ವಿಷಯದ ವಿವರಗಳಿಗೆ ದಾಟಿರಿ

Archive for

24
ಫೆಬ್ರ

ಮೂಲಭೂತವಾದಿಗಳ ಮನಸ್ಸುಗಳು ಬದಲಾಗಲಿ ….

(ಇತ್ತೀಚೆಗೆ ನಿಧನರಾದ ಸಚಿವ ಡಾ|| ವಿ.ಎಸ್. ಆಚಾರ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮೌಲ್ವಿಯೊಬ್ಬರು ಆಚಾರ್ಯರ ಭಾವಚಿತ್ರಕ್ಕೆ ಹೂ ಹಾಕಿದನ್ನು ಕೆಲವರು ವಿರೋಧಿಸಿದ್ದರು. ಈ ವಿಷಯವನ್ನು ಚರ್ಚಿಸಿ, ಉತ್ತರ ನೀಡಿದ ವಿಕೆ ನ್ಯೂಸ್ ಬಳಗ ಲೇಖನವೊಂದನ್ನು ಬರೆದಿದತ್ತು. ಆ ಲೇಖನಕ್ಕೆ ಸಾಮಾಜಿಕ ಸಾಮರಸ್ಯದ ಮಹತ್ವ ಇರುವುದರಿಂದ ನಿಲುಮೆಯಲ್ಲಿ ಮರುಪ್ರಕಟಿಸಲಾಗಿದೆ. ವಿಕೆ ನ್ಯೂಸ್ ನ ವಿಚಾರವೇ ನಿಲುಮೆಯ ನಿಲುವೂ ಆಗಿದೆ. ವಿಕೆ ನ್ಯೂಸ್ ನಲ್ಲಿ ಪ್ರಕಟವಾದ ಬರಹ ಮತ್ತು ಕ.ರ.ವೇ ನಲ್ನುಡಿಯ ಸಂಪಾದಕರಾದ ಶ್ರೀ ದಿನೇಶ್ ಕುಮಾರ್ ಅವರ ಫೇಸ್ ಬುಕ್ ವಾಲ್ನಲ್ಲಿ ಈ ಕುರಿತು ನಡೆದ ಚರ್ಚೆ ಮತ್ತು ಪ್ರತಿಕ್ರಿಯೆಗಳನ್ನು ನಿಲುಮೆಯ ಓದುಗರಿಗಾಗಿ ಪ್ರಕಟಿಸಲಾಗಿದೆ – ನಿಲುಮೆ) 

ಇತ್ತೀಚೆಗೆ ನಿಧನರಾದ ಕರ್ನಾಟಕದ ಸಚಿವ ವಿ.ಎಸ್. ಆಚಾರ್ಯ ಅವರಿಗೆ  ದೇಶದ ವಿವಿಧೆಡೆ ಮತ್ತು ಗಲ್ಫ್ ರಾಷ್ಟ್ರಗಳಲ್ಲಿಯೂ ಶ್ರದ್ದಾಂಜಲಿ ಸಭೆ ನಡೆದವು . ಈ ಮೂಲಕ ಅಗಲಿದ ನಮ್ಮ ರಾಜ್ಯದ ಸಚಿವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕೆಲಸವನ್ನು ವಿವಿಧ ಸಂಘಟನೆಗಳು ಮಾಡಿದವು . ಉಡುಪಿ ಹಾಗೂ ಮಂಗಳೂರಿನಲ್ಲೂ ಬೃಹತ್ ಸಭೆ ನಡೆದು ವಿ.ಎಸ್. ಆಚಾರ್ಯ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಭೆಯಲ್ಲಿ ಸಮಾಜದ ವಿವಿಧ ವರ್ಗಗಳ ನಾಗರೀಕರು , ಸರ್ಕಾರಿ ಅಧಿಕಾರಿಗಳು , ವಿವಿಧ ಧರ್ಮಗಳ ಮುಖಂಡರು ಪಾಲ್ಗೊಂಡಿದ್ದರು .

ಈ ಪೈಕಿ ಮುಸ್ಲಿಂ ಸಮುದಾಯದಿಂದ ಮುಸ್ಲಿಂ ಧರ್ಮಗುರುಗಳಾದ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪುತ್ತೂರಿನ ಕಲ್ಲೇಗ ದಾರಿಮಿ ಮತ್ತು ಎಸ್.ಎಸ್.ಎಫ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ , ರಾಜ್ಯ ವಕ್ಫ್ ಮಂಡಳಿ ಸದಸ್ಯರೂ ಆದ ಶಾಫಿ ಸಆದಿ ನಂದಾವರ ಸಹ ಭಾಗವಹಿಸಿ ಅಗಲಿದ  ಮಂತ್ರಿಗಳಿಗೆ ಶ್ರದ್ದಾಂಜಲಿ  ಸಲ್ಲಿಸಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಈ ರೀತಿ ಶ್ರದ್ದಾಂಜಲಿ ಕಾರ್ಯಕ್ರಮಗಳನ್ನು ಬಹಳ ಹಿಂದಿನಿಂದಲೂ ಆಯೋಜಿಸಲಾಗುತ್ತಿದೆ. ಆದರೆ ಈ ಶ್ರದ್ದಾಂಜಲಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗವಹಿಸಿದ ಕಾರಣ ಮುಂದಿಟ್ಟುಕೊಂಡು ಕೆಲ ಮೂಲಭೂತವಾದಿ ಮನಸ್ಸುಗಳು ಸಾಮಾಜಿಕ ತಾಣಗಳಲ್ಲಿ ಈ ಧರ್ಮಗುರುಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ . ಇದಕ್ಕಾಗಿ ಈ ಕುರಿತು ಇಲ್ಲಿ ಬರೆಯಬೇಕಾಗಿದೆ.

ಮತ್ತಷ್ಟು ಓದು »

24
ಫೆಬ್ರ

ಚಿಂಗಾರಿ

– ಫಿಲ್ಮಿ ಪವನ್

ಫೋರಂ ಮಾಲ್ ಅಲ್ಲಿ ಮಾಸ್ ಸಿನಿಮಾ ನೋಡೋದಂದ್ರೆ ಮಜಾನೆ ಇರಲ್ಲ ಬಿಡಿ, ಸುತ್ತ ಮುತ್ತ ಆಂಟಿಗಳು, ಅಂಕಲ್ಗಳು, ಲವರ್ಸ್ಗಳು. ಅದ್ರಲ್ಲು ದರ್ಶನ್ ಸಿನಿಮಾ ಅಂದ್ರೆ ಇನ್ನು ಉರ್ದೋಗುತ್ತೆ, ಪಂಚಿಂಗ್ ಡೈಲಾಗು ಬಂದ್ರೆ ಒಂದು ಶಿಲ್ಲೆ ಹೊಡ್ಯೋದು ಇಲ್ಲ ಯಾರುವೆ 😦 ಆದ್ರೆ ಏನ್ ಮಾಡೋದು ಈ ಹುಡುಗೀರು ಬಿಡ್ಲಿಲ್ಲ. ಫೋರಂ ಪಿ.ವಿ.ಅರ್. ಅಂತ ಚಿಂಗಾರಿ ಗೆ ಕರ್ಕೊಂಡೋಗಿದ್ರು ಮೊದ್ಲೇ ಬಾಸ್ ಸಿನಿಮ, ಎಲ್ಲಾದ್ರು ಮಾಸ್ ಆಗಿರೋ ಚಿತ್ರಂದಿರದಲ್ಲಿ ಕೂತು ಮಾಸ್ ಆಗಿ ಅರ್ಧ ಕಿಲೋ ಚಿಪ್ಸ್ ಮತ್ತೆ ೨ ಲೀಟರ್ ಪೆಪ್ಸಿ ೧ ಪ್ಯಾಕ್ ಕಿಂಗ್ ಇಟ್ಕೊಂಡು ಸಿನಿಮಾ ನೋಡೊಣ ಒಳ್ಳೊಳ್ಳೆ ಪಂಚಿಂಗ್ ಡೈಲಾಗ್ ಹೊಡೆದಾಗ ಶಿಲ್ಲೆ ಹೊಡ್ಯಾಣ ಮಾಸ್ ಸಾಂಗ್ ಗೆ ಪರದೆ ಬಳಿ ಹೋಗಿ ಸ್ಟೆಪ್ ಹಾಕೋಣ ಅನ್ನೋ ಆಸೆಗೆಲ್ಲಾ ತಣ್ಣೀರು ಬಿದ್ದಿತ್ತು.ಇನ್ನೊಂದು ವಿಷಯ ಅಂದ್ರೆ ಟಿಕೆಟ್ ಬೆಲೆ ಬೇರೆ ಜಾಸ್ತಿ ಕಣ್ರಿ 😦

ಈ ಸಿನಿಮಾದ ಒಪೆನಿಂಗೇ ವಿಶೇಷವಿತ್ತು, ಯಾಕಂದ್ರೆ ಯಾವುದೇ ಸಿನಿಮಾದ ಟೈಟಲ್ ಕಾರ್ಡಲ್ಲಿ ತಾಂತ್ರಿಕ ವರ್ಗದವರ ಹೆಸರು ಮಾತ್ರ ಹಾಕ್ತಿದ್ರು. ಆದ್ರೆ ಈ ಸಿನಿಮಾದಲ್ಲಿ ಅವರ ಫೋಟೊ ಸಹ ನೋಡಿ ಖುಶಿ ಆಯ್ತು.ಪ್ರತಿಯೊಬ್ಬ ತಾಂತ್ರಿಕ ವರ್ಗದವರ ಭಾವಚಿತ್ರ ಅವರ ಹೆಸರಿನೊಂದಿಗೆ ಬಂದಾಗ ಖುಶಿ ಆಯ್ತು. ತಾಂತ್ರಿಕ ವರ್ಗದವರಿಗೆ ಅಷ್ಟು ಪ್ರಾಮುಖ್ಯತೆ ಕೊಟ್ಟಿರುವ ನಿರ್ದೇಶಕ ಹರ್ಷ ಅವರಿಗೆ ಕುಡೋಸ್. ಮತ್ತಷ್ಟು ಓದು »

24
ಫೆಬ್ರ

ಚಿತ್ರ ವಿಮರ್ಶೆ – ಪಿ ಎಸ್ ಐ ಲವ್ ಯು

-ಸಂದೀಪ್ ಎನ್

“I just want to see you

When youre all alone

I just want to catch you if I can

I just want to be there

When the morning light explodes

On your face it radiates

I cant escape

I love you till the end…”  ಎಂಬ ಹಿನ್ನೆಲೆ ಗಾಯನದೊಂದಿಗೆ, ಇಬ್ಬರು ಯುವ ಜೋಡಿಗಳಾದ  Holly ಮತ್ತು Gerryಯ ನಡುವಿನ ಸರಸ/ವಿರಸದ  ಸಂಬಾಷಣೆಯೊಂದಿಗೆ ಚಿತ್ರವನ್ನು Richard Lagravenese ನಿರ್ದೇಶಿಸಿದ್ದಾರೆ. ಚಿತ್ರವೂ 2004 ನೇ ಇಸವಿಯಲ್ಲಿ Ceclia Ahern  ಎಂಬ Irish ಕವಿ ಬರೆದ  ಕಾದಂಬರಿ ಆಧಾರಿತವಾಗಿದೆ.

ಮತ್ತಷ್ಟು ಓದು »