ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 12, 2011

6

ಅವರೆತ್ತರಕ್ಕೆ ಏರಲಾಗದಿದ್ದರೆ ತೆಪ್ಪಗಿರಿ…!

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

“ಇಂದಿನ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿ ಅವರು ಇದ್ದಿದ್ದರೆ, ಅವರು ಕೂಡಾ ಭ್ರಷ್ಟರಾಗುತ್ತಿದ್ದರು. ರಾಜಕೀಯದಲ್ಲಿ ಉಳಿಯಬೇಕಾದರೆ ಭ್ರಷ್ಟರಾಗದೆ ಇರಲು ಸಾಧ್ಯವೇ ಇಲ್ಲ” ಇಂತ ಹೇಳಿಕೆ ಕೊಟ್ಟೊವ್ರು ಯಾರು ಅನ್ನೋದು ಎಲ್ರಿಗು ಗೊತ್ತಿದೆಯಲ್ವಾ? ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವ್ರು.ಒಂದ್ ಕಡೆ ದೇವೆಗೌಡ್ರು ಫೋಟೊ,ಇನ್ನೊಂದ್ ಕಡೆ ಇದೇ ಮಹಾತ್ಮನ ಫೋಟೊ ಹಾಕೊಂಡಿರೋ ಪಕ್ಷದ ರಾಜ್ಯಾಧ್ಯಕ್ಷರ ಬಾಯಿಯಲ್ಲಿ ಬಂದ ಮುತ್ತಿನಂತ ಮಾತುಗಳಿವು.

ಮುತ್ತುಗಳು ಬಿದ್ದಾಗ ಆರಿಸಿ ಮನೆಗ್ ತಗೊಂಡು ಹೋಗೊದು ರೂಢಿ,ಆದ್ರೆ ಕುಮಾರ ಸ್ವಾಮಿ ಅವ್ರ ಮುತ್ತನ್ನ ಹಿಡಿದು ಅವರಿಗೆ ಪೈಡ್ ಪೈಡ್ ಅಂತ ಎಲ್ಲ ಕಡೆಯಿಂದ ಬಾರಿಸುತಿದ್ದಾರೆ.ಬಾರಿಸದೆ ಬಿಡ್ಬೇಕಾ? ಒಂದು ಕಡೆ ಮಹಾತ್ಮರ ಹೋರಾಟದಿಂದ ಸ್ಪೂರ್ತಿ ಪಡೆದ ೭೬ ವರ್ಷದ ಅಣ್ಣಾ ಹಜಾರೆಯಂತವರು ಸತ್ತತಿಂಹರನ್ನ ಬಡಿದೆಬ್ಬಿಸಲು ಉಪವಾಸ ಕೂತರೆ,ಇನ್ನೊಂದು ಕಡೆ ಈ ಕುಮಾರಸ್ವಾಮಿ ಮಹಾತ್ಮರ ಬಗ್ಗೆ ಇಂತ ಮಾತನಾಡಲು ಹೊರಟಿದ್ದಾರೆ!

ಅಂತು ಕುಮಾರಸ್ವಾಮಿಯವರ ಮಾತಿನಿಂದ ’ರಾಜಕಾರಣಿಗಳು,ರಾಜಕೀಯ ಪಕ್ಷಗಳು ಭ್ರಷ್ಟವಾಗಿವೆ’ ಅಂತ ಒಪ್ಪಿಕೊಂಡಂತಾಯಿತು ಅಲ್ಲವೇ? ಸತ್ಯ ಯಾವಗಲು ಅಷ್ಟೆ ಸರ್,ಬಾಯಿ ತಪ್ಪಿ ಬಂದು ಬಿಡುತ್ತೆ.ಆಮೇಲೆ ಯಥಾಪ್ರಕಾರದಂತೆ ’ನನ್ನ ಹೇಳಿಕೆಯನ್ನ ತಿರುಚಲಾಗಿದೆ,ತಪ್ಪಾಗಿ ಅರ್ಥೈಸಲಾಗಿದೆ’ ಅನ್ನೋ ಮಾಸಲು ಸ್ಪಷ್ಟನೆ ಬೇರೆ!

ನಿಮ್ಮ ಅವಶ್ಯಕತೆಗಳೀಗೆ ಭ್ರಷ್ಟಚಾರ ಅವಶ್ಯವಿರಬಹುದು ಕುಮಾರಸ್ವಾಮಿಯವರೇ,ಆದರೆ ಮಹಾತ್ಮರ ಬದುಕಿನ ಇತಿಹಾಸದ ಒಂದೆರಡು ಪುಟವನ್ನಾದದರೂ ತಾವು ಓದಿದ್ದರೆ ಈ ರೀತಿ ಮಾತನಾಡುತಿದ್ದಿರಾ? ಅಸಲಿಗೆ ನಾವ್ ಸರಿ ಇದ್ರೆ ಯಾರ್ ಎಷ್ಟೆ ಹಾಳಗಿದ್ರು ಏನು ಮಾಡಲಿಕ್ಕಾಗದು.ಶಾಸ್ತ್ರಿಯವರು ಅಧಿಕಾರಕ್ಕೆ ಬರುವ ಕಾಲಕ್ಕಾಗಲೇ ಈ ದೇಶದಲ್ಲಿ ಭ್ರಷ್ಟಚಾರ ಅನ್ನುವುದು ತಲೆಯೆತ್ತಿತ್ತು.ಜೀಪ್ ಹಗರಣ ಅನ್ನುವುದು ನೆಹರೂ ಕಾಲದಲ್ಲೆ ನಡೆದಿರಲಿಲ್ಲವೇ?,ಅವೆಲ್ಲ ಆದ ಮೇಲೆ ತಾನೆ ಶಾಸ್ತ್ರಿಗಳು ಬಂದು ಆಳ್ವಿಕೆ ಮಾಡಿದ್ದು!

ಅವರ ನಂತರ ಬಂದ ಇಂದಿರಾ ಭ್ರಷ್ಟಚಾರವನ್ನ ಬೆಂಬಲಿಸಿಯೆ ಮಾತಡಿದ್ದರು,ಅಲ್ಲಿಗೆ ಅಧಿಕೃತ ಶುರು ಹಚ್ಚಿಕೊಳ್ಳಬಹುದು ಅನ್ನುವ ಸಂದೇಶ ಕೊಟ್ಟಂತಾಯಿತು.ಅವತ್ತು ಅವ್ರು,ಇವತ್ತು ತಾವು! ನಾವು ಧನ್ಯರಾದೆವು ಸ್ವಾಮಿ 😦

ಭ್ರಷ್ಟ(ರಾಕ್ಷಸ!)ರಿಗಷ್ಟೆ ಭ್ರಷ್ಟಚಾರ ಅನಿವಾರ್ಯವೇ ಹೊರತು,ತನ್ನ ಸಂಪಾದನೆಯಲ್ಲಿ ನ್ಯಾಯವಾಗಿ ಬದುಕುವ ಮನಸ್ಸಿರುವವ ಮನುಷ್ಯರಿಗಲ್ಲ!

ಒಂದು ಮಾತಂತು ಸತ್ಯ.ನಿಮ್ಮನ್ನೂ ಸೇರಿದಂತೆ ಇಂದಿನ ಸೋ-ಕಾಲ್ಡ್ ನಾಯಕರಾರಿಗು ಮಹಾತ್ಮನ ಎತ್ತರಕ್ಕೆ ಏರಲು ಸಾಧ್ಯವಿಲ್ಲ ನೋಡಿ,ಹಾಗಾಗಿ ಅವರನ್ನೆ ನಿಮ್ಮ ಲೆವೆಲ್ಗ್ ಇಳಿಸಲು ಹೊರಟಿದ್ದಿರಿ.ಆದರೆ ಈ ಬಾರಿ ಜನ ಎದ್ದಿದ್ದಾರೆ ಸ್ವಲ್ಪ ನೋಡಿ ಮುಂದುವರೆಯಿರಿ.

6 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ಏಪ್ರಿಲ್ 12 2011

    ದೇವರನ್ನು ಮಾನವರ ಮಟ್ಟಕ್ಕೆ ಇಳಿಸಿ, ಅವರಿಗೇ ಲಂಚ ಕೊಟ್ಟು ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳುವ ಮನೋಭಾವ ಹೊಂದಿರುವ ಜನರ ನಡುವೆ ಮಹಾತ್ಮಾರನ್ನು ತಮ್ಮ ಮಟ್ಟಕ್ಕೆ ಇಳಿಸಿಕೊಂಬವರ ಕಂಡು ಬರಿದೆ ನಗು ಬರುತಿಹುದು ಅಷ್ಟೇ.

    ಹಳದಿ ಕಾಯಿಲೆಯಿಂದ ಬಳಲುವವನಿಗೆ ಲೋಕವೆಲ್ಲಾ ಹಳದಿಯಾಗಿಯೇ ಕಾಣುತ್ತದೆ. ಅಂಥವರಲ್ಲಿ ಈತನೂ ಒಬ್ಬರು!

    ಅವರಿಗೆ ಮಹಾತ್ಮಾರಾದರೇನು ದೇವರಾದರೇನು?

    ಲಂಚ ನೀಡುವಿಕೆಯನ್ನು ಎನ್ನುವುದನ್ನು ಎಲ್ಲಾ ಧಾರ್ಮಿಕ ಗುರುಗಳೇ ಬೋಧಿಸಿದ್ದಾರೆ ಅಂತ ಒಮ್ಮೊಮ್ಮೆ ಅನಿಸುತ್ತಿದೆ ನನಗೆ.

    ಉತ್ತರ
  2. Tejaswini Hegde's avatar
    ಏಪ್ರಿಲ್ 12 2011

    ಇಂತಹ ಮಾಹಾನ್ ನಾಯಕರನ್ನು(!!) ಆರಿಸಿ ಗೆಲ್ಲಿಸಿದ.. ಇನ್ನೂ ಗೆಲ್ಲಿಸಲು ತಯಾರಿರುವ ಜನತೆ ಮುಗ್ಧರೋ, ದಡ್ಡರೋ ಇಲ್ಲಾ ಮೂರ್ಖರೋ ತಿಳಿಯುತ್ತಿಲ್ಲ! 😦

    ಉತ್ತರ
  3. ಮಂಗಳ's avatar
    ಮಂಗಳ
    ಏಪ್ರಿಲ್ 12 2011

    ಕುಮಾರಸ್ವಾಮಿಯವರ ಮಾತು ಅಕ್ಷರಶಃ ನಿಜ, ಜನರ ಆಡುಮಾತೇ ಆಗಿದೆಯಲ್ಲಾ, “Unless He is a Criminal,
    Cannot Lead our Country in Politics”

    ಮಂಗಳ

    ಉತ್ತರ
  4. Pradeep CS's avatar
    Pradeep CS
    ಏಪ್ರಿಲ್ 12 2011

    ನಂಗೇನೋ ಈಗಳು ನಂಬೊಕೇ ಆಗ್ತಾ ಇಲ್ಲ ರಾಜಕಾರಣಿಗಳು ಅಸ್ತು ಸುಲಭವಾಗಿ ಲಾಕ್ ಪಾಲ್ ಮಾಸೂದೆ ಮಂಡಿಸ್ತಾರೋ…

    ಅವರಿಗೆ ಚುನಾವಣೆ ಗೆಲ್ಲೋಕೆ ಹಣ ಬೇಕು ಇಲ್ಲ ಅಂದ್ರೆ ಜನ ವೋಟ್ ಆಕೋಳ್ಳ ಸೋ ಅವರಿಗೆ ದುಡ್ಡು ಬೇಕು ಅದಕ್ಕೆ ವಿರುದ್ಧ ವಾಗಿರೋ ಎ ಮಾಸೂದೆ ಮಂಡಿಸ್ತಾರೋ ??

    ಎಲ್ಲದಕ್ಕೂ ಕಾಲವೇ ನಿರ್ಧರಿಸಬೇಕು!!

    ಉತ್ತರ
  5. P.Ramachandra, Ras Laffan- Qatar's avatar
    P.Ramachandra, Ras Laffan- Qatar
    ಏಪ್ರಿಲ್ 12 2011

    “ಅವರೆತ್ತರಕ್ಕೆ ಏರಲಾಗದಿದ್ದರೆ ತೆಪ್ಪಗಿರಿ…!” ಲೇಖನ ಓದುವಾಗ ನೆನಪಿಗೆ ಬಂದ ಕನ್ನಡ ಗಾದೆ “ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.”

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್

    ಉತ್ತರ
  6. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಏಪ್ರಿಲ್ 12 2011

    ಕು ಸ್ವಾ ಮಿ ಅವರೇ,

    ಈಗಲಾದರೂ ತಿಳಿದುಕೊಳ್ಳಿ ಜನ ನಿಮ್ಮನ್ನ ಯಾಕೆ ಬೆಂಬಲಿಸಲ್ಲ ಅಂತ! ನಿಮ್ಮ ಈ ಎಡಬಿಡ೦ಗಿತನ ಎಲ್ಲ ಜನರಿಗೂ ಗೊತ್ತು. ಇನ್ನು ನೀವು ಜನ ಬೆ೦ಬಲಿಸಲ್ಲ ಅಂತ ಅತ್ತೂ ಕರೆದು ಮಾಡುವುದರಲ್ಲಿ ಪ್ರಯೋಜನವಿಲ್ಲ !!! ಒಳ್ಳೇದು ನಿಸ್ವಾರ್ಥವಾಗಿ ಮಾಡಿದರೆ ಜನ ಖಂಡಿತಾ ಬೆ೦ಬಲಿಸುತ್ತಾರೆ..

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments