ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 25, 2011

68

ಹಿಂದಿ ಬೇಕು …. ಕೂಪಮಂಡೂಕತನ ಬೇಡ……..

‍ನಿಲುಮೆ ಮೂಲಕ

*ಅನಿರುದ್ಧ ಕುಮಟ

ಚಿತ್ರಕೃಪೆ: ಗೂಗಲ್

ಮಕ್ಕಳ ಜಗಳದಲ್ಲಿ ಅಮ್ಮ ಬಡಪಾಯಿಯಾದಳು ಅಂತ ಒಂದು ಗಾದೆ ಮಾತು ಇದೆಯಾ? ಇಲ್ಲದಿರಲೂಬಹುದು. ಆದರೆ ನಿಮ್ಮ ಕನ್ನಡದ ಜಗಳ, ಆ ನೀರಿನ ಜಗಳ, ಆ ಧಾರ್ಮಿಕ ಕಲಹ ಇವನ್ನೆಲ್ಲ ನೋಡಿದಾಗ ನನಗೆನಿಸಿದ್ದು ಅಮ್ಮ ಬಡವಾಗಿದ್ದಾಳೆ ಅಂತ. ಅಲ್ಲಾರಿ ನೀವು ಪಕ್ಕದ ಮರಾಠಿಗರನ್ನು ಕಂಡರೆ ಬೆಂಕಿಕಾರುತ್ತಿರಿ. ಪಾಪ ಆ ತಮಿಳರು ಇಲ್ಲಿ ಬೆಳೆದರೆ ಕರಬುತ್ತೀರಿ. ಅಥವಾ ನೀರಿನ ವಿಷಯ ಹಿಡಿದುಕೊಂಡು ಸುನಾಮಿಯಂತೆ ಜಗಳ ಮಾಡುತ್ತೀರಿ…ಥಕ್ ನಿಮ್ಮ ಇಂತಹ ಜಗಳದಲ್ಲಿ ಬಡವಾದದ್ದು ಯಾರು. ಭಾರತವಲ್ಲವೇ. ಇಡೀ ಭಾರತದ ಬಗ್ಗೆ ಯೋಚಿಸಬೇಕಾದ ನಾವೆಲ್ಲ, ದಾಯಾದಿಗಳ ತರಹ ಯಾಕೆ ಕಿತ್ತಾಡಿಕೊಳ್ಳಬೇಕು? ನಿಮಗೆ ನಿಮ್ಮ ಬಗ್ಗೆಯೇ ಅಸಹ್ಯ ಎನಿಸುವುದಿಲ್ಲವೇ?

ಹಿಂದಿ ಜ್ವರಕ್ಕೆ ತುತ್ತಾದ ವಿಜಯ ಕರ್ನಾಟಕ ಅನ್ನೋ ಹೆಡ್ ಲೈನ್ ನಲ್ಲಿ ಪ್ರಕಟವಾದ ಲೇಖನವನ್ನೇ ನೋಡಿ. ಪತ್ರಿಕೆಯಲ್ಲಿ ವಿದೇಶಿಯರ ಹಿಂದಿ ಮೋಹ ಅನ್ನೋ ಲೇಖನ ಪ್ರಕಟಗೊಂಡರೆ ಸಾಕು. ಜಗತ್ತಿನಲ್ಲಿರುವ ಸಮಸ್ತ ಕನ್ನಡ ಪುಸ್ತಕಗಳೆಲ್ಲ ಬೆಂಕಿಯಲ್ಲಿ ಉರಿದು ಹೋಯ್ತು ಅನ್ನೋ ತರಹ ಯಾಕೆ ಉರಿದು ಹೋಗ್ತಿರಿ. ಅರೇ ಅದೊಂದು ಪತ್ರಿಕೆ. ಅದರಲ್ಲಿ ಭಿನ್ನ, ವಿಭಿನ್ನ ವಿಚಾರಧಾರೆಯ ಲೇಖನಗಳು ಪ್ರಕಟಗೊಳ್ಳುತ್ತವೆ. ಅವರೇನೂ ಹಿಂದಿಯಲ್ಲಿ ಬರೆದಿಲ್ಲ ನನಗಂತೂ ಕನ್ನಡಿಗರಲ್ಲಿ ಹಿಂದಿ ಕಲಿಸುವ ಒಂದು ಪ್ರಯತ್ನದಂತೆ ಆ ಲೇಖನ ಕಾಣಲೇ ಇಲ್ಲ. ನನ್ನ ಪ್ರಕಾರ ಕನ್ನಡಿಗರು ಹಿಂದಿ ಕಲಿಯಲೇಬೇಕು. ಅದು ನಮ್ಮ ದೇಶದ ಪ್ರಮುಖ ಭಾಷೆಯಲ್ವ. ನಮ್ಮ ದೇಶದ ಭಾಷೆಯೊಂದರ ಬಗ್ಗೆ ನಿಮಗಿಷ್ಟು ಯಾಕೆ ದ್ವೇಷ. ಆ ಲೇಖನದ ಕುರಿತು ನೀವೆಲ್ಲ ಅಹುದು… ಅಹುದು…… ಅಹದು…….. ಕನ್ನಡಕ್ಕಿದು ಅಪಾಯ ಅಂತ ಬೊಬ್ಬೆ ಹೊಡಿದಿರಲ್ವೆ. ನಿಮಗೆ ಭಾರತದ ಏಕತೆ ಏಕೆ ಮುಖ್ಯವಾಗೋದಿಲ್ಲ?

ನಾವೆಲ್ಲ ಅಷ್ಟು ಪ್ರೀತಿಸುವ ಜಯಂತ ಕಾಯ್ಕಿಣಿಯನ್ನೂ ನಾವು ಗೋಳುಹೊಯ್ಯೋದುಬಿಟ್ಟಿಲ್ಲ. ಭಾಷೆಗಳಿಂದ ದೇಶದ ಸಮಗ್ರತೆ ಅಂತ ಮಾತನಾಡಿದ ಅವರು ರಾಷ್ಟ್ರಭಾಷೆ ಹಿಂದಿ ಅಂದಾಗ ನೀವು ಯಾಕೆ ಮೈಉರಿದುಕೊಂಡಿರಿ. ಅಷ್ಟೇಲ್ಲ ಕಚ್ಚಾಡಿದ ನೀವು “ಕಾಯ್ಕಿಣಿ”ಗಿಂತ ಜಾಸ್ತಿ ಕನ್ನಡಕ್ಕೆ ಕೊಡುಗೆ ನೀಡಿದ್ದೀರಾ? ನನಗೆ ಆಶ್ಚರ್ಯವಾಯ್ತು ಅದಕ್ಕೆ ಅರ್ಧಶತಕದಷ್ಟು ಕಾಮೆಂಟ್ ಹಾಕಿದ್ದೀರಿ. ಸಿಕ್ಕಿದ್ದೇ ಚಾನ್ಸ್ ಅಂತ ಕಾಯ್ಕಿಣಿ ಮೇಲೆ ಅಕ್ಷರ ಸಮರ ಸಾಧಿಸಿದ್ದೀರಿ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷನ್ ನವರು ಹಿಂದಿಯಲ್ಲಿ ಬ್ಯಾನರಿ ಹಾಕಿದ್ರೆ ನಿಮಗೆ ಓದಲು ಬರೋದಿಲ್ಲ. ಆ ಸೋಲನ್ನು ಒಪ್ಪಿಕೊಳ್ಳಲಾಗದೇ ನೀವು ಅದರ ಬಗ್ಗೆಯೂ ಹೋರಾಟ ಮಾಡುತ್ತೀರಿ. ನಿಮ್ಮ ಈ ನಿಲುವಿಗೆ ಏನು ಹೇಳಲಿ. ನಿಮಗ್ಯಾಕೆ ಭಾರತದ ಏಕತೆ ಮುಖ್ಯವಾಗೋದಿಲ್ಲ.

ಇನ್ನು ಇತ್ತೀಚಿನ ನಿಲುಮೆ ಲೇಖನಗಳ ಸಾಕಷ್ಟು ಉದಾಹರಣೆ ಕೊಡಬಹುದು. ಆದರೆ ಅದರ ಅಗತ್ಯ ಕಾಣುತ್ತಿಲ್ಲ. ನಾನು ಏನು ಹೇಳುತ್ತಿದ್ದೇನೆ ಅಂತ ನಿಮಗೆ ಅರ್ಥವಾಗಿರಬಹುದು.

ನನ್ನ ಪ್ರಶ್ನೆ ಇಷ್ಟೇ. ಭಾಷೆಯ ಹೆಸರಿನಲ್ಲಿ, ರಾಜ್ಯದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ನೀವು ಕಿತ್ತಾಡುವುದು ಸರಿಯೇ? ನಿಮಗೆ ನಾವೆಲ್ಲ ಭಾರತೀಯರು ಅನ್ನೋ ಭಾವನೆ ಯಾಕೆ ಮುಖ್ಯವಾಗೋದಿಲ್ಲ? ಕನ್ನಡಕ್ಕಾಗಿ ಕಿತ್ತಾಡೋದೇ ದೇಶಕ್ಕೆ ನೀವು ಕೊಡುವ ಕೊಡುಗೆಯೇ? ಪಕ್ಕದ ರಾಜ್ಯದವರನ್ನು ಕಂಡರೆ ಯಾಕಿಷ್ಟು ಹೊತ್ತಿ ಉರಿಯುತ್ತೀರಿ? ಅವರು ಭಾರತದ ಭಾಗವಾಗಿ ನಿಮಗೆ ಕಾಣೋದಿಲ್ವೆ? ಕೂಪಮಂಡುಕವಾಗಿ ನೀವು ಡಿಂಡಿಮ ಮೊಳಗಿಸಬೇಡಿ. ಭಾರತ ನಮ್ಮ ದೇಶ, ಇಲ್ಲಿಗೆ ಏಕತೆ ಮುಖ್ಯ ಅಂದುಕೊಂಡು ಬದುಕಿರಿ.

ನನಗೊತ್ತು. ಈ ಲೇಖನ ಅಪ್ರಬುದ್ಧ, ನಾವು ಉತ್ತರಿಸುವ ಅಗತ್ಯ ಇಲ್ಲ, ನಾವಿರೋದೇ ಹೀಗೆ ಸ್ವಾಮಿ, ನಮಗೆ ನುಡಿ, ಗಡಿ ಮುಖ್ಯ. ದೇಶ ಆಮೇಲೆ ಅಂತೆಲ್ಲ ಬೊಗಳೆ ಬಿಡಬೇಡಿ.. ನನಗೆ ನೀವೆಲ್ಲ ಶತಮೂರ್ಖರ ತರಹ ಕಾಣುತ್ತಿದ್ದೀರಿ. ದಯವಿಟ್ಟು ಕನ್ನಡಿ ನೋಡಿಕೊಳ್ಳಿ.

68 ಟಿಪ್ಪಣಿಗಳು Post a comment
  1. ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ಕೊಟ್ಟರೆ ಹೊಟ್ಟೆ ಊರಿಯಿಂದ ಅಡ್ಡಗಾಲು ಹಾಕುವ ಮತ್ತು ಕಾವೇರಿ ತೀರದಲ್ಲಿ ನೀರಾವರಿ ಯೋಜನೆ ಹಾಕಿದರೆ ಇಲ್ಲದ ತಕರಾರು ಹಾಕುವ ತಮಿಳರು!
    ಬೆಳಗಾವಿಯಲ್ಲಿ ಮರಾಟಿಗರು ಮತ್ತು ಕನ್ನಡಿಗರು ಸಂತೋಷವಾಗಿ ಇದ್ದರು ಕೇವಲ ಎಲೆಕ್ಷನ್ ಟೈಮಲ್ಲಿ ಬೆಳಗಾವಿ ವಿಷಯ ತೆಗೆದು ಮುಂಬೈನಲ್ಲಿ ಇರುವ ಕನ್ನಡಿಗರಿಗೆ ತೊಂದರೆ ಕೊಡುವ ಮರಾಟಿಗರು!
    ಹೊಟ್ಟೆಗೆ ಅನ್ನವನ್ನ ಅರಿಸಿಕೊಂಡು ಬೆಂಗಳೂರಿಗೆ ಬಂದು ಬೆಂಗಳೂರನ್ನೇ ತೆಗಳುವ ನಾರ್ತ್ನವರು! — ನೀವು ಹೇಳೋ ಪ್ರಕಾರ ಇವರು ಏನು ಅಂದರು ಅನ್ನಿಸಿಕೊಂಡು ಏನು ಮಾಡಿದರು ಮಾಡಿಸಿಕೊಂಡು ಎಲ್ಲರೂ ಒಂದು ಅನ್ನೋಣವೇ!!
    ನೀವೊಬ್ಬರೇ ಎಲ್ಲರೂ ಒಂದು ಎಂದು ಕುಂತರೆ ಹೊಟ್ಟೆಗೆ ಹಿಟ್ಟಿಲ್ಲದೆ, ಕುಡಿಯೋಕೆ ನೀರಿಲ್ಲದೆ, ಸ್ವಾಬಿಮಾನ ಇಲ್ಲದೆ ಬದುಕ ಬೇಕಾಗುತ್ತೆ.
    ಮೇಲಾಗಿ ಇಲ್ಲಿ ನೀವು ಬರೆದಿರುವ ಹಾಗೆ ಕನ್ನಡಿಗರು ಇಲ್ಲ ಬಿಡಿ .. ದೇಶದಲ್ಲೇ ಎಲ್ಲರ ಜೊತೆ ಸೌಹಾರ್ದವಾಗಿ ಇರೋರು ಅಂದರೆ ಕನ್ನಡಿಗರು ತಿಳಿಯಿರಿ… ನಿಮ್ಮ ಸುತ್ತಮುತ್ತಲು ಕೆಟ್ಟ ಜನ ಇದ್ದಾಗ ನೀವು ಕೆಲವೊಮ್ಮೆ ಹಾಗೆ ಆಗಬೇಕಾಗುತ್ತೆ !
    ಇನ್ನು ಹಿಂದಿ ಮೇಲೆ ನಮ್ಮ ದ್ವೇಷ ಇಲ್ಲಾ ಆದರೆ ಕನ್ನಡದ ಮೇಲೆ ಹಿಂದಿ ಎನ್ನು ಹೇರುವುದಕ್ಕೆ ವಿರೋದವಿದೆ. ಇನ್ನು ಹಿಂದಿ ಕಲಿತರೆ ಮಾತ್ರ ನಮ್ಮ ದೇಶದ ಮೇಲೆ ನಮಗೆ ಗೌರವ ಇದೆ ಅಂತೇನಾ ? ಎಲ್ಲರೂ ಹಿಂದಿಯೆನ್ನ ಕಲಿತರೆ ಅದು ದೇಶದ ಏಕತೆ ಅಂದರೆ ಅದು ಮೂರ್ಖತನ!

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      ಕನ್ನಡದೊಂದಿಗೆ ಇತರ ಭಾಷೆಗಳನ್ನು ಕಲಿತರೆ ತಪ್ಪಿಲ್ಲವಲ್ಲ. ಏಕತೆ ಅನ್ನೋದು ಇತರರನ್ನು ಗೌರವಿಸಿದಾಗ ಅವರೊಂದಿಗೆ ಸೌಹಾರ್ದವಾಗಿದ್ದಾಗ ಸಿಗುವಂತದ್ದು..

      ಉತ್ತರ
      • ಕನ್ನಡದೊಂದಿಗೆ ಇತರ ಭಾಷೆಗಳನ್ನ ಕಲಿಯುವುದು ತಪ್ಪು ಎಂದು ಯಾರು ಹೇಳಿಲ್ಲ …
        ನಿಮ್ಮ ಇ ಮಾನದಂಡಗಳನ್ನು ಎಲ್ಲ ಭಾಷಿಗರು ಅನುಸರಿಸಿದರೆ ಕನ್ನಡಿಗರ ಅಬ್ಯಂತರ ವೆನಿಲ್ಲಾ !

        ಉತ್ತರ
  2. ಆಸು ಹೆಗ್ಡೆ's avatar
    ಏಪ್ರಿಲ್ 25 2011

    “ನನ್ನ ಪ್ರಶ್ನೆ ಇಷ್ಟೇ. ಭಾಷೆಯ ಹೆಸರಿನಲ್ಲಿ, ರಾಜ್ಯದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ನೀವು ಕಿತ್ತಾಡುವುದು ಸರಿಯೇ? ನಿಮಗೆ ನಾವೆಲ್ಲ ಭಾರತೀಯರು ಅನ್ನೋ ಭಾವನೆ ಯಾಕೆ ಮುಖ್ಯವಾಗೋದಿಲ್ಲ? ಕನ್ನಡಕ್ಕಾಗಿ ಕಿತ್ತಾಡೋದೇ ದೇಶಕ್ಕೆ ನೀವು ಕೊಡುವ ಕೊಡುಗೆಯೇ? ಪಕ್ಕದ ರಾಜ್ಯದವರನ್ನು ಕಂಡರೆ ಯಾಕಿಷ್ಟು ಹೊತ್ತಿ ಉರಿಯುತ್ತೀರಿ? ಅವರು ಭಾರತದ ಭಾಗವಾಗಿ ನಿಮಗೆ ಕಾಣೋದಿಲ್ವೆ? ಕೂಪಮಂಡುಕವಾಗಿ ನೀವು ಡಿಂಡಿಮ ಮೊಳಗಿಸಬೇಡಿ. ಭಾರತ ನಮ್ಮ ದೇಶ, ಇಲ್ಲಿಗೆ ಏಕತೆ ಮುಖ್ಯ ಅಂದುಕೊಂಡು ಬದುಕಿರಿ.”

    ವಿಚಾರ ಮಂಡನೆ, ವಿಚಾರ ವಿನಿಮಯ ಇವನ್ನೆಲ್ಲಾ ಕಿತ್ತಾಟ ಎನ್ನುವುದೆಷ್ಟು ಸರಿ?
    ಇಲ್ಲಿನ “ನೀವಂದ ಕಿತ್ತಾಟ” ದಲ್ಲಿ ಕಿತ್ತು ಹೋಗಿರುವುದು ಏನು? ಕಿತ್ತು ಹೋಗಿರದೇ ಇದ್ದರೆ ಅದು ಕಿತ್ತಾಟವಲ್ಲವೇ ಅಲ್ಲ.
    ಧರ್ಮ ಮಂದಿರಗಳಲ್ಲಿ ಕಿತ್ತಾಡುವವರನ್ನು ನೀವು ಏನೂ ಅನ್ನುವುದಿಲ್ಲವೇಕೆ?
    ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಸುವವರ ಬಗ್ಗೆ ಮಾತಾಡದೇ ಉಳಿಯುವುದೇಕೆ?
    ನಮ್ಮ ಮಾತೃಭಾಷೆಯ ಬಗ್ಗೆ ವಿಚಾರ ವಿನಿಮಯ ನಡೆಸಿದವರು ದೇಶಕ್ಕಾಗಿ ಏನೂ ಕೊಡಲಾರರು ಅನ್ನುವುದು ಹೇಗೆ ಸಮರ್ಥನೀಯ. ಕನ್ನಡಕ್ಕಾಗಿ ಹೋರಾಡಿದರೆನ್ನಲಾದ ಡಾ. ರಾಜಕುಮಾರ ಈ ದೇಶಕ್ಕಾಗಿ ಏನೂ ನೀಡಲಿಲ್ಲ ಎನ್ನುವಿರಾ? ಪಕ್ಕದ ರಾಜ್ಯದವರನ್ನು ಕಂಡರೆ ಯಾಕೆ ಉರಿದುಕೊಳ್ಳುತ್ತೀರಿ? ಅನ್ನುವ ಪ್ರಶ್ನೆಯನ್ನು ಒಮ್ಮೆ ತಮಗೆ ತಾವೇ ಕೇಳಿಕೊಳ್ಳಿ. ತಮಗೆ ನಾವು ಕನ್ನಡಿಗರೇ ವಿಚಾರ ವಿನಿಮಯ ನಡೆಸಿದರೆ ಉರಿಯುತ್ತಿರುವಾಗ, … ಇನ್ನು… ಪಕ್ಕದ …?!
    ಕೂಪ ಮಂಡೂಕ ಅನ್ನುವುದರ ಅರ್ಥ ಏನು?
    ವಿರೋಧಾಭಾಸ ತಮ್ಮ ಮಾತುಗಳಲ್ಲೇ ಇದೆ.
    ಪಕ್ಕದ ರಾಜ್ಯದ ಬಗ್ಗೆ ಉರಿದುಕೊಳ್ಳುವವ ಕೂಪ ಮಂಡೂಕ ಹೇಗಾಗುತ್ತಾನೆ?
    ನಿಜವಾದ ಕೂಪ ಮಂಡೂಕನಿಗೆ ಹೊರಗೊಂದು ಲೋಕ ಇದೆಯೆಂದೇ ಅರಿವಿರುವುದಿಲ್ಲ, ಅಲ್ಲವೇ?
    ಭಾರತ ನಮ್ಮ ದೇಶ, ಇಲ್ಲಿಗೆ ಏಕತೆ ಮುಖ್ಯ ಅಂದುಕೊಂಡು ಬದುಕೋಣ ಅನ್ನಿ.
    ಬದುಕಿರಿ ಎನ್ನುವ ಆದೇಶ ನೀಡಿ ತಾವೆಲ್ಲಿಗೆ ಹೋಗ್ತೀರಿ? ಪಾಕಿಸ್ತಾನ ದೇಶಕ್ಕೋ… ಚೀನಾ ದೇಶಾಕ್ಕೋ…?

    “ನನಗೆ ನೀವೆಲ್ಲ ಶತಮೂರ್ಖರ ತರಹ ಕಾಣುತ್ತಿದ್ದೀರಿ. ದಯವಿಟ್ಟು ಕನ್ನಡಿ ನೋಡಿಕೊಳ್ಳಿ.”
    “ಸೌಂದರ್ಯ ಅನ್ನೋದು ನೋಡುಗನ ಕಣ್ಣಿನಲ್ಲೇ ಇದೆ” ಅನ್ನುವ ಮಾತು ಅದ್ಯಾಕೋ ತುಂಬಾ ಕಾಡುತ್ತಿದೆ.

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      “ಸೌಂದರ್ಯ ಅನ್ನೋದು ನೋಡುಗನ ಕಣ್ಣಿನಲ್ಲೇ ಇದೆ” ಅನ್ನುವ ಮಾತು ಅದ್ಯಾಕೋ ತುಂಬಾ ಕಾಡುತ್ತಿದೆ. ಕನ್ನಡಿ ನೋಡುವಾಗ ಯಾರ ಯಾವ ಕಣ್ಣು ಕಾಡುತ್ತೆ ಹೆಗ್ಡೆಯವರೇ?

      ಯುನಿಟಿ ಇನ್ ಡೈವರ್ಸಿಟಿ.

      ಉತ್ತರ
  3. verabhadra's avatar
    verabhadra
    ಏಪ್ರಿಲ್ 25 2011

    ಅಪ್ರಬುದ್ಧ ಲೇಖನ

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      ಧನ್ಯವಾದಗಳು ಬುದ್ಧ

      ಉತ್ತರ
  4. Priyank's avatar
    Priyank
    ಏಪ್ರಿಲ್ 25 2011

    ಅನಿರುಧ್ಧ ಅವರೇ,

    ನಾನು ಬರೆದ ಒಂದು ಬರಹವನ್ನು ನೀವು ಇಲ್ಲಿ ಹೆಸರಿಸಿದ್ದೀರ.
    ಹಿಂದಿ ಹೇರಿಕೆ ಬಗ್ಗೆ ಬರೆದವರೆಲ್ಲರನ್ನೂ ಜರೆಯುವ ಆತುರದಲ್ಲಿ, ನೀವು ಹಲವಾರು ವಿಷಯಗಳನ್ನು ಸೇರಿಸಿ, ನಿಲುಮೆಯಲ್ಲಿರುವ ಎಲ್ಲರನ್ನೂ ಬೈದಿದ್ದೀರಿ.

    ಹಿಂದಿಯೊಂದರಿಂದಲೇ ದೇಶದ ಒಗ್ಗಟ್ಟು ಎಂದು ನೀವು ಅಂದುಕೊಂಡಂತಿದೆ.
    ಹಿಂದಿ ಹೇರಿಕೆ ಮಾಡುವುದರಿಂದ, ದೇಶದ ಒಗ್ಗಟ್ಟು ಸಾದಿಸಲಾಗದು, ಬದಲಾಗಿ, ದೇಶದ ಒಡಕು ಹೆಚ್ಚುತ್ತದೆ ಎಂದು ನಾನು ನಂಬಿದ್ದೇನೆ.
    ದೇಶದ ಒಗ್ಗಟ್ಟಿಗಿಂತಾ, ಹಿಂದಿಯನ್ನು ಎಲ್ಲರ ಮೇಲೂ ಹೇರಬೇಕು ಎಂಬುದೇ ಹಿಂದಿವಾದಿಗಳಿಗೆ ಮುಖ್ಯವಾಗಿದೆ.
    ಈ ಕೆಲವು ಬರಹಗಳನ್ನು ನಿಮ್ಮ ಓದಿಗಾಗಿ ಇಲ್ಲಿ ಕೊಡುತ್ತಿದ್ದೇನೆ. ಓದಿಕೊಳ್ಳಿ.
    http://enguru.blogspot.com/2010/09/bhaaratakkoppo-bhaashaa-neeti.html
    http://enguru.blogspot.com/2010/04/deshada-bagge-gouravaa-anno-himdi.html
    http://enguru.blogspot.com/2010/01/hindi-raashtrabhaashe-allaa-amda-kortu.html
    http://enguru.blogspot.com/2009/11/byaamk-kelsakke-english-kannada.html

    ನಿಮಗೆ ಆರೋಗ್ಯಕರ ಚರ್ಚೆ ಮಾಡುವ ಆಸಕ್ತಿ ಇದ್ದರೆ, ನಾನು ಚರ್ಚೆಯಲ್ಲಿ ಪಾಲ್ಗೊಳ್ಳಲು ರೆಡಿ.
    ಬೈಗುಳಗಳನ್ನು ಬದಿಗೊತ್ತಿ ಚರ್ಚೆ ಮಾಡಲು ನೀವು ತಯಾರಿಲ್ಲದಿದ್ದರೆ, ಆರೋಗ್ಯಕರ ಚರ್ಚೆ ಕಷ್ಟ.
    ನಿಮಗೆ ಹಿಂದಿ ಹೇರಿಕೆಯ ತೊಂದರೆಗಳನ್ನು ಅರಿಯುವಲ್ಲಿ ಆಮೇಲೂ ಗೊಂದಲವಿದ್ದರೆ ಚರ್ಚೆ ಮಾಡೋಣ.

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      ಹಿಂದಿಯೊಂದರಿಂದಲೇ ದೇಶದ ಒಗ್ಗಟ್ಟು ಅಂತ ನಾನ್ಯವತ್ತು ಅಂದುಕೊಂಡಿಲ್ಲ. ಹಿಂದಿ ಹೇರಿಕೆ ಎನ್ನುವುದು ನನಗೆ ಅರ್ಥವಾಗುವುದಿಲ್ಲ. ಇಡೀ ಪ್ರಮಂಚದ ಎಲ್ಲ ಭಾಷೆಗಳನ್ನು ನಮ್ಮ ಮೇಲೆ ಸುರಿದರೂ ನಾವು ಕಲಿಯೋದು ನಮಗೆ ಬೇಕಾದ್ದೇ ಅಲ್ಲವೇ.

      ಉತ್ತರ
      • Priyank's avatar
        Priyank
        ಏಪ್ರಿಲ್ 26 2011

        ಅನಿರುಧ್ಧ ಅವರೇ,

        ಹಿಂದಿ ಹೇರಿಕೆ ಅಂದ್ರೆ ಏನು ಅಂತ ಅರ್ಥ ಆಗ್ಲಿಲ್ಲ ಅಂತ ನೀವು ಹೇಳಿದೀರ.
        “ಹಿಂದಿ ಹೇರಿಕೆ” ಅಂತ ಒಮ್ಮೆ ಗೂಗಲ್ ಮಾಡಿ ನೋಡಿ.
        ನಿಮಗೆ ಸಾಕಷ್ಟು ಬರಹಗಳು ಅದರ ಬಗ್ಗೆ ಸಿಗ್ತವೆ. ಆಮೇಲೂ, ನಿಮಗೆ ಗೊಂದಲ ಇದ್ದರೆ ತಿಳಿಸಿ.
        ಮಾತಾಡೋಣ.

        ಉತ್ತರ
      • Mahesh M R's avatar
        Mahesh M R
        ಏಪ್ರಿಲ್ 26 2011

        > ನನ್ನ ಪ್ರಕಾರ ಕನ್ನಡಿಗರು ಹಿಂದಿ ಕಲಿಯಲೇಬೇಕು. ಅದು ನಮ್ಮ ದೇಶದ ಪ್ರಮುಖ ಭಾಷೆಯಲ್ವ. ನಿಮಗೆ ಭಾರತದ ಏಕತೆ ಏಕೆ ಮುಖ್ಯವಾಗೋದಿಲ್ಲ?<
        ಎರಡನೇ ವಾಕ್ಯದಲ್ಲಿ ಮತ್ತೆ ಅದೇ ರಾಗ, ಅದೇ ಹಾಡು. ಕನ್ನಡಿಗರು ಹಿಂದಿ ಕಲಿಯುವದಕ್ಕೂ ಭಾರತದ ಏಕತೆಗೂ ಏನು ಸಂಬಂಧ. ಅಂದ್ರೆ ನಿಮ್ ಅರ್ಥದಲ್ಲಿ ಹಿಂದಿ ಬಾರದ ಕನ್ನಡಿಗ ದೇಶ ದ್ರೋಹಿಯೇ.? ಅನೇಕತೆಯಲ್ಲಿ ಏಕತೆ ಅನ್ನೋದು ನಮ್ ದೇಶದ ವೈಶಿಷ್ಟ್ಯ. ಭಾರತದಲ್ಲಿ ಕನ್ನಡ ಹೇಗೊ ಹಾಗೆ ಹಿಂದಿಯೂ ಒಂದು ಪ್ರಮುಖ ಭಾಷೆ. ಎಲ್ಲರೂ ಹಿಂದಿಗೆ ಜೋತು ಬಿದ್ದರೆ ಎಲ್ಲಿ ಉಳಿಯುತ್ತೆ, ಅನೇಕತೆ. ಅನೇಕತೆ ಇಲ್ಲದಿದ್ದರೆ ಏಕತೆಯ ಮಾತೆಲ್ಲಿ..? ಬೇರೆ ರಾಜ್ಯದಿಂದ ಬಂದವರು ಇಲ್ಲಿನ ಭಾಷೆಯಾದ ಕನ್ನಡ ಕಲಿಯಬೇಕು ಅದು ನಿಜವಾದ ಭಾರತೀಯನ ಧರ್ಮ. ಅದನ್ ಬಿಟ್ಟು ಇಲ್ಲಿಯವರಿಗೆ ಹಿಂದಿ ಕಲಿಲೇಬೇಕು ಅಂಥ ಆರ್ಡರ್ ಮಾಡ್ತಿರಲ್ರಿ ಸಾಹೇಬ್ರೆ.!

        ಉತ್ತರ
  5. kannadiga's avatar
    kannadiga
    ಏಪ್ರಿಲ್ 25 2011

    ನನ್ನ ೩೬ ವರ್ಷದ ಜೀವನದಲ್ಲಿ ತರ್ಕವೇ ಇಲ್ಲದ ಇಂತಹ ಲೇಖನವನ್ನು ನಾನು ಓದಿಯೇ ಇಲ್ಲ. ಈ ಲೇಖನ ನಮಗೆ ದಯಪಾಲಿಸಿದ ಅನಿರುದ್ಧ ಅವರಿಗೆ ಮೊದಲು ನನ್ನ ವಂದನೆಗಳನ್ನ ಹೇಳ ಬಯಸುತ್ತೇನೆ.
    ದೇಷದ ಹೆಸರಿನಲ್ಲಿ, ಪೊಳ್ಳು ರಾಷ್ಟ್ರೀಯತೆಯ ಹೆಸರಿನಲ್ಲಿ ಹಿಂದಿಯನ್ನು ಕನ್ನಡಿಗರ ಮೇಲೆ ಹೇರುತ್ತಿರುವುದು ಹುಚ್ಚುತವವಲ್ಲದೆ ಮತ್ತೇನು.
    ಪೊಳ್ಳು ರಾಷ್ಟ್ರೀಯತೆಯ ಹೆಸರಿನಲ್ಲಿ ಕನ್ನಡ ಅಳಿಸಿ ಹೋದರೂ ಪರವಾಗಿಲ್ಲ ಅನ್ನೋ ನಿಮ್ಮ ಧೋರಣೆಗೆ ನನ್ನ ಧಿಕ್ಕಾರ.

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      ತರ್ಕ ಇಲ್ಲದಿದ್ದರೂ ಸ್ವಲ್ಪವಾದರೂ ಸತ್ಯ ಇದೆಯೆಂದು ನಿಮಗೆ ಅನಿಸದ್ದು ದೌರ್ಭಾಗ್ಯ…

      ಉತ್ತರ
  6. Ramesh Rao's avatar
    Ramesh Rao
    ಏಪ್ರಿಲ್ 25 2011

    ಇಲ್ಲಿ ಲೇಖಕರು ಏನು ಹಾಳ ಬಯಸುತ್ತಾರೋ ಅರ್ಥವಾಗುತ್ತಿಲ್ಲ.

    ೧. ಹಿಂದಿ ರಾಷ್ಟ್ರ ಭಾಷೆಯೆಂದೇ?
    ೨. ನಮಗೆ ನೀರು ಇಲ್ಲದಿದ್ದರು ಪರವಾಗಿಲ್ಲ, ಪರ ರಾಜ್ಯಕೆಕ್ ನೀರು ಬಿಡೋಣವೆಂದೇ?
    ೩. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ, ಹೊಗೇನಕಲ್ ನನ್ನು ತಮಿಳುನಾಡಿಗೆ ಬಿಟ್ಟುಕೊಡೋಣವೆಂದೇ?
    ೪. ಕನ್ನಡ ನುಡಿಯ ಬಗ್ಗೆ ಅಧ್ಯಯನ ನಡೆಸಬಾರದೆಂದೇ?
    ೫. ಹಿಂದಿ ಹೇರಿಕೆ ಆಗುತ್ತಿದ್ದರು ಸುಮ್ಮನೆ ಕೂರಬೇಕೆಂದೇ?

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      ಏಕತೆಗೆ ಭಂಗವಾಗಬಾರದೆಂಬುದಷ್ಟೇ ನನ್ನ ನಿಲುವು

      ಉತ್ತರ
  7. Anand hosmani's avatar
    Anand hosmani
    ಏಪ್ರಿಲ್ 25 2011

    Becoz of hindi no regional languages are given importance(; Although Kannada got classical status central government has not given any funding for the promotion of Kannada and Telugu languages . Its all becoz of north Indian(Hindi) vote bank. More raj Thackerays are needed to eliminate noth indian hegemony.

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      I find some truth in ur comment. thanx

      ಉತ್ತರ
  8. Anand hosmani's avatar
    Anand hosmani
    ಏಪ್ರಿಲ್ 25 2011

    aniruddha , yen guru ninu ? yavaga nimmantha kannadigarige kannadada bagge abhimana baruthadde?

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      anand nange kannadadali yavatttu 95kinta kadime marks bandailla. hindiyalli 50 dattilla.. adre ega hindi matadokke bartha illa guru. e hindi janarondige badukokkadaru, avaru nam bagge enu heltare annodu tiliyokke adru hindi kalibekalva guru

      ಉತ್ತರ
      • Sandhya's avatar
        Sandhya
        ಏಪ್ರಿಲ್ 27 2011

        nivu avarige kannada kalisabEkendu annisalilve?
        matte nimma lEkhanadallina ondu mAtu: “ಅಖಿಲ ಭಾರತೀಯ ವಿದ್ಯಾರ್ಥಿ ಪರಿಷನ್ ನವರು ಹಿಂದಿಯಲ್ಲಿ ಬ್ಯಾನರಿ ಹಾಕಿದ್ರೆ ನಿಮಗೆ ಓದಲು ಬರೋದಿಲ್ಲ. ಆ ಸೋಲನ್ನು ಒಪ್ಪಿಕೊಳ್ಳಲಾಗದೇ ನೀವು ಅದರ ಬಗ್ಗೆಯೂ ಹೋರಾಟ ಮಾಡುತ್ತೀರಿ”
        idu akhile bharata vidyarthi parishat, hindi parichat alla. hindiyalli board hakidre idu ella bharatiyarigu hege artha agokke sadhya? nimma prakara, hindi gottilladidre kiLarime barabeke?

        ಉತ್ತರ
      • Sanjana's avatar
        Sanjana
        ಏಪ್ರಿಲ್ 28 2011

        ishTella buddhi haeLidavarige, yavano northie, thamage gottirada bhaasheyalli, thamma bagge en haeLtane anta tiLkoLo chapalanaa? 🙂

        keLage Sandhyaravaru heLiro reeti avarige Kannada kalisi, athava avara bagge Kannadadalli baiydu nimma seDu teerisikoLLi — aagaladaru northiegaLu Kannada kaliyabahudu.

        “with friends like these, who needs enemies?!”

        ಉತ್ತರ
  9. ರಾಕೇಶ್ ಶೆಟ್ಟಿ's avatar
    ಏಪ್ರಿಲ್ 25 2011

    ಅನಿರುದ್ಧ,
    ಬೈಯ್ರಿ ಸರ್ಯಾಗ್ ಬೈಯ್ರಿ, ಬೈಯ್ದು ಸಿಟ್ಟ್ ಮುಗಿದ್ಮೇಲೆ ಪರಿಹಾರ ಹೇಳಿ ಪುಣ್ಯ ಕಟ್ಕೋಳ್ಳಿ.ತಮ್ಮ ವಿಶಾಲ(ದ) ದ್ರುಷ್ಟಿ ಕೋನ ನೋಡಿ ಮನ ತುಂಬಿ ಬಂದಿದೆ.
    ಧನ್ಯೋಸ್ಮಿ

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      ಸಿಟ್ ಮುಗಿದಿಲ್ಲ ಸರ್… ಕನ್ನಡಿಗರು ಏನಾದರೂ ಮಾಡಿದಾಗ ಸ್ವಲ್ಪವಾದರೂ ಯೋಚಿಸಿ ಮಾಡ್ಲಿ ಅನ್ನೋದಷ್ಟೇ ನನ್ನ ಬಯಕೆ

      ಉತ್ತರ
  10. maaysa's avatar
    maaysa
    ಏಪ್ರಿಲ್ 25 2011

    En desha desha desha anteeri? Bhavadgeete hElide “Vasudaiva kuTumbakam” anta.. Jagatte namma kuTumba..

    So In this world English is rightly considered to be the common and international language. Hence leave all this Hindi, Kannada and lets all adopt English.

    How can I talk to Chinese and Srilankan, if I learn Hindi? World is more important than the country.!

    ಉತ್ತರ
    • ಅನಿರುದ್ಧ ಕುಮುಟ's avatar
      ಅನಿರುದ್ಧ ಕುಮುಟ
      ಏಪ್ರಿಲ್ 26 2011

      ಬಹುಶಃ ನೀವು ಪರದೇಶದ ಅನ್ನ ತಿನ್ನುತ್ತಿರಬೇಕು ಅನಿಸುತ್ತೆ. World is more important than the country.! ಸ್ವಲ್ಪ ವಿವರಿಸಿ ಸಾರ್

      ಉತ್ತರ
      • maaysa's avatar
        maaysa
        ಏಪ್ರಿಲ್ 27 2011

        Are you eating Hindi-anna? 😉

        What cares! English rules.

        ಉತ್ತರ
  11. ಶ್ರೀಹರ್ಷ's avatar
    ಶ್ರೀಹರ್ಷ
    ಏಪ್ರಿಲ್ 25 2011

    ರುಂಬ ರುಂಬ ನಲ್ಲ ಆರಡಿಗಲ್ಲು!
    ತಲೈವಾರ್‍ ಅನಿರುದ್ದಂಗಳ್ ಪೆರಿಯ ವಿಜಾರಮು ವಚ್ಚಿಟ್ಟಿರುಕ್ಕಾಂಗ…

    ಒಂದು ಮಾತು ಹೇಳಲಿಚ್ಚಿಸುತ್ತೇನೆ. ಆನೆಯನ್ನು ನೋಡಿ ನಾಯಿ ಹೇಳಿತಂತೆ “ಸೊಪ್ಪು ತಿಂದು ಬದುಕುವ ನೀನಾವ ಸೀಮೆಯ ಶಕ್ತಿಶಾಲಿಯೋ? ಇಲಿಯನ್ನು ತಿನ್ನುವ ನನ್ನನ್ನು ನೋಡು! ನೀನು ನನಗೆ ದುರ್ಬಲನಾಗಿ ಕಾಣುತ್ತಿದ್ದೀಯಾ!”

    “”ನನಗೆ ನೀವೆಲ್ಲ ಶತಮೂರ್ಖರ ತರಹ ಕಾಣುತ್ತಿದ್ದೀರಿ. ದಯವಿಟ್ಟು ಕನ್ನಡಿ ನೋಡಿಕೊಳ್ಳಿ.””

    ಅನಿರುದ್ಧ ಮಹಾಸ್ವಾಮಿಗಳೇ! ನಾಯಿ ಬೊಗಳಿದರೆ ಸ್ವರ್ಗ ಹಾಳೇ?

    ಉತ್ತರ
  12. ಬರತ್'s avatar
    ಬರತ್
    ಏಪ್ರಿಲ್ 26 2011

    ಅನಿರುದ್ದರೆ,
    ತಾವು ಹೀಗೆ ಹೇಳಿರುವುದರಿಂದ “ಹಿಂದಿ ಹೇರಿಕೆ ಎನ್ನುವುದು ನನಗೆ ಅರ್ಥವಾಗುವುದಿಲ್ಲ.”. ಇದನ್ನು ಅರ್ತ ಮಾಡ್ಕೊಳ್ಳೋಕೆ ಕೆಲವು ಬೊಟ್ಟುಗಳು.

    ೧. ಹಿಂದಿ ಹೇರಿಕೆಯಂದರೆ ತ್ರಿಬಾಶಾ ಸೂತ್ರ (ಮೂರ್ನುಡಿ). ಡೆಲ್ಲಿ ಮೆಟ್ರೊದಲ್ಲಿ ಎರಡೇ ನುಡಿ ಹಿಂದಿ ಮತ್ತು ಇಂಗ್ಲಿಶ್ ಆದರೆ ಬೆಂಗಳೂರಿನ ’ನಮ್ಮ ಮೆಟ್ರೊ’ದಲ್ಲಿ ಕನ್ನಡ, ಇಂಗ್ಲಿಶ್ ಮತ್ತು ಹಿಂದಿ. ಯಾಕೆ?
    ೨. ಕರ್ನಾಟಕದ ಮೂಲೆ ಮೂಲೆಯ ಹಳ್ಳಿಗಳಲ್ಲಿ ಹಿಂದಿಯಲ್ಲಿ(ಕೇಂದ್ರ ಸರ್ಕಾರದ ಕಚೇರಿಗಳಲ್ಲಿ) ನಾಮಪಲಕ ..ಯಾಕೆ?
    ೩. ನಾವು ಮಾತ್ರ ಮೂರನೆ(ಒಂದು ನುಡಿಯಾಗಿ) ನುಡಿಯಾಗಿ ಹಿಂದಿಯನ್ನು ಕಲಿಯಾಬೇಕು. ಆದರೆ ಉತ್ತರ ಬಾರತೀಯರಿಗೆ ದಕ್ಶಿಣ ಬಾರತದ ಯಾವ ನುಡಿಯು ಕಲಿಯಬೇಕಾಗಿಲ್ಲ. ಯಾಕೆ?

    ಬರತ್

    ಉತ್ತರ
  13. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಏಪ್ರಿಲ್ 27 2011

    ಯಾರೇನೇ ಹೇಳಲಿ, ನನ್ನ ಪ್ರಕಾರ ನೀವು ಹೇಳಿದ್ದು ಸರಿಯಾಗಿದೆ. ಈ ಕನ್ನಡ ಪ್ರೇಮ ದಿಕ್ಕು ತಪ್ಪಿದೆ. ಇಲ್ಲಿ ಕನ್ನಡ ಬೆಳೆಸೋ ಒಂದು ವಿಷಯ ಬಿಟ್ಟು ಬೇರೆಲ್ಲ ವಿಷಯಗಳು – ಹಿಂದಿ ಓಡಿಸೋದು ಹೇಗೆ (ಇಂಗ್ಲಿಷ್ ಮಾತ್ರ ಕನ್ನಡಿಗರಿಗೆ ತುಂಬಾ ಉಪ್ಕಾರ ಮಾಡಿದೆ ಅಂತೆ), ತಮಿಳರನ್ನು ಬಡಿಯೋದು ಹೇಗೆ (ಯಾವುದೋ ಒಂದು ಲೇಖನದಲ್ಲಿ ಹಾಕಿದ್ದ ಕಪ್ಪು ಬಣ್ಣದ ಮಕ್ಕಳ ಚಿತ್ರಕ್ಕೂ ಆಕ್ಷೇಪಣೆ ಬಂದಿತ್ತು. ಕಾರಣ ಏನಂತೀರಾ? ಆ ಮಕ್ಕಳು ಕನ್ನಡದೋರ ಥರ ಇಲ್ಲ, ಕೊಂಗರ ಥರ ಕಾಣಿಸ್ತಿವೆ ಅಂತ! ಇಂಥಾ ಕನ್ನಡದ ಮಕ್ಕಳೆಲ್ಲಾ ಬೆಳ್ಳಗೆ ಹಾಲಿನ ಥರ ಇರುತ್ತವೆ ಅಂತ ತಿಳ್ಕೊಂಡಿರೋ ರೇಸಿಸ್ಟ್ ಗಳೂ ಇದ್ದಾರೆ ಇಲ್ಲಿ.), ಮರಾಟಿಗಳು ಹೇಗೆ ಕೆಟ್ಟವರು ಇತ್ಯಾದಿ – ಇವೆಲ್ಲಾ ಹೆಚ್ಚು ಮಹತ್ವ ಪಡೆದುಕೊಂಡಿವೆ. ಎಲ್ಲಾ sweeping statements. ಇವರಿಗೂ ತಾಲಿಬಾನಿಗಳಿಗೂ ಏನು ವ್ಯತ್ಯಾಸ?

    ಕೆಲವರಂತೂ ಕನ್ನಡಾನೇ ತಿರುಚಿ ನನ್ನಂಥವರು ಈವರೆಗೆ ಕನ್ನಡ ಕಲಿತಿದ್ದೇ ವೇಸ್ಟು ಎಂಬಂತೆ ಬರೆಯುತ್ತಾರೆ. ಅದೇನೋ ಮಹಾಪ್ರಾಣ ಬೇಡವಂತೆ, ಒತ್ತಕ್ಷರಗಳು ಬೇಡವಂತೆ ಹೀಗೆ ಏನೇನೋ ಅಪಧ್ಧಗಳು. ಇವೆಲ್ಲಾ ಎರಡು ದಿನ ಇದ್ದು ಹೋಗುವ ಹುಚ್ಚಾಟಗಳು. ಅಷ್ಟೇ ಹೇಳಬಲ್ಲೆ. ಇವರಿಗೆಲ್ಲಾ ಕನ್ನಡದಲ್ಲಿ ಸಾವಿರ ಜನ ಸಾಹಿತಿಗಳು ಬರೆದಿರೋ ಕನ್ನಡ ಬೇಡ. ಯಾರೋ “ಸಂಕರ” ಬಟ್ಟ ಬರೆದಿದ್ದು ಮಾತ್ರ ಇವರಿಗೆ ಸರಿ. ಇದಕ್ಕೇನೆನ್ನಬೇಕು ಅಂತ ತಿಳಿಯುತ್ತಿಲ್ಲ. ಸಂಕರ ಬಟ್ಟರು ಏನಾದರೂ ಬರೆಯಲಿ. ಕನ್ನಡ ಭಾಷೆಯೇ ಅವರು ಬರೆದಿರೋ ಥರಾನೇ ಇರಬೇಕು ಎನ್ನುವುದು ತಾಲಿಬಾನಿತನವಲ್ಲವೇ? ಕನ್ನಡ ಪ್ರೇಮ ಇಂಥೋರ ಕೈಯಲ್ಲಿ ಸಿಕ್ಕಾಕಿಕೊಂಡಿರೋದು ಮಾತ್ರ ಸತ್ಯ.

    ಇನ್ನು ಆಸು ಹೆಗ್ಡೆಯವರು ಇದು ಕೇವಲ ಸಂವಾದ, ಕಿತ್ತಾಟ ಅಲ್ಲ ಅಂತ ಬರೆದಿದ್ದಾರೆ. ಮೊದಮೊದಲು ನಾನೂ ಹಾಗೇ ಅಂದುಕೊಂಡಿದ್ದೆ. ಇತ್ತಲಾಗಿ ಹಾಗೆ ಅನಿಸುತ್ತಿಲ್ಲ. ಅದಕ್ಕೇ ಇಲ್ಲಿ ಭಾಗವಹಿಸುವುದನ್ನು ಬಿಟ್ಟಿದ್ದೇನೆ. ಇದು ಚರ್ಚೆಯಾಗಿದ್ದರೆ ಇಲ್ಲಿ ಕೊಡು ಕೊಳ್ಳುವಿಕೆ ಇರುತ್ತಿತ್ತು. ಹಾಗಿಲ್ಲ.ಇಲ್ಲಿ ಹೇಗಿದೆ ಎಂದರೆ ಒಂದಷ್ಟು ಕನ್ನಡದ ತಾಲಿಬಾನಿಗಳು ಸೇರಿ ಕನ್ನಡಕ್ಕೆ ಸಂಕರ ಮಾಡುವುದನ್ನು ಪ್ರಶ್ನಿಸುವವರನ್ನು ಬ್ರೈನ್ ವಾಶ್ ಮಾಡುವಂತಿದೆ. ಇಲ್ಲಿ ಇತರರ ಯಾವ ವಾದಗಳಿಗೂ ಸೊಪ್ಪು ಹಾಕುವವರಿಲ್ಲ. ಕೊಡು ಕೊಳ್ಳುವಿಕೆ ಇಲ್ಲದಿದ್ದರೆ ಇದು ಹೇಗೆ ಸಂವಾದ ಆಗಬಲ್ಲದು? ಕನ್ನಡದ ಬದಲಾಗಿ (ಗಮನಿಸಿ-ಬದಲಾಗಿ) ಹಿಂದಿ ಉಪಯೋಗಿಸಿದರೆ ಅದು ಹೇರಿಕೆ ಆಗುತ್ತದೆ, ಆದರೆ ಕನ್ನಡದ ಜೊತೆ ಹಿಂದಿ ಇದ್ದರೆ ಹೇರಿಕೆ ಆಗುವುದಿಲ್ಲ ಎನ್ನುವ ನನ್ನ ಮಾತಿಗೆ ಯಾರೂ ಸೊಪ್ಪು ಹಾಕಲಿಲ್ಲ. ಹೇರಿಕೆ ಎನ್ನುವ ಶಬ್ದಕ್ಕೆ ತಮ್ಮದೇ ಆದ ವಾದ ಇಟ್ಟುಕೊಂಡಿದ್ದಾರೆ. ಕನ್ನಡದ ಜೊತೆ ಹಿಂದಿ ಇರಲೇ ಕೂಡದು ಎನ್ನುವುದು ಅಸಹನೆಯ ಮೂಲದಿಂದ ಬರುವ ವಾದ. ಕನ್ನಡದ ಜೊತೆ ಹಿಂದಿ ಯಾಕಿದೆ, ಯಾಕೆ ಬೇಕು ಎನ್ನುವುದಾದರೆ ಹಿಂದುಗಳ ಜೊತೆ ಮುಸ್ಲಿಮರು ಯಾಕಿದ್ದಾರೆ- ಯಾಕೆ ಬೇಕು, ಭಾರತದ ಪಕ್ಕ ಚೈನಾ ಯಾಕಿದೆ-ಯಾಕೆ ಬೇಕು ಎಂದೆಲ್ಲಾ ಪ್ರಶ್ನಿಸಬಹುದು. ಇದೆಲ್ಲ ಮೂರ್ಖತನದ ಪರಮಾವಧಿ. ಇನ್ನು “ನಮ್ಮ ದುಡ್ಡಲ್ಲಿ” ಹಿಂದಿ “ಹೇರಿಕೆ” ಬಗ್ಗೆ – ಇರೋ ಬೋರ್ಡ್ ನಲ್ಲೇ ಕನ್ನಡದ ಪಕ್ಕ ಒಂದು ಲೈನ್ ಹಿಂದಿ ಬರೆಯೋಕೆ ಏನು ದುಡ್ಡು ಖರ್ಚಾಗುತ್ತೆ ಸ್ವಾಮಿ? ಇರಲಿ. ಖರ್ಚಾಗುತ್ತೆ ಅಂತಾನೇ ಇಟ್ಟುಕೊಳ್ಳಿ. ಅದರಲ್ಲೇನಿದೆ ತಪ್ಪು? ನಾಳೆ ಬೆಂಗಳೂರಿಗೆ ಉಗ್ರರ ಧಾಳಿ ಆದರೆ ಭಾರತ ಸರಕಾರ ಕರ್ನಾಟಕದಿಂದ ಬಂದಿರೋ ಸೈನಿಕರನ್ನು ಮಾತ್ರ ಕಳಿಸಬೇಕು (ಕರ್ನಾಟಕ ಕೊಡೋ ತೆರಿಗೆಗೆ ಪ್ರತಿಯಾಗಿ) ಅಂದರೆ ಹೇಗಾಗುತ್ತದೆ? ಹಾಗೆಯೇ ಅಲ್ಲವೇ ಈ ತಾಲಿಬಾನಿಗಳ ವಾದ? ಭಾರತ ಎನ್ನುವುದು ಅನುಕೂಲಕ್ಕೆ ಮಾಡಿಕೊಂಡಿರೋ ಒಪ್ಪಂದ ಮಾತ್ರ ಅಲ್ಲ ಸ್ವಾಮಿ! ಇಲ್ಲಿ ಭಾವನಾತ್ಮಕ ಸಂಬಂಧವೂ ಇದೆ. ಆಡಳಿತ ವಿಕೇಂದ್ರೀಕರಣ (ಆರ್ಥಿಕ ಯೋಜನೆಗಳು, ಅಭಿವೃಧ್ಧಿ ಇತ್ಯಾದಿ ವಿಚಾರಗಳಲ್ಲಿ) ಇನ್ನೂ ಹೆಚ್ಚಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಇದು ಆಡಳಿತದ ಎಲ್ಲೆಯನ್ನು ಮೀರಿ ಭಾಷೆ (ಅಂದರೆ ಭಾರತದ ಇತರ ಭಾಷೆಗಳ ಬಗ್ಗೆ ಅಸಹನೆ), ದೇಶದ (ಅಂದರೆ ಭಾರತದಲ್ಲಿ ಬೇರೆ ಕಡೆ ಆಗುವುದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ಮಾನಸಿಕತೆ) ಮಟ್ಟಕ್ಕೆ ಹೋಗಬಾರದು. ಹಾಗಾದಲ್ಲಿ ಭಾರತ ಒಡೆದು ಚೂರಾಗುವುದರಲ್ಲಿ ಸಂಶಯವಿಲ್ಲ. ಕನ್ನಡದ ತಾಲಿಬಾನಿಗಳಿಗೆ ಬೇಕಾಗಿರುವುದೂ ಅದೇ ತಾನೆ.

    ನಿಮ್ಮ ಲೇಖನವನ್ನು ಅಪ್ರಬುಧ್ಧ ಎಂದು ಕರೆದಿದ್ದಾರೆ, ನೀವೂ ಹೇಳಿಕೊಂಡಿದ್ದೀರಿ. ನಮಗೆ ಅಪ್ರಬುಧ್ಧತನವೇ ಇರಲಿ ಅನಿರುಧ್ಧರೆ, ಆದರೆ ತಾಲಿಬಾನಿತನ ಬೇಡ. ನನ್ನ ಪ್ರತಿಕ್ರಿಯೆಗೆ ಪುಂಖಾನುಪುಂಖವಾಗಿ ತಾಲಿಬಾನಿ ಪ್ರತಿಕ್ರಿಯೆ ಬರಬಹುದು ಎಂದು ಗೊತ್ತು. ನಾನು ಅದಕ್ಕೆ ಕೇರ್ ಮಾಡುವುದಿಲ್ಲ.

    ಉತ್ತರ
    • ಮಹೇಶ ಪ್ರಸಾದ ನೀರ್ಕಜೆ's avatar
      ಮಹೇಶ ಪ್ರಸಾದ ನೀರ್ಕಜೆ
      ಏಪ್ರಿಲ್ 27 2011

      ಕನ್ನಡ ತಾಲಿಬಾನಿಗಳ ವಾದದಲ್ಲೇ ಹೇಳುವುದಾದರೆ ನಿಲುಮೆಯಲ್ಲಿ ಇವರುಗಳ ಇರುವಿಕೆಯೇ ನನ್ನ ಮೇಲಿನ ತಾಲಿಬಾನಿ ಹೇರಿಕೆಯಾಗಿದೆ. ಹೇಗಿದೆ ಈ ವಾದ! ಹಹಹ..

      ಕೇವಲ ವಾದಕ್ಕಾಗಿ ಹಾಗೆ ಹೇಳಿದೆ. ಇದು ನನ್ನ ಮಾತಂತೂ ಅಲ್ಲ.

      ಉತ್ತರ
    • Pramod's avatar
      ಏಪ್ರಿಲ್ 27 2011

      +1
      ಕನ್ನಡವನ್ನು ಸರಳಗೊಳಿಸುವ, ಮಹಾ’ಪ್ರಾಣ’ ತೆಗೆದು ಅಲ್ಪ ಬುದ್ಧಿಗೆ ನನ್ನ ಸಮ್ಮತ್ತಿ ಇಲ್ಲ.
      ನೀವು ಹೇಳಿದ ಹಾಗೆ ಕಿತ್ತಾಟ ಜಾಸ್ತಿ ಆಗಿದೆ, ಪ್ರತಿಕ್ರಿಯೆಗಳು ದ್ವೇಷದಿ೦ದ ತು೦ಬಿ ತುಳುಕಿತ್ತಿವೆ.
      ಹಿ೦ದಿಯೂ ಇರಲಿ ಇ೦ಗ್ಲೀಷ್ ಕೂಡ. ಆದ್ರೆ ಆಪ್ಶನಲ್ ಆಗಿರ್ಲಿ.

      ಉತ್ತರ
    • Priyank's avatar
      Priyank
      ಏಪ್ರಿಲ್ 27 2011

      ಮಹೇಶ ಪ್ರಸಾದ ಅವರೇ,
      ಶಂಕರ ಭಟ್ಟರ ಕೆಲಸಗಳು, ಅದರಿಂದ ಹೊರಬಂದ ವಿಷಯಗಳ ಬಗ್ಗೆ, ಅವುಗಳಲ್ಲಿ ನಮಗೆ ಒಳಿತೇನು ಎಂಬ ವಿಷಯದ ಬಗ್ಗೆ ನಡೆದ ಚರ್ಚೆಯಲ್ಲಿ ನೀವು ಪಾಲ್ಗೊಂಡಿದ್ರಿ.
      ನೀವು ಸಾಕಷ್ಟು ಪ್ರಶ್ನೆಗಳನ್ನೂ, ಅನಿಸಿಕೆಗಳನ್ನೂ ಹಂಚಿಕೊಂಡಿರಿ. ನಾನು ನಿಮ್ಮೊಂದಿಗೆ ಹಲವಾರು ವಿಷಯಗಳನ್ನು ಅದೇ ಚರ್ಚೆಯಲ್ಲಿ ಮಾತನಾಡಿದ್ದೆ. ನಿಮಗೆ ಹಲವು ವಿಷಯಗಳ ಬಗ್ಗೆ ಮನವರಿಕೆಯಾಗಿದೆ ಎಂದು ತಿಳಿದಿದ್ದೆ.
      ನುಡಿಯರಿಮೆ ವಿಚಾರವಾಗಿ ಹಲವು ವಿಷಯಗಳು ನಿಮಗೆ ಗೊತ್ತಿಲ್ಲ ಎಂಬುದನ್ನೂ ನೀವು ಒಪ್ಪಿಕೊಂಡಿದ್ರಿ. ನಿಮಗೆ ಆಸಕ್ತಿ ಇರುವುದರಿಂದ ಅದನ್ನು ಓದಿಕೊಳ್ಳಿ ಎಂದು ನಾನು ಸಲಹೆ ನೀಡಿದ್ದೆ.
      ಆದರೆ, ನಿಮ್ಮಲ್ಲಿ ಆ ವಿಚಾರವಾಗಿ ಇಷ್ಟೊಂದು ಸಿಟ್ಟಿದೆ ಎಂದು ನೋಡಿ ಅಚ್ಚರಿಯಾಯ್ತು.
      ಶಂಕರ ಭಟ್ಟರು ಮಾಡುತ್ತಿರುವ ಕೆಲಸಗಳೇನು, ಅವರಷ್ಟೇ ಅಲ್ಲದೇ, ಇತರೆ ವಿಶ್ವ ವಿದ್ಯಾಲಯಗಳಲ್ಲಿ ನಡೆಯುತ್ತಿರುವ ಅಧ್ಯಯನಗಳೆನು, ಎಂಬುದನ್ನು ಅರಿಯದೇ, ಅವರನ್ನೆಲ್ಲಾ ಗೇಲಿ ಮಾಡುವ ಮಟ್ಟಕ್ಕೆ ನೀವು ಇಳಿದದ್ದು ಕಂಡು ಅಚ್ಚರಿ ಜೊತೆಗೇ ಬೇಸರವೂ ಆಯ್ತು.

      ಯಾವುದೇ ವಿಷಯಗಳನ್ನು ಒಪ್ಪದಿದ್ದರೆ, ಯಾಕೆ ಒಪ್ಪೋಲ್ಲ ಎಂದು ನಿಮ್ಮ ಅನಿಸಿಕೆಗಳನ್ನು ತಿಳಿಸಿ, ಚರ್ಚೆ ನಡೆಸುವುದು ಆರೋಗ್ಯಕರ ಅಲ್ಲವೇ.
      ನಿಮ್ಮದೂ ಅಂತದೆ ಮನಸ್ಥಿತಿ ಎಂದು ಇಷ್ಟು ದಿನ ತಿಳಿದಿದ್ದೆ.

      ಉತ್ತರ
  14. ರವಿ's avatar
    Ravi
    ಏಪ್ರಿಲ್ 27 2011

    ಮಹೇಶ ಪ್ರಸಾದ ನೀರ್ಕಜೆ :
    ಹಾಗಾದಲ್ಲಿ ಭಾರತ ಒಡೆದು ಚೂರಾಗುವುದರಲ್ಲಿ ಸಂಶಯವಿಲ್ಲ.

    ಯಾವ ವಾದ ಸರಿ, ಯಾವುದು ತಪ್ಪು ಎನ್ನುವುದು ಕಷ್ಟ. ಆ ಭಾಷೆ ಕಲಿಯಿರಿ ಈ ಭಾಷೆ ಕಲಿಯಿರಿ ಎನ್ನುತ್ತಾ ಎಲ್ಲರನ್ನೂ “multilingual experts” ಮಾಡುವುದು ಸರಿಯಲ್ಲ. ಕನ್ನಡವೂ ಸೇರಿದಂತೆ ಯಾವುದೇ ಭಾಷೆ “optional” ಆಗಿರಲಿ.
    ನೀವಂದಂತೆ “ಹೇರಿಕೆ”ಗೆ ಎಲ್ಲರೂ ತಮ್ಮದೇ ಅರ್ಥ ಕೊಟ್ಟಿದ್ದಾರೆ. ಕನ್ನಡದ ಜೊತೆ ಹಿಂದಿ ಹೇರಿಕೆಯಾಗುವುದಾದರೆ ಕನ್ನಡದ ಅಗತ್ಯವಿಲ್ಲದವನಿಗೆ ಕನ್ನಡವೂ ಹೇರಿಕೆಯೆ ಅಲ್ಲವೇ? ಕರ್ನಾಟಕದಲ್ಲಿದ್ದು ಕನ್ನಡ ಬರಲ್ಲ ಎಂದರೆ ಉರಿಯುವ ನಮಗೆ ಭಾರತದಲ್ಲಿದ್ದು ಹಿಂದಿ ಬರಲ್ಲ ಎಂದರೆ ಬೇಸರದ ಸಂಗತಿಯಲ್ಲ. ಯಾಕೆ? ಭಾಷೆಯ ಉಳಿವಿನ ಹೆಸರಿನಲ್ಲಿ ದೇಶ ಚೂರಾಗುವುದೇ ಎನ್ನುವ ಸಂಶಯ ಅಂತೂ ಬಹಳ ಹಿಂದೆ ಮೂಡಿದೆ.

    ಉತ್ತರ
    • ಮಹೇಶ ಪ್ರಸಾದ ನೀರ್ಕಜೆ's avatar
      ಮಹೇಶ ಪ್ರಸಾದ ನೀರ್ಕಜೆ
      ಏಪ್ರಿಲ್ 27 2011

      {ಕನ್ನಡವೂ ಸೇರಿದಂತೆ ಯಾವುದೇ ಭಾಷೆ “optional” ಆಗಿರಲಿ.}
      ಇದೂ ಸರಿಯಲ್ಲ ನನ್ನ ಪ್ರಕಾರ. ಮಕ್ಕಳ ಮಾತೃಭಾಷೆ ಕಲಿಕೆ ಮಾಧ್ಯಮವಾಗಲಿ. ಆಯಾಯಾ ರಾಜ್ಯದ ಭಾಷೆ ಆಯಾಯಾ ರಾಜ್ಯದಲ್ಲಿ ಆಡಳಿತದ, ವ್ಯವಹಾರದ ಭಾಷೆಯಾಗಿರಬೇಕು. ಇದಾಗದಿದ್ದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಇವೆರಡರಲ್ಲಿ ಯಾವುದೇ ರಾಜಿ ಆಗಬಾರದು. ಉಳಿದಂತೆ ಇತರ ಭಾಷೆಗಳ ಬಗ್ಗೆ ಅಷ್ಟೊಂದು ದ್ವೇಷ ಕಟ್ಟಿಕೊಳ್ಳುವ ಅಗತ್ಯವಿಲ್ಲ.

      ಉತ್ತರ
      • maaysa's avatar
        maaysa
        ಏಪ್ರಿಲ್ 27 2011

        Ravi is right.. Karnataka govt. is imposing Kannada medium on people by only having Kannada medium government. People must have options to choose whatever language medium they want.

        I’d say all go to English medium. All these Indian languages are not fit for science.

        ಉತ್ತರ
        • maaysa's avatar
          maaysa
          ಏಪ್ರಿಲ್ 27 2011

          I meant “Kannada medium government school”.

          ಉತ್ತರ
          • ರವಿ's avatar
            Ravi
            ಏಪ್ರಿಲ್ 27 2011

            ಹತ್ತನೇ ತರಗತಿವರೆಗೂ ನನ್ನ ಹಳ್ಳಿಯ ಕನ್ನಡ ಮಾಧ್ಯಮದಲ್ಲಿ ಓದಿ, ಆಮೇಲೆ ಇಂಗ್ಲಿಷ್ ಗೆ ಬಂದಾಗ ಆಗುವ ಕಷ್ಟ ಸ್ವತ ಅನುಭವಿಸಿದ್ದೇನೆ. ಶುರುವಿಂದ ಕೊನೆವರೆಗೂ ಒಂದೇ ಭಾಷೆಯಿರಲಿ ಅಂತ ಅಷ್ಟೇ. ಕನ್ನಡ ಮಾಧ್ಯಮ ಶಾಲೆಗಳ ಮೇಲೆ ನನ್ನ ತಕರಾರಿಲ್ಲ.

            ಉತ್ತರ
            • maaysa's avatar
              maaysa
              ಏಪ್ರಿಲ್ 27 2011

              neevu yaake Kannada medium-alli Odiddu? nimage bere medium option iralillava nimma haLLi-yalli?

              ಉತ್ತರ
              • ರವಿ's avatar
                Ravi
                ಏಪ್ರಿಲ್ 27 2011

                ಇಲ್ಲ ಗುರು, ದ.ಕ. ಜಿಲ್ಲಾ ಪರಿಷತ್ ಸರಕಾರೀ ಕನ್ನಡ ಶಾಲೆಯೊಂದೆ ನಮ್ಮ ಹಳ್ಳಿಯಲ್ಲಿದ್ದದ್ದು. ಅದಾಗ್ಯೂ ಅಲ್ಲಿ ಆಯ್ಕೆಯ ಅಧಿಕಾರವಿರಲ್ಲ ಮಕ್ಕಳಿಗೆ ಇರಲ್ಲ ಅಲ್ವೇ.. ಅಪ್ಪ ಅಮ್ಮ ಹೇಳಿದ ಕಡೆ ಹೋಗಬೇಕಲ್ಲ? 🙂

                ಉತ್ತರ
                • maaysa's avatar
                  maaysa
                  ಏಪ್ರಿಲ್ 27 2011

                  I see..

                  Naannu D.K allE Odiddu! 😉 But in English medium. Nanna appa-amma serisiddu.

                  English-inda use ide..

                  Hindi yaake? Enu use adarinda?

                  nam state-alli Hindi jaasti aadre, baDa-state-gaLinda immigration jaasti aagatte. Slums jaasti aagatte. Robbery jaasti aagatte. Rudeness and misbehaviour with women jaasti aagatte.!

                  Bangladeshi, Pakistani illegal immigrants jaasti aagtaare!

                  ಉತ್ತರ
                  • Pramod's avatar
                    ಏಪ್ರಿಲ್ 27 2011

                    ನೀವು ಹೇಳಿದ್ದು ಸರಿ. ಹಿ೦ದಿಯಿ೦ದಾಗಿ ಉತ್ತರ ಭಾರತ ಪ್ರಾಣಿಗಳು ನಮ್ ಕಡೆ ವಲಸೆ ಬರೋದು ಜಾಸ್ತಿ ಆಗಿದೆ

                    ಉತ್ತರ
                    • maaysa's avatar
                      maaysa
                      ಏಪ್ರಿಲ್ 27 2011

                      Aa praanigaLige soppu haakOroo iddaaralla..

                      PraaNi priyaru 😉

                  • ಮಹೇಶ ಪ್ರಸಾದ ನೀರ್ಕಜೆ's avatar
                    ಮಹೇಶ ಪ್ರಸಾದ ನೀರ್ಕಜೆ
                    ಏಪ್ರಿಲ್ 27 2011

                    ಸ್ವಾಮಿ! ಸ್ಲಮ್ ಜಾಸ್ತಿ ಆಗಿರೋದು ಜನ ಹಳ್ಳಿಯಿಂದ ವಲಸೆ ಬಂದಿದ್ರಿಂದಾಗಿ. ಉತ್ತರ ಭಾರತದೋರಲ್ಲ, ನಮ್ಮ ಸ್ಲಂ ಗಳಲ್ಲಿ ಇರೋರು ಇಲ್ಲೇ ಪಕ್ಕದ ಊರಿಗಳಿಂದ ವಲಸೆ ಬಂದಿರೋರು. ಹಳ್ಳೀಲಿ ಹೊಲ ಉತ್ತುಕೊಂಡಿದ್ದರೆ ಜೀವನ ಕಷ್ಟ ಅಂತ ಬಂದಿರೋರು ಅವ್ರು. ಈ ಅವ್ಯವಸ್ಥೆಗೆ ಸರಕಾರಗಳ ಕೃಷಿ ಅವಗಣೆನೆಯೇ ಕಾರಣ. ಹಿಂದಿ ಅಲ್ಲ. ಎಲ್ಲದಕ್ಕೂ ಹಿಂದಿ ದೂರುವ ದುರ್ಗತಿ ನಮಗ್ಯಾಕೆ ಬಂತೋ ಕಾಣೆ.

                    ಉತ್ತರ
                  • ರವಿ's avatar
                    Ravi
                    ಏಪ್ರಿಲ್ 27 2011

                    ನಾನೂ ಹಿಂದಿ ಪರವಾಗಿ ಮಾತಾಡಿಲ್ಲ. ನಮ್ಮ ರಾಷ್ಟ್ರ ಭಾಷೆಯಾದ್ದರಿಂದ ಕಲಿತರೆ ತಪ್ಪಿಲ್ಲ. ನೀವು ಹೇಳಿದಂತೆ ವಲಸೆ ಹೆಚ್ಚಾಗಿರುವುದೂ ನಿಜ.. ನಾವು ದ.ಕ.ದವರು ವಲಸೆ ಹಕ್ಕಿಗಳಲ್ಲವೇ? 🙂 ಮುಂಬೈ ಹೆಚ್ಚು ಕಡಿಮೆ ನಮ್ಮದೇ ಅಲ್ಲವೇ?. ವಲಸೆ ಕಡಿಮೆಯಾಗಲಿ ಮಾಯ್ಸ. ಆದರೆ ನಾವು ಈ ಥರ ಚಳುವಳಿ ಮಾಡಿ ದೇಶ ವಿಭಜನೆ ಮಾಡುವುದಕ್ಕೆ ಮಾತ್ರ ನನ್ನ ವಿರೋಧ ಇದೆ.

                    ಉತ್ತರ
                    • maaysa's avatar
                      maaysa
                      ಏಪ್ರಿಲ್ 27 2011

                      ” ನಮ್ಮ ರಾಷ್ಟ್ರ ಭಾಷೆಯಾದ್ದರಿಂದ ಕಲಿತರೆ ತಪ್ಪಿಲ್ಲ. ”

                      hauda? 🙂 yaavaga aaytu?

                    • maaysa's avatar
                      maaysa
                      ಏಪ್ರಿಲ್ 27 2011

                      Ravi..

                      Any case do you live in Bihar or UP?

                      Yuck!

                      By the way.. Naanu DK alli Odiddu aSte. Nanna district alli 96% mandiya mother tongue Kannada. Naavu powerful district! 😉

        • maaysa's avatar
          maaysa
          ಏಪ್ರಿಲ್ 27 2011

          Now these Kannada fanatic site will delete my comments because it is written in English!?

          ಉತ್ತರ
        • ರವಿ's avatar
          Ravi
          ಏಪ್ರಿಲ್ 27 2011

          ಮಾಯ್ಸ, ನಿಮ್ಮ “ಆಚೆ ಕಡೆ ನಿಂತು ಈಚೆ ಕಡೆ ವಾದ” ಮಾಡುವ ಶೈಲಿ ಮೆಚ್ಚುತ್ತೇನೆ. 🙂 ನೀವು ಇಂಗ್ಲಿಷ್ ಅಲ್ಲಿ ಬರೆದ ಮಾತ್ರಕ್ಕೆ ನೀವು ಕನ್ನಡ ಪ್ರೇಮಿ ಅಲ್ಲ ಎಂದು ಯಾರೂ ಹೇಳುವುದಿಲ್ಲ. ನಿಮ್ಮ ವಾದ ಕನ್ನಡ ಪರವಾಗಿಯೇ ಇದೆ ಅದಕ್ಕೆ ನಿಲುಮೆ ಅಳಿಸುವುದಿಲ್ಲ ಎಂದುಕೊಳ್ಳುತ್ತೇನೆ. 🙂 ಹಾಗೆಂದು ನಾನು ಕನ್ನಡ “optional” ಇರಲಿ ಎಂದ ಮಾತ್ರಕ್ಕೆ ಅದನ್ನು ಕನ್ನಡ ದ್ವೇಷ ಎಂದೂ ಯಾರೂ ಭಾವಿಸಿಲ್ಲ ಎಂದುಕೊಳ್ಳುತ್ತೇನೆ. ಸದ್ಯ ಸ್ನಾತಕದಲ್ಲಿ ವಿಜ್ಞಾನವು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲಾಗುತ್ತಿರುವುದರಿಂದ, ವಿಜ್ಞಾನದಲ್ಲಿ ಮುಂದುವರಿಯುವ ಇಚ್ಛೆ ಇದ್ದವನಿಗೆ ಸಂವಹನಕ್ಕೆ ಬೇಕಾದಷ್ಟು ಕನ್ನಡ ಮತ್ತದರ ವ್ಯಾಕರಣ ಸಾಕು, ಹಳೆಗನ್ನಡ, ಹೊಸಗನ್ನಡದ ಕೃತಿ, ಕಾವ್ಯಗಳ ಅಗತ್ಯ ಇಲ್ಲ ಎಂಬ ದೃಷ್ಟಿಯಿಂದ ಹೇಳಿದೆ. ಕನ್ನಡ ಬೆಳೆಯಬೇಕೆಂಬ ಆಸೆಯೂ ಇದೆ ಭಾರತದೊಳಗೆ ವೀಸಾ ಇಲ್ಲದೆಯೇ ಸಂಚರಿಸಬೇಕೆಂಬ ಆಸೆಯೂ ಇದೆ.

          ಉತ್ತರ
          • maaysa's avatar
            maaysa
            ಏಪ್ರಿಲ್ 27 2011

            Mate,

            I don’t understand you here completely because my Kannada is not good enough to correct comprehend some words such as ‘ಸಂವಹನ’, ‘ಸದ್ಯ ಸ್ನಾತಕದಲ್ಲಿ’ etc.

            I learnt from my preschool to Master’s studies in English. But I can speak Kannada, only because it is my mother tongue.

            Though I second you regarding providing more options and allowing people to choose the medium of education for their children, I don’t see that’s being a good reason for allowing mass immigrations of aliens to our Kannada land.

            As we know, Karnataka/Kannada land is not very rich in water resource. It just cannot accommodate as much people as in the plateau of Ganges and Godavari. Hence Kannada land really needs a immigration control mechanism. Kannada land is getting over populated.

            ಉತ್ತರ
            • maaysa's avatar
              maaysa
              ಏಪ್ರಿಲ್ 27 2011

              “correctly comprehend “

              ಉತ್ತರ
            • maaysa's avatar
              maaysa
              ಏಪ್ರಿಲ್ 27 2011

              That immigration control mechanism can be a visa system!

              ಉತ್ತರ
            • maaysa's avatar
              maaysa
              ಏಪ್ರಿಲ್ 27 2011

              Or that immigration control mechanism can be not allowing alien language in Karnataka, and thus making it difficult for aliens to live there! 🙂

              ಉತ್ತರ
            • ಕುಮಾರ್'s avatar
              ಕುಮಾರ್
              ಏಪ್ರಿಲ್ 28 2011

              ಮಾಯ್ಸಣ್ಣ ,
              ಮಾಂಜುಗಾರ ,ನುಡಿಯರಿಗ ಇತ್ಯಾದಿ ಪದಗಳನ್ನು ತುರುಕಿದ ಕೂಡಲೇ ಕನ್ನಡ ವಿಜ್ಞಾನಕ್ಕೆ ಯೋಗ್ಯವಾಯಿತೆ? ಈಗಿರುವ ಪದ / ಅಕ್ಷರ ಗಳಿಂದ ಯಾಕೆ ಸಾದ್ಯವಿಲ್ಲ? ಆಶ್ಚರ್ಯ!!!!?

              ಉತ್ತರ
              • maaysa's avatar
                maaysa
                ಏಪ್ರಿಲ್ 28 2011

                ಕುಮಾರ್

                Illiya topic ‘Hindi’ adakke neevu hELuvudara bagge chikkadaagi answer goDuvenu.

                Kannada-dalli scientific writing tumba difficult anta Kannada medium boys mattu girls heLtaarante. Adakke reasons enu anta Dr.Shankar Bhatt hELOdu :- Kannada written-language alli tumba Sanskrit words fill aagide. So, aa writings mandige comprehend aagalla!

                Adakke naanu hELiddu.. ellarigoo scientific education English-alli koDali. Kannada-ginnada, Hindi-gindi ella cinema, naaTka maaDakke use maaDali.

                But.. How that is related to Hindi? Do you mean scientific writings in Kannada is easier if Hindi words are used? Really?

                ಉತ್ತರ
              • maaysa's avatar
                maaysa
                ಏಪ್ರಿಲ್ 28 2011

                “ಈಗಿರುವ ಪದ / ಅಕ್ಷರ ಗಳಿಂದ ಯಾಕೆ ಸಾದ್ಯವಿಲ್ಲ?”

                Because English and European languages are best suited for science.

                Kannada is a weak language just like Sanskrit to express the complex concepts of modern science in it.

                All people who tried write scientific writing in Kannada used so much Sanskrit words that they must be called Sanskrit scientific writing with Kannada load words :).

                Sanskritization of Kannada doesn’t make it fit for science.

                We need Englishification of Kannada, and thus more befitting for science.

                ಉತ್ತರ
      • Sandhya's avatar
        Sandhya
        ಏಪ್ರಿಲ್ 27 2011

        mahesh avare, himdiyinda matra desha ogguDalu sadhya amta hege nirdhara maDidira?
        constitution tegedu nodi, dakhsina davaru hindi kaliyabeku, uttaradavaru ondadaru dakshinada bhashe kaliya beku anta ide… elladru north alli kannada kalitirodu nodidira? matte, southalli matra hindi yake kalibeku? namma rajyadalli eshtu makkaLu 10th alli hindi fail agtare… hindi illi agatyane ildidru, hindi passu madi annodu sarina?

        ಉತ್ತರ
  15. ಹಳ್ಳಿ ಹೈದ's avatar
    ಹಳ್ಳಿ ಹೈದ
    ಏಪ್ರಿಲ್ 27 2011

    ಇಲ್ಲಿ ಕೆಲವರು ಹಿಂದಿ ಹೇರಿಕೆ ಆಗುತ್ತಿಲ್ಲ. ಕನ್ನಡದ ಪಕ್ಕೆ ಹಿಂದಿ ಇದ್ದರೆ ಹಿಂದಿ ಹೇರಿಕೆಯೇ? ಎಂಬಂತ ಪ್ರಶ್ನೆ ಕೇಳಿದ್ದಾರೆ. ಇದು ಹೇಗೆಂದರೆ, ಸಸ್ಯಾಹಾರದ ಊಟದ ಎಲೆಯಲ್ಲಿ ಮಾಂಸ ಇದ್ದ ಹಾಗೆ. ಇದ್ದರೆ ಏನು ತಪ್ಪು ಅದರ ಪಾಡಿಗೆ ಅದು ಇದೆ ಎಂದು ಸಹಿಸಿಕೊಳ್ಳುವವರಿಗೆ ಅದು ಸರಿ. ಸಹಿಸಿಕೊಳ್ಲದವರೆಲ್ಲರು ಇವರಿಗೆ ತಾಲಿಬಾನಿಗಳು. ಏನ್ ಮೀ “ಮಾಂಸೆ”

    ಅವರು ಕಲಿತ ಕನ್ನಡ ಸಾಮಾನ್ಯ ಕನ್ನಡಿಗನಿಗೆ ಅರ್ಥವಾಗುವುದಿಲ್ಲ ಎಂದರೆ ಅವರಿಗೆ ಎಲ್ಲಿಲ್ಲದ ಕೋಪ. ನಾನು ಕನ್ನಡವನ್ನು “ಮಹತ್ತರವಾಗಿ ಒತ್ತು” ಕೊಟ್ಟು ಕಲಿತ್ತಿದ್ದಿನಿ. ಕಲಿತದ್ದೆಲ್ಲ ಇವರು ಹೊಳೆಯಲ್ಲಿ ಹುಣಸೇಹಣ್ಣು ಹಿಂಡಿದ ಹಾಗೆ ಮಾಡುತ್ತಿದ್ದಾರಲ್ಲ. ಸಾಮನ್ಯ ಕನ್ನಡಿಗನಿಗೆ ಅರ್ಥವಾಗುವ ಕನ್ನಡ ಹೊರ ಹೊಮ್ಮಿಸಲು ಹೊರಟಿದ್ದಾರಲ್ಲ. ಇವರೆಂತ ತಾಲಿಬಾನಿಗಳು.

    ಉತ್ತರ
    • ಮಹೇಶ ಪ್ರಸಾದ ನೀರ್ಕಜೆ's avatar
      ಮಹೇಶ ಪ್ರಸಾದ ನೀರ್ಕಜೆ
      ಏಪ್ರಿಲ್ 27 2011

      ನೀವು ವೆಜಿಟೇರಿಯನ್ ಆಗಿದ್ದರೂ ವೆಜ್/ನಾನ್-ವೆಜ್ ಹೋಟೆಲ್ಲಿನಲ್ಲಿ ಊಟ ಮಾಡಲ್ವೇ? ಇಲ್ಲಾಂದ್ರೆ ಎಂಥಾ ಮಡಿವಂತರಪ್ಪ ನೀವು 🙂

      ಸಾಮಾನ್ಯನಿಗೆ “ಅರ್ತ”ವಾಗುತ್ತೇಂತ ಹೇಳಿದ ನಿಮ್ಮ ಕನ್ನಡ ನಿಮಗೇ ಇರಲಿ ಸ್ವಾಮಿ. ಸಾಮಾನ್ಯವೋ ಅಸಾಮಾನ್ಯವೋ ನನ್ನ ಕನ್ನಡ ನನಗೇ ಇರಲಿ. ಹಾಗೆಯೇ ಎಲ್ಲರಿಗೂ ಬೇಕಾದ ಹಾಗೆ ಇರಲಿ. ನಿಮ್ಮ “ಅರ್ತ”ವಾಗುವ ಕನ್ನಡವನ್ನು ಎಲ್ಲರ ಗಂಟಲೊಳಗೆ ತುರುಕಬೇಡಿ ದಯವಿಟ್ಟು.

      ಉತ್ತರ
      • vijay's avatar
        vijay
        ಏಪ್ರಿಲ್ 27 2011

        ಹಿಂದಿ ಭಾಷೆಯ ವಿರೋಧಕ್ಕೂ ಮತ್ತು ಹಿಂದಿಯೇತರ ರಾಜ್ಯಗಳಲ್ಲಿ ಅನಗತ್ಯವಾಗಿರುವ ಹಿಂದಿ ಭಾಷೆಯ ಹೇರಿಕೆಯ ವಿರೋಧಕ್ಕೂ ವ್ಯತ್ಯಾಸವನ್ನೇ ತಿಳಿಯುವ ಸಾಮರ್ಥ್ಯ ಯಾಕೆ ಇಲ್ಲ ನಿಮಗೆ ನೀರ್ಜಜೆಯವರೆ.?! ಕನ್ನಡಕ್ಕಿರುವಷ್ಟೇ ಗೌರವ ಹಿಂದಿಯ ಬಗ್ಗೆಯೂ ಇದೆ. ಆದರೆ ಇಲ್ಲಿ ಅನಿರುದ್ಧರ ವಿಚಾರ ಎಷ್ಟು ಬಾಲಿಶವಾಗಿದೆ ಅಂದರೆ ಬೇರೆ ಊರಿಂದ ಬಂದ ಪಕ್ಕದ ಮನೆಯವರು ನಮ್ ಬಗ್ಗೆ ಏನ್ ಮಾತಾಡ್ತಾರೆ ಅಂತ ತಿಳಿದುಕೊಳ್ಳೋಕೆ ನಾವು ಹುಟ್ಟಿದಾಗಿನಿಂದ ಅವರ ಭಾಷೆ ಕಲಿತುಕೊಂಡಿರಬೇಕು ಇಲ್ಲದಿದ್ದರೆ ಕೂಪಮಂಡೂಕಗಳಾಗಿಬಿಡ್ತೀವಿ ಅನ್ನುವ ಹಾಗಿದೆ.

        ನಿಮ್ಮದೇ ಶೈಲಿಯಲ್ಲಿ ಹೇಳುವುದಾದರೆ ನಿಮ್ಮನ್ನು ಹಿಂದಿ ತಾಲಿಬಾನಿಗಳು ಎನ್ನಬಹುದು. ಭಾರತೀಯ ಎನ್ನಿಸಿಕೊಳ್ಳಬೇಕಾದರೆ ಹಿಂದಿ ಕಲಿಯಲೇ ಬೇಕು ಎಂದು ಬ್ರೈನ್ ವಾಶ್ ಮಾಡುತ್ತಾ ನಮ್ಮ ದೇಶದ ವೈವಿಧ್ಯತೆಯಲ್ಲಿ ಏಕತೆ ಅನ್ನುವ ವಿಷಯಕ್ಕೆ ಬೆಲೆ ಕೊಡದೆ ಹಿಂದಿ ಸಂವಿಧಾನ (ತಾಲಿಬಾನಿ ಸಂವಿಧಾನದಂತೆ) ಎಲ್ಲರ ಮೇಲೂ ಹೇರುತ್ತಿರುವವರು ನೀವು! ರಾಷ್ಟ್ರಭಾಷೆ ಹಿಂದಿ ಅಂತ ನೀವು ತಿಳಿದುಕೊಂಡಿದ್ದರೆ ಒಮ್ಮೆ ನಮ್ಮ(ಭಾರತದ) ಸಂವಿಧಾನದ ಪುಟಗಲನ್ನು ತಿರುವಿಹಾಕಿಬನ್ನಿ.

        ಉತ್ತರ
      • ಹಳ್ಳಿ ಹೈದ's avatar
        ಹಳ್ಳಿ ಹೈದ
        ಏಪ್ರಿಲ್ 27 2011

        ನಾನ್ ವೆಜ್ ಹೋಟೆಲ್ ನಲ್ಲಿ ಊಟ ಮಾಡಿದ ಮಾತ್ರಕ್ಕೆ, ಎಲೆಯಲ್ಲಿ ಮಾಂಸ ಇರಬೇಕೆಂದೇನು ಇಲ್ಲವಲ್ಲ ಮಹಾಶಯರೇ….

        ಎಲ್ಲರ ನಾಲಿಗೆಯಲ್ಲಿ ಹೊರಡದ ಕನ್ನಡವನ್ನು ನೀವು ನಿಮ್ಮ ಗಂಟಲೊಳಗೆ ಇಟ್ಟುಕೊಳ್ಳಿರಿ. ಯಾರ್ ಯಾರ್ ನಾಲಿಗೆಯಲ್ಲಿ “ಎಲ್ಲರ ಕನ್ನಡ” ಹೊರಳುತ್ತದೋ, ಅದು ಅವರವರ ಗಂಟಲಿನಲ್ಲಿ ಆರಾಮಾಗಿರಲಿ. ಇದಕ್ಕೆ ನಿಮ್ಮ ಆಕ್ಷೇಪ ಯಾಕೆ ತಾಲಿಬಾನೀಯರೆ.

        ಉತ್ತರ
      • ಮಹೇಶ್ ರುದ್ರಣ್ಣ's avatar
        ಮಹೇಶ್ ರುದ್ರಣ್ಣ
        ಏಪ್ರಿಲ್ 28 2011

        ಯಾವುದು ಹೇಗಿದೆಯೋ ಹಾಗೆ ಇರಬೇಕು,, ಅದನ್ನು ಪ್ರಶ್ನಿಸಲೂ ಬಾರದು, ಚರ್ಚೆಯೂ ಮಾಡಬಾರದು, ಇನ್ನೂ ಬದಲಾಯಿಸುವುದಂತೂ ದೂರದ ಮಾತು.. ಇದು ಮೂಲಭೂತವಾದಿಗಳ ಮಾತು. ನನಗೆ ನೀರ್ಕಜೆಯವರ ಮಾತಲ್ಲೂ ಇದೇ ದಾಟಿ ಕಾಣಿಸುತ್ತಿದೆ.

        ಶಂಕರ ಬಟ್ಟರು ಒಂದು ಬಗೆಯ ಸುಧಾರಣೆಯನ್ನು ಹೇಳಿದ್ದಾರೆ. ಅದನ್ನು ಒಪ್ಪಿಕೊಳ್ಳಲೇ ಬೇಕು ಎಂದು ಯಾವ ಚರ್ಚೆಯಲ್ಲೂ ಯಾರೂ ಹೇಳಿಲ್ಲ.. ಆದರೆ ನೀರ್ಕಜೆಯವರಿಗೆ ಅವರ ವಾದ ವಿರೋಧಿಸುವವರನ್ನು ದೇಶ ದ್ರೋಹಿಗಳು ಎಂದು ತೋರಿಸುವ ಆತುರ. ಹೀಗಾಗಿ ಅವರನ್ನು ತಾಲಿಬಾನಿಗಳು ಅನ್ನುವ ಕುಹಕ ತೋರಿಸುವುದು.

        ಇಂಗ್ಲಿಷ್ ಯಿಂದಲೇ ಹೊಟ್ಟೆ ಹೊರೆಯುವುದು, ಕಾರ್ಪೋರೆಟ್ ಗಳನ್ನು ಬೈದು ಒಂದು ಕಾರ್ಪೋರೇಟ್ ಸಂಸ್ಥೆಯಲ್ಲೇ ಕೆಲಸ ಮಾಡುವುದು, ಕ್ಯಾಪಟಲಿಸಂ ಅನ್ನು ಬೈಯುವುದು, ಕ್ಯಾಪಟಲಿಸಂನಿಂದಲೇ ಬಂದಿರುವ ಬ್ಲಾಗು, ವೆಬ್ ಸೈಟು, ಫೇಸ್ ಬುಕ್ ಅಲ್ಲಿ ಹರಟೆ ಹೊಡೆಯುವುದು, ಇಂತಹ ಹಿಪೊಕ್ರಸಿಯನ್ನು ತೋರಿಸುವುದು ಕೆಲವರ ಹುಟ್ಟು ಗುಣ. ಯಾವ ಬದಲಾವಣೆಯಿಂದ ಕನ್ನಡಿಗರ ಕಲಿಕೆ, ದುಡಿಮೆಗಳು ಸುಧಾರಿಸಬಹುದು ಎಂದು ಕೆಲವರಿಗೆ ಕಾಣುತ್ತೋ ಅದು ಏನು ಎಂದು ತಿಳಿಯುವ ಪ್ರಯತ್ನವನ್ನು ಮಾಡದೇ, ಶಂಕರ ಬಟ್ಟರ ಪುಸ್ತಕದ ಒಂದೇ ಒಂದು ಪುಟ ಓದದೇ ಅವರನ್ನು ವಿರೋಧ ಮಾಡುವುದು ಇದೆಯಲ್ಲ ಇದಕ್ಕಿಂತ ದೊಡ್ಡ ತಾಲಿಬಾನಿಗಳು ಇರಲು ಸಾಧ್ಯವೇ?.. ಶಂಕರ ಬಟ್ಟರ ಪುಸ್ತಕಗಳನ್ನು ಅವರು ಸತ್ತರೂ ಓದುವುದಿಲ್ಲ.. ಯಾಕೆಂದರೆ ವಿಜ್ಞಾನದ, ತೆರೆದೆ ಮನಸ್ಸಿನ ಚಿಂತನೆಗಳಿಂದ ಅವರು ಈವರೆಗೂ ನಂಬಿಕೊಂಡು ಬಂದ ವಾದಗಳನ್ನು ಅವರ ಮನಸೇ ಪ್ರಶ್ನಿಸಿ ಗಲಿಬಿಲಿಯಾದರೆ ಏನು ಮಾಡುವುದು ಅನ್ನುವ ಭಯ ಅವರನ್ನು ಕಾಡುತ್ತೆ. ಇಂತಹ ತಾಲಿಬಾನಿಗಳಿಂದಲೇ ಇವತ್ತು ಕನ್ನಡ ನಿಂತ ನೀರಾಗಿ ಅದರಲ್ಲಿ ರಕ್ತ ಹೀರುವ ಸೊಳ್ಳೆಗಳು ಹುಟ್ಟಿ ನಮ್ಮ ನಾಡಿನ, ನಮ್ಮ ಜನರ ಬದುಕನ್ನು ಕತ್ತಲ್ಲಲ್ಲಿ ಕೂಡಿ ಹಾಕಿ ಅವರ ರಕ್ತ ಹೀರುತ್ತಿರುವುದು.

        ಉತ್ತರ
  16. ರವಿ ಕುಮಾರ್'s avatar
    ರವಿ ಕುಮಾರ್
    ಏಪ್ರಿಲ್ 28 2011

    ಕರ್ನಾಟಕದಲ್ಲಿ ಈಗಾಗಲೇ ಜಗಳ ಮಾಡುತ್ತಿರುವ ಗುಂಪುಗಳೊಂದಿಗೆ ಇನ್ನೊಂದಷ್ಟು ಗುಂಪು ಸೇರಿಸಿದ್ದಷ್ಟೇ ನಮ್ಮ ಸಾಧನೆ !!!!!!!! ಈಗ ಒಂದು ಹೊಸ ಗುಂಪು !! ಅದೇ “ಎಲ್ಲರ ಕನ್ನಡ ಗುಂಪು.”! ಹೆಸರು ಎಲ್ಲರ ಕನ್ನಡ ಆದರೆ ಮಾಡೋದು ಮತ್ತು ಹೇಳೋದು ಅದು ನಮ್ಮ ಕನ್ನಡ ಅದು ಬೇರೆಯೇ !!!! (ಪ್ರಮುಖವಾಗಿ ಸಂಸ್ಕೃತ ಇರಬಾರದು ಅದರಲ್ಲಿ ಏಕೆಂದರೆ ಅದು ಬ್ರಾಹ್ಮಣರ ಭಾಷೆ!!!! ಯಾರು ಹೇಳಿದರೋ ಅದು ಬ್ರಾಹ್ಮಣರ ಭಾಷೆ ಅಂತ ಅವರಿಗೇ ಗೊತ್ತಿಲ್ಲ ಪಾಪ !!).

    ಇನ್ನು ಹೊಡೆದಾಟ, ನೋಡಿ ಸ್ವಾಮಿ ನಾವು ಒಗ್ಗಟ್ಟಾ ಗಿದ್ದರೆ ಯಾರು ಏನು ಮಾಡಲಾರರು ನಮ್ಮನ್ನ !!!! ಅದು ಬಿಟ್ಟು ಗುಂಪುಗಾರಿಕೆ ಬಿಡಿ !!!( ಪುನಃ ವಾದಿಸಬೇಡಿ “ಎಲ್ಲರ ಕನ್ನಡದಿಂದ ” ಒಗ್ಗಟ್ಟು ಬರುತ್ತದೆ ಎಂದು!!!!) ನಿಮಗೇ ಅದು ಸುಲಭ ಅನ್ನಿಸಿದರೆ ಉಪಯೋಗಿಸಿ, ನಮಗೆ ಅನ್ನಿಸಿದರೆ ನಾವೂ ಉಪಯೋಗಿಸುತ್ತೇವೆ !!! ಅದು ಬಿಟ್ಟು ಗುಂಪು ಕಟ್ಟಿಕೊಂಡು ಆ ದ್ವೇಷ ಈ ದ್ವೇಷ ಅಂತೆಲ್ಲ ಒಗ್ಗಟ್ಟು ಇರುವುದನ್ನ ಮುರಿಯಬೇಡಿ ಸಾದ್ಯವಾದರೆ ಬಲಪಡಿಸಿ,ಇಲ್ಲಾ ಬಿಟ್ಟು ಬಿಡಿ ಅಷ್ಟೇ !
    “divide and rule” ಬೇಡ.

    ನಿಮಗೆ ತಾಕತ್ತು ಇದ್ದರೆ ಎಷ್ಟು ಭಾಷೆ ಸಾದ್ಯವೋ ಕಲಿಯಿರಿ ಇಲ್ಲಾಂದ್ರೆ ಬಿಟ್ಟು ಬಿಡಿ ನನ್ನ ಕೈಲಾಗಲ್ಲ ಅಂತ !!!!!

    ನಾವು ಪರ ಸ್ಥಳ ದಲ್ಲಿ ಬದುಕ ಬೇಕಾದರೆ ಎಲ್ಲವೂ ಬೇಕು !! ಜ್ಞಾನ ಮತ್ತು ಧನ ವೃದ್ದಿಗೆ ಪರಸ್ಥಳ ಜೀವನ ಅನಿವಾರ್ಯ….ಇಲ್ಲದಿದ್ದರೆ ನಾವು ಕೂಪ ಮಂಡೂಕಗಳಾಗುತ್ತೇವೆ ಅಷ್ಟೇ !!!. ಕನ್ನಡಾಭಿಮಾನ ಸರಿ. ದುರಭಿಮಾನ (ಇತರರನ್ನು ದ್ವೇಷಿಸುವುದು) ಬೇಡ!!
    ಇನ್ನು ಅವರು ದ್ವೇಷಿಸುತ್ತಾರೆ ಅನ್ನಬೇಡಿ!!! ನೀವು ಗಟ್ಟಿಯಾಗಿದ್ದರೆ ಅಥವಾ ಒಗ್ಗಟ್ಟಾ ಗಿದ್ದರೆ ಅವರೇನು ಮಾಡಲಾರರು ನಿಮಗೆ !!!

    ” ನಾಯಿ ಕಚ್ಚಲು ಬಂದಾಗ ಸ್ವಲ್ಪ ದೈರ್ಯ ಮಾಡಿ ದರೆ ಸಾಕು ಅದು ಓಡಿ ಹೋಗುತ್ತದೆ ಅಷ್ಟೇ ನೀವು ಪುನಃ ಕಚ್ಚಬೇಕಾಗಿಲ್ಲ ಅದಕ್ಕೆ !!!” ಅಕಸ್ಮಾತ್ ಕಚ್ಚಿದಿರೋ ನಿಮ್ಮ ಬಾಯಿ ಹೊಲಸಗೊದಂತೂ ದಿಟ !

    ಉತ್ತರ
    • Priyank's avatar
      Priyank
      ಏಪ್ರಿಲ್ 28 2011

      ರವಿ ಕುಮಾರ್ ಅವರೇ,

      ನೀವು ಎಷ್ಟು ಚರ್ಚೆಗಳನ್ನು ನೋಡಿರುವಿರೋ ನನಗೆ ಗೊತ್ತಿಲ್ಲ.
      ನೀವು ‘ಎಲ್ಲರ ಕನ್ನಡ’ ಎಂಬ ವಿಷಯದ ಬಗ್ಗೆ ಮಾತನಾಡಿದ್ದು ನೋಡಿದರೆ, ಅದು ನಿಮಗೆ ಅರ್ಥವಾದಂತಿಲ್ಲ ಎಂಬುದು ಕಾಣುತ್ತದೆ.
      ‘ಎಲ್ಲರ ಕನ್ನಡ’ದಲ್ಲಿ ಸಂಸ್ಕೃತ ಪದಗಳು ಇರಬಾರದು ಅಂತ ಯಾರೂ ಹೇಳಿಲ್ಲ ಎಂಬುದನ್ನು ನೀವು ಗಮನಿಸಬೇಕು. ನೀವು ಗಮನಿಸಿಲ್ಲ ಎಂದರೆ, ಒಮ್ಮೆ ‘ಎಲ್ಲರ ಕನ್ನಡ’ ಎಂದರೇನು ಎಂದು ತಿಳಿಯುವ ಪ್ರಯತ್ನ ಮಾಡಿ.
      ಕನ್ನಡದ ಆಡುನುಡಿಗೆ ಈಗಾಗಲೇ ಬಂದಿರುವ ಸಂಸ್ಕೃತ, ಪಾರ್ಸಿ, ಇಂಗ್ಲೀಶ್ ಬೇರಿನ ಪದಗಳನ್ನು ಉಳಿಸಿಕೊಂಡೆ ಹೋಗಬೇಕು ಎಂದು ಹೇಳಲಾಗಿದೆ.
      ಕರ್ನಾಟಕದ ಹಲವೆಡೆ ಇರುವ ಬೇರೆ ಬೇರೆ ಒಳನುಡಿಗಳಿಗೆ ಸಾಕಷ್ಟು ಹತ್ತಿರದಲ್ಲಿರುವ ಕನ್ನಡವನ್ನೇ ‘ಎಲ್ಲರಕನ್ನಡ’ ಎನ್ನಲಾಗಿದೆ ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

      ‘ಎಲ್ಲರ ಕನ್ನಡ’ದಲ್ಲಿ ಸಂಸ್ಕೃತ ಪದಗಳಿಗೆ ಜಾಗವಿಲ್ಲ, ಅದು ಇದು ಎನ್ನೋದೆಲ್ಲಾ ಸುಳ್ಳು ಹೇಳಿಕೆಗಳು.
      ತಮ್ಮಂತಾ ತಿಳಿದವರಿಗೆ, ಸುಳ್ಳು ಹೇಳಿಕೆಗಳ ಮತ್ತು ದಿಟದ ನಡುವೆ ವ್ಯತ್ಯಾಸ ಕಾಣುತ್ತೆ ಎಂದು ನಂಬಿದ್ದೇನೆ.

      ಉತ್ತರ
  17. ವಿಜಯ್ ಹೆರಗು's avatar
    ವಿಜಯ್ ಹೆರಗು
    ಏಪ್ರಿಲ್ 28 2011

    ಅನಿರುದ್ಧ ಅವರಿಗೆ ನಮೋನ್ನಮಃ. ರಾಷ್ಟ್ರದ ಏಕತೆಯ, ಸಹೋದರತ್ವದ ಕುರಿತು ತಾವು ಹೇಳಿದ ಪಾಠ ಬಹಳ ಚೆನ್ನಾಗಿದೆ. ಕನ್ನಡಿಗರ ಹೊಟ್ಟೆ ಕಿಚ್ಚು, ಕರುಬುವಿಕೆಯ ಬಗ್ಗೆ ನಿಮ್ಮ ಯೋಚನಾಲಹರಿ ಅದ್ಭುತ. ನೀವು ಹೇಳಿದಂತೆ ಕನ್ನಡ ನಾಡಿನ ಜನ ಯೋಚಿಸಿದರೆ ಕನ್ನಡಿಗರ ಗತಿ ಗೋವಿಂದಾ….ಗೋವಿಂದಾ…

    ನಿಮ್ಮ ಯೋಚನಾಲಹರಿಯನ್ನು ಇನ್ನಷ್ಟು ಮುಂದುವರಿಸಿ…ಸ್ವಲ್ಪ ಯೋಚಿಸಿ…….ವಿಶ್ವ ಮಾನವರಾಗಿ…ವಿಶ್ವದ ಏಕತೆಯ ಬಗ್ಗೆ ಚಿಂತಿಸಿ….ನಾವು ಭಾರತೀಯರು…ಪಾಕಿಸ್ತಾನದ ಬಗ್ಗೆ ಏಕೆ ನಂಜು ಕಾರಬೇಕು!!??……ಭಾರತ ವಿಶ್ವಕಪ್ ಗೆದ್ದರೆ ಏಕೆ beegabeku…!!?? ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟು ಸ್ನೇಹಹಸ್ತ ಚಾಚಿದರೆ ಹೇಗಿರುತ್ತದೆ!!?? ಬ್ರಿಟೀಷರನ್ನೂ…ಅಮೆರಿಕನ್ನರನ್ನೂ ಕರೆದು ಭಾರತವನ್ನು ಹಂಚಿಬಿಡೋಣ… ವಿಶ್ವದ ಏಕತೆ, ಸಹೋದರತೆ ಕುರಿತು ಚಿಂತಿಸಿ… ನಮ್ಮ ತಾಯಿ ಚಿಂದಿ ಸೀರೆ ಉಟ್ಟರೂ ಚಿಂತೆ ಬೇಡ….ಪಕ್ಕದ ಮನೆಯ ಹೆಣ್ಣು ರೇಶಿಮೆಯ ಉಡಲಿ….

    ಉತ್ತರ
    • Sanjana's avatar
      Sanjana
      ಏಪ್ರಿಲ್ 28 2011

      bahaLa sogaasagi haeLiddira.. naanu idanne heLabayasidde

      ಉತ್ತರ
    • chukkichandira's avatar
      ಏಪ್ರಿಲ್ 29 2011

      ವಿಜಯ್ ಉತ್ತಮ ಪ್ರತಿಕ್ರಿಯೆ. ನನ್ನ ಅಭಿಪ್ರಾಯನೂ ಇದೇ. ಅನಿರುದ್ಧ ಎಲ್ಲೋ ಪರಾರಿಯಾಗಿರೋ ಹಾಗಿದೆ…

      ಉತ್ತರ
  18. ರವಿ ಕುಮಾರ್'s avatar
    ರವಿ ಕುಮಾರ್
    ಏಪ್ರಿಲ್ 28 2011

    ಪ್ರಿಯಾಂಕಣ್ಣ,
    ದಯವಿಟ್ಟು ತಪ್ಪು ತಿಳಿಬೇಡಿ. ನನ್ನ ಮಾತಿನ ಇಂಗಿತ ನಿಮ್ಮನ್ನ / “ಎಲ್ಲರ ಕನ್ನಡವನ್ನ” ಹೀಗಳೆಯುವುದಲ್ಲ ಕ್ಷಮಿಸಿ ….

    ಆದರೂ ಹಿಂದಿನ ಚರ್ಚೆಯಲ್ಲಿ ನೋಡಿದಾಗ “ಹಳೆ ಶಾಲೆ ” “ಹೊಸ ಶಾಲೆ ” ಅಂತ ವರ್ಗೀಕರಣ ಬೇಕಾಗಿತ್ತಾ(ಒಂದು ಉದಾ ಕೊಟ್ಟೆ ಅಂತಹುದು ತುಂಬಾ ಇವೆ ) ? ಅದೂ ಹೊಸ ಗುಂಪಿನ ಸೃಷ್ಟಿ ಮಾಡಿದಂತೆಯೇ ಅಲ್ಲವೇ? ಅದರಿಂದ ನಮ್ಮ ನಮ್ಮಲ್ಲಿನ ಒಗ್ಗಟ್ಟು ಹಾಳಾಗೋದು ಸತ್ಯ ತಾನೇ? ಅದರ ಬದಲು ಹೀಗೂ ಹೇಳಬಹುದು ಬರೆಯಬಹುದು ,ಅದು ಸುಲಭ ,ಇದು ಸುಲಭ ಅನ್ನಬಹುದಿತ್ತು (ಹಾಗೆ ಕೆಲವರು ಸಭ್ಯರು ಹೇಳಿದ್ದಾರಾದರೂ) ಅಲ್ಲವೇ? ಅದು ಬಿಟ್ಟು ನಾವು ಮತ್ತು ನೀವು ಮಾಡಿದ್ದೇನು? ಅವನು ಹಳೆ ಶಾಲೆಯವನು ಇವನು ಹೊಸ ಶಾಲೆಯವನು ..ಅವನು ತಾಲೀಬಾನಿ ಇವನು ಇನ್ನೊಂದು. ಹೀಗೆ ಅದೂ ಇದೂ ಅಂತ ಗುಂಪುಗಳನ್ನ ಸೃಷ್ಟಿ ಮಾಡಿ ಒಗ್ಗಟ್ಟ ನ್ನ ಒಡೆಯಲು ದಾರಿ ಮಾಡಿಕೊಡುವ ಕೆಲಸವನ್ನಷ್ಟೇ ಮಾಡಿದ್ದು ನಾವು ತಾನೇ?!! ಏನಂತೀರಿ?

    ಉತ್ತರ
    • Priyank's avatar
      Priyank
      ಏಪ್ರಿಲ್ 28 2011

      ರವಿ ಕುಮಾರ್ ಅವರೇ,

      ನಿಮ್ಮ ಮಾತುಗಳನ್ನು ಬಿಡಿಸಿ ಹೇಳಿದ್ದಕ್ಕೆ ಧನ್ಯವಾದಗಳು.
      ‘ನಮ್ಮಲ್ಲಿ ಒಗ್ಗಟ್ಟು ಇರಬೇಕು’ ಎಂಬ ನಿಮ್ಮ ಆಶಯವೇ ನನ್ನದೂ ಆಗಿದೆ.
      ಒಂದು ವಿಷಯದ ಬಗ್ಗೆ ಒಪ್ಪಿಗೆ ಸೂಚಿಸುವವರನ್ನ ಒಂದು ಗುಂಪೆಂದು ಕರೆದು, ಅದಕ್ಕೆ ಹೀಗಳೆಯುವಂತೆ ಹೆಸರು ಕಟ್ಟುವುದು ನನಗೂ ಸರಿಯೆಂದು ಕಾಣೋದಿಲ್ಲ.

      ನೀವು ‘ಹಳೆ ಶಾಲೆ’, ‘ಹೊಸ ಶಾಲೆ’ ಎಂಬ ವಿಂಗಡಣೆಯ ಬಗ್ಗೆಯೂ ಹೇಳಿದ್ದರಿಂದ ಈ ಒಂದು ಮಾತು ನಿಮಗೆ ಹೇಳುತ್ತೇನೆ.
      “ಹಳೆ ಶಾಲೆ, ಹೊಸ ಶಾಲೆ, ಎಂಬ ವಿಂಗಡಣೆ ಯಾರನ್ನೂ ಮೂದಲಿಸುವ ಉದ್ದೇಶದಿಂದ ಮಾಡಿದುದಲ್ಲ” ಎಂಬ ವಿವರ ಕಿರಣ್ ಅವರು ತಮ್ಮ ಬರಹದ ಮೊದಲಲ್ಲೇ ಹೇಳಿದ್ದು ನೀವು ನೋಡಿದಂತಿಲ್ಲ.
      ಡೆಮೊಕ್ರಾಟಿಕ್ ಮಾದರಿಯಲ್ಲೇ ನಮ್ಮ ಒಳಿತು ಕೆಡುಕುಗಳ ಚರ್ಚೆಯಾಗಬೇಕು ಎಂಬ ಆಶಯವನ್ನು ಕಿರಣ್ ಅವರು ತಮ್ಮ ಬರಹದಲ್ಲಿ ಹೇಳಿದ್ದರು.
      ಅದೇ ಆಶಯವು ನನ್ನದೂ ಕೂಡ, ನಿಮಗೂ ಅಂತದೇ ಆಶಯವಿರುವುದು ನಿಮ್ಮ ಮಾತುಗಳಿಂದ ಕಂಡು ಬರುತ್ತದೆ.

      ಉತ್ತರ

Leave a reply to ಹಳ್ಳಿ ಹೈದ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments