ಅಫ್ರಿದಿಯ ಬೊಗಳುವಿಕೆ ಹಾಗೂ ನಮ್ಮ ತಿಕ್ಕಲುತನಗಳು..
– ಉಮೇಶ್ ದೇಸಾಯಿ
“ಸಮಾ” ಎನ್ನುವ ನ್ಯೂಸ್ ಚಾನೆಲ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅಫ್ರಿದಿ ಅಂದ
—
“”In my opinion, if I have to tell the truth, they (Indians) will never have hearts like Muslims and Pakistanis. I don’t think they have the large and clean hearts that Allah has given us,”
ಅವನ ಮಾತುಗಳಲ್ಲಿ ಸತ್ಯಇದೆಯೋ ಇಲ್ಲವೋ ಇಲ್ಲಿರುವ ಮುಸ್ಲಿಮ್ ರು ಹೇಳಬೇಕು. ಇದು ಸೋತವನ ಹತಾಶ ನುಡಿಯೋ ಅಥವಾ ಮನದಲ್ಲಿ ಮಥಿಸಿ ಮಥಿಸಿ ಕಾರಿದ ವಿಷವೋ ಗೊತ್ತಿಲ್ಲ. ಒಂದೇ ಮಾತಿನಲ್ಲಿ ಭಾರತವನ್ನು ಇಬ್ಭಾಗ ಮಾಡಿದ್ದಾನೆ. ಅಲ್ಲಾಹು ಕೊಟ್ಟ ದೇಣಿಗೆ ಹೃದಯ ಅದು ಭಾರತೀಯರಲ್ಲಿಲ್ಲ ಇದು ಅವನ ಅಂಬೋಣ.
ಈ ಮಾತಿಗೆ ಆಗಲೇ ಅಲ್ಲಿಯ ಬೋರ್ಡು ಪ್ರತಿಕ್ರಿಯಿಸಿದೆ.ಅದು ಅವನ ವ್ಯಕ್ತಿಗತ ಪ್ರತಿಕ್ರಿಯೆ ಎಂದು ತಿಪ್ಪೆ ಸಾರಿಸಿದೆ.ಇಲ್ಲಿಯ ಮುಸ್ಲಿಂ ಬೋರ್ಡು ಅದನ್ನು ಖಂಡಿಸಿದೆ. ಅದು ತಿಕ್ಕಲುತನ ಎಂದಿದೆ.
ಈಗ ಅಫ್ರಿದಿ ಯ ಮಾತು ಆ ದೇಶದ ಈಗಿನ ನಿಲುವನ್ನು ಬಿಂಬಿಸುತ್ತವೆಯೇ ಅಥವಾ ಅದು ಹುಚ್ಚು ನಾಯಿಯ ಬೊಗಳುವಿಕೆಯೇ .ಅಫ್ರಿದಿ ಆ ದೇಶದ ಕ್ರಿಕೆಟ್ ತಂಡ ಮುನ್ನಡೆಸಿದವ. ಒಂದು ರೀತಿಯಲ್ಲಿ ಪ್ರತಿನಿಧಿ ಅವ.ಹೀಗಿರುವಾಗ ಅವನ ಪ್ರಲಾಪ ಕೇವಲ ವೈಯುಕ್ತಿಕ ಅದು ಪಾಕ್ ಅಥವಾ ಒಟ್ಟಾರೇ ಮುಸಲ್ಮಾನರ ನಿಲುವು ಆಗಲುಸಾಧ್ಯನೇ ಇಲ್ಲ ಹೀಗೊಂದು ವಾದ ಏಳಬಹುದು. ಈ ವಾದ ನಾ ಒಪ್ಪುತ್ತೇನೆ ಆದರೆ ಹುಚ್ಚುನಾಯಿಗೆ ಕಲ್ಲೆಸೆಯಬೇಕು ಹೊರತು ರೊಟ್ಟಿ ನೀಡಬಾರದು. ಆ ದೇಶದ ಪ್ರಧಾನಿಯಾಗಲಿ. ನಾಯಕರಾಗಲಿ ಅವನ ಮಾತು ಖಂಡಿಸಲೇ ಇಲ್ಲ.
ಅವ ನಿಜಾನೇ ಹೇಳುತ್ತಿರುವುದು ಎಂದು “ಆಫ್ ದಿ ರಿಕಾರ್ಡ” ಹೇಳುತ್ತಿರಬಹುದು. ಪಾಕಿಸ್ತಾನ ಯಾವಾಗಿದ್ದರೂ ನಮಗೆ ಮಗ್ಗುಲ ಮುಳ್ಳು. ಆಗಾಗ ಚುಚ್ಚುತ್ತದೆ. ಇದು ನಿಜ.
ನಮ್ಮ ರಾಜತಾಂತ್ರಿಕತೆ ಇಷ್ಟು ಕೆಳಮಟ್ಟ ಕಂಡಿತೇಕೆ ಗೊತ್ತಾಗುತ್ತಿಲ್ಲ. ಮ್ಯಾಚಿನ ನೆವ ಮಾಡಿ ಗಿಲಾನಿಯನ್ನುಆಹ್ವಾನಿಸಿ ಅವನಿಗೆ ಉಣಬಡಿಸಿದೆವು. ಹೊಸ ಹೆಜ್ಜೆ ಎಂದು ಕೇಂದ್ರ ಸರಕಾರ ಹೇಳಿಕೊಂಡೀತು. ಯಾವಾಗಾವಾಗ ನಾವು ಅವರೆಡೆಗೆ ಕೈ ಚಾಚಿದಾಗ ನಮಗೆ ಸಿಕ್ಕಿದ್ದು ಕಾರ್ಗಿಲ್,೨೬/೧೧ ಈಗ ಅಫ್ರಿದಿಯ ಈ ಮಾತುಗಳು. ಮೀಡಿಯಾದ ಗಮನ ಬೇರೆಡೆಗೆ ಸೆಳೆಯಲು ಪ್ರಧಾನಿ ಈ ತಂತ್ರ ಹೂಡಿದರು ಅನಿಸುತ್ತದೆ. ಆದರೆ ಅದು ತಿರುಗುಬಾಣವಾಗಿದೆ ಅಫ್ರಿದಿಯ ಈ ಮಾತಿನಲ್ಲಿ. ಗಿಲಾನಿ ಬಂದ ಕೈ ಕುಲುಕಿದ ಪೊಗದಸ್ತಾಗಿ ಉಂಡ ಅಲ್ಲಿ ಹೋದ
ಎಲ್ಲ ಮರೆತ. ಇದು ಕೇಂದ್ರದ ಕಣ್ಣು ತೆರೆಸಿತೆ ನೋಡಬೇಕು.
ಅಫ್ರಿದಿಯ ಮಾತು ನನ್ನ ಅನಿಸಿಕೆ ಬಜ್ ನಲ್ಲಿ ಹಾಕಿದ್ದೆ. ಅನೇಕ ಜನ ಪ್ರತಿಕ್ರಿಯಿಸಿದರು.ಹೇಳುವುದಿಷ್ಟೇ ಅಫ್ರಿದಿಯ ಮಾತು ವೈಯುಕ್ತಿಕ ಆಗೊಲ್ಲ ಅವನಿಗೆ ಅಲ್ಲಿ ಬೆಂಬಲವಿದೆ ಅವನ ನಿಲುವು ಅಲ್ಲಿಯ ಜನರ ಭಾವನೆ ಬಿಂಬಿಸುತ್ತದೆ. ಇಂಥಾ ದೇಶದ ಜೊತೆ ಮತ್ತೆ ಮಾತು ಆಡುವ ಹುಂಬತನ ನಮಗೆ ಬೇಡ ಅಲ್ಲವೇ….!?
(ಚಿತ್ರ ಕೃಪೆ : carscarphans.blogspot.com)





ಇಂಡಿಯನ್ ಮುಸ್ಲಿಮ್ ಲಾ ಬೋರ್ಡ್ “afridi’s comment uncalled for” ಅಂತ ಹೇಳಿದೆಯೇ ಹೊರತು ಆತ ಹೇಳಿದ್ದು ತಪ್ಪು ಎನ್ನಲಿಲ್ಲ!
ee nam pradhaniyavaru haagu UPA netagalu dina belagaadre ondhu hagaranada suddi itkondu nam maadhyamadalli barthare….konepaksha ondhu divasanaadru nam bagge olledh barili antha eereethi…nataka maadirodu,,,,afridi bogolo naayi adakke naavyaru thale keduskobekilla…
ಅರವಿಂ
ಚರ್ಚೆ ನಡೆಸುವ ಉದ್ದೇಶವಿದ್ದರೆ, ಆರೋಗ್ಯಕರ ಪ್ರತಿಕ್ರಿಯೆ ಹಾಕಿ.ನಿಲುಮೆಯಲ್ಲಿ ಇಂತ ಪ್ರತಿಕ್ರಿಯೆಗಳಿಗೆ ಅವಕಾಶವಿಲ್ಲ.
ನಿಲುಮೆ
ಆಫ್ರಿದಿಯ ಮಾತುಗಳು ನೂರಕ್ಕೆ ನೂರು ಸತ್ಯ.
ನಮಗೆ, ಅಂದರೆ ಭಾರತೀಯರಿಗೆ, ಭಯೋತ್ಪಾದಕರನ್ನು ನಮ್ಮ ಮನೆ-ಮನದೊಳಗೆ ಇರಿಸಿಕೊಂಡು, ಸಾಕಿ, ಬೆಳೆಸುವಷ್ಟು ವಿಶಾಲವಾದ ಹೃದಯಗಳು ಇಲ್ಲವೇ ಇಲ್ಲ. ಅವೇನಿದ್ದರೂ ಆ ಪಾಕಿಸ್ತಾನಿಯವರಲ್ಲೇ ಇವೆ.