“ಸ್ಥಾನ” ಕೇಳಿಕೊಂಡು ಹೋಗಿ “ಮಾನ” ಕಳೆದುಕೊಂಡ ಯಡಿಯೂರಪ್ಪ

ಬಿಜೆಪಿ ರಾಷ್ಟೀಯ ಅದ್ಯಕ್ಷರಾದ ನಿತಿನ್ ಗಡ್ಕರಿ ಅವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಅವರನ್ನ ಬೇಟಿಯಾದ ಯಡ್ಡಿಯವರು “ಗಡ್ಕರಿ ಸಾಹೇಬ್ರೆ ಮುಖ್ಯಮಂತ್ರಿ ಸ್ಥಾನ ಕೊಡದಿದ್ರು ನಡಿತ್ರಿ ಆದ್ರೆ ರಾಜ್ಯಾದ್ಯಕ್ಷ ಸ್ಥಾನ ಕೊಡಿ ಸರ್ ” ಎಂದು ಗೋಗರೆದರು, ಆದರೆ ನಮ್ಮ ರಾಷ್ಟ್ರದ್ಯಕ್ಷರು ಸರ್ ನಿಮ್ಮ ಸಾಧನೆ ಅಪಾರ ನಿಮ್ಮ ನೇತೃತ್ವದಲ್ಲಿ ನಮ್ಮ ಮಂತ್ರಿಗಳ ಸಾಧನೆ ದೇಶ ವಿದೇಶದ ಪೇಪರ್ ಗಳ ಮುಖ್ಯಪುಟದಲ್ಲಿ ಬಂದಿದೆ ಹಾಗೆ ಒಬ್ಬ ಜೈಲ್ ನಿಂದ ಹೊರಬಂದರೆ ಮತ್ತೊಬ್ಬ ಜೈಲ್ ಕಡೆ ಹೋಗುತ್ತಿದ್ದ ಆದ್ದರಿಂದ ಸರ್ ನೀವ್ ಆರಾಮವಾಗಿ ವಿಶ್ರಾಂತಿ ಪಡೆದು ಮೊಮ್ಮಕ್ಕಳ ಜೊತೆ ಆಟಡ್ತಿರಿ ರಾಜಕೀಯ ಸಾಕು. ನಮ್ಮ ಸದಾನಂದ ಗೌಡರು ಬಿ ಜೆ ಪಿ ಯನ್ನ ಅಧಿಕಾರದಲ್ಲಿ ಮುಂದುವರಿಸಲಿ ಎಂದು ಹೇಳಿದ್ದೆ ತಡ ಯಡ್ಡಿ ಸಾಹೇಬರು ಬಲ ಪ್ರದರ್ಶನಕ್ಕೆ ತನ್ನ ಹುಟ್ಟು ಹಬ್ಬದ ದಿನ 70 ಕೆಜಿ ಕೇಕ್ ರೆಡಿ ಮಾಡಿಬಿಟ್ರು .. ಅದನ್ನ ತನ್ನ ಬೆಂಬಲಿಗರ ಹಾಗು ಅಭಿಮಾನಿ ದೇವರುಗಳ ಮುಂದೆ ಚೂರಿಯಿಂದ ಕಟ್ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮ ಬಹಳ ಜೋರಾಗೆ ನಡಿತು ಸ್ವಾಮೀಜಿಗಳು ಕೆಲವೊಂದು ಶಾಸಕರು ಆಪ್ತರು ಸೇರಿಕೊಂಡು ಹ್ಯಾಪಿ ಬರ್ತ್ ಡೇ ಹಾಡಿದ್ದೆ ಹಾಡಿದ್ದು ಯಡ್ಡಿ ಫುಲ್ ಕುಶಿ.
ಆದರೆ ಬರ್ತ್ ಡೇ ಪಾರ್ಟಿಗೆ ಬಂದವರೆಷ್ಟು ಜನ ? ಯಡಿಯೂರಪ್ಪ ಅವರಿಂದ ಎಲ್ಲ ರೀತಿಯ ಸಹಾಯ ಪಡೆದ ಅವರ ಆಪ್ತ ನೆಂಟರು ಯಡ್ಡಿ ಅವರನ್ನ ನಡು ಬೀದಿಯಲ್ಲಿ ಬಿಟ್ಟು ಹೋದರೆ ? ಅನ್ನೋ ಪ್ರಶ್ನೆಗಳು ಕಾಡತೊಡಗಿದೆ..ರಾಜಕೀಯ ಅನ್ನೋದು ಅಧಿಕಾರ ಇರುವ ತನಕ ಅಷ್ಟೇ ಅನ್ನೋದಕ್ಕೆ ಯಡ್ಡಿ ಅವರ ಜೀವನವೇ ಸಾಕ್ಷಿ ..ರಾಜಕೀಯದಲ್ಲಿ ಸ್ವಲ್ಪ ಯಾಮಾರಿದರು ತನ್ನ ಹಿಡಿತ ಸಡಿಲಗೊಳ್ಳುವುದು ಅನ್ನೋದಕ್ಕೆ ಯಡ್ಡಿ ಸಾಹೇಬರ ಜೀವನ ಪ್ರತ್ಯಕ್ಷ ಸಾಕ್ಷಿಯಾಗಿ ಕಾಣಿಸುತ್ತೆ .ಯಡಿಯೂರಪ್ಪ ಎಷ್ಟಾದರೂ ಸುಮ್ಮನೆ ಕೂರುವ ಮನುಷ್ಯನಲ್ಲ ರಾಜಕೀಯ ಆಟ ಯಡ್ಡಿ ಅವರಿಗೆ ಹುಟ್ಟಿನಿಂದಲೇ ಬಂದ ಕಲೆಯಾಗಿದೆ ಸದಾನಂದ ಗೌಡ ರ ಕುರ್ಚಿಯನ್ನ ಅಲುಗಾಡಿಸಲು ಏನೆಲ್ಲಾ ಮಾಡಬೇಕು ಅದನ್ನೆಲ್ಲ ಮಾಡುದರಲ್ಲಿ ನೋ ಡೌಟ್. ಮತ್ತಷ್ಟು ಓದು
ಗಡಾಫಿಯಿಲ್ಲದ ಲಿಬಿಯಾ
-ಉದಯ್ ಇಟಗಿ
ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು. ಇದರ ಬೆನ್ನಹಿಂದೆಯೇ ತಾತ್ಕಾಲಿಕವಾಗಿ ಹಂಗಾಮಿ ಸರಕಾರವೊಂದನ್ನು ರಚಿಸಿ ತತ್‍ಕ್ಷಣದ ಸವಾಲುಗಳನ್ನು ಎದುರಿಸುವದೇ ಅದರ ಮುಂದಿನ ಗುರಿಯಾಗಿತ್ತು. ಅದರಲ್ಲೂ ಬಹುಮುಖ್ಯವಾಗಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸುವದು ಮೊದಲ ಆದ್ಯತೆಯಾಗಿತ್ತು. ಹೀಗಾಗಿ ಕ್ರಾಂತಿಯ ಸಮಯದಲ್ಲಿ ಇಲ್ಲಿಂದ ತೆರೆವುಗೊಳಿಸಲಾದ ಬಹಳಷ್ಟು ವಿದೇಶಿ ವೈದ್ಯರುಗಳನ್ನು ಹಾಗೂ ವಿದೇಶಿ ಉಪನ್ಯಾಸಕರುಗಳನ್ನು ಮತ್ತೆ ವಾಪಾಸು ಕರೆಸಿಕೊಳ್ಳಬೇಕೆಂದು ಹಂಗಾಮಿ ಸರಕಾರ ಫರ್ಮಾನು ಹೊರಡಿಸಿತ್ತು. ಆ ಪ್ರಕಾರ ನನಗೆ ವೀಸಾ ಸಿಕ್ಕು ನಾನು ಜನೇವರಿ ೧೦ಕ್ಕೆ ಬೆಂಗಳೂರಿನಿಂದ ಲಿಬಿಯಾಕ್ಕೆ ಹಾರಿ ಬಂದಿದ್ದೆ. “ಎಮಿರೇಟ್ಸ್ ಏರ್ಲೈನ್ಸ್” ಲಿಬಿಯಾಕ್ಕೆ ಇನ್ನೂ ತನ್ನ ಸಂಚಾರವನ್ನು ಆರಂಭಿಸದೇ ಇದ್ದ ಕಾರಣ ನಾನು ಕೈರೋಗೆ ಬಂದು ಅಲ್ಲಿಂದ ‘ಈಜಿಪ್ಟ್ ಏರ್’ ಮೂಲಕ ನೇರವಾಗಿ ಬೆಂಗಾಜಿಗೆ ಬಂದಿಳಿದಿದ್ದೆ.
ಈ ಬೆಂಗಾಜಿ ಇಡಿ ಲಿಬಿಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಮೌಮರ್ ಗಡಾಫಿಯ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದಿದ ನೆಲ. ಇಲ್ಲಿಯ ಜನ ೨೦೦೬ ಫೆಬ್ರುವರಿ ೧೭ ರಂದು ಗಡಾಫಿಯ ವಿರುದ್ಧ ಬಂಡೆದ್ದಿದ್ದರು. ಆದರೆ ಆ ಹೋರಾಟವನ್ನು ಹತ್ತಿಕ್ಕುವಲ್ಲಿ ಗಡಾಫಿ ಯಶಸ್ವಿಯಾಗಿದ್ದ. ಆದರೆ ಮತ್ತೆ ಐದು ವರ್ಷಗಳ ನಂತರ ಅದೇ ನೆಲದ ಜನ ಅಂದರೆ ೨೦೧೧ ಫೆಬ್ರುವರಿ ೧೭ ರಂದು ಗಡಾಫಿ ವಿರುದ್ಧ ಹೋರಾಟಕ್ಕೆ ಇಳಿದರು. ಈ ಬಾರಿ ತಮ್ಮ ಹೋರಾಟವನ್ನು ಇಡಿ ಲಿಬಿಯಾದ ತುಂಬಾ ಒಂದು ದೊಡ್ಡಮಟ್ಟದ ಕ್ರಾಂತಿಯನ್ನಾಗಿ ತೀವ್ರಗೊಳಿಸುವಲ್ಲಿ ಯಶಸ್ವಿಯಾಗಿ ಬಲಿಷ್ಠ ಸರ್ವಾಧಿಕಾರಿ ಮೌಮರ್ ಗಡಾಫಿಯನ್ನು ಹೇಳಹೆಸರಿಲ್ಲದಂತೆ ನಾಶಮಾಡಿದರು. ಮತ್ತಷ್ಟು ಓದು
ಮೌನ
-ಮಾಲಿನಿ ಭಟ್
ಮೌನವಾಗಿರುವುದು ನನಗೇನು ಹೊಸದಲ್ಲ
ಭಾವನೆಗಳು ಸೋತಾಗ ನಾನಾಗುವುದು ಮೌನವೇ
ಮೌನವಾಗುವುದು ಅಂದರೆ
ನಾ ಮುನಿಸಿಕೊಂಡೆ ಎಂಬ ಅರ್ಥವಲ್ಲ
ಮೌನವೆಂದರೆ ನಾ ಮೂಕವಾಗಿದ್ದೇನೆ
ಎಂಬ ಸಂದೇಶವಲ್ಲ
ಕಣ್ಣು ಬರಿದಾದ ನೋಟ ಬೀರಿದಾಗ
ನಾನಾಗುವುದು ಮೌನವೇ
ಮೌನವೆಂಬುದು ಎಲ್ಲರಲ್ಲೂ
ಆವರಿಸುವ ಶಕ್ತಿ ಅಲ್ಲ , ಅದೊಂದು
ಸುಂದರ ಪದಗಳನು ಮೌನದಲ್ಲೇ
ಸ್ಪಂದಿಸಿ ಚೈತನ್ಯ ನಿಡೋ
ಅನುರಾಗದ ಸರಮಾಲೆ ………
* * * * * * *
ಬಿಜೆಪಿ ಆಡಳಿತದಡಿ ಶಿಕ್ಷಣ ಕ್ಶೇತ್ರ
-ಪ್ರಿಯಾಂಕ್ ಭಾರ್ಗವ್
ಕರ್ನಾಟಕ ರಾಜ್ಯಸರ್ಕಾರವು ಬಿಜೆಪಿ ಪಕ್ಷದ ತೆಕ್ಕೆಗೆ ಸಿಕ್ಕಾಗಲಿಂದ, ಕಲಿಕೆ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ, ಮಾಡಲಾಗುತ್ತಿದೆ ಕೂಡಾ. ಕಳೆದ ನಾಲ್ಕು ವರ್ಷಗಳಲ್ಲಿ ಮಾಡಲಾದ ಬದಲಾವಣೆಗಳು ಮತ್ತು ಅವುಗಳಿಂದಾಗಬಹುದಾದ ಪರಿಣಾಮಗಳ ಬಗ್ಗೆ ಇಲ್ಲಿ ಮಾತನಾಡಲಾಗಿದೆ.
ಶಿಕ್ಷಣದಲ್ಲಿ ತಾನು ಪಾಲಿಸುತ್ತಿರುವ ಭಾಷಾನೀತಿಯನ್ನು ಸಮರ್ಥಿಸಿಕೊಳ್ಳುವಲ್ಲಿ ಎಡವಿದ್ದು
ಕನ್ನಡ ಮಾಧ್ಯಮ ನಡೆಸುವುದಾಗಿ ಹೇಳುತ್ತಾ, ಇಂಗ್ಲೀಶ್ ಮಾಧ್ಯಮಗಳನ್ನು ನಡೆಸುತ್ತಿದ್ದ ಶಾಲೆಗಳನ್ನು ಮುಚ್ಚಲು ಸರಕಾರ ಮುಂದಾಗಿತ್ತು. ಶಾಲೆಗಳು ಕೋರ್ಟು ಮೆಟ್ಟಿಲೇರಿ, ಸುಪ್ರೀಮ್ ಕೋರ್ಟಿನಲ್ಲಿ ಈ ಬಗ್ಗೆ ವಿಚಾರಣೆ ಕೂಡಾ ನಡೆಯುತ್ತಿದೆ. ಸರ್ಕಾರದ ಕಡೆಯಿಂದ ಯಾವ ವಾದ ಮಂಡನೆಯಾಗುತ್ತಿದೆಯೋ ಗೊತ್ತಿಲ್ಲ, ಆದರೆ ಪತ್ರಿಕಗಳಲ್ಲಂತೂ “ಸರ್ಕಾರಕ್ಕೆ ಹಿನ್ನಡೆ, ಇಂಗ್ಲೀಶ್ ಶಾಲೆಗಳ ಗೆಲುವು” ಎಂಬಂತಹ ಸುದ್ದಿ ಆಗಾಗ ಬರುತ್ತಲೇ ಇದೆ. ಶಾಲೆಗಳು ಮಾಡಿದ ತಪ್ಪನ್ನು ತೋರಿಸುತ್ತಾ, “ತಾಯ್ನುಡಿಯಲ್ಲೇ ಕಲಿಕೆ ಒಳಿತು” ಎಂಬ ನೀತಿಯನ್ನು ಕರ್ನಾಟಕ ಸರ್ಕಾರ ಪಾಲಿಸಿಕೊಂಡು ಬಂದಿರುವುದನ್ನು ಹೇಳಿದ್ದರೂ, ತನ್ನ ನಡೆಯನ್ನು ಸಮರ್ಥಿಸಿಕೊಳ್ಳಬಹುದಿತ್ತು. ಆದರೆ, ಕೋರ್ಟಿನಲ್ಲಿ ಸರ್ಕಾರಕ್ಕೆ ಹಿನ್ನಡೆ ಎಂಬ ಸುದ್ದಿ ನೋಡಿದರೆ, ಸರ್ಕಾರವು ತನ್ನ ಭಾಷಾನೀತಿಯನ್ನು ಸಮರ್ಥಿಸಿಕೊಳ್ಳುವಲ್ಲಿ ಎಡವಿದಂತೆ ಕಾಣುತ್ತದೆ. ಬಿಜೆಪಿ ಸರ್ಕಾರದ ಇನ್ನೂ ಕೆಲವು ನಡೆಗಳ ಜೊತೆಗೆ ಹೋಲಿಸಿ ಈ ವಿಷಯವನ್ನು ನೋಡಿದಾಗ, ತಾಯ್ನುಡಿಯಲ್ಲಿ ಶಿಕ್ಷಣದ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇಲ್ಲವೇನೋ ಎಂದನಿಸುತ್ತದೆ.
ಮತ್ತಷ್ಟು ಓದು
ಸಂಸ್ಕೃತಿ ಸಂಕಥನ – 24 – ಗತ ಕಥೆಯ ಚರಿತ್ರೆ
-ರಮಾನಂದ ಐನಕೈ
ನಾವು ದಿನನಿತ್ಯ ಒಂದಲ್ಲೊಂದು ಸಂದರ್ಭ ದಲ್ಲಿ ಉಲ್ಲೇಖಿಸುವ ಚರಿತ್ರೆ ಅಥವಾ ಹಿಸ್ಟರಿ ಅಂದರೆ ಏನು? ನಾವು ಪಠ್ಯಗಳ ಮೂಲಕ ಚರಿತ್ರೆಯ ಅಭ್ಯಾಸ ಮಾಡುವಾಗ ಹಲವು ವ್ಯಾಖ್ಯೆಗಳನ್ನು ಕಂಠಪಾಠ ಮಾಡಿದ್ದೇವೆ. ಚರಿತ್ರೆ ಅಂದರೆ ಒಂದು ವಿಜ್ಞಾನ. ಏಕೆಂದರೆ ಗತಕಾಲದ ಬಗ್ಗೆ ವೈಜ್ಞಾನಿಕ ವಾಗಿ ಅಧ್ಯಯನ ನಡೆಸಿ ಸೆರೆಹಿಡಿದ ವಾಸ್ತವವೇ ಹಿಸ್ಟರಿ. ಚರಿತ್ರೆ ಅಂದರೆ ಗತಕಾಲದ ರಾಜಕೀಯ. ಚರಿತ್ರೆ ಅಂದರೆ ಗತಕಾಲದ ಸಮಾಜವಿಜ್ಞಾನ. ಹೀಗೆ ಚರಿತ್ರೆಯನ್ನು ಒಂದು ವಸ್ತುನಿಷ್ಠ ವಿಷಯ ಎಂಬಂತೆ ಬಿಂಬಿಸಿಕೊಂಡು ಬಂದಿದ್ದೇವೆ.
ಈಗ ಆಧುನಿಕ ಯುಗದ ನಮ್ಮ ಮನಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಎಲ್ಲ ಗತಕಾಲಕ್ಕೂ ಚರಿತ್ರೆ ಯನ್ನು ಕಟ್ಟಲಾಗುತ್ತಿದೆ. ಚರಿತ್ರೆಗೆ ಸಿಲುಕದ ಗತಕಾಲವನ್ನು ಅವಾಸ್ತವಿಕ ಅಥವಾ ಮೌಢ್ಯ ಎಂದು ಗೇಲಿ ಮಾಡುತ್ತೇವೆ. ಎಲ್ಲ ಗತಕಾಲವೂ ಏಕೆ ಚರಿತ್ರೆ ಯಾಗಲೇಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಚರಿತ್ರೆ ಅಂದರೆ ಏನು? ಇದು ಯಾವಾಗ ಹುಟ್ಟಿತು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.
267 ನೇ ನಂಬರಿನ ಕೋಣೆ
-ವಸಂತ್ ಕುಮಾರ್ ಆರ್ ಕೋಡಿಹಳ್ಳಿ
ಅದೊಂದು ಕಿರಿದಾದಕೋಣೆ, ಕೋಣೆಯ ಸುತ್ತಲೂ ಗಾಡಕತ್ತಲು ಕವಿದಿದೆ,. ಮಧ್ಯ ಭಾಗದಲ್ಲೊಂದು ಬೆಳಕು ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿದೆ. ಕೋಣೆಯ ನಾಲ್ಕೂ ಮೂಲೆಗಳಲ್ಲಿ ಯಾವುದೇ ಧನಿಯಿಲ್ಲ ತುಂಬಾ ನಿಶ್ಚಬ್ಧ ನಿಶ್ಚಲತೆ ಆವರಿಸಿದೆ. ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ?. ಗೋಡೆಗೆ ಕೈ ತಾಗಿಸುತ್ತೇನೆ, ತುಂಬಾ ಒರಟಾಗಿದೆ, ಅಲ್ಲಲ್ಲಿ ಕೆಂಪು ಕಲೆಗಳ ಗುರುತುಗಳಿವೆ. ಆ ಮಂದ ಬೆಳಕಿನಲ್ಲಿ ಗಾಯದ ಗುರುತುಗಳಂತೆ ಕಾಣುತ್ತವೆ. ಅವು ಕೆಂಪು ಕಲೆಯ ಗುರುತುಗಳೇ ಆದರೆ ಅವು ಇನ್ನೂ ಅಸಿಯಾಗಿ ಕೈಗೆ ಅಂಟುವ ಸ್ಥತಿಯಲ್ಲಿವೆ. ಬಹುಷಃ ಯಾರದೋ ರಕ್ತದ ಕಲೆಗಳಿರಬೇಕು. ಮುಂದೊಂದು ಭಾಗದ ಅಡಿಯಲ್ಲಿ ಎಂಥದ್ದೋ ಕಾಗದದ ಚೂರುಗಳು ಕೈತಾಗುತ್ತಿವೆ. ಇನ್ನೂ ಸ್ವಲ್ಪ ಹುಡುಕಿದಾಗ ಕಬ್ಬಿಣದ ಬಾಗಿಲೊಂದು ಸ್ವರ್ಷಿಸುತ್ತದೆ. ತುಂಬಾ ಉದ್ದವಾಗಿದೆ ಅದರ ಸರಳುಗಳುಗಳು. ಬಲಿಷ್ಟವಾದ ಕಬ್ಬಿಣದ ಬಾಗಿಲು. ಏನೂ ಅರ್ಥವಾದ ಸ್ಥತಿಯಿಂದ ನೋಡುತ್ತಿದ್ದೇನೆ. ಇಲ್ಲಿ ಕಬ್ಬಿಣದ ಬಾಗಿಲಾಕಿದೆ ಯಾವುದೀ ಕೋಣೆ ?
ಇಂಥ ಕೋಣೆಯನ್ನು ನನ್ನ ಜೀವಮಾನದಲ್ಲೇ ಎಲ್ಲೂ ನೋಡಲಿಲ್ಲವಲ್ಲ. ಇದಕ್ಕೆ ಉತ್ತರಿಸಲು ನನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ. ನನ್ನ ಕೋಣೆಯ ತುಂಬಾ ಪುಸ್ತಕಗಳು ತುಂಬಿರುತ್ತಿದ್ದವು, ಕಬ್ಬಿಣದ ಕುರ್ಚಿಯೊಂದಿರಬೇಕಿತ್ತು. ಅದರ ಪಕ್ಕದಲ್ಲಿ ಮರದ ಪೆಟ್ಟಿಗೆ. ಅದರ ಕೊನೆಯಲ್ಲೊಂದು ಗಾಜಿನ ಶೀಷೆ, ಅಂದರೆ ನನ್ನ ಲೇಖನಿಗೆ ಮಸಿಯನ್ನು ತುಂಬಿಸುತ್ತಿದ್ದ ಶೀಷೆ. ಮೇಲೊಂದು ಸೀಮೆ ಎಣ್ಣೆಯ ದೀಪ. ಕರೆಂಟ್ ಇಲ್ಲಾದಾಗ ಅಚ್ಚುತ್ತಿದ್ದ ದೀಪ. ಗೋಡೆಗೆ ತಗುಲಿಸಿದ್ದ ಕ್ಯಾಲೆಂಡರ್ರು. ಮಧ್ಯಭಾಗದಲ್ಲಿ ಹಳೆಯ ಎರಡು ಮಣ್ಣಿನ ಕಪಾಟುಗಳು, ಅದರೊಳಗೆ ಮುಚ್ಚಿಟ್ಟಿದ್ದ ಚಿಲ್ಲರೆ ನಾಣ್ಯಗಳು. ಕಥೆ ಕವನ ಬರೆದಿಡುತ್ತಿದ್ದ ಹಾಳೆಗಳು. ಯಾವೂದೂ ಸಹ ಕಾಣುತ್ತಿಲ್ಲ. ನನ್ನ ಕೋಣೆಯಲ್ಲಿ ಮಂದವಾಗಿ ಬೆಳಗುತ್ತಿದ್ದ ಹೈಮಾಸ್ ದೀಪ, ರೋಸ್ ಹುಡ್ ಮರದಿಂದ ತಯಾರಿಸಿದ್ದ ಮರದ ಬಾಗಿಲು ಯಾವುದೂ ಇಲ್ಲ.ಈ ಸ್ಥಳ ನನಗೆ ತೀರ ಹೊಸದಂತಿದೆ. ಅಂದರೆ ನಾನು ಓದುತ್ತಿದ್ದ (julius fuchik) “ಜ್ಯೂಲಿಯಸ್ ಫ್ಯೂಚಿಕ್ ”ರ ಕಥೆಯನ್ನು ನೆನಪಿಸುವ ಕೋಣೆಯ ಹಾಗೆ. ಅವರ 267 ನೇ ನಂಬರಿನ ಖಾರಾಗೃಹದ ಕೋಣೆಯಯಂತೆ. ಹೌದು ಅದು ತುಂಬಾ ಭಯಾನಕ ಕೋಣೆ. ಜೂಲಿಯಸ್ಸರನ್ನು ಕ್ಷಣ ಕ್ಷಣವೂ ಹಿಂಸಿಸಿ ವಧೆಮಾಡಿದ ಕೋಣೆ. ಖಂಡಿತ ಅದು ಸಾವಿನ ಕೋಣೆ. ಅವರ ಪುಸ್ತಕದಲ್ಲೇ ಓದಿದ್ದೇನೆ. ಅದು 267 ನೇ ನಂಬರಿನ ಕೋಣೆ. ಜೂಲಿಯಸ್ಸರು ತಮ್ಮ ಜೀವನದ ಕಟ್ಟ ಕಡೆಯ ಕ್ಷಣಗಳನ್ನು ಆ ಕೋಣೆಯಲ್ಲೇ ಕಳೆದಿದ್ದರು. ತುಂಬಾ ದಯಾನೀಯ ಸ್ಥಿತಿಯಲ್ಲೂ. ಅವರು ಸಾವನ್ನೂ ಸಹ ಸರಳವಾಗಿ ತೆಗೆದುಕೊಂಡಂತ ಮಹಾತ್ಮರು. ಅವರ ನೋವು – ಕಷ್ಟಗಳು ಯಾವುದನ್ನೂ ಲೆಕ್ಕಿಸದೆ. ಪಾನ್ ಕ್ರಾಟ್ ಜೈಲಿನಲ್ಲಿ “ಕೊನ್ ಲಿಕ್ಸಿ” ಎಂಬ ಕಾವಲುಗಾರನ ಸಹಾಯದೊಂದಿಗೆ ರಹಸ್ಯವಾಗಿ ತರಿಸಿಕೊಂಡ “ಪೆನ್ಸಿಲ್ ಮತ್ತು ಕಾಗದ”ದ ಚೂರುಗಳಿಂದ ನಾಜಿ ಜೈಲೆಂಬ ಪಿಶಾಚ ಗೃಹದಲ್ಲಿನ ಕಂಡುಂಡ ಪ್ರತ್ಯಕ್ಷ ಅನುಭವದ ದಾಖಲು. ತನ್ನ ಕಟ್ಟ ಕಡೆಯ ದಿನಗಳ ಯಾತನಾ ದಿನಚರಿಯ ಟಿಪ್ಪಣಿಗಳ ಸಂಗ್ರಹ. ತನ್ನ ಪತ್ನಿಯಾದ ಆಗಸ್ಟಿನಾ ಫ್ಯೂಚಿಕ್ ಪ್ರಕಟಿಸಿದ್ದ ಪುಸ್ತಕ. ಹೌದು ಅದೇ ಪುಸ್ತಕದಲ್ಲಿ ಬರುವಂತ ಕೋಣೆ. ಅದರಲ್ಲಿ ಕೆಲವು ಘಟನೆಗಳು ನನ್ನ ಕಣ್ಣಮುಂದೆ ಸುಳಿದಾಡಿತ್ತವೆ ಜೂಲಿಯಸ್ ಫ್ಯೂಚಿಕ್ ರು ತಮ್ಮ ಸಮಗ್ರ ಬದುಕನ್ನೇ ಸಮರ್ಪಿಸಿಕೊಂಡ ಮಹಾ ಕೃತಿಯ ಕೊನೆಯ ಭಾಗದ ಅಧ್ಯಾಯವದು. ಆ ಪುಸ್ತಕವನ್ನು ಓದುತ್ತಿದ್ದ ಪ್ರತಿ ಬಾರಿಯೂ ನನ್ನ ಕಣ್ಣುಗಳು ಹನಿಗೂಡುತ್ತವೆ. ಕಾರಣ ಅವರನ್ನು ಅಷ್ಟೊಂದು ದಾರುಣ ಹಿಂಸೆಗೆ ಗುರಿಪಡಿಸಿ, ಪ್ರತಿಬಾರಿಯೂ ಚಿತ್ರ ವಧೆಮಾಡಿ, ಪ್ರಜ್ಞಾಶೂನ್ಯ ಸ್ಥಿತಿಯ ತನಕ ಬಡಿದು, ಕೊನೆಗೆ ಸಾಯಿಸಿಯೇ ಬಿಟ್ಟದ್ದು. ಆ ಘನ ಘೋರ ಚಿತ್ರವಧೆಯನ್ನು ನೆನೆಪಿಸಿಕೊಂಡರೆ ಹೃದಯ ತುಂಬಿಬರುತ್ತದೆ. ಯಾವುದೇ ಎದುರಾಳಿಗಳಿಗೂ ಅಂಥ ಗತಿ ಬರಬಾರದೆಂದುಕೊಳ್ಳುತ್ತೇನೆ. ನಿಮಗೆ ಗೊತ್ತಿಲ್ಲವೇನೋ!.
ಸ್ಕ್ಯಾನ್ ಮಾಡಿರುವ ಕಡತ ಅಥ್ವಾ ಯಾವುದೇ ಚಿತ್ರದಲ್ಲಿರುವ ಅಕ್ಷರಗಳನ್ನು ನಕಲಿಸಿ
-ಆದೇಶ್ ಕುಮಾರ್
ಇದನ್ನು ಉಪಯೋಗಿಸಲು ನೀವು ನಿಮ್ಮ ಗಣಕದಲ್ಲಿ ಮೈಕ್ರೊಸಾಫ್ಟ್ Office 2007 ಅನ್ನು ಇನ್ಸ್ಟಾಲ್ ಮಾಡಿರಬೇಕು
ಹರೆಯದ ಗಾಳಕ್ಕೆ ಸಿಕ್ಕ ಮೀನು


ಮೂಲಭೂತವಾದಿಗಳ ಮನಸ್ಸುಗಳು ಬದಲಾಗಲಿ ….
(ಇತ್ತೀಚೆಗೆ ನಿಧನರಾದ ಸಚಿವ ಡಾ|| ವಿ.ಎಸ್. ಆಚಾರ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮೌಲ್ವಿಯೊಬ್ಬರು ಆಚಾರ್ಯರ ಭಾವಚಿತ್ರಕ್ಕೆ ಹೂ ಹಾಕಿದನ್ನು ಕೆಲವರು ವಿರೋಧಿಸಿದ್ದರು. ಈ ವಿಷಯವನ್ನು ಚರ್ಚಿಸಿ, ಉತ್ತರ ನೀಡಿದ ವಿಕೆ ನ್ಯೂಸ್ ಬಳಗ ಲೇಖನವೊಂದನ್ನು ಬರೆದಿದತ್ತು. ಆ ಲೇಖನಕ್ಕೆ ಸಾಮಾಜಿಕ ಸಾಮರಸ್ಯದ ಮಹತ್ವ ಇರುವುದರಿಂದ ನಿಲುಮೆಯಲ್ಲಿ ಮರುಪ್ರಕಟಿಸಲಾಗಿದೆ. ವಿಕೆ ನ್ಯೂಸ್ ನ ವಿಚಾರವೇ ನಿಲುಮೆಯ ನಿಲುವೂ ಆಗಿದೆ. ವಿಕೆ ನ್ಯೂಸ್ ನಲ್ಲಿ ಪ್ರಕಟವಾದ ಬರಹ ಮತ್ತು ಕ.ರ.ವೇ ನಲ್ನುಡಿಯ ಸಂಪಾದಕರಾದ ಶ್ರೀ ದಿನೇಶ್ ಕುಮಾರ್ ಅವರ ಫೇಸ್ ಬುಕ್ ವಾಲ್ನಲ್ಲಿ ಈ ಕುರಿತು ನಡೆದ ಚರ್ಚೆ ಮತ್ತು ಪ್ರತಿಕ್ರಿಯೆಗಳನ್ನು ನಿಲುಮೆಯ ಓದುಗರಿಗಾಗಿ ಪ್ರಕಟಿಸಲಾಗಿದೆ – ನಿಲುಮೆ)
ಇತ್ತೀಚೆಗೆ ನಿಧನರಾದ ಕರ್ನಾಟಕದ ಸಚಿವ ವಿ.ಎಸ್. ಆಚಾರ್ಯ ಅವರಿಗೆ ದೇಶದ ವಿವಿಧೆಡೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿಯೂ ಶ್ರದ್ದಾಂಜಲಿ ಸಭೆ ನಡೆದವು . ಈ ಮೂಲಕ ಅಗಲಿದ ನಮ್ಮ ರಾಜ್ಯದ ಸಚಿವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕೆಲಸವನ್ನು ವಿವಿಧ ಸಂಘಟನೆಗಳು ಮಾಡಿದವು . ಉಡುಪಿ ಹಾಗೂ ಮಂಗಳೂರಿನಲ್ಲೂ ಬೃಹತ್ ಸಭೆ ನಡೆದು ವಿ.ಎಸ್. ಆಚಾರ್ಯ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಭೆಯಲ್ಲಿ ಸಮಾಜದ ವಿವಿಧ ವರ್ಗಗಳ ನಾಗರೀಕರು , ಸರ್ಕಾರಿ ಅಧಿಕಾರಿಗಳು , ವಿವಿಧ ಧರ್ಮಗಳ ಮುಖಂಡರು ಪಾಲ್ಗೊಂಡಿದ್ದರು .
ಈ ಪೈಕಿ ಮುಸ್ಲಿಂ ಸಮುದಾಯದಿಂದ ಮುಸ್ಲಿಂ ಧರ್ಮಗುರುಗಳಾದ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪುತ್ತೂರಿನ ಕಲ್ಲೇಗ ದಾರಿಮಿ ಮತ್ತು ಎಸ್.ಎಸ್.ಎಫ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ , ರಾಜ್ಯ ವಕ್ಫ್ ಮಂಡಳಿ ಸದಸ್ಯರೂ ಆದ ಶಾಫಿ ಸಆದಿ ನಂದಾವರ ಸಹ ಭಾಗವಹಿಸಿ ಅಗಲಿದ ಮಂತ್ರಿಗಳಿಗೆ ಶ್ರದ್ದಾಂಜಲಿ ಸಲ್ಲಿಸಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಈ ರೀತಿ ಶ್ರದ್ದಾಂಜಲಿ ಕಾರ್ಯಕ್ರಮಗಳನ್ನು ಬಹಳ ಹಿಂದಿನಿಂದಲೂ ಆಯೋಜಿಸಲಾಗುತ್ತಿದೆ. ಆದರೆ ಈ ಶ್ರದ್ದಾಂಜಲಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗವಹಿಸಿದ ಕಾರಣ ಮುಂದಿಟ್ಟುಕೊಂಡು ಕೆಲ ಮೂಲಭೂತವಾದಿ ಮನಸ್ಸುಗಳು ಸಾಮಾಜಿಕ ತಾಣಗಳಲ್ಲಿ ಈ ಧರ್ಮಗುರುಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ . ಇದಕ್ಕಾಗಿ ಈ ಕುರಿತು ಇಲ್ಲಿ ಬರೆಯಬೇಕಾಗಿದೆ.
ಚಿಂಗಾರಿ
– ಫಿಲ್ಮಿ ಪವನ್
ಫೋರಂ ಮಾಲ್ ಅಲ್ಲಿ ಮಾಸ್ ಸಿನಿಮಾ ನೋಡೋದಂದ್ರೆ ಮಜಾನೆ ಇರಲ್ಲ ಬಿಡಿ, ಸುತ್ತ ಮುತ್ತ ಆಂಟಿಗಳು, ಅಂಕಲ್ಗಳು, ಲವರ್ಸ್ಗಳು. ಅದ್ರಲ್ಲು ದರ್ಶನ್ ಸಿನಿಮಾ ಅಂದ್ರೆ ಇನ್ನು ಉರ್ದೋಗುತ್ತೆ, ಪಂಚಿಂಗ್ ಡೈಲಾಗು ಬಂದ್ರೆ ಒಂದು ಶಿಲ್ಲೆ ಹೊಡ್ಯೋದು ಇಲ್ಲ ಯಾರುವೆ 😦 ಆದ್ರೆ ಏನ್ ಮಾಡೋದು ಈ ಹುಡುಗೀರು ಬಿಡ್ಲಿಲ್ಲ. ಫೋರಂ ಪಿ.ವಿ.ಅರ್. ಅಂತ ಚಿಂಗಾರಿ ಗೆ ಕರ್ಕೊಂಡೋಗಿದ್ರು ಮೊದ್ಲೇ ಬಾಸ್ ಸಿನಿಮ, ಎಲ್ಲಾದ್ರು ಮಾಸ್ ಆಗಿರೋ ಚಿತ್ರಂದಿರದಲ್ಲಿ ಕೂತು ಮಾಸ್ ಆಗಿ ಅರ್ಧ ಕಿಲೋ ಚಿಪ್ಸ್ ಮತ್ತೆ ೨ ಲೀಟರ್ ಪೆಪ್ಸಿ ೧ ಪ್ಯಾಕ್ ಕಿಂಗ್ ಇಟ್ಕೊಂಡು ಸಿನಿಮಾ ನೋಡೊಣ ಒಳ್ಳೊಳ್ಳೆ ಪಂಚಿಂಗ್ ಡೈಲಾಗ್ ಹೊಡೆದಾಗ ಶಿಲ್ಲೆ ಹೊಡ್ಯಾಣ ಮಾಸ್ ಸಾಂಗ್ ಗೆ ಪರದೆ ಬಳಿ ಹೋಗಿ ಸ್ಟೆಪ್ ಹಾಕೋಣ ಅನ್ನೋ ಆಸೆಗೆಲ್ಲಾ ತಣ್ಣೀರು ಬಿದ್ದಿತ್ತು.ಇನ್ನೊಂದು ವಿಷಯ ಅಂದ್ರೆ ಟಿಕೆಟ್ ಬೆಲೆ ಬೇರೆ ಜಾಸ್ತಿ ಕಣ್ರಿ 😦
ಈ ಸಿನಿಮಾದ ಒಪೆನಿಂಗೇ ವಿಶೇಷವಿತ್ತು, ಯಾಕಂದ್ರೆ ಯಾವುದೇ ಸಿನಿಮಾದ ಟೈಟಲ್ ಕಾರ್ಡಲ್ಲಿ ತಾಂತ್ರಿಕ ವರ್ಗದವರ ಹೆಸರು ಮಾತ್ರ ಹಾಕ್ತಿದ್ರು. ಆದ್ರೆ ಈ ಸಿನಿಮಾದಲ್ಲಿ ಅವರ ಫೋಟೊ ಸಹ ನೋಡಿ ಖುಶಿ ಆಯ್ತು.ಪ್ರತಿಯೊಬ್ಬ ತಾಂತ್ರಿಕ ವರ್ಗದವರ ಭಾವಚಿತ್ರ ಅವರ ಹೆಸರಿನೊಂದಿಗೆ ಬಂದಾಗ ಖುಶಿ ಆಯ್ತು. ತಾಂತ್ರಿಕ ವರ್ಗದವರಿಗೆ ಅಷ್ಟು ಪ್ರಾಮುಖ್ಯತೆ ಕೊಟ್ಟಿರುವ ನಿರ್ದೇಶಕ ಹರ್ಷ ಅವರಿಗೆ ಕುಡೋಸ್. ಮತ್ತಷ್ಟು ಓದು