ವಿಷಯದ ವಿವರಗಳಿಗೆ ದಾಟಿರಿ

Archive for

28
ಜೂನ್

ಶೈಕ್ಷಣಿಕ ಸಾಲವೆಂಬ(Educational loan) ಶೂಲದ ಸುತ್ತ ಮುತ್ತ ..!

– ದರ್ಶನ್ ಕುಮಾರ್  

Educational Loanಸಾಲ ಎಂಬ ಸುಳಿಯಲ್ಲಿ ಸಿಕ್ಕಿಲ್ಲದೆ ಇರುವವರು ಯಾರಾದರು ಇದ್ದಾರೆಯೇ? ಹೀಗೊಂದು ಯೋಚನೆ , ನನ್ನ ತಲೆಯಲ್ಲಿ ಮಿಂಚಿನಂತೆ ಆಗಾಗ ಬಂದು ಹೋಗುತ್ತಿತ್ತು.
ಸರಿ, ಆ ನಮ್ಮ  ಆರಾಧ್ಯ ದೇವ ತಿಮ್ಮಪ್ಪನೆ ಸಾಲ ಮಾಡಿದ್ದಾನೆ ನಮ್ಮದು ಏನು ಮಹಾ! ಅಲ್ವಾ,  ಅಂತ ಯೋಚನೆ ಎಲ್ಲರಂತೆ ನನಗೂ  ಕೂಡ ಅನ್ನಿಸಿ ಸುಮ್ಮನಾಗವುದರೊಳಗೆ  ನೆನಪಾಗಿದ್ದು – ಆತ ಸಾಲ ಮಾಡಿದ್ದು ಮದುವೆಯಾಗಲೇ ಹೊರತು ನಮ್ಮ ನಿಮ್ಮ ಹಾಗೆ ಓದಲು ಅಲ್ಲಾ !

ಇಂದು ನಾವು ಪಡೆಯುವ ಶೈಕ್ಷಣಿಕ ಸಾಲಗಳ ಬಡ್ಡಿ, ಗೃಹ(Home loan) ಸಾಲಗಳಿಗಿಂತ ಅಧಿಕ  ಮತ್ತು ಅದು  ವ್ಯೆಯಕ್ತಿಕ (Personal loan) ಸಾಲಗಳಿಗೆ ವಿಧಿಸುವಷ್ಟೇ ಬಡ್ಡಿ !  ಏನಿದು ವಿಪರ್ಯಾಸ ಅಲ್ಲವಾ?

ದೇಶದ ಪ್ರಗತಿ, ಏನಾದರೂ ವೇಗವಾಗಿ ಆಗಬೇಕಂದರೆ  ಅದು ಶೈಕ್ಷಣಿಕ ಕ್ಷೇತ್ರದಿಂದ  ಸಾಧ್ಯವೇ ಹೊರತು  ಮತ್ಯಾವ ಬೇರೆ ಕ್ಷೇತ್ರದಿಂದ  ಅಲ್ಲಾ  ಎನ್ನುವುದು ನನ್ನ ಅಭಿಪ್ರಾಯ. ಇಂತಹ ಕ್ರಾಂತಿಯಾಗಬೇಕಿದ್ದಲ್ಲಿ  ಅತಿ ಹೆಚ್ಚು ಪ್ರೋತ್ಸಾಹದ ಅವಶ್ಯಕತೆಯಿದೆ, ಅದರಲ್ಲೂ ಗ್ರಾಮೀಣ ಭಾಗದ ವಿಧ್ಯಾರ್ಥಿಗಳಿಗೆ. ಕಾರಣ ನಮ್ಮ ದೇಶದಲ್ಲಿ ಸುಮಾರು 70% ಜನರು ಹಳ್ಳಿಗಳಲ್ಲಿ ವಾಸಿಸುತ್ತಾರೆ ಅದರಲ್ಲೂ  ಇವರೆಲ್ಲಾ ಭಾಗಶಹ ಕೃಷಿಕರು.  ಇಂದಿನ ಕೃಷಿಕರ ಸ್ಥಿತಿ   ತಿಳಿದೇ ಇದೆ, ಮಳೆ ಬಂದರೆ ಬೆಳೆ, ಬೆಳೆಯಾದರೆ ಸಿಗದ ಬೆಂಬಲ ಬೆಲೆ, ಮಳೆ ಜಾಸ್ತಿಯಾದರೆ ಅತಿವೃಷ್ಟಿ ಇಲ್ಲವಾದರೆ ಅನಾವೃಷ್ಟಿ, ಈ ಅನಿಶ್ಚಿತತೆಯಲ್ಲಿರುವ ನಮ್ಮ ರೈತರು ಹೇಗೆ ತಾನೇ ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳಸಿಯಾರು?

ಸರಿ ಶೈಕ್ಷಣಿಕ ಸಾಲ (Education Loan) ಪಡೆದು ಯಾರು ಬೇಕಾದರೂ ಓದಬಹುದು ಅಲ್ಲವಾ  ಎಂಬ  ಪ್ರಶ್ನೆ ನಿಮ್ಮಲ್ಲಿ ಮೂಡಬಹುದು,   ಕೇಳಿ ನನ್ನ ಒಂದು ಕಥೆಯನ್ನು..

ಮತ್ತಷ್ಟು ಓದು »