ವಿಷಯದ ವಿವರಗಳಿಗೆ ದಾಟಿರಿ

Archive for

12
ಜೂನ್

ತೆಗಳಬೇಕಾದುದು ಯಾರನ್ನು?

– ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ

ಕನ್ನಡ ಕಲಿಕನ್ನಡ ಮಾಧ್ಯಮ ಕುರಿತ ಚರ್ಚೆ ನಿಲ್ಲುವಂತೆಯೂ ಕನ್ನಡ ಉಳಿಸುವ ಪರ್ಯಾಯ ಮಾರ್ಗ ಶುರುಮಾಡುವ ಪ್ರಯತ್ನ ಆರಂಭವಾಗುವಂತೆಯೂ ಕಾಣುತ್ತಿಲ್ಲ. ಕನ್ನಡವೂ ಸೇರಿ ಯಾವ ಮಾಧ್ಯಮವನ್ನೂ ಹೇರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಕನ್ನಡ ಮಾತ್ರ ಮಾಧ್ಯಮವಾಗಬಾರದು, ಆದರೆ ಇಂಗಿಷ್ ಮಾತ್ರ ಆಗಬಹುದು ಎನ್ನಲಾಗಿದೆ ಎಂದು ಓದಿಕೊಂಡ ಪ್ರಭೃತಿಗಳಿಗೆ ಕೊರತೆ ಇಲ್ಲ. ಇದೇ ದಾಟಿಯಲ್ಲಿ ಮಾತನಾಡುವ ಹೋರಾಟಗಾರರಿಗೆ, ಅವರಿಂದ ತಪ್ಪಿಸಿಕೊಳ್ಳಬಯಸುವ ಸಾಹಿತಿಗಳಿಗೆ ಕನ್ನಡ ಉಳಿಸುವ ಬೇರೆ ಮಾರ್ಗಗಳೇ ಕಾಣದಿರುವುದು ಆಶ್ಚರ್ಯಕರ. ಈಗ ಇವರೇ ಪ್ರತಿಪಾದಿಸುವಂತೆ ನಾಲ್ಕನೆಯತ್ತೆವರೆಗೆ ಕಡ್ಡಾಯ ಮಾಧ್ಯಮವಾದರೆ ಕನ್ನಡ ಉಳಿದುಬಿಡುತ್ತದೆಯೇ? ಪರಿಸ್ಥಿತಿ ನೋಡೋಣ:

ಮೊನ್ನೆ ತಾನೆ ಹಿರಿಯರೊಬ್ಬರು ಭೇಟಿಯಾಗಿದ್ದರು. ಕನ್ನಡ ಮಾಧ್ಯಮದ ಬಗ್ಗೆ ಮಾತು ಬಂತು. ಅವರ ಮನೆಯಲ್ಲಿ ಇದೀಗ ಡಿಗ್ರಿ ಓದುತ್ತಿರುವ ಹುಡುಗನಿದ್ದಾನಂತೆ. ಆತ ಪಿಯುಸಿವರೆಗೆ ಕನ್ನಡದಲ್ಲೇ ಓದಿದ್ದು. ಡಿಗ್ರಿಗೆ ಸೇರಿದ ಮೇಲೆ ಕನ್ನಡದ ಕಡೆ ಕಣ್ಣೆತ್ತಿ ನೋಡುವುದಿಲ್ಲವಂತೆ, ಕನ್ನಡ ಪತ್ರಿಕೆಗಳತ್ತ ಮುಖವನ್ನೂ ಹಾಕುವುದಿಲ್ಲವಂತೆ. ಕನ್ನಡ ಮಾತಾಡುವುದೇ ಅಲರ್ಜಿ ಎಂಬಂತೆ ವರ್ತಿಸುತ್ತಾನಂತೆ. ಸರ್ಕಾರದವರೇನೋ ನಾಲ್ಕನೆಯ ತರಗತಿವರೆಗೆ ಕನ್ನಡವನ್ನು ಕಲಿಕಾ ಮಾಧ್ಯಮ ಮಾಡಿಬಿಟ್ಟರೆ ಕನ್ನಡಕ್ಕೆ ಭವಿಷ್ಯವಿದೆ ಅಂತಾರಲ್ಲ, ನಮ್ಮ ಹುಡುಗ ನಾಲ್ಕನೆಯತ್ತೆಯಲ್ಲ, ಪಿಯುಸಿವರೆಗೂ ಕನ್ನಡದಲ್ಲೇ ಓದಿದ್ದಾನೆ. ಈಗ ಅವನ ವರ್ತನೆ ನೋಡಿ. ಇವನಿಂದ ಕನ್ನಡ ಮುಂದೆ ಹೇಗೆ ಉಳಿಯುತ್ತದೆ ಸ್ವಲ್ಪ ಹೇಳ್ತೀರಾ ಅಂದರು. ನಾಲ್ಕನೆಯ ತರಗತಿವರೆಗೆ ಮಾಧ್ಯಮವಾಗಿ ಕಡ್ಡಾಯ ಮಾಡುವುದರಿಂದ ಕನ್ನಡ ಉಳಿಯುತ್ತದೆ ಎಂಬ ಭ್ರಮೆ ನನಗೆ ಇಲ್ಲ. ಕನ್ನಡ ನಮ್ಮ ನಡೆ ನುಡಿಗೆ, ಬದುಕಿಗೆ ಅನಿವಾರ್ಯ ಎಂದು ಅವನಿಗೆ ಅರ್ಥವಾಗುವಂತೆ ನೀವು ಮನೆಯಲ್ಲಿ ನಡೆದುಕೊಂಡಿದ್ದೀರಾ ಎಂದು ಕೇಳಿದೆ. ಅಂದರೆ? ಎಂದು ಕೇಳಿದರು.

ಮತ್ತಷ್ಟು ಓದು »

12
ಜೂನ್

ಶತಮಾನದ ವಿವಾದಕ್ಕೆ ಅ೦ತ್ಯವೆ೦ದು…? (ಕಾವೇರಿ ಜಲ ವಿವಾದ)

– ಹೇಮ೦ತ್ . ಎ೦

Kaaveria೧೮೯೦ರಲ್ಲಿ  ದಶಕದಲ್ಲಿ  ಜನ್ಮ  ತಳೆದ  ಈ  ಶಿಶುವಿಗೆ  ಈಗ  ೧೨೪  ವರ್ಷ.  ಕಾವೇರಿ  ನದಿಗಿರುವಷ್ಟು  ವಿವಾದ,  ಬಿಕ್ಕಟ್ಟು ದೇಶದ  ಬೇರಾವ  ನದಿಗಿಲ್ಲ.  ತಮಿಳುನಾಡು  ಮತ್ತು  ಕರ್ನಾಟದಕ  ರಾಜ್ಯಗಳ  ನಡುವಿನ  ಈ  ಬಿಕ್ಕಟ್ಟು  ಪರಸ್ಪರ  ರಾಜ್ಯಗಳು  ಕೆ೦ಡಕಾರುವ೦ತಹ  ಮಟ್ಟಿಗೆ  ತ೦ದಿದೆ.  ಭಾಷೆ  ಮತ್ತು  ನೀರಿನ  ಮೇಲಿನ  ಪ್ರಾದೇಶಿಕತೆಯ  ವ್ಯಾಮೋಹ  ರಾಜ್ಯಗಳಲ್ಲು  ಇದ್ದರೂ ತಮಿಳುನಾಡಿಗೆ  ಸ್ವಲ್ಪ  ಹೆಚ್ಚೆ. ಪ್ರಾದೇಶಿಕತೆ  ಎಷ್ಟರಮಟ್ಟಿಗೆ  ರಾಜಕೀಯಕ್ಕೆ  “WORKOUT”  ಆಗಿದೆ  ಅ೦ದರೆ  ಇವರೆಗೂ ತಮಿಳುನಾಡಿನಲ್ಲಿ  ರಾಷ್ಟ್ರಿಯ  ಪಕ್ಷದ  ಸುಳಿವಿಲ್ಲ.  ೨೦೧೪  ರ  ಲೋಕಸಭಾ  ಚುನಾವಣೆಯಲ್ಲಿ  ಜಯಲಲಿತಾರವರ  AIADMK ಪಕ್ಷ  ಒಟ್ಟು  ೩೯  ಸ್ಥಾನಗಳಲ್ಲಿ  ೩೦  ಸ್ಥಾನವನ್ನು  ಬಾಚಿಕೊ೦ಡು  ವಿಜೃ೦ಬಿಸುತ್ತಿದೆ.  ಇದರ  ಜೊತೆಗೆ  ಅಮ್ಮ ಜಯಲಲಿತಾರವರ  ಕಾವು  ಏರಿ  ಕಾವೇರಿಯನ್ನು  ಮತ್ತೆ  ಕೆಣಕಿದ್ದಾರೆ.  ಮೊನ್ನೆ  ಪ್ರಾಧಾನಿಯವರನ್ನ  ಭೇಟಿಯಾದ   ಸ೦ಧರ್ಭದಲ್ಲಿ  “ಕಾವೇರಿ  ನಿರ್ವಹಣಾ  ಮ೦ಡಳಿ”  ರಚನೆ ಕುರಿತು  ಕೋರುವುದರ  ಮೂಲಕ  ಮತ್ತೆ  ನಮ್ಮನ್ನು  ಕೆಣಕಲು  ಮು೦ದಾದರು,  ಮು೦ದಾಗಿದ್ದಾರೆ.  ರಾಜ್ಯಸಭೆ  ಬೆ೦ಬಲಕ್ಕಾಗಿ  ಮೋದಿ  ಜಯಲಲಿತರವರಿಗೆ  ಮಣೆ ಹಾಕುವರ? ಸದ್ಯಕ್ಕಂತೂ ಹಾಕಿಲ್ಲ.ಮುಂದೆ ನೋಡಬೇಕು.

ಕಾವೇರಿ  ನದಿ  ತಲಕಾವೇರಿಯಲ್ಲಿ  ಹುಟ್ಟಿ  ಕರ್ನಾಟಕದಲ್ಲಿ  ೩೮೦  ಕಿ.ಮೀ,  ತಮಿಳುನಾಡಿನಲ್ಲಿ  ೪೦೨  ಕಿ.ಮೀ,  ಹರಿದು  ಬ೦ಗಾಕೊಲ್ಲಿ  ಸೇರುತ್ತದೆ.  ಅ೦ದಾಜಿನ  ಪ್ರಕಾರ  ಕಾವೇರಿ  ನದಿಯ  ಸ೦ಗ್ರಹಣ  ಸಾಮರ್ಥ್ಯ ೭೧೬ T.M.C  ಇದರಲ್ಲಿ      ಕರ್ನಾಟಕಕ್ಕೆ  ೨೭೦ T.M.C(ಅ೦ತೆ),  ತಮಿಳುನಾಡಿಗೆ ೪೧೯ T.M.C,  ಕೇರಳ ೧೦ T.M.C,  ಪುದುಚೇರಿಗೆ  ೦೭  ಮತ್ತು  ಪರಿಸರ  ಸ೦ರಕ್ಷಣೆಗೆ  ೧೦ T.M.C  ನೀರನ್ನು  ಹ೦ಚಲಾಗಿದೆ.  ಇದರಲ್ಲಿ  ಸಿ೦ಹಪಾಲು  ತಮಿಳರೇ   ಪಡಯುತಿದ್ದರು… ಜಯಮ್ಮನವರಿಗೆ  ತೃಪ್ತಿ  ಇಲ್ಲದೆ  ಮತ್ತೆ  ಖ್ಯಾತೆ  ತೆಗೆದಿದ್ದಾರೆ.

ನಿಮ್ಮೆಲ್ಲರಿಗೂ  ಈ  ವಿವಾದದ  ಬಗ್ಗೆ  ತಿಳಿದೆ  ಇದೆ,  ಆದರೂ  ಈ  “ಶತಮಾನದ  ಶಿಶು”  ಬೆಳೆದುಬ೦ದ  ಹಾದಿಯ  ಮೆಲಕು  ಹಾಕುತಿದ್ದೇನೆ.

ಮತ್ತಷ್ಟು ಓದು »