ವಿಷಯದ ವಿವರಗಳಿಗೆ ದಾಟಿರಿ

Archive for

15
ಫೆಬ್ರ

15
ಫೆಬ್ರ

ಪ್ರಾದೇಶಿಕ ಪಕ್ಷಗಳಿಗೆ ಇಲ್ಲಿ ನೆಲೆಯಿಲ್ಲ

-ರಾಕೇಶ್ ಎನ್ ಎಸ್

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿ ರಾಜಕೀಯವಾಗಿ ವಿಶೇಷ ಆದ್ಯತೆಯಿದೆ. ಆ ರಾಜ್ಯಗಳಲ್ಲಿನ ರಾಜಕೀಯ ಸಂರಚನೆ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಅಥವಾ ಸಂಚಲನ ಸೃಷ್ಟಿಸುವ ಆವುಗಳ ಸಾಮರ್ಥ್ಯದಿಂದಾಗಿಯೇ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಏನನ್ನೂ ಬೇಕಾದರೂ ನಾವು ಕಿತ್ತುಕೊಳ್ಳುತ್ತೇವೆ ಎಂಬ ದಾರ್ಷ್ಟ್ಯ ಅನಾಮತ್ತಾಗಿಯೇ ಸಿಕ್ಕಿದೆ. ಹಾಗೆಯೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗಳು ಕೂಡ ತಮ್ಮ ’ಗೌರವ’ ಮೂರಾಬಟ್ಟೆಯಾದರೂ ಪರವಾಗಿಲ್ಲ ಆ ರಾಜ್ಯಗಳ ತಂಟೆಗೆ ಮಾತ್ರ ಹೋಗದೆ ಅಲ್ಲಿನ ನಾಯಕರನ್ನು ಓಲೈಸಿಕೊಂಡೇ ರಾಜಕಾರಣ ಮಾಡುತ್ತವೆ.ಇದಕ್ಕೆಲ್ಲ ಕಾರಣವೇನು? ಕರ್ನಾಟಕದಲ್ಲಿರದ್ದು ಆ ರಾಜ್ಯಗಳಲ್ಲಿ ಏನಿದೆ? ನಮ್ಮ ರಾಜ್ಯದೊಳಗೆ ಘರ್ಜಿಸುವ ಸಿಂಹಗಳಿಗೆ ರಾಜ್ಯದ ಗಡಿ ದಾಟಿದೊಡನೆ ಕವಡೆ ಕಿಮ್ಮತ್ತು ಸಿಗದಿರಲು ಕಾರಣವೇನು? ದೆಹಲಿಯಲ್ಲಿ ರಾಜ್ಯದ ನೋವಿಗೆ ದನಿ ಸಿಗುತ್ತಿಲ್ಲವೇಕೆ ಅಥವಾ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅವಿರತವಾಗಿ ಅನ್ಯಾಯ ಏಕೆ ಆಗುತ್ತಿದೆ? ಇದಕ್ಕಿರುವ ಏಕೈಕ ಉತ್ತರ ನಮ್ಮಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಇಲ್ಲದಿರುವುದು.ತನ್ನ ರಾಜ್ಯದ ಹಿತ ಕಾಯುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ರಾಜ್ಯ ಎಂಬ ಹೆಗ್ಗಳಿಕೆ ತಮಿಳುನಾಡಿಗೆ ಸುಮ್ಮ ಸುಮ್ಮನೆ ಸಿಕ್ಕಿಲ್ಲ. ಅಲ್ಲಿನ ಎರಡು ಪ್ರಬಲ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಎದುರು ಹಾಕಿಕೊಳ್ಳುವ ಧೈರ್ಯ ರಾಷ್ಟ್ರೀಯ ಪಕ್ಷಗಳಿಗಿಲ್ಲ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹುಟ್ಟಿಕೊಂಡದ್ದು ಮತ್ತು ಪ್ರಾದೇಶಿಕ ಅನನ್ಯತೆಯನ್ನು ಉಳಿಸುವುದಕ್ಕಾಗಿನ ಹೋರಾಟ ಮತ್ತು ಲಾಬಿ ರಾಜಕಾರಣ ಹುಟ್ಟಿಕೊಂಡದ್ದೆ ತಮಿಳುನಾಡಿನಿಂದ.  ಮತ್ತಷ್ಟು ಓದು »