ಕ್ರಾಂತಿಗೆ ಅಕ್ಷರದ ಹಂಗೇಕೆ?
– ಚಿತ್ರ ಸಂತೋಷ್
ಮಧ್ಯಪ್ರದೇಶದ ತಲನ್‌ಪುರ ಗ್ರಾಮದಲ್ಲಿ ಓದು ಬರಹ ತಿಳಿಯದ ಬುಡಕಟ್ಟು ಮಹಿಳೆಯರೇ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಿದ್ದಾರೆ. ನಿತ್ಯ ಕುಡಿದು, ಸಂಸಾರದ ಒಂದಿಷ್ಟು ಚಿಂತೆಯಿಲ್ಲದ
ಪುರುಷರಿಗೆ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಇಡೀ ಹಳ್ಳಿಯ ಮಹಿಳೆಯರು ಒಂದಾಗಿ ಸಾರಾಯಿ ನಿಷೇಧ ಮಾಡಿದ್ದಾರೆ.
ಆ ಹಳ್ಳಿಯೇ ಹಾಗೆಯೇ. ಬುಡಕಟ್ಟು ಬದುಕುಗಳ ಸಂಗಮ. ನೂರಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳನ್ನು ಹೊಂದಿರುವ ಆ ಹಳ್ಳಿಯಲ್ಲಿ ಹೊತ್ತಿನ ಊಟಕ್ಕೂ ಕಷ್ಟ. ಪತಿ-ಪತ್ನಿಯರು ಎಲ್ಲಾರೂ ಕೂಲಿಗಾಗಿ ಅರಸುವವರು. ವಿದ್ಯೆ, ಶಿಕ್ಷಣ ಎಂಬುವುದು ಅವರ ಪಾಲಿಗೆ ಮರೀಚಿಕೆ. ಸಾಂಪ್ರದಾಯಿಕ ಬದುಕಿನ ಚೌಕಟ್ಟಿನಲ್ಲಿಯೇ ಇಂದಿಗೂ ಬದುಕು ಸವೆಸುವ ಅಲ್ಲಿನ ಕುಟುಂಬಗಳಲ್ಲಿ ಆಧುನಿಕತೆಯ ಥಳುಕಿಲ್ಲ. ಸಿನಿಮಾ, ಫ್ಯಾಷನ್ ಯಾವುದೂ ಗೊತ್ತಿಲ್ಲ. ದುಡಿಯುವುದು, ದಿನದ ಮೂರು ಹೊತ್ತಿನ ಅನ್ನ ತುಂಬಿಸಿಕೊಳ್ಳುವುದಷ್ಟೇ ಅವರಿಗೆ ಗೊತ್ತು.
ಅದು ಮಧ್ಯಪ್ರದೇಶದ ತಲನ್‌ಪುರ್ ಎಂಬ ಹಳ್ಳಿ. ಇಲ್ಲಿನ ಜನಸಂಖ್ಯೆ ಸುಮಾರು ೩೦೦೦. ಇಂದೋರ್‌ನಿಂದ ಇಲ್ಲಿಗೆ ಸುಮಾರು ೧೮೦ ಕಿ.ಮೀ. ದೂರವಿದೆ.
‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ
*ರಶ್ಮಿ. ಕಾಸರಗೋಡು
ಶರದ್ ಪವಾರ್ ಜೀ,
ನಮಸ್ತೆ. ಕೇಂದ್ರ ಕೃಷಿ ಮಂತ್ರಿಯಾಗಿದ್ದು ಕೊಂಡು ಭ್ರಷ್ಟಾಚಾರದ ಹೊದಿಕೆ ಹೊದ್ದು ಗಾಢ ನಿದ್ರೆಗೆ ಜಾರಿರುವ ನೀವು ಎಂದಾದರೂ ಸಾಮಾನ್ಯ ಜನರ ಬಗ್ಗೆ ಯೋಚಿಸಿದ್ದೀರಾ? ಹಣ ಕೂಡಿಡುವ ನಿಮ್ಮ ಕಾಯಕದ ನಡುವೆ ಒಂದಷ್ಟು ಹೊತ್ತು ವಿರಾಮ ಸಿಕ್ಕರೆ ಎಂಡೋಸಲ್ಫಾನ್ ಪೀಡಿತರ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸಿ. ಕೇರಳದ ಪುಟ್ಟ ಜಿಲ್ಲೆಯಾದ ಕಾಸರಗೋಡಿನ ಎಣ್ಮಕಜೆ, ಬೋವಿಕ್ಕಾನ, ಪೆರ್ಲ, ಪೆರಿಯ ಮೊದಲಾದ ಊರುಗಳಲ್ಲಿ ಎಂಡೋಸಲ್ಫಾನ್ ಎಂಬ ವಿಷದಿಂದಾಗಿ ಪ್ರಾಣ ಕಳೆದುಕೊಂಡವರೆಷ್ಟು ಮಂದಿ? ಇನ್ನೂ ಜೀವಂತ ಶವವಾಗಿರುವವರು, ಅಂಗವೈಕಲ್ಯತೆಯಿಂದು ಬಳಲುತ್ತಿರುವ ಮಕ್ಕಳು …ಇಲ್ಲೊಂದು ನರಕವಿದೆ. ಸಂಕಷ್ಟಕ್ಕೆ ಸಿಲುಕಿರುವ ಈ ಜನರ ಕೂಗು ನಿಮಗೆ ಕೇಳಿಸುತ್ತಿಲ್ಲವೇ?
ಗೇರುಬೀಜದ ಮರಗಳಿಗೆ ಈ ವಿಷವನ್ನು ಸಿಂಪಡಿಸಿ ಜನರ ಬಾಳನ್ನು ನರಕವಾಗಿಸಿದ ಪ್ಲಾಂಟೇಷನ್ ಕಾರ್ಪರೇಷನ್ ಇದೀಗ ಮೌನ ವಹಿಸಿರುವುದು ಎಷ್ಟು ಸರಿ?. ಕಾಸರಗೋಡಿನ 11 ಪಂಚಾಯತುಗಳ ಜನರು ಎರಡು ದಶಕಗಳಿಂದ ಎಂಡೋ ಪೀಡೆಗೆ ಬಲಿಯಾಗುತ್ತಾ ಬಂದಿರುವುದು ನಿಮಗೆ ಕಾಣಿಸುವುದಿಲ್ಲವೇ? ಎಂಡೋ ಪೀಡಿತರ ಸಂಕಷ್ಟಗಳ ಬಗ್ಗೆ ದಿನ ನಿತ್ಯವೂ ಒಂದಲ್ಲ ಒಂದು ಸುದ್ದಿ ವರದಿಯಾಗುತ್ತಲೇ ಇದ್ದರೂ ನೀವು ಕಿವಿ, ಕಣ್ಣು ಮುಚ್ಚಿ ಕುಳಿದ್ದೀರಾ? ‘ಎಂಡೋ’ ವಿಷ ಎಂದು ಇಷ್ಟರವರೆಗೆ ಪ್ರೂವ್ ಆಗಿಲ್ಲ ಆದ್ದರಿಂದ ಎಂಡೋ ನಿಷೇಧ ಯಾಕೆ ಅಂತಾ ಕೇಳ್ತಿದ್ದೀರಲ್ಲಾ? ಎಂಡೋ ಪೀಡಿತ ಪ್ರದೇಶಗಳಿಗೊಮ್ಮೆ ಭೇಟಿ ನೀಡಿ ನೋಡಿ. ಈ ಜನರ ಸಂಕಷ್ಟಕ್ಕೆ ನಿಮ್ಮ ಮನ ಮರುಗದೇ ಇದ್ದರೆ ನಿಮ್ಮದು ‘ಕಲ್ಲು ಹೃದಯ’ ಅಂತಾ ಅಂದುಕೊಳ್ಳುತ್ತೀನಿ.
ಮತ್ತಷ್ಟು ಓದು 
ಹಿಂದಿ ಬೇಕು …. ಕೂಪಮಂಡೂಕತನ ಬೇಡ……..
*ಅನಿರುದ್ಧ ಕುಮಟ
ಮಕ್ಕಳ ಜಗಳದಲ್ಲಿ ಅಮ್ಮ ಬಡಪಾಯಿಯಾದಳು ಅಂತ ಒಂದು ಗಾದೆ ಮಾತು ಇದೆಯಾ? ಇಲ್ಲದಿರಲೂಬಹುದು. ಆದರೆ ನಿಮ್ಮ ಕನ್ನಡದ ಜಗಳ, ಆ ನೀರಿನ ಜಗಳ, ಆ ಧಾರ್ಮಿಕ ಕಲಹ ಇವನ್ನೆಲ್ಲ ನೋಡಿದಾಗ ನನಗೆನಿಸಿದ್ದು ಅಮ್ಮ ಬಡವಾಗಿದ್ದಾಳೆ ಅಂತ. ಅಲ್ಲಾರಿ ನೀವು ಪಕ್ಕದ ಮರಾಠಿಗರನ್ನು ಕಂಡರೆ ಬೆಂಕಿಕಾರುತ್ತಿರಿ. ಪಾಪ ಆ ತಮಿಳರು ಇಲ್ಲಿ ಬೆಳೆದರೆ ಕರಬುತ್ತೀರಿ. ಅಥವಾ ನೀರಿನ ವಿಷಯ ಹಿಡಿದುಕೊಂಡು ಸುನಾಮಿಯಂತೆ ಜಗಳ ಮಾಡುತ್ತೀರಿ…ಥಕ್ ನಿಮ್ಮ ಇಂತಹ ಜಗಳದಲ್ಲಿ ಬಡವಾದದ್ದು ಯಾರು. ಭಾರತವಲ್ಲವೇ. ಇಡೀ ಭಾರತದ ಬಗ್ಗೆ ಯೋಚಿಸಬೇಕಾದ ನಾವೆಲ್ಲ, ದಾಯಾದಿಗಳ ತರಹ ಯಾಕೆ ಕಿತ್ತಾಡಿಕೊಳ್ಳಬೇಕು? ನಿಮಗೆ ನಿಮ್ಮ ಬಗ್ಗೆಯೇ ಅಸಹ್ಯ ಎನಿಸುವುದಿಲ್ಲವೇ?
ಹಿಂದಿ ಜ್ವರಕ್ಕೆ ತುತ್ತಾದ ವಿಜಯ ಕರ್ನಾಟಕ ಅನ್ನೋ ಹೆಡ್ ಲೈನ್ ನಲ್ಲಿ ಪ್ರಕಟವಾದ ಲೇಖನವನ್ನೇ ನೋಡಿ. ಪತ್ರಿಕೆಯಲ್ಲಿ ವಿದೇಶಿಯರ ಹಿಂದಿ ಮೋಹ ಅನ್ನೋ ಲೇಖನ ಪ್ರಕಟಗೊಂಡರೆ ಸಾಕು. ಜಗತ್ತಿನಲ್ಲಿರುವ ಸಮಸ್ತ ಕನ್ನಡ ಪುಸ್ತಕಗಳೆಲ್ಲ ಬೆಂಕಿಯಲ್ಲಿ ಉರಿದು ಹೋಯ್ತು ಅನ್ನೋ ತರಹ ಯಾಕೆ ಉರಿದು ಹೋಗ್ತಿರಿ. ಅರೇ ಅದೊಂದು ಪತ್ರಿಕೆ. ಅದರಲ್ಲಿ ಭಿನ್ನ, ವಿಭಿನ್ನ ವಿಚಾರಧಾರೆಯ ಲೇಖನಗಳು ಪ್ರಕಟಗೊಳ್ಳುತ್ತವೆ. ಅವರೇನೂ ಹಿಂದಿಯಲ್ಲಿ ಬರೆದಿಲ್ಲ ನನಗಂತೂ ಕನ್ನಡಿಗರಲ್ಲಿ ಹಿಂದಿ ಕಲಿಸುವ ಒಂದು ಪ್ರಯತ್ನದಂತೆ ಆ ಲೇಖನ ಕಾಣಲೇ ಇಲ್ಲ. ನನ್ನ ಪ್ರಕಾರ ಕನ್ನಡಿಗರು ಮತ್ತಷ್ಟು ಓದು 
ಇಂದಿನ ಯುವಕರು ಹಾಳಾಗಿದ್ದಾರೆಯೇ?
ಯೊಗೀಶ್ ಕೈರೋಡಿ
‘ಈಗಿನ ಯುವಕರು ಹಾಳಾಗಿದ್ದಾರೆ; ದಾರಿ ತಪ್ಪುತ್ತಿದ್ದಾರೆ’, ಇಂತಹ ಮಾತನ್ನು ಸಲೀಸಾಗಿ ಹೇಳಿ ಬಿಡುತ್ತೇವೆ. ಇದು ಸುಲಭದಲ್ಲಿ ಹೊರಳಿಕೊಳ್ಳುವ ನಾಲಗೆಯ ಮಾತೇ ಹೊರತು ಬುದ್ಧಿಪೂರ್ವಕ ವಿವೇಚನಯುಕ್ತ ಮಾತಲ್ಲ. ಭವಿಷ್ಯದ ಕುರಿತಂತೆ ಗಂಭೀರ ಚಿಂತನೆ ಹೊಂದಿರುವ ಅಧ್ಯಯನ ಶೀಲ ಹಾಗೂ ಮಾನವಪರವಾಗಿ ಯೋಚಿಸಿ ಕಾರ್ಯ ಪ್ರವೃತ್ತರಾಗುವ ಯುವಕರು ನಮ್ಮ ಸುತ್ತ ಸಾಕಷ್ಟು ಇದ್ದಾರೆ. ಪ್ರತೀ ಕಾಲವೂ ಕೂಡ ತನ್ನ ನಂತರದ ತಲೆಮಾರನ್ನು ಕೆಟ್ಟಿದ್ದಾರೆ ಎಂದೇ ಪರಿಗಣಿಸಿ ಸಾಗುತ್ತಾ ಬಂತು. ಆದುದರಿಂದ ಇದೆಲ್ಲ ತಲೆಕೆಡಿಸಬೇಕಾದ ಸಂಗತಿಯಲ್ಲ.
ಒಂದು ವೇಳೆ ಯುವಕರು ದಾರಿತಪ್ಪಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವುದಾದರೂ ಅದರ ಹೊಣೆ ಸುತ್ತಲಿನ ಸಮಾಜದ್ದೇ ಹೊರತು ಯುವಕರದ್ದಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಸಾಕಷ್ಟು ಪ್ರಮಾಣದಲ್ಲಿ ಭಾಗಿಯಾಗಿದ್ದರು, ಅವರಿಗೆ ದೇಶ ಪ್ರೇಮವಿತ್ತು ಎಂದರೆ ಈ ರೀತಿಯ ಸದ್ಭಾವನೆಯನ್ನು ಆ ಕಾಲದ ಜವಾಬ್ದಾರಿಯುತ ಜನವರ್ಗ ಅಥವಾ ನಾಯಕರು ರೂಪಿಸಿದ್ದರು. ಇಂದು ರೀತಿಯ ಸದ್ಭಾವ ನೆಲೆಗೊಳ್ಳುವ ವಾತಾವರಣಕ್ಕಿಂತ ಮಾನವ ದ್ವೇಷಿ ವಾತಾವರಣ ನಿರ್ಮಾಣಕ್ಕೆ ಹೆಚ್ಚಿನ ಅವಕಾಶಗಳು ಒದಗಿ ಬರುತ್ತಿದೆ. ಇದರಿಂದ ಮುಕ್ತಗೊಂಡು ಸ್ವತಂತ್ರ ಹಾಗೂ ಸ್ವಸ್ಥ ಮನಸ್ಸು ಯುವ ಸಮುದಾಯದಲ್ಲಿ ನೆಲೆಗೊಳ್ಳುವ ವಾತಾವರಣ ನಿರ್ಮಾಣ ಒಂದು ಬಗೆಯ ಆಂದೋಲನದಂತೆ ನಡೆಯಬೇಕು. ವರ್ತಮಾನದ ನಮ್ಮ ಸುತ್ತಮುತ್ತಲಿನ ವಿದ್ಯಾಮಾನಗಳನ್ನು ಗಮನಿಸುವುದರೊಂದಿಗೆ ಸ್ವಸ್ಥ ಸಮಾಜದ ನಿರ್ಮಿತ ಸಾಧ್ಯ.
ವಿಭಜಕ ಮನಸ್ಸುಗಳ ಸೃಷ್ಟಿ:
ಜಾತಿ, ಮತ, ಪಕ್ಷ ಈ ಮೂರು ಅಂಶಗಳು ಮಾನವ ಮನಸ್ಸನ್ನು ನಿರಂತರ ಒಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಒಂದು ಸಮಾಜದ ಏಳಿಗೆಯಲ್ಲಿ ಜಾತಿ ಅಥವಾ ಮತದ ಸೇವಾಪರ ಚಟುವಟಿಕೆಯ ಮಹತ್ವವನ್ನು ಅಲ್ಲಗೆಳೆಯುವಂತಿಲ್ಲ. ಜನತೆಯ ಕಣ್ಣೀರನ್ನು ಒರೆಸುವ ಕಾರ್ಯಗಳನ್ನು ಸಾಂಘಿಕ ನೆಲೆಯಲ್ಲಿ ಮಾಡಿದೆ ಎಂಬುದು ಸತ್ಯ. ಒಂದು ಸಮುದಾಯದ ಒಳಗಿರುವ ಉಳ್ಳವರು ದುರ್ಬಲರ ಏಳಿಗೆಗೆ ಸ್ಪಂದಿಸಲು ಇದೊಂದು ಉತ್ತಮ ವ್ಯವಸ್ಥೆ. ಆದರೆ ಒಂದು ವ್ಯವಸ್ಥೆಯ ಒಳಗಡೇ ಒಬ್ಬರನ್ನು ಒಬ್ಬರು ಅವಲಂಬಿಸಿ ಸಹಕಾರ ಪ್ರವೃತ್ತಿಯಿಂದ ಬದುಕಬೇಕಾದುದು ಅಷ್ಟೇ ಅಗತ್ಯ. ಸ್ವಸಂಘಟನೆಯ ಬಲವರ್ಧನೆಗಾಗಿ ಅನ್ಯ ಸಮುದಾಯವನ್ನು ಅನಾವಶ್ಯಕ ಶತ್ರುವಾಗಿ ಬಿಂಬಿಸುವ ಸಂದರ್ಭ ಒದಗಿ ಬರಬಹುದು. ಇದು ಪರಸ್ಪರ ಅಪನಂಬಿಕೆಗೆ ಕಾರಣವಾಗಿ ಮಾತು ಮುರಿಯದೆಯೂ ಅಶಾಂತಿಗೆ ಕಾರಣವಾಗಬಹುದು. ಪೂರ್ವಾಗ್ರಹ ಮನೆ ಮಾಡಬಹುದು. ಇನ್ನು ತನ್ನ ಪಕ್ಷಬಲಪಡಿಸಿ ಅಧಿಕಾರಕ್ಕೆ ಮತ್ತಷ್ಟು ಓದು 
ಕೀಲಿ ಕೈ
ಹರೀಶ(ಮೇಷ್ಟ್ರು)
ಮನ ಹುಡುಕುತಿತ್ತು
ಗೋಳದಂತೆ ಆವರಿಸಿರುವ
ಚೆಂಡಿನಿಂದ ಹೊರಬರಲು ಕೀಲಿಕೈ
ಆ ಚೆಂಡನ್ನು ಒದೆಯಲು, ಅಟ್ಟಾಡಿಸಲು
ಕೊನೆಗೆ ಅದನ್ನು ಮೆಟ್ಟಿ ನಿಲ್ಲಲು
ಅತಿಯಾಸೆ ಅಲ್ಲವೆ ಇದು…. ಮನಸ್ಸಿನ ವಿಕಾರವಲ್ಲವೇ ಇದು..?
ಜಗದ ನಾಟಕರಂಗದಲ್ಲಿ
ಎಲ್ಲರೂ ತಡಕಾಡುವರು
ಬೀಳುವರು, ಏಳುವರು
ಲಿಂಗಭೇದವಿಲ್ಲದೆ ಮನದಲ್ಲಿ ಮಂಡಕ್ಕಿ ತಿನ್ನುವರು,
ತಮ್ಮ ಅಸಾಹಾಯಕತೆಯಿಂದ
ಕೆಲವರು ಕಳೆದುಕೊಂಡಿದ್ದಾರೆ
ಕೆಲವರು ಕಸಿದುಕೊಂಡಿದ್ದಾರೆ
ಅರಿವಿಗೆ ಬಾರದವರೂ ಇದ್ದಾರೆ
ಅನುಕರಿಸುವವರು…ಅನುಸರಿಸುವವರು
ಎಲ್ಲರದೂ ಒಂದೇ ಹುಡುಕಾಟ
ಎಲ್ಲಿ ನಮ್ಮ ಕೀಲಿಕೈ…?
ಗೋಳಾಕಾರದ ಚೆಂಡನಲ್ಲಿ
ಆದಿಯೂ ಅಲ್ಲೆ…ಅಂತ್ಯವೂ ಅಲ್ಲೆ,
ಲಲ್ಲೆಗರೆವ ಮಗುವಿನಂತೆ,
ಬೆದರಿದ ಹುಲ್ಲೆಯಂತೆ,
ಗರ್ಜಿಸುವ ಸಿಂಹದಂತೆ,
ಕೊನೆಗೆ ಏನೂ ಅರಿಯದ ಕುರಿಯ ಹಾಗೆ ಬಲಿಪಶು.
ಕಳೆದು ಹೋದ ಕೀಲಿಕೈ
ಎಲ್ಲಿದೆ…? ಅದು ಹೇಗಿದೆ…?
‘ಕಸ್ತೂರಿಯಂತೆ’…!?
ಕ್ರಿ”ಕೆಟ್ಟಾ”ಟ

ಬಂಗಾರಪಲ್ಕೆಗೆ ಮುಕ್ತಿ ಎಂದು?
ಪವನ್ ಎಂ.ಟಿ
ನಮ್ಮ ಸರಕಾರ ಕ್ರಿಕೇಟ್ ಆಟಗಾರರಿಗೆ ೨೫ ಲಕ್ಷ ರೂಪಾಯಿ ಹಣವನ್ನು ಕೊಡಲು ಮುಂದಾಗಿದೆ. ಪಾಪ ಅವರಿಗೆ ಏನೂ ಇಲ್ಲ ನೋಡಿ ಅದಕ್ಕೆ ಕೊಡ್ಲಿ ಬಿಡಿ. ನಮ್ಮ ಸರಕಾರದ ಹಣೆ ಬರಹವೇ ಅಷ್ಟು. ಹಣ ಇರುವವರಿಗೆ ಹಣವನ್ನು ನೀಡುತ್ತಾರೆಯೇ ಹೊರತು ಬಡವರಿಗೆ ನೀಡುವುದಿಲ್ಲ. ನಮ್ಮಲ್ಲಿ ಶ್ರೀಮಂತರೇ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ವಿನಹ ಬಡವ ಶ್ರೀಮಂತನಾದದಿಲ್ಲ. ನಮ್ಮಲ್ಲಿ ಕಾನೂನನ್ನು ಪಾಲಿಸುವವರಿಗೆ ಮಾತ್ರ ಕಾನೂನಿದೆ. ಆದರೆ ನಮ್ಮಲ್ಲಿ ಒಂದು ಒತ್ತಿನ ಊಟಕ್ಕೂ ಕಷ್ಟಪಡೊ, ನಾಗರೀಕ ಸೌಲಭ್ಯವನ್ನೇ ಕಾಣದೆ ಇರೋ ಕೆಲವು ಗ್ರಾಮಗಳಿವೆ, ಜನರಿದ್ದಾರೆ ಅಂತ ಸರಕಾರಕ್ಕೆ ಗೊತ್ತೇ ಇಲ್ಲ ಅಂತ ಕಾಣ್‌ತ್ತದೆ. ಯಾಕಂದ್ರೇ ನಮ್ಮ ಸರಕಾರಕ್ಕೆ ಕುರ್ಚಿ ಉಳಿಸ್‌ಕೊಳ್ಳೊ ಚಿಂತೆಯಾದರೆ ವಿರೋಧ ಪಕ್ಷಕ್ಕೆ ಕುರ್ಚಿ ಬೀಳಿಸೋ ಚಿಂತೆ ಇದರ ನಡುವೆ ಸಿಲುಕಿರೂ ಜನರ ಗತಿ ಅದೋಗತಿ.
ನಿಮ್ಮ ಮನೆಗೆ ಇನ್ನಾರದೋ ಮನೆಯ ರಸ್ತೆಯಲ್ಲಿ ಅಥವ ತೋಟದ ರಸ್ತೆಯಲ್ಲಿ ಹೋಗಬೇಕು ಎಂದಾದರೆ ನಿಮಗೆ ಮನೆಗೆ ಅಥವ ತೋಟಕ್ಕೆ ಸಂಬಂಧಪಟ್ಟ ಮಾಲಿಕನಿಂದ ಏನೆಲ್ಲ ನಿರ್ಭಂದಗಳು ಬರಬಹುದೆಂದು ನೀವೆ ಯೋಚಿಸಿ. ನಿವು ಅವ್ರು ಹೇಳುವ ಎಲ್ಲಾ ಮಾತುಗಳನ್ನು ಸರಿಯಾಗಿ ಕೇಳಿದರೆ ಮಾತ್ರ ನಿಮಗೆ ಅಲ್ಲಿ ಸಂಚರಿಸಲು ಅವಕಾಶ. ಹಾಗೆಂದು ನಿರ್ಭಂದನೆಯನ್ನು ಸಹಿಸಿಕೊಂಡು ಎಷ್ಟುದಿನವೆಂದು ನೀವು ಓಡಾಡುತ್ತಿರಿ. ಅದು ನಿಮ್ಮಿಂದ ನಮ್ಮಿಂದ ಕಂಡಿತಾ ಸಾಧ್ಯವಿಲ್ಲ. ಆದ್ರೆ ಇಲ್ಲಿ ಎಲ್ಲ ನಿರ್ಭಂದನೆಗಳ ನಡುವೆ ಸರಿಯಾದ ರಸ್ತೆ ಇಲ್ಲದೆಬದುಕುತ್ತಿರುವವರು ಬೆಳ್ತಂಗಡಿತಾಲೂಕಿನ ದಿಡುಪೆಯ ಸಮೀಪದ ಬಂಗಾರು ಪಲ್ಕೆಯ ಮಲೆಕುಡಿರು. ಪಾಪ ಇವರ ಪರಿಸ್ಥಿತಿಯನ್ನು ನಮ್ಮಲ್ಲಿ ಆಡಳಿತಗಾರರೆಂದು ಕರೆಯಿಸಿಕೊಳ್ಳುವವರಿದ್ದಾರಲ್ಲ ಅವರೊಮ್ಮೆ ಬಂದು ನೋಡಬೇಕು.
ನಾವು ಮಲೆಕುಡಿಯರ ಪ್ರದೇಶಗಳಿಗೆ ಭೇಟಿ ನೀಡಿದಾಗ ನಮಗೆ ದಿಡುಪೆಯ ಬಂಗಾರು ಪಲ್ಕೆ ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿತ್ತು ಇಲ್ಲಿಯ ರಸ್ತೆ, ಜನ, ನಾಗರಿಕ ಸೌಲಭ್ಯ ಎಲ್ಲವೂ ಇಲ್ಲಿ ವಿಭಿನ್ನವೇ.
ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ದಿಡುಪೆ ಎನ್ನವ ಸ್ಥಳದಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿರುವ ಬಂಗಾರ್ ಪಲ್ಕೇಗೆ ತೆರಳಬೇಕಾದರೆ, ಪ್ರಪಂಚದ ಅತ್ಯಂತ ಕೆಟ್ಟದಾದ ರಸ್ತೆ ನಮಗೆ ಸಿಗುತ್ತದೆ. ಮನುಷ್ಯ ಸರಿಯಾಗಿ ಕಾಲು ನಡಿಗೆಯಲ್ಲಿಯೂ ಸಂಚರಿಸಲು ಸಾಧ್ಯವಿಲ್ಲದ ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉಧ್ಯಾನದ ಒಳಗಿದೆ. ಬೇಸಿಗೆ ಸಮಯವಾದುದರಿಂದ ನಮಗೆ ತೆರಲು ಒಂದೊ ೪ ವೀಲ್ ವ್ಯವಸ್ಥೆಯಿರುವ ಒಂದು ಜೀಪ್ ನಮಗೆ ಸಿಕ್ಕಿತು ಈ ೪ ವೀಲ್ ಜೀಪ್ ಬಿಟ್ಟು ಬೇರೆ ಯಾವುದೇ ವಾಹನ ಅಲ್ಲಿಗೆ ತೆರಳು ಸಾಧ್ಯವಿಲ್ಲ. ಮತ್ತಷ್ಟು ಓದು 
ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೊಂದು ಬಹಿರಂಗ ಆಗ್ರಹ ಪತ್ರ…
– ಸಂಪಾದಕೀಯ
“ಮಾನ್ಯರೆ,
ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.
ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.
ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.
ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ. ಮತ್ತಷ್ಟು ಓದು 
ನೀರು ಅತ್ಯಮೂಲ್ಯವೇಕೆ?
– ಅರುಣ್ ಎಲ್
ಭೂಪಟವನ್ನೋ, ಭೂಗೋಲವನ್ನೋ ನೋಡಿದಾಗ ಕಾಣುವ ನೀಲಿ ಬಣ್ಣದ್ದೆಲ್ಲವೂ ನೀರು ಎಂಬುದು ಗೊತ್ತಿರುವ ಸಂಗತಿಯಷ್ಟೆ. ಭೂಗ್ರಹದ ಮುಕ್ಕಾಲು ಭಾಗ ನೀರಿದ್ದೂ, ಕೇವಲ ಕಾಲು ಭಾಗವಷ್ಟೇ ನೆಲವೆಂಬ ವಿಷಯವನ್ನು ಪ್ರಾಥಮಿಕ ಶಾಲೆಯಾಲ್ಲೇ ಕಲಿತಿರುತ್ತೇವೆ. ಅಷ್ಟೊಂದು ನೀರಿದ್ದೂ ನಾವು “ಕೊರತೆ”ಯ ಬಗ್ಗೆ ಮಾತನಾಡುತ್ತಿರುತ್ತೇವೆ. ಏಕೆ?
ವಿಶ್ವಸಂಸ್ಥೆಯ ವರದಿಯ ಪ್ರಕಾರ ಭೂಗ್ರಹದಲ್ಲಿ ಸುಮಾರು ಒಂದುವರೆ ಸಾವಿರ ಮಿಲಿಯನ್ ಕ್ಯುಬಿಕ್ ಕಿಲೋಮೀಟರು ನೀರಿದೆಯಂತೆ.
ಇದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಒಂದು ಕಿಲೋಮೀಟರು ಉದ್ದದ, ಒಂದು ಕಿಲೋಮೀಟರು ಅಗಲದ, ಒಂದು ಕಿಲೋಮೀಟರು ಆಳದ ಘನವಸ್ತುವನ್ನು ನೀರಿನಿಂದ ತುಂಬಿಸಿದರೆ ಅದು ಒಂದು ಕ್ಯುಬಿಕ್ ಕಿಲೋಮೀಟರ್. ಇದನ್ನು ಸಾವಿರದೈನೂರರಿಂದ ಗುಣಿಸಿದರೆ ನೀರಿನ ಪ್ರಮಾಣವು ಕಲ್ಪನೆಗೆ ಸಿಕ್ಕೀತು.
ಇಷ್ಟೊಂದು ನೀರಿನಲ್ಲಿ ಶೇ. 98ರಷ್ಟು ಸಮುದ್ರವೇ ಆಗಿದೆ. ಅಂದರೆ, ಒಟ್ಟು ನೀರಿನಲ್ಲಿ ಕೇವಲ ಶೇ. ಎರಡರಷ್ಟು ಮಾತ್ರ ಶುದ್ಧ ಜಲ ಇರುವುದೆಂದಾಯಿತಷ್ಟೆ?
ಈ ಶೇ. ಎರಡರಷ್ಟು ಶುದ್ಧಜಲದಲ್ಲಿ ಮುಕ್ಕಾಲು ಭಾಗ ಧ್ರುವಪ್ರದೇಶಗಳಲ್ಲಿ ಮಂಜುಗೆಡ್ದೆಗಳ ರೂಪದಲ್ಲಿದೆ. ಇನ್ನು ಶೇ 22.5ರಷ್ಟು ನೀರು ಅಂತರ್ಜಲದ ರೂಪದಲ್ಲಿ ಅತಲ, ವಿತಲ, ರಸಾತಲ, ಪಾತಾಲವನ್ನು ಸೇರಿಕೊಂಡಿದೆ.
ಮುನ್ನ [ ಕ್ರೂರತ್ವದ ನಡುವೆ ಪ್ರೀತಿಯ ಹುಡುಕಾಟ]
ದೀಪಕ್ ಮದೆನಾಡು 
ಮಡಿಕೇರಿ ಸಮೀಪದ ಒಂದು ಹಳ್ಳಿ. ಶಾಲಿನಿಯದು ಅಪ್ಪ, ಅಮ್ಮ, ಮತ್ತು ತಮ್ಮನ್ನೊಂದಿಗೆ ಚಿಕ್ಕ- ಚೊಕ್ಕ ಸಂಸಾರ. ಆಗತಾನೆ ಶಾಲಿನಿ ಹೈಸ್ಕೂಲ್ ಮೆಟ್ಟಿಲೇರಿದ್ದಳು. ಜೀವನದಲ್ಲಿ ಶ್ರೀಮಂತೆಯಾಗಬೇಕೆಂಬುದು ಶಾಲಿನಿಯ ಬಹುದಿನಗಳ ಕನಸು. ಅದಕ್ಕೆ ಅವಳು ಹುಡುಕಿಕೊಂಡ ಮಾರ್ಗ ‘ ಹಂದಿ’ ಸಾಕುವುದು. ತಂದೆಯೊಡನೆ ಈ ವಿಷಯ ಪ್ರಸ್ತಾಪಿಸಿದಾಗ, ಉದಾಸಿನದ ನಿಟ್ಟುಸಿರು ಬಿಟ್ಟು ಸುಮ್ಮನಾದರು. ಹಠ ಬಿಡದ ಶಾಲಿನಿ ಅಮ್ಮನನ್ನು ಪೀಡಿಸಿದಳು. ಅಮ್ಮ ಅಪ್ಪನನ್ನು ಕಾಡಿದಳು. ಕೊನೆಗೂ ಅಪ್ಪನಿಂದ ‘ಹಂದಿ’ ಸಾಕಲು ಹಸಿರು ನಿಶಾನೆ ಸಿಕ್ಕಿತು.
ಆಹಾ!! ಶಾಲಿನಿಯ ಖುಷಿಗೆ ಪಾರವೇ ಇಲ್ಲದಂತಾಯ್ತು . ಕಪ್ಪು-ಬಿಳಿ ಬಣ್ಣ ಮಿಶ್ರಿತ ಗಂಡು ಹಂದಿ ಮರಿಯನ್ನು ತಂದಳು. ಅಪ್ಪ ಹೊಸ ಅಥಿತಿಯನ್ನು ಸ್ವಾಗತಿಸಲು ಹೊಸ ಗೂಡನ್ನು ನಿರ್ಮಿಸಿದರು. ಹಂದಿ ಮರಿ ಕಿರಿಚುವಾಗ ಓಡಿಹೋಗಿ ನೋಡುವುದು, ಗಂಜಿ- ನೀರು, ಸೊಪ್ಪು- ಸದೆ ಹಾಕುವುದು, ಗೂಡು ಗುಡಿಸುವುದು ಶಾಲಿನಿಯ ನಿತ್ಯದ ಕಾಯಕವಾಯ್ತು.
ಹಂದಿ ಮರಿಗೆ ‘ ಮುನ್ನ ‘ ಎಂದು ಹೆಸರಿಟ್ಟಳು. ಅವಳು ಗೂಡಿನ ಹತ್ತಿರ ಹೋದರೆ ಸಾಕು, ಮುನ್ನ ಓಡಿ ಬಂದು ಬಾಗಿಲ ಬಳಿ ನಿಲ್ಲುತ್ತಿತ್ತು . ಅದರ ಕಿವಿಯನ್ನೋ, ಹೊಟ್ಟೆಯನೋ, ಕೆರೆದರೆ ‘ ದಡಾರ್’ ಎಂದು ಬಿದ್ದುಕೊಳ್ಳುತಿತ್ತು. ಕೆರೆದಷ್ಹ್ತುಪರಮಾನಂದ, ಅವಳು ಸುಸ್ತಾಗಿ ಮನೆಗೆ ಹೊರಟರೆ ಮತ್ತೆ- ಮತ್ತೆ ಕೆರೆಯುವಂತೆ ‘ ಗುರು-…..ಗುರು….ಗುರು….’ ಎಂದು ಪೀಡಿಸುತಿತ್ತು. ಮುನ್ನನ ಬೆನ್ನಿಗೆ ಪ್ರೀತಿಯಿಂದ ಹೊಡೆದು ” ಹೋಗೊಲೋ ಗುಂಡಣ್ಣ ” ಎನ್ನುತ್ತಾ ಓಡಿ ಬಿಡುತ್ತಿದ್ದಳು. ದಿನ ಕಳೆದಂತೆ ಈ ಹಂದಿಯನ್ನು ಮಾರಾಟ ಮಾಡಬೇಕು, ಹಣ ಸಂಪಾದಿಸಬೇಕು ಎಂಬುದು ಮರೆತೇ ಹೋಗಿತ್ತು. ಪ್ರೀತಿಯಿಂದ ಸಾಕಿದ ಹಂದಿಯನ್ನು ಮಾರುವ ದಿನವು ಉಂಟೆ ??. ಮತ್ತಷ್ಟು ಓದು 







