ವಿಷಯದ ವಿವರಗಳಿಗೆ ದಾಟಿರಿ

Archive for

5
ಜೂನ್

ಸಾರ್ಕ್ ಮಾತುಕತೆಯಡಿಯಲ್ಲಿ ಚೀನಾಕ್ಕೆ ಬೆವರಿಳಿಸಿದ ಮೋದಿ

– ರಾಘವೇಂದ್ರ ಎಂ.ಸುಬ್ರಮಣ್ಯ

ಮೋದಿವ್ಯವಹಾರವಲಯದಲ್ಲಿ ಒಂದು ಪದವಿದೆ “ಪರ್ಸ್ಟ್ಮೂವರ್ಸ್ಅಡ್ವಾಂಟೇಜ್” ಎಂದು. ಕನ್ನಡದಲ್ಲಿ ಸಡಿಲವಾಗಿ ‘ಮೊದಲ ನಡೆ ನಡೆಸುವವನಿಗಾಗುವ ಲಾಭ’ ಎಂದು ಅನುವಾದಿಸಬಹುದು. ಅಂದರೆ ಯಾರು ಮೊದಲ ಹೆಜ್ಜೆ ಇಡ್ತಾನೋ ಅವನಿಗೆ ಕೆಲವು ಅನುಕೂಲಗಳು/ಹೆಚ್ಚು ಅವಕಾಶಗಳು ಒದಗಿಬರುತ್ತದೆ. ಚೆಸ್ ಆಟದಲ್ಲಿ ಬಿಳಿಕಾಯಿ ನಡೆಸುವವನಿಗೆ ಮೊದಲ ತಂತ್ರವನ್ನು ಹೂಡಲು ಅವಕಾಶಸಿಗುವುದಿಲ್ಲವೇ? ಹಾಗೆ. ಕಪ್ಪುಕಾಯಿ ನಡೆಸುವವನಿಗೂ ತನ್ನದೇ ಆದ ತಂತ್ರ ಹೂಡುವ ಅವಕಾಶವಿದ್ದರೂ,ಅದು ಬಿಳಿಕಾಯಿಯವನ ನಡೆಗಳ ಮೇಲೆಯೇ ಅವಲಂಬಿತವಾಗುವ ಸಾಧ್ಯತೆಗಳೂ ಹೆಚ್ಚು. ಆ ಆಟಗಾರ ಬಿಳಿಕಾಯಿಗಳ ನಡೆಯನ್ನು ಅನುಸರಿಸುತ್ತಾ, ತನ್ನ ಕಾಯಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತನಾಗುತ್ತಾನೆ. ಹಾಗೆಯೇ ವ್ಯವಹಾರ ಕ್ಷೇತ್ರದಲ್ಲಿ,ಮೊದಲ ನಡೆ ನಡೆಸುವವನಿಗೆ ಬಹಳಷ್ಟು ಅನುಕೂಲಗಳು ಒದಗಿಬರುತ್ತವೆ. ಮೊತ್ತ ಮೊದಲನೆಯದಾಗಿ, ಆತನಿಗೆ ಸ್ಪರ್ದಿಗಳೇ ಇರುವುದಿಲ್ಲ. ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಸುಲಭ ಅವಕಾಶ. ಒಮ್ಮೆ ಪ್ರಾಬಲ್ಯ ಸಾಧಿಸಿದರೆ,ಆತನ ಉತ್ಪನ್ನ ಉತ್ಕೃಷ್ಟಮಟ್ಟದ್ದಾಗಿದ್ದರೆ, ಬೇರೆ ಏನೂ ಮಾಡದೆ ವರ್ಷಾನುಗಟ್ಟಲೇ ಲಾಭವನ್ನು ಆನಂದಿಸಬಹುದು.

ಆದರೆ, ಖಂಡಿತವಾಗಿಯೂ ಲಾಭವಿದ್ದ ಮೇಲೆ ನಷ್ಟವಿದ್ದೇ ಇರುತ್ತದೆ. ಮೊದಲ ನಡೆ ನಡೆಸುವವನಿಗೆ ಅಗಾಧ ಧೈರ್ಯ ಬೇಕಾಗುತ್ತದೆ. ಅ ನಿಯಂತ್ರಿತ ಅಪಾಯ (ರಿಸ್ಕ್) ತೆಗೆದುಕೊಳ್ಳಬೇಕಾಗುತ್ತದೆ. ನಡೆಯಲ್ಲಿ ಸ್ವಲ್ಪವೇ ಎಡವಿದರೂ, ಅಪಾರ ನಷ್ಟಕ್ಕೀಡಾಗುತ್ತಾನೆ. ಇನ್ನೊಮ್ಮೆ ಎದ್ದು ನಿಲ್ಲಲೂ ಸಾಧ್ಯವಾಗದಷ್ಟು ವ್ಯವಹಾರ ಕುಸಿಯಬಹುದು. ನಿಯಂತ್ರಿತ ರಿಸ್ಕ್ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ನಡೆ ನಡೆಸುವವನೇ ಚಾಣಾಕ್ಷ ಮತಿ. ಮೋದಿ ತನ್ನ ಮೊದಲ ನಡೆಯಲ್ಲಿ ಎಷ್ಟೊಂದು ಹಕ್ಕಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ ಎಂದು ಇನ್ನೂ ಅರಿತಿಲ್ಲದವರಿಗಾಗಿ ಇದೊಂದು ಸಣ್ಣಪ್ರಯತ್ನ:

ಭಾರತ ದಕ್ಷಿಣ-ಪೂರ್ವ ಏಷ್ಯಾದಲ್ಲಿ ಭಾರೀ ತೂಕದರಾಷ್ಟ್ರ (regional heavyweight). ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಚೀನಾವನ್ನು ಬದಿಗಿಟ್ಟರೆ ತನ್ನ ಆರ್ಥಿಕ, ವೈಜ್ನಾನಿಕ ಹಾಗೂ ಸೈನಿಕ ಬಲದಿಂದ ಉಳಿದವರನ್ನು ಅಲುಗಿಸಬಲ್ಲದಷ್ಟು ಪ್ರಭಾವಿ. ಭಾರತ ತನ್ನ ಭಾರವನ್ನು ಉಳಿದವರ ಮೇಲೆ ಹೇರಿ ಯಾರನ್ನೂ ಹೆದರಿಸಲು ಪ್ರಯತ್ನಿಸಿಲ್ಲವಷ್ಟೆ. ಅದನ್ನು ಮಾಡಿದಲ್ಲಿ ನೆರೆಯ ರಾಷ್ಟ್ರಗಳನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಆದರೆ ಭಾರತದ ಯಾವ ಸರ್ಕಾರವೂ ನೆರೆಯವರನ್ನು ಎಂದೂ ಹೆದರಿಸಿಲ್ಲ ಅಥವಾ ಅಕ್ರಮಣ ಮಾಡಿಲ್ಲ.ಬದಲಿಗೆ ಅದು ಎಲ್ಲರನ್ನೂ ಸ್ನೇಹಿತರೆಂದು ಪರಿಗಣಿಸಿ ಅವರಿಗೆ ಸಹಾಯ ಮಾಡಿದೆ.ಬೇರೆ ದೇಶಗಳು ನಮ್ಮ ಸಹಾಯವನ್ನು ಅದೇ ರೂಪದಲ್ಲಿ ಹಿಂದೆ ಕೊಟ್ಟಿಲ್ಲ, ಅದು ಬೇರೆ ಮಾತು ಬಿಡಿ. ಆದರೆ ಮೋದಿ ತನ್ನೆಲ್ಲಾ ನೆರೆರಾಷ್ಟ್ರಗಳನ್ನು ತನ್ನ ಮೊದಲ ದಿನದ ಕಾರ್ಯಕ್ರಮಕ್ಕೇ ಆಹ್ವಾನಿಸುವ ಮೂಲಕ, ಸ್ನೇಹ ಹಸ್ತವನ್ನು ಚಾಚಿದ್ದಾರೆ. ಮೇಲ್ನೋಟಕ್ಕೆ ಇದು ಬರೀ ಸ್ನೇಹ ಹಸ್ತದಂತೆ ಕಂಡರೂ,ಒಂದು ಮಟ್ಟಕ್ಕೆ ಕೆಳಗಿಳಿದು ನೋಡಿದಾಗ, ಮೋದಿ ಸತ್ತು ಹೋಗಿರುವ ಸಾರ್ಕ್ ಒಕ್ಕೂಟದಲ್ಲಿ ಒಂದು ಸಂಚಲನ ಮೂಡಿಸಿದ್ದಾರೆ ಎಂದು ತಿಳಿಯುತ್ತದೆ. ಅದರೊಂದಿಗೇ ‘ಈ ಏರಿಯಾದಲ್ಲಿ ಬಾಸ್ಯಾರು!?’ ಎಂದು ತೋರಿಸಿದ್ದಾರೆ. ಪ್ರಮಾಣ ವಚನ ಸಮಾರಂಭದ ನಂತರ ನಡೆದ ಹಲವಾರು ಚರ್ಚೆಗಳಲ್ಲಿ,ಅಧ್ಯಕ್ಷರ ಮಾತುಗಳಲ್ಲಿ ಈ ವಿಷಯ ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ತಮಿಳರ ವಿರೋಧದ ನಡುವೆಯೂ ಶ್ರೀಲಂಕಾದ ಅಧ್ಯಕ್ಷನನ್ನು,ಹಲವಾರು ಬುದ್ದಿ(ಇರದ)ಜೀವಿಗಳ ಗೊಣಗಾಟದ ನಡುವೆಯೂ ಪಾಕಿಸ್ತಾನವನ್ನು ಆಹ್ವಾನಿಸುವ ಮೂಲಕ ಮೋದಿ ತನ್ನ ವಿದೇಶಾಂಗ ನೀತಿಯ ರೂಪು ರೇಷೆಯನ್ನು ಎತ್ತಿ ತೋರಿಸಿದ್ದಾರೆ.

ಮತ್ತಷ್ಟು ಓದು »