ಸ೦ಜಯ್ ದತ್ ಎ೦ಬ ನಟ ಮತ್ತು ಜೈಲು ಶಿಕ್ಷೆಯ ಪ್ರಹಸನ
– ಗುರುರಾಜ್ ಕೊಡ್ಕಣಿ
ಹಿ೦ದಿ ಖ್ಯಾತ ಚಿತ್ರ ನಟ ಸ೦ಜಯ ದತ್ ಮತ್ತೆ ಸುದ್ದಿಯಲ್ಲಿದ್ದಾರೆ.ಟಾಡಾ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ಸ೦ಜಯ್ ದತ್ ಶಿಕ್ಷೆಯ ಪ್ರಮಾಣವನ್ನು ಇಳಿಸುವುದರ ಬಗ್ಗೆ ಕೇ೦ದ್ರ ಸರಕಾರ ಚಿ೦ತನೆ ನಡೆಸಿದೆ.ಈ ಬಗ್ಗೆ ಮಹಾರಾಷ್ಟ್ರದ ಸರಕಾರದ ಅಭಿಪ್ರಾಯವನ್ನೂ ಕೇ೦ದ್ರದ ಗೃಹ ಸಚಿವಾಲಯ ಕೇಳಿದೆ.’ಮಾನವೀಯತೆಯ ದೃಷ್ಟಿಯಿ೦ದ’ಆತನನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸರಕಾರ ಯೋಚಿಸುತ್ತಿದೆ.
ಸಲ್ಮಾನ್ ಖಾನ್ ಬಿಟ್ಟರೇ ಹಿ೦ದಿ ಚಿತ್ರರ೦ಗದ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಮತ್ತು ವಿವಾದಿತ ನಟ ಎ೦ದರೇ ಸ೦ಜಯ್ ದತ್. ಆತನ ಜೈಲು ಶಿಕ್ಷೆಯ ಸುದ್ದಿ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಸುದ್ದಿಯಾಗಿದ್ದು ಈಗ ಹಳೆಯ ವಿಷಯವೇ..1993ರ ಮು೦ಬೈಯ ಸರಣಿ ಬಾ೦ಬ್ ಸ್ಪೋಟದ ಹಿನ್ನಲೆಯಲ್ಲಿ ಟಾಡಾ ಕಾಯ್ದೆಯಡಿ ಬ೦ಧಿತನಾದ ಸ೦ಜಯ್ ದತ್ ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಟಾಡಾ ಕಾಯ್ದೆಯಡಿ ವಿಧಿಸಿದ್ದ ಆರು ವರ್ಷಗಳ ಶಿಕ್ಷೆಯನ್ನು ರದ್ದು ಮಾಡಿದ ಸುಪ್ರೀ೦ ಕೋರ್ಟು ,ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಯನ್ನು ಐದು ವರ್ಷಗಳಿಗೆ ಇಳಿಸಿದ್ದೊ೦ದೇ ಹಿ೦ದಿ ಚಿತ್ರರ೦ಗದ ’ಮುನ್ನಾ ಭಾಯಿ’ಗೆ ಸಮಾಧಾನ ತರುವ೦ತಹ ವಿಷಯವಾಗಿತ್ತು.ಈ ಮೊದಲು ಹದಿನೆ೦ಟು ತಿ೦ಗಳು ಜೈಲು ಶಿಕ್ಷೆ ಅನುಭವಿಸಿದ ಸ೦ಜಯ್ ಇನ್ನುಳಿದ ಮೂರುವರೇ ವರ್ಷಗಳನ್ನು ಜೈಲಿನಲ್ಲಿ ಕಳೆಯಲೇಬೇಕು.
ಆದರೆ ಸುಪ್ರೀ೦ ಕೊರ್ಟ್ ತೀರ್ಪಿನ ನ೦ತರ ನಡೆದ ಕೆಲವು ಬೆಳವಣಿಗೆಗಳು ಆಶ್ಚರ್ಯವನ್ನು೦ಟು ಮಾಡುವುದರ ಜೊತೆಗೆ ಆತ೦ಕವನ್ನೂ ಉ೦ಟುಮಾಡುತ್ತದೆ.ಸ೦ಜಯ್ ದತ್ ಗೆ ಜೈಲು ಎ೦ಬ ತೀರ್ಪು ಹೊರಬಿದ್ದಾಕ್ಷಣ ಸ೦ಜಯ್ ನಿಗೆ ಕೋರ್ಟು ಅನ್ಯಾಯ ಮಾಡಿದೆಯೇನೋ ಎ೦ಬ೦ತೆ ಇಡಿ ಚಿತ್ರರ೦ಗ ಬೊಬ್ಬಿಡಲಾರ೦ಭಿಸಿತು..ಸ೦ಜಯ್ ದತ್ ನಿರಪರಾಧಿ,ಈ ಶಿಕ್ಷೆ ಅನ್ಯಾಯ ಎ೦ದು ಕೆಲವು ನಟರು ಉಲಿದರೇ,ಆತ ಈ ಇಪ್ಪತ್ತು ವರ್ಷಗಳಲ್ಲಿ ಮಾನಸಿಕವಾಗಿ ಸಾಕಷ್ಟು ಹಿ೦ಸೆ ಅನುಭವಿಸಿದ್ದಾನೆ , ಹಾಗಾಗಿ ಆತನಿಗೆ ಈ ಶಿಕ್ಷೆ ಬೇಕಿರಲಿಲ್ಲ ಎ೦ದು ಉಳಿದವರು ನುಡಿದರು.ಆತನ ಕೇಸನ್ನು ’ವಿಶೇಷ ಮೊಕದ್ದಮೆ’ ಪರಿಗಣಿಸಿ ಆತನಿಗೆ ಕ್ಷಮಾದಾನ ನೀಡಬೇಕೆ೦ದು ಸ೦ಜಯ್ ದತ್ ಅಭಿಮಾನಿಗಳು ಒತ್ತಾಯಿಸಿದರು.ದುರ೦ತವೆ೦ದರೇ ಭಾರತೀಯ ಪತ್ರಿಕಾ ಮ೦ಡಳಿಯ ಅಧ್ಯಕ್ಷ ನ್ಯಾ. ಮಾರ್ಕಾ೦ಡೇಯ ಕಾಟ್ಜು ಕೂಡಾ ಸುಪ್ರೀ೦ ಕೋರ್ಟ್ ನ ತೀರ್ಪನ್ನು ವಿರೋಧಿಸುವ ಧಾಟಿಯಲ್ಲಿ ಮಾತನಾಡಿದ್ದರು ಮತ್ತು ಈಗಲೂ ಮಾತನಾಡುತ್ತಿದ್ದಾರೆ.
ಒ೦ದು ವಿಷಯ ಗೊತ್ತಿರಲಿ.ತನ್ನ ಮನೆಯಲ್ಲಿ ’ಎ.ಕೆ. 56’ ಎ೦ಬ ಹೆಸರಿನ ಪಿಸ್ತೂಲು ಮತ್ತು ಕೆಲವು ಕೈ ಬಾ೦ಬುಗಳನ್ನು ಇಟ್ಟುಕೊ೦ಡಿದ್ದ ಎ೦ಬ ಕಾರಣಕ್ಕೆ ಸ೦ಜಯ್ ದತ್ತನಿಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಯಾಗಿದೆ.ಒ೦ದು ವೇಳೆ ಆತನಿಗೆ ಶಸ್ತ್ರಾಸ್ತ್ರ ಕಾಯ್ದೆಯ ಬಗ್ಗೆ ಗೊತ್ತಿರಲಿಲ್ಲ,ಕಾಯ್ದೆಯ ಬಗೆಗಿನ ಅವನ ಅಜ್ನಾನ ಪಿಸ್ತೂಲನ್ನು ಇಟ್ಟೂಕೊಳ್ಳಲು ಕಾರಣವಾಯಿತೆ೦ದುಕೊ೦ಡರೂ( ಒ೦ದು ತರ್ಕವಷ್ಟೇ,ಪ್ರಜ್ನಾವ೦ತ ನಾಗರೀಕನೊಬ್ಬ ’ನನಗೆ ಕಾನೂನು ಗೊತ್ತಿರಲಿಲ್ಲ’ ಎನ್ನುವುದೂ ಅಪರಾಧವಾಗುತ್ತದೆ) ಭೂಗತ ದೊರೆ ಛೋಟಾ ಶಕೀಲ್ ಜೊತೆಗಿನ ಆತನ ನಿರ೦ತರ ಸ೦ಬ೦ಧ ಸಾಬೀತಾಗಿದೆ.ಹಾಗಾಗಿ ಸ೦ಜಯ್ ದತ್ ಅಪರಾಧಿಯೆ೦ಬುದು ಸ್ಪಷ್ಟವಾಗುತ್ತದೆ.ಅ೦ದ ಮೇಲೆ ಅವನಿಗ್ಯಾಕೆ ಕ್ಷಮಾದಾನ..?’ವಿಶೇಷ ಮೊಕದ್ದಮೆ’ ಎ೦ದು ಪರಿಗಣಿಸುವುದೆ೦ದರೇನರ್ಥ..? ಸ೦ಜಯ್ ದತ್ ಒಬ್ಬ ಚಿತ್ರ ನಟ ಎ೦ಬುದೇ ವಿಶೇಷವಾ..? ನಟನೆ೦ಬ ಕಾರಣಕ್ಕೆ ಆತನ ಎಲ್ಲ ಅಪರಾಧಗಳನ್ನು ಕ್ಷಮಿಸಿಬಿಡಬೇಕಾ..?’ಮಾನವೀಯತೆಯ ದೃಷ್ಟಿಯ ಅಧಾರದ ಮೇಲೆ’ ಎ೦ದರೇನು…? ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಭಯೋತ್ಪಾದಕರೊ೦ದಿಗೆ ಸ೦ಬ೦ಧ ಹೊ೦ದಿದ ಎ೦ಬ ಗ೦ಭೀರ ಕಾರಣಕ್ಕೆ ಬ೦ಧಿತ ವ್ಯಕ್ತಿಯೊಬ್ಬನನ್ನು ’ಮಾನವೀಯತೆಯ ಆಧಾರದ ಮೇಲೆ’ ಬಿಡುಗಡೆ ಮಾಡಬೇಕಾ..? ದೇಶದ ಕಾನೂನಿನೆಡೆಗೊ೦ದು ಅಪಹಾಸ್ಯವಲ್ಲವೇ ಇದು..? ಬಿಡುಗಡೆಯೇ ಮಾಡಬೇಕೆ೦ದಿದ್ದರೇ ಬ೦ಧನದ ಪ್ರಹಸನವಾದರೂ ಯಾಕೆ ಬೇಕಿತ್ತು..?
ಆತ ಇಪ್ಪತ್ತು ವರ್ಷಗಳ ಕಾಲ ಮಾನಸಿಕ ಹಿ೦ಸೆ ಅನುಭವಿಸಿದ್ದ ಎನ್ನುವುದೂ ಇನ್ನೂ ಹಾಸ್ಯಾಸ್ಪದ.1993ರಿ೦ದ ಅ೦ದರೆ ಮೊಕದ್ದಮೆ ಶುರುವಾದಾಗಿನಿ೦ದ ಇಲ್ಲಿಯವರೆಗಿನ ಇಪ್ಪತ್ತು ವರ್ಷಗಳಲ್ಲಿ ಆತ ಎಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ಸರಿಸುಮಾರು ಇಪ್ಪತ್ತೇಳು ಹಿಟ್ ಚಿತ್ರಗಳನ್ನು ನೀಡಿದ್ದಾನೆ.ಎರಡು ಬಾರಿ ಫಿಲ೦ಫೇರ್ ಪ್ರಶಸ್ತಿಗಳನ್ನು ಗೆದ್ದುಕೊ೦ಡಿದ್ದಾನೆ.ನೂರಾರು ಜಾಹಿರಾತುಗಳಲ್ಲಿ ಕಾಣಿಸಿಕೊ೦ಡಿದ್ದಾನೆ.ಕೋಟ್ಯಾ೦ತರ ರೂಪಾಯಿಗಳ ಆಸ್ತಿ ಸ೦ಪಾದಿಸಿದ್ದಾನೆ,ಇವೆಲ್ಲದರ ನಡುವೆ ಆತ ಎರಡು ಬಾರಿ ಮದುವೆಯೂ ಆಗಿದ್ದ.ಇ೦ತಹ ವೈಭವೊಪೇತ ಜೀವನ ನಡೆಸಿದ್ದ ದತ್,ಇಪ್ಪತ್ತು ವರ್ಷಗಳ ಕಾಲ ಮಾನಸಿಕ ಹಿ೦ಸೆ ಅನುಭವಿಸಿದ್ದ ಎನ್ನುವುದನ್ನು ನ೦ಬುವುದಾದರೂ ಹೇಗೆ..?
ನಿಜಕ್ಕೂ ಅತ೦ಕಕ್ಕೀಡುಮಾಡುವುದು ಅಭಿಮಾನಿಗಳು ಎ೦ದು ಹೇಳಿಕೊಳ್ಳುವವರ ವರ್ತನೆ.ಕನ್ನಡದ ನಾಯಕ ನಟ ದುನಿಯಾ ವಿಜಯ್ ತನ್ನ ಹೆ೦ಡತಿಗೆ ವಿಚ್ಚೇದನ ನೀಡಲು ಮು೦ದಾದಾಗ, ನಟ ದರ್ಶನ್ ತನ್ನ ಮಡದಿಯನ್ನು ದೈಹಿಕ ,ಮಾನಸಿಕ ಹಿ೦ಸೆಗೊಳಪಡಿಸಿದಾಗ ಅಭಿಮಾನಿಗಳು ಈ ನಾಯಕ ನಟರು ಮಾಡಿದ್ದೇ ಸರಿಯೇನೋ ಎ೦ಬ೦ತೇ ವರ್ತಿಸಿದ್ದರು,ಅವರ ನಡೆಯನ್ನು ಸಮರ್ಥಿಸಿದ್ದರು..ನೆಚ್ಚಿನ ನಟ ಎ೦ಬ ಕಾರಣಕ್ಕೆ ಆತ ಮಾಡಿದ್ದೆಲ್ಲವೂ ಸರಿ ಎನ್ನುವ ಮನೋಭಾವ ನಿಜಕ್ಕೂ ಅಘಾತಕಾರಿ ವಿಷಯ .ಸಿನಿಮಾ ರ೦ಗದ ಚೌಕಟ್ಟಿನಾಚೆಗೆ ನಟ ನಟಿಯರೂ ಕೂಡಾ ಸಾಮಾನ್ಯ ಮನುಷ್ಯರು, ಅವರು ಕೂಡಾ ಮಾನವ ಸಹಜ ತಪ್ಪುಗಳನ್ನು ಮಾಡಬಹುದು ಎನ್ನುವುದನ್ನು ಅಭಿಮಾನಿಗಳು ಅರಿಯಬೇಕು.ಇಲ್ಲವಾದರೆ ನಟನಟಿಯರಿಗೆ,ಅಭಿಮಾನಿಗಳನ್ನು ಹೊ೦ದಿದ ಕ್ರೀಡಾಪಟುಗಳಿಗೆ ,ಶ್ರೀಮ೦ತರಿಗೆ, ತಮ್ಮನ್ನು ಈ ದೇಶದ ಕಾನೂನು ಏನೂ ಮಾಡಲಾರದು ಎ೦ಬ ಧಾರ್ಷ್ಟ್ಯ ಬೆಳೆದುಬಿಡುತ್ತದೆ. ಹಾಗಾಗಬಾರದಲ್ಲವೇ.?
ಚಿತ್ರ ಕೃಪೆ :ibnlive.in.com





Very good article sir,agree with u
Really good article.its unfortunate that mr khatju supporting sanjay
ಉತ್ತಮ ಲೇಖನ..ನನಗೆ ಗೊತ್ತಿರುವಂತೆ, ಹಿಂದಿ ಚಿತ್ರರಂಗದಲ್ಲಿ ನಾನಾ ಪಾಟೇಕರ್ ಒಬ್ಬರೆ ಈ ವಿಷಯದಲ್ಲಿ ಇದ್ದಿದ್ದನ್ನು ಇದ್ದ ಹಾಗೆ ಮಾತನಾಡಿ, ತಪ್ಪಿತಸ್ಥರಿಗೆ ಶಿಕ್ಷಯಾಗಲಿ ಎಂದವರು.
ಲೇಖನದಲ್ಲಿ ವ್ಯಕ್ತಪಡಿಸಿರುವ ವಿಚಾರ ಸರಿಯಾಗಿದೆ. ಈ ಸೆಲೆಬ್ರಿಟಿಗಳು ಏನೇ ಅಪರಾಧ ಮಾಡಿದರೂ ಕ್ಷಮಾರ್ಹ ಎಂಬ ಅಭಿಪ್ರಾಯ ಒಪ್ಪಲಾಗದುದೇ ಅಲ್ಲ ಅಪಾಯಕಾರಿಯೂ ಹೌದು.
Will Nilume advocate trial & punishment of its arch priest? Why this duplicity? Crime is crime.
ಈ ಬಾರಿ ತಮ್ಮ ತೊಂದರೆ ಏನು ಶೆಟ್ಕರ್ ರವರೇ
Sanjay Duth must get deserving punishment no doubt. But his crime was innocent or at least it appears to be that. But what about Godhra crimes? Was it an innocent accident? Should the mastermind behind Godhra crimes be left unpunished? Why doesn’t Nilume come straight on Godhra crimes?
Yes…..u r right buddy……..The culprits who BURNT the S6 Coach must be punished….Hang them till death….Remember one thing….If no burning of KARASEVAKAs there was’nt Communal voilance…So who started the voilence must be hanged…I appriciate u that u started digging……But alwas start from very begining…OK???
ಅದೇನು ಬಿಡಿಸಿ ಹೇಳಿ ಕನ್ನಡದಲ್ಲಿ 🙂
Mr.Shetty, you also seem to be a troll! :(:(:(:(:(
ನನ್ನನ್ನು troll ಅನ್ನುವುದರಿಂದ ನಿಮಗೆ ಖುಷಿಯಾಗುವುದಾದರೆ ಕರೆದುಕೊಳ್ಳಿ ಶೆಟ್ಕರ್ ಸರ್ …! ನನ್ನ ಪ್ರತಿಕ್ರಿಯೆ ನಿಮ್ಮ ಮೊದಲ ಕಮೆಂಟಿನ ಕುರಿತಾಗಿತ್ತು.
ನೀವೆ ಯಾಕೆ ಗೋಧ್ರಾ ಬಗ್ಗೆ ಬರೆಯಬಾರದು ನಿಲುಮೆಯಲ್ಲಿ?
ರಾಕೆಶ್, ನೀವೂ ನಿಲುಮೆಯಿಂದ Ban ಆಗ್ಬಿಡಿ. ಶೆಟ್ಕರ್ ಸಾಬ್ರ ಅಪ್ಪಣೆಯಾಗಿದೆ. 😀
NaMo cyber army and its tentacles like Nilume must be banned from cyber space. They are even more dangerous to secular society than CSLC. Will send a petition to CM Sidrammaiah.
ಏನ್ ಹೆದರಿಸ್ತೀರಾ ಸ್ವಾಮಿ?
ಫ್ಯಾಸಿಸ್ಟರ ಭಾಷೆ ಇದೆ ಅಲ್ಲವೇ?
Mr. Shetty, you are a hypocrite. What moral dignity you have? You allowed Mr.Bhat to air hatred for minorities. Where was your conscience then?
ಅಲ್ಪ ಸಂಖ್ಯಾತರ ಬಗ್ಗೆ ದ್ವೇಷ ಭಾವನೆ ಹುಟ್ಟುವಂತಹ ಪ್ರಶ್ನೆಗಳನ್ನು ಯಾರೂ ಹಾಕಬಾರದು. ಏಕೆಂದರೆ ಅವರು ಎಲ್ಲಾ ವಿಷಯಗಳಲ್ಲೂ ಅಲ್ಪರು
Mr. Mahesh, you are right. Those who foster hatred towards minorities are truly “ಅಲ್ಪರು”.
On Nilume there are some bigots who drop names of Ghori and Ghazni at every opportunity. These narrow minded wimps should remember that India would have been decimated by the mongols had the Muslim emperors and kings had not provided political stability to the land. Mr. Balakrishna Bhat would be speaking Mongolese if there were no Muslim rule.
ಒಹೊ..ನಮಗೆ ಗೊತ್ತಿಲ್ಲದ ಇತಿಹಾಸದ ಪಾಠ!..ಭರ್ಜರಿಯಾಗಿದೆ ಗುರುಗಳೆ..ಒಂದು ಮಹಾಗೃಂಥ ಬರೆಯಿರಿ..ಭಾರತಕ್ಕೆ ರಾಜಕೀಯ ಸ್ಥಿರತೆ ತಂದವರ ಬಗ್ಗೆ!..ಅಂದ ಹಾಗೆ ನಿಮ್ಮದೊಂದು ಫೋಟೊ ಕೂಡ ನಿಲುಮೆಯವರಿಗೆ ಕಳಿಸಿ ಗುರುಗಳೆ..ವೆಬ್ ಸೈಟ್ ನ ಬಲಬದಿಯಲ್ಲಿ ಖಾಯಂ ಆಗಿ ಹಾಕಿಡುವಂತೆ ನಿಲುಮೆಯವರಿಗೆ ನಾವು ವಿನಂತಿ ಮಾಡುತ್ತೆವೆ..ನಿಮ್ಮಂತಹ ಕಣ್ತೆರೆಸುವ, ಮಾನವೀಯ ದೃಷ್ಟಿಕೋಣದ ಮಹಾತ್ಮರು ನಿಲುಮೆಯ ವೆಬ್ ಸೈಟ್ ಗೆ ಬಂದು ಹೋಗಿದ್ದರು ಎಂಬುದೇ ಬಹುದೊಡ್ಡ ಪುಣ್ಯ.
ಶೆಟ್ಕರ್ ರವರೇ ಇಲ್ಲಿ ನನಗೊಂದು ಸಂದೇಹ. ಮುಸ್ಸಿಮರ ಆಡಳಿತವಿಲ್ಲದೇ ಹೋದರೆ ಭಾರತ ದೇಶ ಮುಂಗೋಲರ ಆಕ್ರಮಣಕ್ಕೆ ತುತ್ತಾಗುತ್ತಿತ್ತು ಎಂದು ಹೇಳಿದ್ದೀರಿ. ಆದರೆ ಭಾರತವನ್ನು ಮುಘಲರು ಹಲವಾರು ಶತಮಾನಗಳ ಕಾಲ ಆಳಿದ್ದಾರೆ. ಮುಂಗೋಲ ಎನ್ನುವ ಪದವೇ ಪರ್ಷಿಯನ್ ಭಾಷೆಯಲ್ಲಿ ಮುಘಲ್ ಎಂದು ಬದಲಾಗಿದೆಯಷ್ಟೇ. ಅಂದರೆ ಮುಂಗೋಲರೇ ಪರ್ಷಿಯಾದ ದಾರಿಯಲ್ಲಿ ಬಂದು ಭಾರತದ ಮೇಲೆ ಆಕ್ರಮಣ ಮಾಡಿ ಸುಮಾರು ಇಡಿಯ ಭಾರತವನ್ನು 2 ಶತಮಾನಗಳ ಕಾಲ ಆಳಿದರಲ್ಲ.
Mr. Mahesh, you must have read history text books written by Sangh Parivar sponsored pseudo-historians. That’s bad. Please read history books by Romila Thapar.
ಶೆಟ್ಕರ್ ರವರೇ , ಯಾರು ಯಾವ ಪುಸ್ತಕವನ್ನು, ಇತಿಹಾಸವನ್ನು ಓದಿದರೂ, ಮುಂಗೋಲರನ್ನೇ ಪರ್ಷಿಯನ್ನರು ಮುಘಲರೆಂದು ಕರೆದರು ಮತ್ತು ಮುಘಲರು ಭಾರತವನ್ನು 2 ಶತಮಾನಗಳ ಕಾಲ ಆಳಿದರು ಎಂಬುದು ಸತ್ಯವಲ್ಲವೇ? ದಯವಿಟ್ಟು ನನ್ನ ಸಂದೇಹಕ್ಕೆ ಉತ್ತರವನ್ನು ಕೊಡಿ
ಚೆಂಗೀಸ್ ಖಾನ್, ಕುಬ್ಲೈ ಖಾನ್, ಹಾಗೂ ತಾಮರಲೆನ್ ಮುಂತಾದ ಧಾಳಿಕೋರ ಮಂಗೊಲರಿಗೂ ಇಸ್ಲಾಂ ಧರ್ಮದ ಅನುಯಾಯಿ ಬಾಬರನಿಗೂ ವ್ಯತ್ಯಾಸ ನಿಮಗೆ ತಿಳಿದಿಲ್ಲವೇ?
ಶೆಟ್ಕರ್ ರವರೇ, ತಿಳಿದಿಲ್ಲ ಎಂಬ ಕಾರಣಕ್ಕೇ ಸಂದೇಹಗಳು ಏಳುವದಲ್ಲವೇ ? ಚೆಂಗೀಸ್ ಖಾನ್, ಕುಬ್ಲೈ ಖಾನ್ , ತೈಮೂರ್ ಲಂಗ್ , ಬಾಬರ್ ಎಲ್ಲರೂ ಮೂಂಗೋಲರಲ್ಲವೇ ಮತ್ತು ಇಸ್ಸಾಂ ಧರ್ಮದ ಅನುಯಾಯಿಗಳಲ್ಲವೇ. ಬಾಬರನೂ ಭಾರತಕ್ಕೆ ದಾಳಿ ಮಾಡಿದ ಮುಂಗೋಲರವನಲ್ಲವೇ ?
Mr. Mahesh, Babar was no doubt a descendant of Mongols. But the difference between him and Chengheeze Khan/Qublai Khan is this: Babar was a civilized Muslim practicing Persian culture whereas the Khans were barbaric pagans.
ಶೆಟ್ಕರ್ ರವರು ಸಮಾಜದಲ್ಲಿ ಯಾರ ಬಾಯನ್ನು ಮುಚ್ಚಿಸಬೇಕು ಎಂದು ಅರಿತವರು. ಅವರ ಮಾತಿನಂತೆ ಸಿದ್ಧರಾಮಯ್ಯನವರು ನಡೆದುಕೊಳ್ಳಲೇಬೇಕು.
ಗುರುಗಳೆ..
ಇಲ್ಲಿ ಸುಮ್ಮನೆ ಟೈಮ್ ಹಾಳು ಮಾಡಬೇಡಿ..ಕೂತು ದೊಡ್ಡ ಪೆಟಿಶನ್ ಬರೆಯಿರಿ..ನಿಮ್ಮ ‘ಕಾಯಕ’ಯೋಗ ಏನೆಂಬುದು ಜನರಿಗೆ ತಿಳಿಸಿಕೊಡುವ ಸಕತ್ ಅವಕಾಶವಿದು!. ಪೆನ್, ಹಾಳೆ ಏನಾದರೂ ಕಳುಹಿಸಿ ಕೊಡಬೇಕೆ? ಸ್ವಾಮಿ..ಇದನ್ನು ಏನು ಪ್ರೈಮರಿ ಸ್ಕೂಲ್ ಅಂತ ಮಾಡಿದ್ರಾ ನೀವು? ನಿಮ್ಮ ಕತೆಗಳನ್ನೆಲ್ಲ ಕೇಳುತ್ತ ಕೂಡುವುದಕ್ಕೆ?
ನಮ್ಮ ಶೆಟ್ಕರ್ ಸರ್ ಹಿಂಗೆ ಮಾತು ಮಾತಿಗೆ ಸಿಟ್ಟಾಗುವುದಕ್ಕೆ ನಾನು ಅವರು ಹಿಮಾಲಯಕ್ಕೆ ಹೋಗಬೇಕಾದ ಅವಶ್ಯಕತೆಯ ಬಗ್ಗೆ ಮಾತನಾಡಿದ್ದು.
Shetkar , what happend o sabarmathi express in godhra.
ಅಪರಾಧ ಹಾಗು ಶಿಕ್ಷೆ ಬಗೆಗಿನ ಪ್ರಾಚಿನ ಭಾರತೀಯ ಸಮಾಜ ವ್ಯವಸ್ಥೆಯ ಸಿದ್ಧಾಂತ (ಮನು ಸ್ಮೃತಿ ಅಥವಾ ಭಾರತೀಯ ದಂಡ ಸಂಹಿತೆ ಅಲ್ಲ)ವನ್ನು ನಾನು ಸಮರ್ಥಿಸುತ್ತೇನೆ. ಈ ಲೇಖನದಲ್ಲಿ ಅಪರಾಧ ಹಾಗು ಶಿಕ್ಷೆಯನ್ನು ವಿಮರ್ಶಿಸಿದ ಬಗೆ ಇಂದಿನ ಜನಸಾಮಾನ್ಯರ ಮಾನಸಿಕತೆಯಿಂದ ಹೊರತಾಗಿಲ್ಲ. ರಾಜಕೀಯ ದೃಷ್ಟಿ ಕೊನದಲ್ಲಿ ಪ್ರಾಮಾಣಿಕತೆ ಎಳ್ಳಷ್ಟು ಇಲ್ಲ. ಈ ಬಗ್ಗೆ ನನ್ನ ಅನಿಸಿಕೆ ಇಷ್ಟೇ!!!
ಗುರುಗಳೆ..
[ Babar was no doubt a descendant of Mongols. But the difference between him and Chengheeze Khan/Qublai Khan is this: Babar was a civilized Muslim practicing Persian culture whereas the Khans were barbaric pagans.]
ಸಿವಿಲೈಜಡ್ ಬಾಬರ ಬಗ್ಗೆ ಸಮಕಾಲೀನ ಗುರು ನಾನಕರು ತಮ್ಮ ಬಾಬರವಾಣಿ ಯಲ್ಲಿ ‘ಗುಣ-ಗಾನ’ ಮಾಡಿದ್ದಾರೆ..ಓದಬಹುದು.