ವಿಷಯದ ವಿವರಗಳಿಗೆ ದಾಟಿರಿ

Archive for

23
ಫೆಬ್ರ

ಹೀಗೊಂದು ವೇದೋಕ್ತ ವಿವಾಹ

-ಕ.ವೆಂ.ನಾಗರಾಜ್

ಸುಮಾರು ಒಂದು ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಜಾತಿ ಬೇರೆಯಾದ್ದರಿಂದ ಎರಡೂ ಮನೆಯವರು ಪ್ರಾರಂಭದಲ್ಲಿ ಒಪ್ಪದಿದ್ದರೂ ಅವರ ಧೃಢ ನಿರ್ಧಾರದಿಂದಾಗಿ ಒಪ್ಪಿಗೆ ಸಿಕ್ಕಿತು. ಸುನಿಲನ ಇಚ್ಛೆಯಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಲಿವಿಯ ಸಮ್ಮತಿಸಿದಳು.

ವೇದೋಕ್ತ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿ ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಭೇಟಿಯಾದರು. ಅವರು ಒಲಿವಿಯಳನ್ನು ಆಕೆ ಇನ್ನುಮುಂದೆ ಸುನಿಲನಂತೆ ಸಸ್ಯಾಹಾರಿಯಾಗಿರಲು ಸಾಧ್ಯವೇ ಎಂದು ವಿಚಾರಿಸಿದರು. ಆಕೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಶರ್ಮರು ಹೇಳಿದರು -“ಆಹಾರ ಪದ್ಧತಿ ಬದಲಾಯಿಸಲು ನನ್ನ ಒತ್ತಾಯವಿಲ್ಲ. ಆದರೆ ಸಸ್ಯಾಹಾರಿಯಾಗಲು ನಿರ್ಧರಿಸಿದರೆ ಮಾತ್ರ ನಾನು ಮದುವೆ ಮಾಡಿಸುವೆ. ಇಲ್ಲದಿದ್ದರೆ ಬೇರೆಯವರ ಮಾರ್ಗದರ್ಶನದಲ್ಲಿ ಮದುವೆಯಾಗಬಹುದು. ನಿರ್ಧಾರವನ್ನು ಈ ಕೂಡಲೇ ತೆಗೆದುಕೊಳ್ಳಬೇಕಿಲ್ಲ. ನಿಧಾನವಾಗಿ ಯೋಚಿಸಿದ ನಂತರದಲ್ಲಿ ತಿಳಿಸಿ”. ನಂತರ ತಿಳಿಸುವುದಾಗಿ ಹೋದ ಅವರು ಕೆಲವು ದಿನಗಳ ನಂತರ ಮತ್ತೆ ಬಂದು ಶರ್ಮರನ್ನು ಭೇಟಿ ಮಾಡಿದರು. ಒಲಿವಿಯ ಇನ್ನುಮುಂದೆ ಸಸ್ಯಾಹಾರಿಯಾಗಿರಲು ನಿರ್ಧರಿಸಿದ್ದಳು.
ಮತ್ತಷ್ಟು ಓದು »

23
ಫೆಬ್ರ

ಆ ಪುಸ್ತಕದ ಕೊನೆಯ ಪುಟದಲ್ಲಿ ನಿಂತು…

-ಕಾಲಂ ೯

ಮಂಗಳೂರಿನಲ್ಲಿ ಅಶೋಕವರ್ಧನ್ ತಮ್ಮ ಅತ್ರಿ ಬುಕ್ ಸೆಂಟರ್ ನಿಲ್ಲಿಸ್ತಾರೆ ಎಂಬ ಸುದ್ದಿ ನೀವೂ ಓದಿರಬಹುದು. ಸ್ವತಃ ಅವರೇ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ. ಅವಧಿ, ದಟ್ಸ್ ಕನ್ನಡ….. ಈ ಬಗ್ಗೆ ಗಮನಸೆಳೆದಿವೆ. ಜೋಗಿ, ನಾಗತಿಹಳ್ಳಿ ಅತ್ರಿ ನಿರ್ಗಮನದ ಬಗ್ಗೆ ಪ್ರಸ್ತಾಪಿಸಿದ್ದಾರೆ.

೨೦೦೨ನೇ ಇಸವಿ ಇರಬೇಕು. ಕನ್ನಡ ಸಾಹಿತ್ಯದ ದಿಗ್ಗಜ ಹಾಮಾನಾ ತೀರಿಕೊಂಡಿದ್ದರು. ತಮ್ಮ ಮೈಸೂರಿನ ಮನೆ ’ಗೋಧೂಳಿ’ಯ ಪಡಸಾಲೆ, ರೂಮುಗಳನ್ನು ದಾಟಿ ಅಡುಗೆಮನೆಗೂ ನುಗ್ಗಿಬಿಡಬಹುದಾದಷ್ಟು ಪುಸ್ತಕ ಸಂಗ್ರಹಿಸಿಕೊಂಡವರು ಹಾಮಾನಾ. ತಮ್ಮ ವಿಲ್‌ನಲ್ಲಿ ಪುಸ್ತಕ ಸಂಗ್ರಹ ಧರ್ಮಸ್ಥಳದ ಹೆಗ್ಗಡೆಯವರಿಗೆ ಸಲ್ಲಬೇಕೆಂದು ಬರದಿಟ್ಟಿದ್ದರು. ಹಾಗೆ ಲಾರಿಗಟ್ಟಲೆ ಪುಸ್ತಕ ಮೈಸೂರಿನಿಂದ ಹೊರಟು ಉಜಿರೆಯ SDM ಕಾಲೇಜಿನ ಗ್ರಂಥಾಲಯದ ಅಟ್ಟ ತಲುಪಿಕೊಂಡಿತು.

ಹಾಮಾನಾರಲ್ಲಿ ಇಷ್ಟೊಂದು ಪುಸ್ತಕ ಸಂಗ್ರಹವಾಗಿದ್ದು ಹೇಗೆ? ಇದಕ್ಕೆ ಉತ್ತರ ಎಂಬಂತೆ ಅಶೋಕವರ್ಧನ್ ಖಾಸಗಿಯಾಗಿ ಪ್ರತಿಕ್ರಿಯಿಸಿದ್ದರು.
`ಪುಸ್ತಕ ಮಾರಾಟ-ಹೋರಾಟ’ ಅಶೋಕವರ್ಧನ್‌ರವರೇ ಬರೆದು ಪ್ರಕಟಿಸಿದ ವಿಶಿಷ್ಟ ಪುಸ್ತಕ. ಈ ಪುಸ್ತಕದ ವಿವರಕೊಟ್ಟು ಅಶೋಕವರ್ಧನ್ ನೂರಾರು ಸಾಹಿತಿ-ಲೇಖಕರಿಗೆ ಅಂಚೆಕಾರ್ಡ್ ಹಾಕಿದ್ದರು. ಹಾಮಾನಾರ ಮರು ಟಪಾಲು ಬಂತು. `ಹಿಂದೆಲ್ಲ ನೀವು ನೇರ ಪುಸ್ತಕವನ್ನೇ ಕಳುಹಿಸುತ್ತಿದ್ದಿರಿ, ಇದೇನು ಹೊಸ ಪರಿಪಾಠ? ಎಂದಿನಂತೆ(ಎಲ್ಲರಂತೆ?) ಪುಸ್ತಕವನ್ನೇ ಕಳುಹಿಸಿಕೊಡಬಹುದಿತ್ತಲ್ಲ?’

ಆ ಪತ್ರ ನೆನಪಿಸಿಕೊಳ್ಳುವ ಅಶೋಕವರ್ಧನ್ ‘ಹಾಮಾನಾ ಹಿಂದಿನಂತೆ’ ಗೌರವಪ್ರತಿ’ಯನ್ನೇ ನಿರೀಕ್ಷಿಸಿದ್ದರು. ‘ಪುಸ್ತಕ ಮಾರಾಟ-ಹೋರಾಟ’ ಅಂತ ಪುಸ್ತಕ ಬರೆದು ಅದನ್ನು ಗೌರವಪ್ರತಿಯಾಗಿ ಹಂಚುವುದು ಹೇಗೆ ಅನ್ನುವುದಷ್ಟೆ ಅವರ ಪ್ರಶ್ನೆಯಾಗಿರಲಿಲ್ಲ. ‘ಹೀಗೆ ಬಂದು ಸೇರಿಕೊಂಡ ಪುಸ್ತಕಗಳ ರಾಶಿಯದು’ ಎನ್ನುವ ಉತ್ತರವೂ ಅವರ ವಾದದಲ್ಲಿತ್ತು.
೩೬ ವರ್ಷಗಳ ಕಾಲ ಅಶೋಕವರ್ಧನ್ ‘ಅತ್ರಿ’ ಮೂಲಕ ಪುಸ್ತಕ ವ್ಯಾಪಾರ ನಡೆಸಿದ್ದಾರೆ. ಮೂಲ ಮೈಸೂರಿನ ಅವರ ಮನೆಯ ಹೆಸರೂ `ಅತ್ರಿ’ ಆ ಹೆಸರನ್ನೇ ಅವರು ಮಂಗಳೂರಿನ ಪುಸ್ತಕ ಮಳಿಗೆಗೂ ತಂದುಕೊಂಡರು. ಮೈಸೂರಿನ ಚಿರಪರಿಚಿತ ಗಣಿತ ಮೇಷ್ಟ್ರು GTM ತಮ್ಮ ಮೂವರು ಮಕ್ಕಳಿಗೆ ಆನಂದ, ಅಶೋಕ, ಅನಂತ ಎಂದು ಹೆಸರಿಟ್ಟರು. ಆ A3 (ATHREE)ನೇ ಅತ್ರಿ ಆದದ್ದು! ಮತ್ತಷ್ಟು ಓದು »