” ಶಾಲಿನಿ ಚೀರಿದಳು.

ಅರೆಗುಂಡು ಬಡಿದ ಪ್ರಾಣಿಯ ಮನಸ್ಸು ಬಲ್ಲವರಾರು? ಭಯದಿಂದ ಅಪ್ಪ ಶಾಲಿನಿಯ ಕೈ ಹಿಡಿದು ದರ- ದರ  ಎಳೆದರು, ಕೋಪದಿಂದ ಶಾಲಿನಿ ಅಪ್ಪನ ಕೈಗೆ ಕಚ್ಚಿದಳು. ಆದರೂ ಬಿಡದೆ ಎಳೆದು  ಮನೆಯೊಳಗೆ ಹೋಗಿ ಬಾಗಿಲು ಮುಚ್ಚಿದರು. ಅಷ್ಟರಲ್ಲಿ ಗುಂಡಿನ ಶಬ್ದ ಮೊಳಗಿತ್ತು! ರಕ್ತದಿಂದ ನೆಲ ಒದ್ದೆಯಾಗಿತ್ತು!

ಶಾಲಿನಿ ಕಚ್ಚಿದ ಗಾಯದ ಅಚ್ಚು ಅಪ್ಪನ ಕೈಯಲ್ಲಿ ಹಾಗೆ ಉಳಿದಿದೆ, ಇನ್ನೂ  ಶಾಲಿನಿ ಮನಸಿನಿಂದ ‘ ಮುನ್ನ’???

Read more from ಲೇಖನಗಳು
7 ಟಿಪ್ಪಣಿಗಳು Post a comment
  1. ಜಗನ್ನಾಥ್ ಶಿರ್ಲಾಲ್'s avatar
    ಜಗನ್ನಾಥ್ ಶಿರ್ಲಾಲ್
    ಏಪ್ರಿಲ್ 21 2011

    ಲೇಖನ ಮನಕರಗುವಂತಿದೆ. ಅದರೆ ಏನು ಮಾಡುವುದು ಹಂದಿಯನ್ನ ಕೊಡಗಿನಲ್ಲಿ ಸಾಕುವುದೇ ಮಾರಲು, ತಿನ್ನಲು.

    ಉತ್ತರ
  2. pavan's avatar
    ಏಪ್ರಿಲ್ 21 2011

    1.

    ಲೇಖನ ಮನಕರಗುವಂತಿದೆ. ಅದರೆ ಏನು ಮಾಡುವುದು ಹಂದಿಯನ್ನ ಕೊಡಗಿನಲ್ಲಿ ಸಾಕುವುದೇ ಮಾರಲು, ತಿನ್ನಲು.

    ಉತ್ತರ
  3. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಏಪ್ರಿಲ್ 22 2011

    ಆಹಾರಕ್ಕಾಗಿ ಕೊಲ್ಲುವುದು ಒತ್ತಟ್ಟಿಗಿರಲಿ. ಮೋಜಿಗಾಗಿ ಈ ರೀತಿ ಹತ್ಯ ಮಾಡುವವರಿದ್ದಾರೆ. ಅಂತಹವರಿಗೆ ಏನೆನ್ನುವುದು?

    ಉತ್ತರ
  4. krishnaveni g.s's avatar
    krishnaveni g.s
    ಏಪ್ರಿಲ್ 23 2011

    ಲೇಖನ ಓದುವಾಗ ನನ್ನ ಬಾಲ್ಯದ ನೆನಪಾಯಿತು . ಹಂದಿ ಸಾಕುವುದು ಹಣಗಳಿಸಲು ಮತ್ತು ಮಾಂಸದ ಉದ್ದೇಶಕ್ಕೆ ಎಂದು ಎಷ್ಟೇ ತಿಳಿದಿದ್ದರು ಹಂದಿ ಕೊಲ್ಲುವ ದಿನ ಮಾತ್ರ ಕರುಳು ಬಾಯಿಗೆ ಬಂದಂತೆ ಆಗುತಿತ್ತು.ನಾವೆಷ್ಟೆ ಮಾಂಸ ತಿಂದು ಖುಷಿಪಟ್ಟರು ಕೊನೆಯ ಆ ಆರ್ತನಾದ ಮನದಲ್ಲೆ ಹಬ್ಬ ಕಳೆದರು ಗುಯ್ ಗುಡುತ್ತ ಇರುತ್ತಿತ್ತು. ಸಾಮಾನ್ಯವಾಗಿ ಬಿಟ್ಟು ಬಿಡುತ್ತಿದ್ದ ವಿಷಯಕ್ಕೆ ಒಂದು ರೂಪ ಕೊಟ್ಟು ವಿಚಾರ ಪೂರ್ಣವಾಗಿಸಿದ್ದೀರಿ .

    ಉತ್ತರ
  5. ಸಾತ್ವಿಕ್'s avatar
    ಏಪ್ರಿಲ್ 26 2011

    ಯಾಕೋ ನಿಮ್ಮ ಲೇಖನವನ್ನು ಪೂರ್ತಿ ಓದಲು ಸಾಧ್ಯವಾಗದಷ್ಟು ಭಾವಪರನಾಗಿ ಬಿಟ್ಟೆ ಗೆಳೆಯ. ಇಂಥ ಲೇಖನವನ್ನು ಮನಮುಟ್ಟುವಂತೆ ಬರೆದಿದ್ದಕ್ಕೆ ಶಹಭಾಷ್ ಹೇಳಬೇಕೋ ಮುನ್ನನ ಸ್ಥಿತಿಗೆ ಮರುಗಬೇಕೋ ತಿಳಿಯಲಿಲ್ಲ

    ಸಾತ್ವಿಕ್

    ಉತ್ತರ
  6. divya's avatar
    divya
    ಏಪ್ರಿಲ್ 29 2011

    Nimma kathe mana kalukuvanthide…..! kalpane madikondare,dhukhavaguthade…katheyannu varnisida reethi chennagithu..dhanyavadagalu……..

    internet marketing agency, limewire

    ಉತ್ತರ
  7. Joyappa B.R.'s avatar
    Joyappa B.R.
    ಏಪ್ರಿಲ್ 30 2011

    Barahakke hidithavide.Heege nimminda naadina janathege uthamavada anubhavagalannu hanchiri… shubhashayagalu.

    free limewire pro, limewire

    expert seo, limewire

    seo marketing company, limewire

    ಉತ್ತರ

Leave a reply to krishnaveni g.s ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments