ವಿಷಯದ ವಿವರಗಳಿಗೆ ದಾಟಿರಿ

Archive for

17
ಫೆಬ್ರ

ಐದು ತಿಂಗಳ ಹಸುಗೂಸಿಗೆ ಹೃದ್ರೋಗ, ಸಹಾಯ ಮಾಡಿ

– ದಟ್ಸ್ ಕನ್ನಡ.ಕಾಂ

ಬಡತನಕ್ಕೆ ನೂರಾರು ಕಷ್ಟಗಳು, ಆದರೆ ಎದುರಿಸುವ ತಾಕತ್ತು ಬೇಕು ಅಂತಾರೆ. ಈ ದಂಪತಿಗಳನ್ನು ನೋಡಿದರೆ ತಮ್ಮ ಮಗುವಿಗೆ ಇರುವ ಹೃದಯ ಸಂಬಂದಿ ಕಾಯಿಲೆಯನ್ನು ಎದುರಿಸುವ ತಾಕತ್ತು ಯಾವ ರೀತಿಯಲ್ಲೂ ಇಲ್ಲದಾಗಿ ಕಂಗಾಲಾಗಿದ್ದಾರೆ. ಕೇವಲ 5 ತಿಂಗಳ ಹಸುಗೂಸಿಗೆ ಚಿಕಿತ್ಸೆ ಕೊಡಿಸಲಾಗದೆ ಅಸಹಾಯಕರಾಗಿ ಕುಳಿತಿರುವ ಮನಮಿಡಿಯುವ ಕಥೆಯಿದು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಮುದ್ದಪ್ಪ ಹಾಗೂ ನಿರ್ಮಲಾ ದಂಪತಿಗಳ ಏಕೈಕ ಮಗ ಶ್ರೀನಿವಾಸ (5 ತಿಂಗಳು) ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಜೀವನ ನಿರ್ವಹಣೆಗೆ ಕೂಲಿನಾಲಿ ಮಾಡಿಕೊಂಡಿರುವ ಈ ದಂಪತಿಗಳಿಗೆ ತಮ್ಮ ಮಗ ಜೀವ ಹಿಂಡುವ ರೋಗಕ್ಕೆ ತುತ್ತಾಗಿರುವುದು ಆಕಾಶ ಕಳಚಿ ಬಿದ್ದಂತಾಗಿದೆ.

ಹೊಟ್ಟೆಪಾಡಿಗಾಗಿ ಮುಂಬೈ, ಬೆಂಗಳೂರು, ಪೂನಾ, ಅಂತ ಊರೂರು ತಿರುಗುವ ಈ ದಂಪತಿಗಳಿಗೆ ವಾಸಕ್ಕೆ ಒಂದು ಯೋಗ್ಯ ಮನೆ ಹಾಗೂ ಉದ್ಯೋಗವಿಲ್ಲದೆ ಅಲೆಮಾರಿ ಜೀವನ ನಡೆಸುತ್ತಿದ್ದು, ಈಗ ಮಗುವಿನ ಕಾಯಿಲೆ ಅವರನ್ನು ಇನ್ನಷ್ಟು ಕುಸಿಯುವಂತೆ ಮಾಡಿದೆ. ಅಲೆಮಾರಿಗಳಾದ್ದರಿಂದ ರೇಶನ್ ಕಾರ್ಡ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಹಾಗಾಗಿ ಉಚಿತ ವೈದ್ಯಕೀಯ ಸೌಕರ್ಯ ದೊರೆಯದೆ, ಹಣ ಹೊಂದಿಸಲು ಸಾಧ್ಯಾವಾಗದೆ ಕೈ ಸೋತು ಹೋಗಿವೆ ಅಂತಾರೆ ಮಗುವಿನ ತಂದೆ ಮುದ್ದಪ್ಪ.

Read more »

17
ಫೆಬ್ರ

ಕನ್ನಡಿಗರಿಗೆ ಮೋಸ ಮಾಡಿದ ಸಿಸಿಎಲ್ ಆಡಳಿತ ಮಂಡಳಿ !?

-ನಿತಿನ್ ರೈ ಕುಕ್ಕುವಳ್ಳಿ

ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಾವಳಿಗೆ ಸರಿಸಾಟಿಯಾಗೆ ಜನಪ್ರಿಯತೆ ಪಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಕೊನೆಯ ಹಂತದಲ್ಲಿ ವಿವಾದದ ಗೂಡಾಗಿ ಪರಿವರ್ತನೆಗೊಂಡು ವಿವಾದದಲ್ಲೇ ಅಂತ್ಯಗೊಂಡಿತು.

ಫೈನಲ್ ತನಕ ಅತ್ಯಂತ ಶುದ್ಧವಾಗಿ ನಡೆದುಕೊಂಡು ಬಂದ ಸಿಸಿಎಲ್ ಪಂದ್ಯಾವಳಿ ಫೈನಲ್ ನಲ್ಲಿ ಮಾತ್ರ ಆಡಳಿತ ಮಂಡಳಿ ನಡೆದುಕೊಂಡ ರೀತಿ ಕನ್ನಡಿಗರನ್ನ ಸೋಲಿಸಲು ಪೂರ್ವ ತಯಾರಿ ಮಾಡಿದಂತಿತ್ತು. ಪಂದ್ಯ ಪ್ರಾರಂಭಗೊಳ್ಳುವುದಕ್ಕಿಂತ ಮುಂಚೆನೇ ಇದಕ್ಕೆಲ್ಲ ಸಿದ್ದತೆಗಳನ್ನ ಆಡಳಿತ ಮಂಡಳಿ ಮಾಡಿದಂತಿತ್ತು. ಪಂದ್ಯ ಸರಿಯಾದ ಸಮಯಕ್ಕಿಂತ ಸುಮಾರು ಎರಡು ತಾಸುಗಳಷ್ಟು ತಡವಾಗಿ ಪ್ರಾರಂಭಗೊಂಡದ್ದು, ಸುದೀಪ್ ಮತ್ತು ತಂಡ ಸರಿಯಾದ ಹೊತ್ತಿಗೆ ಬಂದು ಮೈದಾನದಲ್ಲಿ ಚೆನ್ನೈ ರೈನೋಸ್ ತಂಡದ ಆಟಗಾರರಿಗೆ ಕಾದು ಕುಳಿತು ಸುಸ್ತಾಗಿದ್ದರು. ಚೆನ್ನೈ ತಂಡ ಮೈದಾನ ಪ್ರವೇಶ ಮಾಡಿದ್ದು ಎರಡು ಗಂಟೆ ತಡವಾಗಿ ಇದರ ಬಗ್ಗೆ ಆಡಳಿತ ಮಂಡಳಿ ಕಿಂಚೀತು ಚಕಾರ ಎತ್ತಲಿಲ್ಲ ಯಾಕೆ ?, ಪಂದ್ಯ ಆರಂಭದ ನಂತರ ತಮಿಳು ನಟರ ತಂಡ ಪ್ರತಿ ಹಂತದಲ್ಲೂ ಕರ್ನಾಟಕದ ನಟರ ವಿರುದ್ದ ಜಿದ್ದಾಜಿದ್ದಿಗೆ ಬಿದ್ದಿತ್ತು. ಗುಂಪು ಸೇರಿ ಅಂಪೈರ್ ಗಳ ಮೇಲೆ ಒತ್ತಡ ತರುತ್ತಿದ್ದರು. ಸಕ್ರಮವಲ್ಲದ ರನೌಟ್ ತೀರ್ಪನ್ನು ಅಂಪೈರ್ ಗಳಿಂದ ಹೊರಡಿಸಿದ ನಂತರ, ಡೆಡ್ ಬಾಲ್ ಅನ್ನೋ ತೀರ್ಪಿಗೂ ಅವರು ಅವಕಾಶ ನೀಡಲಿಲ್ಲ. Read more »

17
ಫೆಬ್ರ

ಮೀಡಿಯಾದಲ್ಲಿ ಮೌಢ್ಯ

-ದಿನೇಶ್ ಕುಮಾರ್ ಎಸ್.ಸಿ.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮ…ಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ. ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ.

ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ. ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. Read more »